1509. ನಲ್ಲ (೨೦೦೪)

ನಲ್ಲ ಚಲನಚಿತ್ರದ ಹಾಡುಗಳು 
  1. ಮಲಗೆ ಮಲಗೆ ಗುಬ್ಬಿ ಮರಿ ಕೊಡಿಸುವೆ ನಿನಗೆ ತುತ್ತೂರಿ
  2. ಒಂದಾನೊಂದು ಕಾಲದಲ್ಲಿ ಭೂಮಿ ಮೇಲೆ ದೇವರು 
  3. ಮಚ್ಚಾ ಡವ್ ಹೊಡಿಯೋದ್ ಹೆಂಗಂತ್ ಹೇಳಿಕೊಡು 
  4. ಹುಚ್ಚೂ ಪ್ರೀತಿಯನ್ನೂ ಹಚ್ಚಿಕೊಂಡ ನಲ್ಲ 
  5. ಗಪ್ ಚುಪ್ ಪ್ರಣಯದ ರಾಗ 
  6. ಹುಡುಗ ಎಲ್ಲಿ ನೀನು ಹುಡುಗಾಟ ಸಾಕಿನ್ನು 
  7. ಮಲ್ಲಿಗೆ ಮಲ್ಲಿಗೆ ಮೇಡಮ್ಮೂ 
ನಲ್ಲ (೨೦೦೪) - ಮಲಗೆ ಮಲಗೆ ಗುಬ್ಬಿ ಮರಿ ಕೊಡಿಸುವೆ ನಿನಗೆ ತುತ್ತೂರಿ
ಸಂಗೀತ : ವೆಂಕಟನಾರಾಯಣ  ಸಾಹಿತ್ಯ : ವಿ. ನಾಗೇಂದ್ರ ಪ್ರಸಾದ, ಗಾಯನ : ರಾಜೇಶ್ ಕೃಷ್ಣನ್

ಮಲಗೆ ಮಲಗೆ ಗುಬ್ಬಿ ಮರಿ ಕೊಡಿಸುವೆ ನಿನಗೆ ತುತ್ತೂರಿ
ಮನೆ ದೇವರಾಣೆ ನೆರಳಾಗುತೀನಿ
ಹೆಸರಿಲ್ಲದಿರೋ ಬಂಧುವೇ ಜನುಮಾಂತರದ ಬಂಧವೇ
ಆರಾರೋ ಆರಿರಾರೋ ಆರಾರೋ ಆರಿರಾರೋ
ಆರಾರೋ ಆರಿರಾರೋ ಆರಾರೋ ಆರಿರಾರೋ
ಮಲಗೆ ಮಲಗೆ ಗುಬ್ಬಿ ಮರಿ ಕೊಡಿಸುವೆ ನಿನಗೆ ತುತ್ತೂರಿ
ಮನೆ ದೇವರಾಣೆ ನೆರಳಾಗುತೀನಿ
ಹೆಸರಿಲ್ಲದಿರೋ ಬಂಧುವೇ ಜನುಮಾಂತರದ ಬಂಧವೇ
ಆರಾರೋ ಆರಿರಾರೋ ಆರಾರೋ ಆರಿರಾರೋ
ಆರಾರೋ ಆರಿರಾರೋ ಆರಾರೋ ಆರಿರಾರೋ

ಆ ಬ್ರಹ್ಮ ತೋಚಿದ್ದು ಗೀಚುತ್ತಾನಮ್ಮ ಆ ಮರ್ಮ ಬಲ್ಲೋರು ಇಲ್ಲಿ ಯಾರಮ್ಮ
ಇಲ್ಲಿ ಹುಟ್ಟಿದಂತ ನಮಗೆಲ್ಲ ಸ್ವರ್ಗ ಮೇಲಂತೆ ಮೇಲೆ ಎಲ್ಲೋ ಇರುವ ದೇವರಿಗೆ ಇಲ್ಲಿ ಗುಡಿಯಂತೆ
ಇಲ್ಲಿ ಹುಟ್ಟಿದಂತ ನಮಗೆಲ್ಲ ಸ್ವರ್ಗ ಮೇಲಂತೆ ಮೇಲೆ ಎಲ್ಲೋ ಇರುವ ದೇವರಿಗೆ ಇಲ್ಲಿ ಗುಡಿಯಂತೆ
ಚಿತ್ರ ವಿಚಿತ್ರ ಕಣೆ ಲೋಕವೇ
ಆರಾರೋ ಆರಿರಾರೋ ಆರಾರೋ ಆರಿರಾರೋ
ಆರಾರೋ ಆರಿರಾರೋ ಆರಾರೋ ಆರಿರಾರೋ
ಮಲಗೆ ಮಲಗೆ ಗುಬ್ಬಿ ಮರಿ ಕೊಡಿಸುವೆ ನಿನಗೆ ತುತ್ತೂರಿ
ಮನೆ ದೇವರಾಣೆ ನೆರಳಾಗುತೀನಿ

