1500. ಹಗಲು ವೇಷ (೨೦೦೦)



ಹಗಲುವೇಷ  ಚಲನಚಿತ್ರದ ಹಾಡುಗಳು 
  1. ಬೆಳದಿಂಗಳಾ ಬೆಣ್ಣೆ ಕದ್ದು.
  2. ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ
  3. ಎಂಥಾ ಎಂಥಾ ವೇಷಾನೋ 
  4. ಬಾರೋ ಬಾ ಬಾರೋ 
  5. ಅನ್ನ ಇಟ್ಟ ಮನೆಗೆ 
  6. ಸದಾರಮೆ ಸದಾರಮೆ 
  7. ಮಾಯಾ ಜಿಂಕೆ 
  8. ಈ ತುಂಡು ನಾಡಿನ 
ಹಗಲುವೇಷ (೨೦೦೦) - ಬೆಳದಿಂಗಳಾ ಬೆಣ್ಣೆ ಕದ್ದು.
ಸಂಗೀತ: ಹಂಸಲೇಖ, ಸಾಹಿತ್ಯ: ಬರಗೂರು ರಾಮಚಂದ್ರಪ್ಪ, ಗಾಯನ : ರಾಜೇಶಕೃಷ್ಣನ, ಕೆ.ಎಸ್.ಚಿತ್ರಾ

 ಗಂಡು :  ಹಹಹ ಹಹಹ ಹಹಹ ಅಹಹಾ ಆಹಾಹಾ..
ಹೆಣ್ಣು : ಆಆಆ ಆಆಆ ಆಆಆ ಆಆಆ ಆಆಆ..
ಗಂಡು : ಬೆಳದಿಂಗಳಾ ಬೆಣ್ಣೆ ಕದ್ದು. ಪ್ರೀತಿಯಲೀ ಕುಣಿ ಮೆದ್ದು..
ಹೆಣ್ಣು : ಬೆಳದಿಂಗಳಾ ಬೆಣ್ಣೆ ಕದ್ದು. ಪ್ರೀತಿಯಲೀಕುಣಿ ಮೆದ್ದು..
ಗಂಡು : ಕನಸು ಕುಣಿದಾವೋ.. ಮನಸು ಕರೆದಾವೋ..
ಹೆಣ್ಣು : ಕನಸು ಕುಣಿದಾವೋ ಕರೆದಾವೋ ಕುಣಿದು ಮೆರೆದಾವೋ...
          ಬೆಳದಿಂಗಳಾ..ಬೆಣ್ಣೆಕದ್ದು.. ಪ್ರೀತಿಯಲೀ.ಕುಣಿ ಮೆದ್ದು..

ಹೆಣ್ಣು : ಚಂದಮಾಮಾ..ಚೆಲುವಾ. ಅಂದ ಮಾಡುತಾ..ಕೊಡುವಾ...
ಗಂಡು : ಸದ್ದು ಮಾಡದೇ..ಬರುವಾ. ಮುದ್ದು ಮಾಡುತಾ..ನಲಿವಾ..
ಹೆಣ್ಣು : ಹಾರು ಹಾರುತ ಹೋಗೀ ಮೋಡ ಸೇರಿತು ಹಕ್ಕೀ
          ನೋಡು ನಿಂತಿವೆ ಅರಳೀ ಕೋಟಿ ಪ್ರೀತಿಯ ಚುಕ್ಕೀ
ಗಂಡು : ಕನಸು ಕುಣಿದಾವೋ.. ಮನಸು ಕರೆದಾವೋ..
            ಕನಸು ಕುಣಿದಾವೋ ಕರೆದಾವೋ ಕುಣಿದು ಮೆರೆದಾವೋ...
           ಬೆಳದಿಂಗಳಾ ಬೆಣ್ಣೆ ಕದ್ದು.. ಪ್ರೀತಿಯಲೀ ಕುಣಿ ಮೆದ್ದು..

ಹೆಣ್ಣು : ಓಓಓ ಓಓಓ ಓಓಓ ಓಓಓ ಓಓಓ...
ಗಂಡು : ಹಹಹ ಹಹಹ ಹಹಹ ಅಹಹಾ ಆಹಾಹಾ...
           ಬಾನು ಬೆಳ್ಳಿಯಾ..ಚಿಲುಮೇ ಮಿಂಚು ಬಳ್ಳಿಯಾ..ಒಲುಮೇ.ಏಏಏ
ಹೆಣ್ಣು : ದುಂಡು ಮಲ್ಲಿಗೇ..ಮನಸು ಹಿಂಡು ಹಕ್ಕಿಯಾ..ಕನಸು..
ಗಂಡು : ಕನಸು-ಮನಸಿನ ನಡುವೇ ತೂಗು ಮಂಚದ ಚೆಲುವೇ
ಹೆಣ್ಣು : ಕನಸು-ಮನಸಿನ ನಡುವೇ..ತೂಗುಮಂಚದ ಚೆಲುವೆ
ಗಂಡು : ಕನಸು ಕುಣಿದಾವೋ.. ಮನಸು ಕರೆದಾವೋ..
           ಕನಸು ಕುಣಿದಾವೋ ಕರೆದಾವೋ ಕುಣಿದು ಮೆರೆದಾವೋ..
           ಬೆಳದಿಂಗಳಾ ಬೆಣ್ಣೆ ಕದ್ದು. ಪ್ರೀತಿಯಲೀ ಕುಣಿ ಮೆದ್ದು..
          ಬೆಳದಿಂಗಳಾ..ಬೆಣ್ಣೆ ಕದ್ದು. ಪ್ರೀತಿಯಲೀ ಕುಣಿ ಮೆದ್ದು..
          ಕನಸು ಕುಣಿದಾವೋ.. ಮನಸು ಕರೆದಾವೋ..
         ಕನಸು ಕುಣಿದಾವೋ ಕರೆದಾವೋ ಕುಣಿದು ಮೆರೆದಾವೋ...
         ಬೆಳದಿಂಗಳಾ..ಬೆಣ್ಣೆ ಕದ್ದು..ಊಊ ಪ್ರೀತಿಯಲೀ ಕೂಡಿ ಮೆದ್ದು..
         ಓಓಓ ಓಓಓ ಓಓಓ ಓಓಓ ಓಓಓ...
        ಆಆಆ ಆಆಆ ಆಆಆ ಅಆಆ ಆಹಾಹಾ...
---------------------------------------------------------------------------------------------------

