1501. ಲವ್ ಮಾಕಟೆಲ್ (೨೦೨೦)



ಲವ್ ಮಾಕಟೆಲ್ ಚಲನಚಿತ್ರದ ಹಾಡುಗಳು 
  1. ಓ ಓ ಲವ್ ಆಗ್ಹೋಯ್ತಲ್ಲ!!!
  2. ಲವ್ ಯು ಚಿನ್ನ, ಲವ್ ಯು ಕಂದ,
  3. ಕಣ್ಣ ಹನಿಯೊಂದು ಕಣ್ಣಲೇ ತೂಗಿ,
  4. ಜನುಮಗಳೇ ಕಾಯುವೆ ಹೃದಯವನೆ ಹಾಸುವೆ
  5. ಮೋದಲಾ ಪ್ರೇಮಾ ಇಂದಿನಿಂದ
  6. ನೀನೇ ಎಂದಿಗೂ 
ಲವ್ ಮಾಕಟೆಲ್ (೨೦೨೦) - ಒ ಓ ಲವ್ ಆಗ್ಹೋಯ್ತಲ್ಲ!!!
ಸಂಗೀತ: ರಘು ದಿಕ್ಷೀತ, ಸಾಹಿತ್ಯ : ಅರುಣಕುಮಾರ, ಗಾಯನ : ರಘು ಧಿಕ್ಷಿತ  

ಅಯ್ಯಯ್ಯೋ ಚೇಂಜ್ ಆಗ್ಹೊಯ್ತು ನನ್ನ ಜೀವನ.
ಗೊತ್ತಾ ಈ ಸಡನ್ ಚೇಂಜ್ಗೆ ನೀನೆ ಕಾರಣ.
ಬೇಡ್ಲಿಲ್ಲ ನಾನಂತೂ ದೇವ್ರ್ಹತ್ರಾ ಇವಳನ್ನ.
ಅವನಾಗೇ ಕೊಟ್ಟ ಇಂಥ ಹೈ ಕ್ಲಾಸ್ ಬ್ಯುಟಿನಾ.
ನಿನ್ನಿಂದ ನನ್ನ ರೇಂಜು ಜಾಸ್ತಿಯಾಗಿದೆ.
ಡವ ಡವ ಡವ ನನ್ನ ಹಾರ್ಟು ಹುಚ್ಚ್ ಹಿಡ್ದಂಗ್ ಬಡ್ದಾಡಿದೆ
ಇಲ್ದೆಇರೋ ಮೀಸೆ ತಿರುಗಿಸೊ ಆಸೆಯಾಗಿದೆ.
ಏನೋ ಒಂಥರ ಹೊಸ ಫೀಲಿಂಗ್ ಸಖತ್ತಾಗಿದೆ.
ಒ ಓ ಲವ್ ಆಗ್ಹೋಯ್ತಲ್ಲ!!! ಲಡ್ಡು ಬಂದು ಬಾಯಿಗೆ ಬಿತ್ತು ನಂಬಕ್ಕಾಗ್ತಿಲ್ಲ.
ಒ ಓ ಲವ್ ಆಗ್ಹೋಯ್ತಲ್ಲ!!! ನಿಲ್ಲೋಕೆ ಎರಡೂ ಕಾಲು ಭೂಮಿ ಮೇಲಿಲ್ಲ.
ಹೊಸ ಖುಷಿ ನನ್ನೆದೆಯೊಳಗೆ ನಿನ್ನಿಂದಲೇ ಈ ಬೆಳವಣಿಗೆ.
ಸಿಹಿಯಾಗಿದೆ ನಿನ್ನ ಎಂಟ್ರಿ ನನ್ನ ಬಾಳಿಗೆ.
ಬ್ಲಾಕ್ ಅಂಡ್ ವೈಟ್ ಕಣ್ಣಿನಲ್ಲಿ ಕಲರ್ ಕಲರ್ ಡ್ರೀಮ್ಸುಚೆಲ್ಲಿ,
ಸರ್ಜಿಕಲ್ಲು ಸ್ಟ್ರೈಕೇ ನಡೆದಿದೆ ನನ್ನ ಹಾರ್ಟಲ್ಲಿ.

