1499. ಹೃದಯ ಹೃದಯ (೧೯೯೯)



ಹೃದಯ ಹೃದಯ ಚಲನಚಿತ್ರದ ಹಾಡುಗಳು 
  1. ಓ ಪ್ರೇಮದ ಗಂಗೆಯೇ ಇಳಿದು ಬಾ
  2. ಮಿತ್ರ್ತ ಮಿತ್ರ 
  3. ವೆಂಕಟೇಶ ವೆಂಕಟೇಶ 
  4. ಹೋಗಿ ಬಾ ಹೋಗಿ ಬಾ 
  5. ಇವಳೇ ನನ್ನ ರಾಣಿ 
  6. ಹೇ ಹೃದಯ ಅವಳ ಕಣ್ಣಿನ ಜೊತೆ ಮಾತಾಡಿದೆಯಾ 
ಹೃದಯ ಹೃದಯ (೧೯೯೯) - ಓ ಪ್ರೇಮದ ಗಂಗೆಯೇ ಇಳಿದು ಬಾ
ಸಂಗೀತ, ಸಾಹಿತ್ಯ : ಹಂಸಲೇಖ, ಗಾಯನ : ಡಾ||ರಾಜಕುಮಾರ, ಚಿತ್ರಾ  
  
ಗಂಡು : ಓ ಪ್ರೇಮದ ಗಂಗೆಯೇ ಇಳಿದು ಬಾಇಳಿದು ಬಾ ಇಳಿದು ಬಾ
ಹೆಣ್ಣು : ಈ ಹೃದಯದಾ ಧರಣಿಯ ತಣಿಸು ಬಾ ತಣಿಸು ಬಾ ತಣಿಸು ಬಾ---
ಗಂಡು : ಈ ಕಂಗಳ            ಹೆಣ್ಣು : ಈ ಕಂಗಳ
ಗಂಡು : ಕಾವೇರಿಯಾ        ಹೆಣ್ಣು :  ಕಾವೇರಿಯಾ
ಗಂಡು : ಕನಸುಗಳ ಅಲೆಗಳ ಮೇಲೆ ಕುಣಿಯುತ ಬಳುಕುತ ಸರಿಗಮ 
           ಗುನುಗುತಾ ಬಾ ಒಲಿದು ಬಾ ಒಲಿದು ಬಾ
          ಓ ಪ್ರೇಮದ ಗಂಗೆಯೇ ಇಳಿದು ಬಾ ಇಳಿದು ಬಾ ಇಳಿದು ಬಾ
ಹೆಣ್ಣು : ಈ ಹೃದಯದಾ ಧರಣಿಯ ತಣಿಸು ಬಾ ತಣಿಸು ಬಾ ತಣಿಸು ಬಾ---

ಗಂಡು : ಬೆಳಕು ಹರಿದಂತೆ ಹೂವು ಬಿರಿದಂತೆ ಮುಗಿಲು ತೆರೆದಂತೆ 
           ಮಿಂಚು ನಗುವಂತೆ ಚಂದ್ರ ಬೆಳೆದಂತೆ ಕಡಲು ಜಿಗಿದಂತೆ 
           ಬಾ ಒಲಿದು ಬಾ ಆ ಚೆಲುವ ತಾ 
ಹೆಣ್ಣು : ನೋಡೇ ಮೊಗವಿಲ್ಲ ಸೋಕೇ ತನುವಿಲ್ಲ ಆದರೇನದರ ಚಿಂತೆ ಜಗಕ್ಕೆಲ್ಲ
         ನೀನು ಇರದಿರುವ ಕ್ಷಣವೇ ಇಲ್ಲಿಲ್ಲಾ  ಓ ಒಲವೇ ಬಾ...  ಆ ಸುಖವ ತಾ.... 
ಗಂಡು : ಮಾತಾಗಿ ಬಾ          ಹೆಣ್ಣು : ಜೇನಾಗಿ ಬಾ
ಗಂಡು : ಗುರುವಾಗಿ ಬಾ        ಹೆಣ್ಣು : ನೆರಳಾಗಿ ಬಾ
ಗಂಡು : ಈ ಬಾಳಿನಾ ಹಾಡಾಗಿ ಬಾ
ಹೆಣ್ಣು : ಈ ಅಧರದಾ          ಗಂಡು : ಈ ಅಧರದಾ
ಹೆಣ್ಣು : ತುಂಗಾ ತೀರದ      ಗಂಡು : ತುಂಗಾ ತೀರದ
ಹೆಣ್ಣು : ಕನಸುಗಳ ಅಲೆಗಳ ಮೇಲೆ ತುಳುಕುತ ಬಳುಕುತಾ ಸರಿಗಮ 
          ಗುನುಗುತಾ ಬಾ...  ಒಲಿದು ಬಾ...  ಒಲಿದು ಬಾ
ಗಂಡು : ಓ ಪ್ರೇಮದ ಗಂಗೆಯೇ ಇಳಿದು ಬಾ ಇಳಿದು ಬಾ ಇಳಿದು ಬಾ
           ಈ ಹೃದಯದಾ ಧರಣಿಯ ತಣಿಸು ಬಾ ತಣಿಸು ಬಾ ತಣಿಸು ಬಾ

