1885. ಲಾಲಿ ಹಾಡು (೨೦೦೩)

ಲಾಲಿಹಾಡು ಚಲನಚಿತ್ರದ ಹಾಡುಗಳು 
  1. ಓ ಉಷೆ ಓ ಉಷೆ ಕಣ್ಣಿಗೇ ಕಾಣಿಸೋ 
  2. ದಿನ ಬೆಳಗೋ ಆ ಸೂರ್ಯನ 
  3. ನನ್ನ ಹೃದಯ ನನ್ನ ಹೃದಯ 
  4. ಒಲವೇ ನನ್ನೊಲವೇ 
  5. ಪ್ರೀತಿಗೆ ಒಂದು ಬೆಂಗಳೂರು 
  6. ಮಗಳೇ ಮಗಳೇ 
  7. ಜೋ ಲಾಲಿ 
  8. ಕೋಟಿ ಕೋಟಿ ಹೂಗಳಿಗೆ 
ಲಾಲಿ ಹಾಡು (೨೦೦೩) - ಓ ಉಷೆ ಓ ಉಷೆ ಕಣ್ಣಿಗೆ ಕಾಣಿಸೇ
ಸಂಗೀತ : ಸಾಧುಕೋಕಿಲ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಶಂಕರ ಮಹಾದೇವನ್, ನಂದಿತಾ 
 
ಓಓಓ ಓಓಓ ಓಓಓ ಓಓಓ ಓಓಓ ಓಓಓ
ಓ ಉಷೆ ಓ ಉಷೆ ಕಣ್ಣಿಗೆ ಕಾಣಿಸೇ
ಹದಿನೇಳು ಚೈತ್ರಗಳ ತೆರಿನಲಿ ಬಂದವಳಾ
ಒಲವಿನ ಹೂವ ಹಾಸಿ ಹೇಳುವೆನಾ
ಸುಸ್ವಾಗತ ಸ್ವಾಗತ
ಓ ಉಷೆ ಓ ಉಷೆ ಕಣ್ಣಿಗೆ ಕಾಣಿಸೇ

ಎಲ್ಲಿರಲಿ ಹೇಗಿರಲಿ ನೀ ನಗುತಿರು
ನಿನ್ನ ಹರಸಲಿ ಎಲ್ಲ ದೇವರು
ಕೈ ಹಿಡಿಯೋ ಬಂಧುಗಳು ಯಾರಾದರೂ
ನಿನ್ನ ಜೊತೆಗಿರೆ ಭಾಗ್ಯವಂತರು
ನಾಳಿನ ಬಾಳಿನ ದಾರಿಯಲಿ ಒಳ್ಳೆಯ ದಿನಗಳೇ ಬರುತಿರಲಿ
ಈ ಮನಸಿನಾ ಮೇಲೆ ನಿನ್ನ ಗುರುತಿದೆ
ಸುಖವಾಗಿರು

ಓಓಓ ಓಓಓ ಓಓಓ
ನಿನ್ನಿಂದ ಹೊಸ ಬದುಕು
ನಿನ್ನಿಂದ ಹೊಸ ಬದುಕು
ಮರೆಯದ ನೂರು ನೆನಪು ತರುವಾ
ಮನಸಿಗೆ ವಂದನೆ ವಂದನೆ

ಸಿಹಿ ಇರಲಿ ಕಹಿ ಇರಲಿ ಈ ಜಗದಲಿ
ನಿನ್ನ ಪಾಲಿಗೆ ಸಿಹಿಯೇ ತುಂಬಲಿ
ಬದುಕುಗಳು ತಿರುವುಗಳು ಹೇಗೇ ಇರಲಿ
ನೆನಪು ಉಳಿಯಲಿ ಕನಸು ಅರಳಲಿ

ಏಳೂ ಬೀಳಿನ ಬಾಲಿನಲಿ ಏಳಿಗೆಯೊಂದೇ ನಿನಗಿರಲಿ
ಪ್ರತಿ ಜನ್ಮಕೂ ನಿನ್ನ ಹೆಸರುಳಿಯಲಿ
ಹಾಯಾಗಿರು ಎಂದೊ ಸುಖವಾಗಿರು
ಆ ಆ ಈ ಪಲ್ಲವಿ ನೀನಾಗಿರೊ
ಓಓಓ ಓಓಓ ಓಓಓ ಓಓಓ ಓಓಓ ಓಓಓ
---------------------------------------------------------------

ಲಾಲಿ ಹಾಡು (೨೦೦೩) - ದಿನ ಬೆಳಗೊ ಆ ಸೂರ್ಯನ ಆರಂಭದ ಹೆಜ್ಜೇಯಲ್ಲಿ...
ಸಂಗೀತ : ಸಾಧುಕೋಕಿಲ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಹರಿಹರನ್ 

ಓ.... ಓಹೋಹೋ... ಓಹೋಹೋ 
ಯಾವ ಹಾಡು, ಯಾವ ರೀತಿ ಇದ್ದರೂ.. ಯಾರ ನೋಟ,ಯಾರ ಮೇಲೆ ಇದ್ದರೂ... 
ಹೊಸತು ರಾಗವಿಲ್ಲ.. ಹೊಸತು ತಾಳವಿಲ್ಲಾ.... 
ನನ್ನ ಒಂದು ಮಾತಲ್ಲಿ ಉಂಟು ಒಂದು ಹೊಸ ವಿಷಯ..
ಕೇಳುವಷ್ಟು ಸಮಯ ನಾನಿಲ್ಲಿ ಬಿಚ್ಚಿಕೊಡುವೇ ಹೃದಯ...

