1498. ಹಬ್ಬ (೧೯೯೯)



ಹಬ್ಬ ಚಲನಚಿತ್ರದ  ಹಾಡುಗಳು 
  1. ಜೇನಿನ ಗೂಡು ನಾವೆಲ್ಲಾ 
  2. ಯಾಲೆ ಯಾಲೆ 
  3. ಆರತಿ ಎತ್ತಿರೇ 
  4. ಮೈ ತೊಳೆಯೋ ಶಸ್ತ್ರಾನಾ
  5. ಚನ್ನಪ್ಪ ಚನ್ನಗೌಡ 
  6. ಧೀಮ ತಕಿಟ್  ತಕಿಟ್  
  7. ಮಾಮ ಮಾಮ ಮಸ್ತಿ 
  8. ಹಬ್ಬ ಹಬ್ಬ 
  9. ಕೋಟಿಕೋಟಿ ದೇವರುಗಳು 
  10. ಒಂದೇ ಉಸಿರಂತೆ ಇನ್ನೂ ನಾನು 
ಹಬ್ಬ (೧೯೯೯) - ಜೇನಿನ ಗೂಡು ನಾವೆಲ್ಲಾ 
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ರಾಜೇಶ, ಚಿತ್ರಾ 

ಗಂಡು : ಜೇನಿನ ಗೂಡು ನಾವೆಲ್ಲಾ ಬೇರೆ ಆದರೆ ಜೇನಿಲ್ಲ 
ಹೆಣ್ಣು : ಜೇನಿನ ಗೂಡು ನಾವೆಲ್ಲಾ ಬೇರೆ ಆದರೆ ಜೇನಿಲ್ಲ 
ಗಂಡು : ಜೇನಿನ ಗೂಡು ನಾವೆಲ್ಲಾ ಬೇರೆ ಆದರೆ ಜೇನಿಲ್ಲ 
ಹೆಣ್ಣು : ಜೇನಿನ ಗೂಡು ನಾವೆಲ್ಲಾ ಬೇರೆ ಆದರೆ ಜೇನಿಲ್ಲ 
ಗಂಡು :ಮನಗಳು ಸೇರಿದರೆ ತುಂಬಿದ ಮನೆಯಂತೇ .. 
ಹೆಣ್ಣು : ಮನಗಳು ಸೇರಿದರೆ ತುಂಬಿದ ಮನೆಯಂತೇ .. 
ಇಬ್ಬರು : ತುಂಬಿದ ಮನೆಯವನೇ ಧರೆಯಲಿ ನಗುವಿನ ದೊರೆಯಂತೆ 
ಹೆಣ್ಣು : ಜೇನಿನ ಗೂಡು ನಾವೆಲ್ಲಾ ಬೇರೆ ಆದರೆ ಜೇನಿಲ್ಲ 
ಗಂಡು :ಮನಗಳು ಸೇರಿದರೆ ತುಂಬಿದ ಮನೆಯಂತೇ .. 

ಗಂಡು : ಬದುಕಿನ ಬೆಂಡಿಗೆ ಅಂಟಿರೋ ಜೋಳದ ಕಾಳುಗಳಾಗೋ 
           ಸಿಪ್ಪೆಯ ಸೂರಿನಲ್ಲಿ ಸಹ ಜೀವನ ಮಾಡೋ ಅವರೆ ಕಾಳುಗಳಾ ನೋಡು 
           ಭೂಮಿಗೆ ಒಟ್ಟಿಗೆ ಬಂದು ಬೆಂದರೆ ಒಟ್ಟಿಗೆ ಬೆಂದು 
           ಬಾಳೋ ದವಸದಂತೆ ನಾವು ಬಾಳೆಯಂತೆ ಹಲಸಂತೆ 
           ದಾಳಿಂಬೆಯಂತೆ ನಾವು ಒಗ್ಗಟ್ಟೇ ಸೃಷ್ಟಿಯ ನಿಯಮ 
ಹೆಣ್ಣು : ರುಚಿಗಳು ಸೇರಿದರೆ ಅಭಿರುಚಿ ಇದೆಯಂತೆ 
ಗಂಡು : ರುಚಿಗಳು ಸೇರಿದರೆ ಅಭಿರುಚಿ ಇದೆಯಂತೆ 
ಹೆಣ್ಣು : ಅಭಿರುಚಿ ಬೆಳೆದವರೇನೇ ಬಾಳಿನ ಅಡಿಗೆಯ ದೊರೆಯಂತೆ 
ಎಲ್ಲರು : ಜೇನಿನ ಗೂಡು ನಾವೆಲ್ಲಾ ಬೇರೆ ಆದರೆ ಜೇನಿಲ್ಲ 
           ಮನಗಳು ಸೇರಿದರೆ ತುಂಬಿದ ಮನೆಯಂತೇ .. 

ಗಂಡು : ಕಹಿಯನ್ನೆಲ್ಲ ಮರೆಯಬೇಕಯ್ಯಾ ಎಡಿಎ ಮರೆಯೋದಕ್ಕೂ ಮರವು ಬೇಕಯ್ಯಾ 
            ಮರೆಯೋ ಮರವೇ ಇಲ್ಲದಿದ್ದರೆ ಮನಸೇ ಕುಡಿದ ಮಂಗನಂತಯ್ಯ   
ಹೆಣ್ಣು : ಕೆಣಕಿ ಕೆಣಕಿ ಕೆದಕಿ ಕೆದಕಿ ವೇಷ ಬರಿಸುವುದಂತಯ್ಯಾ 
          ಮನಸು ಮುರಿದು ಹೋಗಲು ಕಹಿಯೇ ಮೂಲವಯ್ಯ 
ಗಂಡು : ತುಂಬಿದ ಮನೆಯು ಒಡೆದು ಹೋಗಲು ಕಹಿ ನೆನಪೇ ನೆಪವಯ್ಯಾ 
ಹೆಣ್ಣು : ಮರೆವಿನ ಮನೆಯಲ್ಲೇ ಕ್ಷಮೆಯ ಇದೆಯಂತೆ 
ಗಂಡು : ಮರೆವಿನ ಮನೆಯಲ್ಲೇ ಕ್ಷಮೆಯ ಇದೆಯಂತೆ   
ಹೆಣ್ಣು : ಕ್ಷಮಿಸಲು ಕಲಿತವನೇ ಕಹಿಯನ್ನು ಸಿಹಿ ಎನ್ನುವನಂತೆ 
ಗಂಡು : ಜೇನಿನ ಗೂಡು ನಾವೆಲ್ಲಾ ಬೇರೆ ಆದರೆ ಜೇನಿಲ್ಲ 
ಹೆಣ್ಣು : ಜೇನಿನ ಗೂಡು ನಾವೆಲ್ಲಾ ಬೇರೆ ಆದರೆ ಜೇನಿಲ್ಲ 