ಹೇಗಂತ ಹೇಳಿಕೊಳ್ಳೋದು ನನ್ನ ಲಕ್ಕನ್ನ.
ಈ ಚಿಟ್ಟೆ ಹಾರಿ ಬಂದು ಆಕ್ರಮಿಸಿದೆ ಎದೆಯನ್ನ .
ನೀ ಸಿಕ್ಕ ಸೊಕ್ಕಲೇ ಮರೆತೆ ನಾನು ನನ್ನ ಲೋಕಾನಾ.
ಯಾಕೋ ಡೌಟು ನನ್ನನು ನೀನು ಒಪ್ಪಿದ್ ನಿಜಾನಾ.
ಎಷ್ಟೋ ಹುಡುಗೀರ ಹಿಂದೆ ಬಿದ್ದು ಅಲೆದೆ ನಾ.
ನೋಡ್ಲಿಲ್ಲ ಒಬ್ಳೂ ಕೂಡ ತಿರುಗಿ ಫೇಸು ಕಟ್ಟನ್ನ.
ಭಗವಂತನ ಮೇಲೆನೇ ನಂಗ್ಯಾಕೊ ಅನುಮಾನ.
ನೀನಾಗೆ ಇಷ್ಟ ಪಟ್ಟೆ ಹೇಗೆ ನನ್ನನಾ.

ಒ ಓ ಲವ್ ಆಗ್ಹೋಯ್ತಲ್ಲ!!!
ಲಡ್ಡು ಬಂದು ಬಾಯಿಗೆ ಬಿತ್ತು ನಂಬಕ್ಕಾಗ್ತಿಲ್ಲ.
ಒ ಓ ಲವ್ ಆಗ್ಹೋಯ್ತಲ್ಲ!!!
ನಿಲ್ಲೋಕೆ ಎರಡೂ ಕಾಲು ಭೂಮಿ ಮೇಲಿಲ್ಲ.
ಹೊಸ ಖುಷಿ ನನ್ನೆದೆಯೊಳಗೆ ನಿನ್ನಿಂದಲೇ ಈ ಬೆಳವಣಿಗೆ.
ಸಿಹಿಯಾಗಿದೆ ನಿನ್ನ ಎಂಟ್ರಿ ನನ್ನ ಬಾಳಿಗೆ.
ಬ್ಲಾಕ್ ಅಂಡ್ ವೈಟ್ ಕಣ್ಣಿನಲ್ಲಿ ಕಲರ್ ಕಲರ್ ಡ್ರೀಮ್ಸು ಚೆಲ್ಲಿ,
ಸರ್ಜಿಕಲ್ಲು ಸ್ಟ್ರೈಕೇ ನಡೆದಿದೆ ನನ್ನ ಹಾರ್ಟಲ್ಲಿ.

ನಿನ್ ಹಿಂದೆ ಬೀಳ್ಳಿಲ್ಲ, ಲವ್ ಮಾಡು ಅನ್ಲಿಲ್ಲ ,
ಸಿಂಪಲ್ಲಾಗ್ ಇದ್ನಲ್ಲೆ ನಾನು.
ಹಿಂದ್ಮುಂದೆ ನೋಡ್ದೇನೆ, ಬಡಪಾಯಿ ಪ್ರೇಮಿನೇ,
ಒಪ್ಕೊಂಡೆ ಬಿಟ್ಯಲ್ಲೆ ನೀನು.
ಕೈಯಲ್ಲಿ ಕೈ ಇಟ್ಟ, ಆ ಫಸ್ಟು ಟಚ್ಚಲ್ಲೆ,
ಹೊಡ್ದಂಗೆ ಆಯ್ತಲ್ಲೆ ಶಾಕು.
ಮುಟ್ಟೋದು ನಿನ್ನನ್ನ, ಮುಟ್ದಂಗೆ ಮಿಂಚನ್ನ ,
ನಂದಲ್ಲ ನಿಂದೆ ಮಿಸ್ಟೇಕು.
ಅಂಗೈಲಿ ಅಪ್ಸರೇ ಸಿಕ್ಬಿಟ್ಟ ಹಾಗಿದೆ.
ಅದೃಷ್ಟವೇ ಬಂದು ಎದೆಯ ಬಾಗಿಲು ಬಡಿದಿದೆ‌.
ಅಂದವಾದ ಅಚ್ಚರಿ ನನ್ ಕಣ್ಮುಂದೆ ನಿಂತಿದೆ.
ಸಿಂಪಲ್ಲಾಗ್ ಇದ್ದ ಲೈಫು ಈಗ್ ಎಕ್ಕುಟ್ಟ್ ಹೋಗಿದೆ