ಬಾಳಲ್ಲಿ ನೋವೆಮ್ಬುದೆಲ್ಲ ಮಾಮೂಲಿ ನಾವಿಲ್ಲಿ ಗೆಲ್ಲೋದು ನಮ್ಮ ಕೈಯಲ್ಲಿ
ಸಿಹಿ ಕನಸುಗಳು ಬರಲಿ ಎಂದು ಲಾಲಿ ಹಾಡುವೆ
ಈ ಬಡವ ಕೊಟ್ಟ ಕೈಯಲ್ಲಿ ತುತ್ತು ಮರೆಯಬೇಡವೆ
ಸಿಹಿ ಕನಸುಗಳು ಬರಲಿ ಎಂದು ಲಾಲಿ ಹಾಡುವೆ
ಈ ಬಡವ ಕೊಟ್ಟ ಕೈಯಲ್ಲಿ ತುತ್ತು ಮರೆಯಬೇಡವೆ
ಲಾಭಾನ ಕೇಳೋದಿಲ್ಲ ಲಾಲಿ ಎಂದು
ಆರಾರೋ ಆರಿರಾರೋ ಆರಾರೋ ಆರಿರಾರೋ
ಆರಾರೋ ಆರಿರಾರೋ ಆರಾರೋ ಆರಿರಾರೋ
ಮಲಗೆ ಮಲಗೆ ಗುಬ್ಬಿ ಮರಿ ಕೊಡಿಸುವೆ ನಿನಗೆ ತುತ್ತೂರಿ
ಮನೆ ದೇವರಾಣೆ ನೆರಳಾಗುತೀನಿ ಹೆಸರಿಲ್ಲದಿರೋ ಬಂಧುವೇ ಜನುಮಾಂತರದ ಬಂಧವೇ
ಆರಾರೋ ಆರಿರಾರೋ ಆರಾರೋ ಆರಿರಾರೋ
ಆರಾರೋ ಆರಿರಾರೋ ಆರಾರೋ ಆರಿರಾರೋ
-------------------------------------------------------------------------------------------------------------

ನಲ್ಲ (೨೦೦೪) - ಒಂದಾನೊಂದು ಕಾಲದಲ್ಲಿ ಭೂಮಿ ಮೇಲೆ ದೇವರು 
ಸಂಗೀತ - ವೆಂಕಟನಾರಾಯಣ,  ಸಾಹಿತ್ಯ :  ವಿ. ನಾಗೇಂದ್ರ ಪ್ರಸಾದ, ಗಾಯನ : ಶ್ರೀನಿವಾಸ, ಲಕ್ಷ್ಮಿ 

ಒಂದಾನೊಂದು ಕಾಲದಲ್ಲಿ ಭೂಮಿ ಮೇಲೆ ದೇವರು 
ಪ್ರೀತಿಯನ್ನು ಸೃಷ್ಟಿ ಮಾಡಿ ಬಿಟ್ಟು ಹೋದ ಕೊಟ್ಟು ಹೋದ 
ಗಂಡು ಹೆಣ್ಣು ಸೇರಿಕೊಂಡು ಹಂಚಿಕೊಳ್ಳಿ ಎಲ್ಲರು 
ಪ್ರೀತಿಯೇ ದೇವರು ಎನ್ನುತ್ತಾ ಮೇಲೆ ಹೋದ 

ನಿಜನಾ ನಿಜನಾ ಈ ಪ್ರೀತಿ ನಿಜನಾ 
ನಿಜನಾ ನಿಜನಾ ಈ ಪ್ರೀತಿ ನಿಜನಾ ಹೇಳೇ 
ನೀನೇನಾ ನೀನೇನಾ ನನ್ನೊಳು ನೀನೇನಾ ನಾಳೆ 
ನೀನೇನಾ ನೀನೇನಾ ನನ್ನೊಳು ನೀನೇನಾ ನಾಳೆ 
ಮನಸೆಂಬ ಉರಳಿ ಪ್ರೇಮಾನೇ ತುಂತುರೂ 
ನನ್ನ ಹೃದಯನೇ ನನಗೆ ಹೇಳ್ದೆನೇ ನಿಂಗ್ಯಾರೂ ಕೊಟ್ಟರು 
ನನ್ನ ಹೃದಯನೇ ನನಗೆ ಹೇಳ್ದೆನೇ ನಿಂಗ್ಯಾರೂ ಕೊಟ್ಟರು 
ಒಂದಾನೊಂದು ಕಾಲದಲ್ಲಿ ಭೂಮಿ ಮೇಲೆ ದೇವರು 
ಪ್ರೀತಿಯನ್ನು ಸೃಷ್ಟಿ ಮಾಡಿ ಬಿಟ್ಟು ಹೋದ ಕೊಟ್ಟು ಹೋದ 
ಗಂಡು ಹೆಣ್ಣು ಸೇರಿಕೊಂಡು ಹಂಚಿಕೊಳ್ಳಿ ಎಲ್ಲರು 
ಪ್ರೀತಿಯೇ ದೇವರು ಎನ್ನುತ್ತಾ ಮೇಲೆ ಹೋದ 
 
