ಪೂರ್ಣ ಚಂದ್ರ ಚಲನಚಿತ್ರದ ಹಾಡುಗಳು
- ಎಂದೂ ಸಂತೋಷ ಎಂದೂ ಉಲ್ಲಾಸ ಎಲ್ಲೀ ತುಂಬಿದೇ...
- ನಿನ್ನನ್ನೂ ನೋಡುತಿರಲೂ
- ಬಂಗಾರದಂತ ಪತಿಯಿರುವಾಗ
- ಬಿಸಿಲಲ್ಲಿ ತಂಪಿಲ್ಲ
ಪೂರ್ಣ ಚಂದ್ರ (೧೯೮೭) - ಎಂದೂ ಸಂತೋಷ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ
ಎಂದೂ ಸಂತೋಷ ಎಂದೂ ಉಲ್ಲಾಸ ಎಲ್ಲೀ ತುಂಬಿದೇ...
ನೋವೋ ನಲಿವೋ ಸೇರಿ ಈ.. ಬಾಳು ಮುಂದೆ ಸಾಗಿದೇ ..
ಎಂದೂ ಸಂತೋಷ ಎಂದೂ ಉಲ್ಲಾಸ ಎಲ್ಲೀ ತುಂಬಿದೇ...
ನೋವೋ ನಲಿವೋ ಸೇರಿ ಈ.. ಬಾಳು ಮುಂದೆ ಸಾಗಿದೇ ..
ಬಾಳೂ.. ನೀನಾಡುವ ಆಟವೂ.. ಬಾಳೂ.. ನೀನೋಡುವ ನೋಟವೂ..
ಅಳುವೋ ಇಲ್ಲ ನಗುವೋ ದುಡಿಮೆ ತಂದ ಗಣಿಯೋ ಏನಾದರೂ ಆಗಲೀ ..
ಏನಾದರೂ ಆಗಲೀ .. ಸರಿಯೇ ಎಂದೂ.. ಇನ್ನೂ ನೀನೂ ಸುಖ ಹೊಂದುವೇ
ಎಂದೂ ಸಂತೋಷ ಎಂದೂ ಉಲ್ಲಾಸ ಎಲ್ಲೀ ತುಂಬಿದೇ...
ನೋವೋ ನಲಿವೋ ಸೇರಿ ಈ.. ಬಾಳು ಮುಂದೆ ಸಾಗಿದೇ ..
ಕಾಲ.. ಎಂದೆಂದಿಗೂ ನಿಲ್ಲದೂ ... ಕಾಲ.. ತಾನಾರಿಗೂ ಕಾಯದೂ..
ಅಳಿವೂ ಇಲ್ಲ ಉಳಿವೋ ಸೋಲೋ ಇಲ್ಲ ಗೆಲುವೋ ಏನಾದರೂ ಆಗಲೀ ..
ಏನಾದರೂ ಆಗಲೀ .. ಅಳದೇ ಎಂದೂ ಇರಲೂ ನೀನು ಸುಖ ಕಾಣುವೇ ..
ಎಂದೂ ಸಂತೋಷ ಎಂದೂ ಉಲ್ಲಾಸ ಎಲ್ಲೀ ತುಂಬಿದೇ...
ನೋವೋ ನಲಿವೋ ಸೇರಿ ಈ.. ಬಾಳು ಮುಂದೆ ಸಾಗಿದೇ ..
ಎಂದೂ ಸಂತೋಷ ಎಂದೂ ಉಲ್ಲಾಸ ಎಲ್ಲೀ ತುಂಬಿದೇ...
ನೋವೋ ನಲಿವೋ ಸೇರಿ ಈ.. ಬಾಳು ಮುಂದೆ ಸಾಗಿದೇ ..
----------------------------------------------------------------------------------------------
ಪೂರ್ಣ ಚಂದ್ರ (೧೯೮೭) - ನಿನ್ನನ್ನೂ ನೋಡುತಿರಲೂ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ, ಎಸ್.ಪಿ.ಬಿ.