ಹಗಲು ವೇಷ (೨೦೦೦) - ಜಗ್ಗದು ಜಗ್ಗದು ಇಂಡಿಯಾ
ಸಂಗೀತ: ಹಂಸಲೇಖ, ರಚನೆ:‌ ಬರಗೂರು ರಾಮಚಂದ್ರಪ್ಪ, ಗಾಯನ: ಡಾ.ರಾಜಕುಮಾರ, ಕೋರಸ್ 

ಕೋರಸ್ :  ಇಂಡಿಯಾ, ಇಂಡಿಯಾ, ನಮ್ಮ ಇಂಡಿಯಾ
                ಇಂಡಿಯಾ, ಇಂಡಿಯಾ, ನಮ್ಮ ಇಂಡಿಯಾ
                ಬೆವರಿನ ಬೆಳಕಿನ ಬೆಟ್ಟ ಇಂಡಿಯಾ  
                ದುಡಿಮೆಯ ಹಿರಿಮೆಯ ದಿಟ್ಟ ಇಂಡಿಯಾ
ಗಂಡು : ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ
            ಅಗ್ಗದ ಅರಸರಿಗೆಂದಿಗೂ ಕುಗ್ಗದು ಇಂಡಿಯಾ 
           ನಮ್ಮಿಂಡಿಯಾ, ಬೆವರಿನ ಇಂಡಿಯಾ
           ನಮ್ಮಿಂಡಿಯಾ, ಬೆವರಿನ ಇಂಡಿಯಾ
           ಜಗ್ಗದು ಜಗ್ಗದು ಯಾರಿಗು ಜಗ್ಗದು ಇಂಡಿಯಾ

ಗಂಡು :  ಬಂಡೆ ಬಂಡೆಯ ಮೇಲೆ, ಗಂಡು ಅರಳಿದ ಲೀಲೆ
            ಗುಂಡು ಹೊಡೆಯೋ ದಂಡು, ಒಣಗಿ ನಿಂತ ಬೆಂಡು 
           ಬಿಡುಗಡೆಯ ಬೆಳಕನು ಚಲ್ಲೋ, ಓಓ ಓಹೋ ಓ ಓ ಓ, ಆ ಆ ಓಹೋ ಓ ಓ ಓ
          ಬಿಡುಗಡೆಯ ಬೆಳಕನು ಚಲ್ಲೋ ಬಂಡಾಯದ ಗುಂಡಿಗೆ
          ಜಗ್ಗದು ಜಗ್ಗದು ಜಗ್ಗದು ಜಗ್ಗದು
          ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ
          ಅಗ್ಗದ ಅರಸರಿಗೆಂದಿಗೂ ಕುಗ್ಗದು ಇಂಡಿಯಾ
           ನಮ್ಮಿಂಡಿಯಾ, ಬೆವರಿನ ಇಂಡಿಯಾ
           ನಮ್ಮಿಂಡಿಯಾ, ಬೆವರಿನ ಇಂಡಿಯಾ
           ಜಗ್ಗದು ಜಗ್ಗದು ಯಾರಿಗು ಜಗ್ಗದು ಇಂಡಿಯಾ
ಕೋರಸ್:  ಇಂಡಿಯಾ, ಇಂಡಿಯಾ, ನಮ್ಮ ಇಂಡಿಯಾ
               ಇಂಡಿಯಾ, ಇಂಡಿಯಾ, ನಮ್ಮ ಇಂಡಿಯಾ
               ಬೆವರಿನ ಬೆಳಕಿನ ಬೆಟ್ಟ ಇಂಡಿಯಾ  
               ದುಡಿಮೆಯ ಹಿರಿಮೆಯ ದಿಟ್ಟ ಇಂಡಿಯಾ

ಗಂಡು : ಕೋಟೆ ಕೊತ್ತಲ ಕಾದ ಕೋಟಿ ದೀಪದ ಹಣತೆ
            ನಾಡಿಗೆ ದಿನವೂ ದುಡಿದ, ಕೂಲಿ ಕುಂಬಣಿ ಜನತೆ
            ಸ್ವಾತಂತ್ರ್ಯದ ಹಕ್ಕನ್ನು ಕೇಳಿ ಓಓ ಓಹೋ ಓ ಓ ಓ, ಆ ಆ ಓಹೋ ಓ ಓ ಓ
           ಸ್ವಾತಂತ್ರ್ಯದ ಹಕ್ಕನ್ನು ಕೇಳಿ, ಎದ್ದು ನಿಂತ ಚಿರತೆ
           ಜಗ್ಗದು ಜಗ್ಗದು ಜಗ್ಗದು ಜಗ್ಗದು
           ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ
           ಅಗ್ಗದ ಅರಸರಿಗೆಂದಿಗೂ ಕುಗ್ಗದು ಇಂಡಿಯಾ
          ನಮ್ಮಿಂಡಿಯಾ, ಬೆವರಿನ ಇಂಡಿಯಾ
          ಜಗ್ಗದು ಜಗ್ಗದು ಯಾರಿಗು ಜಗ್ಗದು ಇಂಡಿಯಾ
ಕೋರಸ್ : ಇಂಡಿಯಾ, ಇಂಡಿಯಾ, ನಮ್ಮ ಇಂಡಿಯಾ
              ಬೆವರಿನ ಬೆಳಕಿನ ಬೆಟ್ಟ ಇಂಡಿಯಾ
              ದುಡಿಮೆಯ ಹಿರಿಮೆಯ ದಿಟ್ಟ ಇಂಡಿಯಾ