ಗಂಡು : ಹಗಲು ನಿನ್ನಿಂದ ಇರುಳು ನಿನ್ನಿಂದ ಸಕಲ ಲೋಕಗಳೆ ನಿನ್ನ ಒಳಗಿಂದ
           ಸುಖದ ಮಂದಾರ ಜಗದ ಶೃಂಗಾರ ಓ ಒಲವೇ ಬಾ ಆ ಜೇನ ತಾ 
ಹೆಣ್ಣು : ನಿನ್ನ ಚೆಲುವೇನು ನಿನ್ನ ಸೊಗಸೇನು ಜೇನುಗೂಡಂತೆ ತೂಗೋ ಧರೆ ನೀನು
          ನನಗೆ ನೀ                ಗಂಡು : ಜೀವಾ
ಹೆಣ್ಣು : ನಿನಗೆ ನಾ               ಗಂಡು : ಜೀವಾ
ಹೆಣ್ಣು : ಓ                          ಗಂಡು : ಧಿವ್ಯವೇ  
ಹೆಣ್ಣು : ಓ                         ಗಂಡು : ದೇವವೇ
ಹೆಣ್ಣು : ಹಸಿರಾಗಿ ಬಾ         ಗಂಡು : ಉಸಿರಾಗಿ ಬಾ
ಹೆಣ್ಣು : ಈ ಹೃದಯದಾ      ಗಂಡು : ಕಥೆಯಾಗಿ ಬಾ
ಹೆಣ್ಣು : ಈ ಜನುಮದ        ಗಂಡು : ಜೊತೆಯಾಗಿ ಬಾ
ಹೆಣ್ಣು : ಈ ಪ್ರೇಮದಾ       ಗಂಡು : ಈ ಪ್ರೇಮದಾ
ಹೆಣ್ಣು : ಮಹಾ ಜೋಗದ   
ಗಂಡು : ಮಹಾ ಯೋಗದ ಬಾವಗಳ ಬೋರ್ಗರೆತದಲಿ
            ತುಳುಕುತ ಕಲಕುತ ಬೆರೆಯುತ ಹರಿಯುತ ಬಾ 
           ಬೆಳೆದು ಬಾ...  ಉಳಿದು ಬಾ
          ಓ ಪ್ರೇಮದ ಗಂಗೆಯೇ ಇಳಿದು ಬಾ ಇಳಿದು ಬಾ ಇಳಿದು ಬಾ
ಹೆಣ್ಣು : ಈ ಹೃದಯದಾ ಧರಣಿಯ ತಣಿಸು ಬಾ ತಣಿಸು ಬಾ ತಣಿಸು ಬಾ
-----------------------------------------------------------------------------------------

ಹೃದಯ ಹೃದಯ (೧೯೯೯) - ಮಿತ್ರ್ತ ಮಿತ್ರ 
ಸಂಗೀತ, ಸಾಹಿತ್ಯ : ಹಂಸಲೇಖ, ಗಾಯನ : ಎಲ್.ಏನ್.ಶಾಸ್ತ್ರಿ 