ಒ ಓ ಲವ್ ಆಗ್ಹೋಯ್ತಲ್ಲ!!!
ಲಡ್ಡು ಬಂದು ಬಾಯಿಗೆ ಬಿತ್ತು ನಂಬಕ್ಕಾಗ್ತಿಲ್ಲ.
ಒ ಓ ಲವ್ ಆಗ್ಹೋಯ್ತಲ್ಲ!!!
ನಿಲ್ಲೋಕೆ ಎರಡೂ ಕಾಲು ಭೂಮಿ ಮೇಲಿಲ್ಲ.
ಹೊಸ ಖುಷಿ ನನ್ನೆದೆಯೊಳಗೆ ನಿನ್ನಿಂದಲೇ ಈ ಬೆಳವಣಿಗೆ.
ಸಿಹಿಯಾಗಿದೆ ನಿನ್ನ ಎಂಟ್ರಿ ನನ್ನ ಬಾಳಿಗೆ.
ಬ್ಲಾಕ್ ಅಂಡ್ ವೈಟ್ ಕಣ್ಣಿನಲ್ಲಿ ಕಲರ್ ಕಲರ್ ಡ್ರೀಮ್ಸು ಚೆಲ್ಲಿ,
ಸರ್ಜಿಕಲ್ಲು ಸ್ಟ್ರೈಕೇ ನಡೆದಿದೆ ನನ್ನ ಹಾರ್ಟಲ್ಲಿ.
-----------------------------------------------------------------------------------------------------

ಲವ್ ಮಾಕಟೆಲ್ (೨೦೨೦) - ಲವ್ ಯು ಚಿನ್ನ,
ಸಂಗೀತ: ರಘು ದಿಕ್ಷೀತ, ಸಾಹಿತ್ಯ : ರಾಘವೇಂದ್ರ ಕಾಮತ, ಗಾಯನ : ಶೃತಿ, ನಕುಲ ಅಭಯಂಕರ 

ನನ್ನಲ್ಲೇ ನೀನೂ ನಿನ್ನಲ್ಲೇ ನಾನು ಸುಮಧುರ ಈ ಸಂಗಮಾ
ಸುಮ್ಮನೆ ನಿನ್ನ ಸನಿಹ ಸಾಕು ಮನದಿ ಪೂರಾ ಸಂಭ್ರಮಾ
ನನಗೆ ಇನ್ನೂ ಜಗವೇ ನೀನು 
ನಿನ್ನಲ್ಲೇ ನಾನಾಗೋ ಸವಿಭಾವ ಈ ಪ್ರೇಮಾ
ಮೋಡಿಯ ಮಾಡೋ ಜಾದೂಗಾರ ಸಲುಗೆ ತೋರೋ ಸಾಹುಕಾರ
ಹೃದಯ ನೀನೇ ಕದ್ದ ಚೋರ ಮನಸು ಕಾಡೋ ಮಾಯಗಾರ
ಹಿತಕರ ಸುಖಕರ ನಿನ್ನ ಜೊತೆ ಪ್ರಿಯಕರ ನೀನಿರೆ ಎಲ್ಲ ಸುಖ...
ಲವ್ ಯು ಚಿನ್ನ, ಲವ್ ಯು ಕಂದ, ನನಗಿಷ್ಟ ನೀ ಲವ್ ಯು ಚಿನ್ನ!
ನನ್ನಲ್ಲೇ ನೀನೂ ನಿನ್ನಲ್ಲೇ ನಾನು ಸುಮಧುರ ಈ ಸಂಗಮಾ

