ಆನಂದ ಭಾಷ್ಪ ಚಲನಚಿತ್ರದ ಹಾಡುಗಳು
- ಕನ್ನಡಿಯಲಿ ಕಾಣುತಿಹ ಕನ್ನೀಕೆ
- ಅಂದು ಮಾನಿನಿ ಮನವ
- ಮಲಗೋ ಮಗನೆ ಹಾಯಾಗಿ
- ಏನೋ ಏಕೋ ಹೊಸ ಭಾವ
- ಮೋಜಿನ ಮೋಟಾರು ಗಾಡಿ
ಆನಂದ ಭಾಷ್ಪ (೧೯೬೩) - ಕನ್ನಡಿಯಲಿ ಕಾಣುತಿಹ ಕನ್ನೀಕೆ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಜಾನಕೀ
ಕನ್ನಡಿಯಲಿ ಕಾಣುತಿಹ ಕನ್ನಿಕೆ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಜಾನಕೀ
ಕನ್ನಡಿಯಲಿ ಕಾಣುತಿಹ ಕನ್ನಿಕೆ
ಕನ್ನಡಿಯಲಿ ಕಾಣುತಿಹ ಕನ್ನಿಕೆ ನಿನ್ನ ಕೆನ್ನೆಯಲಿ ಕೆಂಪ ಹರಡಿರುವುದೇತಕೆ
ಭಿನ್ನವಿಸು ಈ ಪರಿ ಬಿಸುಸಯ್ಯಲೇಕೆ ನಿನ್ನ ಕಂಗಳಲ್ಲಿ ತೋರುತಿದೆ ತೀರದ ಬಯಕೆ
ಕನ್ನಡಿಯಲಿ ಕಾಣುತಿಹ ಕನ್ನಿಕೆ ನಿನ್ನ ಕೆನ್ನೆಯಲಿ ಕೆಂಪ ಹರಡಿರುವುದೇತಕೆ
ಭಿನ್ನವಿಸು ಈ ಪರಿ ಬಿಸುಸಯ್ಯಲೇಕೆ ನಿನ್ನ ಕಂಗಳಲ್ಲಿ ತೋರುತಿದೆ ತೀರದ ಬಯಕೆ
ಕನ್ನಡಿಯಲಿ ಕಾಣುತಿಹ ಕನ್ನಿಕೆ
ಉದಯಿಸಲು ಮೂಡಣದಿ ದಿನಕರನು.. ಆಹಾ..ಆಹಾ..ಆಹಾ ಆಆಅಆ
ಉದಯಿಸಲು ಮೂಡಣದಿ ದಿನಕರನು ಅದು ಮೊಗದು ಅರುಳುವುದು ತಾನಿರೀಸೇ...
ಗಗನದಲಿ ರಾಜಿಸಿರೆ ಚಂದ್ರಮನು ಸಾಗರವು ತುಂಬುವುದು ತಾನೇಕೆ
ಕನ್ನಡಿಯಲಿ ಕಾಣುತಿಹ ಕನ್ನಿಕೆ
ಲೋಹವದು ಬಳಿಸಾರೆ ಕಾಂತವನೂ ಮೋಹಿಸುತೇ ತಾನೋಡಿ ಅಪ್ಪುವುದೇಕೆ
ಲೋಹವದು ಬಳಿಸಾರೆ ಕಾಂತವನೂ ಮೋಹಿಸುತೇ ತಾನೋಡಿ ಅಪ್ಪುವುದೇಕೆ
ನೇಹದಿಂದ ಬಂದ ವಸಂತನ ಕಂಡು ಕುಹೂ ಕುಹೂ ಕೋಗಿಲೆಯು ಪಾಡುವುದೇಕೆ
ಕನ್ನಡಿಯಲಿ ಕಾಣುತಿಹ ಕನ್ನಿಕೆ ನಿನ್ನ ಕೆನ್ನೆಯಲಿ ಕೆಂಪ ಹರಡಿರುವುದೇತಕೆ
