672. ರಂಗಿತರಂಗ (2015)



ರಂಗಿತರಂಗ ಚಲನಚಿತ್ರದ ಹಾಡುಗಳು 
  1. ಕೇಳೇ ಚೆಲುವೆ ನಿನ್ನ ಪಾದದಲ್ಲಿ
  2. ಕರೆಯೋಲೆ ಕರೆವ ಓಲೆ ಕರೆಮಾಡಿ ಕರೆದೊಳೆ
  3. ಡೆನ್ನಾನ ಡೆನ್ನಾನಿಯೇ
  4. ಕೇಳೇ ಚೆಲುವೆ ನಿನ್ನ ಪಾದದಲ್ಲಿ
  5. ನೀ ಕೇಳೆ ಕೇಳೆ ವಧುವೇ ಇಷ್ಟೆಲ್ಲ ಏಕೆ ನಗುವೇ?
  6. ಅಕ್ಕ ಪಕ್ಕ ಸಿಕ್ಕಿ ನಕ್ಕ ಹಕ್ಕಿ ಪುಕ್ಕ ಹೆಕ್ಕಿ
  7. ಈ ಸಂಜೆ ಏಕೆ ಜಾರುತಿದೆ

ರಂಗಿತರಂಗ (2015) - ಕೇಳೇ ಚೆಲುವೆ ನಿನ್ನ ಪಾದದಲ್ಲಿ
ಸಂಗೀತ: ಅನೂಪ್ ಭಂಡಾರಿ, ಸಾಹಿತ್ಯ: ಅನೂಪ್ ಭಂಡಾರಿ, ಗಾಯನ : ವಿಜಯ್ ಪ್ರಕಾಶ್, ದೀಪಿಕಾ ಟಿ, ಅನೂಪ್ ಭಂಡಾರಿ

ಕೇಳೇ ಚೆಲುವೆ ನಿನ್ನ ಪಾದದಲ್ಲಿ
ಧೂಳಾಗಿ ನೀ ನಡೆವಾಗ 
ಕಚಗುಳಿ ನಾ ಇಡುವೆ ಕೇಳೇ ಚೆಲುವೆ... 

ನೀನು ಮಿನು ಮಿನು ಮಿನುಗೊ ತಾರೆ
ಜುಳು ಜುಳು ಹರಿಯುವ ರಸ ಜಲಧಾರೆ
ನನ್ನ ಕಣ ಕಣದಲ್ಲೂ ನೀನೆ, ನೀನೆ ತುಂಬಿರುವೆ ಮನಸಾರೆ
ಬಳುಕಾಡಿ ನೀ ಬರುವಾಗ, 
ಸ್ವರ್ಗವೆ ನಾಚುತಿದೆ ಕೇಳೇ ಚೆಲುವೆ

ಓ ಹಂಸ ಗಮನೆಯೆ ನಿನ್ನ ಹಂಸದ ನಡಿಗೆಗೆ, ನಡಿಗೆಗೆ
ಸೋತೆ ಸೆಳೆಯುವ ಮಧುರ ಮಾತಿನ ಸೊಗಡಿಗೆ, ಬೆಡಗಿಗೆ
ನೀನು ನಿಂತಲ್ಲೆ ನಿಲ್ಲದೆ ಅಲ್ಲಿ ಕೆಂಪನೆ ಗಲ್ಲವ ಗಿಲ್ಲಿ
ನೋಟದಲೆ ಕೊಲ್ಲುವಾಗ ತಲ್ಲಣವಾಗುತಿದೆ. ಕೇಳೇ ಚೆಲುವೆ

ಧಮನಿ ಧಮನಿ ಕರೆವ ಹೆಸರೇ ನೀ ತರುಣಿ
ಕರೆವ ಹೆಸರೇ ನೀ ತರುಣಿ
ಕೋಮಲಾಂಗಿಯೆ ನನ್ನ ಮನದೊಳು ಇಣುಕಿದೆ, ಕೆಣಕಿದೆ
ಕೇಶ ರಾಶಿಯು ಇರುಳು ಆದರೆ ಮೊಗದಲಿ, ಬೆಳಕಿದೆ
ನಿನ್ನ ಮಾತಿನ ಪ್ರವಾಹದಲ್ಲಿ ಸುಳ್ಳಿನ ಪ್ರಭಾವ ಚೆಲ್ಲಿ
ಹೊಗಳಿಕೆ ನೀ ಸುರಿವಾಗ ನಂಬಲು ಆಗುವುದೇ ... ಕೇಳೇ ಚೆಲುವೆ
----------------------------------------------------------------------------------------------------------------

