1703. ಹೆಬ್ಬುಲಿ (೨೦೧೭)

ಹೆಬ್ಬುಲಿ ಚಲನಚಿತ್ರದ ಹಾಡುಗಳು 
  1. ಎಣ್ಣೆನು ಸೋಡನು ಎಂತ ಒಳ್ಳೆ ಫ್ರೆಂಡು
  2. ಹುಲಿ ಹುಲಿ ಹೆಬ್ಬುಲಿ
  3. ಸುಂದರಿ ಸುಂದರಿ ನನ್ನ ಮಾತು ಸ್ವಲ್ಪ ಕೇಳೇ ನೀ
  4. ಉಸಿರೇ ಉಸಿರೇ
  5. ದೇವರೇ ನೀನು ಇರೋ 
ಹೆಬ್ಬುಲಿ (೨೦೧೭) - ಎಣ್ಣೆನು ಸೋಡನು ಎಂತ ಒಳ್ಳೆ ಫ್ರೆಂಡು
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ:ಸಂತೋಷ ನಾಯಕ್, ಗಾಯನ :ರಾಜೇಶ, ವಿಜಯಪ್ರಕಾಶ 

ಎಣ್ಣೆನು ಸೋಡನು ಎಂತ ಒಳ್ಳೆ ಫ್ರೆಂಡು 
ಒಂದನೊಂದು ಎಂದು ಬಿಟ್ಟು ಇರೋದಿಲ್ಲ
ಹಂಗೇನೇ ನಾನುನು ನೀನು ಒಳ್ಳೆ ಫ್ರೆಂಡು
ಅಣ್ಣ ತಮ್ಮ ಬಂದು ಬಳಗ ನಾವೇ ಎಲ್ಲ…
ಫುಲ್ಲು ಬಾಟಲ್ಲು ಎತ್ತು ಸುಮ್ಮನೆ
ಕಂಠ ಪೂರ್ತಿ ನೀ ಕುಡಿಯೋ ಅಣ್ಣನೇ
ನೈಟ್ ಟೈಟ್ ಆದ ಮೇಲೆ ರೋಡೆ ನಮ್ಮನೆ, ಮನೆ, ಮನೆ…
ಹೂ ಊ ಊ.., ಎಣ್ಣೆ ಬೇಕು ಅಣ್ಣಾ..
ಹೂ ಊ ಊ.., ಇಷ್ಟೇ ಸಾಕು ರನ್ನ..
ಹೂ ಊ ಊ.., ಕುಡಿಯಬೇಕು ಇನ್ನ..
ಹೂ ಊ ಊ.., ನೀ ನೋಡ್ಕೋ ನಿನ್ನ ಕಣ್ಣ…

ಬ್ಲ್ಯಾಕ್ ಅಂಡ್ ವೈಟು ಕಣ್ಣು ಫುಲ್ಲು ರೆಡ್ ಆಗಿದೆ
ಅಣ್ಣಾ ನಿನ್ನ ಹೆಗಲೇ ಮಲಗೊ ಬೆಡ್ ಆಗಿದೆ
ಬಡ್ಡಿ ಮಗಂದ್ ಬಾಡಿ ಯಾಕೋ ಶೇಕ್ ಆಗ್ತಿದೆ
ಆದ್ರೂ ಒಂದು ನೈಂಟಿ ಇರಲಿ ಬೇಕಾಯ್ತದೆ …
ಎಷ್ಟೇ ಟೈಟ್ ಆದರೂ ಸ್ಟಡಿ ನಾವು ಇಬ್ಬರು
ಯಾರೇ ಏನೇ ಅಂದರು ನಾವು ಎಣ್ಣೆ ದೋಸ್ತರು
ಗುಂಡು ಹಾಕೊ ಗಂಡು ಮಕ್ಳ ಒಳ್ಳೆ ನೇಚರು …
ಹೂ ಊ ಊ.., ಎಣ್ಣೆ ಬೇಕು ಅಣ್ಣಾ..
ಹೂ ಊ ಊ.., ಐ ಹನ್ನೆರಡಾಯ್ತು ಚಿನ್ನ..
ಹೂ ಊ ಊ.., ಬಾರು ತೆಗಿಸೋ ಅಣ್ಣಾ..
ಹೂ ಊ ಊ.., ನೀ ನೆಟ್ಟಗ್ ನಿಲ್ಲೋ ರನ್ನ…