ಭಿನ್ನವಿಸು ಈ ಪರಿ ಬಿಸುಸಯ್ಯಲೇಕೆ ನಿನ್ನ ಕಂಗಳಲ್ಲಿ ತೋರುತಿದೆ ತೀರದ ಬಯಕೆ
ಕನ್ನಡಿಯಲಿ ಕಾಣುತಿಹ ಕನ್ನಿಕೆ
------------------------------------------------------------------------------------------------------------
ಆನಂದ ಭಾಷ್ಪ (೧೯೬೩) - ಅಂದು ಮಾನಿನಿ ಮನವ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಜಾನಕೀ
ಅಂದು ಮಾನಿನಿ ಮನವ ಮುದದಲಿ ಸೆಳೆದ ಮಾನವನವನಾರೋ
ಅಂದು ಮಾನಿನಿ ಮನವ ಮುದದಲಿ ಸೆಳೆದ ಮಾನವನವನಾರೋ
ಇಂದು ಮೋಹದ ಜಾಲವ ಬೀರುವ ಹೆಣ್ಣಿಗೆ ಮಣಿಯುವನಿವನಾರೋ
ಮಣಿಯುವನಿವನಾರೋ
ಅಂದು ಮಾನಿನಿ ಮನವ ಮುದದಲಿ ಸೆಳೆದ ಮಾನವನವನಾರೋ
ಅಂದು ಮದುಮಗಳಿಗೆ ಮಾಂಗಲ್ಯವ ಕಟ್ಟಿದ ಮಾರನು ಅವನಾರೋ
ಅಂದು ಮದುಮಗಳಿಗೆ ಮಾಂಗಲ್ಯವ ಕಟ್ಟಿದ ಮಾರನು ಅವನಾರೋ
ಇಂದು ಮದಿರೆಯಲಿ ತಾ ಸ್ವರ್ಗವ ಕಾಣುವ ಮರುಳನು ಇವನಾರೋ
ಅಂದು ಮಾನಿನಿ ಮನವ ಮುದದಲಿ ಸೆಳೆದ ಮಾನವನವನಾರೋ
ಅಂದು ಮಡದಿಯಿತ್ತ ತಾಂಬೂಲವ ಮೆಲ್ಲುತ ಮಿಡಿದವನವನಾರೋ
ಇಂದು ಮಡದಿಯ ಮರೆತು ಮಗುವನು ಮರೆತಿಹ ಭ್ರಾಂತನೂ ಇವನಾರೋ
ವಿಭ್ರಾಂತನೂ ಇವನಾರೋ ವಿಭ್ರಾಂತನೂ ಇವನಾರೋ
ಅಂದು ಮಾನಿನಿ ಮನವ ಮುದದಲಿ ಸೆಳೆದ ಮಾನವನವನಾರೋ
ಇಂದು ಮೋಹದ ಜಾಲವ ಬೀರುವ ಹೆಣ್ಣಿಗೆ ಮಣಿಯುವನಿವನಾರೋ
ಮಣಿಯುವನಿವನಾರೋ ಅಹ..ಹೋ ಹಾಹೋ.. ಓಓಓ
------------------------------------------------------------------------------------------------------------