ಹೇಗೋ ಶುರುವಾಯ್ತು ಪ್ರೀತಿ ಬಿದಿರೂ ಕೊಳಲಾಗುವ ರೀತಿ 
ಪ್ರೀತಿ ಎನ್ನೋದು ಹುಚ್ಚು ಕಣೋ ಎಲ್ಲರಗೂ ಅಚ್ಚು ಮೆಚ್ಚು ಕಣೋ 
ನೀನೇ ಸಂಗಾತಿ ಅಂತ ಮನಸು ಹೇಳುತ್ತಿದೆ ಗೋತ್ತಾ  
ನೆರಳಿನಲಿ ನನ್ನ ರೂಪ ಕಂಡೆಯೇನೂ 
ಕನ್ನಡಿಯಲ್ಲಿ ನನ್ನ ಬಿಂಬ ಬಂದಿತ್ತೇನೂ 
ನನ್ನ ಚೆಲುವೇ ಭೂಮಿಯನ್ನೇ ನಿಂಬೆ ಮಾಡಿ ದೃಷ್ಟಿ ತೆಗೆವೇ 
ಒಂದಾನೊಂದು ಕಾಲದಲ್ಲಿ ಭೂಮಿ ಮೇಲೆ ದೇವರು 
ಪ್ರೀತಿಯನ್ನು ಸೃಷ್ಟಿ ಮಾಡಿ ಬಿಟ್ಟು ಹೋದ ಕೊಟ್ಟು ಹೋದ 
ಗಂಡು ಹೆಣ್ಣು ಸೇರಿಕೊಂಡು ಹಂಚಿಕೊಳ್ಳಿ ಎಲ್ಲರು 
ಪ್ರೀತಿಯೇ ದೇವರು ಎನ್ನುತ್ತಾ ಮೇಲೆ ಹೋದ 
ನಿಜನಾ ನಿಜನಾ ಈ ಪ್ರೀತಿ ನಿಜನಾ 
ನಿಜನಾ ನಿಜನಾ ಈ ಪ್ರೀತಿ ನಿಜನಾ ಹೇಳೇ 

ನನ್ನ ಬರವಣಿಗೆಯ ನೋಡು ನಿನ್ನ ಮೆರವಣಿಗೆಯ ಹಾಡು 
ನಲ್ಲ ಈ ಪ್ರೀತಿ ಗೆಲ್ಲಿಸಿಕೋ ಪ್ರೇಮ ಧ್ವಜನಾ ಹಾರಿಸಿಕೋ 
ಪ್ರೀತಿ ಜಲಧರೆ ನೀನು ಕೇಳೋ ಬರಿಗೈ ದೊರೆ ನಾನು 
ಹೆಜ್ಜೆ ಗುರುತೂ ನಿನ್ನ ಹೆಜ್ಜೆ ನನ್ನದೇನೂ 
ಹಗಲಿನಲೂ ನನ್ನ ಕನಸು ಕಂಡೆಯೇನೂ 
ನನ್ನ ಒಲವೇ ಆಕಾಶನೇ ಕೊಡೆಯ ಮಾಡಿ ನೆರಳು ಕೊಡುವೇ 
ಒಂದಾನೊಂದು ಕಾಲದಲ್ಲಿ ಭೂಮಿ ಮೇಲೆ ದೇವರು 
ಪ್ರೀತಿಯನ್ನು ಸೃಷ್ಟಿ ಮಾಡಿ ಬಿಟ್ಟು ಹೋದ ಕೊಟ್ಟು ಹೋದ 
ಗಂಡು ಹೆಣ್ಣು ಸೇರಿಕೊಂಡು ಹಂಚಿಕೊಳ್ಳಿ ಎಲ್ಲರು 
ಪ್ರೀತಿಯೇ ದೇವರು ಎನ್ನುತ್ತಾ ಮೇಲೆ ಹೋದ 
ನಿಜನಾ ನಿಜನಾ ಈ ಪ್ರೀತಿ ನಿಜನಾ 
ನಿಜನಾ ನಿಜನಾ ಈ ಪ್ರೀತಿ ನಿಜನಾ ಹೇಳೇ 
ನೀನೇನಾ ನೀನೇನಾ ನನ್ನೊಳು ನೀನೇನಾ ನಾಳೆ 
ನೀನೇನಾ ನೀನೇನಾ ನನ್ನೊಳು ನೀನೇನಾ ನಾಳೆ 
ಮನಸೆಂಬ ಉರಳಿ ಪ್ರೇಮಾನೇ ತುಂತುರೂ 
ನನ್ನ ಹೃದಯನೇ ನನಗೆ ಹೇಳ್ದೆನೇ ನಿಂಗ್ಯಾರೂ ಕೊಟ್ಟರು 
ನನ್ನ ಹೃದಯನೇ ನನಗೆ ಹೇಳ್ದೆನೇ ನಿಂಗ್ಯಾರೂ ಕೊಟ್ಟರು 
ಒಂದಾನೊಂದು ಕಾಲದಲ್ಲಿ ಭೂಮಿ ಮೇಲೆ ದೇವರು 
ಪ್ರೀತಿಯನ್ನು ಸೃಷ್ಟಿ ಮಾಡಿ ಬಿಟ್ಟು ಹೋದ ಕೊಟ್ಟು ಹೋದ 
ಗಂಡು ಹೆಣ್ಣು ಸೇರಿಕೊಂಡು ಹಂಚಿಕೊಳ್ಳಿ ಎಲ್ಲರು 
ಪ್ರೀತಿಯೇ ದೇವರು ಎನ್ನುತ್ತಾ ಮೇಲೆ ಹೋದ 
-----------------------------------------------------------------------------------------------------

