ತಾಯಿ ಕರುಳು ಚಲನಚಿತ್ರದ ಹಾಡುಗಳು
- ಬಾ ತಾಯೀ ಭಾರತಿ
- ದೂರದಿಂದ ಬಂದವರೇ
- ತಾಯಿ ತಂದೆ ಇಬ್ಬರು ಪಾಪ ನಿನ್ನ ದೇವರು
- ಮನಸು ಮನಸು ಕಲೆತರೇನೇ
ತಾಯಿ ಕರುಳು (೧೯೬೨) - ಬಾ ತಾಯೀ ಭಾರತಿ
ಸಂಗೀತ : ಜೆ.ಕೆ.ವೆಂಕಟೇಶ, ಗಾಯಕ : ಪಿ.ಬಿ.ಶ್ರೀನಿವಾಸ
ಬಾ ತಾಯೆ ಭಾರತಿಯೇ ಭಾವ ಬಾವಭಾಗೀರಥಿಯೇ
ಹೃದಯ ವೀಣೆಯ ಮೀಟಿ ಮಧುರ ಗೀತೆಯ ನೀಡೆ
ಕನ್ನಡದ ಕಸ್ತೂರಿ ತಿಲಕವಿಟ್ಟು ಕನ್ನಡದ ಕಾವ್ಯಗಳ ಮಾಲೆ ತೊಟ್ಟು
ಕನ್ನಡದ ಕಾಲ್ಗೆಜ್ಜೆ ನಾದ ತೊಟ್ಟು ಹೊನ್ನುಡಿಯ ಭೂಮಿಯಲಿ ಹೆಜ್ಜೆಯಿಟ್ಟು
ಬಾ ತಾಯೆ ಭಾರತಿಯೇ ಭಾವ ಬಾವಭಾಗೀರಥಿಯೇ
ಹೃದಯ ವೀಣೆಯ ಮೀಟಿ ಮಧುರ ಗೀತೆಯ ನೀಡೆ
ಕಾವೇರಿ ಕಾಲ್ತೊಳೆಯ ಕಾದಿರುವಳು ಗೋದಾವರಿ ದೇವಿ ಹೂ ಮುಡಿವಳು
ಒಡಲೆಲ್ಲ ಸಿಂಗರಿಸೆ ತುಂಗೆ ಇಹಳು ಒಡನಾಡಿ ಭದ್ರೆ ತಾ ಜೊತೆಗಿರುವುಳು
ಬಾ ತಾಯೆ ಭಾರತಿಯೇ ಭಾವ ಬಾವಭಾಗೀರಥಿಯೇ
ಹೃದಯ ವೀಣೆಯ ಮೀಟಿ ಮಧುರ ಗೀತೆಯ ನೀಡೆ
-----------------------------------------------------------------------------------------------
ತಾಯಿ ಕರುಳು - ದೂರದಿಂದ ಬಂದವರೇ
ಸಂಗೀತ : ಜೆ.ಕೆ.ವೆಂಕಟೇಶ, ಗಾಯಕ :ಎಲ್.ಆರ್.ಈಶ್ವರಿ
ದೂರದಿಂದ ಬಂದವರೇ
ದೂರದಿಂದ ಬಂದವರೇ ಬಾಗಿಲಲಿ ನಿಂದವರೇ
ಮಂದಿರವು ಚೆನ್ನಿದೆಯೇ ಆರಾಮವಾಗಿದೆಯೇ
ಮಂದಿರವು ಚೆನ್ನಿದೆಯೇ ಆರಾಮವಾಗಿದೆಯೇ
ದೂರದಿಂದ ಬಂದವರೇ ಬಾಗಿಲಲಿ ನಿಂದವರೇ
ಮಂದಿರವು ಚೆನ್ನಿದೆಯೇ ಆರಾಮವಾಗಿದೆಯೇ
ಯಾವುದು ಎಲ್ಲಿದೆ ಎಂಬುದ ತಿಳಿಯದೆ
ಯಾವುದು ಎಲ್ಲಿದೆ ಎಂಬುದ ತಿಳಿಯದೆ
ಯೋಚಿಸಬೇಡಿ ಬರುವೆನು ಓಡೋಡಿ
ಯೋಚಿಸಬೇಡಿ ಬರುವೆನು ಓಡೋಡಿ
ಕವಿತೆ ಇಲ್ಲಿಹಳು ಕಲೆಗಾತಿ ಎದುರಿಹಳು
ಕವಿತೆ ಇಲ್ಲಿಹಳು ಕಲೆಗಾತಿ ಎದುರಿಹಳು