ರಂಗಿತರಂಗ (2015) - ಕರೆಯೋಲೆ ಕರೆವ ಓಲೆ ಕರೆಮಾಡಿ ಕರೆದೊಳೆ
ಸಂಗೀತ: ಅನೂಪ್ ಭಂಡಾರಿ, ಸಾಹಿತ್ಯ: ಅನೂಪ್ ಭಂಡಾರಿ, ಗಾಯನ : ಇಂಚರರಾವ್ 

ಕರೆಯೋಲೆ ಕರೆವ ಓಲೆ ಕರೆಮಾಡಿ ಕರೆದೊಳೆ
ಕರದಲ್ಲಿ ಕಲಮ ಹಿಡಿದು ಕರಿಶಾಯಿ ಬರೆದೊಳೆ
ಕಲ್ಲಿನ ಕೊಳ್ಳಲಿ ಕಲರವ ನುಡಿಸಿ ಕೈಯನು ಬೀಸಿ ಕರೆದೊಳೆ
ಕಣ್ಣಿಗೆ ಕಾಣದ ಕಾಗದದಲ್ಲಿ ಕುಂಚದಿ ಕಾವ್ಯವ ಕೊರೆದೊಳೆ
ಕರೆಯೋಲೆ ಕರೆವ ಓಲೆ ಕರೆಮಾಡಿ ಕರೆದೊಳೆ

ಕನಕಾಂಗಿ ಕೈಯಲೊಂದು ಕಂಚಿನ ಕೊಡಪಾನ
ಕೆರೆ ನೀರ ಕುದಿಯೋದಕ್ಕು ಕಟುವಾದ ಕಡಿವಾಣ
ಕೆರೆದಂಡೆ ಕಡೆಯಲೆಲ್ಲು ಕುತೋನೆ ಕಡು ಜಾಣ
ಅತಿಕ್ಷಿನ ಸ್ಮ್ರಿತಿಉಳ್ಳೋಣ ಕೆಂದಾವರೆ ಲಕುಷಣ
ಕೆಂಪಾದ ಕಮಲಾ ಕಂಡು ಕೆಸರಲ್ಲೇ ಕಲೇತೊಳೆ
ಕ್ಷಣವೆಲ್ಲ ಕೃತಕ ಕಥೆಯಲಿ ಕಳೆಯೋದ ಕಲಿತೊಳೆ

ಕಲ್ಲಿನ ಕೊಳ್ಳಲಿ ಕಲರವ ನುಡಿಸಿ ಕೈಯನು ಬೀಸಿ ಕರೆದೊಳೆ
ಕಣ್ಣಿಗೆ ಕಾಣದ ಕಾಗದದಲ್ಲಿ ಕುಂಚದಿ ಕಾವ್ಯವ ಕೊರೆದೊಳೆ
ಕರೆಯೋಲೆ ಕರೆವ ಓಲೆ ಕರೆಮಾಡಿ ಕರೆದೊಳೆ
ಕರದಲ್ಲಿ ಕಲಮ ಹಿಡಿದು ಕರಿಶಾಯಿ ಬರೆದೊಳೆ
--------------------------------------------------------------------------------------------------------------------

ರಂಗಿತರಂಗ (2015) - ಡೆನ್ನಾನ ಡೆನ್ನಾನಿಯೇ
ಸಂಗೀತ: ಅನೂಪ್ ಭಂಡಾರಿ, ಸಾಹಿತ್ಯ: ಸದಾನಂದ ಸುವರ್ಣ, ಸುಧಾಕರ ಸಜ  ಗಾಯನ : ಸುಪ್ರಿಯಾ ರಘುನಂದನ 

ಡೆನ್ನಾನ ಡೆನ್ನಾನ ಡೆನ್ನಾನ ಡೆನ್ನಾನ
ಡೆನ್ನಾನ ಡೆನ್ನಾನಿಯೇ

ತುಳುನಾಡ ಸೀಮೇಡು ಕಮರೊಟ್ಟು ಗ್ರಾಮೋಡು
ಗುಡ್ಡೇದ ಭೂತ ವುಂಡು ಯೇ
ಡೆನ್ನಾನ ಡೆನ್ನಾನ ಡೆನ್ನಾನ ಡೆನ್ನಾನ
ಡೆನ್ನಾನ ಡೆನ್ನಾನಿಯೇ