ದಿನ ಬೆಳಗೊ ಆ ಸೂರ್ಯನ ಆರಂಭದ ಹೆಜ್ಜೇಯಲ್ಲಿ...
ದಿನ ಕಳೆಯೋ ಆ ಚಂದ್ರನ ವೈಯರದ ಲಜ್ಜೇಯಲ್ಲಿ...
ನನ್ನ ಎದೆಯ ಮಾತು ಇದೆ., ಅಮ್ಮ ಕಲಿಸಿದ ಹಾಡು ಇದೆ.
ಈ ಹಾಡಿನ ತೋಟದಲ್ಲಿ ನೀವು ಬೆಳೆಸಿದ ಹೂವಗಳೀವೆ..
ದಿನ ಬೆಳಗೊ.. ಆ ಸೂರ್ಯನ.. ಆರಂಭದ ಹೆಜ್ಜೆಯಲ್ಲಿ..ಈ..ಈ.ಈ..

ಹೇಯ್ ಆಕಾಶಕ್ಕೆ ಯಾವ ಬಣ್ಣ ಹೇಳೊರ್ಯಾರೂ ಇಲ್ಲ.
ಕಣ್ಣು ಹೇಳೊ ಬಣ್ಣ ತಾನೇ ನಂಬೋದು ಎಲ್ಲಾ..
ಹೇ ಹೇಯ್.. ಕಡಲಿಗ್ಯಾಕೇ ಅಂತ ಮೌನ ಬಲ್ಲವರ್ಯರೂ ಇಲ್ಲ.
ಮನಸ್ಸು ಕೊಡುವ ಮೌನ ತಾನೇ ನಂಬೋದು ಎಲ್ಲಾ..ಆ..
ಹುಣ್ಣಿಮೆಯ ಎದುರಲ್ಲಿ ಅಲೆಗಳ ತನನನ.
ಮನಸ್ಸಿನ ಎದುರಲ್ಲಿ ಇಬ್ಬನಿಯ ದಿರನನನ
ನನ್ನ ಎದೆಯ ಮಾತು ಇದೆ. ಅಮ್ಮ ಕಲಿಸಿದ ಹಾಡು ಇದೆ.
ವಾತ್ಸಲ್ಯದ ನೆರಳಿನಲೇ ಈ ವಯಸ್ಸಿನ ಹುರುಪು ಇದೆ..
ದಿನ ಬೆಳಗೊ ಆ ಸೂರ್ಯನ ಆರಂಭದ ಹೆಜ್ಜೆಯಲ್ಲಿ....

ಹೇಯ್.. ಸ್ನೇಹಯೆಂಬ ತಂಗಾಳಿಗೆ, ಯಾವ ರೂಪವಿಲ್ಲ..
ನೋವ ಮರೆಸೂ ಹೃದಯಕೇ ಮಾತ್ರ ಕಾಣೋದು ಎಲ್ಲ..
ಹಹಹ... ಪ್ರೀತಿಗಿಂತ ಜಗವ ಬೆಳಗೊ ಬೇರೆ ದೀಪವಿಲ್ಲಾ..
ತಾಯಿ ಹೊರತು ಪ್ರೀತಿಯ ಮಾತು,ಯಾರಿಗೂ ಹೊಂದೋಲ್ಲ..
ಅಕ್ಕರೆಯ ಕಂಗಳಲ್ಲಿ.. ಆಸರೆಯ ಸ್ಪಂದನ.
ಭೂಮೀಗೂ ಗಗನಕ್ಕೂ ಬಿಡಿಸದ ಬಂಧನ...
ನನ್ನ ಎದೆಯ ಮಾತು ಇದೆ. ಅಮ್ಮ ಕಲಿಸಿದ ಹಾಡು ಇದೆ.
ಮೊದಲಿಂದ ಕೊನೆವರೆಗೂ ಹೆಸರುಳಿಸೋ ತವಕವಿದೆ.
ದಿನ ಬೆಳಗೊ ಆ ಸೂರ್ಯನಆರಂಭದ ಹೆಜ್ಜೆಯಲ್ಲಿ...
ದಿನ ಕಳೆಯೋ ಆ ಚಂದ್ರನವೈಯರದ ಲಜ್ಜೆಯಲ್ಲಿ..
ನನ್ನ ಎದೆಯ ಮಾತು ಇದೆ. ಅಮ್ಮ ಕಲಿಸಿದ ಹಾಡು ಇದೆ.
ಈ ಹಾಡಿನ ತೋಟದಲ್ಲಿ ನೀವು ಬೆಳೆಸಿದ ಹೂವಗಳೀವೆ.
-----------------------------------------------------------

