1881. ಗಂಡು ಕಟ್ಟದ ತಾಳಿ (1980)

ಗಂಡು ಕಟ್ಟದ ತಾಳಿ ಚಲನಚಿತ್ರದ ಹಾಡುಗಳು
  1. ನಂದ ತನಯ ಗೋವಿಂದನ
  2. ಓ ಚೆಲುವಾ...  ನೀ ಯಾರಯ್ಯಾ... 
  3. ಬದುಕೊಂದು ಹೂತೋಟ
  4. ಆಚೆ ಬೀದಿ ಗುಂಡಗಿ ಸಾಕಿದ್ದಲೂ.
  5. ಇದಿರೂ ಎಂತನ್ನ ಚಿಮ್ಮುತಿದೆ ವಯ್ಯಾರ ಮೈಯ್ಯೇರಿದೆ  
  6. ಸೀತೆಗೂ ರಾಮಗೂ ಮದುವೆ ಕಣೆ 
  7. ಉಲ್ಲಾಸ ಇಲ್ಲೇ ಇದೆ 
ಸರೋಜಿನಿ ಪಟ್ಟಾಭಿ, ವಸಂತ, ನರಸಿಂಹನಾಯಕ್ ಪುತ್ತೂರು, ಇಸ್ಮಾಯಿಲ್ ಶಾಫಿ 

ಗಂಡು ಕಟ್ಟದ ತಾಳಿ (೧೯೮೦) - ನಂದ ತನಯ ಗೋವಿಂದನ
ಸಂಗೀತ: ಆರೂರು ಸರೋಜಿನಿ, ಸಾಹಿತ್ಯ : ಪುರಂದರರ ದಾಸರ ಪದ, ಗಾಯನ : ವಸಂತ 

ನಂದನ ತನಯ ಗೋವಿಂದನ ಭಜಿಪುದು ಆನಂದವಾದ ಮಿಠಾಯಿ
ನಂದನ ತನಯ ಗೋವಿಂದನ ಭಜಿಪುದು ಆನಂದವಾದ ಮಿಠಾಯಿ
ಬಂಧಗಳನು ಭವ ರೋಗಗಳೆಲ್ಲನು ನಿಂದಿಪುದು ಈ ಮಿಠಾಯಿ
ಬಂಧಗಳನು ಭವ ರೋಗಗಳೆಲ್ಲನು ನಿಂದಿಪುದು ಈ ಮಿಠಾಯಿ 
ನಂದನ ತನಯ ಗೋವಿಂದನ ಭಜಿಪುದು ಆನಂದವಾದ ಮಿಠಾಯಿ

ದಧಿ ಘೃತ ಕ್ಷೀರಕಿಂತಲೂ ಇದು ಬಹು ಅಪರೂಪದ ಮಿಠಾಯಿ
ದಧಿ ಘೃತ ಕ್ಷೀರಕಿಂತಲೂ ಇದು ಬಹು ಅಪರೂಪದ ಮಿಠಾಯಿ
ಕದಳೀ ದ್ರಾಕ್ಷ ಖರ್ಜೂರ ರಸಗಳನು ಮೀರುವುದು ಈ ಮಿಠಾಯಿ 
ಕದಳೀ ದ್ರಾಕ್ಷ ಖರ್ಜೂರ ರಸಗಳನು ಮೀರುವುದು ಈ ಮಿಠಾಯಿ 
ನಂದನ ತನಯ ಗೋವಿಂದನ ಭಜಿಪುದು ಆನಂದವಾದ ಮಿಠಾಯಿ