ಒಂದೇ ಒಂದು ನಿಮಿಷ ನಾ ದೂರ ಇರೆನು ಒಲವೇ
ಯಾಕಾದರೂ ಹೀಗೇ ನೀ ನನ್ನನು ಸೆಳೆವೆe
ಏನೇ ಹೇಳು ಕೊಡುವೆ ನಿನ್ನ ಪ್ರೀತಿ ಮುಂದೆ ಪದವೇ
ಏನಾದರೂ ಸರಿಯೇ ನಿನಗೆಂದಿಗೂ ನಾನಿರುವೆ
ಜೊತೆಯಿರಲು ನಿನ್ನ ಮುಡುಪಾಗಿದೆ ನನ್ನ
ಈ ಜೀವನವಿನ್ನು ನಿನಗಾಗಿಯೇ... 
ಲವ್ ಯು ಕಂದ, ಲವ್ ಯು ಚಿನ್ನ, ನನಗಿಷ್ಟ ನೀ ಲವ್ ಯು ಕಂದ!
----------------------------------------------------------------------------------------------------------------

ಲವ್ ಮಾಕಟೆಲ್ (೨೦೨೦) - ಕಣ್ಣ ಹನಿಯೊಂದು ಕಣ್ಣಲೇ ತೂಗಿ,
ಸಂಗೀತ: ರಘು ದಿಕ್ಷೀತ, ಸಾಹಿತ್ಯ : ರಾಘವೇಂದ್ರ ಕಾಮತ, ಗಾಯನ : ರಘು ಧಿಕ್ಷಿತ 

ಕಣ್ಣ ಹನಿಯೊಂದು ಕಣ್ಣಲೇ ತೂಗಿ, ಏಕೆ ಹೀಗೊಂದು ಭಾರ ಎದೆಯೊಳಗೆ 
ಸಣ್ಣ ಸನ್ನೇ ನೀಡದೇ, ನೋವು ತುಂಬಿ ತೂರಿದೆ ವಿಧಿಯೇ ಯಾವುದೀ ಹಣೆಬರಹ
ಕಣ್ಣ ಹನಿಯೊಂದು ಕಣ್ಣಲೇ ತೂಗಿ, ಏಕೆ ಹೀಗೊಂದು ಭಾರಎದೆಯೊಳಗೆ

ಚಿಗುರೊಡೆದ ಪ್ರೀತಿಗೆ ಹಾಲೆರೆದ ರೀತಿಗೆ ಕುಡಿಯೊಡೆಸಿ ನೀ ಚಿವುಟಿದೆ
ಸೋಂಕಿರುವ ಕಾಲವೇ ತಡಮಾಡು ನಿನ್ನನೇ ಚಿಗುತಿರಲು ಇನ್ನೂ ಕನಸಿವೆ
ಆಸೆಯೂ ತೀರದೆ ಆಸರೆ ಕಾಣದೆ ದಿನಗಳು ಸಾಗದೆ ನಿಂತಲೇ ನಿಂತಿವೆ
ಕಾಣದ ಕಡಲಿಗೆ ಕನಸಿವು ಜಾರಿದೆ 
ಕಣ್ಣ ಹನಿಯೊಂದು ಕಣ್ಣಲೇ ತೂಗಿ, ಏಕೆ ಹೀಗೊಂದು ಭಾರ ಎದೆಯೊಳಗೆ

ನನ್ನದೆಲ್ಲ ನಾಳೆಗೆ ನಾ ಮಾಡಲಾರೆನೇ ನೀನಿಲ್ಲದ ಕಲ್ಪನೆ
ಕಾಪಾಡೋ ದೇವರೇ ಕೈಬಿಟ್ಟು ಹೋದರೇ ನಾನೇನು ಮಾಡಬಲ್ಲೆನೇ
ಕನಲಿದ ದಿನಗಳು ನಿಂತರೂ ಕೂತರೂ ಕುಸಿಯುವ ಭಾವನೆ ಎಲ್ಲಿಯೇ ಹೋದರೂ
ಭಯದಲೇ ಸಾಗುವೆ ಸಾವಿನ ಅಂಚಿಗೆ 
ಕಣ್ಣ ಹನಿಯೊಂದು ಕಣ್ಣಲೇ ತೂಗಿ, ಏಕೆ ಹೀಗೊಂದು ಭಾರ ಎದೆಯೊಳಗೆ
ಸಣ್ಣ ಸನ್ನೇ ನೀಡದೇ, ನೋವು ತುಂಬಿ ತೂರಿದೆ ವಿಧಿಯೇ ಯಾವುದೀ ಹಣೆಬರಹ
ಕಣ್ಣ ಹನಿಯೊಂದು ಕಣ್ಣಲೇ ತೂಗಿ, ಏಕೆ ಹೀಗೊಂದು ಭಾರ ಎದೆಯೊಳಗೆ
----------------------------------------------------------------------------------------------------------------