ಬಾರಿನಲ್ಲಿ ಓಲ್ದು ನೋಟು ವೇಸ್ಟ್ ಆಗಿದೆ
ಕುಡಿಯೋರಿಗೆ ಪಾಪ ಕಷ್ಟ ಹೆಚ್ಚಾಗದೆ
ಕುಡಿಯೋರೆಲ್ಲ ಸೇರಿ ಪಕ್ಷ ಕಟ್ಟಬೇಕಿದೆ
ಪಾರ್ಲಿಮೆಂಟಿಗೂ ನಮ್ಮ ಕೂಗು ಮುಟ್ಟಬೇಕಿದೆ …
ರೇಷನ್ ಕಾರ್ಡಿನಲ್ಲಿಯೂ ಸಿಕ್ಕ ಬೇಕು ಎಣ್ಣೆಯು
ಮನೆಯ ನಲ್ಲಿಯಲ್ಲಿಯೂ ತೀರ್ಥ ಬರ್ಲಿ ಡೇಲಿಯು
ನಮ್ಮ ಕಷ್ಟ ಅರ್ಥ ಮಾಡಿಕೊಳ್ಳಿ ಪೀಯೆಮ್ಮು …
ಹೂ ಊ ಊ.., ಏ ಎಣ್ಣೆ ಬೇಕು ಅಣ್ಣಾ..
ಹೂ ಊ ಊ.., ಏ ಖಾಲಿ ಐತು ಚಿನ್ನ..
ಹೂ ಊ ಊ.., ನೀನೇ ಕುಡ್ಕೊಂಡ್ಬಿಟ್ಟ ಅಣ್ಣಾ..
ಹೂ ಊ ಊ.., ಇನ್ನೇನ್ ಮಾಡ್ಲೋ ರನ್ನ…
ಎಣ್ಣೆನು ಸೋಡನು ಎಂತ ಒಳ್ಳೆ ಫ್ರೆಂಡು
ಒಂದನೊಂದು ಎಂದು ಬಿಟ್ಟು ಇರೋದಿಲ್ಲ
ಹಂಗೇನೇ ನಾನುನು ನೀನು ಒಳ್ಳೆ ಫ್ರೆಂಡು
ಅಣ್ಣ ತಮ್ಮ ಬಂದು ಬಳಗ ನಾವೇ ಎಲ್ಲ…
---------------------------------------------------------------------------------------------

ಹೆಬ್ಬುಲಿ (೨೦೧೭) - ಹುಲಿ ಹುಲಿ ಹೆಬ್ಬುಲಿ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ: ಚೇತಕುಮಾರ, ಗಾಯನ : ಜಾಕ್ ಸ್ಟೈಲ್, ಅರುಣ, ಕಾಮರಾಜ್

ಮಾಡಿಕೊಳ್ರೋ ತಯ್ಯಾರಿ ಬರುತಿದೆ ಸವಾರಿ
ಬಜಾರ್ ಅಲ್ಲೇ ದುಬಾರಿ ಆರಡಿ ಟೈಗರು ಈ ಟೈಗರು
ಗೆಲುವಿಗೆ ರೂವಾರಿ ಒಪ್ಪೋಧಿಲ್ಲ ಪಿತ್ತುರಿ
ಕಣ್ಣಲಿಧೆ ಕಿಚ್ಚುರಿ ಸಾಲಿಡ್ ಸೊಲ್ಜರು ಹೇ ಸೊಲ್ಜರು
ರಾಂಗು ರೈಟು ಬ್ಯಾಲೆನ್ಸ್ ಮಾಡೋದಕ್ಕೆ ಇವನೇ ಲೀಡರ್
ಇಲ್ಲಿ ಕೋಲ್ಡ್ ವಾರು ಮತ್ತೆ ಇಲ್ಲ ಡೈರೆಕ್ಟ್ ಸ್ಟಾರ್ಟ್ ವಾರು
ಗನ್ ಹಿಡಿದು ಘರ್ಜಿಸಿದೆ ಹುಲಿ ಹುಲಿ ಹೆಬ್ಬುಲಿ 
ಹುಲಿ ಹುಲಿ ಹೆಬ್ಬುಲಿ