ಜಪ ತಪ ಸಾಧನಗಳಿಗಿಂತಲೂ ಬಹು ಅಪರೂಪದ ಮಿಠಾಯಿ
ಜಪ ತಪ ಸಾಧನಗಳಿಗಿಂತಲೂ ಬಹು ಅಪರೂಪದ ಮಿಠಾಯಿ
ಜಿಪುಣ ಮತಿಗಳಿಗೆ ಸಾಧ್ಯವಿಲ್ಲದೇ ಇಹ ಪುರಂದರ ವಿಠಲ ಮಿಠಾಯಿ 
ಪುರಂದರ ವಿಠಲ ಮಿಠಾಯಿ 
ನಂದನ ತನಯ ಗೋವಿಂದನ ಭಜಿಪುದು ಆನಂದವಾದ ಮಿಠಾಯಿ
ಬಂಧಗಳನು ಭವ ರೋಗಗಳೆಲ್ಲನು ನಿಂದಿಪುದು ಈ ಮಿಠಾಯಿ
ನಂದನ ತನಯ ಗೋವಿಂದನ ಭಜಿಪುದು ಆನಂದವಾದ ಮಿಠಾಯಿ
------------------------------------------------------------------------------------

ಗಂಡು ಕಟ್ಟದ ತಾಳಿ (೧೯೮೦) - ಓ ಚೆಲುವಾ ನೀ ಯಾರಯ್ಯಾ 
ಸಂಗೀತ:ಆರೂರು ಸರೋಜಿನಿ, ಸಾಹಿತ್ಯ:ಹುಣಸೂರ ಕೃಷ್ಣಮೂರ್ತಿ, ಗಾಯನ:ಎಸ್.ಜಾನಕೀ 

ಓಓಓಓಓ... 
ಓ.. ಚೆಲುವಾ... ಆಆಆ ನೀ... ಯಾರಯ್ಯಾ...ಆಆಆ 
ಎಲ್ಲಿಂದ ಬಂದೆನ್ನ ಮೈಮರೆಸಿದೆ 
ಮನದೊಳಂದು ಹೊಸ ಆಸೆ ತಾ ಮೂಡಿದೆ 
ಯಾರು ಏನು ಮಾತಾಡದೇ ಓಡಿ ಹೋದೆಯಾ... 
ಓ.. ಚೆಲುವಾ... 

ಪ್ರೀತಿಯ ರಾಶಿಯ ಮೈತುಂಬಿ ಬಂದಿಹ ಪಾವನ ಮೂರುತಿ ನೀನಯ್ಯಾ... 
ಈ.. ಹೃದಯದ ಗುಡಿಯಲಿ ನಿನ್ನನ್ನೇ ಇರಿಸಿ ಪೂಜೆಯ ಮಾಡುತ ಎಂದೆಂದೂ 
ಸಂತೋಷದೇ.. ಉಲ್ಲಾಸವೇ.. ಆನಂದದ ತೇಲಾಡುವಾ.. ಆಸೇ ... ಆಸೇ ... 
ಓ.. ಚೆಲುವಾ... 

ಪಕ್ಷಿಯ ಚಿಲಿಪಿಲಿ ಹಾಡಲು ನಿನ್ನ ಇಂಪಿನ ಸ್ವರವೇ ಕೇಳುವುದೂ...     
ಆ.. ತಾವರೇ ಬೆಳವೇ ನೀರಿನ ಕೊಳದೆ ನಿನ್ನಯ ಬಿಂಬವೇ ತೋರುವುದೂ .. 
ಇದು ಕನಸೋ.. ಆಹಾ.. ನನಸೋ .. ಓ ಮನಸೇ.. ನೀ ಬಲ್ಲೆಯಾ ಮನಸೇ.. ಬಲ್ಲೆಯಾ 
ಓ.. ಚೆಲುವಾ... ಆಆಆ 
------------------------------------------------------------------------------------

ಗಂಡು ಕಟ್ಟದ ತಾಳಿ (೧೯೮೦) - ಬದುಕೊಂದು ಹೂತೋಟ 
ಸಂಗೀತ:ಆರೂರು ಸರೋಜಿನಿ, ಸಾಹಿತ್ಯ:ಹುಣಸೂರ ಕೃಷ್ಣಮೂರ್ತಿ, ಗಾಯನ : ನರಸಿಂಹ ನಾಯಕ ಪುತ್ತೂರು, ಸರೋಜಿನಿ ಪಟ್ಟಾಭಿ, ಎಸ್.ಜಾನಕೀ  