ನಲ್ಲ (೨೦೦೪) - ಮಚ್ಚಾ ಡವ್ ಹೊಡಿಯೋದ್ ಹೆಂಗಂತ್ ಹೇಳಿಕೊಡು 
ಸಂಗೀತ - ವೆಂಕಟನಾರಾಯಣ,  ಸಾಹಿತ್ಯ :  ವಿ. ನಾಗೇಂದ್ರ ಪ್ರಸಾದ, ಗಾಯನ : ರಾಜೇಶ ಕೃಷ್ಣನ 

ಮಚ್ಚ್ ಡವ್ ಹೊಡಿಯೋದ್ ಹೆಂಗಂತ್ ಹೇಳ್ಕಡೋ 
ಮಚ್ಚ್ ಕಾಳ ಹಾಕೋದ್ ಹೆಂಗಂತ್ ಹೇಳ್ಕಡೋ 
ಮಚ್ಚ್ ಡವ್ ಹೊಡಿಯೋದ್ ಹೆಂಗಂತ್ ಹೇಳ್ಕಡೋ 
ಮಚ್ಚ್ ಕಾಳ ಹಾಕೋದ್ ಹೆಂಗಂತ್ ಹೇಳ್ಕಡೋ 
ಅವಳು ಹತ್ರ ಬಂದ್ರೇ ಮೀಟರೂ ಆಫ್ ಆಗುತ್ತೇ 
ಅವಳೂ ನಗ್ತಾ ಇದ್ರೇ ಕ್ವಾಟರೂ ಕುಡದಂಗೈತೇ 
ತಮಿಳು ಐಟಂ ಎತ್ತಕೊಂಡ ಇಲ್ಲ ತೆಲಗು ಮಾಲು ಕ್ಯಾಚ್ ಹಾಕೊಂಡ್ 
ಮರಾಠಿ ಮೊಗ್ಗು ಎಳ್ದಕೊಂಡ ಇಲ್ಲಾ ಮಲಯಾಳಿ ಕುಟ್ಟಿನಾ ಕ್ಯಾಚ್ ಹಾಕೊಂಡ್ 
ಅದ್ಯಾವುದೂ ಅಲ್ಲ ಕಣ್ಣರೋ ಕಸ್ತೂರಿ ಕನ್ನಡದ್ದೂ 
ಮಚ್ಚ್ ಡವ್ ಹೊಡಿಯೋದ್ ಹೆಂಗಂತ್ ಹೇಳ್ಕಡೋ 
ಮಚ್ಚ್ ಕಾಳ ಹಾಕೋದ್ ಹೆಂಗಂತ್ ಹೇಳ್ಕಡೋ 
  
ಮೊದ್ಲು ರೋಜಾ ಹೂವೂ ಅವ್ಳ ಕೈಲಿ ಇಟ್ಟಬಿಡೂ 
ಹಾಂ... ಮುಂದೇಳು... ಮುಂದೇಳು 
ನಿನ್ನ ಲವ್ ವಿಷ್ಯ ಬ್ಲಡಲ್ಲಿ ಬರಕೋದು ಇದು ಎಲ್ ಕೆ ಜಿ ಮಕ್ಕಳದೂ ಐಡಿಯಾ 
ಹೊಸ ಸ್ಟೈಲಲ್ಲಿ ಲವ್ ಮಾಡಬೇಕಯ್ಯಾ 
ಈ ಹುಡುಗೀರೂ ಹಿಂಗ್ಯಾಕ್ ಹೇಳ್ ಗುರೂ  
ಇಷ್ಟೇ ಬಿಸ್ಕಟ್ಟು ಹಾಕಿದ್ರೂ ಬೀಳರೂ 
ಏನಾದ್ರೂ ಐಡಿಯಾ ಕೊಡ್ರೋ ಗುಬಾಲ್ಡ್ಸ್ 
ಕನ್ನಡ ಹುಡುಗಿ ಕಷ್ಟ ಗುರು ಬ್ಯಾರೇ ಇದ್ರೆ ನೋಡ್ಕೋ ಗುರೂ 
ಕನ್ನಡ ಹುಡುಗಿ ಕಷ್ಟ ಗುರು ಬ್ಯಾರೇ ಇದ್ರೆ ನೋಡ್ಕೋ ಗುರೂ 
ಮಚ್ಚ್ ಡವ್ ಹೊಡಿಯೋದ್ ಹೆಂಗಂತ್ ಹೇಳ್ಕಡೋ 
ಮಚ್ಚ್ ಕಾಳ ಹಾಕೋದ್ ಹೆಂಗಂತ್ ಹೇಳ್ಕಡೋ 
 
