1492. ಕೆಂಡಸಂಪಿಗೆ (೨೦೧೫)


ಕೆಂಡಸಂಪಿಗೆ ಚಲನಚಿತ್ರದ ಹಾಡುಗಳು 
  1. ಇಳಿಜಾರು ಹಾದಿ 
  2. ನೆನಪೆ ನಿತ್ಯ ಮಲ್ಲಿಗೆ ಕನಸು ಕೆಂಡಸಂಪಿಗೆ
  3. ಕನಸಲಿ ನಡೆಸು ಬಿಸಿಲಾದರೆ
  4. ಮರೆಯದೆ ಕ್ಷಮಿಸು ನೆನಪಾದರೆ
ಕೆಂಡಸಂಪಿಗೆ (೨೦೧೫) - ಇಳಿಜಾರು ಹಾದಿ 
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಯೋಗರಾಜ್ ಭಟ್, ಗಾಯನ : ವಿಜಯ ಪ್ರಕಾಶ 

ಇಳಿಜಾರು ಹಾದಿಯಿದು ಮುಗಿದಂತೆ ಕಾಣುವುದು 
ಹಿಂತಿರುಗಿ ನೋಡಿದರೆ ಅಲ್ಲೊಂದು ತುದಿ,
ಮುಂತಿರುಗಿ ಓಡಿದರೆ ಮುಂದೊಂದು ತುದಿ..!
ಅಂಗಾಲಿಗೆ ಭೂಮಿಯನ್ನೆ ಕಟ್ಟಿಕೊಂಡ ಕಾಲು,
ಎಲ್ಲಿ ಹೋದರೇನು? ಎಲ್ಲಿ ಬಂದರೇನು? ಎಲ್ಲಿ ನಿಂತರೇನು? ಎಲ್ಲಿ ಕುಂತರೇನು?
ಎರಡು ತುದಿಗಳ ನಡುವೆ ಗೆರೆಯನೆಳೆದರೆ ದಾರಿ ನೂರು
ಗುರಿಗಳ ನಡುವೆ ಅಡಗಿ ಕೂತಿದೆ ಗೋರಿ.,
ಮುಗಿಯೆತೆನ್ನುವ ಪಯಣ ಇಲ್ಲ ಎಲ್ಲೂ,
ಆದಿ ಅಂತ್ಯಗಳೆರಡು ಸುಳ್ಳೆ ಸುಳ್ಳು..
ಅಂಗಾಲಿಗೆ ಕೆಂಡವನ್ನೆ ಕಟ್ಟಿಕೊಂಡ ಕಾಲು,
ಎಲ್ಲಿ ನಿಂತರೇನು? ಎಲ್ಲಿ ಕುಂತರೇನು? ಎಲ್ಲಿ ಹೋದರೇನು? ಎಲ್ಲಿ ಬಂದರೇನು?
ಊರು ಊರಿನ ನಡುವೆ ಟಾರು ಹುಯ್ದವರಾರು?
ಮೈಲಿಗಲ್ಲನು ಊರಿ ಊರು ಅಂದವರಾರು?
ಯಾರ ತೋರ ಬೆರಳ ನಂಬಿ ಬಂದೆವು?
ನಾವೇ ನಮ್ಮ ನೆರಳ ಎಂದೋ ಕೊಂದೆವು!
ಎಲ್ಲಾ ಪಯಣದ ದಿಕ್ಕು ಮಣ್ಣು ಎಂದಮೇಲೆ,
ಜೀವವಿದ್ದರೇನು? ಇಲ್ಲದಿದ್ದರೇನು? ದಾರಿ ಎಂದರೇನು? ದಿಕ್ಕು ಎಂದರೇನು?
------------------------------------------------------------------------------------------------------------------------

ಕೆಂಡಸಂಪಿಗೆ (೨೦೧೫) - ನೆನಪೆ ನಿತ್ಯ ಮಲ್ಲಿಗೆ ಕನಸು ಕೆಂಡಸಂಪಿಗೆ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಜಯಂತ ಕಾಯ್ಕಣಿ, ಗಾಯನ : ಕಾರ್ತೀಕ 

ನೆನಪೆ ನಿತ್ಯ ಮಲ್ಲಿಗೆ ಕನಸು ಕೆಂಡಸಂಪಿಗೆ
ಎಷ್ಟು ಚಂದ ಶಿಕ್ಷೆ ಒಂದು ಸಣ್ಣ ತಪ್ಪಿಗೆ
ಸರಸ ಪಾರಿಜಾತವು ವಿರಹ ಚೂಪು ಕೇದಿಗೆ
ಸದಾ ಹೂ ಬಿಡುವ ಕಾಲ ನನ್ನ ಪ್ರೀತಿಗೆ ನೆನಪೆ ನಿತ್ಯ ಮಲ್ಲಿಗೆ