ಮಾಮಲ್ಲ ಭೂತದ ಕಾರ್ನಿಕ ತೂಲೆಯೇ
ಗುಡ್ಡೇಡು ಭೂತ ವುಂಡು ಯೇ
ಡೆನ್ನಾನ ಡೆನ್ನಾನ ಡೆನ್ನಾನ ಡೆನ್ನಾನ
ಡೆನ್ನಾನ ಡೆನ್ನಾನಿಯೇ
ತುಳುನಾಡ ಸೀಮೇಡು ಕಮರೊಟ್ಟು ಗ್ರಾಮೋಡು
ಗುಡ್ಡೇದ ಭೂತ ವುಂಡು ಯೇ
--------------------------------------------------------------------------------------------------------------------

ರಂಗಿತರಂಗ (2015) - ಕೇಳೇ ಚೆಲುವೆ ನಿನ್ನ ಪಾದದಲ್ಲಿ
ಸಂಗೀತ: ಅನೂಪ್ ಭಂಡಾರಿ, ಸಾಹಿತ್ಯ: ಅನೂಪ್ ಭಂಡಾರಿ, ಗಾಯನ : ಸತೀಶ ಪಾಟ್ಲ, ದೀಪಿಕಾ ಟಿ, ಅನೂಪ್ ಭಂಡಾರಿ

ಕೇಳೇ ಚೆಲುವೇ ನಿನ್ನ ಪಾದದಲ್ಲಿ ಧೂಳಾಗಿ ನೀ ನಡೆವಾಗ
ಕಚಗುಳಿ ನಾ ಇಡುವೆ.... ಕೇಳೆ ಚೆಲುವೇ,

ನೀನು ಮಿನುಮಿನು ಮಿನುಗೋ ತಾರೆ
ಝುಳು ಝುಳು ಹರಿಯುವ ರಸಜಲಧಾರೆ
ನನ್ನ ಕಣಕಣದಲ್ಲೂ ನೀನೇ
ನೀನೆ ತು೦ಬಿರುವೆ ಮನಸಾರೆ
ಬಳುಕಾಡಿ ನೀ ಬರುವಾಗ
ಸ್ವರ್ಗವೇ ನಾಚುತಿದೆ... ಕೇಳೇ ಚೆಲುವೇ.. 

ಓ ಹ೦ಸಗಮನೆಯೇ ನಿನ್ನ ಹ೦ಸದ ನಡಿಗೆಗೆ ನಡಿಗೆಗೆ
ಸೋತೆ ಸೆಳೆಯುವ ಮಧುರ ಮಾತಿನ ಸೊಗಡಿಗೆ ಬೆಡಗೀಗೆ...
ನೀನು ನಿ೦ತಲ್ಲೇ ನಿಲ್ಲದೇ ಅಲ್ಲಿ ಕೆ೦ಪನೆ ಗಲ್ಲವ ಗಿಲ್ಲಿ
ನೋಟದಲೇ ಕೊಲುವಾಗ ತಲ್ಲಣವಾಗುತಿದೆ... ಕೇಳೇ ಚೆಲುವೆ...
ಧಮನಿ ಧಮನಿ ಕರೆವಾ ಹೆಸರೇ ನೀ ತರುಣೀ...
ಕರೆವಾ ಹೆಸರೇ ನೀ ತರುಣೀ...

ಕೋಮಲಾ೦ಗಿಯೇ ನನ್ನ ಮನದೊಳು ಇಣುಕಿದೆ ಕೆಣಕಿದೆ,
ಕೇಶರಾಶಿಯು ಇರುಳು ಆದರೆ ಮೊಗದಲಿ ಕೆಣಕಿದೆ
ನಿನ್ನ ಮಾತಿನ ಪ್ರವಾಹದಲ್ಲಿ ಸುಳ್ಳಿನ ಪ್ರಭಾವ ಚೆಲ್ಲಿ
ಹೊಗಳಿಕೆ ನೀ ಸುರಿವಾಗ ನ೦ಬಲು ಆಗುವುದೇ...ಕೇಳೇ ಚೆಲುವೆ...
ಹೇ.... ಏ....ಹೇ .... ಹೇ......
--------------------------------------------------------------------------------------------------------------------