ಗಂಡು : ಮಿತ್ರಾ ಮಿತ್ರಾ ಮಿತ್ರಾ ತೆಗೆದುಕೋ ಒಂದು ಪ್ರೇಮ ಪತ್ರ 
            ಎಸೆದರೇ ನೀನೀ ಪತ್ರ ಹುಡುಗಿ ಬರಬೇಕು ಹತ್ರ 
            ಒಳ್ಳೆ ಲೈನ್ಸ್ ತಲೆಗ್ ತುಂಬದ್ಳು 
           ಮಿತ್ರಾ ಮಿತ್ರಾ ಮಿತ್ರಾ ಪ್ರೀತಿ ಎವರೆಸ್ಟ್ ಎತ್ರ 
           ಎಸೆದರೆ ನೀನೀ ಪತ್ರ ಅಲ್ಲಿಂದ ಬರಬೇಕು ಉತ್ರ 
           ಹಲೋ ಶೇಕ್ಸಪಿಯರ್ ಕೊಡು ನಿನ್ ಪವರ್ 
           ವೇಷ್ಟಾಗದೇ ಇರ್ಲಿ ಇವನಾ ಲವ್ ಲೆಟರ್ 
           ಮಿತ್ರಾ ಮಿತ್ರಾ ಮಿತ್ರಾ ಹೋಗು ಹುಡುಗಿ ಹತ್ರ 
           ಓಪನ್ ಕ್ಲಾಸನಲ್ಲಿ ಮಿತ್ರ ನೋಡಿ ಪ್ರೇಮಪತ್ರ 
           ಓ.. ಪ್ರಿಯ ಹೃದಯ ಪ್ಲೀಸ್ ರೀಡ್ ದೀನ್ 
ಹೆಣ್ಣು : ಪಿತ್ತ ಏರ್ತಾ 
ಗಂಡು : ಹೂಂ ... ಹೂಂ ... ಹೂಂ ... ಗೋತ್ತಾಗಹೋಯ್ತಾ  
ಹೆಣ್ಣು : ಟೀಚರ್ಗ ಹೇಳ್ಳಾ 
ಗಂಡು : ಓದ್ಬಿಟ್ ಹೇಳೂ ಓ ಹೃದಯ ಪ್ಲೀಸ್ ರೀಡ್ ದಿಸ್ 
ಹೆಣ್ಣು : ಹಲೋ ನನ್ನ ಮುದ್ದುಕೃಷ್ಣ ಯಾಕೋ ಇಷ್ಟು ಲೇಟ ಮಾಡಿದೆ 
          ಮೊದಲೇ ಈ ಲೆಟರ್ ಕೊಟ್ಟಿದ್ರೆ ನಿನ್ನನ್ ಪ್ರೀತೀಲ್ ಮುಳುಗಿಸ್ತಿದ್ದೇ 
ಗಂಡು :  ಓ.. ಪ್ರಿಯ ಗೆಳೆಯ ಈ ವಿಕೆಟ್ ಬಿತ್ತು 
ಹೆಣ್ಣು : ಹಲೋ ಮೈ ಡಿಯರ್ ಹುಡುಗಾ ನಂಗೆ ಲವ್ ಉಕ್ಕಾಯಿತೇ 
          ನನ್ನ ಪ್ರೀತಿ ಪಡೆಯೋಕೆ ಯಾವೋನ್ಗ್ ಇಲ್ಲಿ ಪುಣ್ಯ ಐತೆ 
ಗಂಡು : ಪ್ರಿಯ ಗೆಳೆಯ ಈ ವಿಕೆಟ್ಟು ಬಿತ್ತು 
           ರತ್ನಮ್ಮೋ ನಾನು ನಿನ್ನ ಇವತ್ತಿಂದ ಪ್ರೀತಿ ಮಾಡ್ಲಾ 
           ಲೇಟರನಲ್ಲಿ ಬರ್ದಿದಂಗೆ ನೀನು ನಡ್ಕೊಂತೀ ಏನ್ಲಾ 
           ಮಿತ್ರ ಮಿತ್ರ ಮಿತ್ರ ಕ್ಲಿಕ್ ಆಯ್ತು ಪ್ರೇಮ ಪತ್ರ 
           ಈಕೆ ಕ್ಲೀನ್ ಬೋಲ್ಟ್ ಆಗೋಕೆ ಏನ್ ಮಾಡಿದ್ಯೋ ಅಂತ ತಂತ್ರ 
           ಮಿತ್ರ ಮಿತ್ರ ಮಿತ್ರ ಸೂಪರ್ ನಿನ್ನ ಪ್ರೇಮ ಪತ್ರ 
           ಸಾಯೋನ್ನ ಬದುಕಿಸಿ ಬಿಡ್ತು ನಿನ್ನ ಪ್ರೇಮ ಪತ್ರದ ಮಂತ್ರ 
           ಸೈಲೆನ್ಸ್ ಸೈಲೆನ್ಸ್ ಎಳೆ ನಾನ್ ಸೆನ್ಸ್ ಗೋ ಟೂ ಯುವರ್ ಸೀಟ್ಸ  
           ಟೇಕ್ ಆನ್ ಮೈ ನೋಟ್ಸ್ 
ಹೆಣ್ಣು : ಹೇ ಮಿತ್ರ ಮಿತ್ರ ಮಿತ್ರ ಕಮಲಳಿಗೆ ಬೇಕಂತ ಪತ್ರ 
          ಮಿತ್ರ ಮಿತ್ರ ಮಿತ್ರ ಮಿತ್ರ ಪತ್ರ 