ನಿನ್ನ ಕೆನ್ನೆ ಇಂದ ಬಂತೆ ಬಾನಿಗೆ ಕನಕಾಂಬರ
ಬಹಳ ಮುದ್ದು ನಿನ್ನ ಮಾತಿನಲ್ಲಿ ವಿಷಯಾಂತರ
ನಿನ್ನ ನಗುವು ಜೊಂಪೆ ಜೊಂಪೆ ನಂದಬಟ್ಟಲು
ಆಸೆ ನನಗೆ ಉಸಿರಿನಲ್ಲೆ ಮಾಲೆ ಕಟ್ಟಲು!
ಎಷ್ಟು ಪಕಳೆಯುಂಟು ಹೇಳು ಸೇವಂತಿಗೆ
ಅಷ್ಟೆ ಬಗೆಯ ಸೆಳೆತ ನನಗೆ ನಿನ್ನೊಂದಿಗೆ ನೆನಪೆ ನಿತ್ಯ ಮಲ್ಲಿಗೆ

ಹಿಗ್ಗಿನಲ್ಲಿ ಅರಳಿ ನಿನ್ನ ಮುಖವೇ ದಾಸವಾಳವು
ಮತ್ತೆ ಮತ್ತೆ ಚಿಟ್ಟೆ ಹಾರಿ ಬಂದು ಮೋಸ ಹೋದವು
ಗುಟ್ಟು ಮಾಡುವಾಗ ನೀನು ದಿಟ್ಟ ಕಡಗಿಲೆ!
ತೊಟ್ಟು ಜೇನಿಗಾಗಿ ನಿನ್ನ ಮುಂದೆ ಕುಣಿಯಲೆ
ಅಂಟಿಕೊಂಡ ದಿವ್ಯ ಗಂಧ ನೀನು ಸುರಗಿಯೆ
ನಿನ್ನ ಸ್ವಪ್ನ ಕಂಡೆ ನಿನ್ನ ಎದೆಗೆ ಒರಗಿಯೆ
ನೆನಪು ನಿತ್ಯ ಮಲ್ಲಿಗೆ ಕನಸು ಕೆಂಡಸಂಪಿಗೆ
ಎಷ್ಟು ಚಂದ ಶಿಕ್ಷೆ ಒಂದು ಸಣ್ಣ ತಪ್ಪಿಗೆ
ಸರಸ ಪಾರಿಜಾತವು ವಿರಹ ಚೂಪು ಕೇದಿಗೆ
ಸದಾ ಹೂ ಬಿಡುವ ಕಾಲ ನನ್ನ ಪ್ರೀತಿಗೆ ನೆನಪೆ ನಿತ್ಯ ಮಲ್ಲಿಗೆ
-----------------------------------------------------------------------------------------------------------------------

ಕೆಂಡಸಂಪಿಗೆ (೨೦೧೫) - ಕನಸಲಿ ನಡೆಸು ಬಿಸಿಲಾದರೆ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಜಯಂತ ಕಾಯ್ಕಣಿ, ಗಾಯನ : ಶ್ವೇತಾ ಮೋಹನ 

ಕನಸಲಿ ನಡೆಸು ಬಿಸಿಲಾದರೆ
ಒಲವನೆ ಬಡಿಸು ಹಸಿವಾದರೆ
ಜಗವಾ ಮರೆಸು ನಗುವ ಮುಡಿಸು
ನೀ ನನ್ನ ಪ್ರೇಮಿ ಆದರೆ
ಹೃದಯವು ಹೂವಿನ ಚಪ್ಪರ
ಅದರಲಿ ನಿನ್ನದೇ ಅಬ್ಬರ
ಕನಸಲಿ ನಡೆಸು ಬಿಸಿಲಾದರೆ
ಒಲವನೆ ಬಡಿಸು ಹಸಿವಾದರೆ