ಹೆಣ್ಣು : ಆ...  ಆ...ಲಾ ಆ ..ಓ..ಓ 
ಗಂಡು : ಬದುಕೊಂದು ಹೂದೊಟ ಅದಕುಂಟು ಒಳನೋಟ 
               ಹೂಮುಳ್ಳು ಎರಡುಂಟು ತಿಳಿ ನೀನೂ .. 
               ಮುಳ್ಳಲ್ಲಿ ಕೈಯಿಡದೇ ಹೂವನ್ನೇ ಕೊಯ್ಯ ಬೇಕೂ .. 
               ಲೋಕದೊಳು.. (ಆಆಆ) ಓ.. ತಿಳಿ ಮಾನವ.. (ಹೂಂಹೂಂಹೂಂ) 
               ಆ.. ನೀ ಅರಿತು ಸಾಗಿದರೇ .. ಆ.. ಸ್ವರ್ಗವೇ ಇಲ್ಲುಂಟು... (ಆಆಆ)
               ಒಡಲೆಂಬ ಕಡಲಲ್ಲಿ ಉಕ್ಕೇರಿ ತುಳುಕುವುದು ಉತ್ಸಾಹ ಉಲ್ಲಾಸ 
               ತಿಳಿ ನೀನೂ ...   ಹದ್ದಲ್ಲಿ ಎಂದೆಂದೂ ಬಾಳಲ್ಲಿ ಮುಂದಾಗೂ ಲೋಕದೊಳು.. 

ಹೆಣ್ಣು : ಆ... ಓ... ಆ...  ಆ... ಓ.. 
ಗಂಡು : ಋಕ್ತಿಯ ಚಿಗುರೊಂದು ಎದೆಯಲ್ಲಿ ಅರಳಿದರೇ .. 
               ಎಲ್ಲೆಲ್ಲೂ ಸಂತೋಷ ತಿಳಿ ನೀನು (ಆಆಆ)
               ಸಂಸಾರ ಸಾಗರವೇ ಈಜಾಡಿ ದಡ ಸೇರು.. ಲೋಕದೊಳು.. 
               ಓ ತಿಳಿ ಮಾನವ.. ಓ ತಿಳಿ ಮಾನವ... ಓ ತಿಳಿ ಮಾನವ...         
ಹೆಣ್ಣು : ಓ.. ಮೈ ಲವ್.. ಲವ್.. ಲವ್...  
              ಬದುಕೊಂದು ಹೂದೊಟ ಅದಕುಂಟು ಒಳನೋಟ 
               ಹೂಮುಳ್ಳು ಎರಡುಂಟು ತಿಳಿ ನೀನೂ .. 
               ಮುಳ್ಳಲ್ಲಿ ಕೈಯಿಡದೇ ಹೂವನ್ನೇ ಕೊಯ್ಯ ಬೇಕೂ .. 
               ಲೋಕದೊಳು.. ಓ.. ತಿಳಿ ಮಾನವ.. 
               ಆ.. ನೀ ಅರಿತು ಸಾಗಿದರೇ .. ಆ.. ಸ್ವರ್ಗವೇ ಇಲ್ಲುಂಟು... 
               ಒಡಲೆಂಬ ಕಡಲಲ್ಲಿ ಉಕ್ಕೇರಿ ಹೊಮ್ಮುವುದು ಉತ್ಸಾಹ ಉಲ್ಲಾಸ 
               ತಿಳಿ ನೀನೂ ...   ಹದ್ದಲ್ಲಿ ಎಂದೆಂದೂ ಬಾಳಲ್ಲಿ ಮುಂದಾಗೂ ಲೋಕದೊಳು.. 
                ಓ.. ತಿಳಿ ಮಾನವ.. 
               ಆ.. ನೀ ಅರಿತು ಸಾಗಿದರೇ .. ಆ.. ಸ್ವರ್ಗವೇ ಇಲ್ಲುಂಟು... 
              ಬದುಕೊಂದು ಹೂದೊಟ ಅದಕುಂಟು ಒಳನೋಟ 
               ಹೂಮುಳ್ಳು ಎರಡುಂಟು ತಿಳಿ ನೀನೂ .. 
               ಮುಳ್ಳಲ್ಲಿ ಕೈಯಿಡದೇ ಹೂವನ್ನೇ ಕೊಯ್ಯ ಬೇಕೂ .. 
               ಲೋಕದೊಳು.. ಓ.. ತಿಳಿ ಮಾನವ.. 
------------------------------------------------------------------------------------