ಗಂಡು : ಮನೆಯೇ ನಮ್ಮ ಜೀವ ಗುರು ಹಿರಿಯರೆಮ್ಮ ದೈವ 
           ದೈವ ಪಾದಗಳಿಗೆ ನಮ್ಮ ಪ್ರೀತಿ ಎಂಬ ಹೂವ 
           ಹಳೆಯ ಬೇರಿನ ಮಡಿಲಲ್ಲಿ ಹೊಸ ಚಿಗುರುಗಳು 
          ಚಿಗುರೊಡೆವಂತೇ ನಡೆಯಬೇಕು ಎಲ್ಲಾ ಹಿರಿಯರು 
          ಹಿರಿಯರು ಹೇಳಿದ ನುಡಿಗಳಂತೇ ಉಲ್ಲಾಸ ಉಲ್ಲಾಸ ಹಿರಿಯ ನೆರಳಲಿ ವಿಕಾಸ   
ಹೆಣ್ಣು : ಮನಗಳು ಸೇರಿದರೆ ತುಂಬಿದ ಮನೆಯಂತೇ .. 
ಗಂಡು :ಮನಗಳು ಸೇರಿದರೆ ತುಂಬಿದ ಮನೆಯಂತೇ .. 
ಇಬ್ಬರು : ತುಂಬಿದ ಮನೆಯವನೇ ಧರೆಯಲಿ ನಗುವಿನ ದೊರೆಯಂತೆ 
ಎಲ್ಲರು : ಪ್ರೀತಿಯ ಗೂಡು ನಾವೆಲ್ಲಾ ಬೇರೆ ಆದರೆ ಬಲವಿಲ್ಲ 
           ಜೇನಿನ ಗೂಡು ನಾವೆಲ್ಲಾ ಬೇರೆ ಆದರೆ ಜೇನಿಲ್ಲ 
           ಪ್ರೀತಿಯ ಗೂಡು ನಾವೆಲ್ಲಾ ಬೇರೆ ಆದರೆ ಬಲವಿಲ್ಲ 
          ಜೇನಿನ ಗೂಡು ನಾವೆಲ್ಲಾ ಬೇರೆ ಆದರೆ ಜೇನಿಲ್ಲ
-----------------------------------------------------------------------------------------------------------

ಹಬ್ಬ (೧೯೯೯) - ಯಾಲೇ ಯಾಲೇ ಅವಳೊಂದು ಅಂದದ ಉಯ್ಯಾಲೆ 
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ರಾಜೇಶ, ಚಿತ್ರಾ 

ಗಂಡು : ಯಾಲೇ ಯಾಲೇ .. ಯಾಲೇ ಯಾಲೇ .. ಅವಳೊಂದು ಅಂದದ ಉಯ್ಯಾಲೆ 
           ಗೊಂಬೆ ಗೊಂಬೆ ದಂತದ ಗೊಂಬೆ ಹೆಜ್ಜೆ ಇಟ್ಟರೆ ನವಿಲಂತೆ 
           ತುಟಿ ತೆರೆದರೆ ಗಿಣಿಯಂತೆ ಆ ನಡೆ ಚೆಂದ ಆ ನುಡಿ ಚೆಂದ 
           ಆಹ್ ನಗು ಚೆಂದ ಆಹ್ ಗುಣ ಚೆಂದ 
          ಯಾಲೇ ಯಾಲೇ .. ಯಾಲೇ ಯಾಲೇ .. ಅವಳೊಂದು ಅಂದದ ಉಯ್ಯಾಲೆ 

ಗಂಡು : ಮನದ ಮಾಮರದ ಹಕ್ಕಿ ಕುಹೂ ಕುಹೂ ಅನ್ನುತಿದೆ 
ಹೆಣ್ಣು : ಅವಳ ಕಣ್ಣಲಿ ಕಾಣುತಿತ್ತು 
ಗಂಡು : ಪ್ರೇಮ ಪಯಣ ಮಾಡುವಾಸೆ ಹಾಡಿನಲ್ಲಿ ಇಣುಕುತಿತ್ತು 
ಹೆಣ್ಣು : ಮದುವೆ ಶೃತಿಯ ಹಿಡಿಯುತಿತ್ತು 
ಗಂಡು : ಪ್ರಿಯ ನಿಮ್ಮ ಊರ ಚೈತ್ರ 
ಹೆಣ್ಣು : ನಾನು ನೋಡಬೇಕು ಎಂದು 
ಗಂಡು : ಆಸೆಯಿಂದ ಕೇಳುತಿತ್ತು ಆಸೆಯಿಂದ ಕೇಳುತಿತ್ತು 
ಹೆಣ್ಣು : ಪಿಳಿ ಪಿಳಿ ಅಂತ ನೋಡುತಿತ್ತು 
ಗಂಡು : ವೀಳ್ಯ ವಿಲೇವಾರಿ ಕಾಯುತಿತ್ತು 
ಹೆಣ್ಣು : ಮದುಮಗನ 
ಗಂಡು : ಕೂಗುತಿತ್ತು 
ಹೆಣ್ಣು : ಮೌನದಲಿ 
ಗಂಡು : ಮೆಚ್ಚುತ್ತಿತ್ತು 
ಇಬ್ಬರು : ಯಾಲೇ ಯಾಲೇ .. ಯಾಲೇ ಯಾಲೇ .. ಅವಳೊಂದು ಅಂದದ ಉಯ್ಯಾಲೆ 

