1536. ಶುಭಾಶಯ (೧೯೭೭)

ಶುಭಾಶಯ ಚಲನಚಿತ್ರದ ಹಾಡುಗಳು 
  1. ಅಮ್ಮಾ ಎನ್ನುವಾ ಕರೆ ತಂದಾ  
  2. ರಾಮ ಕಂಡ ಸೀತೆಯೋ 
  3. ಪ್ರೇಮ ವೀಣೆಯ ಶ್ರುತಿಯ 
  4. ಒಲವ ಒಡವೇ ತೊಟ್ಟ ವಯ್ಯಾರೀ 
  5. ಮಮತೆಯ ಬಳ್ಳಿಯಲೀ ಹೂವೇ ನೀನಿರುವೇ 
ಶುಭಾಶಯ (೧೯೭೭) - ಅಮ್ಮಾ ಎನ್ನುವಾ ಕರೆ ತಂದಾ  
ಸಂಗೀತ : ಎಂ.ರಂಗರಾವ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಸುಶೀಲಾ 

ಅಮ್ಮಾ ಎನ್ನುವಾ ಕರೆ ತಂದಾ ಅದು ನೆಮ್ಮದಿ ನೀಡುವ ಮಕರಂದ 
ಅಮ್ಮಾ ಇಲ್ಲದ ಅನಾಥ ಮಕ್ಕಳ ದೇವನು ಕಾಯುವ ಒಲವಿಂದ 
ಅಮ್ಮಾ ಎನ್ನುವಾ ಕರೆ ತಂದಾ ಅದು ನೆಮ್ಮದಿ ನೀಡುವ ಮಕರಂದ 

ಕಂದನ ತೊದಲ ನುಡಿ ಅಮ್ಮಾ ಅಮ್ಮಾ ಕರುಳಿನ ಮಮತೆ ಅಮ್ಮಾ ಅಮ್ಮಾ 
ಕಂದನ ತೊದಲ ನುಡಿ ಅಮ್ಮಾ ಅಮ್ಮಾ ಕರುಳಿನ ಮಮತೆ ಅಮ್ಮಾ ಅಮ್ಮಾ 
ಕಂಬನಿ ಒರೆಸಲು ಓಡೋಡಿ ಬರುವ ಕರುಣೆಯ ಕೋರುತಿ ಅಮ್ಮಾ ಅಮ್ಮಾ  
ಅಮ್ಮಾ ಎನ್ನುವಾ ಕರೆ ತಂದಾ ಅದು ನೆಮ್ಮದಿ ನೀಡುವ ಮಕರಂದ 

ತಾಳ್ಮೆಗೆ ತವರು ಅಮ್ಮಾ ಬಾಳಿಗೆ ಬೆಳಕು ಅಮ್ಮಾ...  
ತಾಳ್ಮೆಗೆ ತವರು ಅಮ್ಮಾ ಬಾಳಿಗೆ ಬೆಳಕು ಅಮ್ಮಾ 
ಮಾಡಿದ ತಪ್ಪುಗಳೆಲ್ಲವನು ಕ್ಷಮಿಸುವ ದೈವವೇ ಅಮ್ಮಾ...  
ಅಮ್ಮಾ ಎನ್ನುವಾ ಕರೆ ತಂದಾ ಅದು ನೆಮ್ಮದಿ ನೀಡುವ ಮಕರಂದ 
ಅಮ್ಮಾ ಇಲ್ಲದ ಅನಾಥ ಮಕ್ಕಳ ದೇವನು ಕಾಯುವ ಒಲವಿಂದ 
ಅಮ್ಮಾ ಎನ್ನುವಾ ಕರೆ ತಂದಾ ಅದು ನೆಮ್ಮದಿ ನೀಡುವ ಮಕರಂದ 

ಭೂಮಿಗೆ ಹೆಸರು ಅಮ್ಮಾ ಅಮ್ಮಾ ಪುನೀತ ನದಿಗಳು ಅಮ್ಮಾ ಅಮ್ಮಾ 
ಭೂಮಿಗೆ ಹೆಸರು ಅಮ್ಮಾ ಅಮ್ಮಾ ಪುನೀತ ನದಿಗಳು ಅಮ್ಮಾ ಅಮ್ಮಾ 
ಸಂಕಟ ಬಂದ ವೇಳೆಯಲ್ಲೆಲರೂ ಅರಿಯದೇ ಕರೆವುದು ಅಮ್ಮಾ ಅಮ್ಮಾ 
ಅಮ್ಮಾ ಎನ್ನುವಾ ಕರೆ ತಂದಾ ಅದು ನೆಮ್ಮದಿ ನೀಡುವ ಮಕರಂದ 
ಅಮ್ಮಾ ಇಲ್ಲದ ಅನಾಥ ಮಕ್ಕಳ ದೇವನು ಕಾಯುವ ಒಲವಿಂದ 
ಅಮ್ಮಾ ಎನ್ನುವಾ ಕರೆ ತಂದಾ ಅದು ನೆಮ್ಮದಿ ನೀಡುವ ಮಕರಂದ 
-------------------------------------------------------------------------------------------------