ಗಂಡು : ಹಾಳೆ ಹಾಳೆಯ ಮೇಲೆ, ಮಿಂಚು ಮಾತಿನ ನಾಳೆ
           ಜನಪದರ ಕೊರಳಲ್ಲಿ, ಬಿಡುಗಡೆಯ ರಣ ಕಹಳೆ...
           ಮೂರು ಬಣ್ಣದ ಬಾವುಟ ಹಿಡಿದ..ಆ ಆ ಆ ಆ ಆಆಆ , ಓ ಓ ಓಹೋ ಓ ಓ ಓ
           ಮೂರು ಬಣ್ಣದ ಬಾವುಟ ಹಿಡಿದ, ಸಿಡಿಲ ಮೊಗ್ಗಿನ ಮಾಲೆ
           ಜಗ್ಗದು ಜಗ್ಗದು ಜಗ್ಗದು ಜಗ್ಗದು
           ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ
          ಅಗ್ಗದ ಅರಸರಿಗೆಂದಿಗೂ ಕುಗ್ಗದು ಇಂಡಿಯಾ
          ನಮ್ಮಿಂಡಿಯಾ, ಬೆವರಿನ ಇಂಡಿಯಾ
          ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ
          ಅಗ್ಗದ ಅರಸರಿಗೆಂದಿಗೂ ಕುಗ್ಗದು ಇಂಡಿಯಾ
         ನಮ್ಮಿಂಡಿಯಾ, ಬೆವರಿನ ಇಂಡಿಯಾ
         ಜಗ್ಗದು ಜಗ್ಗದು ಯಾರಿಗು ಜಗ್ಗದು ಇಂಡಿಯಾ
------------------------------------------------------------------------------------------------

ಹಗಲು ವೇಷ (೨೦೦೦) - ಎಂಥಾ ಎಂಥಾ ವೇಷಾನೋ 
ಸಂಗೀತ: ಹಂಸಲೇಖ, ರಚನೆ:‌ ಬರಗೂರು ರಾಮಚಂದ್ರಪ್ಪ, ಗಾಯನ: ರವಿಸಾಯೀ 

ಎಂಥಾ ಎಂಥಾ ವೇಷಾನೋ ಎಂಥಾ ಎಂಥಾ ವೇಷಾನೋ 
ಎಂಥಾ ಎಂಥಾ ವೇಷಾನೋ ಎಂಥಾ ಎಂಥಾ ವೇಷಾನೋ 
ಈ ಭೂಮಿ ತಾಯಿ ಬೆಳಕಿನ ಸೀರೇ ಎಂಥ ಎಂಥ ವೇಷಾನೋ 
ಈ ಭೂಮಿ ತಾಯಿ ಬೆಳಕಿನ ಸೀರೇ ಎಂಥ ಎಂಥ ವೇಷಾನೋ 
ವೇಷಾ ವೇಷಾ ಹಗಲು ವೇಷ ಹಗಲು ವೇಷ 
ಹಗಲು ವೇಷ ಹಗಲು ವೇಷ ಓಓಓಓಓ ಹೋಯ್ ಓಓಓಓಓ ಹೋಯ್ 

ಹಗಲು ಸೂರ್ಯ ಇರುಳು ಚಂದ್ರ ವೇಷ ಹಾಕಿ ಬಂದಾರೋ 
ಹರಿಯೋ ನೀರು ಉರಿಯೋ ಬೆಂಕಿ ಬಣ್ಣ ಬಳಿದು ನಿಂದಾರೋ  
ಬೀಸೋ ಗಾಳಿ ಸಂಚಾರ ಭೂಮಿ ತಾಯಿ ಸಂಸಾರ 
ಲೋಕವೆಲ್ಲ ಪರಿವಾರ ಕಲೆಯೇ ನಮ್ಮ ಆಚಾರ 
ಎಂಥಾ ಎಂಥಾ ವೇಷಾನೋ ಎಂಥಾ ಎಂಥಾ ವೇಷಾನೋ 
ಎಂಥಾ ಎಂಥಾ ವೇಷಾನೋ ಎಂಥಾ ಎಂಥಾ ವೇಷಾನೋ 
ಈ ಭೂಮಿ ತಾಯಿ ಬೆಳಕಿನ ಸೀರೇ ಎಂಥ ಎಂಥ ವೇಷಾನೋ 
ಈ ಭೂಮಿ ತಾಯಿ ಬೆಳಕಿನ ಸೀರೇ ಎಂಥ ಎಂಥ ವೇಷಾನೋ 
ವೇಷಾ ವೇಷಾ ಹಗಲು ವೇಷ ಹಗಲು ವೇಷ 
ಹಗಲು ವೇಷ ಹಗಲು ವೇಷ ಓಓಓಓಓ ಹೋಯ್ ಓಓಓಓಓ ಹೋಯ್ 

ಬಣ್ಣಗಳೆದ ಬಾಳೆ ತೋಟ ತೂಗಿ ತೊನೆದು ನಿಂದಾವೋ 
ಕಣ್ಣ ಹನಿಯ ಬಾಳಿನಾಟ ಬಿಳಿ ಹೂವೂ ಬೆಂದಾವೋ 
ವೇಷ ಹಾಕೋ ಈ ಲೋಕ ನೋವು ನಲಿವಿನ ಸಂದೂಕ 
ಹೂವಿನೊಳಗೆ ಮಕರಂದ ನಿಮ್ಮ ಒಳಗೆ ಈ ಕಂದ 
ನನ್ನದೆಂಥ ವೇಷಾನೋ ನನ್ನದೆಂತ ವೇಷಾನೋ 
ಈ ಭೂಮಿ ತಾಯಿ ಬೆಳಕಿನ ಸೀರೇ ಎಂಥ ಎಂಥ ವೇಷಾನೋ 
ಈ ಭೂಮಿ ತಾಯಿ ಬೆಳಕಿನ ಸೀರೇ ಎಂಥ ಎಂಥ ವೇಷಾನೋ 
ವೇಷಾ ವೇಷಾ ಹಗಲು ವೇಷ ಹಗಲು ವೇಷ 
ಹಗಲು ವೇಷ ಹಗಲು ವೇಷ ಓಓಓಓಓ ಹೋಯ್ ಓಓಓಓಓ ಹೋಯ್ 
-------------------------------------------------------------------------------------------