ಗಂಡು ಕಟ್ಟದ ತಾಳಿ (೧೯೮೦) - ಆಚೆ ಬೀದಿ ಗುಂಡಗಿ ಸಾಕಿದ್ದಲೂ.
ಸಂಗೀತ:ಆರೂರು ಸರೋಜಿನಿ, ಸಾಹಿತ್ಯ:ಹುಣಸೂರ ಕೃಷ್ಣಮೂರ್ತಿ, ಗಾಯನ: ಇಸ್ಮಾಯಿಲ್ 

ಹುಲಿಯಲ್ಲ.. ಬೆಕ್ಕೂ .. 
ಆಚೆ ಬೀದಿ ಗುಂಡಗಿ ಸಾಕಿದ್ದಲೂ.... ಹೆಣ್ಣು ಬೆಕ್ಕೊಂದ... ಪ್ರೀತೀಲಿ 
ಈಚೆ ಬೀದಿ ಗುಂಡಜ್ಜನ ಗಂಡು ಬೆಕ್ಕೂ... ಅಜ್ಜಿ ಮನೆಗೆ.... ನುಗ್ಗಿತೂ 
ಅಪಗೊಂಡ ಜನ ಬೆಕ್ಕಿನ ಸೊಕ್ಕೂ .. ಮುದ್ದು ಮಾಡಲು ನೆಗೆಯಿತು.... 
ಮಡಿಕೆ ಕುಡಿಕೆ... ಉರುಳಿತು ದುಡುಂ     
------------------------------------------------------------------------------------

ಗಂಡು ಕಟ್ಟದ ತಾಳಿ (೧೯೮೦) - ಇದಿರೂ ಎಂತನ್ನ ಚಿಮ್ಮುತಿದೆ ವಯ್ಯಾರ ಮೈಯ್ಯೇರಿದೆ 
ಸಂಗೀತ:ಆರೂರು ಸರೋಜಿನಿ, ಸಾಹಿತ್ಯ:ಹುಣಸೂರ ಕೃಷ್ಣಮೂರ್ತಿ, ಗಾಯನ: ಎಸ್.ಜಾನಕೀ 

ಇದಿಗೋ ಯೌವ್ವನ ಚಿಮ್ಮುತಿದೆ ವಯ್ಯಾರ ಮೈಯ್ಯೇರಿದೆ... 
ಇಂದುಂಟು ನಾಳೆ ಎಂತೋ ತಾರುಣ್ಯ ಲಾವಣ್ಯ...ದಾವೇಗ ..  
ಇದಿಗೋ ಯೌವ್ವನ ಚಿಮ್ಮುತಿದೆ ವಯ್ಯಾರ ಮೈಯ್ಯೇರಿದೆ... 
ಇಂದುಂಟು ನಾಳೆ ಎಂತೋ ತಾರುಣ್ಯ ಲಾವಣ್ಯ... ದಾವೇಗ ..  

ಈ ಬಾಳಿನ ಸೊಗಸನು ನೀ ಭೋಗಿಸಿ ಸವಿಯದೇ 
ಸನ್ಯಾಸ ನೀ ತಾಳಿದರೇ ಈ ಹೆಣ್ಣ ಗತಿಯೇನು 
ಅರಳಿ ಮಲ್ಲೇ ಹೂವಾಗಿ.. ಮರಳಿ ಬಂದೆ ನಿನಗಾಗಿ 
ಬಾ ಇಂದು ಹೂವಲ್ಲಿ ಜೇನುಂಟು ಸವಿ ಬೇಗ ರಾಜಾ... 
ಇದಿಗೋ ಯೌವ್ವನ ಚಿಮ್ಮುತಿದೆ ವಯ್ಯಾರ ಮೈಯ್ಯೇರಿದೆ... 
ಇಂದುಂಟು ನಾಳೆ ಎಂತೋ ತಾರುಣ್ಯ ಲಾವಣ್ಯ... ದಾವೇಗ ..  
-----------------------------------------------------------------------------------