ಗಾನ ಕೋಕಿಲೆ ಇಲ್ಲಿ ಅವಿತುಕೊಂಡಿರುವುಳು
ಮಂದಿರವು ಚೆನ್ನಿದೆಯೇ ಆರಾಮವಾಗಿದೆಯೇ
ದೂರದಿಂದ ಬಂದವರೇ ಬಾಗಿಲಲಿ ನಿಂದವರೇ
ಮಂದಿರವು ಚೆನ್ನಿದೆಯೇ ಆರಾಮವಾಗಿದೆಯೇ ಆಆಆ... ಆಆಆ
ನಿಮ್ಮ ಕಂಡು ಒಬ್ಬರೂ ಹೊಸಬರೆಂದು ನಾಚರು
ನಿಮ್ಮ ಕಂಡು ಒಬ್ಬರೂ ಹೊಸಬರೆಂದು ನಾಚರು
ಕರೆಯದೆ ಬರುವರು ನಿಮ್ಮೊಡನಾಡುವರು
ಕರೆಯದೆ ಬರುವರು ನಿಮ್ಮೊಡನಾಡುವರು
ನೀವಿಲ್ಲಿ ಬರುವ ಮೊದಲು ಇವರೆನ್ನ ಗೆಳತಿಯರು
ನೀವಿಲ್ಲಿ ಬರುವ ಮೊದಲು ಇವರೆನ್ನ ಗೆಳತಿಯರು
ನೀವು ಬಂದೊಡನಿವರು ಆಗಿಹರು ಸವತಿಯರು
ಮಂದಿರವು ಚೆನ್ನಿದೆಯೇ ಆರಾಮವಾಗಿದೆಯೇ
ದೂರದಿಂದ ಬಂದವರೇ ಬಾಗಿಲಲಿ ನಿಂದವರೇ
ಮಂದಿರವು ಚೆನ್ನಿದೆಯೇ ಆರಾಮವಾಗಿದೆಯೇ
ದೂರದಿಂದ ಬಂದವರೇ...
-----------------------------------------------------------------------------------------------
ತಾಯಿ ಕರುಳು - ತಾಯಿ ತಂದೆ ಇಬ್ಬರೂ ಪಾಪ ನಿನ್ನ ದೇವರು
ಸಂಗೀತ : ಜೆ.ಕೆ.ವೆಂಕಟೇಶ, ಗಾಯಕ : ಎಸ್.ಜಾನಕೀ, ಏ.ಪಿ.ಕೋಮಲ
ತಾಯಿ ತಂದೆ ಇಬ್ಬರೂ ಪಾಪ ನಿನ್ನ ದೇವರು
ತಾಯಿ ತಂದೆ ಇಬ್ಬರೂ ಪಾಪ ನಿನ್ನ ದೇವರು
ನಿನ್ನ ಆಟ ಪಾಠಕೆ ಎನ್ನ ಪುಟ್ಟ ಕಾಣಿಕೆ
ನಿನ್ನ ಆಟ ಪಾಠಕೆ ಎನ್ನ ಪುಟ್ಟ ಕಾಣಿಕೆ
ತಾಯಿ ತಂದೆ ಇಬ್ಬರೂ ಪಾಪ ನಿನ್ನ ದೇವರು
ಎನ್ನ ಚೆಲುವ ಗುಡಿಯೋ ಈ ಮನೆಯ ಸಿಂಗಾರವೋ
ಎನ್ನ ಚೆಲುವ ಗುಡಿಯೋ ಈ ಮನೆಯ ಸಿಂಗಾರವೋ
ತಾಯ್ ಕರುಳ ಕುಡಿಯೋ ನೀ ಎನ್ನ ಜೀವ ನಿಧಿಯೋ
ತಾಯ್ ಕರುಳ ಕುಡಿಯೋ ನೀ ಎನ್ನ ಜೀವ ನಿಧಿಯೋ
ಎನ್ನ ಚೆಲುವ ಗುಡಿಯೋ ಈ ಮನೆಯ ಸಿಂಗಾರವೋ
ಹೆತ್ತೊಡನೆ ಕಾಣುವೇ ನೀ ತಾಯ ಮೊಗವನು
ಹೆತ್ತೊಡನೆ ಕಾಣುವೇ ನೀ ತಾಯ ಮೊಗವನು
ಅದ ಕಣ್ಣು ಮನದೆ ಕಡೆವರೆಗೂ ಕಾಪಿಡೊ ಕಂದ
ತೆರೆದ ಮನವು ಹಿರಿದು ಅರಿವು ನಿನಗಿರೆ ಚಂದ