ಗಂಡು : ಅಂಗಳಕೆ ತಾರೆಗಳಿಂದ ರಂಗವಲ್ಲಿ ಇಡುವೆನೆಂತು 
ಹೆಣ್ಣು : ಅಕ್ಷತೆಗಳ ಹಾಕಿರೆಂತು 
ಗಂಡು : ಬಾಗಿಲಿಗೆ ಬಣ್ಣದ ಬಿಲ್ಲಿನ ತೋರಣಗಳ ತರುವೆನೆಂತು 
ಹೆಣ್ಣು : ಮನೆಯ ತುಂಬಿಸಿ ಕೊಳ್ಳಿರೆಂತು 
ಗಂಡು : ಪ್ರೀತಿಯ ವಸಂತ ತರುವ 
ಹೆಣ್ಣು : ನಿತ್ಯ ದೀಪವಾಗಿ ಇರುವ 
ಗಂಡು : ಸುಲಕ್ಷಣೇ ಸಂಪನ್ನೇ ... ಸುಲಕ್ಷಣೇ ಸಂಪನ್ನೇ 
ಹೆಣ್ಣು : ಇವನಿಗೆ ಮೆರೆಗು ಆ ಒಡವೆ 
ಗಂಡು : ಅವಳಿಗೆ ಮೆರಗು ಈ ಒಲವೇ 
ಹೆಣ್ಣು : ಈ ಒಡವೆ 
ಗಂಡು : ಆ ಒಡವೆ 
ಹೆಣ್ಣು : ಬೆರೆಸಿದರೆ 
ಗಂಡು : ಈ ಮದುವೆ 
ಇಬ್ಬರು : ಯಾಲೇ ಯಾಲೇ .. ಯಾಲೇ ಯಾಲೇ .. ಅವಳೊಂದು ಅಂದದ ಉಯ್ಯಾಲೆ 
--------------------------------------------------------------------------------------------------------

ಹಬ್ಬ (೧೯೯೯) - ಆರತಿ ಎತ್ತಿರೇ 
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ನಂದಿತಾ, ಕೋರಸ್  

ಆರತಿ ಎತ್ತಿರೇ ಆರತಿ ಎತ್ತಿರೇ 
ಆರತಿ ಎತ್ತಿರೇ ಆರತಿ ಎತ್ತಿರೇ 
ಮೀಸೆಲೀ ನಗುವ ನವ ಮದುಮಗನಿಗೆ 
ಮೀಸೆಲೀ ನಗುವ ನವ ಮದುಮಗನಿಗೆ 
ಆರತಿ ಎತ್ತಿರೇ ಆರತಿ ಎತ್ತಿರೇ 
ಆರತಿ ಎತ್ತಿರೇ ಆರತಿ ಎತ್ತಿರೇ 

ಕಳ್ಳ ನೋಟದಲಿ ವಧುವನ್ನು ಕೂಗೋನಿಗೆ 
ಕಳ್ಳ ನೋಟದಲಿ ವಧುವನ್ನು ಕೂಗೋನಿಗೆ 
ಆರತಿ ಎತ್ತಿರೇ ಆರತಿ ಎತ್ತಿರೇ 
ಆರತಿ ಎತ್ತಿರೇ ಆರತಿ ಎತ್ತಿರೇ 
--------------------------------------------------------------------------------------------------------

ಹಬ್ಬ (೧೯೯೯) - ಮೈ ತೊಳೆಯೋ ಶಾಸ್ತ್ರನಾ 
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ನಂದಿತಾ, ಕೋರಸ್  

ಮೈತೊಳೆಯೋ ಶಾಸ್ತ್ರನಾ ಮಾಡೋಣ ಬಾರಮ್ಮಾ 
ಮೈತೊಳೆಯೋ ಶಾಸ್ತ್ರನಾ ಮಾಡೋಣ ಬಾರಮ್ಮಾ 
ನಾಚಿಕೆಯಾ ಹೂವಾಗಿ ಅರಳುತಿರೋ ಸೀತೆಗೆ 
ನಾಚಿಕೆಯಾ ಹೂವಾಗಿ ಅರಳುತಿರೋ ಸೀತೆಗೆ 
ಮೈತೊಳೆಯೋ ಶಾಸ್ತ್ರನಾ ಮಾಡೋಣ ಬಾರಮ್ಮಾ 
ಮೈತೊಳೆಯೋ ಶಾಸ್ತ್ರನಾ ಮಾಡೋಣ ಬಾರವ್ವಾ  

ಮೆಟ್ಟಿದ ಮನೆಗೆ ಶುಭ ಫಲ ತರುವ ಮಲ್ಲಿಗೆ ಪಾದಕೆ ಅರಿಷಿಣದಂತೇ 
ನಗುವಿನ ಬೆಳಕಲಿ ಬಾಳನು ಬೆಳಗೋ ಕೆನ್ನೆಗೂ ವಸಿ ಚಂದನವಂತೆ 
ನಗುವಿನ ಬೆಳಕಲಿ ಬಾಳನು ಬೆಳಗೋ ಕೆನ್ನೆಗೂ ವಸಿ ಚಂದನವಂತೆ 
ಮೈತೊಳೆಯೋ ಶಾಸ್ತ್ರನಾ ಮಾಡೋಣ ಬಾರಮ್ಮಾ 
ಮೈತೊಳೆಯೋ ಶಾಸ್ತ್ರನಾ ಮಾಡೋಣ ಬಾರವ್ವಾ  
ಮೈತೊಳೆಯೋ ಶಾಸ್ತ್ರನಾ ಮಾಡೋಣ ಬಾರಮ್ಮಾ 
ಮೈತೊಳೆಯೋ ಶಾಸ್ತ್ರನಾ ಮಾಡೋಣ ಬಾರವ್ವಾ  
-------------------------------------------------------------------------------------------------------

ಹಬ್ಬ (೧೯೯೯) - ಚನ್ನಪ್ಪ ಚನ್ನಗೌಡ 
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ರಾಜೇಶ, ಚಿತ್ರಾ, ರಮೇಶಚಂದ್ರ,  ವಿಷ್ಣು 

