1530. ಮುತ್ತು ಒಂದು ಮುತ್ತು (೧೯೭೯)

ಮುತ್ತು ಒಂದು ಮುತ್ತು ಚಲನಚಿತ್ರದ ಹಾಡುಗಳು
  1. ಹೂವೇ ಮರೆಸಿತು ಮೊಗವ
  2. ಹೂವೇ ತಿಳಿದೇಯಾ ನಿಜವಾ
  3. ಸನ್ಯಾಸ ತೊಟ್ಟವನಲ್ಲ
  4. ಪ್ರೇಮ ಹೃದಯದ ಗಾನ
ಮುತ್ತು ಒಂದು ಮುತ್ತು (೧೯೭೯) - ಹೂವೇ ಮರೆಸಿತು ಮೊಗವ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ 

ಹೂವೇ ಮರೆಸಿತು ಮೊಗವ ಆ ಚೆಲುವಿಗೇ ಆ ಸೊಬಗಿಗೇ ನೀ ಸರಿಸಮ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ 
ಹೂವೇ ಮರೆಸಿತು ಮೊಗವ ಆ ಚೆಲುವಿಗೇ ಆ ಸೊಬಗಿಗೇ ನೀ ಸರಿಸಮ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ 

ನಡೆಯ ಆ ಬಳುಕು ನದಿಗೂ ಇಲ್ಲ ನಗೆಯ ಇಂಚರ ಕೊಳಲಿಗೂ ಇಲ್ಲ 
ನಡೆಯ ಆ ಬಳುಕು ನದಿಗಿಗೂ ಇಲ್ಲ ನಗೆಯ ಇಂಚರ ಕೊಳಲಿಗೂ ಇಲ್ಲ 
ಅಂದವ ಬರೆಸಿಡುವ ಕುಂಚವು ಇಲ್ಲ ಅವಳನು ಬಣ್ಣಿಸಲು ಮಾತು ಇಲ್ಲ.. 
ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ 
ಹೂವೇ ಮರೆಸಿತು ಮೊಗವ ಆ ಚೆಲುವಿಗೇ ಆ ಸೊಬಗಿಗೇ ನೀ ಸರಿಸಮ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ 

ಮನಸಿನ ಆ ಬಿಳುಪು ಹಾಲಿಗೂ ಇಲ್ಲ ಮೌನದ ಆಳಲೂ ಕಡಲಿಗೂ ಇಲ್ಲ 
ಮನಸಿನ ಆ ಬಿಳುಪು ಹಾಲಿಗೂ ಇಲ್ಲ ಮೌನದ ಆಳಲೂ ಕಡಲಿಗೂ ಇಲ್ಲ 
ಕಂಗಳ ಚಂಚಲತೆ ಅಕ್ಷಿಗೂ ಇಲ್ಲ ಪ್ರಕೃತಿಯ ಬಳುವಳಿಯೂ ಅವಳಿಗೇ ಎಲ್ಲ..  
ಎಲ್ಲ ಎಲ್ಲ ಎಲ್ಲ ಎಲ್ಲ ಎಲ್ಲ ಎಲ್ಲ ಎಲ್ಲ ಎಲ್ಲ ಎಲ್ಲ ಎಲ್ಲ 
ಹೂವೇ ಮರೆಸಿತು ಮೊಗವ ಆ ಚೆಲುವಿಗೇ ಆ ಸೊಬಗಿಗೇ ನೀ ಸರಿಸಮ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ 

ಜಕ್ಕಣ್ಣನ ಕಲೆಯಲ್ಲಿ ಈ ಚೆಲುವಿಲ್ಲ ಮುದ್ದಣನ ಕಾವ್ಯದಲೀ... ಈ ಸೊಬಗಿಲ್ಲ 
ಜಕ್ಕಣ್ಣನ ಕಲೆಯಲ್ಲಿ ಈ ಚೆಲುವಿಲ್ಲ ಮುದ್ದಣನ ಕಾವ್ಯದಲೀ... ಈ ಸೊಬಗಿಲ್ಲ 
ಮುತ್ತಿನ ಸಾಲಿನಲೂ ಈ ಮುತ್ತಿಲ್ಲ ಅವಳೇ ತುಂಬಿದಳೂ ಕಣಕಣವೆಲ್ಲಾ..   
ಎಲ್ಲ ಎಲ್ಲ ಎಲ್ಲ ಎಲ್ಲ ಎಲ್ಲ ಎಲ್ಲ ಎಲ್ಲ ಎಲ್ಲ ಎಲ್ಲ ಎಲ್ಲ 
ಹೂವೇ ಮರೆಸಿತು ಮೊಗವ ಆ ಚೆಲುವಿಗೇ ಆ ಸೊಬಗಿಗೇ ನೀ ಸರಿಸಮ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ 
----------------------------------------------------------------------------------------------