ಗಂಡು : ತಾಜಮಹಲನ್ ಕಟ್ಟಿದವನ್ಯಾರ್ ಅದು ಯಾವಾಗ್ ಪೂರ್ತಿ ಆಯ್ತು 
ಹೆಣ್ಣು : ಇವತ್ತೇ ಸಾರ್ ಇವತ್ತೇ ಸಾರ್ ಅದನ್ ಕಟ್ಟಿದ್ದು ಈ ನನ್ನ ಲವರ್ ಸಾರ್ 
ಗಂಡು : ಶೇಕ್ಷಪೀಯರ್ ಎಲ್ಲಿಯವನು ಅವ್ನು ಯಾವ್ ಯಾವ್ ಕೃತಿ ಬರೆದ 
ಹೆಣ್ಣು : ಪತ್ರ ಸಾರ್ ಪತ್ರ ಸಾರ್ ಅವ್ನು ಬರದಿದ್ದೂ ನೂರಾರು ಲವ್ ಪತ್ರ ಸಾರ್ 
ಕೋರಸ್ : ಮಿತ್ರ ಸಾರ್ ನಮ್ಮ ಮಿತ್ರ ಸಾರ್ 
                ಈ ಹೀರೊ ನಮ್ಮ್ ಕಾಲೇಜನ ಶೇಕ್ಷಪೀಯರ್ ಸಾರ್  
ಗಂಡು : ಪ್ರಧಾನಿ ಯಾರೀಗ              ಕೋರಸ್ : ನಾನಂತೂ ಅಲ್ಲ ಸಾರ್ 
ಗಂಡು : ರಾಷ್ಟ್ರಪತಿ ಯಾರೀಗ           ಕೋರಸ್ : ನೀನಂತೂ ಅಲ್ಲ ಸಾರ್ 
ಗಂಡು : ನೆಹರು ನಮ್ಮ ವಯಸ್ಸಲ್ಲಿ ಇಂಗ್ಲೆಂಡನಲ್ಲಿ ಓದತ್ತಿದ್ರು 
ಕೋರಸ್ : ನೆಹರು ನಿಮ್ ವಯಸ್ಸಲ್ಲಿ ಇಂಡಿಯಾನ್ ಆಳ್ತಿದ್ರೂ 
ಗಂಡು : ಹುಡುಗ್ರಾ ನೀವು ಹುಡುಗ್ರಾ ನನ್ ಕರ್ಮ್ ನಿಮಗ್ ಕಲಸೋದ್ ಅಕ್ಷರ 
            ಮಿತ್ರ ಮಿತ್ರ ಮಿತ್ರ ಸಕ್ಸಸ್ ನಿಮ್ಮ್ ಪ್ರೇಮ ಪತ್ರ 
ಕೋರಸ್ : ಓ ರೋಮಿಯೋ ಓ ಜೂಲಿಯೆಟ್ 
ಹೆಣ್ಣು : ಪ್ರೇಮದೋಲೆ ಮೆಚ್ಚಿತು ತಮ್ಮ ಪ್ರೇಮ ಬಾಣ ಚುಚ್ಚಿತು 
          ನೀವು ಕೊಟ್ಟರೆ ಪ್ರಶ್ನೆ ಪತ್ರಿಕೆ ನನ್ನ ಹೃದಯ ನಿಮಗೆ ಕಾಣಿಕೆ 
ಗಂಡು : ಓಕೆ ಓಕೆ ಓಕೆ ಓಕೆ ಓ ಜೂಲಿಯೆಟ್ 
ಕೋರಸ್ : ಕ್ವೆಶ್ಚನ್ ಪೇಪರ್ ಬೇಕು ಹೃದಯದ ಕಾಣಿಕೆ ನೀಡು             
               ಎಗ್ಸಾಮ್ ಪಾಸ್ ಆಗಬೇಕಾ ನನ್ನನ್ನು ಪ್ರೀತಿ ಮಾಡು 
ಗಂಡು : ಪತ್ರ ಪತ್ರ ಪತ್ರ ಅದು ಬಾಳಿನ ಪ್ರಶ್ನೆಗಳ ಪತ್ರ 
ಹೆಣ್ಣು : ಎಚ್ಚರ ಎಚ್ಚರ ಎಚ್ಚರ ಈ ತರಲೆ ಬೇಡ ನನ್ನ ಹತ್ತಿರ 
          ಎಚ್ಚರ ಎಚ್ಚರ ಎಚ್ಚರ ಈ ತರಲೆ ಬೇಡ ನನ್ನ ಹತ್ತಿರ
-----------------------------------------------------------------------------------------

ಹೃದಯ ಹೃದಯ (೧೯೯೯) - ವೆಂಕಟೇಶ ವೆಂಕಟೇಶ 
ಸಂಗೀತ, ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ 

ಅರೇ ನೋಡು ನೋಡು ನೋಡು ಬಲ ಗಬ್ ಎದ್ದೋಯ್ತು ನಾಡು 
ದೇವರೇ ದಂಗಾದ ಅಯ್ಯೋ ಅಯ್ಯೋ ಅರೇ ಬೋಳಾಗೋಯ್ತು ಕಾಡು 
ಬಲ್ ಕಾಸ್ಟ್ಲಿ ಆಯ್ತು ಲಾಡು ದೇವರೇ ತೆಪ್ಪಗಾದ ಅಯ್ಯೋ ಅಯ್ಯೋ 
ವೆಂಕಟೇಶ ವೆಂಕಟೇಶ ಕಾಪಾಡಯ್ಯ ನಮ್ಮ ದೇಶ 
ವೆಂಕಟೇಶ ವೆಂಕಟೇಶ ಕಾಪಾಡಯ್ಯ ನಮ್ಮ ದೇಶ 
ಓದೋವ್ರಿಗೇ ಸೀಟುಗಳಿಲ್ಲ ಓದಿದೋರ್ಗೆ ಜಾಬುಗಳಿಲ್ಲ 
ದೇವರೇ ಕಿವುಡಾದ ಅಯ್ಯೋ ಅಯ್ಯೋ 
ವರುಷಕ್ಕೆರಡು ಎಲೆಕ್ಷನ್ ಚೋರರಿಗೆ ಪೂಲ್ ಪ್ರೊಟೆಕ್ಷನ್ 
ದೇವರೇ ಕಿವುಡಾದ ಅಯ್ಯೋ ಅಯ್ಯೋ 
ವೆಂಕಟೇಶ ವೆಂಕಟೇಶ ಕಾಪಾಡಯ್ಯ ನಮ್ಮ ದೇಶ 
ವೆಂಕಟೇಶ ವೆಂಕಟೇಶ ಕಾಪಾಡಯ್ಯ ನಮ್ಮ ದೇಶ 