ಲಾಲಿ ಹಾಡು (೨೦೦೩) - ನನ್ನ ಹೃದಯ ನನ್ನ ಹೃದಯ ಟುವ್ವಿ 
ಸಂಗೀತ : ಸಾಧುಕೋಕಿಲ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಹೇಮಂತ, ನಂದಿತಾ 

F: ನನ್ನ ಹೃದಯ ನನ್ನ ಹೃದಯ ಟುವ್ವಿ ಟುವ್ವಿ ಅನ್ನೋ ಸಮಯಾ
ಏಳು ಜನ್ಮಕ್ಕು ಏಳೇಳು ಜನ್ಮಕ್ಕು ನೀನೆ ನನ್ನ ಪ್ರೀತಿ ಗೆಳೆಯಾ..
ಎದೆ ತುಂಬಿ ಹಾಡುವೆನು.. ಈ ತೊದಲ ಹಾಡನ್ನು...
ಮನಸು ಬರೆದ...ಕಾವ್ಯ ಅರ್ಪಿಸುವೆ ನಿನಗಿನ್ನು.
ಈ....ಜೀವಕೆ... ನೀನಾದೆ ಚಂದ್ರಮನು..
ನವ ಚೈತ್ರ ತಂದವನು...ಉ.ಉ.ಉ
ನನ್ನ ಹೃದಯ ನನ್ನ ಹೃದಯ ಟುವ್ವಿ ಟುವ್ವಿ ಅನ್ನೋ ಸಮಯಾ..
ಏಳು ಜನ್ಮಕ್ಕು ಏಳೇಳು ಜನ್ಮಕ್ಕು ನೀನೆ ನನ್ನ ಪ್ರೀತಿ ಗೆಳೆಯಾ...

F: ಮೌನವಿಲ್ಲದೆ ಮಾತೆಂದು ಹುಟ್ಟದು
M: ಆ ಮಾತಿಗೆ ಸ್ವಾಗತ..
F: ಮಾತು ಇಲ್ಲದೆ ಹಾಡೆಂದು ಹುಟ್ಟದು
M: ಆ ಹಾಡೆ ಶಾ..ಶ್ವತ..
F: ಹಾಡಿಂದಲೆ ಹುಟ್ಟಿ ಬರೋ..
M: ಕನಸಲೆ ನಲಿಯುತ..
F: ಕನಸಲೇ ಹುಟ್ಟಿ ಬರೋ...
M: ಬದುಕಿಗೆ ಒಲಿಯುತ
F: ಬದುಕಿನಲಿ, ಹುಟ್ಟಿ ಬರೋ
M: ಆ ಪ್ರೀತಿ ತಕದಿಮಿತ....ಆ.ಆ.ಆ
ನನ್ನ ಹೃದಯ ನನ್ನ ಹೃದಯ ಟುವ್ವಿ ಟುವ್ವಿ ಅನ್ನೋ ಸಮಯಾ..
ಏಳು ಜನ್ಮಕ್ಕು ಏಳೇಳು ಜನ್ಮಕ್ಕು ನೀನೆ ನನ್ನ ಪ್ರೀತಿ ಹೃದಯಾ...

M: ಅಂದ ವಿಲ್ಲದೆ ಆಸೆಯೂ ಹುಟ್ಟದು
F: ಆ ಆಸೆಗೆ ಸ್ವಾಗತ..
M: ಆಸೆ ಇಲ್ಲದೆ ಆನಂದ ಹುಟ್ಟದು
F: ಆನಂದವೆ... ಅಂಕಿತ...
M: ಆನಂದಕೆ.. ಹುಟ್ಟಿ ಬರೋ..
F: ಆಸರೆಯ...ಬೇಡುತ..
M: ಆಸರೆಗೆ ಹುಟ್ಟಿ ಬರೋ..
F: ಅಪ್ಪುಗೆಯ ಸವಿಯುತ..
M: ಅಪ್ಪುಗೆಗೆ ಹುಟ್ಟಿ ಬರೋ
M/F: ಆ ಅನುಭವ ತಕದಿಮಿತ..ಆ.ಆ.ಆ
M: ನನ್ನ ಹೃದಯ ನನ್ನ ಹೃದಯ
ಟುವ್ವಿ ಟುವ್ವಿ ಅನ್ನೋ ಸಮಯಾ
M/F: ಏಳು ಜನ್ಮಕು ಏಳೇಳು ಜನ್ಮಕ್ಕು
ನೀನೆ ನನ್ನ ಪ್ರೀತಿ ಹೃದಯ..