ಹಗಲು ವೇಷ (೨೦೦೦) - ಬಾರೋ ಬಾ ಬಾರೋ 
ಸಂಗೀತ: ಹಂಸಲೇಖ, ರಚನೆ:‌ ಬರಗೂರು ರಾಮಚಂದ್ರಪ್ಪ, ಗಾಯನ: ಹಂಸಲೇಖ, ಲತಾಹಂಸಲೇಖ, ರಮೇಶಚಂದ್ರ  

ಓಂ ನಾಯಕ್ ನಾಯಕ ಗಣನಾಯಕ ಶುರೂ ಮಾಡ್ತೀವಿ ನಮ್ಮ ಕಾಯಕ 
ವಿಘ್ನ ಓಡ್ಸಿ ಲಗ್ನ ಮಾಡ್ಸೋ ಗಣನಾಯಕ 
ಬಾರೋ ಬಾ  ಬಾರೋ ಶಿವ ಶಿವನೇ 
ಬಾರೋ ಬಾರೋ ಬಾ ಬಾರೋ ಪರಶಿವನೇ 
ಹಣೆಗಣ್ಣಿನ ಗೊರವ ಜಟೆರಾಯ ಗುಡಿಮಾರನ ಗುರುವೇ ಹರದೇವ 
ಹಣೆಗಣ್ಣಿನ ಗೊರವ ಜಟೆರಾಯ 
ಬಾರೋ ಬಾ  ಬಾರೋ ಶಿವ ಶಿವನೇ 
ಬಾರೋ ಬಾರೋ ಬಾ ಬಾರೋ ಪರಶಿವನೇ 

ನಾಗಲೂರ ಮೂಲೆಯಿಂದ ಮೂಲೆಯಿಂದ ದೇವಾ ಮೂಲೆಯಿಂದ 
ಮೋಡದ ಹಾದಿಯಿಂದ ಹಾದಿಯಿಂದ ದೇವಾ ಹಾದಿಯಿಂದ 
ನಡೆನಡೆದು ಬಂದೋನೇ ನಮಗಾಗಿ ನಿಂದೋನೇ 
ಕಷ್ಟಗಳ ಹೇಳಬೇಕೋ ನಮ್ಮ ಇಷ್ಟಗಳ ಪಡೀಬೇಕು ಶಿವನಿಗೂ ಹಸಿವ.. 
ಬಾರೋ ಬಾ  ಬಾರೋ ಶಿವ ಶಿವನೇ 
ಬಾರೋ ಬಾರೋ ಬಾ ಬಾರೋ ಪರಶಿವನೇ 

ಭಕುತ ಭಕುತ ಕೇಳುವಂಥವನಾಗು ಭಕುತ ನನ್ನದು ನಿನ್ನದು ಒಂದೇ ರಕುತ 
ಬಡವರ ಭವಣೆ ತೀರಿಲ್ಲಪ್ಪ ಶಿವಣ್ಣ ಆಹಾ... 
ಕೂಳೆ ಹೊಲದಾಗೆ ಬೆಳೆದ ಮೂಳೆ ಮಕ್ಕಳಾಗೋ ಯಪ್ಪಾ 
ಇಷ್ಟಾದ್ರೂ ಕಂದಾಯ ಕೊಡೋದು ತಪ್ಪಿಲ್ಲಪ್ಪಾ 
ಕಷ್ಟಗಳ ಹೇಳಬೇಕೋ ನಮ್ಮ ಇಷ್ಟಗಳ ಪಡೀಬೇಕು 
ಶಿವಪಡಿ ಬಾರೋ ಕಂದಾಯ ಶಿವಶಿವನೇ 

ಬಡವರ ಒಡಲಿನಲ್ಲಿ ಕಣ್ಣೀರ ಕಡಲು ತುಂಬಿ ಕಣ್ಣೀರ ಕಡಲು ತುಂಬಿ 
ಬಾಳೆಲ್ಲ ಮುಳುಗೈತೇತೇ ಕಷ್ಟವು ತೇಲುತೈತೆ ಕಷ್ಟವು ತೇಲುತೈತೆ 
ಏನಾದರೂ ಮಾಡಲೇ ಬೇಕೋ ಕಷ್ಟವು ನೀಗಲೇಬೇಕು 
ಆಳೋ ಅರಸರ ಮುಂದೆ ನೀನು ವರವನು ಕೊಡಬೇಕೋ  
ಆಳೋ ಅರಸರ ಮುಂದೆ ನೀನು ವರವನು ಕೊಡಬೇಕೋ 
ಸಿರಿತನಕೆ ಸೆಡ್ಡು ಹೊಡೆದು ಬಡತನವ ನೀಗುತೀನಿ ನೀಗುತೀನಿ ನೀಗುತೀನಿ 
ಆಳೋ ಒಡೆಯನ ಕರೆದು ಕಿವಿ ಹಿಂಡಿ ಹೇಳುತೀನಿ  ಕಿವಿ ಹಿಂಡಿ ಹೇಳುತೀನಿ  
ಬಡವರಿಗೆ ಭಕುತಿ ತೋರು ಬಿಡಬೇಕು ನಿಮ್ಮ ಜೋರು 
ಇರೋದಕ್ಕೆ ಒಂದು ಸೂರು ನೀನು ಕೊಡಬೇಕು ಅನ್ನ ನೀರು 
ಇರೋದಕ್ಕೆ ಒಂದು ಸೂರು ನೀನು ಕೊಡಬೇಕು ಅನ್ನ ನೀರು 
ಕಾಲ್ ಮೀ ಕಾಲ್ ಮೀ ಕಾಲ್ ಮೀ ಶಿವ ಹೌ ಕ್ಯಾನ್ ಐ ಡೂ ಮೀ ಟೆಲ್ ಮೀ ಶಿವ 
ಕನ್ನಡ ಏ ಮೂಢ ಕನ್ನಡ ಕನ್ನಡ 
ವಚನಾಮೃತ ಒಡೆಯ ಶಿವರಾಯ ಜನರಾಡುವ ಕನ್ನಡ ಸಿರಿರಾಯ 
ವಚನಾಮೃತ ಒಡೆಯ ಶಿವರಾಯ ಜನರಾಡುವ ಕನ್ನಡ ಸಿರಿರಾಯ 
ಬಾರೋ ಬಾ  ಬಾರೋ ಶಿವ ಶಿವನೇ 
ಬಾರೋ ಬಾರೋ ಬಾ ಬಾರೋ ಪರಶಿವನೇ 

