- ಹೂವಿಗೆ ತಂಗಾಳಿ ಬೇಡವೆ, ತಂಗಾಳಿ ಬೇಡವೆ
- ಓಹೋ ಚಂದ್ರಮ, ಕೇಳಯ್ಯ ಚಂದ್ರಮ
- ಬಾರೋ ಗೆಳೆಯ
- ಭುಲ್ ಭುಲ್
- ಇಂಚರ ಇಂಚರ
- ರಾಜ ರಾಜ ಮಹಾರಾಜ
ಚಂದ್ರೋದಯ (1999) - ಹೂವಿಗೆ ತಂಗಾಳಿ ಬೇಡವೆ
ಸಂಗೀತ:ಸಾಹಿತ್ಯ: ಹಂಸಲೇಖ ಗಾಯನ : ಎಸ್.ಪಿ.ಬಿ., ಚಿತ್ರಾ
ಹೂವಿಗೆ ತಂಗಾಳಿ ಬೇಡವೆ, ತಂಗಾಳಿ ಬೇಡವೆ
ಹೂವಿಗೆ ತಂಗಾಳಿ ಬೇಡವೆ, ತಂಗಾಳಿ ಬೇಡವೆ
ಹೂವಿಗೆ ತಂಗಾಳಿ ಬೇಡವೆ, ತಂಗಾಳಿ ಬೇಡವೆ
ಗಾಳಿ ಮೇಲೆ ಮಲ್ಲೆ ಮೊಗ್ಗು ಮುನಿಸಿಕೊಂಡರೆ
ಮುನಿಸಿಕೊಂಡರೆ ಸುಗಂಧವೆಲ್ಲಿದೆ
ಸಾಗರ ನದೀಗೆ ಬೇಡವೆ, ನದೀಗೆ ಬೇಡವೆ
ಕಡಲ ಮೇಲೆ ನದಿಯು ತಾನು ಮುನಿಸಿಕೊಂಡರೆ
ಮರಳಿ ಹೋಗಲು ದಾರಿ ಎಲ್ಲಿದೆ
ಹೂವಿಗೆ ತಂಗಾಳಿ ಬೇಡವೆ, ತಂಗಾಳಿ ಬೇಡವೆ
ವಸಂತ ಕಾಲಕೆ ಸಂಗೀತ ಕೋಗಿಲೆ
ತನ್ನಿಂಚರ ತರದಿದ್ದರೆ ಏನೆನ್ನಲಿ
ತನ್ನಿಂಚರ ತರದಿದ್ದರೆ ಏನೆನ್ನಲಿ
ವಿವಾಹ ಬಂಧನ ಸಮ್ಮಿಲನ ಗಾಯನ
ನೀನೊಬ್ಬನೆ ಹಾಡೆಂದರೆ ಏನೆನ್ನಲಿ
ನೀನೊಬ್ಬನೆ ಹಾಡೆಂದರೆ ಏನೆನ್ನಲಿ
ವೇದದ ನಡುವೆ ಬೊಂಬೆಯ ಮದುವೆ
ಅದೇಕೆ ಬೇಕೋ ಕಾಣೆ
ಭೂಮಿಗೆ ಚಂದ್ರಮನು ಬೇಡವೆ, ಚಂದ್ರಮನು ಬೇಡವೆ
ಚಂದ್ರನೊಡನೆ ಭೂಮಿ ತಾನು ಮಾತು ಬಿಟ್ಟರೆ
ಪ್ರೀತಿ ಪ್ರೇಮಕೆ ಸ್ಪೂರ್ತಿ ಎಲ್ಲಿದೆ
ಹೂವಿಗೆ ತಂಗಾಳಿ ಬೇಡವೆ, ತಂಗಾಳಿ ಬೇಡವೆ
ನಿಸರ್ಗ ನಿಯಮವ ಮೀರೋದು ಸಾಧ್ಯವ
ನಡು ರಾತ್ರಿಲಿ ಬಯಸದಿರು ಸೂರ್ಯೋದಯ
ಇನ್ನೆಂದಿಗೂ ನೀ ಕಾಣೆಯ ಸೂರ್ಯೋದಯ
ಮನಸನ್ನು ಬದಲಿಸು ಬಾಳನ್ನು ಪ್ರೀತಿಸು
ಭಾವಗಳ ಬಾನಲ್ಲಿ ತಾ ಪ್ರೇಮೋದಯ
ನಿನಗಾಗಿಯೆ ಕಾದಿರುವುದೀ ಚಂದ್ರೋದಯ
ಬಿರಿಯೋ ಮೊದಲು ಹೃದಯದ ಅಳಲು
ನೀನೊಮ್ಮೆ ಕೇಳೇ ಜಾಣೆ
ಹೂವಿಗೆ ತಂಗಾಳಿ ಬೇಡವೆ, ತಂಗಾಳಿ ಬೇಡವೆ
ಗಾಳಿ ಮೇಲೆ ಮಲ್ಲೆ ಮೊಗ್ಗು ಮುನಿಸಿಕೊಂಡರೆ
ಮುನಿಸಿಕೊಂಡರೆ ಸುಗಂಧವೆಲ್ಲಿದೆ
ಹೂವಿಗೆ ತಂಗಾಳಿ ಬೇಡವೆ, ತಂಗಾಳಿ ಬೇಡವೆ
-----------------------------------------------------------------------------------------------------------------------
ಚಂದ್ರೋದಯ (1999) - ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಸಂಗೀತ: ಸಾಹಿತ್ಯ: ಹಂಸಲೇಖ ಹಾಡಿದವರು: ಎಸ್.ಪಿ.ಬಿ.
ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಒಲವಿನಾ ಕಥೆಯ, ಒಲವಿನಾ ಕಥೆಯ
ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಒಲವಿನಾ ಕಥೆಯ, ಒಲವಿನಾ ಕಥೆಯ
ಒಲ್ಲದ ಒಲವಿನಲಿ, ಬಾಳುವ ಈ ಜೊತೆಯ
ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಓಹೋ ಚಂದ್ರಮ
ಗುಲಾಬಿ ಹೂವಿನಲ್ಲಿ, ಅದೇಕೊ ನಗುವೆ ಇಲ್ಲ
ಮುಳ್ಳಿಂದ ಮುತ್ತಿನೆಡೆಗೆ, ಅದೇಕೊ ಬಾರದಲ್ಲ
ಕಂಗಳಿಂದ ಕಂಗಳ, ಕನಸ ಕಾಣಲು ಕೊಡದಲ್ಲ
ಹೃದಯದಿಂದ ಹೃದಯವ, ಅಳೆದು ನೋಡಲು ಬಿಡದಲ್ಲ
ಸಪ್ತಪದಿಗಳೆಂಬ, ಸೆರೆಯಲಿರುವ ಹೊಸ ಕಥೆಯ
ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಒಲವಿನಾ ಕಥೆಯ, ಒಲವಿನಾ ಕಥೆಯ
ಒಲ್ಲದ ಒಲವಿನಲಿ, ಬಾಳುವ ಈ ಜೊತೆಯ
ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಓಹೋ ಚಂದ್ರಮ
ನಿಟ್ಟುಸಿರ ಜಗಳದಲ್ಲಿ, ದೂರಾಯ್ತು ಜೋಡಿ ಮಂಚ
ಭಾವಗಳ ಕದನದಲ್ಲಿ, ಹೋಳು ಹೃದಯದ ಪ್ರಪಂಚ
ಅಂತರಂಗದ ಆಗಸ, ಬೆಳಕು ಕಾಣದೆ ಅಲೆಯುತಿದೆ
ಅಂದದ ಈ ಅಂತಃಪುರ, ಅರ್ಥವಿಲ್ಲದೆ ಆಳುತಲಿದೆ
ವಿರಹವೆಂಬ ವಿಷವ, ವಿನಾ ಕಾರಣ ಕುಡಿದವರ
ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಒಲವಿನಾ ಕಥೆಯ, ಒಲವಿನಾ ಕಥೆಯ
ಒಲ್ಲದ ಒಲವಿನಲಿ, ಬಾಳುವ ಈ ಜೊತೆಯ
ಓಹೋ ಚಂದ್ರಮ, ಕೇಳಯ್ಯ ಚಂದ್ರಮ ಓಹೋ ಚಂದ್ರಮ
ಸಂಗೀತ:ಸಾಹಿತ್ಯ: ಹಂಸಲೇಖ ಗಾಯನ : ಎಸ್.ಪಿ.ಬಿ., ಚಿತ್ರಾ
ಹೂವಿಗೆ ತಂಗಾಳಿ ಬೇಡವೆ, ತಂಗಾಳಿ ಬೇಡವೆ
ಹೂವಿಗೆ ತಂಗಾಳಿ ಬೇಡವೆ, ತಂಗಾಳಿ ಬೇಡವೆ
ಹೂವಿಗೆ ತಂಗಾಳಿ ಬೇಡವೆ, ತಂಗಾಳಿ ಬೇಡವೆ
ಗಾಳಿ ಮೇಲೆ ಮಲ್ಲೆ ಮೊಗ್ಗು ಮುನಿಸಿಕೊಂಡರೆ