ಹೆಣ್ಣು : ಚೆನ್ನಪ್ಪ ಚನ್ನಗೌಡ 
ಗಂಡು : ಚನ್ನಮ್ಮ ಚನ್ನಗೌಡ 
ಹೆಣ್ಣು : ಚೆನ್ನಾಗಿದೆಯಾ ನಮ್ ಶಾಸ್ತ್ರ 
ಗಂಡು : ತೋರಿಸಬೇಕ ನಮ್ ಶಾಸ್ತ್ರ 
ಹೆಣ್ಣು : ಮೀಸೆ ತಿರುವಿದರೇ ಇಲ್ಲಿ ಹೆದರೋರ್ಯಾರಿಲ್ಲ 
ಗಂಡು : ಚಳ್ಳೆ ಹಣ್ಣು ತಿನ್ನಿಸದೆ ಹೆಣ್ಣ ಕರ್ಕೊಂಡು ಹೋಗಲ್ಲ 
           ಬರ್ತಾವರೇ ಬರ್ತಾವರೇ ಭಾಮೆಯರು ಬರ್ತಾವ್ರೇ 
           ಕಳಸದ ಕೊಡಗಳ ತರ್ತಾವ್ರೇ ತರ್ತಾವರೇ ತತ್ತರ ರಧಿತತಾ   
           ಕುಲಕ ತಾವ್ರೆ ಬಳುಕುತ್ವಾರೇ   ಮಿಂಚ್ತಾವ್ರೇ ಮಿನುಗುತ್ತಾರೆ 
           ಮದುವೆ ಮನೆಯಲ್ಲಿ ಭಾರಿ ಮೆರಿತ್ವಾರೇ ತತ್ತಾ ಚಾಪೆ ತತ್ತಾ 
ಗಂಡು : ಚನ್ನಮ್ಮ ತಮಗೆ ಕಾಫೀ ತರಲೇ 
ಹೆಣ್ಣು : ಚನ್ನಮ್ಮ ಬ್ಯಾಡ ಕುಡುಕೊಂಡು ಬಂದ್ವಿ 
ಗಂಡು : ತಪ್ಪಿದ್ರೆ ಕ್ಷಮಿಸಬೇಕು ತಾವು 
ಹೆಣ್ಣು : ಉಪ್ಪಿರುವ ಕಾಫಿನ್ ಕುಡಿಯೆವು ನಾವು 
ಎಲ್ಲರು : ನಿಮ್ದೇನು ನಾಗಾಸ್ತ್ರಾ ನಂದೇನೋ ಬ್ರಹ್ಮಸ್ತ್ರಾ 
            ಹೇಗಿದೆ ಶಾಸ್ತ್ರರೀ.. ಮುಂದೇನು ಶಾಸ್ತ್ರ 

ಹೆಣ್ಣು : ಒಗಟಿನ ಶಾಸ್ತ್ರಕೆ ಬರುವಿರಾ 
ಗಂಡು : ಸೋತೋರು ಉಪವಾಸ ಇರುವಿರಾ 
ಹೆಣ್ಣು : ಮುಕೆತ್ತೆತ್ತ ಮುಖದಕಟಾ ಕೊಟ್ಟು ಕೆಟ್ಟ  ತೊಡದೆ ಕೆಟ್ಟ 
          ಒಂದು ಎರಡೂ ಮೂರೂ ನಾಕೂ ರಾಜರ್ಯಾರು ಹೇಳಬೇಕು 
ಗಂಡು : ಭಸ್ಮಾಸುರ ಲಂಕೇಶ್ವರ ದುರ್ಯೋಧನ ಬನ್ನಿ ಚಕ್ರೇಶ್ವರ 
           ಗೆದ್ದೋರು ತಿನ್ನಬೇಕು ಸೋತೋರು ನೋಡಬೇಕು 
           ಚನ್ನಪ್ಪ ಚನ್ನಗೌಡ್ತಿ  
ಹೆಣ್ಣು : ಚನ್ನಪ್ಪ ಚನ್ನಗೌಡ 
ಗಂಡು : ಚೆನ್ನಾಗಿದೆಯಾ ನಮ್ ಶಾಸ್ತ್ರ 
ಹೆಣ್ಣು  : ತಡೆಯಿರಿ ಬಿಡ್ತೀನ ನಮ್ ಶಾಸ್ತ್ರ 