ಇದು ಚೀಟಿಕೇಲಿ ಡೀಲ್ ಆಗೋ ಮ್ಯಾಟ್ರೂ 
ಅವ್ಳನ್ ಖಡಕ್ ಆಗಿ ಎತ್ತಕೊಂಡು ಬಾ ಗುರೂ  
ನಂಗೇ ಜಾಕ್ ಎತ್ತಿ ಯಾಮರಸೋ ಪ್ಲ್ಯಾಪ್ಲಾನಿದೂ 
ನನ್ನ ಜೈಲಲ್ಲಿ ಕೂರಸ್ಸಕ್ಕೆ ಸ್ಕೆಚ್ ಇದೂ 
ಅವ್ಳು ಬಾಲ್ಕನಿ ರೇಂಜಲ್ಲೀ ಹುಡುಗಿಯೋ 
ನಾನೂ ಫೂಟಪಾತ್ ಗಾಂಧೀ ಕ್ಲಾಸ್ ರೋಮಿಯೋ 
ಏನಾದ್ರೂ ಐಡಿಯಾ ಕೊಡ್ರೋ..ರೋ  
ಬರ್ಫಿ ಕೂಸ್ದೋ ಬಿದ್ದಾಗೋತ್ತಾಳೆ ಇಲ್ಲಾ ಖುಲ್ಫಿ ಕೊಡ್ಸೋ ಖುಷಿಯಾಗ್ತಾಳೇ 
ಬರ್ಫಿ ಕೂಸ್ದೋ ಬಿದ್ದಾಗೋತ್ತಾಳೆ ಇಲ್ಲಾ ಖುಲ್ಫಿ ಕೊಡ್ಸೋ ಖುಷಿಯಾಗ್ತಾಳೇ 
ಮಚ್ಚ್ ಡವ್ ಹೊಡಿಯೋದ್ ಹೆಂಗಂತ್ ಹೇಳ್ಕಡೋ 
ಮಚ್ಚ್ ಕಾಳ ಹಾಕೋದ್ ಹೆಂಗಂತ್ ಹೇಳ್ಕಡೋ 
ಅವಳು ಹತ್ರ ಬಂದ್ರೇ ಮೀಟರೂ ಆಫ್ ಆಗುತ್ತೇ 
ಅವಳೂ ನಗ್ತಾ ಇದ್ರೇ ಕ್ವಾಟರೂ ಕುಡದಂಗೈತೇ 
ತಮಿಳು ಐಟಂ ಎತ್ತಕೊಂಡ ಇಲ್ಲ ತೆಲಗು ಮಾಲು ಕ್ಯಾಚ್ ಹಾಕೊಂಡ್ 
ಮರಾಠಿ ಮೊಗ್ಗು ಎಳ್ದಕೊಂಡ ಇಲ್ಲಾ ಮಲಯಾಳಿ ಕುಟ್ಟಿನಾ ಕ್ಯಾಚ್ ಹಾಕೊಂಡ್ 
ತಮಿಳು ಐಟಂ ಎತ್ತಕೊಂಡ ಇಲ್ಲ ತೆಲಗು ಮಾಲು ಕ್ಯಾಚ್ ಹಾಕೊಂಡ್ 
ಮರಾಠಿ ಮೊಗ್ಗು ಎಳ್ದಕೊಂಡ ಇಲ್ಲಾ ಮಲಯಾಳಿ ಕುಟ್ಟಿನಾ ಕ್ಯಾಚ್ ಹಾಕೊಂಡ್ 
-----------------------------------------------------------------------------------------------------

ನಲ್ಲ (೨೦೦೪) - ಹುಚ್ಚೂ ಪ್ರೀತಿಯನ್ನೂ ಹಚ್ಚಿಕೊಂಡ ನಲ್ಲ 
ಸಂಗೀತ - ವೆಂಕಟನಾರಾಯಣ,  ಸಾಹಿತ್ಯ :  ವಿ. ನಾಗೇಂದ್ರ ಪ್ರಸಾದ, ಗಾಯನ : ನಾರಾಯಣ 

ಹುಚ್ಚು ಪ್ರೀತಿಯನ್ನೂ ಹಚ್ಚಿಕೊಂಡನಲ್ಲಾ 
ಮೆಚ್ಚಿಕೊಂಡ ಪ್ರೀತಿ ಮುಚ್ಚಿಹೋಯಿತಲ್ಲಾ 
ಹೇ.. ಬಾರೋ ಭಗವಂತ ಬಾರೋ ನೀ ಬಂದು ಪ್ರೀತಿ ಮಾಡಿ ನೋಡೋ 
ಒಂದು ಹೆಣ್ಣಿನ ನೋಡು ಬಾ ನಿನ್ನ ಮನಸು ನೀಡು ಬಾ 
ಹೃದಯಚಿಂದಿಯಾಗೋ ನೋವು ನಿನಗೆ ತಿಳಿವುದು ಬಾ ಧರೆಗೇ 
ಹುಚ್ಚು ಪ್ರೀತಿಯನ್ನೂ ಹಚ್ಚಿಕೊಂಡನಲ್ಲಾ 
ಮೆಚ್ಚಿಕೊಂಡ ಪ್ರೀತಿ ಮುಚ್ಚಿಹೋಯಿತಲ್ಲಾ 