ಇವನು ಧೈರ್ಯಕೆ ಟೀಚರ್ ಬರೆವ ದೇಶಕೆ ಫ್ಯೂಚರ್
ಹಿಕ್ಕೆ ಇದೋ ಕಡೆ ಎಲ್ಲ ಡೇಂಜರ್ ಗುರು
ಎದೆ ಉಬ್ಬಿಸಿ ಏಟಿನ ಆತ ಶುರು
ದಂಡು ಭೇದಿಸ ಬಲ್ಲ ದಾಳಿ ಚದುರಿಸ ಬಲ್ಲ
ಇರೋಧಕ್ಕೆ ಪಕ್ಕ ಕೌಂಟರ್
ಡೌಟೆ ಇಲ್ಲ ಇವ್ರೇ ಪಂಟರು
ದೂರ ನಿಲ್ಲು ಬಂದಾ ಶೂಟರು 
ಕತ್ತಲ್ಲೇ ಘರ್ಜಿಸಿದೆ ಹುಲಿ ಹುಲಿ ಹೆಬ್ಬುಲಿ
ಹುಲಿ ಹುಲಿ ಹೆಬ್ಬುಲಿ

ಮಾತು ಇಂದಿಗೂ ನೇರ ಜಾಗವೇ ಮೆಚ್ಚುವ ವೀರ
ರಕ್ತದ ಕಾನಾ ಕಾನಾ ತ್ಯಾಗವ ನುಡಿದಿದೆ
ಎದೆ ಬಡಿತವು ಬಲಿದಾನಕೆ ರೆಡಿ ಇದೆ
ಶಿಸ್ತು ಕರಗದ ತನು ಮನ ಛಲವು ಅನುದಿನ ಪ್ರತಿ ಕ್ಷಣ
ಕಷ್ಟ ಬಂದಾಗೆಲ್ಲ ಇವ ಪ್ರತಿಸಲಿ
ನಾಡು ನುಡಿ ಕಾಯುತಿರೋ ವೀರಗಲಿ
ಇವ ನೊಳಗಿದೆ ಒಂದು ಹೆಬ್ಬುಲಿ 
ಅಬ್ಬರಿಸಿ ಬೊಬ್ಬಿರಿದ ಹುಲಿ ಹುಲಿ ಹೆಬ್ಬುಲಿ 
ಹುಲಿ ಹುಲಿ ಹೆಬ್ಬುಲಿ ಹುಲಿ ಹುಲಿ ಹೆಬ್ಬುಲಿ
ಹುಲಿ ಹುಲಿ ಹೆಬ್ಬುಲಿ ಹುಲಿ ಹುಲಿ ಹೆಬ್ಬುಲಿ
-----------------------------------------------------------------------------------------------

ಹೆಬ್ಬುಲಿ (೨೦೧೭) - ಸುಂದರಿ ಸುಂದರಿ ನನ್ನ ಮಾತು ಸ್ವಲ್ಪ ಕೇಳೇ ನೀ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ: ಸಂತೋಷನಾಯಕ, ಗಾಯನ : ವಿಜಯಪ್ರಕಾಶ, ಅನುರಾಧಭಟ್ಟ  

ಸುಂದರಿ ಸುಂದರಿ ನನ್ನ ಮಾತು ಸ್ವಲ್ಪ ಕೇಳೇ ನೀ
ಸುಂದರಿ ಸುಂದರಿ ನನ್ನ ಮಾತು ಸ್ವಲ್ಪ ಕೇಳೇ ನೀ
ಬಿಸಿ ಬಿಸಿ ಮುತ್ತಿಡು. ಆಗಲ್ಲ! ಬಿಗಿ ಬಿಗಿ ತಬ್ಬಿಕೋ. ಆಗೋದಿಲ್ಲ!
ನಡುವನು ನುಡಿಸು ನೀ. ಬೇಕಿಲ್ಲ! ತನುವನು ತನಿಸು ಬಾ.ಬೇಕಾಗಿಲ್ಲ!
ಸಜೆಯಲು ಮಜಾ ಕೊಡು ಓ ನಲ್ಲ ಓ ನಲ್ಲ
ಕರೆಯು ಕರೆಯು ಕೊಡುವ ಸಮಯ ಸಾನಿಯಾ
ಬರುವೆಯಾ ಬರುವೆಯಾ ಬಾರೋ
ಸುಂದರಿ ಸುಂದರಿ ನನ್ನ ಮಾತು ಸ್ವಲ್ಪ ಕೇಳೇ ನೀ
ಸುಂದರಿ ಸುಂದರಿ ನನ್ನ ಮಾತು ಸ್ವಲ್ಪ ಕೇಳೇ ನೀ