ಮುನಿಸಿಕೊಂಡರೆ ಸುಗಂಧವೆಲ್ಲಿದೆ
ಸಾಗರ ನದೀಗೆ ಬೇಡವೆ, ನದೀಗೆ ಬೇಡವೆ
ಕಡಲ ಮೇಲೆ ನದಿಯು ತಾನು ಮುನಿಸಿಕೊಂಡರೆ
ಮರಳಿ ಹೋಗಲು ದಾರಿ ಎಲ್ಲಿದೆ
ಹೂವಿಗೆ ತಂಗಾಳಿ ಬೇಡವೆ, ತಂಗಾಳಿ ಬೇಡವೆ
ವಸಂತ ಕಾಲಕೆ ಸಂಗೀತ ಕೋಗಿಲೆ
ತನ್ನಿಂಚರ ತರದಿದ್ದರೆ ಏನೆನ್ನಲಿ
ತನ್ನಿಂಚರ ತರದಿದ್ದರೆ ಏನೆನ್ನಲಿ
ವಿವಾಹ ಬಂಧನ ಸಮ್ಮಿಲನ ಗಾಯನ
ನೀನೊಬ್ಬನೆ ಹಾಡೆಂದರೆ ಏನೆನ್ನಲಿ
ನೀನೊಬ್ಬನೆ ಹಾಡೆಂದರೆ ಏನೆನ್ನಲಿ
ವೇದದ ನಡುವೆ ಬೊಂಬೆಯ ಮದುವೆ
ಅದೇಕೆ ಬೇಕೋ ಕಾಣೆ
ಭೂಮಿಗೆ ಚಂದ್ರಮನು ಬೇಡವೆ, ಚಂದ್ರಮನು ಬೇಡವೆ
ಚಂದ್ರನೊಡನೆ ಭೂಮಿ ತಾನು ಮಾತು ಬಿಟ್ಟರೆ
ಪ್ರೀತಿ ಪ್ರೇಮಕೆ ಸ್ಪೂರ್ತಿ ಎಲ್ಲಿದೆ
ಹೂವಿಗೆ ತಂಗಾಳಿ ಬೇಡವೆ, ತಂಗಾಳಿ ಬೇಡವೆ
ನಿಸರ್ಗ ನಿಯಮವ ಮೀರೋದು ಸಾಧ್ಯವ
ನಡು ರಾತ್ರಿಲಿ ಬಯಸದಿರು ಸೂರ್ಯೋದಯ
ಇನ್ನೆಂದಿಗೂ ನೀ ಕಾಣೆಯ ಸೂರ್ಯೋದಯ
ಮನಸನ್ನು ಬದಲಿಸು ಬಾಳನ್ನು ಪ್ರೀತಿಸು
ಭಾವಗಳ ಬಾನಲ್ಲಿ ತಾ ಪ್ರೇಮೋದಯ
ನಿನಗಾಗಿಯೆ ಕಾದಿರುವುದೀ ಚಂದ್ರೋದಯ
ಬಿರಿಯೋ ಮೊದಲು ಹೃದಯದ ಅಳಲು
ನೀನೊಮ್ಮೆ ಕೇಳೇ ಜಾಣೆ
ಹೂವಿಗೆ ತಂಗಾಳಿ ಬೇಡವೆ, ತಂಗಾಳಿ ಬೇಡವೆ
ಗಾಳಿ ಮೇಲೆ ಮಲ್ಲೆ ಮೊಗ್ಗು ಮುನಿಸಿಕೊಂಡರೆ
ಮುನಿಸಿಕೊಂಡರೆ ಸುಗಂಧವೆಲ್ಲಿದೆ
ಹೂವಿಗೆ ತಂಗಾಳಿ ಬೇಡವೆ, ತಂಗಾಳಿ ಬೇಡವೆ
-----------------------------------------------------------------------------------------------------------------------
ಚಂದ್ರೋದಯ (1999) - ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಸಂಗೀತ: ಸಾಹಿತ್ಯ: ಹಂಸಲೇಖ ಹಾಡಿದವರು: ಎಸ್.ಪಿ.ಬಿ.
ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಒಲವಿನಾ ಕಥೆಯ, ಒಲವಿನಾ ಕಥೆಯ
ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಒಲವಿನಾ ಕಥೆಯ, ಒಲವಿನಾ ಕಥೆಯ
ಒಲ್ಲದ ಒಲವಿನಲಿ, ಬಾಳುವ ಈ ಜೊತೆಯ
ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಓಹೋ ಚಂದ್ರಮ
ಗುಲಾಬಿ ಹೂವಿನಲ್ಲಿ, ಅದೇಕೊ ನಗುವೆ ಇಲ್ಲ
ಮುಳ್ಳಿಂದ ಮುತ್ತಿನೆಡೆಗೆ, ಅದೇಕೊ ಬಾರದಲ್ಲ
ಕಂಗಳಿಂದ ಕಂಗಳ, ಕನಸ ಕಾಣಲು ಕೊಡದಲ್ಲ
ಹೃದಯದಿಂದ ಹೃದಯವ, ಅಳೆದು ನೋಡಲು ಬಿಡದಲ್ಲ
ಸಪ್ತಪದಿಗಳೆಂಬ, ಸೆರೆಯಲಿರುವ ಹೊಸ ಕಥೆಯ
ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಒಲವಿನಾ ಕಥೆಯ, ಒಲವಿನಾ ಕಥೆಯ
ಒಲ್ಲದ ಒಲವಿನಲಿ, ಬಾಳುವ ಈ ಜೊತೆಯ
ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಓಹೋ ಚಂದ್ರಮ
ನಿಟ್ಟುಸಿರ ಜಗಳದಲ್ಲಿ, ದೂರಾಯ್ತು ಜೋಡಿ ಮಂಚ
ಭಾವಗಳ ಕದನದಲ್ಲಿ, ಹೋಳು ಹೃದಯದ ಪ್ರಪಂಚ
ಅಂತರಂಗದ ಆಗಸ, ಬೆಳಕು ಕಾಣದೆ ಅಲೆಯುತಿದೆ
ಅಂದದ ಈ ಅಂತಃಪುರ, ಅರ್ಥವಿಲ್ಲದೆ ಆಳುತಲಿದೆ
ವಿರಹವೆಂಬ ವಿಷವ, ವಿನಾ ಕಾರಣ ಕುಡಿದವರ
ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಒಲವಿನಾ ಕಥೆಯ, ಒಲವಿನಾ ಕಥೆಯ
ಒಲ್ಲದ ಒಲವಿನಲಿ, ಬಾಳುವ ಈ ಜೊತೆಯ
ಓಹೋ ಚಂದ್ರಮ, ಕೇಳಯ್ಯ ಚಂದ್ರಮ ಓಹೋ ಚಂದ್ರಮ
-----------------------------------------------------------------------------------------------------------------------
ಚಂದ್ರೋದಯ (1999) - ಬಾರೋ ಗೆಳೆಯ
ಸಂಗೀತ: ಸಾಹಿತ್ಯ: ಹಂಸಲೇಖ ಹಾಡಿದವರು: ಕೆ.ಎಸ್.ಚಿತ್ರಾ .
ಸಂಗೀತ: ಸಾಹಿತ್ಯ: ಹಂಸಲೇಖ ಹಾಡಿದವರು: ಕೆ.ಎಸ್.ಚಿತ್ರಾ .
ಹೆಣ್ಣು : ಬಾರೋ ಬಾರೋ ಗೆಳೆಯ ಓ ಸ್ವಾತಿ ಮಳೆರಾಯ
ಕೋರಸ್ : ಓ ಸ್ವಾತಿ ಮಳೆರಾಯ
ಹೆಣ್ಣು : ಬಿಂದು ಬೃಂದ ತಂದು ತಣಿಸಯ್ಯ ಈ ಧರೆಯ
ಕೋರಸ್ : ತಣಿಸಯ್ಯ ಈ ಧರೆಯಾ
ಹೆಣ್ಣು : ಬಾರೋ ಬಾರೋ ಗೆಳೆಯ ಓ ಸ್ವಾತಿ ಮಳೆರಾಯ
ಹೆಣ್ಣು : ಕಾವ್ಯ ಕವನ ಕಾಣೋ ಕಂಗಳ ಬೆಂಕಿ ಆರಿಸು
ಕೋರಸ್ : ಬೆಂಕಿ ಆರಿಸು
ಹೆಣ್ಣು : ಒನ್ ಮೋರ್ ದೇಹ ಕೂಡಿಸೋ ಮೂಡ್ ಮೂಡಿಸು
ಕೋರಸ್ : ಮೂಡ್ ಮೂಡಿಸು
ಹೆಣ್ಣು : ಕಾಂಕ್ರೀಟ್ ಕಾಡು ಸಾಲು ಮರಗಳ ಮೊರೆ ಆಲಿಸು
ಎಲೆ ಎಲೆ ಧೂಳ ಒರೆಸು ಸ್ನಾನ ಮಾಡಿಸು
ಕೋರಸ್ : ಸ್ನಾನ ಮಾಡಿಸು
ಹೆಣ್ಣು : ಬೆವರು ಬಸಿಯೋ ಭಾರತೀಯ ನಾ ಗುಡಿಸಲನ್ನು ಮರೀಬೇಡ
ಅವನೇ ನಿನ್ನ ರೀಯಲ್ ಫ್ಯಾನ್ ಎಂಬ ಸತ್ಯ ಮರೀಬೇಡ
ನೀನು ಬಂದರೇ ಇಲ್ಲಿ ನಾವುಗಳು ಬಣ್ಣ ಚೆಲ್ಲುವ ಹೆಣ್ಣು ಹೂಗಳು
ನಿನ್ನ ಬಾನಿನ ಮಳೆಯ ಬಿಲ್ಲೆಗೆ ಬಣ್ಣ ಸಾಲ ತಂದೆವೋ ನಿನ್ನ ಋಣವ ನೆನೆದೆವೋ..