ಲವ್ ಮಾಕಟೆಲ್ (೨೦೨೦) - ಜನುಮಗಳೇ ಕಾಯುವೆ ಹೃದಯವನೆ ಹಾಸುವೆ
ಸಂಗೀತ: ರಘು ದಿಕ್ಷೀತ, ಸಾಹಿತ್ಯ : ರಾಘವೇಂದ್ರ ಕಾಮತ, ಗಾಯನ : ನಕುಲ ಅಭಯಂಕರ 

ಜನುಮಗಳೇ ಕಾಯುವೆ ಹೃದಯವನೆ ಹಾಸುವೆ
ಸಮಯದ ಕೊನೆಯಲಿ ನಿನ್ನದೇ ಜೊತೆಯಲಿ
ಪ್ರೀತಿಯ ಹಾಡನು ಹಾಡುವೆ ಮನಸಿನ ಕಿಡಿಗೆ
ಮಳೆಯು ನೀ ಸುರಿಸು ಬಾ ತಣಿಸು ಬಾ ಜೀವವೇ ಮರಳಿ ಬಾ
ಜನುಮಗಳೇ ಕಾಯುವೆ ಹೃದಯವನೆ ಹಾಸುವೆ

ಮರೆತು ಹೋಗದೆ ನನ್ನ ಮನ್ನಿಸು ಎಂದಿದೆ ಮನ
ಸನಿಹ ನನ್ನ ಕಾಣದೆ ನಿನ್ನ ನೆನಪು ನಿನ್ನದೇ ದಿನ
ಶೂನ್ಯವೇ ಕಂಡಿದೆ ಎಲ್ಲೂ ಸೋತೆನು ಬಾಳಲಿ ನಾನು
ಕನಸೇ ನೀನು ಕ್ಷಮಿಸಲೇನು ಒಂದೊಮ್ಮೆ ಎದುರು ನಿಲ್ಲು
ಸೊರಗಿದೆ ಜೀವನ ಸಾಯದೆ ಪ್ರತಿ ಕ್ಷಣ
ಯಾವುದೀ ಬಂಧನ ಬಿಡಿಸು ಬಾ ಕಾಣಳುವ ಕಂಪನ 
ತಾಳದೆ ಹೊಡೆಣ ಕಾಡದೇ ಕೊಲ್ಲದೆ ಮರಳಿ ಬಾ
ಜನುಮಗಳೇ ಕಾಯುವೆ ಹೃದಯವನೆ ಹಾಸುವೆ
----------------------------------------------------------------------------------------------------------------

ಲವ್ ಮಾಕಟೆಲ್ (೨೦೨೦) - ಮೋದಲ ಪ್ರೇಮ ಇಂದಿನಿಂದ
ಸಂಗೀತ: ರಘು ದಿಕ್ಷೀತ, ಸಾಹಿತ್ಯ : ಅರುಣಕುಮಾರ, ಗಾಯನ : ಅಶ್ವಿನ ಶರ್ಮ 