ಬೇಕಂತ ಸುಮ್ಮನೆ ಗುದ್ದಾಡುತಾ
ಕಣ್ಣಲ್ಲಿ ನಿನ್ನನು ಮುದ್ದಾಡುತಾ
ಆಗಾಗ ಮೂಕಳಾದೆ ಮಾತನಾಡುತಾ
ನಿನ್ನಲ್ಲ ನೋವು ಪ್ರೀತಿಯಿಂದ ಬಾಚಿಕೊಳ್ಳುವೆ
ಕಾಪಾಡು ಮೈಲಿ ಆದರೆ
ಹೃದಯವು ಮಾಯದಾ ದರ್ಪಣ
ಅದರಲಿ ನಿನ್ನದೆ ನರ್ತನ
ಕನಸಲಿ ನಡೆಸು ಬಿಸಿಲಾದರೆ
ಒಲವನೆ ಬಡಿಸು ಹಸಿವಾದರೆ

ಆಕಾಶ ಬುಟ್ಟಿಯು ಕಣ್ಣಲ್ಲಿದೆ
ಅದೃಷ್ಟ ನಮ್ಮದೆ ಜೇಬಲ್ಲಿದೆ
ಸದ್ದಿಲ್ಲದಂತೆ ಊರು ಮಾಯವಗಿದೆ
ಒಂದಿಷ್ಟು ಆಸೆಯನ್ನು ಹಾಗೆ ಇಟ್ಟುಕೊಳ್ಳುವೆ
ತಪ್ಪೇನು ಪ್ರೀತಿ ಆದರೆ?
ಹೃದಯವು ಮುತ್ತಿನ ಜೋಳಿಗೆ
ಅದರಲಿ ನಿನ್ನದೆ ದೇಣಿಗೆ
ಕನಸಲಿ ನಡೆಸು ಬಿಸಿಲಾದರೆ
ಒಲವನೆ ಬಡಿಸು ಹಸಿವಾದರೆ
------------------------------------------------------------------------------------------------------------------------

ಕೆಂಡಸಂಪಿಗೆ (೨೦೧೫) - ಮರೆಯದೆ ಕ್ಷಮಿಸು ನೆನಪಾದರೆ,
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಜಯಂತ ಕಾಯ್ಕಣಿ, ಗಾಯನ : ಬಲರಾಮ 

ಮರೆಯದೆ ಕ್ಷಮಿಸು ನೆನಪಾದರೆ, ಕನಸನು ಉರಿಸು ಇರುಳಾದರೆ..
ನಿನದೇ ಹಿತವ,ಬಯಸಿ ಒಲವೇ, ನಿನ್ನಿಂದಾ ದೂರ ಓಡುವೇ..
ಮನಸಿದು ನೆನಪಿನ ಸಂಚಿಕೆ, ಪುಟವನು ತಿರುವಲು ಅಂಜಿಕೆ
ಮರೆಯದೆ ಕ್ಷಮಿಸು ನೆನಪಾದರೆ, ಕನಸನು ಉರಿಸು ಇರುಳಾದರೆ..

ಇನ್ನೆಲ್ಲೂ ಕಾಣದ ತಲ್ಲೀನತೆ, ನಿನ್ನಲೇ ಕಾಣುತ ಈಗಾಯಿತೇ..
ಕೈಇಂದ ಜಾರಿತೇನು ನನ್ನಯಾ ಕಥೆ,
ಇಂದಲ್ಲಾ ನಾಳೆ ಸೇರುವಾಸೆ ಇಂದ ಬಾಳುವೆ,
ಸಿಕ್ಕಾಗ ಎಲ್ಲಾ ಹೇಳುವೆ..
ಮನಸಿದು ಮುಗಿಯದ ಸಾಗರ, ಇರುಳಲಿ ಅಲೆಗಳ ಜಾಗರ..

ತಂಗಾಳಿ ತಂದಿದೆ ನಿನ್ನಾ ಧನಿ, ಕಣ್ಣಲೇ ಇಂಗಿದೇ .ಸಣ್ಣಾ ಹನಿ.
ನನ್ನಲ್ಲಿ ಮಂದಹಾಸವಾಗಿ ನಿಂತೆ ನೀ,
ಕಣ್ಮುಚ್ಚದೇನೆ ನಿನ್ನ ದಾರಿಯನ್ನೇ ನೋಡುವೆ,
ನಿನ್ನನ್ನು ಕಂಡೆ ತೀರುವೆ..
ಮನಸಿದು ನಡೆಸಿದೆ ನಾಟಕ, ಬದುಕಲಿ ಕೆರಳಿಸಿ ಕೌತುಕ..
ಮರೆಯದೆ ಕ್ಷಮಿಸು ನೆನಪಾದರೆ,
ಕನಸನು ಉರಿಸು ಇರುಳಾದರೆ..
------------------------------------------------------------------------------------------------------------------------

No comments:

Post a Comment