ಬಾರೋ ಬಾರೋ ಗೆಳೆಯ ಓ ಸ್ವಾತಿ ಮಳೆರಾಯ
ಹೆಣ್ಣು : ಮೋಡದಲ್ಲಿ ಕೂತು ಕೂತು ಸಾಕಾಯಿತೇ ಕೋರಸ್ : ಸಾಕಾಯಿತೇ..
ಹೆಣ್ಣು : ಊರು ಊರು ಟೂರು ಮಾಡಿ ಬೋರಾಯಿತೇ ಕೋರಸ್ : ಬೋರಾಯಿತೇ
ಹೆಣ್ಣು : ವೇರಿ ಸಾರೀ ಸ್ವಾತಿ ಮಳೆಯ ಸಿಟಿಗಲ್ಲ ಬೀಕಾಸ್ ಇಲ್ಲೂ ಮುತ್ತುಗಳಾಗೋ ಕಡಲಿಲ್ಲ
ಕೋರಸ್ : ಕಡಲಿಲ್ಲ
ಹೆಣ್ಣು : ಎಲ್. ಓ . ವಿ. ಇ ಚಿತ್ತಿರುವ ಕೋಟಿ ಕೋಟಿ ಹೃದಯಗಳು
ನೀನು ಬಂದ ಖುಷಿಗಾಗಿ ಸ್ಪಷ್ಟ ಮಾಡುವ ಮುತ್ತುಗಳು
ನೀರು ಇಲ್ಲದ ಸಿನಿಮಾ ಎಲ್ಲಿದೆ ನೀನು ಬಾರದೆ ಸಾವೇಲ್ಲಿದೆ
ವರ್ಷ ವರ್ಷವೂ.. ವರ್ಷ ವರ್ಷವೂ ನಿನ್ನ ದಾರಿ ಕಾದೇವೋ ನಿನ್ನ ಕಂಡು ಹಾಡೆವೋ
ಬಾರೋ ಬಾರೋ ಗೆಳೆಯ ಓ ಸ್ವಾತಿ ಮಳೆರಾಯ
ಕೋರಸ್ : ಓ ಸ್ವಾತಿ ಮಳೆರಾಯ
ಹೆಣ್ಣು : ಬಿಂದು ಬೃಂದ ತಂದು ತಣಿಸಯ್ಯ ಈ ಧರೆಯ
ಕೋರಸ್ : ತಣಿಸಯ್ಯ ಈ ಧರೆಯಾ
ಹೆಣ್ಣು : ಬಾರೋ ಬಾರೋ ಗೆಳೆಯ ಓ ಸ್ವಾತಿ ಮಳೆರಾಯ
-----------------------------------------------------------------------------------------------------------------------ಚಂದ್ರೋದಯ (1999) - ಭಲ್ ಭುಲ್
ಸಂಗೀತ: ಸಾಹಿತ್ಯ: ಹಂಸಲೇಖ ಹಾಡಿದವರು: ಕೆ.ಎಸ್.ಚಿತ್ರಾ, ರಮೇಶಚಂದ್ರ .