ಮೀಸೆಯ ಬಂದಿರೋ ಪಾಪು ನಾ ಡ್ಯಾಡಿಯಾ ಮಾಡುವ ಪ್ರಿ ಪ್ಲಾನ್ಆ?
ತಡೆಯಲು ಬಾರದು ತಾಪಾನ ಮಾಡು ನೀ ಒಳ್ಳೆಯ ತಪ್ಪನ್ನ
ಹಾಳಾಗ್ ಹೋದೆಯಾ ನೋಡಿ ನೋಡಿ ನೀ ಇಂಗ್ಲಿಷ್ ಮೂವಿಯಾ 
ಅದರ ಅದರ ನಡುವೆ ಮಧುರ ಸಮರ
ನಡೆಯಲಿ ನಡೆಯಲಿ ಬಾರೋ
ಸುಂದರಿ ಸುಂದರಿ ನನ್ನ ಮಾತು ಸ್ವಲ್ಪ ಕೇಳೇ ನೀ
ಸುಂದರಿ ಸುಂದರಿ ನನ್ನ ಮಾತು ಸ್ವಲ್ಪ ಕೇಳೇ ನೀ

ಪ್ರಾಯವೇ ಒಂದ್ ಥರ ಮ್ಯಾಗ್ನೆಟ್ಟು ಯಾತಕೆ ಅಂತರ ಮೈಗಂಟು
ನೂರೇಕೆ ಸಾವಿರ ಪರ್ಸೆಂಟು ಬೆರಳನ್ನು ಚೀಪುವ ಇನ್ನೋಸೆಂಟ್ಟು
ನಾನೇ ಒಂದ್ ಸಲ ನಿನ್ನ ಮೈಯ್ಯ ಮುಟ್ಟಲೇ ಮೈಮೂವ್ ಮಂತಿಗೆ
ತಳಕು ಬಳಕು ಹುಳುಕು ತಿಳಿದು ನಡುಕ
ಬಿಡು ಬಿಡು ಬಿಡು ಬಿಡು ಬಿಡು
ಸುಂದರಿ ಸುಂದರಿ ನನ್ನ ಮಾತು ಸ್ವಲ್ಪ ಕೇಳೇ ನೀ
ಸುಂದರಿ ಸುಂದರಿ ನನ್ನ ಮಾತು ಸ್ವಲ್ಪ ಕೇಳೇ ನೀ
-----------------------------------------------------------------------------------------------

ಹೆಬ್ಬುಲಿ (೨೦೧೭) - ಉಸಿರೇ ಉಸಿರೇ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ: ಕವಿರಾಜ, ಗಾಯನ : ಶಾನ, ಶ್ರೇಯಾ ಘೋ
ಷಾಲ್

ತೆಳ್ಳಗೆ ಬೆಳ್ಳಗೆ ಇದ್ದಾನೆ ಯುದ್ಧಕೆ ನಿಂತರೆ ಮದ್ದಾನೆ
ಇವನು ಅಂದ್ರೆ ನನಗೆ ಪ್ರಾಣಾನೇ ಯು ಆರ್ ಮೈ ಲವ್ ದಿ ಓನ್ಲಿ ಒನ್
ತೆಳ್ಳಗೆ ಬೆಳ್ಳಗೆ ಇದ್ದಾನೆ ಯುದ್ಧಕೆ ನಿಂತರೆ ಮದ್ದಾನೆ ಇವನು ಅಂದ್ರೆ ನನಗೆ ಪ್ರಾಣಾನೇ
ಕಂಚಿನ ಕಂಠದಿ ಬೈತಾನೆ  ಮೀಸೆ ಮರೆಯಲಿ ನಗುತಾನೆ ನಾನು ಅಂದ್ರೆ ಅವನಿಗೆ ಇಷ್ಟನೇ
ಉಸಿರೇ ಉಸಿರೇ (ಉಸಿರೇ ಉಸಿರೇ) ಇನ್ನೇನಿಧೇ ಮುಚ್ಚು ಮೇರ್
ಉಸಿರೇ ಉಸಿರೇ ನಿನ್ನಲ್ಲಿಯೇ ನಾನು ಸೆರೆ