ರಂಗಿತರಂಗ (2015) - ನೀ ಕೇಳೆ ಕೇಳೆ ವಧುವೇ ಇಷ್ಟೆಲ್ಲ ಏಕೆ ನಗುವೇ?
ಸಂಗೀತ: ಅನೂಪ್ ಭಂಡಾರಿ, ಸಾಹಿತ್ಯ: ಅನೂಪ್ ಭಂಡಾರಿ, ಗಾಯನ : ದೀಪಿಕಾ ಟಿ, 

ನೀ ಕೇಳೆ ಕೇಳೆ ವಧುವೇ ಇಷ್ಟೆಲ್ಲ ಏಕೆ ನಗುವೇ?
ಈಗಲೇ ಏಕೆ ಮದುವೆ ಈಗಲೇ ಏಕೆ ಮದುವೆ
ಮೈತುಂಬ ಭಾರೀ ಒಡವೆ ಸಿಂಗಾರ ಮಾಡಿ ಮೆರೆವೆ
ಈಗಲೇ ಬೇಕೇ ಮದುವೆ ಈಗಲೇ ಬೇಕೇ ಮದುವೆ

ತುದಿಗಾಲಲ್ಲಿ ನಿಂತ ಗೆಳತಿ ಏಕೆ ಆಗುತೀಯೆ ನೀ ಗರತಿ
ಬಣ್ಣ ಮಾಸಿದಾಗ ಬರುವಳು ಸವತಿ ಆಗಿ ನಿನ್ನ ಮನೆಯ ಒಡತಿ
ಕೇಳೆ ಈ ಮುನ್ನುಡಿ ನೋಡು ನೀ ಕನ್ನಡಿ
ಕೆನ್ನೆಯ ಮೇಲೆ ಮೊಡವೆ ಕಂಡಾಗ ಏಕೆ ಅಳುವೇ
ಈಗಲೂ ಬೇಕೇ ಮದುವೆ ಈಗಲೂ ಬೇಕೇ ಮದುವೆ
ನೀ ಕೇಳೆ ಕೇಳೆ ವಧುವೇ ಇಷ್ಟೆಲ್ಲ ಏಕೆ ನಗುವೇ
ಈ ವೇಳೆ ವೇಳೆ ಮದುವೆ ಬರಬೇಕೆ ಸಖಿಯರ ನಡುವೆ

ಈಗ ಬಂದಾಗ ನಿನ್ನ ಸರದಿ 
ಈಗ ಬಂದಾಗ ನಿನ್ನ ಸರದಿ  ಹೀಗೆ ಓಡಬೇಡ ಆತುರದಿ
ಇದು ಈಗ ತಾನೇ ಬಂದ ವರದಿ ನೀನು ಹೊಕ್ಕಾಗ ಇಂದು ಗರಡಿ
ನಿನ್ನ ಆ ಹುಡುಗನು ಕೈಯ್ಯನು ಹಿಡಿವನು
ಕಂಡಿಲ್ಲ ಇಂಥ ಚೆಲುವೆ ಎಂದಾಗ ನಾಚಿ ನುಲಿವೇ
ಈಗಲೇ ಬೇಕೇ ಮದುವೆ ಈಗಲೇ ಬೇಕೇ ಮದುವೆ
ಈಗಲೇ ಬೇಕೇ ಮದುವೆ ಈಗಲೇ ಬೇಕೇ ಮದುವೆ
--------------------------------------------------------------------------------------------------------------------

ರಂಗಿತರಂಗ (2015) - ಅಕ್ಕ ಪಕ್ಕ ಸಿಕ್ಕಿ ನಕ್ಕ ಹಕ್ಕಿ ಪುಕ್ಕ ಹೆಕ್ಕಿ
ಸಂಗೀತ: ಅನೂಪ್ ಭಂಡಾರಿ, ಸಾಹಿತ್ಯ: ಅನೂಪ್ ಭಂಡಾರಿ, ಗಾಯನ : ಅನೂಪ ಬಂಢಾರಿ, ಸುಚಿತ್ರ ಲತಾ  