ಕಾಲೆದ್ಹೋದೆ ಸುಮ್ಮನೆ ನೋಡುತ್ತಾ ನಿನ್ನನೆ
ಮರೆತೋಗಿರೋ ಹಾಗಿದೆ ನಾ ನನ್ನನೆ
ಆ ಚಂದ್ರಗಿಂತ ನೀ ಎಷ್ಟೋಂದು ಸುಂದರ
ನಾಗು ಮುಖದ ನವಿಲ ಕಂಡ ಸಡಗರ
ಯಾಕೀಗ ಈ ತರಾ ತುಂಬಾ ಭಯಂಕರ
ಟೆನ್ಶನ್ನು ಕೋಟ್ಲು ನೋಡ್ ನೋಡ್ತಾನೆ
ಒಳಗೆನೊ ಒಂಥರಾ ಹೀಗಾದ ನಂಥರ
ನಾನು ನಾನಗಿಲ್ಲಾ ನನ್ನಾಣೆ 
ಒಂದೆ ಸಲಾ ಕೋಲಹಾಲ ಈ ನನ್ನಾ ಎದೆಯೆಲ್ಲಿ
ಕಳೆದೋಗಿದೆ ನನ್ನಾ ಎದೆ ಬರಿ ಇವಳಾ ಗುಂಗಲ್ಲಿ
ಒಂದೆ ಸಲಾ ಕೋಲಹಾಲ ಈ ನನ್ನಾ ಎದೆಯೆಲ್ಲಿ
ಕಳೆದೋಗಿದೆ ನನ್ನಾ ಎದೆ ಬರಿ ಇವಳಾ ಗುಂಗಲ್ಲಿ
ಮೋದಲ ಪ್ರೇಮ ಇಂದಿನಿಂದ
ಹಾಡು ಬಂತು ಹಾರ್ಟಿನಿಂದ ಅಲ್ಲಿಗೆ
ಹಾಳಾದೆ ಮೆಲ್ಲಗೆ, ಫ್ಲಾಟ್ ಆದೆ ಇವಳಿಗೆ
ಬಿದ್ದೆ ಪ್ರೀತಿಯ ಹಳ್ಳಕೆ ನಾನಾಗೆ

ಮೋದಲಾ ಪ್ರೇಮಾ ಇಂದಿನಿಂದ
ಹಾಡು ಬಂತು ಹಾರ್ಟಿನಿಂದ ಅಲ್ಲಿಗೆ
ಹಾಳಾದೆ ಮೆಲ್ಲಗೆ, ಫ್ಲಾಟ್ ಆದೆ ಇವಳಿಗೆ
ಬಿದ್ದೆ ಪ್ರೀತಿಯ ಹಳ್ಳಕೆ ನಾನಾಗೆ

ಹಾಯಾಗಿ ಇದ್ದ ಮುಗ್ಧ ಹುಡುಗನ್ನ ಬಿಡದಂಗೆ ಕಾಡೋದು ನ್ಯಾಯಾನಾ?
ಸೈಲೆಂಟಾಗ್ ಸೋತೆ ಯಾಮಾರಿ ಇಷ್ಟ ಪಟ್ಟೆ ಸ್ವಲ್ಪ ಮಿತಿ ಮೀರಿ
ತೇಲೊದೆ ತಂಗಾಳಿಯೆಲ್ಲಿ ಏನೆಂದು ಹೇಳಲಿ ಈ ಟೈಮ್ ಅಲ್ಲಿ?
ಇರು ಜೊತೆ ನೀ ಇದೆ ಲೈಫ್ ಅಲ್ಲಿ ಒಂದೇ ಸಲ ಕೋಲಹಾಲ
ಈ ನನ್ನಾ ಎದೆಯೆಲ್ಲಿ ಕಳೆದೋಗಿದೆ ನನ್ನಾ ಎದೆ ಬರಿ ಇವಳಾ ಗುಂಗಲ್ಲಿ
ಒಂದೆ ಸಲಾ ಕೋಲಹಾಲ ಈ ನನ್ನಾ ಎದೆಯೆಲ್ಲಿ ಕಳೆದೋಗಿದೆ ನನ್ನಾ ಎದೆ
ಬರಿ ಇವಳಾ ಗುಂಗಲ್ಲಿ
ಮೋದಲಾ ಪ್ರೇಮಾ ಇಂದಿನಿಂದ ಹಾಡು ಬಂತು ಹಾರ್ಟಿನಿಂದ ಅಲ್ಲಿಗೆ
ಹಾಳಾದೆ ಮೆಲ್ಲಗೆ,ಫ್ಲಾಟ್ ಆದೆ ಇವಳಿಗೆ ಬಿದ್ದೆ ಪ್ರೀತಿಯ ಹಳ್ಳಕೆ ನಾನಾಗೆ
ಮೋದಲಾ ಪ್ರೇಮಾ ಇಂದಿನಿಂದ ಹಾಡು ಬಂತು ಹಾರ್ಟಿನಿಂದ ಅಲ್ಲಿಗೆ
ಹಾಳಾದೆ ಮೆಲ್ಲಗೆ,ಫ್ಲಾಟ್ ಆದೆ ಇವಳಿಗೆ ಬಿದ್ದೆ ಪ್ರೀತಿಯ ಹಳ್ಳಕೆ ನಾನಾಗೆ
----------------------------------------------------------------------------------------------------------------