ಒನ್ ಲೀಟರ್ ಹಾಲಿಗೆ ಹತ್ತೂವರೆ ರೂಪಾಯಿ 
ಒನ್ ಬಾಟಲ್ ನೀರಿಗೆ ಹದಿನಾರುವರೆ ರೂಪಾಯಿ 
ಟ್ರಾಫಿಕದೊಂದು ಟೆನಷನ್ ಅಣುಬಾಂಬಿನದೊಂದು ಟೆನಷನ್ 
ಡಯನಾದೊಂದು ಟೆನಷನ್ ಕ್ಲಿಂಟನ್ ದೊಂದು ಟೆನಷನ್ 
ಈ ಟೆನಷನ್ ವಿಷಯ ತಡೆಯುತ್ತ ಹೃದಯ ಆಗಾಗ ನಿಲ್ಲುತ್ತೇ ಬಿಟ್ಟರೆ ಹೊತ್ತೇ 
ಅರೆ ನೋಡು ನೋಡು ನೋಡು ಬಲ್ ಗಬ್ ಎದ್ದೋಯ್ತು ನಾಡು 
ದೇವರೇ ದಂಗಾದ ಅಯ್ಯೋ ಅಯ್ಯೋ 
ಈರುಳ್ಳಿ ಅಟ್ಟಕ್ ಹೋಯ್ತು ಟಮೋಟೋ ಬೀದೀಗ ಬಿತ್ತು 
ದೇವರೇ ಬೆಪ್ಪಾದ ಅಯ್ಯೋ ಅಯ್ಯೋ 
ವೆಂಕಟೇಶ ವೆಂಕಟೇಶ ಕಾಪಾಡಯ್ಯ ನಮ್ಮ ದೇಶ 
ವೆಂಕಟೇಶ ವೆಂಕಟೇಶ ಕಾಪಾಡಯ್ಯ ನಮ್ಮ ದೇಶ 

ಬಾಷೆಗೂ ಜಗಳ ಅಡಿಗಡಿಗೂ ಜಗಳ 
ನಾಡ ಹೊರಗೂ ಜಗಳ ಒಳಒಳಗೂ ಜಗಳ 
ಸಚಿನ್ ಹೊಡೆದ್ರೂ ಟೆನಷನ್ ಹೊಡಿದೆ ಇದ್ರೂ ಟೆನಷನ್ 
ಇಂಡಿಯಾ ಪಾಪ್ಯೂಲೇಷನ್ ನೆನಸಿಕೊಂಡ್ರೇನೇ ಹೈ ಟೆನಷನ್ 
ಈ ಟೆನಷನ್ ವಿಷಯ ತಡೆಯುತ್ತ ಹೃದಯ ಬಿಪಿ ಏರುತ್ತೆ ಬಿಟ್ರೆ ಹಾರುತ್ತೇ 
ಅರೆ ನೋಡು ನೋಡು ನೋಡು ಬಲ್ ಗಬ್ ಎದ್ದೋಯ್ತು ನಾಡು 
ಅರೇ ಭಂಗಿ ಹಳೇದಾಯ್ತು ಹೊಸ ಡ್ರಗ್ಸ್ ಫೇಮಸ್ ಆಯ್ತು 
ದೇವರೇ ಮೂಕಾದ ಅಯ್ಯೋ ಅಯ್ಯೋ ವೆಂಕಟೇಶ ಗೋವಿಂದ 
ವೆಂಕಟೇಶ ಗೋವಿಂದ ವೆಂಕಟೇಶ ವೆಂಕಟೇಶ ಕಾಪಾಡಯ್ಯ ನಮ್ಮ ದೇಶ 
ಲವ್ ಇದ್ರೆ ಹೃದಯ ಇಲ್ಲದಿದ್ರೆ ಅಲ್ಲಿ ಪ್ರಳಯ 
ಲವ್ ಇದ್ರೆ ಉದಯ ಇಲ್ಲದಿದ್ರೆ ಶೂನ್ಯ ಗೆಳೆಯ 
ಒಂದ್ ಒಳ್ಳೆ ಮಾತಾಡಿ ಒಂದ್ ಒಳ್ಳೆ ಹಾಡ್ ಹಾಡಿ 
ನೊಂದೋರ ಕಡೆ ನೋಡಿ ಒಂದಿಷ್ಟು ಒಳ್ಳೆದ ಮಾಡಿ 
ನಕ್ಕರೆ ಗೆಳೆಯ ನಗುತ್ತೆ ಹೃದಯ ಒಳ್ಳೇದೇ ಬಯಸು ಎಲ್ಲರ ನಗಿಸು 
ಅರೆ ನೋಡು ನೋಡು ನೋಡು ಬಲ್ ಗಬ್ ಎದ್ದೋಯ್ತು ನಾಡು 
ದೇವರೇ ದಂಗಾದ ಅಯ್ಯೋ ಅಯ್ಯೋ 
ಈರುಳ್ಳಿ ಅಟ್ಟಕ್ ಹೋಯ್ತು ಟಮೋಟೋ ಬೀದೀಗ ಬಿತ್ತು 
ದೇವರೇ ಬೆಪ್ಪಾದ ಅಯ್ಯೋ ಅಯ್ಯೋ 
ವೆಂಕಟೇಶ ವೆಂಕಟೇಶ ಕಾಪಾಡಯ್ಯ ನಮ್ಮ ದೇಶ 
ವೆಂಕಟೇಶ ವೆಂಕಟೇಶ ಕಾಪಾಡಯ್ಯ ನಮ್ಮ ದೇಶ 
---------------------------------------------------------------------------------------