ಆನಂದ ಭಾಷ್ಪ (೧೯೬೩) - ಮಲಗೋ ಮಗನೆ ಹಾಯಾಗಿ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್..ಜಾನಕೀ, ಆರ್.ನಾಗೇಂದ್ರರಾವ್
ಹೆಣ್ಣು : ಮಲಗೋ ಮಗನೆ ಹಾಯಾಗಿ
ಮಲಗೋ ಮಗನೆ ಹಾಯಾಗಿ ಮಾತೆಯ ಮಡಿಲ ಹೂವಾಗಿ
ಎಲೆಯ ಮರೆಯ ಕಾಯಾಗಿ
ಮಲಗೋ ಮಗನೆ ಹಾಯಾಗಿ ಮಾತೆಯ ಮಡಿಲ ಹೂವಾಗಿ
ಎಲೆಯ ಮರೆಯ ಕಾಯಾಗಿ ಆಆಆಅ... ಆಆಆಅ ಆಆಆ
ಹೆಣ್ಣು : ನಿಂದೆಗೆ ಸಿಲುಕಿ ನೋಂದಿಹೆ ನಾನೂ ಜನಿಸಿದೆ ಏಕೋ ಎನ್ನಲಿ ನೀನು
ನಿಂದೆಗೆ ಸಿಲುಕಿ ನೋಂದಿಹೆ ನಾನೂ ಜನಿಸಿದೆ ಏಕೋ ಎನ್ನಲಿ ನೀನು
ಬಾಳಿದು ಬರಡೆಂದು ಅಳಬೇಡ ಕಂದ ನೊಂದಿಹ ತಾಯಿಯ ಮನದಾನಂದ
ಮಲಗೋ ಮಗನೆ ಹಾಯಾಗಿ ಮಾತೆಯ ಮಡಿಲ ಹೂವಾಗಿ
ಎಲೆಯ ಮರೆಯ ಕಾಯಾಗಿ ಆಆಆಅ... ಆಆಆಅ ಆಆಆ
ಗಂಡು : ಬಾರೋ ಬಾರೋ ಎಲೇ ಮಗುವೇ ಬಣ್ಣದ ಬೊಂಬೆಯ ನಾ ತರುವೇ
ಬಾರೋ ಬಾರೋ ಎಲೇ ಮಗುವೇ ಬಣ್ಣದ ಬೊಂಬೆಯ ನಾ ತರುವೇ
ಬಾರೋ ತುಂಟರ ಗುರುವೇ ಬಾ ಕನ್ನಡ ನಾಡಿನ ಸಿರಿಯೇ ಬಾ
ಬಾರೋ ತುಂಟರ ಗುರುವೇ ಬಾ ಕನ್ನಡ ನಾಡಿನ ಸಿರಿಯೇ ಬಾ
ಬಾರೋ ಬಾರೋ ಎಲೇ ಮಗುವೇ ಬಣ್ಣದ ಬೊಂಬೆಯ ನಾ ತರುವೇ
ಗಂಡು : ತೊಡರಗಾಲ ಹಾಕುತ ಬಾರೋ ಚಿನ್ನಾರಿ ಚೆಲುವ ರಾಜ
ತೊಡರಗಾಲ ಹಾಕುತ ಬಾರೋ ಚಿನ್ನಾರಿ ಚೆಲುವ ರಾಜ
ತೊದಲು ಮಾತ ಆಡುತ ಬಾರೋ ಪನ್ನೀರು ಚೆಲ್ಲುವ ರೋಜ
ತೊದಲು ಮಾತ ಆಡುತ ಬಾರೋ ಪನ್ನೀರು ಚೆಲ್ಲುವ ರೋಜ
ಆಹ್ಹಾ.. ಪನ್ನೀರು ಚೆಲ್ಲುವ ರೋಜ ಓಹೋ ... ಪನ್ನೀರು ಚೆಲ್ಲುವ ರೋಜ
ಹೆಣ್ಣು : ಮಾಳಿಗೆ ಮನೆಯ ಸಿರಿಯಲ್ಲಿ ಹುಟ್ಟಿ ಬೆಳೆವ ಸ್ಥಳವು ಮುರುಕಲು ಹುಟ್ಟಿ
ಮಾಳಿಗೆ ಮನೆಯ ಸಿರಿಯಲ್ಲಿ ಹುಟ್ಟಿ ಬೆಳೆವ ಸ್ಥಳವು ಮುರುಕಲು ಹುಟ್ಟಿ
ಮುತ್ತೇ... ಮಗನೇ ..