ಪ್ರೇಯಸಿನ ತೇರಿನಂತೆ ಹೊತ್ತುಕೊಂಡು ಹೋದೆನು 
ಮುರಿದ ತೇರಿನಂತೆ ಈಗ ಬಯಲಿನಲ್ಲಿ ನಿಂತೇನೂ 
ನನ್ನ ಪ್ರೀತಿಯಲ್ಲಿ ಯಾವ ತಪ್ಪು ಹುಡುಕಬೇಡ 
ಗಾಯವನ್ನೂ ನೋಡಿ ಮತ್ತೆ ಉಪ್ಪು ಹಾಕಬೇಡ 
ಮನಸುಗಳು ಬಲಿಯಾಗಿವೆ ನನ್ನ ಕನಸುಗಳು ಬಲಿಯಾಗಿವೆ 
ಮನಸುಗಳು ಬಲಿಯಾಗಿವೆ ನನ್ನ ಕನಸುಗಳು ಬಲಿಯಾಗಿವೆ 
ಈಗೇತಕೋ ಹೃದಯ ಭಾರವು ಇಂದೇತಕೊ ನೆರಳು ದೂರವೂ ಮಾತೆಲ್ಲವೂ ಕಾದವೋ 
ಹುಚ್ಚು ಪ್ರೀತಿಯನ್ನೂ ಹಚ್ಚಿಕೊಂಡನಲ್ಲಾ 
ಮೆಚ್ಚಿಕೊಂಡ ಪ್ರೀತಿ ಮುಚ್ಚಿಹೋಯಿತಲ್ಲಾ 
ಹುಚ್ಚು ಪ್ರೀತಿಯನ್ನೂ ಹಚ್ಚಿಕೊಂಡನಲ್ಲಾ 
ಮೆಚ್ಚಿಕೊಂಡ ಪ್ರೀತಿ ಮುಚ್ಚಿಹೋಯಿತಲ್ಲಾ 
-----------------------------------------------------------------------------------------------------

ನಲ್ಲ (೨೦೦೪) - ಗಪ್ ಚುಪ್ ಪ್ರಣಯದ ರಾಗ 
ಸಂಗೀತ - ವೆಂಕಟನಾರಾಯಣ,  ಸಾಹಿತ್ಯ :  ವಿ. ನಾಗೇಂದ್ರ ಪ್ರಸಾದ, ಗಾಯನ : ಪಿ.ಉನ್ನಿಕೃಷ್ಣನ್, ಹರಿಣಿ  

ಗಪ್ ಚುಪ್ ಪ್ರಣಯದ ರಾಗ   ಗಪ್ ಚುಪ್ ಕಲಿಸುವೇ ಈಗ 
ಗಪ್ ಚುಪ್ ಪ್ರಣಯದ ರಾಗ   ಗಪ್ ಚುಪ್ ಕಲಿಸುವೇ ಈಗ 
ದಿನ ರಾತ್ರಿ ಜಾಗರಣೆ ಮಾಡೋಣ 
ಗಪ್ ಚುಪ್ ಪ್ರಣಯದ ರಾಗ   ಗಪ್ ಚುಪ್ ಕಲಿಸುವೇ ಈಗ 
ದಿನ ರಾತ್ರಿ ಜಾಗರಣೆ ಮಾಡೋಣ 
ಮತ್ತೇ ಮತ್ತೇ ಅನುಭವ ಪಡೆಯೋಕ ವಿದ್ಯಾರ್ಥಿ ಆಗುವಾ 
ಆ ಮನ್ಮಥ ಮೈಸೇರುವ ಸ್ತ್ರೀಲಿಂಗ ಪುಲ್ಲಿಂಗ ಅಂಗಾಂಗ ಪಲ್ಲಂಗ 

ಕೋಳಿ ಕೋಕೋ ಅಂತ ಕೂಗೋದೇ ಬೇಡಯ್ಯಾ 
ಸೂರ್ಯ ಆಗೋ ಇಗೋ ಅಂತ ಏಳೋದೇ ಬೇಡಮ್ಮಾ  
ನೀನು ಮುಟ್ಟಿ ಮೈ ಸೊಕ್ಕೇರಿತಿಗ ಕೋಲ್ಮಿಂಚು ತಂತೂ ಉಕ್ಕೇರುವ ವೇಗ 
ಚುಂಬನ ಶಾಸ್ತ್ರನಾ ಅರಿಯೋಕೆ ಯತ್ನನಾ ಮಿಥುನದ ಕಳೆ ಅರಳಿತು ಬಲೆ 
ಆ ಮನ್ಮಥ ಮೈಸೇರುವ ಸ್ತ್ರೀಲಿಂಗ ಪುಲ್ಲಿಂಗ ಅಂಗಾಂಗ ಪಲ್ಲಂಗ 
ಗಪ್ ಚುಪ್ ಪ್ರಣಯದ ರಾಗ   ಗಪ್ ಚುಪ್ ಕಲಿಸುವೇ ಈಗ 
ದಿನ ರಾತ್ರಿ ಜಾಗರಣೆ ಮಾಡೋಣ 