ಮುತ್ತು ಒಂದು ಮುತ್ತು (೧೯೭೯) - ಹೂವೇ ತಿಳಿದೇಯ ನಿಜವಾ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಜಾನಕೀ 

ಹೂವೇ ತಿಳಿದೇಯ ನಿಜವಾ.. ಆ ಮನಸಿಗೇ... ತಿಳಿ ನಗುವಿಗೇ ... 
ನೀ ಸರಿಸಮ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲಇಲ್ಲ ಇಲ್ಲ  
ಹೂವೇ ತಿಳಿದೇಯ ನಿಜವಾ.. ಆ ಮನಸಿಗೇ... ತಿಳಿ ನಗುವಿಗೇ ... 
ನೀ ಸರಿಸಮ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲಇಲ್ಲ ಇಲ್ಲ  

ಬೆಳ್ಳನೇ ಆ ಮನಸೂ ಬದುಕಿಗೆ ಇಲ್ಲ ಮೊಗದ ಕಾಂತಿಯದೂ ಜೊತೆಗೂ ಇಲ್ಲ 
ನುಡಿಯ ಆ ಸಿಹಿಯೂ ಜೇನಿಗೂ ಇಲ್ಲ ನಡೆಯ ಗಂಭೀರ ಸಿಂಹಕೂ ಇಲ್ಲ  
ಅವನ ಕರುಣೆಯದೂ ಗಂಗೆಗೂ ಇಲ್ಲ ಸಹನೆ ತಾಳ್ಮೆಯದೂ ಭೂಮಿಗೂ ಇಲ್ಲ 
ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲಇಲ್ಲ ಇಲ್ಲ  
ಹೂವೇ ತಿಳಿದೇಯ ನಿಜವಾ.. ಆ ಮನಸಿಗೇ... ತಿಳಿ ನಗುವಿಗೇ ... 
ನೀ ಸರಿಸಮ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲಇಲ್ಲ ಇಲ್ಲ  

ದೇವರು ಇರುವೆಡೆಯೂ ಗುಡಿಯಲಿ ಅಲ್ಲ ಅವರ ರೂಪದಲಿ ನಗುತಿಹನಲ್ಲ.. 
ದೇವರು ಇರುವೆಡೆಯೂ ಗುಡಿಯಲಿ ಅಲ್ಲ ಅವರ ರೂಪದಲಿ ನಗುತಿಹನಲ್ಲ.. 
ಹೃದಯವ ಪೂಜೆಯಿದೂ ಅವರಿಗೇ ಎಲ್ಲ ಅವರೆಲ್ಲ ಇಲ್ಲದಿರೇ ಬಾಳೇ ಇಲ್ಲ.. 
ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲಇಲ್ಲ ಇಲ್ಲ  
ಹೂವೇ ತಿಳಿದೇಯ ನಿಜವಾ.. ಆ ಮನಸಿಗೇ... ತಿಳಿ ನಗುವಿಗೇ ... 
ನೀ ಸರಿಸಮ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲಇಲ್ಲ ಇಲ್ಲ  
ಹೂವೇ ತಿಳಿದೇಯ ನಿಜವಾ.. ಆ ಮನಸಿಗೇ... ತಿಳಿ ನಗುವಿಗೇ ... 
ನೀ ಸರಿಸಮ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲಇಲ್ಲ ಇಲ್ಲ  
----------------------------------------------------------------------------------------------

ಮುತ್ತು ಒಂದು ಮುತ್ತು (೧೯೭೯) - ಸನ್ಯಾಸ ತೊಟ್ಟವನಲ್ಲ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ವಾಣಿಜಯರಾಮ 