ಅಕ್ಕ ಪಕ್ಕ ಸಿಕ್ಕಿ ನಕ್ಕ ಹಕ್ಕಿ ಪುಕ್ಕ ಹೆಕ್ಕಿ ಮೂಕರಾಗಿ ನಕ್ಕು ಕಿಕ್ಕಿರಿದ ಟಕರಕ ಟಕಟ
ಬಕ್ಕತಲೆ ಚಿಕ್ಕತಲೆ ಪಕ್ಕದಲೆ ಸುತ್ತುತಲೆ ಕಗ್ಗತ್ತಲೆ ಮೂಡುತ್ತಲೇ ಕೊಕ್ಕರೆದ ಕುಕ್ಕುಟ

ಗುಂಪಲಿ ಬಂದ ಗೋವಿಂದ ಧರ್ಮದ ಏಟಿನ ನೋವಿಂದ
ರಾಧೆಯ ತಾಳಕೆ ಕುಣಿದ ಸರಿಗಮ ಪದನಿಸ ಕುಣಿಸಿದ

ಅಕ್ಕ ಪಕ್ಕ ಸಿಕ್ಕಿ ನಕ್ಕ ಹಕ್ಕಿ ಪುಕ್ಕ ಹೆಕ್ಕಿ ಮೂಕರಾಗಿ ನಕ್ಕು ಕಿಕ್ಕಿರಿದ ಟಕರಕ ಟಕಟ
ಬಕ್ಕತಲೆ ಚಿಕ್ಕತಲೆ ಪಕ್ಕದಲೆ ಸುತ್ತುತಲೆ ಕಗ್ಗತ್ತಲೆ ಮೂಡುತ್ತಲೇ ಕೊಕ್ಕರೆದ ಕುಕ್ಕುಟ

ಬುಧವಾರ ಗಡಿಯಾರ ಬಡಿದಾಗ ಹನ್ನೆರಡು
ಮರುಳಾದ ಕಪಿರಾಯ ನುಡಿದಾಗ ಕಣ್ಣೆರಡು
ಜೋಪಾನ ಬರಿ ಮಾಯೆ ಈ ಹೊನ್ನು ಹೆಣ್ಣೆರಡು
ತಲೆನೋವು ನೂರುಂಟು ಬೇಕೇನು ಇನ್ನೆರಡು

ಏರುವೆ ಏಕೆ ಈ ಮಹಡಿಯನು ಶಿವಪೂಜೆಗೆ ಕರೆಯುವೆ ಕರಡಿಯನು
ಕಡಲ ಮಡಲ ಮಡಿಲ ಕುಡಿಲ ಬಡಿದ ಸಿಡಿಲ ಕಿಡಿಯನು
ಮನಸಿನ ಒಳಗೆ ಬಿಟ್ಟರೆ ನೀನು ಆಗು ಯುದ್ದಕೆ ಸಿದ್ಧ
ಇಲ್ಲಿಯ ವರೆಗೂ ಹೇಗಿದ್ದ ಮದುವೆಯ ಸಂಗವು ಬೇಕಿತ್ತಾ
ಯಾಮಾರಿ ಹಳ್ಳಕೆ ಜಿಗಿದ ಮದುಮಗ ಅಳುಮೊಗ ಧರಿಸಿದ
ಅಕ್ಕ ಪಕ್ಕ ಸಿಕ್ಕಿ ನಕ್ಕ ಹಕ್ಕಿ ಪುಕ್ಕ ಹೆಕ್ಕಿ ಮೂಕರಾಗಿ ನಕ್ಕು ಕಿಕ್ಕಿರಿದ ಟಕರಕ ಟಕಟ
ಬಕ್ಕತಲೆ ಚಿಕ್ಕತಲೆ ಪಕ್ಕದಲೆ ಸುತ್ತುತಲೆ ಕಗ್ಗತ್ತಲೆ ಮೂಡುತ್ತಲೆ
--------------------------------------------------------------------------------------------------------------------

ರಂಗಿತರಂಗ (2015) - ಈ ಸಂಜೆ ಏಕೆ ಜಾರುತಿದೆ
ಸಂಗೀತ: ಸಾಹಿತ್ಯ:ಅನೂಪ್ ಭಂಡಾರಿ,  ಗಾಯನ : ಅಭಯ ಜೋಧಪುರಕರ, ಮೋನಿಷ, ಗೋಕುಲ ಅಭಿಷೇಕ್  