ಹೇ.. ಹುರಿದ ಹುರುಳಿಯ ಕಾಳು ಜನರಾಡೋ ಮಾತನು ಕೇಳು 
ಜನರ ಮಾತಿಗೆ ಮಣಿಯೆ ಬರಗಾಲ ಬರುವುದಿಲ್ಲ 
ಸರ್ಪವು ಕಚ್ಚೋದಿಲ್ಲ ಶೂಲವು ಚುಚ್ಚೋದಿಲ್ಲ 
ಹಣೆಗಣ್ಣ ತೆರೆಯೋದಿಲ್ಲ ಈ ಜಟೆಯನು ಬಿಚ್ಚೋದಿಲ್ಲ 
ಕೇಳೋ ಇವನೇ ನಮ್ಮ ಭಕುತ ನಮ್ಮದು ಇವನದು ಒಂದೇ ರಕುತ 
ಈ ಭಕುತನ ಬವಣೆಯ ನೀಗುತೀನಿ 
ಕಷ್ಟಗಳ ಕೆಂಡಗಳ ಮ್ಯಾಲೆ ಗಂಗೆ ಹರಿಸುತೀನಿ ಹೌದಪ್ಪ ಹೌದಪ್ಪ ಹೌದಪ್ಪ  
ಬಡತನವು ಹೋಗಬೇಕು  ಹೌದಪ್ಪ ಹೌದಪ್ಪ ಹೌದಪ್ಪ 
ಕಾರುಣ್ಯ ಮರೆಯಬೇಕು  ಹೌದಪ್ಪ ಹೌದಪ್ಪ ಹೌದಪ್ಪ 
ಕಂದಾಯನ ಬಿಡಲೇಬೇಕು  ಹೌದಪ್ಪ ಹೌದಪ್ಪ ಹೌದಪ್ಪ 
ಸ್ಟಾಪ್ ಇಟ್ ಕಂದಾಯನ ಕೊಡಲೇಬೇಕು ಕಂದಾಯನ ಬಿಡಲೇಬೇಕು 
ಕಂದಾಯನ ಕೊಡಲೇಬೇಕು ಕಂದಾಯನ ಬಿಡಲೇಬೇಕು 
ಕೊಡಲೇಬೇಕು  ಬಿಡಲೇಬೇಕು ಕೊಡಲೇಬೇಕು  ಬಿಡಲೇಬೇಕು 
ಕೊಡಲೇಬೇಕು  ಬಿಡಲೇಬೇಕು ಕೊಡಲೇಬೇಕು  ಬಿಡಲೇಬೇಕು 
ಬಾರೋ ಬಾ  ಬಾರೋ ಶಿವ ಶಿವನೇ 
ಬಾರೋ ಬಾರೋ ಬಾ ಬಾರೋ ಪರಶಿವನೇ 
ಹಣೆಗಣ್ಣಿನ ಗೊರವ ಜಟೆರಾಯ ಗುಡಿಮಾರನ ಗುರುವೇ ಹರದೇವ 
ಹಣೆಗಣ್ಣಿನ ಗೊರವ ಜಟೆರಾಯ 
ಬಾರೋ ಬಾ  ಬಾರೋ ಶಿವ ಶಿವನೇ 
ಬಾರೋ ಬಾರೋ ಬಾ ಬಾರೋ ಪರಶಿವನೇ 
------------------------------------------------------------------------------------------

ಹಗಲು ವೇಷ (೨೦೦೦) - ಅನ್ನ ಇಟ್ಟ ಮನೆಗೆ 
ಸಂಗೀತ: ಹಂಸಲೇಖ, ರಚನೆ:‌ ಬರಗೂರು ರಾಮಚಂದ್ರಪ್ಪ, ಗಾಯನ:  ರಮೇಶಚಂದ್ರ  

ಅನ್ನ ಇಟ್ಟ ಮನೆಗೆ ಕನ್ನ ಹಾಕೋನಲ್ಲ ನಾನು ರನ್ನ 
ಅನ್ನ ಇಟ್ಟ ಮನೆಗೆ ಕನ್ನ ಹಾಕೋನಲ್ಲ ನಾನು ರನ್ನ 
ಕರುಳ ಕೂಸು ನಾನು ನಿಮಗೆ ನಿಜವಿದು 
ಬಳ್ಳಿ ಕಳಚಿ ಹೂವು ಅರಳಿ ನಿಲ್ಲದು 
ಬಣ್ಣದಾಗೆ ಬಾಳು ಹಡೆವ ಕನಸು ನನ್ನದು 