ಗಂಡು : ಹಪ್ಪಳ ಸಿಗದಿದ್ರೂ ಜಂಭದ ಸಪ್ಪಳ ಹೋಗಿಲ್ಲ 
ಹೆಣ್ಣು : ಹೆಣ್ಣು ಕರ್ಕೊಂಡ ಹೋಗೋಕೆ ಇನ್ನೂ ಸಮಯ ಇದೆಯಲ್ಲ 
          ಬರ್ತಾವ್ರೆ ಶೂರರು ಬರ್ತಾವ್ರೆ ಮಡಿಮಡಿಯಲು ಒಳಗಡೆ ಹೋಗ್ತಾವ್ರೇ ಕಟ್ಟಿ ಹಗ್ಗ ಕಟ್ಟಿ 
          ಹಾಡ್ತಾವ್ರೇ ಹಾಡ್ತಾವ್ರೇ ಸ್ನಾನವೇ ಮಾಡ್ತಾವ್ರೇ ಎಳೆದೆ ಉಸಿರ ಕಟ್ಟಿ    
          ಚನ್ನಪ್ಪ ಸೋಪು ಸೀಗೆ ಬೇಕಾ 
ಗಂಡು : ಯಾಕ್ ಬೆನ್ನು ತಿಕ್ಕೋ ಶೋಕಾ 
ಹೆಣ್ಣು : ಹೂಂ ಅಂದ್ರೇ ಒಳಗೆ ಬರ್ತೀವ ನಾವೇ 
ಗಂಡು : ಬೇಕಂದ್ರೆ ಹೊರಗೆ ಬರ್ತಿನ ನಾವೇ 
ಹೆಣ್ಣು : ನಿಮ್ಮದೇನೂ ಸರ್ಪಾಸ್ತ್ರ 
ಗಂಡು : ನಂದೇನೋ ವರುಣಾಸ್ತ್ರ 
ಹೆಣ್ಣು : ಹೇಗಿದೆ ನಮ್ ಶಾಸ್ತ್ರ 
ಗಂಡು : ಮುಂದೇನು ನಿಮ್ಮ ಶಾಸ್ತ್ರ 
ಹೆಣ್ಣು : ಸೋಬಾನೆ ಎನ್ನಿರೋ ಜಲಕನ್ಯೆಗೆ   
ಗಂಡು : ಸೋಬಾನೆ ಓಕುಳಿಯ ವರ ವೀರಗೇ  
ಹೆಣ್ಣು : ಸೋಬಾನೆ ಎನ್ನಿರೋ ಜಲಕನ್ಯೆಗೆ   
ಗಂಡು : ಸೋಬಾನೆ ಓಕುಳಿಯ ವರ ವೀರಗೇ  
ಹೆಣ್ಣು : ಹೆಣ್ಣಿಗೆ ಮಾಡಿ ಬಟ್ಟೆ ಉಡಿಸಿರಿ 
ಗಂಡು : ನೆನೆದಿರುವ ಬಟ್ಟೆಯಲ್ಲೇ ಕಳಿಸಿರಿ                
ಹೆಣ್ಣು : ಹ್ಹಾಂ ಅಯ್ಯಯ್ಯೋ ಅನ್ಯಾಯ ಛೇ ಛೇ ಛೇ ಅಕ್ರಮ 
          ಮೊದಲಿರುಳೇ ಹೀಗೆ ನಡೆದರೆ ಹೇಗೆ 
ಗಂಡು : ಕಡಲಲಿ ಬೀಳೋದು ಮುತ್ತುಗಳ ತರೋದು 
           ಹೇಗೋ ಹಾಗೆ ಇದೂನು ಹಾಗೆ 
ಹೆಣ್ಣು : ಚನ್ನಪ್ಪ ಚನ್ನಗೌಡ 
ಗಂಡು : ಚನ್ನಪ್ಪ ಚನ್ನಗೌಡ್ತಿ 
ಹೆಣ್ಣು : ಚೆನ್ನಾಗಿದೆಯಾ ನಮ್ ಶಾಸ್ತ್ರ 
ಗಂಡು : ಚೆನ್ನಾಗಿದೆಯಾ ನಮ್ ಶಾಸ್ತ್ರ  
ಹೆಣ್ಣು  : ಸುಮ್ನೇ ಕೂತಿದ್ರೆ ನಿಮಗೆ ಚಂದ್ರಾ ಕಾಯೋಲ್ಲ 
           ಮೊದಲನೇ ರಾತ್ರೀಲಿ ನಿಮಗೆ ದೀಪವೇ ಬೇಕಿಲ್ಲ 
ಗಂಡು : ಐ ಲವ್ ಯೂ ನನ್ನಾ ಮುದ್ದಿನ ರಾಣಿ 
ಹೆಣ್ಣು :  ಐ ಲವ್ ಯೂ ನನ್ನಾ ಮುದ್ದಿನ ರಾಜ 
ಎಲ್ಲರು : ಈ ರಾತ್ರಿ ಹಿಗ್ಗುತಿರಲಿ ಈ ಮೈತ್ರಿ ಸುಗ್ಗಿ ತರಲಿ 
            ಹೇಗಿದೆ ನಮ್ಮ ಶಾಸ್ತ್ರ ಮುಗಿದೋಯ್ತು ನಿಮ್ಮ ಅಸ್ತ್ರ 
            ಮುಗಿದೋಯ್ತು ನಿಮ್ಮ ಅಸ್ತ್ರ    
--------------------------------------------------------------------------------------------------------
ಹಬ್ಬ (೧೯೯೯) - ಧೀಮ್ ತಕಿಟ ತಕಿಟ 
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ,  ಚಿತ್ರಾ 

ಗಂಡು : ಓಂ ಪ್ರಿತಿರ್ ಬ್ರಹ್ಮ ಪ್ರೀತಿರ್ ವಿಷ್ಣುಹ ಪ್ರೀತಿರ್ ದೇವೋ ಮಹೇಶ್ವರಃ 
          ಪ್ರೀತಿರ್ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಪ್ರೀತಿಯೇ ನಮಃ 
          ಧೀಮ್ ತಕಿಟ ತಕಿಟ  ಧೀಮ್ ತಕಿಟ 
          ಧೀಮ್ ತಕಿಟ ತಕಿಟ  ಧೀಮ್ ತಕಿಟ 
          ಪ್ರೇಮಮಯ ತಕಿಟ  ಧೀಮ್ ತಕಿಟ     
          ರಾಗಮಯ ತಕಿಟ  ಧೀಮ್ ತಕಿಟ     
          ಸ್ನೇಹಮಯ ತಕಿಟ  ಧೀಮ್ ತಕಿಟ     
          ಮೋಹಮಯ ತಕಿಟ  ಧೀಮ್ ತಕಿಟ     
          ಹೃದಯ ವಿತರಣ ಪ್ರೇಮ ಪ್ರಕರಣ     
          ಲಲಿತ ಲಲಿತ ಭರಿತ ನಾಟ್ಯ ನಯನ ನಯನ ಮಿಲನ ಕಥನ 
          ಧೀಮ್ ತಕಿಟ ತಕಿಟ  ಧೀಮ್ ತಕಿಟ 
          ಧೀಮ್ ತಕಿಟ ತಕಿಟ  ಧೀಮ್ ತಕಿಟ 

ಗಂಡು : ಪ್ರಿಯನ ಎದೆಯಿಂದ ಮೇಘದ ಬಳಿಗೆ 
ಹೆಣ್ಣು : ಮೇಘದ ಓಲೆ ಪಾರಿವಾಳದ ಬಳಿಗೆ 
ಗಂಡು : ಒಲೆಯ ಸಂಸ್ಕರಿಸಿ ಓದಿತು ಹಂಸ 
ಹೆಣ್ಣು : ಪ್ರಿಯೆಗೆ ಕುಡಿಸಿತು ಬರಿ ಹಾಲಿನ ಅಂಶ 
ಗಂಡು : ನೈದಿಲೆ ನೈದಿಲೆ ಎಚ್ಚರವಿರು ನೀ ಅರಳುತಿರು 
ಹೆಣ್ಣು : ಶಶಿಯ ಮೊಗದಿ ನಿಟ್ಟುಸಿರ ಕೊಡು ನಿನ್ನುಸಿರು 
ಗಂಡು : ದೂರವಿದ್ದರು 
ಹೆಣ್ಣು : ಬೆರೆಯ ಬಲ್ಲರು 
ಗಂಡು : ಹೂವು ಹುಣ್ಣಿಮೆ ಮಿಲನ ಮಹಿಮೆ ಪಾವನ ಮಾಡಿ ಹಾಡೋ ಕಥನ 
          ಧೀಮ್ ತಕಿಟ ತಕಿಟ  ಧೀಮ್ ತಕಿಟ 
          ಧೀಮ್ ತಕಿಟ ತಕಿಟ  ಧೀಮ್ ತಕಿಟ 