ಈ ಸಂಜೆ ಏಕೆ ಜಾರುತಿದೆ ಸದ್ದಿಲ್ಲದಂತೆ ಸಾಗುತಿದೆ
ಬೆಳಕ ಸೆರೆಯ ತೊರೆದು ಈ ಸಂಜೆ ಏಕೆ ಜಾರುತಿದೆ
ನೆರಳನೆ.. ಅರಿಯದ.. ಅಪರಿಚಿತ.. ದಾರಿಯಲಿ
ಇರುಳಿನ.. ಸನಿಹಕೆ ಈ ಸಂಜೆ ಏಕೆ ಜಾರುತಿದೆ... ಹೂಂಹೂಂ ಹೂಂ

ಕಾರ್ಮೋಡ ಮಡಿಲಲ್ಲಿ ಹಸಿ ಮಲಗಿಸಲು
ಶಶಿ ಇನ್ನೂ ಬರಲಿಲ್ಲ ಭುವಿ ಬೆಳಗಿಸಲು
ಸೂರ್ಯನು ಅರಳುವಾವರೆಗೆ ಬೆಳಕನೆ ಕಾಣದ ಧರೆಗೆ
ವಿಹಾರಿಸೋ ಈ ಹಂಬಲದೊಂದಿಗೆ
ಹತ್ತಿರ ತೀರವ ಸೇರಿ ಕತ್ತಲೆಯ ತೇರನ್ನೆರಿ
ಬೀಸುವ ಗಾಳಿಯ ಜೊತೆಗೆ
ಈ ಸಂಜೆ ಏಕೆ ಜಾರುತಿದೆ

ಮುಸುಕನ್ನು ತೆರೆದಾಗ ಬರೋ ನಸುಕಿನಲಿ
ನಸುಕುಂಟು ಜೋಪಾನ ಕಳ್ನುಸುಕಿನಲಿ
ಸೆಳೆಯುವ ನೆನಪಿನ ಇರುಳು ಹೋದರೆ ಶಾಶ್ವತ ಇರುಳು
ಈ ಮಾತಿನ ತಿರುಳನು ಅರಿಯದೆ ಮುಂಗುರುಳನ್ನು ಹಿಂದೆ ತಳ್ಳಿ
ನಿಲ್ಲದಂತ ವೇಗದಲ್ಲಿ ಹಾರುವ ಹಕ್ಕಿಯ ಜೊತೆಗೆ
ಈ ಸಂಜೆ ಏಕೆ ಜಾರುತಿದೆ...
--------------------------------------------------------------------------------------------------------------------

ರಂಗಿತರಂಗ (2015) - ಈ ಸಂಜೆ ಏಕೆ ಜಾರುತಿದೆ
ಸಂಗೀತ: ಅನೂಪ್ ಭಂಡಾರಿ ಸಾಹಿತ್ಯ: ಅನೂಪ್ ಭಂಡಾರಿ,  ಗಾಯನ : ಸಾಯಿಕುಮಾರ 

ಐತಪ್ಪ ನಿನ್ನ ಗೋಲಿ ಬಜಿಯನ್ನು ತಿನ್ನಲು ರಜೆಯನ್ನು ಹಾಕಿ ಬಂದ 
ಈ ಹಸಿದ ಪ್ರಜೆಗಿನ್ನು ಕೊಡದೇ ಸಜೆ ಕೊಡುವೇಯಾ... ಆ... ಆಆ ... ಆಅ 

ಹೊಟ್ಟೆಯಲಿ ಚಿಟ್ಟೆಗಳು ಮೆಟ್ಟಿ ನಿಂತಬಾರದಿ 
ತಟ್ಟೆಯಲಿ ಹಿಟ್ಟಿರದೆ ಕಂಗೆಟ್ಟು ಕುಳಿತಿರುವೆ 
ಇನ್ನೆರಡು ಊಟ ಸಿಗುತ್ತಾ ಮಾಸ್ಟ್ರೆ 

ಸುಂದರ ಚಂದಿರ ಮೊಗದ ವಿಶಾರದೆ ಬಂದರೆ 
ತೊಂದರೆ ಎಂದವ ಮಂದ ಬುದ್ದಿಯ ಮಾನವ   
-------------------------------------------------------------------------------------------------------------------

No comments:

Post a Comment