- ನಗೆ ಮೊಗದೆ ನಲಿವ ನಲ್ಲೆ
- ಕಣ್ಣೆಂಬ ಕಣಿಯಿಂದ
- ಮಂಗಳಮೂರ್ತಿ ಮಾರಯ್ಯ
- ಕೋಪವೇಕೆ ಅಜ್ಜಿ
- ಜಯ ರಘುರಾಮ
- ಪೂಜಿಪ ದೈವವೇ
- ಮಾಲೆಯ ಹಿಡಿದು ಬರುವ
ಪತಿಯೇ ದೈವ (೧೯೬೪) - ನಗೆ ಮೊಗದೆ ನಲಿವ ನಲ್ಲೆ
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಬಿ.ಶ್ರೀನಿವಾಸ
ನಗೆ ಮೊಗದೆ ನಲಿವ ನಲ್ಲೆ ನಿನಗೆಣೆಯ ಕಾಣೆನಲ್ಲೇ
ನಿನ್ನ ತುಂಟ ನೋಟದಲ್ಲೇ ನೀನಾಡೋ ಮಾತಾ ಬಲ್ಲೆ
ನಿನ್ನ ಸನಿಹ ಮನಕೆ ತಂಪು ನಿನ್ನ ದನಿಯ ಕಿವಿಗೆ ಇಂಪು
ನಿನ್ನ ಚೆಲುವ ತುಟಿಯ ಕೆಂಪು ಕಂಗಳಿಗೆ ತಾನು ಸೋಂಪು
ಮುಂಗುರುಳ ಹಿಂದೆ ಸರಿಸಿ ಮುಡಿಯಲ್ಲಿ ಹೂವನಿರಿಸಿ
ಮುಗಳನಗೆಯನೊಂದ ಹರಿಸಿ ಮನಸೆಳೆದ ಪ್ರೇಮದರಿಸಿ
ನಡೆದಾಗ ನವಿಲಿನಂತೆ ನಡು ಬಳುಕೇ ಬಳ್ಳಿಯಂತೇ
ನುಡಿಯೊಂದು ಮುತ್ತಿನಂತೆ ಕುಡಿನೋಟ ಮಿಂಚಿನಂತೆ
-------------------------------------------------------------------------------------------------
ಪತಿಯೇ ದೈವ (೧೯೬೪) - ಕಣ್ಣೆಂಬ ಕಣಿಯಿಂದ
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಬಿ.ಶ್ರೀನಿವಾಸ, ಪಿ.ಸುಶೀಲಾ
ಗಂಡು : ಕಣ್ಣೆಂಬ ಕಣೆಯಿಂದ ಕೊಲ್ಲುವ ಓ ಹೆಣ್ಣೇ .. ಬಣ್ಣಿಸಲು ಬಾಯಿಲ್ಲ ನಿನ್ನಯ ಸೊಬಗನ್ನೇ
ಹೆಣ್ಣು : ಹೆಣ್ಣೆಂಬ ಹೂವೊಂದ ಹುಡುಕುತ ಬಂದವನೇ ಕನ್ನಿಕೆಯ ಕೆನ್ನೆಯಲಿ ಕೆಂಪನು ತಂದವನೆ
ಗಂಡು : ಕಿಲಕಿಲ ನೀನು ನಗುವಾಗ ಮುತ್ತುಗಳುದುರುವುದು
ಕುಲುಕುತಲಿ ನೀ ನಡೆವಾಗ ಈ ಹೃದಯವು ಮಿಡಿಯುವುದು
ಅರಳಿಹುದು ಅನುರಾಗ ಅರಗಿಣಿಯೇ ಬಾ ಬೇಗ
ಅಗಲಿರೇನು ಅರೆ ನಿಮಿಷ ನಿನ್ನನ್ನು ನಾನೀಗ
ಹೆಣ್ಣು : ಸನಿಹದಲಿ ನೀ ಇರುವಾಗ ಮೈಮನ ಮರೆಯುವುದು
ಸರಸದಲಿ ನೀ ಎಳೆವಾಗ ಈ ಕೈಗಳು ನಡುಗುವುದು
ಪ್ರಣಯಿನಿಯ ಪರಿಹಾಸ ಮಾಡುವೇಯಾ ಎನ್ನರಸ
ಪ್ರತಿ ನಿಮಿಷ ಹೊಸ ಹರುಷ ನಿನ್ನಯ ಸಹವಾಸ
-------------------------------------------------------------------------------------------------
ಪತಿಯೇ ದೈವ (೧೯೬೪) - ಮಂಗಳಮೂರ್ತಿ ಮಾರಯ್ಯ