ಊರಿಲ್ಲದ ಸೂರಿಲ್ಲದ ಅಲೆಮಾರಿಯು ನಾನು 
ಮನೆಮಂದಿಯ ಎದೆಗೂಡಿನ ಗುಡಿ ಗಂಟೆಯು ನಾನು 
ಬರಿ ಮಾತಿನ ವರ ಕೊಟ್ಟನು ಪರ ಊರಿನ ಅರಸ 
ಬಡಿವಾರದ ಅವನೊಂದಿಗೆ ನನಗೇತಕೆ ಸರಸ 
ನೀವು ಜೋ ಜೋ ಎಂದರೇ ... ಆ ಆ ಆ ಆ ಆ ಆ ಅ  
ನೀವು ಜೋ ಜೋ ಎಂದರೆ ನನ್ನ ಜೋಳಿಗೆ ತುಂಬುವುದು 
ನಿಮ್ಮ ಮಡಿಲಾಗೆ ಮುಂಜಾನೆ ಕೋಳಿಯು ಕೂಗಿತು 
ಅನ್ನ ಇಟ್ಟ ಮನೆಗೆ ಕನ್ನ ಹಾಕೋನಲ್ಲ ನಾನು ರನ್ನ 
ಅನ್ನ ಇಟ್ಟ ಮನೆಗೆ ಕನ್ನ ಹಾಕೋನಲ್ಲ ನಾನು ರನ್ನ 
ಕರುಳ ಕೂಸು ನಾನು ನಿಮಗೆ ನಿಜವಿದು 
ಬಳ್ಳಿ ಕಳಚಿ ಹೂವು ಅರಳಿ ನಿಲ್ಲದು 
ಬಣ್ಣದಾಗೆ ಬಾಳು ಹಡೆವ ಕನಸು ನನ್ನದು 

ನೀರಿಲ್ಲದ ಕೆರೆ ಕುಂಟೆಗೆ ಬೆಲೆ ಇಲ್ಲವೋ ಎಂದೂ 
ನೀವಿಲ್ಲದೆ ನಮ್ಮ ವೇಶಕೆ ಕಳೆ ಇಲ್ಲವು ಇಂದೂ 
ಎದೆಯಾಳದೇ ಹಿರಿ ಕಣಜವು ಈ ಊರಿನ ಒಳಗೆ ಬಡ ಬಗ್ಗರೇ ಯಜಮಾನರು ..  
ಸಿರಿದ್ಯಾವರು ನನಗೆ ಊರು ಬಾ ಬಾ ಎಂದರೇ ... ಆ ಆ ಆ ಆ ಅ ಆ ಆ ಆ ಅ
ಊರು ಬಾ ಬಾ ಎಂದರೇ ಅದೇ ಬೆಳಕಿನ ತೋರಣ 
ನಿಮ್ಮ ಎದೆಯ ತುಂಬಾ ಒಲುಮೆ ತುಂಬಿ ನೋಡಿ ಕಂದನ 
ಅನ್ನ ಇಟ್ಟ ಮನೆಗೆ ಕನ್ನ ಹಾಕೋನಲ್ಲ ನಾನು ರನ್ನ 
ಅನ್ನ ಇಟ್ಟ ಮನೆಗೆ ಕನ್ನ ಹಾಕೋನಲ್ಲ ನಾನು ರನ್ನ 
ಕರುಳ ಕೂಸು ನಾನು ನಿಮಗೆ ನಿಜವಿದು 
ಬಳ್ಳಿ ಕಳಚಿ ಹೂವು ಅರಳಿ ನಿಲ್ಲದು 
ಬಣ್ಣದಾಗೆ ಬಾಳು ಹಡೆವ ಕನಸು ನನ್ನದು 
-------------------------------------------------------------------------------------------

ಹಗಲು ವೇಷ (೨೦೦೦) - ಸದಾರಮೆ ಸದಾರಮೆ 
ಸಂಗೀತ: ಹಂಸಲೇಖ, ರಚನೆ:‌ ಬರಗೂರು ರಾಮಚಂದ್ರಪ್ಪ, ಗಾಯನ: ಎಸ್.ಪಿ.ಬಿ 

ಸಸ ದದ ರರ ಮೆಮೆ ಮೆಮೆ ರರ ದದ ಸಸ 
ಮಮ ನೋನೋ ರರ ಮೆಮೆ ಮೆಮೆ ರರ ನೋನೋ ಮಮ 
ಹೇಹೇಹೇ .. ಸದಾರಮೆ ಸದಾರಮೆ ಮನೋರಮೆ ಮನೋರಮೆ 
ಸದಾರಮೆ ಸದಾರಮೆ ಮನೋರಮೆ ಮನೋರಮೆ 
ನಾನು ಬೆಟ್ಟದ ಬೆಟ್ಟದ ಕಳ್ಳ ಯಾರು ಮುಟ್ಟದ ಮುಟ್ಟದ ಮಳ್ಳ 
ನಾನು ಬೆಟ್ಟದ ಬೆಟ್ಟದ ಕಳ್ಳ ಯಾರು ಮುಟ್ಟದ ಮುಟ್ಟದ ಮಳ್ಳ 
ಆ ಪರಂಗಿಯೋರೇ ಆ ಪರಂಗಿಯೋರೇ   ಆ ಪರಂಗಿಯೋರೇ   
ಆ ಪರಂಗಿಯೋರೇ  ಪಲ್ಟಿ ಹೊಡೆದು ಜಟಿಯಾಗಿ ಹೋದರಲ್ಲೇ.. 
ಸದಾರಮೆ ಸದಾರಮೆ ಮನೋರಮೆ ಮನೋರಮೆ 
ಸದಾರಮೆ ಸದಾರಮೆ ಮನೋರಮೆ ಮನೋರಮೆ 
ಕೇಳ್ ಕೇಳ್ ಕರಿಕಥಲ ಹೋರಿ ನಾನು 
ಕೇಳ್ ಕೇಳ್ ಸಿರಿ ಮುತ್ತಿನ ಹಾರ ನೀನು 