ಹೇಗಿದ್ದೆ ಹೇಗಾದೆ ನಾನು ಬಂದಾಗ ನೀನು
ನೀಯಾರು ಮಾಯಾವಿಯೇನು?
ಸನಿಹವೇ ಸಡಗರ ಮನಸಿದು ಮಗು ಥರ
ಮೊದಲೆನೆ ನಾ ಹುಚ್ಚ ನೀನಾದೆ ಪರಪಂಚ
ಬದುಕಿದುವೆ ನಿನ್ನ ಗುಂಗಲ್ಲೇ
ಉಸಿರೇ ಉಸಿರೇ (ಉಸಿರೇ ಉಸಿರೇ) ಇನ್ನೇನಿಧೇ ಮುಚ್ಚು ಮೇರ್
ಉಸಿರೇ ಉಸಿರೇ ನಿನ್ನಲ್ಲಿಯೇ ನಾನು ಸೆರೆ

ತರುಣಿಯ ತಲೆಯನು ಕೆಡಿಸಿದ ಹುಡುಗ ಹೃದಯಕೆ ಕಾಲಿಟ್ಟ
ಒಲವಿನ ಕಲೆಯನ್ನು ಕಳಿಸಿದ ಹುಡುಗ ಪದೇ ಪದೇ ಸೆಳೆಯುವೆ
ಹೃದಯದಿ ಅಲೆಯುವೆ ಇನ್ನಂತೂ ನಿನಗಂತಾ
ಇರುವೆ ನಾ ಜೀವಂತ ಜನುಮ ಜನುಮ ನನಗೆ ನೀ ಸ್ವಂತ
ಉಸಿರೇ ಉಸಿರೇ (ಉಸಿರೇ ಉಸಿರೇ)ಇನ್ನೇನಿಧೇ ಮುಚ್ಚು ಮೇರ್
ಉಸಿರೇ ಉಸಿರೇ ನಿನ್ನಲ್ಲಿಯೇ ನಾನು ಸೆರೆ
ತೆಳ್ಳಗೆ ಬೆಳ್ಳಗೆ ಇದ್ದಾನೆ ಯುದ್ಧಕೆ ನಿಂತರೆ ಮದ್ದಾನೆ
ಇವನು ಅಂದ್ರೆ ನನಗೆ ಪ್ರಾಣಾನೇ
--------------------------------------------------------------------------------------------

ಹೆಬ್ಬುಲಿ (೨೦೧೭) - ದೇವರೇ ನೀನು ಇರೋ 
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ: ಹರ್ಷಪ್ರಿಯ , ಗಾಯನ : ಅರ್ಮಾನ್ ಮಲ್ಲಿಕ್ 

ದೇವರೇ ನೀನು ಇರೋ ವಿಳಾಸವು ಬೇಕಾಗಿದೆ
ಆಗಿರೋ ಅನ್ಯಾಯಕೆ ದೂರೊಂದನು ನೀಡೋದಿದೆ
ಆಧಾರದ ದಾರ ಈಗ ದೂರ ಕಾರಣವೂ ಯಾರೋ ಸೂತ್ರಧಾರ
ಗೊತ್ತಾಗದೆ ಗುಟ್ಟಾಗಿದೇ
ದೇವರೇ ನೀನೆ ಬಾ ಕಾರಣ ನೀಡು ಬಾ
ದೇವರೇ ಬೇಗ ಬಾ ಉತ್ತರ ನೀಡು ಬಾ
ದೇವರೇ ನೀನು ಇರೋ ವಿಳಾಸವು ಬೇಕಾಗಿದೆ

ಕಾಯಲು ಹೋದೇನು ನಿನ್ನನು ನಂಬಿ ದೇಶವ
ಕಾಯದೇ ಸಾಥೆಯ ನನಗೆ ಬೇಕಾಧ ಒಂದು ಜೀವವ
ಮರಳಲ್ಲಿ ನನಗೆ ನಾ ಗೂಡೊಂದು ಕಟ್ಟಿದೆ
ಮಳೆ ತಂದು ಅಳಿಸಿ ನೀ ಮರೆಯಾಗಿ ಒಡೀದೇ
ಈ ಮೋಸಕೆ ನೀನೆ ಹೊಣೆ ಈಗಾಗಲಿ ವಿಚಾರಣೆ
ದೇವರೇ ನೀನೆ ಬಾ ಕಾರಣ ನೀಡು ಬಾ
ದೇವರೇ ಬೇಗ ಬಾ ಉತ್ತರ ನೀಡು ಬಾ
ದೇವರೇ ನೀನು ಇರೋ ವಿಳಾಸವು ಬೇಕಾಗಿದೆ
---------------------------------------------------------------------------------------------

No comments:

Post a Comment