1487. ಕರಿಯ -೨ (೨೦೧೭)



ಕರಿಯ -೨ ಚಲನಚಿತ್ರದ ಹಾಡುಗಳು 
  1. ಅನುಮಾನವೇ ಇಲ್ಲ
  2. ನಾ ಕಾಯುತಿರುವೆ
  3. ಮಳೆಗಾಲದ ವೇಳೆ
  4. ಕರಿಯ ಬರ್ತಾವನೇ ಲಾಂಗೂ ತರ್ತಾವನೇ 
ಕರಿಯ -೨ (೨೦೧೭) -  ಅನುಮಾನವೇ ಇಲ್ಲ ಅಭಿಮಾನಿ ನಾನೀಗ
ಸಂಗೀತ : ಕರಣ ಕೃಪ, ಸಾಹಿತ್ಯ : ಕವಿರಾಜ, ಗಾಯನ : ಅರ್ಮನ ಮಲ್ಲಿಕ  
 
ಅನುಮಾನವೇ ಇಲ್ಲ ಅಭಿಮಾನಿ ನಾನೀಗ
ನಿನ್ನ ಹಾಗೆ ಯಾರಿಲ್ಲ ನೀ ಸುಂದರ ಸೋಜಿಗ
ಅನುಮಾನವೇ ಇಲ್ಲ ಅನುರಾಗಿ ನಾನೀಗ
ಬದಲಾಗಿದೆ ಈಗ ನಿನ್ನಿಂದಲೇ ಈ ಜಗ
ಅನುಕ್ಷಣವೂ ಇನ್ನು ಮುಂದೆ ನನಗೆ ನೀನೇ ಬೇಕು
ಕೊನೆಯುಸಿರು ಹೋಗುವಾಗ ನಿನ್ನ ಮಡಿಲೇ ಬೇಕು
ಅನುಮಾನವೇ ಇಲ್ಲ ಅಭಿಮಾನಿ ನಾನೀಗ
ನಿನ್ನ ಹಾಗೆ ಯಾರಿಲ್ಲ ನೀ ಸುಂದರ ಸೋಜಿಗ.

ಚೂರು ನಿನಗಲು ಹೊಸ ಬಣ್ಣಾನೆ ಬಾನಿಗೆ
ಪಾದ ಊರಿದರೆ ಅದು ಚಿತ್ತಾರ ಭೂಮಿಗೆ
ಎದುರಿರೆ ನೀನು ಎದೆಯೊಳಗೆ ತುಸು ನಸು ನಾಚಿಕೆ
ಅರಳಿದೆ ಜೀವ ಒಳಗೊಳಗೇ ಪಿಸು ಪಿಸು ಮಾತಿಗೆ
ನಿನ್ನ ಪ್ರೀತಿಗಾಗಿ ಇನ್ನು ನಾನು ನೂರು ನೂರು ಸಾರಿ ಸಾಯುವೆ
ಅನುಮಾನವೇ ಇಲ್ಲ ಅಭಿಮಾನಿ ನಾನೀಗ
ನಿನ್ನ ಹಾಗೆ ಯಾರಿಲ್ಲ ನೀ ಸುಂದರ ಸೋಜಿಗ.

ಕೊಂಚ ಕೊಂದುಬಿಡು ನಿನ್ನ ಕಣ್ಣಲ್ಲೇ ನನ್ನನ್ನು
ಬಾಚಿ ತಬ್ಬಿ ಬಿಡು ನಾ ಇನ್ನೇನು ಕೇಳೇನು
ಹಗಲಲೂ ನಿಂದೆ ಕನವರಿಕೆ ಮರುಳನ ಜೀವಕೆ
ನೆರಳಿಗೂ ಕೂಡ ಚಡಪಡಿಕೆ ಇನಿಯಳ ಸಂಘಕೆ
ಬೇರೆ ಯಾವ ದೇವರಿಲ್ಲ ಇನ್ನು ನೀನೇ ನೀನೇ ನನ್ನ ದೇವತೆ
ಅನುಮಾನವೇ ಇಲ್ಲ ಅಭಿಮಾನಿ ನಾನೀಗ
ನಿನ್ನ ಹಾಗೆ ಯಾರಿಲ್ಲ ನೀ ಸುಂದರ ಸೋಜಿಗ
ಅನುಕ್ಷಣವೂ ಇನ್ನು ಮುಂದೆ ನನಗೆ ನೀನೇ ಬೇಕು
ಕೊನೆಯುಸಿರು ಹೋಗುವಾಗ ನಿನ್ನ ಮಡಿಲೇ ಬೇಕು
ಅನುಮಾನವೇ ಇಲ್ಲ ಅಭಿಮಾನಿ ನಾನೀಗ
ನಿನ್ನ ಹಾಗೆ ಯಾರಿಲ್ಲ ನೀ ಸುಂದರ ಸೋಜಿಗ.
-------------------------------------------------------------------------------------------------------------