ಹೃದಯ ಹೃದಯ (೧೯೯೯) - ಹೋಗಿ ಬಾ ಹೋಗಿ ಬಾ 
ಸಂಗೀತ, ಸಾಹಿತ್ಯ : ಹಂಸಲೇಖ, ಗಾಯನ : ಡಾ||ರಾಜಕುಮಾರ, ಚಿತ್ರಾ  

ಗಂಡು : ಹೋಗಿ ಬಾ..  ಹೋಗಿ ಬಾ..  ಜೀವದಾ ಜೀವವೇ ಹೋಗಿ ಬರುವೇಯಾ 
ಹೆಣ್ಣು : ನಾನಿನ್ನು ಹೋಗಲೇ ಅಂದರೇ ಹೋದರೆ ಮರೆತು ಬಿಡುವೆಯಾ 
ಗಂಡು : ಈ ವಿರಹ ಜನುಮಗಳಾ ಕಾಯಲು 
ಹೆಣ್ಣು : ಈ ವಿದಾಯ ಮುಂದೆಲ್ಲೋ ಸೇರಲು 
ಗಂಡು : ಹೋಗಿ ಬಾ..  ಹೋಗಿ ಬಾ..  ಜೀವದಾ ಜೀವವೇ ಹೋಗಿ ಬರುವೇಯಾ 

ಗಂಡು : ರುಚಿಯಾದ ಹಣ್ಣಾದರು ಕಾಯಿ ಕಾಯಲೇಬೇಕು ಮಾಗಬೇಕು 
ಹೆಣ್ಣು : ಹುಣ್ಣಿಮೆ ದೀಪವಾಗಲು ಚಂದ್ರನೇ ಕಾಯಬೇಕು ಬೆಳಿಬೇಕು 
ಗಂಡು : ಈ ಪ್ರೀತಿ ಕಾಯಾಗಿದೆ         ಹೆಣ್ಣು : ಈ ಜನುಮ ಸಾಲದಾಗಿದೆ 
ಗಂಡು : ಪರಿಪಕ್ವವಾಗಲು ಕಾಯುವ ಹಯ್ಯೋ... ಹೃದಯ ಹೋಗಿ ಹೃದಯ 
ಹೆಣ್ಣು : ಹೋಗಿ ಬಾ..  ಹೋಗಿ ಬಾ..  ಜೀವದಾ ಜೀವವೇ ಹೋಗಿ ಬರುವೇಯಾ 

ಹೆಣ್ಣು : ಕಣ್ಣಲ್ಲಿ ನೀರ ಬಿಂದು ಒಂದೇ ಅಳುವಲ್ಲೂ ನಗುವಲ್ಲೂ 
ಗಂಡು : ಎದೆಯಲ್ಲಿ ಸದ್ದು ಒಂದೇ  ಹೃದಯ ಕೊಡುವಾಗ ಬಿಟ್ಟು ಕೊಡುವಾಗ 
ಹೆಣ್ಣು : ಕಹಿಯೇ ನೆನಪಾಗಲಿ             ಗಂಡು : ಆ ನೆನಪೇ ಸಿಹಿಯಾಗಲಿ 
ಹೆಣ್ಣು : ನಿಷ್ಕಲ್ಮಷರಾಗಿ ಕಾಯುವ ಹಯ್ಯೋ.. ಹೃದಯ ಅಳುವೆಯಾ ಹೃದಯ 
ಗಂಡು : ಹೋಗಿ ಬಾ..  ಹೋಗಿ ಬಾ..  ಜೀವದಾ ಜೀವವೇ ಹೋಗಿ ಬರುವೇಯಾ 
ಹೆಣ್ಣು : ನಾನಿನ್ನು ಹೋಗಲೇ ಅಂದರೇ ಹೋದರೆ ಮರೆತು ಬಿಡುವೆಯಾ 
ಗಂಡು : ಈ ವಿರಹ ಜನುಮಗಳಾ ಕಾಯಲು 
ಹೆಣ್ಣು : ಈ ವಿದಾಯ ಮುಂದೆಲ್ಲೋ ಸೇರಲು 
ಗಂಡು : ಹೋಗಿ ಬಾ..  ಹೋಗಿ ಬಾ..  ಜೀವದಾ ಜೀವವೇ ಹೋಗಿ ಬರುವೇಯಾ 
-----------------------------------------------------------------------------------------