ಹೆಣ್ಣು : ಬೆಳದಿಂಗಳಲ್ಲಿ ನಗುವ ತಾಜಮಹಲನ್ನು ನೋಡು ಬುಲ್ ಬುಲಾ
ಮೊಹಬತ್ತಿನಲ್ಲಿರುವ ಬೆಳದಿಂಗಳನ್ನು ಮುಟ್ಟು ಬುಲ್ ಬುಲಾ
ತಾನಾನಿ ನಾನಾನಿ ತನ್ನನ್ನನ್ನನಾನಿ ತಾನಾನಿನ್ನಾ ಬುಲ್ ಬುಲಾ
ಗಂಡು : ಬುಲ್ ಬುಲಾ ಹೇ ಬುಲ್ ಬುಲಾ ಬುಲ್ ಬುಲಾ
ಲವ್ವಿಗೆ ಕಣ್ಣು ಮೂಗಿಲ್ಲ ಬಾಯಿಲ್ಲ..
ಲವ್ವಿಗೆ ಕಣ್ಣು ಮೂಗಿಲ್ಲ ಬಾಯಿಲ್ಲ..
ತಾಜಮಹಲಂತ ಹೃದಯ ಇರಲು ಭಯವೇ ಭಯವೇ ಅಂಜಿಕೆ ತರವೇ ...
ತಾಜಮಹಲಂತ ಹೃದಯ ಇರಲು ಭಯವೇ ಭಯವೇ ಅಂಜಿಕೆ ತರವೇ ...
ಗಂಡು : ಇಶ್ಕ್ ಪರ್ ಜೋರ್ ನಹೀ ಅಂತ ಕವಿ ಒಬ್ಬ ಹೇಳಿ ಹೋದ
ಕವಿ ಬರಹ ಬದಲಿಸಲು ಖುದಾ ತಿಣುಕಾಡಿ ಸೋತು ಹೋದಾ
ಹೆಣ್ಣು : ತಾನಾಗಿ ಉಕ್ಕಿ ಬಾರೋ ಅಂತರಗಂಗೆ ಎತ್ತ ಗಂಗೆ ತಡೆಯೋರಿಲ್ಲ ಬುಲ್ ಬುಲಾ
ಕೋರಸ್ : ಓಹೋ .. ಲವ್ ಇಲ್ಲದ ಲೈಫೂ ಬೇವೋ ಲವ್ವೋ ಲವ್ವೋ ಲವ್ ತುಂಬಿದ ಲೈಫೂ ಮಾವೋ
ಗಂಡು : ಪದ ಹಾಡಿಕೊಂಡ್ರೇ ಹೃದಯ ಅಲ್ಲಿ ಬೆಳಿಬಹುದು ಪ್ರೀತಿ ಬೆಳೆದು ಕದ ಹಾಕಿಕೊಂಡ ಹೃದಯ
ಒಡೆಯಲಾರದಂಥ ಕಲ್ಲು ಬಂಡೆಯಾ
ಹೆಣ್ಣು : ಪ್ರೀತಿಗೆ ಭೇಧ ಇಲ್ಲ ಅವಸರವಿಲ್ಲ ಅವರಸರವಿಲ್ಲ ಸಹನೆ ಇದೆ ಬುಲ್ ಬುಲಾ
ಗಂಡು : ಲವ್ವೋ ಲವ್ವೋ ಲವ್ ಒಂದು ಮಾಯದ ಹೂವು
ಲವ್ವೋ ಲವ್ವೋ ಅದರಿಂದಲೇ ಮಾಯ ನೋವು
ಬುಲ್ ಬುಲಾ ಹೇ ಬುಲ್ ಬುಲಾ ಬುಲ್ ಬುಲಾ
ಲವ್ವಿಗೆ ಕಣ್ಣು ಮೂಗಿಲ್ಲ ಬಾಯಿಲ್ಲ.. ಲವ್ವಿಗೆ ಕಣ್ಣು ಮೂಗಿಲ್ಲ ಬಾಯಿಲ್ಲ..
ತಾಜಮಹಲಂತ ಹೃದಯ ಇರಲು ಭಯವೇ ಭಯವೇ ಅಂಜಿಕೆ ತರವೇ ...
ತಾಜಮಹಲಂತ ಹೃದಯ ಇರಲು ಭಯವೇ ಭಯವೇ ಅಂಜಿಕೆ ತರವೇ ...