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಟಿ.ಆರ್.ಜಯದೇವ, ಎಲ್.ಆರ್.ಈಶ್ವರಿ
ಹೆಣ್ಣು : ಮಂಗಳ ಮೂರ್ತಿ ಮಾರಯ್ಯಾ ಮಡದಿಯ ಮನೆಗೆ ಬಾರಯ್ಯಾ
ಮನಸೋತೆ ಮರುಳಾದೆ ಮೊಗವನು ಎನಗೆ ತೋರಯ್ಯಾ
ಗಂಡು : ಅತ್ತೆಯ ಮಗಳೇ ಅಮ್ಮಯ್ಯಾ ಜೊತೆಯಲಿ ಬಾರೆ ದಮ್ಮಯ್ಯಾ
ಕೈ ಮುಗಿವೆ ಶರಣೆಂಬೆ ಕರೆಯಲು ಕಳುಸಿಹ ಮಾವಯ್ಯಾ
ಗಂಡು : ಸಿನಿಮಾಗೆ ಕರೆಯಲಿಂದೆ ಹೋರಡುವೆನು ನಾನೇ ಮುಂದೆ
ಹೆಣ್ಣು : ಮನೆಯಲ್ಲವಂತೆ ಆ ಹುಚ್ಚು ಸಂತೆ ಬರಲಾರೆ ಬಿಡಿರಿ ಚಿಂತೆ
ಗಂಡು : ಒಣ ಜಂಭವೇಕೆ ಜಾಣೆ ಛಲವೇಕೆ ನಿನಗೆ ಕಾಣೆ
ನೀ ಬರುವ ತನಕ ಆ ಮನೆಯ ನರಕ ನಾ ಹೋಗೆ ದೇವರಾಣೆ
-------------------------------------------------------------------------------------------------
ಪತಿಯೇ ದೈವ (೧೯೬೪) - ಕೋಪವೇಕೆ ಅಜ್ಜಿ
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಲತಾ, ಅಂಜಲಿ
ಕೋಪವೇಕೆ ಕೋಪವೇಕೆ ಅಜ್ಜಿ ಈ ತಾಪವೇಕೆ ಮನಸಿಗೆ ಅಜ್ಜಿ
ಬಿಡು ನಿನ್ನ ಕೋಪ ತಾಳು ಶಾಂತ ರೂಪ
ಬಿಗುಮಾನ ಬಿಟ್ಟು ನೀ ಮಾತಾಡಜ್ಜಿ
ಪುಟ್ಟ ಪಾಪ ಹುಟ್ಟಿತೆಂದು ಲಡ್ಡು ತಂದೆವು
ತಟ್ಟೆ ತುಂಬ ಸಿಹಿ ತಿಂಡಿ ಕೊಂಡು ಬಂದೆವು
ಸೊಟ್ಟ ಮುಖವನ್ನು ಬಿಟ್ಟು ಕಿಟ್ಟು ಪುಟ್ಟು ಮಾತ ಕೇಳಿ
ಗುಟ್ಟಿನಿಂದ ಹೊಟ್ಟೆ ತುಂಬ ತಿಂದು ಬಿಡಜ್ಜಿ
ತಪ್ಪುಗಳೆನೆಲ್ಲ ನಾವು ಒಪ್ಪಿಕೊಂಡೆವು
ನಮ್ಮ ತಪ್ಪನೆಲ್ಲ ಮನ್ನಿಸೆಂದು ಬೇಡಿ ಕೊಂಬೆವು
ನಿನ್ನ ಮಾತ ಕೇಳುವೆವು ನಿನ್ನ ಸೇವೆ ಮಾಡುವೆವು
ಕೆನ್ನೆಗೇಟು ಹಾಕಿಕೊಂಡು ಕೇಳಿಕೊಂಬೆವು
-------------------------------------------------------------------------------------------------
ಪತಿಯೇ ದೈವ (೧೯೬೪) - ಜಯ ರಘುರಾಮ
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಟಿ.ಆರ್.ಜಯದೇವ, ಎಸ್.ಜಾನಕೀ
ಮಾತಾ ರಾಮೋ ಮತ್ಪಿತಾ ರಾಮಚಂದ್ರಃ ಭ್ರಾತಾ ರಾಮೋ ಮತ್ಸಖಾ ರಾಘವೇಶಃ
ಸರ್ವಸ್ವಂ ಮೇ ರಾಮಚಂದ್ರೋ ದಯಾಲುಃ ನಾನ್ಯಮ್ ದೈವಂ ಜಾನೇನೈವ ಜಾನೇ
ಜಯ ರಘುರಾಮ ಜಯ ಘನಶ್ಯಾಮ ಜಯ ಜಯ ಶುಭನಾಮ ಶ್ರೀರಾಮ