ನಿನ್ನ ಕೆನ್ನೆಯು ಬೆಲ್ಲದ ಉಂಡೆ ನಿನ್ನ ಕಣ್ಣಲ್ಲೇ ಲೋಕವ ಕಂಡೇ 
ನಿನ್ನ ಕೆನ್ನೆಯು ಬೆಲ್ಲದ ಉಂಡೆ ನಿನ್ನ ಕಣ್ಣಲ್ಲೇ ಲೋಕವ ಕಂಡೇ 
ಮದರಂಗಿಯೋರು ಚದರಂಗಿಯೋರು ಮದರಂಗಿಯೋರು 
ಮದರಂಗಿಯೋರು ಕಾದು ಕಾದು ಮುದಿಯಾಗಿ ಹೋದರಲ್ಲೇ 
ಸದಾರಮೆ ಸದಾರಮೆ ಮನೋರಮೆ ಮನೋರಮೆ 
ಸದಾರಮೆ ಸದಾರಮೆ ಮನೋರಮೆ ಮನೋರಮೆ 
ಮಮ ನೋನೋ ರರ ಮೆಮೆ ಮೆಮೆ ರರ ನೋನೋ ಮಮ 
ಮಮ ನೋನೋ ರರ ಮೆಮೆ ಮೆಮೆ ರರ ನೋನೋ ಮಮ 

ಸರಿ ಸರಿ ಸರಿಗಮ ಪದ ಸರಿ ಸರಿ ಕಟಲಿನಿ  ಸದೈ ಸದೈ 
ನಾರಿ ನಾರಿ ನಾನು ಪರ ನಾರಿ ನಾರಿ ಸರಿಗರಿ ಸರಿಗಮ ಪದನಿಸ 
ನಾರಿ ನಾರಿ ಪರ ಪರ ನಾರಿ ನಾರಿ 
ಕೇಳ್ ಕೇಳ್ ನಾನು ಚಂದಿರ ಕಲಿಯೋ ಧೀರ 
ಕೇಳ್ ಕೇಳ್ ನಾನು ಚುಕ್ಕಿ ಲೆಕ್ಕ ಮಾಡೋ ಶೂರ 
ಕೇಳ್ ಕೇಳ್ ನಾನು ಚಂದಿರ ಕಲಿಯೋ ಧೀರ 
ಕೇಳ್ ಕೇಳ್ ನಾನು ಚುಕ್ಕಿ ಲೆಕ್ಕ ಮಾಡೋ ಶೂರ 
ಎದೆ ಬೀಗ ಹೊಡೆಯೋ ಚೋರ ಅಲ್ಲೇ ಜಾಗ ಹಿಡಿಯೋ ಮಾರ 
ಕಳ್ಳ ನೋಟಗಳಿಗೆ ಕಳ್ಳ ನೋಟಗಳಿಗೆ 
ಕಳ್ಳ ನೋಟಗಳಿಗೆ ಕಳ್ಳ ನೋಟಗಳಿಗೆ ಕಳ್ಳ ನೋಟಗಳಿಗೆ ಕಳ್ಳ ನೋಟಗಳಿಗೆ 
ಕಣ್ಣ ಹಾಕೋನ ಮುದ್ದೆಯಂತಿಯಲ್ಲೇ... ನಲ್ಲೆ ... 
ಸದಾರಮೆ ಸದಾರಮೆ ಮನೋರಮೆ ಮನೋರಮೆ 
ಸದಾರಮೆ ಸದಾರಮೆ ಮನೋರಮೆ ಮನೋರಮೆ 
ಮಮ ನೋನೋ ರರ ಮೆಮೆ ಮೆಮೆ ರರ ನೋನೋ ಮಮ 
ಮಮ ನೋನೋ ರರ ಮೆಮೆ ಮೆಮೆ ರರ ನೋನೋ ಮಮ 
------------------------------------------------------------------------------------------

ಹಗಲು ವೇಷ (೨೦೦೦) - ಮಾಯಾ ಜಿಂಕೆ 
ಸಂಗೀತ: ಹಂಸಲೇಖ, ರಚನೆ:‌ ಬರಗೂರು ರಾಮಚಂದ್ರಪ್ಪ, ಗಾಯನ: ಚಿತ್ರ , ರಮೇಶಚಂದ್ರ  

ಗಂಡು : ಮಾಯಾ ಜಿಂಕೆ ಮಾಯಾ ಜಿಂಕೆ ಮಾಯಾ ಜಿಂಕೆ ಮಾಯಾ ಜಿಂಕೆ 
ಹೆಣ್ಣು : ಮಾಯಾ ಜಿಂಕೆಯಾ ಬೆನ್ನುಯ ಹತ್ತಿ ನೀನು ಪೊದೆ 
          ಕಾಯ ಕರ್ಪೂರವಾಗಿ ನಾನು ಕರಗಿ ಹೋದೆ   ನಾನು ಕರಗಿ ಹೋದೆ 
          ಮಾಯಾ ಜಿಂಕೆ ಮಾಯಾ ಜಿಂಕೆ ಮಾಯಾ ಜಿಂಕೆ ಮಾಯಾ ಜಿಂಕೆ


ಗಂಡು : ಇಲ್ಲಿ ಹಕ್ಕಿ ಚುಕ್ಕಿಗಳೆಲ್ಲ ಹುಡುಕುತಾವೆ ಸೀತಾಮಾತೆಯ ತೋರು ಎಂದು ಕೇಳುತ್ತಾರೇ 
          ಮಾಯಾ ಜಿಂಕೆ ಮಾಯಾ ಜಿಂಕೆ ಮಾಯಾ ಜಿಂಕೆ ಮಾಯಾ ಜಿಂಕೆ
          ಮಾಯಾ ಜಿಂಕೆ ಮಾಯಾ ಜಿಂಕೆ ಮಾಯಾ ಜಿಂಕೆ ಮಾಯಾ ಜಿಂಕೆ