ಮುತ್ತೇ ಮಗನೇ ನೀ ಎನ್ನ ಉಸಿರು ಮರಭೂಮಿ ನಡುವೆ ಮೆರೆವ ಹಸಿರು
ಮಲಗೋ ಮಗನೆ ಹಾಯಾಗಿ ಮಾತೆಯ ಮಡಿಲ ಹೂವಾಗಿ
ಎಲೆಯ ಮರೆಯ ಕಾಯಾಗಿ ಹೂಂಹೂಂಹೂಂ... ಹೂಂಹೂಂಹೂಂ
------------------------------------------------------------------------------------------------------------
ಆನಂದ ಭಾಷ್ಪ (೧೯೬೩) - ಏನೋ ಏಕೋ ಹೊಸ ಭಾವ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಬಿ.ಎಸ್. ಎಸ್.ಜಾನಕೀ
ಹೆಣ್ಣು : ಆ ಆ ಆಹಾಹಾಹಾಆಆ ಆಹಾಹಾಹಾಆಆ
ಹೆಣ್ಣು : ಆ ಆ ಆಹಾಹಾಹಾಆಆ ಆಹಾಹಾಹಾಆಆ
ಏನೋ ಏಕೋ ಹೊಸ ಭಾವ ತುಂಬಿರಲು ಹೃದಯದಲಿ ಅನುರಾಗ
ಮೂಡಿದೆ ಹರುಷದ ನವರಾಗ
ಏನೋ ಏಕೋ ಹೊಸ ಭಾವ ತುಂಬಿರಲು ಹೃದಯದಲಿ ಅನುರಾಗ
ಮೂಡಿದೆ ಹರುಷದ ನವರಾಗ
ಗಂಡು : ಒಲವಿಂದೇ .. ನೀ ಬಂದೇ ಮೈಮರೆತು ನಾ ನಿಂದೇ
ಒಲವಿಂದೇ .. ನೀ ಬಂದೇ ಮೈಮರೆತು ನಾ ನಿಂದೇ
ಮೌನದೇ ಮೋದದೇ ಮೋಹದೇ ಪ್ರೇಮದ ದೇವತೆ ಶರಣೆಂಬೆ
ಪ್ರೇಮದ ದೇವತೆ ಶರಣೆಂಬೆ
ಹೆಣ್ಣು : ಏನೋ ಏಕೋ ಹೊಸ ಭಾವ ತುಂಬಿರಲು ಹೃದಯದಲಿ ಅನುರಾಗ
ಗಂಡು : ಆ ಆ ಆಹಾಹಾಹಾಆಆ ಆಹಾಹಾಹಾಆಆ
ಹೆಣ್ಣು : ಆಆಆ..ಆಆಆಅ... (ಓಓಓಓಓ ಓಓಓಓಓ ಓಓಓಓಓಓಓ )
ಕರೆ ಕೇಳಿ ಬಂದವರೇ ಕೈ ಹಿಡಿದ ಎನ್ನ ದೊರೆ
ದಾಸಿಯ ಆಸೆಯ ತೀರಿಸಿ ಭಾಗ್ಯದ ಬಾಗಿಲ ತೆರೆದವರೇ
ಭಾಗ್ಯದ ಬಾಗಿಲ ತೆರೆದವರೇ
ಇಬ್ಬರು : ಏನೋ ಏಕೋ ಹೊಸ ಭಾವ ತುಂಬಿರಲು ಹೃದಯದಲಿ ಅನುರಾಗ
ಮೂಡಿದೆ ಹರುಷದ ನವರಾಗ
-----------------------------------------------------------------------------------------------------------