M: ಎದೆ ತುಂಬಿ ಹಾಡುವೆನು
ಈ ತೊದಲ ಹಾಡನ್ನು..
ಮನಸು ಬರೆದ...ಕಾವ್ಯ
ಅರ್ಪಿಸುವೆ ನಿನಗಿನ್ನೂ..
F: ಈ ಜೀವಕೆ...
ನೀನಾದೆ ಚಂದ್ರಮನೂ..
ನವ ಚೈತ್ರ ತಂದವನು...ಉ.ಉ.ಉ
-----------------------------------------------------------

ಲಾಲಿ ಹಾಡು (೨೦೦೩) - ಒಲವೇ ನನ್ನೊಲವೇ 
ಸಂಗೀತ : ಸಾಧುಕೋಕಿಲ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಶ್ರೀನಿವಾಸ, ಚಿತ್ರಾ 

ಒಲವೇ ನನ್ನೊಲವೇ ನನ್ನೊಲವೇ ನನ್ನ ಒಲವೇ 
ನಿನ್ನೊಲವೇ ನನ್ನೊಳಯ ಶಾಲೆ 
ಓಓಓಓ ಓ ಮುಗಿಲೇ ಓ ಮುಗಿಲೇ 
ಬೆಳ್ಳಿ ಮುಗಿಲೇ ಬೆಳ್ಳಿ ಮುಗಿಲೇ ನಿನಗೊಂದು ಪ್ರೀತಿಯ ಓಲೆ... ಓಓ 
ಆ ಕಣ್ಣು ಇರದೆನೇ ಕನಸುಗಳ ಕೊಡಬಹುದು 
ನಾವೆಲ್ಲರೂ ಹೆಣ್ಣೇ ಇರದಂತ ಕಲ್ಪನೆಯ ಕ್ಷಮಿಸೋಲ್ಲ 
ಆ ದೇವರು ಪ್ರೀತಿ ಎಂದು ಬಂದು ಹೋಗೋ ಅತಿಥಿಯು ಅಲ್ಲ 

ಆತ್ತ ಮೇಲೆ ಕಣ್ಣ ನೀರು ಕಣ್ಣಿಗೆಯೇ ಅಲ್ಲ 
ನಮ್ಮ ಪ್ರೀತಿ ನಮ್ಮದಾಗುವ ಬದುಕೆಲ್ಲ ಬಣ್ಣವಾಗುವ 
ನೆನಪೇ ಮಧುರ 
ಒಲವೇ ನನ್ನೊಲವೇ ನನ್ನೊಲವೇ ನನ್ನ ಒಲವೇ 
ನಿನ್ನೊಲವೇ ನನ್ನೊಳಯ ಶಾಲೆ 

ಓಓಓ  ಓ ಮನಸು ಅನ್ನೋದು ಎರಡಲ್ಲ ಒಬ್ಬರಿಗೆ ಒಂದೇ ಒಂದು 
ಪ್ರೀತಿ ಅನ್ನೋದು ಕುರುಡಲ್ಲ ಜಗಕೆಂದು ಬೆಳಕು ಅದು 
ಬಾಳಿಗಾಗಿ ಹಾಡಿದರೇ ಬರಿ ಆ ಯೋಚನೆ 
ಹಾಡಿಗಾಗಿ ಬಾಳಿದರೇ ಅದುವೇ ಸಾಧನೆ 
ಆ ಬ್ರಹ್ಮ ಗೀಚೋ ಬರಹದ ದಿನಕೊಮ್ಮೆ 
ಸನಿಹ ವಿಹಾರದ ಆಟ ಮಧುರ 
ಒಲವೇ ನನ್ನೊಲವೇ ನನ್ನೊಲವೇ ನನ್ನ ಒಲವೇ 
ನಿನ್ನೊಲವೇ ನನ್ನೊಳಯ ಶಾಲೆ 
ಓಓಓಓ ಓ ಮುಗಿಲೇ ಓ ಮುಗಿಲೇ 
ಬೆಳ್ಳಿ ಮುಗಿಲೇ ಬೆಳ್ಳಿ ಮುಗಿಲೇ ನಿನಗೊಂದು ಪ್ರೀತಿಯ ಓಲೆ... ಓಓ 
------------------------------------------------------------------------------------------------------

ಲಾಲಿ ಹಾಡು (೨೦೦೩) - ಪ್ರೀತಿಗೆ ಒಂದು ಬೆಂಗಳೂರು 
ಸಂಗೀತ : ಸಾಧುಕೋಕಿಲ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಉದಿತನಾರಾಯಣ್ 