ಗಂಡು : ಗಾಳಿಗೆ ಗರ ಬಡಿತು ನಿಂತಲ್ಲೇ ಗಾಣ ಹರಿವ ನೀರಿನ ನದಿಯು ಮಂಜಿನ ತಾಣ 
            ಕಾಡು ಮೇಡಿನ ತುಂಬಾ ಮಾತಿಲ್ಲ ಕತೆ ಇಲ್ಲ 
            ಜಿಂಕೆಯ ಬೆನ್ನು ಹತ್ತಿ ಎತ್ತ ಪೋದೆ ಕಾಯ ಕರ್ಪೂರವಾಗಿ ಎಲ್ಲೋ ಕರಗಿ ಹೋದೆ 
            ಎಲ್ಲೋ ಕರಗಿ ಹೋದೆ  
          ಮಾಯಾ ಜಿಂಕೆ ಮಾಯಾ ಜಿಂಕೆ ಮಾಯಾ ಜಿಂಕೆ ಮಾಯಾ ಜಿಂಕೆ
          ಮಾಯಾ ಜಿಂಕೆ ಮಾಯಾ ಜಿಂಕೆ ಮಾಯಾ ಜಿಂಕೆ ಮಾಯಾ ಜಿಂಕೆ
ಹೆಣ್ಣು  : ಸುತ್ತಮುತ್ತಲಿನಾಗ ಕತ್ತಲಾ ಕಣಿವೆ 
           ಸುತ್ತಮುತ್ತಲಿನಾಗ ಕತ್ತಲಾ ಕಣಿವೆ ಎತ್ತ ನೋಡಿದರಿಲ್ಲಿ ಕೆಂಡವೋ ಬಣವೆ 
          ಮಾಯಾ ಜಿಂಕೆ ಮಾಯಾ ಜಿಂಕೆ ಮಾಯಾ ಜಿಂಕೆ ಮಾಯಾ ಜಿಂಕೆ
ಗಂಡು : ಮಾಯಾ ಜಿಂಕೆಯಾ ಬೆನ್ನುಯ ಹತ್ತಿ ನೀನು ಪೊದೆ 
          ಕಾಯ ಕರ್ಪೂರವಾಗಿ ನಾನು ಕರಗಿ ಹೋದೆ   ನಾನು ಕರಗಿ ಹೋದೆ 
          ಮಾಯಾ ಜಿಂಕೆ ಮಾಯಾ ಜಿಂಕೆ ಮಾಯಾ ಜಿಂಕೆ ಮಾಯಾ ಜಿಂಕೆ
-------------------------------------------------------------------------------------------

ಹಗಲು ವೇಷ (೨೦೦೦) - ಹೇ ತುಂಡು ನಾಡಿನ ಒಡೆಯ 
ಸಂಗೀತ: ಹಂಸಲೇಖ, ರಚನೆ:‌ ಬರಗೂರು ರಾಮಚಂದ್ರಪ್ಪ, ಗಾಯನ: ರಾಜೇಶ 

ಹೇ.. ಬಿಳಿಯ ಬಿಡು ಇಂಡಿಯಾ 
ಹೇ.. ಬಿಳಿಯ ಬಿಡು ಇಂಡಿಯಾ ಹೇ.. ತುಂಡು ನಾಡಿನ ಒಡೆಯ 
ದಾಟಿ ಬಂದನು ಬಂದನು ಗಡಿಯ 
ದಾಟಿ ಬಂದನು ಬಂದನು ಗಡಿಯ ದಂಡು ದಾಳಿಯ ಸಹಿತ 
ದುಂಡು ದಾಳಿಯ ಸಹಿತ ದಂಡು ದಾಳಿಯ ಸಹಿತ 
ಗುಂಡು ಹೊಡೆದರು ಬಂಡೆದ್ದವವೋ ನಾವು ಬಂಡೆದ್ದವೋ 
ತುಂಡು ನಾಡಿನ ಒಡೆಯ ದಾಟಿ ಬಂದನು ಬಂದನು ಗಡಿಯ 
ಹೇ.. ಬಿಳಿಯ ಬಿಡು ಇಂಡಿಯಾ ಹೇ.. ತುಂಡು ನಾಡಿನ ಒಡೆಯ 

ಚಂದಿರನ ಸೆರೆ ಹಿಡಿದು ಕಂದಗಳ ಕೊಂದರು 
ಹೊತ್ತಾರೆ ಮೂಡಣದ ಬಾಯನ್ನು ಮುಚ್ಚಿದರು  
ಹೊತ್ತಾರೆ ಮೂಡಣದ ಬಾಯನ್ನು ಮುಚ್ಚಿದರು  
ಹಿತ್ತಲ ಬಾಗಿಲಲಿ ಒಳಗೆ ಬಂದವರು 
ಕತ್ತಲಿಗೂ ನೂರೆಂಟು ಕಂದಾಯ ಹಾಕಿದರು 
ತುಂಡು ನಾಡಿನ ಒಡೆಯ ದಾಟಿ ಬಂದನು ಬಂದನು ಗಡಿಯ 
ಹೇ.. ಬಿಳಿಯ ಬಿಡು ಇಂಡಿಯಾ ಹೇ.. ತುಂಡು ನಾಡಿನ ಒಡೆಯ 

ಹಾದಿ ಬೀದಿಯ ತುಂಬಾ ಹುತ್ತಗಳ ಹೆತ್ತು 
ಹೆಡೆ ಎತ್ತಿ ಬಡಿದಾಗ ಬಡವರು ಸತ್ತರು 
ಭೂಮಿ ಬೇಕೆಂದಾಗ ಆಕಾಶ ತೋರಿದರು 
ಕನಸು ಕಾಣುವಾಗ ನಮ್ಮ ಕಣ್ಣುಗಳ ಕಿತ್ತರು 
ತುಂಡು ನಾಡಿನ ಒಡೆಯ ದಾಟಿ ಬಂದನು ಬಂದನು ಗಡಿಯ 
ಹೇ.. ಬಿಳಿಯ ಬಿಡು ಇಂಡಿಯಾ ಹೇ.. ತುಂಡು ನಾಡಿನ ಒಡೆಯ 
-------------------------------------------------------------------------------------------

No comments:

Post a Comment