ಆನಂದ ಭಾಷ್ಪ (೧೯೬೩) - ಮೋಜಿನ ಮೋಟಾರು ಗಾಡಿ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಬಿ.ಎಸ್. ಕೋರಸ್
ಅಹ್ಹಹ್ಹಾ.. ಓಹೋಹೋ ... ಲಾಲಲ್ಲಲ್ಲರಲಾರಲಾರಲಾರಲಲಲಾ ಲಾ
ನಿಜದೇ ಯೌವ್ವನ ಮೋಜಿನ ಮೋಟಾರ್ ಗಾಡಿ ಅದರ ಗಾಲಿಯು ಉರುಳೋ ರೀತಿಯ ನೋಡಿ
ನಿಜದೇ ಯೌವ್ವನ ಮೋಜಿನ ಮೋಟಾರ್ ಗಾಡಿ ಅದರ ಗಾಲಿಯು ಉರುಳೋ ರೀತಿಯ ನೋಡಿ
(ಆಹ್ಹಾಹಾ ) ಈ ಕಡೆ (ಆಹ್ಹಾಹಾ ) ಆ ಕಡೆ (ಓಹೋಹೋ) ವಾಲುತೆ (ಓಹೋಹೋ) ಓಡಿದೆ (ಲಾಲಲಾ )
ಈ ಕಡೆ (ಆಹ್ಹಾಹಾ ) ಆ ಕಡೆ (ಓಹೋಹೋ) ವಾಲುತೆ (ಓಹೋಹೋ) ಓಡಿದೆ (ಲಾಲಲಾ )ಲ ಲ ಲ...
ಲಾಲಲ್ಲಲ್ಲಲಾ ಲಾಲಲ್ಲಲ್ಲಲಾಲ ಲಾಲಲ್ಲಲ್ಲಲಾಲ ಲಾಲಲ್ಲಲ್ಲಲಲಾಲ ಓಹೋಹೋ
ನೂಕಿದರೇ ತಾ ಸಾಗುವ ತೇರು ಸಮಯದಲಿ ಕೈಕೊಡುವುದು ಗೇರೂ
ಕೈಕೊಡುವುದು ಗೇರೂ
ನೂಕಿದರೇ ತಾ ಸಾಗುವ ತೇರು ಸಮಯದಲಿ ಕೈಕೊಡುವುದು ಗೇರೂ
ಲೆಕ್ಕಿಸದು ಇದು ಏರು ಪೇರು ಸೇರುವುದು ಊರು... ನೀರೂ ನೀರೂ ನೀರೂ
ಈ ಕಡೆ ಆ ಕಡೆ ವಾಲುತೆ ಓಡಿದೆ
ನಿಜದೇ ಯೌವ್ವನ ಮೋಜಿನ ಮೋಟಾರ್ ಗಾಡಿ ಅದರ ಗಾಲಿಯು ಉರುಳೋ ರೀತಿಯ ನೋಡಿ
ನಿಜದೇ ಯೌವ್ವನ ಮೋಜಿನ ಮೋಟಾರ್ ಗಾಡಿ
ಬಲ್ಲವಗೆ ಈ ಓಟವೇ ಜೋಕು ನಿಲ್ಲಿಸಲು ಇದಕ್ಕಿಲ್ಲ ಬ್ರೇಕೂ (ಬ್ರೇಕೂ ಬ್ರೇಕೂ )
ಬಲ್ಲವಗೆ ಈ ಓಟವೇ ಜೋಕು ನಿಲ್ಲಿಸಲು ಇದಕ್ಕಿಲ್ಲ ಬ್ರೇಕೂ
ಓಡಿಸಲು ಇರಬೇಕು ನ್ಯಾಕೂ ಇಲ್ಲದಿರೇ ಶಾಕೂ... ಸಾಕೂ ಸಾಕೂ ಸಾಕೂ
ಈ ಕಡೆ ಆ ಕಡೆ ವಾಲುತೆ ಓಡಿದೆ
ನಿಜದೇ ಯೌವ್ವನ ಮೋಜಿನ ಮೋಟಾರ್ ಗಾಡಿ ಅದರ ಗಾಲಿಯು ಉರುಳೋ ರೀತಿಯ ನೋಡಿ
-----------------------------------------------------------------------------------------------------------
No comments:
Post a Comment