ಗಂಡು : ನೆರೆಮನೆಯ ತೋಟದೊಳಗಿನ ಹೂವ 
ಹೆಣ್ಣು : ಕಂಡರೆ ಚಂದಮಾಮ ಬಿಡುವನು ಜೀವ 
ಗಂಡು : ಅವನ ಹೂವ ತರಲು ತಾರೆಗಳೆಲ್ಲ 
ಹೆಣ್ಣು : ಪ್ರೀತಿಯ ಸಸ್ಯವಾಗಿ ಕಾದಿಹರಲ್ಲ 
ಗಂಡು : ಹೃದಯ ಕದ್ದರೆ ತಪ್ಪಲ್ಲ ಯಾವ ಶಿಕ್ಷೆ ಇಲ್ಲ 
ಹೆಣ್ಣು : ಕಳವೇ ಮಾಡದೆ ಪ್ರೀತಿ ಇಲ್ಲ ಕದ್ದು ಅಳುಕಿಲ್ಲ 
ಇಬ್ಬರು : ನಾಟ್ಯ ನವಮಿಗೆ ವಿಸ್ಮಯ ದಶಮಿಗೆ ಅಭಯ ಕೊಡುವ ಹೃದಯ ವಿಜಯ 
             ಮಹಾ ಪ್ರೇಮ ಮಿಲನ ಕಥನ 
ಗಂಡು : ಧೀಮ್ ತಕಿಟ ತಕಿಟ  ವಿರಹಮಯ 
          ಧೀಮ್ ತಕಿಟ ತಕಿಟ  ಸ್ವಪ್ನಮಯ 
 ಹೆಣ್ಣು : ತಾಳಮೇಳಗಳಿದ್ದು 
           ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ ಕೇಳೇನೋ 
          ಹರಿಹರಿ ತಾಳೆನೋ ಹರಿಹರಿ ಪ್ರೇಮವಿಲ್ಲದ ಗಾನ 
ಗಂಡು : ಇರುಳಿಗೆ ದೀಪ ನಿನ್ನ ಸುಂದರ ರೂಪ ಪ್ರೀತಿಯ ಕಾವಲಲಿ ಕಾಲಕ್ಷೇಪ 
            ಅಡಿಗೆ ಮನೆ ಒಳಗೆ ಅಜ್ಞಾತವಾಸ ಪ್ರೀತಿಯ ಸಜ್ಜಿಗೆಯ ಸೃಷ್ಟಿಸೋ ಕೆಲಸ 
           ಬಹಳ ಹುಷಾರ ಹೃದಯಗಳೇ ಓ.. ಹೃದಯಗಳೇ ಎಚ್ಚರ ಎಚ್ಚರ 
           ಕನಸುಗಳೇ ಓ ಮನಸುಗಳೇ 
ಇಬ್ಬರು : ಭಾವ ಪ್ರಸರಣ ಬಾಳ ಪ್ರಕರಣ ಮಿಡಿತ ಮಿಡಿತ ಹೃದಯ ಮಿಡಿತ 
             ಬಾಳ ಭಾವ ಮಿಲನ ಕಥನ 
            ಧೀಮ್ ತಕಿಟ ತಕಿಟ  ಹಾಲು ತತ್ತ ಧಿಕಿಟ್ ಬೆಲ್ಲ ತತ್ತ 
            ಧೂಮ್ಕ್ ತತ್ತ ದ್ರಾಕ್ಷಿ ಗೋಡಂಬಿ ತತ್ತ ರುಚಿಯ ನೋಡಿ ಧಿಕಿತ ತಾರೆನ್ನುತಾ 
-------------------------------------------------------------------------------------------------------

ಹಬ್ಬ (೧೯೯೯) - ಮಾಮ್ ಮಾಮ್ ಮಸ್ತಿ 
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ, ನಂದಿತಾ  

ಹೆಣ್ಣು : ಮಾಮ ಮಾಮ ಮಸ್ತಿ ಮಾಡು ಜಂಗಿ ಕುಸ್ತಿ 
         ಚಂದಮಾಮ ಮಾಮ ಮಸ್ತಿ ಮಾಡು ಜಂಗಿ ಕುಸ್ತಿ 
         ಒಂದು ಪಟ್ಟಾಕ್ತಿನಿ ಹೇಗಿದೆ ನೋಡ್ತೀಯಾ 
        ಮಣ್ಣು ಮುಕ್ಕಿಸ್ತೀನಿ ಸವಾಲು ಮಾಡ್ತೀಯಾ 
ಗಂಡು : ತಿನ್ ತಿನ್ ತಿನ್ ತಿನ್ ಲಡ್ಡು   ತಿನ್ ತಿನ್ ತಿನ್ ತಿನ್ ಲಡ್ಡು   
            ತಿನ್ ತಿನ್ ತಿನ್ ತಿನ್ ಲಡ್ಡು   ತಿನ್ ತಿನ್ ತಿನ್ ತಿನ್ ಲಡ್ಡು  
           ತಿನ್ ಲಡ್ಡು  ತಿನ್ ಲಡ್ಡು  ತಿನ್ ಲಡ್ಡು  ತಿಂದು ಹೊಡೆಯೇ ಸಡ್ಡು 
ಹೆಣ್ಣು : ಮಾಮ ಮಾಮ ಮಸ್ತಿ ಮಾಡು ಜಂಗಿ ಕುಸ್ತಿ 
         ಚಂದಮಾಮ ಮಾಮ ಮಸ್ತಿ ಮಾಡು ಜಂಗಿ ಕುಸ್ತಿ 