ಹೃದಯ ಹೃದಯ (೧೯೯೯) - ಇವಳೇ ನನ್ನ ರಾಣಿ 
ಸಂಗೀತ, ಸಾಹಿತ್ಯ : ಹಂಸಲೇಖ, ಗಾಯನ : ರಾಜೇಶ, ಮಂಜುಳಗುರುರಾಜ, ಶಿವರಾಜಕುಮಾರ 

ಗಂಡು : ಇವಳೇ ನನ್ನ ರಾಣಿ ನನ್ನ ಹೃದಯದ ವಾಣಿ 
            ನನ್ನ ಹೃದಯದ ವಾಣಿ ನನ್ನ ಕನಸಿನ ರಾಣಿ  
            ಇವಳೇ ನನ್ನ ರಾಣಿ ನನ್ನ ಹೃದಯದ ವಾಣಿ 
            ನನ್ನ ಹೃದಯದ ವಾಣಿ ನನ್ನ ಕನಸಿನ ರಾಣಿ
            ಹೂಗಳ ರಾಣಿ ಮಲ್ಲಿಗೆ ಋತುಗಳ ರಾಣಿ ಚೈತ್ರ 
            ಕಂಪಿನ ರಾಣಿ ಕಸ್ತೂರಿ ನುಡಿಗಳ ರಾಣಿ ಕನ್ನಡ 
            ರಾಣಿ ರಾಣಿ ರಾಣಿಗಳ ರಾಣಿ ಇವಳೇ ಮನದ ಮಹಲಿನ ಮಹಾರಾಣಿ 
            ಇವಳೇ ನನ್ನ ರಾಣಿ ನನ್ನ ಹೃದಯದ ವಾಣಿ 
            ನನ್ನ ಹೃದಯದ ವಾಣಿ ನನ್ನ ಕನಸಿನ ರಾಣಿ

ಹೆಣ್ಣು : ಯಾರಿಗೂ ಹೇಳದೆ ಮಾತಾನಾಡೋ ಗಾಳಿಯ ರೂಪದ ಗೆಳೆಯ ನೀನು 
ಗಂಡು : ಯಾರಿಗೂ ಕಾಣದೆ ಬಂದು ನೋಡೋ ಜ್ಞಾಪಕ ರೂಪದ ಲಹರಿ ನೀನು 
            ಪ್ರೀತಿಯ ಅರಮನೆ ಬೀಗದ ಗೊಂಚಲು ನಡುವಲಿ ತೂಗಾಡೋ ಮೊದಲನೇ ಅನುಭವ 
            ರಾಶಿಯ ನೀಡಲು ಬಳುಕುತ ಕೈ ಬೀಸೋ ಇವಳೇ ನನ್ನ ರಾಣಿ 
            ಇವಳೇ ನನ್ನ ರಾಣಿ ನನ್ನ ಹೃದಯದ ವಾಣಿ 
            ನನ್ನ ಹೃದಯದ ವಾಣಿ ನನ್ನ ಕನಸಿನ ರಾಣಿ

 ಗಂಡು : ಶಿಲ್ಪದ ರಾಣಿ ಶಾಂತಲೆ ಕುಂಚದ ರಾಣಿ ಅಜಂತಾ 
             ಕಾವ್ಯದ ರಾಣಿ ಊರ್ಮಿಳಾ ರಾಗದ ರಾಣಿ ಗಂಗೂಬಾಯಿ 
            ರಾಣಿ ರಾಣಿ ರಾಣಿಗಳ ರಾಣಿ ಇವಳೇ ಮನದ ಮಹಲಿನ ಮಹಾರಾಣಿ ಹೋಯ್ .. 
            ಇವಳೇ ನನ್ನ ರಾಣಿ ನನ್ನ ಹೃದಯದ ವಾಣಿ 
            ನನ್ನ ಹೃದಯದ ವಾಣಿ ನನ್ನ ಕನಸಿನ ರಾಣಿ