ಕರಿಯ -೨ (೨೦೧೭) -  ನಾ ಕಾಯುತಿರುವೆ ಎಲ್ಲ ಮರೆತು ನಿನ್ನ ಕರೆಗೆ
ಸಂಗೀತ : ಕರಣ ಕೃಪ, ಸಾಹಿತ್ಯ : ಜಯಂತ ಕಾಯ್ಕಣಿ, ಗಾಯನ : ಸೋನು ನಿಗಮ್ 

ನಾ ಕಾಯುತಿರುವೆ ಎಲ್ಲ ಮರೆತು ನಿನ್ನ ಕರೆಗೆ
ಈ ಒಂಟಿ ಹೃದಯ ಹಾರಿಬಿಡಲಿ ನಿನ್ನ ಕಡೆಗೆ
ನೀ ನನ್ನವಳು ಎಂಬ ಸುಳಿವೇ ಸಾಕು ನನಗೀಗ
ನಾ ದೂರದಲಿ ನಿಂತು ಒಲವೇ ಏನು ಉಪಯೋಗ
ನಾ ಕಾಯುತಿರುವೆ ಎಲ್ಲ ಮರೆತು ನಿನ್ನ ಕರೆಗೆ
ಈ ಒಂಟಿ ಹೃದಯ ಹಾರಿಬಿಡಲಿ ನಿನ್ನ ಕಡೆಗೆ.

ನಿನ್ನಿಂದ ಬೀಸಿ ಬರುವ ಬೆಳಕಲ್ಲಿ ಮೀಯುವೆ
ಅನುಕಂಪವನ್ನೇ ಬಯಸಿ ಏನೆಲ್ಲಾ ಹೇಳುವೆ
ಸಾಕೊಂದು ಮಾತೀಗ ಹೊಸ ಜೀವ ನೀಡೋಕೆ
ಬೇಕು ಒಂದು ಜೀವ ಮಾತಿಗೆ
ನಾ ಕಾಯುತಿರುವೆ ಎಲ್ಲ ಮರೆತು ನಿನ್ನ ಕರೆಗೆ
ಈ ಒಂಟಿ ಹೃದಯ ಹಾರಿಬಿಡಲಿ ನಿನ್ನ ಕಡೆಗೆ.

ತಂತಾನೇ ಪ್ರಾಣದೊಳಗೆ ಸಿಹಿಯಾಯ್ತು ಹೂರಣ
ಅನುರಾಗದಲ್ಲಿ ಹೊಳೆವ ಅವತಾರ ನೂತನ
ನನ್ನಲ್ಲಿ ನೀನೊಂದು ಮಳೆಗಾಲ ಎಂದೆಂದೂ
ಕಣ್ಣ ಹನಿಯು ಮಾತ್ರ ನನ್ನದು
ನಾ ಕಾಯುತಿರುವೆ ಎಲ್ಲ ಮರೆತು ನಿನ್ನ ಕರೆಗೆ
ಈ ಒಂಟಿ ಹೃದಯ ಹಾರಿಬಿಡಲಿ ನಿನ್ನ ಕಡೆಗೆ
ನೀ ನನ್ನವಳು ಎಂಬ ಸುಳಿವೇ ಸಾಕು ನನಗೀಗ
ನಾ ದೂರದಲಿ ನಿಂತು ಒಲವೇ ಏನು ಉಪಯೋಗ
ನಾ ಕಾಯುತಿರುವೆ ಎಲ್ಲ ಮರೆತು ನಿನ್ನ ಕರೆಗೆ
ಈ ಒಂಟಿ ಹೃದಯ ಹಾರಿಬಿಡಲಿ ನಿನ್ನ ಕಡೆಗೆ.
-----------------------------------------------------------------------------------------------------------------