ಹೆಣ್ಣು : ಬಾದಾಮಿ ಬೀಜ ಇದು ಹಾಡಿನಾ ಹಾಲಿಗೆ ಸುರಿದು ಏಲಕ್ಕಿ ಕೇಸರಿ ಬೆರೆಸಿದೆ ಕುಡಿ ಮಾಮ 
            ರಸಬಾಳೆ ಹಣ್ಣು ನುಂಗಿ ಗುಟುಕ ತಾಂಬೂಲ ಮೆದ್ದು ತೇಗಿ ತೊಡೆ ತಟ್ಟಿ ಇಳಿ ಮಾಮ 
ಗಂಡು : ಮೂತಿಯ ತುಂಬ ಮೀಸೆ ಇಟ್ಟುಕೊಂಡು ತೀಡಿಕೊಂಡು ಬಾಯಿ ಬಿಟ್ರೆ ಆಗೋದಿಲ್ಲ 
           ಕೋಳಿ ನಮಗೆ ಕಾಯೋದಿಲ್ಲ 
ಹೆಣ್ಣು : ಮಾಮ ಮಾಮ ಮಸ್ತಿ ಮಾಡು ಜಂಗಿ ಕುಸ್ತಿ 
         ಚಂದಮಾಮ ಮಾಮ ಮಸ್ತಿ ಮಾಡು ಜಂಗಿ ಕುಸ್ತಿ 
         ಒಂದು ಪಟ್ಟಾಕ್ತಿನಿ ಹೇಗಿದೆ ನೋಡ್ತೀಯಾ 
        ಮಣ್ಣು ಮುಕ್ಕಿಸ್ತೀನಿ ಸವಾಲು ಮಾಡ್ತೀಯಾ 
ಗಂಡು : ತಿನ್ ತಿನ್ ತಿನ್ ತಿನ್ ಲಡ್ಡು   ತಿನ್ ತಿನ್ ತಿನ್ ತಿನ್ ಲಡ್ಡು   
            ತಿನ್ ತಿನ್ ತಿನ್ ತಿನ್ ಲಡ್ಡು   ತಿನ್ ತಿನ್ ತಿನ್ ತಿನ್ ಲಡ್ಡು  
           ತಿನ್ ಲಡ್ಡು  ತಿನ್ ಲಡ್ಡು  ತಿನ್ ಲಡ್ಡು  ತಿಂದು ಹೊಡೆಯೇ ಸಡ್ಡು 
ಹೆಣ್ಣು : ಮಾಮ ಮಾಮ ಮಸ್ತಿ ಮಾಡು ಜಂಗಿ ಕುಸ್ತಿ 
         ಚಂದಮಾಮ ಮಾಮ ಮಸ್ತಿ ಮಾಡು ಜಂಗಿ ಕುಸ್ತಿ 

ಹೆಣ್ಣು : ಹೋಗಿ ಬಂದು ಹೋಗಿ ಮೂರೂ ಹೊತ್ತು ಕೂತು ತಿಂದು 
          ಖಂಡ ಕೊಬ್ಬು ಹೊಡ್ಕಂಡ ಮೈ ನಿಂದು ಹಯ್ಯೋ ... 
         ಶಿವ ನೀಡಿದ ಊಟ ಮಾಡಿ ಕಾಯಕದ ಸಾಮು ಮಾಡಿ 
         ಛಲ ಇದ್ರೆ ಬಲ ಅನ್ನೋ ಮೈ ನಂದೂ .. 
ಗಂಡು : ದಮ್ ಇದ್ರೆ ಬಿಡಿಸಿಕೊಳ್ಳೋ ಅಪ್ಪಿಕೊಂಡು ಹಾಡುತೀನಿ 
           ಆಗದಿದ್ರೆ ಕ್ಷಮಿಸುತೀನಿ ಜೀವದಾನ ಮಾಡುತೀನೀ 
ಹೆಣ್ಣು : ಮಾಮ ಮಾಮ ಮಸ್ತಿ ಮಾಡು ಜಂಗಿ ಕುಸ್ತಿ 
         ಚಂದಮಾಮ ಮಾಮ ಮಸ್ತಿ ಮಾಡು ಜಂಗಿ ಕುಸ್ತಿ 
         ಒಂದು ಪಟ್ಟಾಕ್ತಿನಿ ಹೇಗಿದೆ ನೋಡ್ತೀಯಾ 
        ಮಣ್ಣು ಮುಕ್ಕಿಸ್ತೀನಿ ಸವಾಲು ಮಾಡ್ತೀಯಾ 
ಗಂಡು : ತಿನ್ ತಿನ್ ತಿನ್ ತಿನ್ ಲಡ್ಡು   ತಿನ್ ತಿನ್ ತಿನ್ ತಿನ್ ಲಡ್ಡು   
            ತಿನ್ ತಿನ್ ತಿನ್ ತಿನ್ ಲಡ್ಡು   ತಿನ್ ತಿನ್ ತಿನ್ ತಿನ್ ಲಡ್ಡು  
           ತಿನ್ ಲಡ್ಡು  ತಿನ್ ಲಡ್ಡು  ತಿನ್ ಲಡ್ಡು  ತಿಂದು ಹೊಡೆಯೇ ಸಡ್ಡು 
ಹೆಣ್ಣು : ಮಾಮ ಮಾಮ ಮಸ್ತಿ ಮಾಡು ಜಂಗಿ ಕುಸ್ತಿ 
         ಚಂದಮಾಮ ಮಾಮ ಮಸ್ತಿ ಮಾಡು ಜಂಗಿ ಕುಸ್ತಿ 
--------------------------------------------------------------------------------------------------------

ಹಬ್ಬ (೧೯೯೯) - ಹಬ್ಬ ಹಬ್ಬ 
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ರಾಜೇಶ, ನಂದಿತಾ, ರಮೇಶಚಂದ್ರ 

ಹೆಣ್ಣು : ಹಬ್ಬ ಹಬ್ಬ ಹಬ್ಬ ಹಬ್ಬ 
ಗಂಡು : ಇದು ಕರುನಾಡ ಮನೆಮನೆಯ ಹಬ್ಬ 
ಎಲ್ಲರು :  ಹಬ್ಬ ಹಬ್ಬ ಹಬ್ಬ ಹಬ್ಬ ಇದು ಚಾಮುಂಡಿ ತಾಯಿ ತವರ ಹಬ್ಬ 

ಎಲ್ಲರು : ಓ.. ವಿಜಯದ ಹಬ್ಬ ಆಯುಧ ಪೂಜಾ ಹಬ್ಬ 
            ಹಬ್ಬ ಇದು ಉಸಿರ ತನ್ನುಸಿರ ತೆತ್ತ ರಸರ ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ  
ಗಂಡು : ಇದು ಮೈಸೂರ ಸೀಮೆ ರಾಜ ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ 
ಹೆಣ್ಣು : ಇದು ಕುಣಿದಾಡೊ ಮಕ್ಕಳ ಬೊಂಬೆ ಹಬ್ಬ  
ಎಲ್ಲರು : ಓ.. ವಿಜಯದ ಹಬ್ಬ ಆಯುಧ ಪೂಜಾ ಹಬ್ಬ 
            ಹಬ್ಬ ಇದು ಮನೆಗೆ ಮನೆಮನೆಗೆ ಕರೆಯೋ ಹಬ್ಬ 
           ಹಬ್ಬ ಹಬ್ಬ ಹಬ್ಬ ಹಬ್ಬ ಇದು ಕರುನಾಡ ಮನೆಮನೆಯ ಹಬ್ಬ 
           ಹಬ್ಬ ಹಬ್ಬ ಹಬ್ಬ ಹಬ್ಬ ಇದು ಚಾಮುಂಡಿ ತಾಯಿ ತವರ ಹಬ್ಬ 