ಗಂಡು : ನಿನ್ನನ್ನೂ ನಾ ನೋಡುತಿರಲೂ ಕಲ್ಪನೆಯ ಮೇಘದಲೀ ಹೊಂಗನಸ ಕಾಣುತಲಿ
ತೇಲುತ ತೇಲುತ ಆಡುತ ಹಾಡುತ ಮೈಮರೆತೇ ಸಂತಸದೀ ನನ್ನರಸೀ ... ಆಆಆ
ಹೆಣ್ಣು : ಆಆಆ ನಿನ್ನನ್ನೂ ನಾ ನೋಡುತಿರಲೂ ಕಲ್ಪನೆಯ ಮೇಘದಲೀ ಹೊಂಗನಸ ಕಾಣುತಲಿ
ತೇಲುತ ತೇಲುತ ಆಡುತ ಹಾಡುತ ಮೈಮರೆತೇ ಓ ಗೆಳೆಯಾ ನನ್ನನೀಯಾ... (ಆಆಆ ) ಆಆಆ
ಹೆಣ್ಣು : ಲಾ ಲಾಲಾ ಲಾ ಲಾಲಾ ಗಂಡು : ಲಾ ಲಾಲಾ ಲಾ ಲಾಲಾ
ಇಬ್ಬರು : ಲಾ ಲಾಲಾ ಲಾ ಲಾಲಾ
ಗಂಡು : ಕಂಗಳು ಕಂಗಳು ಸಂಗಮವಾಗಲೂ ಹೂವಿನ ಬಾಣಗಳೂ ಲಾಲಲ ಲಾಲಲ
ನನ್ನೆದೇ ಸೋಕಿರಲೂ ಲಾಲಲ ಲಾಲಲ
ಹೆಣ್ಣು : ಸಾಗರದಲೆಗಳೂ ಚಂದ್ರನ ನೋಡಲು ಉಕ್ಕುವ ರೀತಿಯಲೀ ಲಾಲಲ ಲಾಲಲ
ಪ್ರೀತಿ ಉಕ್ಕುತ ಎದೆಯಲ್ಲಿ ಲಾಲಲ ಲಾಲಲ
ಗಂಡು : ಪ್ರೇಮದ ಕಾವ್ಯವನೂ ನಾನು ಬಾಳುವ ಆಸೆಯಲಿ
ಹೆಣ್ಣು : ನಿನ್ನನೂ ಸೇರಿದೇ ನನ್ನನೇ ವೇದನೆ ನನ್ನರಸ ಸ್ವಿಕರಿಸೂ
ಗಂಡು : ನಿನ್ನನ್ನೂ ನಾ ನೋಡುತಿರಲೂ ಕಲ್ಪನೆಯ ಮೇಘದಲೀ ಹೊಂಗನಸ ಕಾಣುತಲಿ
ಹೆಣ್ಣು : ತೇಲುತ ತೇಲುತ ಆಡುತ ಹಾಡುತ ಮೈಮರೆತೇ ಓ ಗೆಳೆಯಾ ನನ್ನನೀಯಾ... (ಆಆಆ ) ಆಆಆ
ಹೆಣ್ಣು : ಲಾಲಾ ಲಾಲಾ ಲಾ ಲಾಲಾ ಲಾ ಲಾಲಾ ಲಾ ಲಾಲಾ ಲಾ ಲಾಲಾ ಲಾ ಲಾಲಾ
ದೂರದ ಬಾನಲಿ ಸಂಧ್ಯೆಯೂ ಬಂದಳು ಆರತೀ ಎತ್ತುತಲೀ... ಲಾಲಲಲಾಲಲ
ನಮ್ಮನ್ನೂ ಹರಸುತಲೀ ... ಲಾಲಲಲಾಲಲ
ಗಂಡು : ಮಾಮರ ತೂಗಿದೆ ಚಾಮರ ಬೀಸಿದೇ ತಂಪನ್ನು ಚೆಲ್ಲುತಲೀ... ಲಾಲಲಲಾಲಲ
ಒಳ್ಳೇ ತಂಪನ್ನೂ ಚೆಲ್ಲುತಲೀ... ಲಾಲಲಲಾಲಲ
ಹೆಣ್ಣು : ಕೋಗಿಲೆ ಹಾಡುತಿರೇ.. ನೋಡು ಮಂಗಳ ಗೀತೆಯನೂ
ಗಂಡು : ಬೀಸುವ ಗಾಳಿಯ ಜೋಡಿಯ ಸೇರಿಸಿ ಮಂತ್ರವನೂ ಹೇಳುತಿದೇ ..