ಕರಿಯ -೨ (೨೦೧೭) -  ಮಳೆಗಾಲದ ವೇಳೆ ಬರಗಾಲದ ಛಾಯೆ 
ಸಂಗೀತ : ಕರಣ ಕೃಪ, ಸಾಹಿತ್ಯ : ಚಿನ್ಮಯಿ, ಗಾಯನ : ಅನುರಾಧ ಭಟ್ಟ 

ಮಳೆಗಾಲದ ವೇಳೆ ಬರಗಾಲದ ಛಾಯೆ ಮನದಿ ಮೂಡಿದಂತೆ
ಮನದಾಳದ ಒಳಗೆ ಮರೆಯಾಗಿದೆ ನಲುಮೆ ತಿರುಗಿ ಬಾರದಂತೆ
ಗುರಿಯಿಲ್ಲದ ಒಂದು ದಾರಿ
ನನ್ನ ಕರೆದಂತಿದೆ ಕೈಯ ತೋರಿ
ಉಪಯೋಗವೇನಿಲ್ಲ ದೂರಿ
ಸಾಗಿದೆ ಯಾನ ವಿಧಿಯನ್ನು ಮೀರಿ
ಮಳೆಗಾಲದ ವೇಳೆ ಬರಗಾಲದ ಛಾಯೆ ಮನದಿ ಮೂಡಿದಂತೆ
ಮನದಾಳದ ಒಳಗೆ ಮರೆಯಾಗಿದೆ ನಲುಮೆ ತಿರುಗಿ ಬಾರದಂತೆ.

ಆಲಿಸರು ಯಾರು ಅಳುತಿರಲು ಜೋರು
ಆಲಿಸರು ಯಾರು ಅಳುತಿರಲು ಜೋರು ಅನುಕಂಪವಿರದಂತೆ ಚೂರು
ಸಂತೋಷವೇ ಕಳುವಾಗಿದೆ
ಸಂಕಷ್ಟದ ಹೊಳೆಯಾಗಿದೆ
ಸಂತೆಯೊಳು ಮೌನ ಸುಳಿದಾಡಿದೆ
ಮಳೆಗಾಲದ ವೇಳೆ ಬರಗಾಲದ ಛಾಯೆ ಮನದಿ ಮೂಡಿದಂತೆ
ಮನದಾಳದ ಒಳಗೆ ಮರೆಯಾಗಿದೆ ನಲುಮೆ ತಿರುಗಿ ಬಾರದಂತೆ.

ಮಾಡುತಿದೆ ದಾಳಿ ಮಧುರ ತಂಗಾಳಿ ತಿ
ಮಾಡುತಿದೆ ದಾಳಿ ಮಧುರ ತಂಗಾಳಿ
ಬಿರುಗಾಳಿಯ ರೂಪ ತಾಳಿ
ಮುಂಜಾನೆಯು ಅಸುನೀಗಿದೆ
ಮುಂದೆಲ್ಲವು ಮುಸುಕಾಗಿದೆ
ಮುನ್ನೆಡೆಸೋ ಕೈಯ ಮುರಿದಂತಿದೆ
ಮಳೆಗಾಲದ ವೇಳೆ ಬರಗಾಲದ ಛಾಯೆ ಮನದಿ ಮೂಡಿದಂತೆ
ಮನದಾಳದ ಒಳಗೆ ಮರೆಯಾಗಿದೆ ನಲುಮೆ ತಿರುಗಿ ಬಾರದಂತೆ.
-----------------------------------------------------------------------------------------------------------------

ಕರಿಯ -೨ (೨೦೧೭) - ಕರಿಯ ಬರ್ತಾವನೇ ಲಾಂಗೂ ತರ್ತಾವನೇ
ಸಂಗೀತ : ಕರಣ ಕೃಪ, ಸಾಹಿತ್ಯ : ಮಂಜು ಮಾಂಡವ್ಯ ಗಾಯನ : ಶಶಾಂಕ ಶೇಷಗಿರಿ