ಹಲೋ ಬ್ಯಾಚುಲರ್ ಬಾಯ್.. ಲಾಲಲಲಾ... ಲಾ   ಲಾಲಲಲಾ... ಲಾ   ಲಲಲಲಲಲಾ ಲಾ.. ಲಾಲಾ.. 
ಸನ್ಯಾಸ ತೊಟ್ಟವನಲ್ಲ ಸಂಸಾರ ಬಿಟ್ಟವನಲ್ಲ ಸಂಗಾತಿ ಬೇಕಿಲ್ಲವೇ.. 
ಸನ್ಯಾಸ ತೊಟ್ಟವನಲ್ಲ ಸಂಸಾರ ಬಿಟ್ಟವನಲ್ಲ ಸಂಗಾತಿ ಬೇಕಿಲ್ಲವೇ.. 
ಕಣ್ಣೆದುರಲ್ಲೇ ಕಾದಿಹೆ ನಾನೂ  
ಕಣ್ಣೆದುರಲ್ಲೇ.. ಕಾದಿಹೆ ನಾನೂ ಕಾಣಿಸದೇನೂ  ನೋಡಿಲ್ಲೀ... 
ಸನ್ಯಾಸ ತೊಟ್ಟವನಲ್ಲ ಸಂಸಾರ ಬಿಟ್ಟವನಲ್ಲ ಸಂಗಾತಿ ಬೇಕಿಲ್ಲವೇ.. 

ಆ ಜನ್ಮ ಬ್ರಹ್ಮಚಾರೀ .. 
ಆ ಜನ್ಮ ಬ್ರಹ್ಮಚಾರಿ ಆಗುವಾಸೆಯೋ.. ಹನುಮನ ಭಕ್ತನೋ ನೀನಾದೆಯೋ 
ಏಕಾಂಗೀ ಜೀವನದಲ್ಲಿ ಸುಖವೆನಿದೇ ಹಲವು ಕರೆದಿದೆ ನುಡಿ ಕೇಳದೇ .. 
ಪುಸ್ತಕ ಎಸೆ ದೂರ ಬಳಿಯಲೀ ನೀ ಬಾರಾ 
ಓಓಓಓ ಪುಸ್ತಕ ಎಸೆ ದೂರ ಬಳಿಯಲೀ ನೀ ಬಾರಾ 
ಒಲವಿಂದ ಜೊತೆಯಾಗುವಾ 
ಕಣ್ಣೆದುರಲ್ಲೇ.. ಕಾದಿಹೆ ನಾನೂ ಕಾಣಿಸದೇನೂ  ನೋಡಿಲ್ಲೀ... 
ಸನ್ಯಾಸ ತೊಟ್ಟವನಲ್ಲ ಸಂಸಾರ ಬಿಟ್ಟವನಲ್ಲ ಸಂಗಾತಿ ಬೇಕಿಲ್ಲವೇ.. 

ತುಂಟಾಟ ಆಡುವ ವೇಳೆ ಆಡಬಾರದೇ.. ಚೆಲುವಿನ ಔತಣ ಸವಿಯಬಾರದೇ 
ಹೀಗೇನೇ ಯೌವ್ವನವೆಲ್ಲ ಕಳೇದಿತೂ ಮೀಸೆಯೂ ಧಾಡಿಯೂ ಮರೆಸಿತೋ.. 
ರಂಭೆಯ ನಾನಲ್ಲ ಸುಖವೂ ನೀನಲ್ಲ..     
ಓಓಓಓ ರಂಭೆಯ ನಾನಲ್ಲ ಸುಖವೂ ನೀನಲ್ಲ ತಪಭಂಗ ಭಯವೆಲ್ಲಿದೇ .. 
ಕಣ್ಣೆದುರಲ್ಲೇ.. ಕಾದಿಹೆ ನಾನೂ ಕಾಣಿಸದೇನೂ  ನೋಡಿಲ್ಲೀ... 
ಸನ್ಯಾಸ ತೊಟ್ಟವನಲ್ಲ ಸಂಸಾರ ಬಿಟ್ಟವನಲ್ಲ ಸಂಗಾತಿ ಬೇಕಿಲ್ಲವೇ.. 
ಕಣ್ಣೆದುರಲ್ಲೇ..  ಹ್ಹಾಂ..  ಕಾದಿಹೆ ನಾನೂ 
ಕಣ್ಣೆದುರಲ್ಲೇ.. ಕಾದಿಹೆ ನಾನೂ ಕಾಣಿಸದೇನೂ  ನೋಡಿಲ್ಲೀ...   
----------------------------------------------------------------------------------------------