ಗಂಡು ಕಟ್ಟದ ತಾಳಿ (೧೯೮೦) - ಸೀತೆಗೂ ರಾಮಗೂ ಮದುವೆ ಕಣೆ 
ಸಂಗೀತ:ಆರೂರು ಸರೋಜಿನಿ, ಸಾಹಿತ್ಯ:ಹುಣಸೂರ ಕೃಷ್ಣಮೂರ್ತಿ, ಗಾಯನ: ವಸಂತ, ಸರೋಜಿನಿ ಪಟ್ಟಾಭಿ, ಕೋರಸ್ 

ಸೀತೆಗೂ ರಾಮಗೂ ಮದುವೆ ಕಣ್ರೀ ಮದುವೆಯ ವೈಭವ ನೋಡಬೇಕ್ರೀ  
ಸೀತೆಗೂ ರಾಮಗೂ ಮದುವೆ ಕಣ್ರೀ ಮದುವೆಯ ವೈಭವ ನೋಡಬೇಕ್ರೀ  

ಅಯೋಧ್ಯಾ ರಾಜ್ಯದಿ ಸೂರ್ಯನ ವಂಶದಿ ಹುಟ್ಟಿದ ರಾಮ ದೇವರಂತೇ 
ಓದಿದ ಯುವಕನು ಸೂಟನ್ನು ತೊಟ್ಟಿಹ ರಾಮನಿಗ ಮದುಮಗನಂತೇ 
ಜನಕರಾಜನ ಮುದ್ದಿನ ಮಗಳು ಸೀತೆ ಭೂಮಿಯ ದೇವತೆಯಂತೇ 
ಊರಲ್ಲೇ ಭೇಷಾದ ಸಿಂಗಾರಿ ಹೆಣ್ಣು ಸೀತೆ ಇಂದಿನ ಮಧುಮಗಳಂತೇ 
ಸೀತೆಗೂ ರಾಮಗೂ ಮದುವೆ ಕಣ್ರೀ ಮದುವೆಯ ವೈಭವ ನೋಡಬೇಕ್ರೀ  
ಸೀತೆಗೂ ರಾಮಗೂ ಮದುವೆ ಕಣ್ರೀ ಮದುವೆಯ ವೈಭವ ನೋಡಬೇಕ್ರೀ  

ಮೂರೂ ಅಂಕಣದ ಚಪ್ಪರ ಹಾಕಿ ಕೆಂಬಾಳೆ ಮಾವಿನ ತೋರಣ ಕಟ್ಟಿ 
ಮೂರೂ ಅಂಕಣದ ಚಪ್ಪರ ಹಾಕಿ ಕೆಂಬಾಳೆ ಮಾವಿನ ತೋರಣ ಕಟ್ಟಿ 
ಜರತಾರಿ ಸೀರೆ ಮುದ್ದಾದ ಮೈಯ್ಯಿಗೆ ನಾನಾ ಒಡವೆ ಚೆಂದುಳ್ಳಿ ಚೆಲುವೆಗೆ 
ಜರತಾರಿ ಸೀರೆ ಮುದ್ದಾದ ಮೈಯ್ಯಿಗೆ ನಾನಾ ಒಡವೆ ಚೆಂದುಳ್ಳಿ ಚೆಲುವೆಗೆ 
ಸೀತೆಗೂ ರಾಮಗೂ ಮದುವೆ ಕಣ್ರೀ ಮದುವೆಯ ವೈಭವ ನೋಡಬೇಕ್ರೀ  
ಸೀತೆಗೂ ರಾಮಗೂ ಮದುವೆ ಕಣ್ರೀ ಮದುವೆಯ ವೈಭವ ನೋಡಬೇಕ್ರೀ  

ಗುಂಗಳ ಸ್ನಾನ ಮಾಡಿಸಬೇಕು ಅಂಗಗೆ ಮದರಂಗಿ ಚಿತ್ರ ಬರೆಯಬೇಕು 
ಮೂರು ದಿನ ಭಾರಿ ಬ್ಯಾಂಡ್ ಭಾರಿಸಬೇಕು 
ಮಧುಮಗ ಹೂವಲ್ಲಿ ಪಲಕೆಲಿ ಬರಬೇಕು 
ಸೀತೆಗೂ ರಾಮಗೂ ಮದುವೆ ಕಣ್ರೀ ಮದುವೆಯ ವೈಭವ ನೋಡಬೇಕ್ರೀ  
ಸೀತೆಗೂ ರಾಮಗೂ ಮದುವೆ ಕಣ್ರೀ ಮದುವೆಯ ವೈಭವ ನೋಡಬೇಕ್ರೀ  