ಹೆಣ್ಣು : ಪ್ರೀತಿಯ ಕಡಲಿಗೆ ಒಂದೇ ತೀರ ತೀರದ ಆಚೆಗೆ ಏನೋ ಕಾಣೆ 
ಗಂಡು : ಆಗಸಕ್ಕಿಂತ ಆಸೆ ಇನ್ನೂ ದೂರ ದೂರದ ಆಸೆಗೆ ಅಂತ್ಯ ಕಾಣೆ 
            ಬೆಳಕಿನ ದೀಪ ನಿನ್ನೀ ರೂಪ ಪ್ರೀತಿಯ ಸಾಗರಕೆ 
            ಆಸೆಯ ಹಕ್ಕಿಗೆ ರೆಕ್ಕೆ ಪಲ್ಲಕ್ಕಿ ನಿನ್ನ ಕನವರಿಕೆ 
            ಇವಳೇ ನನ್ನ ರಾಣಿ ನನ್ನ ಹೃದಯದ ವಾಣಿ 
            ನನ್ನ ಹೃದಯದ ವಾಣಿ ನನ್ನ ಕನಸಿನ ರಾಣಿ ಹೂಗಳ ರಾಣಿ ಮಲ್ಲಿಗೆ 
-----------------------------------------------------------------------------------------

ಹೃದಯ ಹೃದಯ (೧೯೯೯) - ಹೇ ಹೃದಯ ಅವಳ ಕಣ್ಣಿನ ಜೊತೆ ಮಾತಾಡಿದೆಯಾ 
ಸಂಗೀತ, ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ. ಚಿತ್ರಾ 

ಗಂಡು : ಏ.. ಹೃದಯ...  ಏ.. ಹೃದಯ... ಅವಳ ಕಣ್ಣಿನ ಜೊತೆ ಮಾತಾಡಿದೆಯಾ 
            ಓ ಹೃದಯ ಅವಳ ಊರು ವಿಳಾಸ ಕೇಳಿದೆಯಾ 
            ನಾ ಬರೆಯೋ ಕವನಗಳ ಜೀವಧನಿ ಜೇನ ಹನಿ 
            ಅವಳ ನಾನು ಸಂಧಿಸಬೇಕು 
           ಏ.. ಹೃದಯ... ಅವಳ ಕಣ್ಣಿನ ಜೊತೆ ಮಾತಾಡಿದೆಯಾ 

ಗಂಡು : ಏ .. ಹೃದಯ ಅವಳ ಕಿರುನಗೆ ನೆನಪಿದೆಯಾ ಧರೆಯ ಮೇಲೆ ಅಂಥ ಹೆಣ್ಣಿರುವಳೇ 
            ಏ.. ಹೃದಯ ಅವಳ ಸಿಹಿ ನುಡಿ ಕೇಳಿದೆಯಾ ಶೃತಿಯಲ್ಲಿರೋ ಹೆಣ್ಣು ಹುಟ್ಟಿರುವಳೇ 
            ಅವಳ ನಾನು ಪ್ರೀತಿಸಬೇಕು 
           ಏ..   ಹೃದಯ ಅವಳ ಮನಸಿನ ಜೊತೆ ಓಡಾಡಿದೆಯಾ 
          ಏ.. ಹೃದಯ ನನ್ನ ಕನಸುಗಳ ಕಥೆ ಹೇಳಿದೆಯಾ 
          ನಾ ಪಡೆಯೋ ಸ್ಫೂರ್ತಿ ಸೆಲೆ ಕಾವ್ಯ ನೆಲೆ ಜೀವ ಕಲೆ 
          ಅವಳ ನಾನು ಪಡೆಯಲೇ ಬೇಕು 
         ಏ...  ಹೃದಯ ಅವಳ ಕಣ್ಣಿನ ಜೊತೆ ಮಾತಾಡಿದೆಯಾ 

ಗಂಡು : ಆ ಹುಡುಗಿ ರೆಪ್ಪೆ ತೆರೆದರೆ ಉದಯ ರವಿ ತೆರೆಯದಾ ದಿನ ಇರುಳೋ ಇರುಳು 
            ಆ ಹುಡುಗಿ ಒಳಗೆ ಬರೆದರೆ ನಾನು ಕವಿ 
            ಬರೆಸದಾ ದಿನ ಇರುಳೋ ಅರುಳೋ ಮರುಳೋ 
            ಅವಳ ನಾನು ನೋಡಲೇ ಬೇಕು 
           ಏ... ಹೃದಯ ಅವಳ ನೋಡಿದ ಕ್ಷಣ ನನ್ನ ಕೂಗುವೆಯಾ 
           ಏ... ಹೃದಯ ನನಗೂ ಅವಳಿಗೂ ಮದುವೆ ಮಾಡುವೆಯಾ    
           ಕಲ್ಪನೆಯ ಸುಂದರಿಯ ಅಂದ ಚೆಂದ ಮರೆತೆಯ 
           ಅವಳ ನೀನು ಹುಡುಕಲೇಬೇಕು 
           ಏ.. ಹೃದಯ... ಅವಳ ಕಣ್ಣಿನ ಜೊತೆ ಮಾತಾಡಿದೆಯಾ 
-----------------------------------------------------------------------------------------

No comments:

Post a Comment