ಪ್ರೀತಿಗೆ ಒಂದು ಬೆಂಗಳೂರು ಸ್ನೇಹಕೆ ಒಂದು ಮೈಸೂರು 
ಆಸೆಗೆ ಒಂದು ಬೇಲೂರು ತುರು ತುತ್ತೂ ತುತ್ತೂರೂ 
ಮಾತಿಗೆ ಒಂದು ಮಂಗಳೂರು ಕತ್ತಿಗೆ ಒಂದು ಕೊಲ್ಲೂರು 
ರೊಟ್ಟಿಗೆ ಒಂದು ರಾಯಚೂರು ತುರು ತುತ್ತೂ ತುತ್ತೂರೂ 
ಎಲ್ಲಾನೂ ನಮ್ಮೂರು ಎಲ್ಲಾರೂ ನಮ್ಮೋರು 
ಆಡೋಕೆ ಬಾಯಿಬಿಟ್ರೇ ಇಂಡಿಯಾನೇ ಕೊಳ್ಳುವವರು 
ಆಯಿರೇ .. ಓ ಜಾಲಿರೇ... ಓ.. ಜಾಲಿರೇ ಜಮಾಯಿಸಿರೇ .. 
ಓ ಜಾಲಿರೇ ಓ ಆಯಿರೇ .. ಓ ಆಯಿರೇ ಜಮಾಯಿಸಿರೇ ..  

ಸಾವಿರಾರು ಹುಡುಗಿಯರ ಥಳಕು ಬಳುಕು ನಡುವಿನಲು 
ನನ್ನ ಪ್ರೀತಿಯ ಹುಡುಗಿನ ನಾ ಕಂಡು ಹಿಡಿಬಲ್ಲೇ .. 
ಸಾವಿರಾರು ಬಣ್ಣಗಳ ಸಾವಿರಾರು ಕಣ್ಣುಗಳ 
ಕೋಟೆ ದಾಟಿ ನನ್ನವಳ ಹೃದಯ ಗೆಲ್ಲಬಲ್ಲೇ ... 
ಮೋಜು ಮಾಡುವ ವಯಸ್ಸಲಿ ಯಾಕೋ ಬೇರೆ ಗೋಜುಗಳು 
ಬಾಜಿ ಕಟ್ಟಿ ಉಡಾಯಿಸುವವರಿಗೆ ಬಾರದು ಚಿಂತೆಗಳು 
ನಲಿದಾಡುವ ಕುಣಿದಾಡುವ ವಯಸ್ಸು ಇದು 
ಪ್ರತಿಯೊಬ್ಬರ ಮೈಯ್ಯ ಮರೆಸುವ ಕನಸು ಇದು 
ಆಯಿರೇ .. ಓ ಜಾಲಿರೇ... ಓ.. ಜಾಲಿರೇ ಜಮಾಯಿಸಿರೇ .. 
ಓ ಜಾಲಿರೇ ಓ ಆಯಿರೇ .. ಓ ಆಯಿರೇ ಜಮಾಯಿಸಿರೇ ..  
ಪ್ರೀತಿಗೆ ಒಂದು ಬೆಂಗಳೂರು ಸ್ನೇಹಕೆ ಒಂದು ಮೈಸೂರು 
ಆಸೆಗೆ ಒಂದು ಬೇಲೂರು ತುರು ತುತ್ತೂ ತುತ್ತೂರೂ 

ನಾನು ನಡೆಯೋ ದಾರಿಯಲಿ ನನ್ನದೇ ನೂರು ಕನಸುಂಟು 
ಎಲ್ಲ ಕನಸಿನ ಗಂಟಲು ನಿಮಗೊಂದು ಸಿಹಿಯುಂಟು 
ಸುತ್ತೋ ಭೂಮಿಯ ಹಣೆಮೇಲೆ ನಮ್ಮ ನಾಡಿನ ಹೆಸರಿಟ್ಟು 
ಲಾಲಿ ಹಾಡಿನ ಪದವನ್ನೇ ಜಗಕಂಚುವ ಮನಸುಂಟು 
ಹೆಜ್ಜೆ ಇಟ್ಟರೆ ಹಿಂದಕೆ ತಿರುಗೋ ಮಾತು ನನ್ನದಲ್ಲಾ 
ಇಟ್ಟ ಗುರಿಗೆ ಕಟ್ಟಿದ ಬೆಲೆಗೆ ಸೋತು ಹೋಗಲ್ಲಾ 
ಬನ್ನೀ ಗೆಳೆಯರೇ.. ಗೆಳತಿಯರೇ  ಮಜಾ ಮಾಡುವಾ 
ಪ್ರತಿ ಹೃದಯಕ್ಕೂ ನಮ್ಮ ಹೃದಯವ ಜೊತೆ ಮಾಡುವಾ 
ಪ್ರೀತಿಗೆ ಒಂದು ಬೆಂಗಳೂರು ಸ್ನೇಹಕೆ ಒಂದು ಮೈಸೂರು 
ಆಸೆಗೆ ಒಂದು ಬೇಲೂರು ತುರು ತುತ್ತೂ ತುತ್ತೂರೂ 
ಮಾತಿಗೆ ಒಂದು ಮಂಗಳೂರು ಕತ್ತಿಗೆ ಒಂದು ಕೊಲ್ಲೂರು 
ರೊಟ್ಟಿಗೆ ಒಂದು ರಾಯಚೂರು ತುರು ತುತ್ತೂ ತುತ್ತೂರೂ 
ಎಲ್ಲಾನೂ ನಮ್ಮೂರು ಎಲ್ಲಾರೂ ನಮ್ಮೋರು 
ಆಡೋಕೆ ಬಾಯಿಬಿಟ್ರೇ ಇಂಡಿಯಾನೇ ಕೊಳ್ಳುವವರು 
ಆಯಿರೇ .. ಓ ಜಾಲಿರೇ... ಓ.. ಜಾಲಿರೇ ಜಮಾಯಿಸಿರೇ .. 
ಓ ಜಾಲಿರೇ ಓ ಆಯಿರೇ .. ಓ ಆಯಿರೇ ಜಮಾಯಿಸಿರೇ ..  
------------------------------------------------------------------------------------------------------