ಹೆಣ್ಣು : ಬೆಳದಿಂಗಳಲ್ಲಿ ನಗುವ ತಾಜಮಹಲನ್ನು ನೋಡು ಬುಲ್ ಬುಲಾ
ಮೊಹಬತ್ತಿನಲ್ಲಿರುವ ಬೆಳದಿಂಗಳನ್ನು ಮುಟ್ಟು ಬುಲ್ ಬುಲಾ
ತಾನಾನಿ ನಾನಾನಿ ತನ್ನನ್ನನ್ನನಾನಿ ತಾನಾನಿನ್ನಾ ಬುಲ್ ಬುಲಾ
-----------------------------------------------------------------------------------------------------------------------
ಚಂದ್ರೋದಯ (1999) - ಇಂಚರ ಇಂಚರ
ಸಂಗೀತ: ಸಾಹಿತ್ಯ: ಹಂಸಲೇಖ ಹಾಡಿದವರು: ಕೆ.ಎಸ್.ಚಿತ್ರಾ
ಸಂಗೀತ: ಸಾಹಿತ್ಯ: ಹಂಸಲೇಖ ಹಾಡಿದವರು: ಕೆ.ಎಸ್.ಚಿತ್ರಾ
ಇಂಚರ ಇಂಚರ ಇಂಚರ ಇಂಚರ ಇನಿಯನ ಇಂಚರ ಸಂಚಾರ
ಪ್ರೇಮದ ಸರಿಗಮ ಸಂಚಾರ
ಕುಹೂ ಕುಹೂ ಇಂಚರ ಒಂದು ಮನದ ಮಾವಿನ ಮರದಲಿ
ಮನದ ಮಾವಿನ ಮರದಲಿ ಕುಹೂ ಕುಹೂ ಎಲೆಯ ಮರೆಯಲ್ಲಿ
ಪ್ರೀತಿಯ ಎಲೆಯ ಮರೆಯಲೀ
ನಾನು ಇನ್ನು ಸ್ವಂತ ಅಂತ ತಾನೇ ಅಂದುಕೊಂಡ
ಹಾಡುತಿದೆ ಕಾಯುತಿದೆ ಕಾಯುತಿದೆ ಹಾಡುತಿದೆ ಕೇಳಿಸದೇ ಓ ಗೆಳೆಯ
ಕುಹೂ ಕುಹೂ ಇಂಚರ ಒಂದು ಮನದ ಮಾವಿನ ಮರದಲಿ
ಪ್ರೀತಿಯ ಎಲೆಯ ಮರೆಯಲ್ಲಿ.. ಪ್ರೀತಿಯ ಎಲೆಯ ಮರೆಯಲ್ಲಿ
ಹದಿನಾರು ಸಾವಿರ ನಾರಿಯರ ಬಳಗದಲೂ ಒಂದು ಹೆಣ್ಣು ಕಾದಳಂತೆ ಪ್ರೀತಿಗಾಗಿ
ಸಾವಿರಾರು ಯೋಜನ ಸಾಗರ ಆಚೆಯಲ್ಲೂ ಕಾದಳಂತೆ ಒಂದು ಹೆಣ್ಣು ಪ್ರೀತಿಗಾಗಿ
ಶಿಲೆಗೆ ಜೀವ ತಂದು ಬೆಳಗಿದ ಓ ರಾಮ ಕಾಣದೆ ಕಾಯುತಿರುವ ನನ್ನ ಈ ಪ್ರೇಮಾ
ಇಂಚರ ಇಂಚರ ಇಂಚರ ಇಂಚರ ಇನಿಯನ ಇಂಚರ ಸಂಚಾರ
ಪ್ರೇಮದ ಸರಿಗಮ ಸಂಚಾರ
ಕುಹೂ ಕುಹೂ ಇಂಚರ ಒಂದು ಮನದ ಮಾವಿನ ಮರದಲಿ ಪ್ರೀತಿಯ ಎಲೆಯ ಮರದಲಿ
ಪ್ರೀತಿಯ ಎಲೆಯ ಮರದಲಿ
ಇನ್ನೂ ಎದುರಾಣದಿರೋ ಕಾರಣಗಳ ಹೇಳದಿರು ಇನ್ನು ಮುಂದೆ ನಿನ್ನ ಮಾತೆ ನನ್ನ ಮಾತು
ನಿನ್ನ ಒಲವಿನ ನಿನ್ನ ಜಾರಿ ಹೋಗಬಿಡದಿರು ಇನ್ನು ಮುಂದೇ ನಿನ್ನ ಉಸಿರೇ ನನ್ನ ಉಸಿರು
ಧರಣಿ ಕಾಯುತಿರುವ ಸೂರ್ಯ ನೀನು ಕೇಳು ನೀನೇ ಬಾರದಿರೆ ಇವಳಿಗ್ಯಾರು ಹೇಳು
ಇಂಚರ ಇಂಚರ ಇಂಚರ ಇಂಚರ ಇನಿಯನ ಇಂಚರ ಸಂಚಾರ
ಪ್ರೇಮದ ಸರಿಗಮ ಸಂಚಾರ