ಲವ್ ಮಾಕಟೆಲ್ (೨೦೨೦) - ನೀನೆ ಎಂದಿಗೂ
ಸಂಗೀತ: ರಘು ದಿಕ್ಷೀತ, ಸಾಹಿತ್ಯ : ಅರುಣಕುಮಾರ, ಗಾಯನ : ಅಶ್ವಿನ ಶರ್ಮ 

ಈ ಕನಸಲಿ ದಿನವೂ ಸುರಿಸಿದೆ ಒಲವು ನಗುತಲಿ ನೀನು
ಈ ಮನಸಲಿ ನಲಿವು ಬದುಕಲಿ ಗೆಲುವು ತರುತಲಿ ನೀನು
ಉಸಿರೇ ನನದಾಗಿ ನೀ ಇರುವೆ ಹಾಗೆ
ಕೊರಳಾ ಧನಿಯಾಗಿ ನನ್ನ ಹಾಡಾಗುವೆ
ನನ್ನ ಸ್ನೇಹ ನನ್ನ ಪ್ರೇಮ ನನ್ನ ಪ್ರೀತಿ ನೀನೆ
ನನ್ನ ಜೀವ ನನ್ನ ಭಾವ  ನನ್ನ ಲೋಕ ನೀನೆ ಎಂದಿಗೂ

ಈ ಒಡಲಲಿ ಮಿಡಿತ ಹೃದಯದ ಬಡಿತ ತುಡಿತವ ನೀನು
ಈ ಎದೆಯಲಿ ಸೆಳೆತ ಒಲವಿನ ಮೊರೆತ ಸ್ಮರಣೆಯು ನೀನು
ಒಲವ ವರವಾಗಿ ಬಂದಿರುವ ಹಾಗೆ ಜನುಮ ನನದೆಲ್ಲ ನಿನದಾಗಿದೆ
ನನ್ನ ಸ್ನೇಹ ನನ್ನ ಪ್ರೇಮ ನನ್ನ ಪ್ರೀತಿ ನೀನೆ ನನ್ನ ಜೀವ ನನ್ನ ಭಾವ
ನನ್ನ ಲೋಕ ನೀನೆ ಎಂದಿಗೂ

ನೋವಿಗೆ ನಗುವ ತರುವೆ ನೀನು ಕತ್ತಲಲಿ ಬೆಳಕ ತರುವೆ ನೀನು
ನನ್ನಾಸೆಯ ಅರಿವು ನೀನು ನೀನಾಗಿರುವೆ ನನ್ನ ನಿಲುವು
ನನ್ನ ಪ್ರೀತಿ ನನ್ನ ಕೀರ್ತಿ ಮನ ಶಾಂತಿ ನೀನೆ
ನನ್ನ ಧೈರ್ಯ ನನ್ನ ಸ್ತಯ್ರ್ಯ ಐಶ್ವರ್ಯ ನೀನೆ
ನನ್ನ ಮಾನ ನನ್ನ ಪ್ರಾಣ ಸನ್ಮಾನ ನೀನೆ
ನನ್ನ ಮೌನ ನನ್ನ ಧ್ಯಾನ ಸನ್ಮಾರ್ಗ ನೀನೆ ಎಂದಿಗೂ
----------------------------------------------------------------------------------------------------------------

No comments:

Post a Comment