ಜಾಜಿ ಮಲ್ಲಿಗೆ ಜಡೆಯಿಂದ ವಧು ಚೆಂದ 
ತುರಾಯಿ ಮುಂಡಾಸದೆಯಿರುವ ವರ ಚೆಂದ  
ಮಧುಮಗಳ ಕೊರಳಿಗೆ ಮಾಂಗಲ್ಯ ಕಟ್ಟುವಾಗ 
ಬಂದ ಮಂದಿಯೆರೆಲ್ಲ ಸೇಸೆ ಹಾಕೋದಂದ 
(ಬಂದ ಮಂದಿಯೆರೆಲ್ಲ ಸೇಸೆ ಹಾಕೋದಂದ )
ಸೀತೆಗೂ ರಾಮಗೂ ಮದುವೆ ಕಣ್ರೀ ಮದುವೆಯ ವೈಭವ ನೋಡಬೇಕ್ರೀ  
ಸೀತೆಗೂ ರಾಮಗೂ ಮದುವೆ ಕಣ್ರೀ ಮದುವೆಯ ವೈಭವ ನೋಡಬೇಕ್ರೀ  

ಮಧುಮಗ ನಾಚುತ ಮುಗುಳುನಗೆ ಬೀರುತ 
ಪತಿರಾಯಗೆ ಹಾಲು ಕುಡಿಸೋದು ಚೆಂದ 
ಮಧುಮಗನ ತೊಡೆ ಮೇಲೆ ಕುಳಿತು ಜಗವನ್ನೇ 
ಮರೆತವಳು  ನೋಡೋ ನೋಟ ಬಲು ಚೆಂದ.. 
ಸೀತೆಗೂ ರಾಮಗೂ ಮದುವೆ ಕಣ್ರೀ ಮದುವೆಯ ವೈಭವ ನೋಡಬೇಕ್ರೀ  
ಸೀತೆಗೂ ರಾಮಗೂ ಮದುವೆ ಕಣ್ರೀ ಮದುವೆಯ ವೈಭವ ನೋಡಬೇಕ್ರೀ  
ಸೀತೆಗೂ ರಾಮಗೂ ಮದುವೆ ಕಣ್ರೀ ಮದುವೆಯ ವೈಭವ ನೋಡಬೇಕ್ರೀ  
ಸೀತೆಗೂ ರಾಮಗೂ ಮದುವೆ ಕಣ್ರೀ ಮದುವೆಯ ವೈಭವ ನೋಡಬೇಕ್ರೀ  
---------------------------------------------------------------------------------

ಗಂಡು ಕಟ್ಟದ ತಾಳಿ (೧೯೮೦) - ಉಲ್ಲಾಸ ಎಲ್ಲೆ ಇರೀ  
ಸಂಗೀತ:ಆರೂರು ಸರೋಜಿನಿ, ಸಾಹಿತ್ಯ:ಹುಣಸೂರ ಕೃಷ್ಣಮೂರ್ತಿ, ಗಾಯನ: ಎಸ್.ಜಾನಕೀ 