ಮುತ್ತು ಒಂದು ಮುತ್ತು (೧೯೭೯) - ಪ್ರೇಮ ಹೃದಯದ ಗಾನ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ  

ಗಂಡು : ಪ್ರೇಮ ಹೃದಯದ ಗಾನ ಸಮರಸ ತಾನ ಮಧುರಸ ಪಾನ 
            ಮನ ಮನ ಮಿಲನದ ಸಂಧಾನ 
ಹೆಣ್ಣು  : ಪ್ರೇಮ ಹೃದಯದ ಗಾನ ಸಮರಸ ತಾನ ಮಧುರಸ ಪಾನ 
            ಮನ ಮನ ಮಿಲನದ ಸಂಧಾನ 

ಗಂಡು : ತುಂಗಾ ನದಿಯ ತೀರ್ಥದ ಹಾಗೇ ಶೃಂಗೇರಿಯವರ  ಸನ್ನಿಧಿ ಹಾಗೇ .. 
ಹೆಣ್ಣು : ತಾವರೇ ಹೂವಿನ ಎಸಳೆಯ ಹಾಗೆ ಸಹ್ಯಾದ್ರಿಯದೀ ಮಾಲೆಯ ಹಾಗೇ .. 
ಗಂಡು : ನೊರೆಹಾಲಿನಂತೇ .. ಹಸನಾದದಂತೇ.. 
ಹೆಣ್ಣು : ಚೈತ್ರದ ಚಿಗುರೇಲೇ ಹಸಿರಾದುದಂತೇ..   
ಗಂಡು : ಎಂದಿಗೂ ಬಾಡದ ಹೊನಲವ ಹೂವಿದು 
ಹೆಣ್ಣು : ಸರಿಸರಿ ಸುಖಸುಖ ಆ..ನಂದಾ... 
ಗಂಡು : ಪ್ರೇಮ ಹೃದಯದ ಗಾನ         ಹೆಣ್ಣು : ಸಮರಸ ತಾನ 
ಗಂಡು : ಮಧುರಸ ಪಾನ 
ಇಬ್ಬರು :  ಮನ ಮನ ಮಿಲನದ ಸಂಧಾನ 

ಹೆಣ್ಣು : ಬೃಂದಾವನದೇ ರಾಧೇಯ ಪ್ರೇಮ.. ಹಾಡಿದು ಅಂದಿನ ಮಾಧವ ನಾಮ 
ಗಂಡು : ಮಿಥಿಲಾಪುರಿಯಲೀ .. ಸೀತೆಯ ಪ್ರೇಮ.. ಹಗಲಿರುಳೆಲ್ಲಾ ಹರೇ ರಾಮ್ ರಾಮ್ 
ಹೆಣ್ಣು : ಬೆರೆತಿಹ ಜೀವದ ಅನುರಾಗ ಸ್ಪಂದ 
ಗಂಡು : ಜನುಮ ಜನುಮದ ಇದು ಪ್ರೇಮ ಬಂಧ 
ಹೆಣ್ಣು : ಶೃತಿಯಲೀ ಕಲೆತಿಹ ವರದೊಲು ಒಲವಿದೂ 
ಗಂಡು : ಬಾಳಿನ ಸುಮಧುರ ಸಂ.. ಗೀತ.. 
ಹೆಣ್ಣು : ಪ್ರೇಮ ಹೃದಯದ ಗಾನ         ಗಂಡು : ಸಮರಸ ತಾನ 
ಹೆಣ್ಣು : ಮಧುರಸ ಪಾನ 
ಇಬ್ಬರು :  ಮನ ಮನ ಮಿಲನದ ಸಂಧಾನ 
---------------------------------------------------------------------------------------------

No comments:

Post a Comment