ಶುಭಾಶಯ (೧೯೭೭) - ರಾಮ ಕಂಡ ಸೀತೆಯೋ 
ಸಂಗೀತ : ಎಂ.ರಂಗರಾವ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ. ಬಿ 

ರಾಮ ಕಂಡ ಸೀತೆಯೋ ಕೃಷ್ಣ ಕಂಡ ರಾಧೇಯೋ 
ರಾಮ ಕಂಡ ಸೀತೆಯೋ ಕೃಷ್ಣ ಕಂಡ ರಾಧೇಯೋ
ಮೈತುಂಬಿ ಬಂದಂಥ ಕಲೆ ಕಾವ್ಯ ಶೀಲೆಯೋ 
ರಾಮ ಕಂಡ ಸೀತೆಯೋ ಕೃಷ್ಣ ಕಂಡ ರಾಧೇಯೋ
ಮೈತುಂಬಿ ಬಂದಂಥ ಕಲೆ ಕಾವ್ಯ ಶೀಲೆಯೋ 

ಸ್ವರ ಏಳು ಮಿಡಿದಂತ ಈ ವಾಣಿಯೋ ಮೆರವಣಿಗೆ ಹೊರಟಂಥ ವನರಾಣಿಯೋ 
ಸ್ವರ ಏಳು ಮಿಡಿದಂತ ಈ ವಾಣಿಯೋ ಮೆರವಣಿಗೆ ಹೊರಟಂಥ ವನರಾಣಿಯೋ 
ಶಾಂತಲೆಗೆ ಸವತಿಯೋ..  ಜಕ್ಕಣನ ಸ್ಫೂರ್ತಿಯೋ..... 
ಶಾಂತಲೆಗೆ ಸವತಿಯೋ ಜಕ್ಕಣನ ಸ್ಫೂರ್ತಿಯೋ ನನ್ನ ಜೀವ ಜ್ಯೋತಿಯೋ 
ರಾಮ ಕಂಡ ಸೀತೆಯೋ ಕೃಷ್ಣ ಕಂಡ ರಾಧೇಯೋ
ಮೈತುಂಬಿ ಬಂದಂಥ ಕಲೆ ಕಾವ್ಯ ಶೀಲೆಯೋ 

ಸೌಂದರ್ಯ ಪೂಜಾರಿ ನಾನಾಗುವೇ ಆ ರಾಜ್ಯ ದೇವತೆ ನೀನಾಗುವೇ 
ಸೌಂದರ್ಯ ಪೂಜಾರಿ ನಾನಾಗುವೇ ಆ ರಾಜ್ಯ ದೇವತೆ ನೀನಾಗುವೇ 
ಆತ್ಮ ನೀನು ದೇಹ ನಾನು... ಕಣ್ಣು ನೀನು  ನೋಟ ನಾ.. 
ಆತ್ಮ ನೀನು ದೇಹ ನಾ ಕಣ್ಣು ನೀನು ನೋಟ ನಾ ಜನ್ಮ ಜನ್ಮ ಬಂಧನಾ..  
ರಾಮ ಕಂಡ ಸೀತೆಯೋ ಕೃಷ್ಣ ಕಂಡ ರಾಧೇಯೋ
ಮೈತುಂಬಿ ಬಂದಂಥ ಕಲೆ ಕಾವ್ಯ ಶೀಲೆಯೋ... ಆಆಆ ..... ಆಆಆ....  
ಆಆಆ....  ಹೇಹೇಹೇ .. ಓಓಓ... ಹೂಂಹೂಂಹೂಂ  (ಆಆಆ)
 -------------------------------------------------------------------------------------------------

ಶುಭಾಶಯ (೧೯೭೭) - ಪ್ರೇಮ ವೀಣೆಯ ಶ್ರುತಿಯ 
ಸಂಗೀತ : ಎಂ.ರಂಗರಾವ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಸುಶೀಲಾ  

ಪ್ರೇಮ ವೀಣೆಯ ಶೃತಿಯ ಸೇರಿಸಿದೆ ನಾನೂ ಜೀವನ ತಾನವ ಅದರಲಿ ಮಿಡಿದೆ ನೀನೂ .. 
ಪ್ರೇಮ ವೀಣೆಯ ಶೃತಿಯ ಸೇರಿಸಿದೆ ನಾನೂ ಜೀವನ ತಾನವ ಅದರಲಿ ಮಿಡಿದೆ ನೀನೂ .. 
ನನ್ನ ಕನಸೆಲ್ಲ ಮನಸಲ್ಲೇ  ಕೊನೆಗಾಣಲೀ ನನಸಾದ ಸುಖವೆಲ್ಲ ನಿನಗಾಗಲೀ .. 