ಹೆಣ್ಣು : ಬೀದಿಗೆಲ್ಲ ಮಹಾರಾಣಿ ವಾಣಿ ವರವೀಣಾ ಪಾಣಿ 
          ಹಸಿ ಮೇಲೆ ಹೂಮಾಲೆ ತೊಟ್ಟು ನಲಿಯೋ ಸಂಭ್ರಮ 
ಗಂಡು : ದುಷ್ಟ ದಮನೆ ಶ್ರೀ ದುರ್ಗಾ ಶಾಂತಿ ಮೂರ್ತಿ ತಾನಾಗಿ 
            ನಗುವಿನಾ ಒಡವೆನಾ ತೊಟ್ಟು ನಲಿಯೋ ಸಂಭ್ರಮ ರಂಗೋಲಿ ಚಿತ್ತಾರ 
ಹೆಣ್ಣು : ಮತಾಪು    
ಗಂಡು  : ವಿಹಾರ 
ಎಲ್ಲರು : ಓ.. ಬಳೆಗಳ ಹಬ್ಬ ಹೆಣ್ಣು ಮಕ್ಕಳ ಹಬ್ಬ 
            ಹಬ್ಬ ಇದು ಮನೆಗೆ ಮನೆಮನೆಗೆ ಕರೆಯೋ ಹಬ್ಬ 
           ಹಬ್ಬ ಹಬ್ಬ ಹಬ್ಬ ಹಬ್ಬ ಇದು ಕರುನಾಡ ಮನೆಮನೆಯ ಹಬ್ಬ 
           ಹಬ್ಬ ಹಬ್ಬ ಹಬ್ಬ ಹಬ್ಬ ಇದು ಚಾಮುಂಡಿ ತಾಯಿ ತವರ ಹಬ್ಬ 

ಗಂಡು : ಹೊನ್ನ ಮಳೆಯ ಸುರಿಸಿದ ನಮ್ಮ ವಿಜಯ ನಗರದ ವೈಭವ ನೆನೆಯುವ ಕನ್ನಡಿಗರ ಸಂಭ್ರಮ 
            ತಲೆಗೂ ಖಡ್ಗಕ್ಕೂ ಮೈತ್ರಿ ತಂದು ಕೊಡೊ ನವರಾತ್ರಿ 
            ಇತಿಹಾಸ ಮರುವೇಷ ತೊಟ್ಟು ನಲಿಯೋ ಸಂಭ್ರಮ  
ಹೆಣ್ಣು : ಕಠಾರಿ 
ಗಂಡು : ಪೆಠಾರಿ ನಗಾರಿ 
ಹೆಣ್ಣು : ಜಂಬೂ ಸವಾರಿ 
ಎಲ್ಲರು : ಓ.. ಜನಗಳ ಹಬ್ಬ ಹತ್ತು ದಿನಗಳ ಹಬ್ಬ 
            ಹಬ್ಬ ಇಂದು ದಾನ ಅಭಿದಾನ ನೀಡೋ ಹಬ್ಬಗಳ ಹಬ್ಬ 
           ಹಬ್ಬ ಹಬ್ಬ ಹಬ್ಬ ಹಬ್ಬ ಇದು ಕರುನಾಡ ಮನೆಮನೆಯ ಹಬ್ಬ 
           ಹಬ್ಬ ಹಬ್ಬ ಹಬ್ಬ ಹಬ್ಬ ಇದು ಚಾಮುಂಡಿ ತಾಯಿ ತವರ ಹಬ್ಬ 
--------------------------------------------------------------------------------------------------------

ಹಬ್ಬ (೧೯೯೯) - ಕೋಟಿಕೋಟಿ ದೇವರುಗಳು 
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ನಂದಿತಾ, ಕೋರಸ್  

ಕೋಟಿಕೋಟಿ ದೇವರಗಳು ನಿನಗೆ ನೆರಳಮ್ಮ ಹೋಗಿ ಬಾರಮ್ಮಾ 
ಕೋಟಿಕೋಟಿ ದೇವರಗಳು ನಿನಗೆ ನೆರಳಮ್ಮ ಹೋಗಿ ಬಾರಮ್ಮಾ 
ಮೆಟ್ಟಿದೊಸಿಲ ತೋರಣವಾಗು ಹುಟ್ಟಿದೊಸಿಲ ಕೀರ್ತಿಯಾಗು 
ಒಂದೇ ಮಾತು ಒಂದೇ ಮನಸು 
ಸತಿಗೆ ಪತಿಯು ಪತಿಗೆ ಸತಿಯು 
ಸತಿಗೆ ಪತಿಯು ಪತಿಗೆ ಸತಿಯು 
ಬರುವ ಮುಂದಿನ ಸುಗ್ಗಿಯೊಳಗೆ ಬಾರಮ್ಮಾ ನಿನ್ನ ಒಡಲ ತುಂಬಿ 
ಕೋಟಿಕೋಟಿ ದೇವರಗಳು ನಿನಗೆ ನೆರಳಮ್ಮ ಹೋಗಿ ಬಾರಮ್ಮಾ 
--------------------------------------------------------------------------------------------------------

ಹಬ್ಬ (೧೯೯೯) - ಒಂದೇ ಉಸಿರಂತೇ ಇನ್ನೂ ನಾನು ನೀನೂ 
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ರಾಜೇಶ, ಚಿತ್ರಾ 

ಈ ಗೀತೆಯನ್ನು ಸ್ನೇಹ ಲೋಕ ಚಿತ್ರದಲ್ಲಿ ಅಳವಡಿಸಲಾಗಿದೆ.. 
ಹಾಗೆಯೇ ಈ ಹಾಡಿನ ಸಾಹಿತ್ಯ ಅಲ್ಲಿ ಲಭ್ಯ ...  
--------------------------------------------------------------------------------------------------------

No comments:

Post a Comment