ಲಾಲಿ ಹಾಡು (೨೦೦೩) - ಮಗಳೇ ಮಗಳೇ
ಸಂಗೀತ : ಸಾಧುಕೋಕಿಲ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ರಾಜೇಶ, ಶಮಿತಾ

ಗಂಡು : ಮಗಳೆ ಮಗಳೆ ಮಾವನ ಮಗಳೆ ಮಾವಿನ ತೋಪಿಗೆ ಬರತಿಯಾ
ಹೆಣ್ಣು : ರಗಳೆ ರಗಳೆ ಎನಿದು ರಗಳೆ ಬಂದರೆ ಏನು ಕೊಡ್ತಿಯಾ
ಗಂಡು : ಗುಟ್ಟುಬಿಡ್ದಂಗೆ ಮೂರೊತ್ತು ನಿನ್ನ ಸೆರಗಿನಲಿ ಕುಂತಿರ್ತೀನಿ
              ಬಿಟ್ಟುಕೊಡದಂಗೆ ಯಾವತ್ತು ಗುಂಡಿಗೆಯಲಿ ಗೂಡು ಕಟ್ಟಿಕೊಡ್ತಿನಿ
ಹೆಣ್ಣು : ನಡಿ ನಡಿ ಯಾಕೊ ಚೋಡ್ತಿಯಾ...
              ಮಗನೆ ಮಗನೆ ಮಾವನ ಮಗನೆ ಮಾವಿನ ತೋಪಿಗೆ ಬರತಿಯಾ

ಗಂಡು: ಬೆಳ್ಳಂ ಬೆಳಗಾನೇ ಎದ್ದು ಓಡೋ ಮೋಡಾನ ತಂದು 
              ನಿನ್ನ ಹಣೆ ಮೇಲಿನ ಬೆವರಾ ಒರೆಸುವೆ 
              ಸೂರ್ಯನ ಕಿರಣಾನ ಕದ್ದು ಚಂದ್ರನ ಹಿತ್ತಲಿಗೆ ತಂದು 
              ನಿನ್ನಾ ಮೈಮೇಲೆ ಒಡವೆ ತೊಡಿಸುವೆ 
              ವಯ್ಯಾರಿ ... ವಯಸ್ಸು ಒಂದು ವಾರಧಾಂಗ್ 
              ಅದು ನಿಂಗ್ಯಾಕೆ ಬಿಂಕ ಬಿಗುಮಾನ              
ಹೆಣ್ಣು : ಠಕಾಯ್ಸೋ ಪ್ರೀತಿಯ ಠಕ್ಕರು ನೀನು 
ಗಂಡು : ಬ್ಯಾಟಿಗೆ ಸಿಗದ ಬೌನ್ಸರೂ ನೀನು 
               ಮಗಳೆ ಮಗಳೆ ಮಾವನ ಮಗಳೆ ಮಾವಿನ ತೋಪಿಗೆ ಬರತಿಯಾ
ಹೆಣ್ಣು : ರಗಳೆ ರಗಳೆ ಎನಿದು ರಗಳೆ ಬಂದರೆ ಏನು ಕೊಡ್ತಿಯಾ
   