ಹೆಣ್ಣು : ನಿನ್ನನ್ನೂ ನಾ ನೋಡುತಿರಲೂ ಕಲ್ಪನೆಯ ಮೇಘದಲೀ ಹೊಂಗನಸ ಕಾಣುತಲಿ
ಗಂಡು : ತೇಲುತ ತೇಲುತ ಆಡುತ ಹಾಡುತ ಮೈಮರೆತೇ ಸಂತಸದೀ ನನ್ನರಸೀ ... ಆಆಆ
ಹೆಣ್ಣು : ನಿನ್ನನ್ನೂ ನಾ ನೋಡುತಿರಲೂ ಕಲ್ಪನೆಯ ಮೇಘದಲೀ ಹೊಂಗನಸ ಕಾಣುತಲಿ
---------------------------------------------------------------------------------------------
ಪೂರ್ಣ ಚಂದ್ರ (೧೯೮೭) - ಬಂಗಾರದಂತ ಪತಿಯಿರುವಾಗ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ,
ಬಂಗಾರದಂತ ಪತಿಯಿರುವಾಗ ಬೇರೆ ಬಂಗಾರವೇಕೆ..
ಅರಿಶಿನ ಕುಂಕುಮ ಹೂವಿರುವಾಗ ಬೇರೆ ಸಿಂಗಾರವೇಕೇ .. ಬೇರೆ ಸಿಂಗಾರವೇಕೇ ..
ಬಂಗಾರದಂತ ಪತಿಯಿರುವಾಗ ಬೇರೆ ಬಂಗಾರವೇಕೆ..
ಬಂಗಾರದಂತ ಪತಿಯಿರುವಾಗ
ಆಕಾಶಕೇ .. ಅಲಂಕಾರವೂ ಸೂರ್ಯ ಚಂದ್ರ ಮುಗಿಲು ತಾರೆಗಳೆಲ್ಲಾ..
ಈ ಬಾಳಿಗೇ .. ಅಲಂಕಾರವೂ ಪ್ರೀತಿ ಮೋಹ ನನ್ನ ಮುದ್ದು ನಲ್ಲ..
ಹೂವಿನ ಜೊತೆ.. ಬಳ್ಳಿಗೆ ಅಂದ ಇನಿಯನ ನಗುವೇ.. ಹೆಣ್ಣಿಗೆ ಚೆಂದ
ಇನಿಯನ ನಗುವೇ.. ಹೆಣ್ಣಿಗೆ ಚೆಂದ
ಬಂಗಾರದಂತ ಪತಿಯಿರುವಾಗ ಬೇರೆ ಬಂಗಾರವೇಕೆ..
ಬಂಗಾರದಂತ ಪತಿಯಿರುವಾಗ
ಇನ್ನೇನನೂ ನಾ ಕೇಳಲಿ ಇಂಥ ಇನಿಯ ಸನಿಹ ನಿಂತಿರುವಾಗ
ಬೇರೆನೇನೂ ನಾ ಹೇಳಲಿ ಹೃದಯ ತುಂಬಾ ಹರುಷ ತುಂಬಿರುವಾಗ
ಸಾವಿರ ಜನುಮ ಬಂದರೇ ಬರಲೀ .. ಈ ಅನುಬಂಧ ಹೀಗೆ ಇರಲೀ ..