ಜಯಜಯ ಗುಣಧಾಮ ಶ್ರೀರಾಮ
ಆದರ್ಶ ನಿನ್ನಯ ಸೋದರ ಪ್ರೇಮ ಆಡಿದ ಮಾತನು ತಪ್ಪದ ನೇಮ
ಅಣತಿ ಪಿತನ ಪಾಲಿತ ರಾಮ ಅಗಣಿತ ಗುಣಮಣಿ ಆನಂದ ಸೀಮ
ಸೀತೆಯ ಹೃದಯದಿ ಬೆಳಗಿದ ಜ್ಯೋತಿ ಮಾತೆಗೆ ತೋರಿದೆ ಅನುಪಮ ಪ್ರೀತಿ
ರಾಮ ರಾಜ್ಯದೆ ನೆಲಸಿದೆ ನೀತಿ ರಾಘವ ನಮಗೆ ಕರುಣಿಸು ಶಾಂತಿ
-------------------------------------------------------------------------------------------------
ಪತಿಯೇ ದೈವ (೧೯೬೪) - ಪೂಜಿಪ ದೈವವೇ
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಜಾನಕೀ
ಪೂಜಿಪ ದೈವವೇ ತೊರೆಯಿತಮ್ಮಾ ಪ್ರಾಣವ ದೇಹವ ಮರೆಯಿತಮ್ಮಾ
ಪ್ರೀತಿಸೋ ಕೈಗಳೇ ಹೊಡೆದುದಮ್ಮಾ ಪ್ರೇಮದ ಕಥೆಯು ಮುಗಿಯಿತಮ್ಮಾ
ರೆಪ್ಪಯು ಕಣ್ಣನೇ ಹಳಿಯಿತಮ್ಮಾ ಮರವೇ ಬಳ್ಳಿಯ ನೀಗೀತಮ್ಮಾ
ರಕುತವು ತನ್ನನೇ ಜರೆಯಿತಮ್ಮಾ ಹಾಲಲಿ ಹುಳಿಯ ಬೆರೆಯಿತಮ್ಮಾ
ಬೆಳಗಿದ ಮನೆಗೆ ಶಿರಬಾಗಿ ನಮಿಸಿದಳಮ್ಮಾ ಕೊನೆಯಾಗಿ
ಕರುಳಿನ ಕರೆಗೆ ಕಿವುಡಾಗಿ ನಡೆದಳು ಕಂಬನಿ ಹೊಳೆಯಾಗಿ
-------------------------------------------------------------------------------------------------
ಪತಿಯೇ ದೈವ (೧೯೬೪) - ಮಾಲೆಯ ಹಿಡಿದು ಬರುವ
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಜಾನಕೀ
ಮಾಲೆಯ ಹಿಡಿದು ಬರುವ ಈ ಬಾಲೆಯ ವರಿಸುವ ಚೆಲುವ
ಕೈಹಿಡಿವ ಮನಸೆಳೆವ ಬಾಳಿಗೆ ಹರುಷವ ತರುವ
ಮಾಲೆಯ ಹಿಡಿದು ಬರುವ ಈ ಬಾಲೆಯ ವರಿಸುವ ಚೆಲುವ
ಕೈಹಿಡಿವ ಮನಸೆಳೆವ ಬಾಳಿಗೆ ಹರುಷವ ತರುವ
ಹಸೆಯಲಿ ಜಂಭದಿ ಕುಳಿತಿರುವ ಹುಸಿನಗೆ ಬೀರುತ ಮರೆದಿರುವ
ತೆರೆಯನು ಹಿಡಿಯುವ ಸಮಯದಲಿ ಜೀರಿಗೆ ಬೆಲ್ಲವ ಮೊದಲಲಿ ಸುರಿವ
ಮಂಗಳ ವಾದ್ಯವು ಮೊಳಗುತಿರೆ ಸುಮಂಗಲಿಯರು ಶುಭ ಹಾಡುತಿರೆ
ಮಂತ್ರದ ಘೋಷವು ಕೇಳುತಿರೆ ಮಂಗಳಸೂತ್ರವ ಬಿಗಿಯುವ ಮುದದಿ
-------------------------------------------------------------------------------------------------
No comments:
Post a Comment