ಆಸೆಯ ಹೂ ಮೂಡಿದು ಅನುವಾದೆ ಹಸೆಗೆ ಮಧುವಾಗೋ ಸೌಭಾಗ್ಯ ಬಂತಮ್ಮಾ ನಿನಗೆ.. 
ಆಸೆಯ ಹೂ ಮೂಡಿದು ಅನುವಾದೆ ಹಸೆಗೆ ಮಧುವಾಗೋ ಸೌಭಾಗ್ಯ ಬಂತಮ್ಮಾ ನಿನಗೆ.. 
ಹೊನಳಲಿ ಒಲವೂ ಬೆಳೆಯಲಿ ಕೊಳವೂ 
ಹೊನಳಲಿ ಒಲವೂ ಬೆಳೆಯಲಿ ಕೊಳವೂ  ಅರಿಷಿಣ ಕುಂಕುಮ ನೆಲೆಯಾಗಲಿ ಮೊಗವೂ 
ಪ್ರೇಮ ವೀಣೆಯ ಶೃತಿಯ ಸೇರಿಸಿದೆ ನಾನೂ ಜೀವನ ತಾನವ ಅದರಲಿ ಮಿಡಿದೆ ನೀನೂ .. 
ನನ್ನ ಕನಸೆಲ್ಲ ಮನಸಲ್ಲೇ  ಕೊನೆಗಾಣಲೀ ನನಸಾದ ಸುಖವೆಲ್ಲ ನಿನಗಾಗಲೀ .. 

ದೇವರ ಕೇಳಿದೆ ವರಧನ ಬಂತೂ ಬರೆದನು ಅವನೂ ಕಥೆ ಬೇರೊಂದು 
ದೇವರ ಕೇಳಿದೆ ವರಧನ ಬಂತೂ ಬರೆದನು ಅವನೂ ಕಥೆ ಬೇರೊಂದು 
ಆನಂದ ಜ್ಯೋತಿಯು ಬೆಳಗಲಿ ಮನೆಯ.. 
ಆನಂದ ಜ್ಯೋತಿಯು ಬೆಳಗಲಿ ಮನೆಯ ಇದೇ ಎಂದಿಗೂ ನನ್ನ  ಶುಭಾಷಯ 
ಪ್ರೇಮ ವೀಣೆಯ ಶೃತಿಯ ಸೇರಿಸಿದೆ ನಾನೂ ಜೀವನ ತಾನವ ಅದರಲಿ ಮಿಡಿದೆ ನೀನೂ .. 
ನನ್ನ ಕನಸೆಲ್ಲ ಮನಸಲ್ಲೇ  ಕೊನೆಗಾಣಲೀ ನನಸಾದ ಸುಖವೆಲ್ಲ ನಿನಗಾಗಲೀ .. 
-------------------------------------------------------------------------------------------------

ಶುಭಾಶಯ (೧೯೭೭) - ಒಲವ ಒಡವೇ ತೊಟ್ಟ ವಯ್ಯಾರೀ 
ಸಂಗೀತ : ಎಂ.ರಂಗರಾವ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಪಿ. ಬಿ, ಪಿ.ಸುಶೀಲಾ  

ಗಂಡು : ಒಲವ... ಒಡವೆ ತೊಟ್ಟ ವಯ್ಯಾರಿ ಚೆಲುವ ನಂದನದ ಮಯೂರಿ ನನ್ನ ಸಿಂಗಾರೀ ... ಮನೋಹರಿ.. 
           ಒಲವ... ಒಡವೆ ತೊಟ್ಟ ವಯ್ಯಾರಿ ಚೆಲುವ ನಂದನದ ಮಯೂರಿ ನನ್ನ ಸಿಂಗಾರೀ ... ಮನೋಹರಿ.. 
ಹೆಣ್ಣು : ಆಆಆ... ಆಆಆ... ಆಆಆ... ಆಆಆ... 

ಗಂಡು : ಬೇಲೂರ ಬಾಲೆಯೋಲು ಬಳುಕುತ ಬಂದೆ ಶೃಂಗಾರ ರಸಧಾರೆ ಮೈ ತಾಳಿ ತಂದೇ .. 
ಹೆಣ್ಣು : ಆಆಆ... ಆಆಆ... ಆಆಆ... ಆಆಆ... 
ಗಂಡು : ಆಆಆ... ಬೇಲೂರ ಬಾಲೆಯೋಲು ಬಳುಕುತ ಬಂದೆ ಶೃಂಗಾರ ರಸಧಾರೆ ಮೈ ತಾಳಿ ತಂದೇ .. 
           ಝಗ ಝಗಿಸಿ (ಆಹಾ) ನಗೆ ನಗಿಸಿ (ಆಹಾ)
           ಝಗ ಝಗಿಸಿ ನಗೆ ನಗಿಸಿ ನಲಿನಲಿಸಿ ಮನವಲಿಸಿ ನಿನ್ನಲ್ಲೀ ನಾ ವನ್ಯವಾಗಿ  
           ಒಲವ... ಒಡವೆ ತೊಟ್ಟ ವಯ್ಯಾರಿ ಚೆಲುವ ನಂದನದ ಮಯೂರಿ ನನ್ನ ಸಿಂಗಾರೀ ... ಮನೋಹರಿ.. 