ರತಿ ಯಜ್ಞಕುಂಡ ವರದಾನನ ಮಾಡೋದೂ 
ನಿನ್ನ ಮಂತ್ರದಿಂದ ನನ್ನ ವಯ್ಯಾರ ಆಳೋದು 
ನಿನ್ನ ಮುತ್ತು ಮುತ್ತು ಮತ್ತೇರಿದಾಗ ಹೊಸ ಸೃಷ್ಟಿಯಿಂದ ಚಿತ್ತಾದೆ ನಾನೀಗ 
ಬೆವರಿನ ಸಾಲ ಹನಿಗಳ ತಿಲ್ಲಾನ ಬಯಕೆಯ ಸಾರಿ ಹರಕೆಯ ಕುರಿ 
ಆ ಮನ್ಮಥ ಮೈ ಸೇರುವ ಸ್ತ್ರೀಲಿಂಗ ಪುಲ್ಲಿಂಗ ಅಂಗಾಂಗ ಪಲ್ಲಂಗ 
ಗಪ್ ಚುಪ್ ಪ್ರಣಯದ ರಾಗ   ಗಪ್ ಚುಪ್ ಕಲಿಸುವೇ ಈಗ 
ದಿನ ರಾತ್ರಿ ಜಾಗರಣೆ ಮಾಡೋಣ 
ಮತ್ತೇ ಮತ್ತೇ ಅನುಭವ ಪಡೆಯೋಕ ವಿದ್ಯಾರ್ಥಿ ಆಗುವಾ 
ಆ ಮನ್ಮಥ ಮೈಸೇರುವ ಸ್ತ್ರೀಲಿಂಗ ಪುಲ್ಲಿಂಗ ಅಂಗಾಂಗ ಪಲ್ಲಂಗ 
-----------------------------------------------------------------------------------------------------

ನಲ್ಲ (೨೦೦೪) - ಹುಡುಗ ಎಲ್ಲಿ ನೀನು ಹುಡುಗಾಟ ಸಾಕಿನ್ನು 
ಸಂಗೀತ - ವೆಂಕಟನಾರಾಯಣ,  ಸಾಹಿತ್ಯ :  ವಿ. ನಾಗೇಂದ್ರ ಪ್ರಸಾದ, ಗಾಯನ : ನಂದಿತಾ 

ಹುಡುಗ ಎಲ್ಲಿ ನೀನು ಹುಡುಗಾಟ ಸಾಕಿನ್ನೂ ಹುಡುಕಾಡುತ್ತಾ ನೊಂದೆನಲ್ಲಾ 
ಹುಡುಗ ಎಲ್ಲಿ ನೀನು ಹುಡುಗಾಟ ಸಾಕಿನ್ನೂ ಹುಡುಕಾಡುತ್ತಾ ನೊಂದೆನಲ್ಲಾ 
ಬಿಟ್ಟು ದೂರಾ ಹೋಗು ಮನಸೂ ನಿಂಗೇ ಹೇಗೋ ಒಮ್ಮೆ ನನ್ನ ಕೂಗೋ ನನ್ನ ನಲ್ಲ 
ಮನದ ಬಾಗಿಲಲ್ಲಿ ಪ್ರೀತಿ ರಂಗವಲ್ಲಿ ಬರೆದು ಹೋದೆ ಎಲ್ಲಿ ನಲ್ಲ  
ಉಸಿರಂತೇ ನೀನೂ ಚೆಲ್ಲಾಟ ಏಕಿನ್ನೂ ಪರದಾಟನ ನೋಡೋ ನಲ್ಲ 
ನೋವ ತೋರಣನ ಕಟ್ಟಿ ಹೋದ ಜನ ತಿಳಿಸೋ ಕಾರಣನ ನಲ್ಲ 
ನಂಗೂ ಪ್ರೀತಿ ಉಂಟೂ ನೀನೇ ಬೆಸೆದ ನಂಟೂ ಬಿಡಿಸೋ ನಿನ್ನ ಒಗಟು ನಲ್ಲ 
ಹುಡುಗ ಎಲ್ಲಿ ನೀನು ಹುಡುಗಾಟ ಸಾಕಿನ್ನೂ ಹುಡುಕಾಡುತ್ತಾ ನೊಂದೆನಲ್ಲಾ 
ಬಿಟ್ಟು ದೂರಾ ಹೋಗು ಮನಸೂ ನಿಂಗೇ ಹೇಗೋ ಒಮ್ಮೆ ನನ್ನ ಕೂಗೋ ನನ್ನ ನಲ್ಲ 
-------------------------------------------------------------------------------------------------

ನಲ್ಲ (೨೦೦೪) - ಮಲ್ಲಿಗೆ ಮಲ್ಲಿಗೆ ಮೇಡಮ್ಮೂ 
ಸಂಗೀತ - ವೆಂಕಟನಾರಾಯಣ,  ಸಾಹಿತ್ಯ :  ವಿ. ನಾಗೇಂದ್ರ ಪ್ರಸಾದ, ಗಾಯನ : ಟಿಪ್ಪು, ಮಾಲತೀ 

ಮಲ್ಲಿಗೆ ಮಲ್ಲಿಗೆ ಮೇಡಮ್ಮೂ ಅಡ್ಡದೊಳಗೇ ವೇಲಕಮ್ 
ನೀನು ಬಂದರೇ ಏರಿಯಾ ಹುಡುಗರ ಮೈಯ್ಯೇ ಜೂಮ್ ಜ್ಯೂಮ್ಮೂ 
ಮಲ್ಲಿಗೆ ಮಲ್ಲಿಗೆ ಮೇಡಮ್ಮೂ ಅಡ್ಡದೊಳಗೇ ವೇಲಕಮ್ 
ನೀನು ಬಂದರೇ ಏರಿಯಾ ಹುಡುಗರ ಮೈಯ್ಯೇ ಜೂಮ್ ಜ್ಯೂಮ್ಮೂ 