ಈ ಅನುಬಂಧ ಹೀಗೆ ಇರಲೀ ..
ಬಂಗಾರದಂತ ಪತಿಯಿರುವಾಗ ಬೇರೆ ಬಂಗಾರವೇಕೆ..
ಅರಿಶಿನ ಕುಂಕುಮ ಹೂವಿರುವಾಗ ಬೇರೆ ಸಿಂಗಾರವೇಕೇ .. ಬೇರೆ ಸಿಂಗಾರವೇಕೇ ..
ಬಂಗಾರದಂತ ಪತಿಯಿರುವಾಗ ಬೇರೆ ಬಂಗಾರವೇಕೆ..
ಬಂಗಾರದಂತ ಪತಿಯಿರುವಾಗ
---------------------------------------------------------------------------------------------
ಪೂರ್ಣ ಚಂದ್ರ (೧೯೮೭) - ಬಿಸಿಲಲ್ಲಿ ತಂಪಿಲ್ಲ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ.
ಬಿಸಿಲಲ್ಲಿ ತಂಪಿಲ್ಲ ವಿಷದಲ್ಲಿ ಸಿಹಿಯಿಲ್ಲ ಪ್ರೀತಿ ಪ್ರೇಮ ಸ್ನೇಹ ಬಡವನ ಬಾಳಲಿ ಇಲ್ಲ
ಓಓಓಓಓಓಓ... ಓಓಓಓಓ
ಬಿಸಿಲಲ್ಲಿ ತಂಪಿಲ್ಲ ವಿಷದಲ್ಲಿ ಸಿಹಿಯಿಲ್ಲ ಪ್ರೀತಿ ಪ್ರೇಮ ಸ್ನೇಹ ಬಡವನ ಬಾಳಲಿ ಇಲ್ಲ
ಹಾರುವ ತನಕ ಹಕ್ಕಿಗೇ ಬೇಕು ಅಪ್ಪನೂ ಅಮ್ಮನೂ ..
ರೆಕ್ಕೆಯು ಬಲಿತು ಹಾರುವನ ಕ್ಷಣದಿ ನೋಡದು ಯಾರನೂ ..
ಪ್ರೀತಿಯ ತೋರಿದೇ.. ಪ್ರೇಮದಿ ಸಾಕಿದೇ .. ಮುಗಿಯಿತು ಅಲ್ಲಿಗೇ ... ಕಂಬನಿ ಏತಕೆ..
ಬಿಸಿಲಲ್ಲಿ ತಂಪಿಲ್ಲ ವಿಷದಲ್ಲಿ ಸಿಹಿಯಿಲ್ಲ ಪ್ರೀತಿ ಪ್ರೇಮ ಸ್ನೇಹ ಬಡವನ ಬಾಳಲಿ ಇಲ್ಲ
ನೆರಳದು ಕೊಡದ ಒಣಗಿದ ಮರದ ಸನಿಹಕೆ ಬರುವರೇ...
ಹಸಿರನು ತುಂಬಿ ಗಾಳಿಯ ತಂದ ದಿನಗಳ ನೆನೆವರೇ ..
ಕೊಡಲಿಯ ಬೀಸುತ .. ರೆಂಬೆಯ ಕಡಿಯುತ... ಬೆಂಕಿಗೇನು ಸುಖ.. ನೆಮ್ಮದಿ ಕಾಣುವ
ಬಿಸಿಲಲ್ಲಿ ತಂಪಿಲ್ಲ ವಿಷದಲ್ಲಿ ಸಿಹಿಯಿಲ್ಲ ಪ್ರೀತಿ ಪ್ರೇಮ ಸ್ನೇಹ ಬಡವನ ಬಾಳಲಿ ಇಲ್ಲ
ಆಆಆ ಆಆಆಅ ಓಓಓಓಓ ಆಆಆ ಹೂಂಹೂಂಹೂಂ
----------------------------------------------------------------------------------------------
No comments:
Post a Comment