ಗಂಡು : ರಾಧೇ... ರಾಧೇ... ರಾಧೇ...  ರಾಧೇ... ರಾಧೇ... ರಾಧೇ... 
            ಅಂದದ ಯಮುನೆ ಹರಿಯುತಿದೆ ಸಂಗಮ ಸಮಯ ಬಂದಿದೆ 
            ಅಂದದ ಯಮುನೆ ಹರಿಯುತಿದೆ ಸಂಗಮ ಸಮಯ ಬಂದಿದೆ 
           ಎಲ್ಲವೂ ವ್ಯರ್ಥ ನೀ ಬರದೇ..  ರಾಧೇ ಎಲ್ಲಿ ಹೋದೇ ರಾಧೇ ಎಲ್ಲಿ ಹೋದೇ 
ಹೆಣ್ಣು : ಆಆಆ... ಆಆಆ... ಆಆಆ... ಆಆಆ... 
------------------------------------------------------------------------------------------------

ಶುಭಾಶಯ (೧೯೭೭) - ಮಮತೆಯ ಬಳ್ಳಿಯಲೀ ಹೂವೇ ನೀನಿರುವೇ 
ಸಂಗೀತ : ಎಂ.ರಂಗರಾವ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಪಿ.ಸುಶೀಲಾ 

ಮಮತೆಯ ಬಳ್ಳಿಯಲಿ ಹೂವೆ ನೀನಿರುವೇ ಪ್ರೀತಿಯ ನೀರೆರೆಯೇ ಮಗುವೇ ನಾನಿರುವೆ 
ಮಮತೆಯ ಬಳ್ಳಿಯಲಿ ಹೂವೆ ನೀನಿರುವೇ ಪ್ರೀತಿಯ ನೀರೆರೆಯೇ ಮಗುವೇ ನಾನಿರುವೆ 
ಮಗುವೇ ನಾನಿರುವೆ 

ಯಾವುದ ಪಾಶವದು ನಮ್ಮನೂ ಬಂಧಿಸಿದೇ ತಾಯಿಯ ಸ್ಥಾನದಲಿ ನನ್ನನೂ ನಿಲ್ಲಿಸಿದೇ .. 
ನಿನ್ನ ನಗುವಿನಲೇ . ನನ್ನನೇ ನಾ ಮರೆವೇ .. ನಿನ್ನೀ ಸಂಗದಲಿ ದಿನಗಳ ನಾ ಕಳೆವೆ 
ಹೃದಯದ ಹಣತೆಗಳ ನಿನಗೆ ತಂದಿರುವೇ 
ಮಮತೆಯ ಬಳ್ಳಿಯಲಿ ಹೂವೆ ನೀನಿರುವೇ ಪ್ರೀತಿಯ ನೀರೆರೆಯೇ ಮಗುವೇ ನಾನಿರುವೆ 
ಮಗುವೇ ನಾನಿರುವೆ 

ಮನುಜನು ಬಗೆದಂತೇ ದೈವವೂ ಬಗೆಯುವುದೇ 
ನಡೆದರೇ ಸೆಳೆದಂತೆ ದೈವಕೇ ಬೆಲೆವಿಹುದೇ 
ಕಾಲದ ಬಸಿರಿನಲೇ.. ಕಾಣದ ಕಥೆ ಇಹುದು  
ನೀರಿನ ಹೂಟದಲಿ ರಾಣಿಯೂ ಸಾರವಿಹುದು 
ನಂಬಿಕೆ ನೆರಳಿನಲಿ ಎಂದೋ ಕಾದಿರುವೇ .. 
ಮಮತೆಯ ಬಳ್ಳಿಯಲಿ ಹೂವೆ ನೀನಿರುವೇ ಪ್ರೀತಿಯ ನೀರೆರೆಯೇ ಮಗುವೇ ನಾನಿರುವೆ 
ಮಗುವೇ ನಾನಿರುವೆ.. ಆಆಆ... ಆಆಆ.... ಹೂಂಹೂಂಹೂಂಹೂಂಹೂಂ -------------------------------------------------------------------------------------------------

No comments:

Post a Comment