ಹೆಣ್ಣು : ಕಣ್ಣು ಅನ್ನೋದೇ ಕೋಣೆ ರೆಪ್ಪೆ ಅನ್ನೋದು ಚಾಪೆ 
               ತುಟಿಯು ಈ ತಾಂಬೂಲಾನ ಕೊಡಲೇನು ತುಟಿಯ ಈ ತಾಂಬೂಲಾನಾ ಬದಲು 
               ನಿನ್ನ ತೊಳ ತೆಕ್ಕೆಯೊಳಗೆ ಈ ಮೈಯ್ಯ ಮರೆತು ಬಿಡಲೇನು 
               ಪ್ರಣಯಕೇ ಯಾವ ಪರಿಚಯ ಬೇಕಿಲ್ಲ ಅದು ಹಿಂಗ್ಯಾಕೆ ಇನ್ನೂ ಅನುಮಾನ 
ಗಂಡು : ಐಶ್ವರ್ಯ ರಾಯನ ಕನ್ನಡಿ ನೀನು 
ಹೆಣ್ಣು : ಕನ್ನಡ ತಾಯಿಯ ಮುನ್ನುಡಿ ನೀನು 
ಗಂಡು : ಮಗಳೆ ಮಗಳೆ ಮಾವನ ಮಗಳೆ ಮಾವಿನ ತೋಪಿಗೆ ಬರತಿಯಾ
ಹೆಣ್ಣು : ರಗಳೆ ರಗಳೆ ಎನಿದು ರಗಳೆ ಬಂದರೆ ಏನು ಕೊಡ್ತಿಯಾ
ಗಂಡು : ಗುಟ್ಟುಬಿಡ್ದಂಗೆ ಮೂರೊತ್ತು ನಿನ್ನ ಸೆರಗಿನಲಿ ಕುಂತಿರ್ತೀನಿ
              ಬಿಟ್ಟುಕೊಡದಂಗೆ ಯಾವತ್ತು ಗುಂಡಿಗೆಯಲಿ ಗೂಡು ಕಟ್ಟಿಕೊಡ್ತಿನಿ
ಹೆಣ್ಣು : ನಡಿ ನಡಿ ಯಾಕೊ ಚೋಡ್ತಿಯಾ...
              ಮಗನೆ ಮಗನೆ ಮಾವನ ಮಗನೆ ಮಾವಿನ ತೋಪಿಗೆ ಬರತಿಯಾ
------------------------------------------------------------------------------------------------------

ಲಾಲಿ ಹಾಡು (೨೦೦೩) - ಜೋ ಲಾಲಿ 
ಸಂಗೀತ : ಸಾಧುಕೋಕಿಲ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಕವಿತಾ ಕೃಷ್ಣಮೂರ್ತಿ 

ಜೋ ಜೋ ಜೋ ಜೋ ಜೋ ಜೋ ಜೋ ಜೋ ಜೋ ಜೋ ಜೋ ಜೋ 
ಜೋ ಜೋ ಜೋ ಜೋ ಜೋ ಜೋ ಲಾಲಿ ಜೋ ಜೋ ಜೋ ಜೋ ಜೋ ಜೋ 
ನಮದೊಂದು ಸುಂದರ ಊರು ಪ್ರೀತಿನೇ ನಮಗಿಲ್ಲಿ ಸೂರು 
ಬೆಳದಿಂಗಳೇ ಜೋಲಿ ತಂಗಾಳಿಯೇ ಲಾಲಿ ಮಲಗೇ ಕಂದಮ್ಮಾ 
ಜೋ ಜೋ ಜೋ ಜೋ ಜೋ ಜೋ ಲಾಲಿ ಜೋ ಜೋ ಜೋ ಜೋ ಜೋ ಜೋ 

ಮಮತೆಯ ಮಡಿಲಲ್ಲಿ ಕರುಳಿನ ಕಥೆ ಬರೆವ ಜೀವನ ನೀನಮ್ಮಾ 
ಕರುಳಿನ ಕುಡಿಯಾಗಿ ಕಣ್ಣಿರಲು ಕನಸ್ಸಿಡುವ ದೈವನೇ ನಿನ್ನಮ್ಮಾ 
ಮಲಗಮ್ಮಾ... ಅರೆಗಣ್ಣು ತೆರೆದು ಹುಸಿ ನಗೆಯ ಬರದು 
ಮಲಗೋ ಕಂದಮ್ಮಾ ... ಜೋ..ಜೋ  ಜೋ..ಜೋ     ಜೋಜೋಜೋ 

ನನಗೆಂದೇ ನೀನಿರುವೆ ನಿನಗಾಗಿ ನಾನಿರುವೆ ನಾವಿಬ್ಬರೇ ನಮಗಮ್ಮಾ 
ಹಗಲಿರುಳ ಬಟ್ಟಲಲ್ಲಿ ಇರುಳಗಳ ತೊಟ್ಟಿಲಲ್ಲಿ ಕಾಣೋದೇ ಮಗುವಮ್ಮಾ 
ಮಲಗಮ್ಮಾ... ಬೆಳದಿಂಗಳೇ ಜೋಲಿ ತಂಗಾಳಿ ಲಾಲಿ 
ಮಲಗಮ್ಮ ಕಂದಮ್ಮಾ... ಜೋ... ಜೋ... ಜೋಜೋ .. ಜೋಜೋಜೋಜೋ    
------------------------------------------------------------------------------------------------------

ಲಾಲಿ ಹಾಡು (೨೦೦೩) - ಕೋಟಿ ಕೋಟಿ ಹೂಗಳಿಗೆ 
ಸಂಗೀತ : ಸಾಧುಕೋಕಿಲ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ರಾಜೇಶ 