ಕರಿಯ ಬರ್ತಾವ್ನೆ ಲಾಂಗು ತರರ್ತ್ವಾನೇ.. ಕೇಸು ಮಾಡ್ತಾನೆ ಕೇರಫುಲ್ ಗುರು.. 
ಕರಿಯ ಬರ್ತಾವ್ನೆ ಲಾಂಗು ತರರ್ತ್ವಾನೇ.. ಕೇಸು ಮಾಡ್ತಾನೆ ಕೇರಫುಲ್ ಗುರು.. 
ಅಣ್ಣಮ್ಮುನ್ ಭಕ್ತ ಗುರು ಶಾನೇಗ್ ಏಜ್  ಆಯ್ತು ಸೋಮ ಹೋಗಾಯ್ತು 
ಅಣ್ಣಾ ಲೇಟೆಸ್ಟು ದೋನು ಗುರು.. 
ಕರಿಯ ಬರ್ತಾವ್ನೆ ಲಾಂಗು ತರರ್ತ್ವಾನೇ.. ಕೇಸು ಮಾಡ್ತಾನೆ ಕೇರಫುಲ್ ಗುರು.. 

ಹುಡ್ಗೀರ ಶೋಕೆ ಇಲ್ಲಾ ಲವ್ ಅಂತು ಮಾಡಿ ಇಲ್ಲ
ಅಂತೀರಾ ಸವಾಸಕ್ಕೇ ಹೋಗೇ ಇಲ್ಲಾ 
ಇಸ್ಪೇಟ ಚಟ ಇಲ್ಲ ಗಾಂಜ ಹೊಡೆಯೋದಿಲ್ಲ
ಐಪಿಎಲ್ ಬೆಟ್ಟಿಂಗ್ ಅಂತೂ ಕಟ್ಟೆಯಿಲ್ಲ ಅದ್ರೂ ಬ್ಯಾಡ್ ಬಾಯ್ ಅಂತಾರಲ್ಲಾ 
ಪೋಲೀಸ್ ಒಂದ್ ಕಣ್ಣ್ ಇಟ್ಟವರಲ್ಲ ಡೇಲಿ ಅಟೆಂಡೆನ್ಸ್ ಹಾಕ್ಬೇಕಲ್ಲ ಯಾಮಾರಿದ್ರೆ ಎನ್ಕೌಂಟರ್
ಕರಿಯ ಬರ್ತಾವ್ನೆ ಲಾಂಗು ತರರ್ತ್ವಾನೇ.. ಕೇಸು ಮಾಡ್ತಾನೆ ಕೇರಫುಲ್ ಗುರು.. 
ಅಣ್ಣಮ್ಮುನ್ ಭಕ್ತ ಗುರು ಶಾನೇಗ್ ಏಜ್  ಆಯ್ತು ಸೋಮ ಹೋಗಾಯ್ತು 
ಅಣ್ಣಾ ಲೇಟೇಸ್ಟುದೋನು ಗುರು..

ಅವಾಜಿಗೇ ಹೆದ್ರೊದಿಲ್ಲಾ ಗುರೈಸಿದ್ರೆ ಬಿಡೋದಿಲ್ಲಾ 
ಕೈಯಲೇ ಲಾಂಗ್ ಹಿಡ್ಕೊಂಡ್ ಹೋಡ್ದೇಯಿಲ್ಲ 
ಜಿಮ್ ಬಾಡಿ ನಂದೇನಲ್ಲ ಕರಾಟೆ ಕಲ್ತೆ ಇಲ್ಲಾ 
ಕತ್ಲಲೆ ಬೇಸಿದ್ರೂ ಮಿಸ್ಸೆ ಇಲ್ಲಾ ಅದ್ರು ದುಷ್ಮನ್ ಹುಟ್ಟವ್ರಲ್ಲಾ 
ಗಪಾಲ್ ಸ್ಕೆಚ್ ಹಾಕ್ತಾವ್ರಲ್ಲಾ ಸಾಡೆ ಸಾತು ಆಟಕೈಸ್ಕೊಂಡ್ರೆ ಸದ್ದಿಲ್ಲದೇ ಶ್ರಧಾಂಜಲೀ 
ಕರಿಯ ಬರ್ತಾವ್ನೆ ಲಾಂಗು ತರರ್ತ್ವಾನೇ.. ಕೇಸು ಮಾಡ್ತಾನೆ ಕೇರಫುಲ್ ಗುರು.. 
ಅಣ್ಣಮ್ಮುನ್ ಭಕ್ತ ಗುರು ಶಾನೇಗ್ ಏಜ್  ಆಯ್ತು ಸೋಮ ಹೋಗಾಯ್ತು 
ಅಣ್ಣಾ ಲೇಟೇಸ್ಟುದೋನು ಗುರು..
----------------------------------------------------------------------------------------------------------------------

No comments:

Post a Comment