ಕುಹೂ ಕುಹೂ ಇಂಚರ ಒಂದು ಮನದ ಮಾವಿನ ಮರದಲಿ
ಮನದ ಮಾವಿನ ಮರದಲಿ ಕುಹೂ ಕುಹೂ ಎಲೆಯ ಮರೆಯಲ್ಲಿ
ಪ್ರೀತಿಯ ಎಲೆಯ ಮರೆಯಲೀ
-----------------------------------------------------------------------------------------------------------------------
ಚಂದ್ರೋದಯ (1999) - ರಾಜ ರಾಜ
ಸಂಗೀತ: ಸಾಹಿತ್ಯ: ಹಂಸಲೇಖ ಹಾಡಿದವರು: ಶಿವರಾಜಕುಮಾರ, ಕೋರಸ್
ಸಂಗೀತ: ಸಾಹಿತ್ಯ: ಹಂಸಲೇಖ ಹಾಡಿದವರು: ಶಿವರಾಜಕುಮಾರ, ಕೋರಸ್
ರಾಜ ರಾಜ ರಾಜ ರಾಜ ನನ್ನ ಗಲ್ಲಿಗೇ ನಾನೇ ಮಹಾರಾಜ
ರಾಜ ರಾಜ ಶಿವರಾಜ ಕಲ್ಲು ಮುಳ್ಳಲ್ಲಿ ಹುಟ್ಟಿ ಬಂದ ರೋಜ
ನಾನು ಹಾಡೋದು ಬೆನ್ನು ತಟ್ಟೋ ಜನರಿಗೆ
ನಾನು ಬಾಗೋದು ಅಣ್ಣ ಕೊಟ್ಟ ದೇವರಿಗೇ ..
ನೋಡಲಾರೆ ಸಹಿಸಲಾರೆ ಇಲ್ಲದವನಾ ಆಳುವ
ಅವನಿಗಾಗಿ ಹೆದರದೇನೆ ಮಾಡಬಲ್ಲೇ ಕಳುವ
ನೋಡಲಾರೆ ಸಹಿಸಲಾರೆ ಇಲ್ಲದವನಾ ಆಳುವ
ಅವನಿಗಾಗಿ ಹೆದರದೇನೆ ಮಾಡಬಲ್ಲೇ ಕಳುವ
ನನ್ನ ವಿಳಾಸ ಬಡವನ ಬೀದಿಯಲ್ಲಿ
ನನ್ನ ಉಲ್ಲಾಸ ನೊಂದವನ ನಗುವಲ್ಲಿ
ರಾಜ ರಾಜ ರಾಜ ರಾಜ ನನ್ನ ಗಲ್ಲಿಗೇ ನಾನೇ ಮಹಾರಾಜ
ರಾಜ ರಾಜ ಶಿವರಾಜ ಕಲ್ಲು ಮುಳ್ಳಲ್ಲಿ ಹುಟ್ಟಿ ಬಂದ ರೋಜ
ಇಂಪಿನಿಂಪಿನ ಕಂಪು ಕಂಪಿನ ಕನ್ನಡದ ನುಡಿ ಮುತು
ಇಂದು ನಾಳೆಗೆ ನನ್ನ ಬಾಳಿಗೆ ಸುಖವ ಕೊಡೋ ಸಂಪತ್ತು
ಏನಿದೆ ಅಂತಾರೇ ಈ ಮಣ್ಣಿನಲ್ಲಿ ಎಲ್ಲ ಇದೆ ತಮ್ಮ ನೋಡೋ ಕಣ್ಣಿನಲ್ಲಿ
(ರಾಜ ರಾಜ ರಾಜ ರಾಜ ನನ್ನ ಗಲ್ಲಿಗೇ ನಾನೇ ಮಹಾರಾಜ
ರಾಜ ರಾಜ ಶಿವರಾಜ ಕಲ್ಲು ಮುಳ್ಳಲ್ಲಿ ಹುಟ್ಟಿ ಬಂದ ರೋಜ )
ನಾನು ಹಾಡೋದು ಬೆನ್ನು ತಟ್ಟೋ ಜನರಿಗೆ
ನಾನು ಬಾಗೋದು ಅನ್ನ ಕೊಟ್ಟ ದೇವರಿಗೆ
ನಾನು ಹಾಡೋದು ಬೆನ್ನು ತಟ್ಟೋ ಜನರಿಗೆ
ನಾನು ಬಾಗೋದು ಅನ್ನ ಕೊಟ್ಟ ದೇವರಿಗೆ
-----------------------------------------------------------------------------------------------------------------------
No comments:
Post a Comment