ಕೊಕ್ಕರೇ ಕೊಕ್ಕರೇ ಕಲರ್ ಕಲರ್ ಕೊಕ್ಕರೇ 
ಸಕ್ಕರೇ ಸಕ್ಕರೆ ಸಖತ್ತವಳೇ ಸಕ್ಕರೇ 
ಮಲ್ಲಿಗೆ ಮಲ್ಲಿಗೆ ಮೇಡಮ್ಮೂ ಅಡ್ಡದೊಳಗೇ ವೇಲಕಮ್ 
ನೀನು ಬಂದರೇ ಏರಿಯಾ ಹುಡುಗರ ಮೈಯ್ಯೇ ಜೂಮ್ ಜ್ಯೂಮ್ಮೂ 
ಮಲ್ಲಿಗೆ ಮಲ್ಲಿಗೆ ಮೇಡಮ್ಮೂ ಅಡ್ಡದೊಳಗೇ ವೇಲಕಮ್ 
ನೀನು ಬಂದರೇ ಏರಿಯಾ ಹುಡುಗರ ಮೈಯ್ಯೇ ಜೂಮ್ ಜ್ಯೂಮ್ಮೂ 
ಲಕಲಕ ಕೆನ್ನೆ ಬಳೇಪೇಟೆ ಚಿಕ್ಕ ಚಿಕ್ಕ ತುಟಿಯೂ ಚಿಕ್ಕಪೇಟೆ 
ಸಂಪಿಗೆ ಮೂಗು ಸುಲ್ತಾನ ಪೇಟೆ ಉಳಿದ ಬೆಡಗು ಉಪ್ಪಾರಪೇಟೆ 
ಪಿಳಿಪಿಳಿ ಕಣ್ಣು ಅಕ್ಕಿಪೇಟೆ ಬಿಲಿಬಿಲಿ ಬೆನ್ನು ಬಿನ್ನಿಪೇಟೆ 
ಬಳುಕಿನ ಮೈಯ್ಯು ಬೆರಗು ಪೇಟೆ ಬಳುಕೋ ನಡುವೂ ಬಂಗಾರುಪೇಟೆ 
ಪಾನಕ ಪಾನಕ ರಾಮನವಮಿ ಪಾನಕ 
ಮೇನಕಾ ಮೇನಕಾ ಹೇ.. ಮುತ್ತು ಕೊಡೆ ಮೇನಕಾ 
ಮಲ್ಲಿಗೆ ಮಲ್ಲಿಗೆ ಮೇಡಮ್ಮೂ ಅಡ್ಡದೊಳಗೇ ವೇಲಕಮ್ 
ನೀನು ಬಂದರೇ ಏರಿಯಾ ಹುಡುಗರ ಮೈಯ್ಯೇ ಜೂಮ್ ಜ್ಯೂಮ್ಮೂ 
ಮಲ್ಲಿಗೆ ಮಲ್ಲಿಗೆ ಮೇಡಮ್ಮೂ ಅಡ್ಡದೊಳಗೇ ವೇಲಕಮ್ 
ನೀನು ಬಂದರೇ ಏರಿಯಾ ಹುಡುಗರ ಮೈಯ್ಯೇ ಜೂಮ್ ಜ್ಯೂಮ್ಮೂ 

ನನ್ನ ಹಿಂದೇ ಬಂತು ಶಾಂತಿನಗರ ಬ್ಯೂಟಿಫ್ಯೂಲ್ ಅಂತೂ ಭೀಮನಗರ 
ಗುಲ್ಕನ್ ಅಂತೂ ಗಾಂಧಿನಗರ ರಸನ ಅಂತೂ ರಾಜಾಜಿನಗರ 
ಮಸ್ತು ಮಸ್ತು ಅಂತೂ ಮೋತಿನಗರ ಕಿಸಿದು ಬಿತ್ತೂ ಕಮಲಾನಗರ 
ಜೈ ಜೈ ಅಂತೂ ಜೆಪಿನಗರ ಊರಳೇ ಹೋಯ್ತು ಉದ್ಯಾನನಗರ 
ಕಿತ್ತಳೆ ಕಿತ್ತಳೆ ಕೆಂಪು ಕಿತ್ತಳೆ ಹೇ ಕಣ್ಣಲೇ ಕಣ್ಣಲೇ ಕಚ್ಚಾಡಿದರೇ ಹೇಂಗೇಲೇ 
ಮಲ್ಲಿಗೆ ಮಲ್ಲಿಗೆ ಮೇಡಮ್ಮೂ ಅಡ್ಡದೊಳಗೇ ವೇಲಕಮ್ 
ನೀನು ಬಂದರೇ ಏರಿಯಾ ಹುಡುಗರ ಮೈಯ್ಯೇ ಜೂಮ್ ಜ್ಯೂಮ್ಮೂ 
ಮಲ್ಲಿಗೆ ಮಲ್ಲಿಗೆ ಮೇಡಮ್ಮೂ ಅಡ್ಡದೊಳಗೇ ವೇಲಕಮ್ 
ನೀನು ಬಂದರೇ ಏರಿಯಾ ಹುಡುಗರ ಮೈಯ್ಯೇ ಜೂಮ್ ಜ್ಯೂಮ್ಮೂ 
-----------------------------------------------------------------------------------------------------

No comments:

Post a Comment