ಹೇ.. ವಿಥ್ ಲವ್, ಸ್ಪೆಂಡ್ ದಿ ಡೇ ವಿಥ್ ಲವ್, ಫುಲ್ ಡೇ ವಿಥ್ ಲವ್ 
ಉಲ್ಲಾಸ ಇಲ್ಲೇ ಇರೀ... ಸಂತೋಷ ಅಲ್ಲೇ ಇದೇ...  
ನಗ್ತಿದ್ರೀ ಸ್ವರ್ಗ ರೀ... ಆಳ್ತಿದ್ರೆ ನರಕ ರೀ.. 
ಎಲ್ಲಾ ಮರೆತು ನಗ್ತಾ ಇದ್ರೇ ಬಾಳಿಗಾನಂದ 
ಉಲ್ಲಾಸ ಇಲ್ಲೇ ಇರೀ... ಸಂತೋಷ ಅಲ್ಲೇ ಇದೇ...  
ನಗ್ತಿದ್ರೀ ಸ್ವರ್ಗ ರೀ... ಆಳ್ತಿದ್ರೆ ನರಕ ರೀ.. 
ಎಲ್ಲಾ ಮರೆತು ನಗ್ತಾ ಇದ್ರೇ ಬಾಳಿಗಾನಂದ 
ಉಲ್ಲಾಸ ಇಲ್ಲೇ ಇರೀ... ಸಂತೋಷ ಅಲ್ಲೇ ಇದೇ...  

ಲೈಫ್ ಇಸ್ ನೆದರ್ ಎ ಟೆಂಪೆಸ್ಟ್ ನಾರ್, ಎ ಮಿಕ್ಸ್ ಸಮರ್ ನೈಟ್ಸ್  ಡ್ರೀಮ್ 
ಬಟ್ ಇಟ್ಸ್ ಎ ಕಾಮಿಡಿ ಆಫ್ ಎರರಸ್, ಎಂಜಾಯ್ ಎಸ್ ಯುವರ್ ಲೈಕ್ 
ನೀಲಿ ಬಾನಲ್ಲಿ ಮುಗಿಲಿನಂಚಲ್ಲಿ ರವಿಯ ಹೊಂಗಿರಣ ಸೂಸಿದೆ 
ನೀಲಿ ಬಾನಲ್ಲಿ ಮುಗಿಲಿನಂಚಲ್ಲಿ ರವಿಯ ಹೊಂಗಿರಣ ಸೂಸಿದೆ 
ಒಲವು ಚೆಲುವು ಹೊಮ್ಮಿದೇ .. ಚೆಲುವು ನಲಿವು ಚಿಮ್ಮಿದೆ 
ಸವಿಯುತ ಹೃದಯವೇ ಹರುಷ ತುಂಬಿ ಬರಲಿ 
ಉಲ್ಲಾಸ ಇಲ್ಲೇ ಇರೀ... ಸಂತೋಷ ಅಲ್ಲೇ ಇದೇ...  

ಲವ್ ಇಸ್ ಎ ಫ್ಲವರ್, ಲೈಫ್ ಇಸ್ ಹನಿ, ಓ ಮೈ ಲವ್, ಎಂಜಾಯ್ ಎಸ್ ಯುವರ್ ಲೈಕ್     
ತಂಪು ತಂಗಾಳಿ ಬೀಸಿ ಸೊಂಪಾಗಿ ಚೆಲ್ಲಿತಾನಂದ ಹಾಡುತಾ... 
ಮಧುರ ಝೇಂಕಾರ  ಮಿಡಿದು ಹಾರಾಡಿ ಭೃಮರ ಸವಿ ಜೇನ ಹೀರಿದೆ.. 
ತಂಪು ತಂಗಾಳಿ ಬೀಸಿ ಸೊಂಪಾಗಿ ಚೆಲ್ಲಿತಾನಂದ ಹಾಡುತಾ... 
ಮಧುರ ಝೇಂಕಾರ  ಮಿಡಿದು ಹಾರಾಡಿ ಭೃಮರ ಸವಿ ಜೇನ ಹೀರಿದೆ.. 
ಅರಳಿ ಬಿರಿದ ಹೂವಲಿ ಹೊನ್ನ ಹನಿಗಳು ತೇಲಲಿ 
ಅರಳಿ ಬಿರಿದ ಹೂವಲಿ ಹೊನ್ನ ಹನಿಗಳು ತೇಲಲಿ 
ಸವಿಯುತ ಹೃದಯದಿ ಹರುಷ ತುಂಬಿ ಬರಲಿ 
ಉಲ್ಲಾಸ ಇಲ್ಲೇ ಇರೀ... ಸಂತೋಷ ಅಲ್ಲೇ ಇದೇ...  
------------------------------------------------------------------------------

No comments:

Post a Comment