ನೀ ಅರಸುತಿರುವ ದಾರಿಯಲಿ ನಿಜ ಹುಡುಕು ಕಂದಾ
ತಾಯಿ ತಂದೆ ಇಬ್ಬರೂ ಪಾಪ ನಿನ್ನ ದೇವರು
ಓದಿ ತಂದ ಪುಸ್ತಕವ ಹರಿಯಕೂಡದು
ಓದಿ ತಂದ ಪುಸ್ತಕವ ಹರಿಯಕೂಡದು
ಒಳ್ಳೆ ದಾರಿ ಬಿಟ್ಟು ಅಡ್ಡ ದಾರಿ ಹಿಡಿಯಕೂಡದು
ಒಳ್ಳೆ ದಾರಿ ಬಿಟ್ಟು ಅಡ್ಡ ದಾರಿ ಹಿಡಿಯಕೂಡದು
ಗೆಳೆಯರ ನೀ ಒದೆವ ಆಟ ಆಡಬಾರದು
ತಾಯ ಕಣ್ಣ ಚುಚ್ಚುವಾಟ ಆಡಕೂಡದು
ಎನ್ನ ಚೆಲುವ ಗುಡಿಯೋ ಈ ಮನೆಯ ಸಿಂಗಾರವೋ
ನೊಂದೆದೆಯ ಮನುಜರ ನೋವಾರಿಸೆ ಚೆಂದ
ನೊಂದೆದೆಯ ಮನುಜರ ನೋವಾರಿಸೆ ಚೆಂದ
ನೆರಳ ನಿವ ಮರವಾಗಿ ಬಾಳೆಲೋ ಕಂದ
ನೆರಳ ನಿವ ಮರವಾಗಿ ಬಾಳೆಲೋ ಕಂದ
ಎದೆಯೊಳಗೆ ತುಂಬಾ ಕರುಣೆ ನೆಲೆಸಿರಬೇಕು
ಕಣ್ಣಿನಲಿ ನಿಜದ ಬೆಳಕು ತುಂಬಿರಬೇಕು
-----------------------------------------------------------------------------------------------
ತಾಯಿ ಕರುಳು - ಮನಸು ಮನಸು ಕಲೆತರೇನೇ
ಸಂಗೀತ : ಜೆ.ಕೆ.ವೆಂಕಟೇಶ, ಗಾಯಕ :
ಮನಸು ಮನಸು ಕಲೆತರೇನೆ ಮನುಜ ಬಾಳು ಸುಖವು ತಾನೇ
ಸ್ವರಕೆ ಸ್ವರವು ಬೆರೆತರೇನೆ ಸಂಗೀತದ ಸವಿಯು ಶಾನೇ
ಸಾಗುವ ನೇಗಿಲಲಿ ಸಾ ಸಾ ಸಾ ಎಂಬ ಸ್ವರ
ರೂಪ ಕೊಡುವ ಗಾಲಿಯಲಿ ರೀ ರೀ ರೀ ಸ್ವರ
ಗಾರೆಗಾರ ಕರಣೆಯಲಿ ಗರ ಗರ ಗರ ಗಾ ಸ್ವರ
ಮಟ್ಟೆ ತಟ್ಟೆ ಕಮ್ಮಾರನ ಮಕಾರದೇ ಡಂಕಾರ
ಪಾಲು ಮಾರದಂತೆ ಕೊಯ್ದ ಗರಗಸದ ಪರ್ರಾಸರ
ದಾರ ಸೂಜಿ ಚಿಪ್ಪಿಗನ ಕೈ ಸೇರೇ ದರ್ರಾದರಾ
ನೀಡೆ ಜೋಡೆ ಚಮ್ಮಾರ ನಿರಂತರ ನಿರ್ರಾನಿರಾ
ಹಾಡು ಕೆಲವು ಆದರೇನು ಇರುವುದು ಎಳೇ ಸ್ವರ
ಭಾರತೀಯ ಕರುಳ ಕೂಗುಲಿರುವುದು ಒಂದೇ ಸ್ವರ
-----------------------------------------------------------------------------------------------
No comments:
Post a Comment