ಕೋಟಿ ಕೋಟಿ ಹೂವುಗಳಿಗೆ ಮಕರಂದ ಒಂದೇ 
ಹೇ.. ಕೋಟಿ ಕೋಟಿ ಮನಗಳಿಗೆ ಅನುಬಂಧ ಒಂದೇ 
ಸರಿಗಮದ ತೊಟ್ಟಿಲಲ್ಲಿ ಕನಸು ಒಂದಿದೆ 
ಭರವಸೆಯಾ ಮೆಟ್ಟಿಲಲ್ಲಿ ಬದುಕು ಮುಂದಿದೆ 
ಸಂಗೀತ ನಮ್ಮ ತವರು ಚಪ್ಪಾಳೆಯೇ ಉಸಿರು 
ಅಭಿಮಾನವೇ ಸ್ಫೂರ್ತಿಗೊಂದು ಹೆಸರು 
ಕೋಟಿ ಕೋಟಿ ಹೂವುಗಳಿಗೆ ಮಕರಂದ ಒಂದೇ 
ಹೇ.. ಕೋಟಿ ಕೋಟಿ ಮನಗಳಿಗೆ ಅನುಬಂಧ ಒಂದೇ 

ಎಲ್ಲೇ ಇದ್ದರೂ ಹೇಗೆ ಇದ್ದರೂ 
ನೀ ಎಲ್ಲೇ ಇದ್ದರು ಹೇಗೆ ಇದ್ದರೂ ಸಂಗೀತಕ್ಕೆ ಬೆಸೆಯೋ ಗುಣವಿದೆ 
ಯಾರೇ ಬಂದರು ಯಾರೆಲ್ಲಿಗೆ ಹೋದರೂ ತಮ್ಮ ನಂಟು ಹೊಸೆಯೋ ಋಣವಿದೆ 
ಹೇ.. ಮಳೆ ಹನಿ ಎಲ್ಲ ಆ ಮೋಡಕ್ಕೆ ಸ್ವಂತವು ಅಲ್ಲ 
ತಿರುಗೋ ಭೂಮಿ ಚಿಕ್ಕದು ಆಕಾಶ ಚಿಕ್ಕದು 
ನಮ್ಮ ಈ ಕನಸೇ ಎಂದೂ ಎಲ್ಲಕ್ಕಿಂತ ದೊಡ್ಡದು 
ಕೋಟಿ ಕೋಟಿ ಹೂವುಗಳಿಗೆ ಮಕರಂದ ಒಂದೇ 
ಹೇ.. ಕೋಟಿ ಕೋಟಿ ಮನಗಳಿಗೆ ಅನುಬಂಧ ಒಂದೇ 

ಬಣ್ಣದಾ ಕನಸಿನಾ ಸಾಗರದ ಮೇಲೆ 
ಹೇ.. ಬಣ್ಣದಾ ಕನಸಿನಾ ಸಾಗರದ ಮೇಲೆ 
ಪ್ರೀತಿ ಎಂಬ ನಗೆಯಾ ಅಲೆ ಇದೆ 
ಪ್ರೀತಿಯ ಸುಂದರ ಭಾವಗಳ ಮೇಲೆ 
ಎಷ್ಟೋ ಬದುಕು ಬರೆಯೋ ಕಥೆ ಇದೆ 
ಹೇ.. ನಮ್ಮಾ ಪ್ರತಿ ನಾಳೆ ನಾವೇ ಬರೆಯೋ ಹೊಸ ಬಿಳಿ ಹಾಳೆ 
ನಾವ್ ಬರೆಯೋ ಪದವೆಲ್ಲಾ ಪ್ರತಿ ಹೃದಯಕ್ಕೂ ಒಂದು ಓಲೆ 
ರಾಶಿ ರೊಕ್ಕ ಚಿಕ್ಕದು  ದುಃಖ ಚಿಕ್ಕದು 
ಅಮ್ಮನಾ ಲಾಲಿಯಾ ಪ್ರೀತಿ ಅಮೃತವೇ ದೊಡ್ಡದು 
ಕೋಟಿ ಕೋಟಿ ಹೂವುಗಳಿಗೆ ಮಕರಂದ ಒಂದೇ 
ಹೇ.. ಕೋಟಿ ಕೋಟಿ ಮನಗಳಿಗೆ ಅನುಬಂಧ ಒಂದೇ 
ಸರಿಗಮದ ತೊಟ್ಟಿಲಲ್ಲಿ ಕನಸು ಒಂದಿದೆ 
ಭರವಸೆಯಾ ಮೆಟ್ಟಿಲಲ್ಲಿ ಬದುಕು ಮುಂದಿದೆ 
ಸಂಗೀತ ನಮ್ಮ ತವರು ಚಪ್ಪಾಳೆಯೇ ಉಸಿರು 
ಅಭಿಮಾನವೇ ಸ್ಫೂರ್ತಿಗೊಂದು ಹೆಸರು 
ಕೋಟಿ ಕೋಟಿ ಹೂವುಗಳಿಗೆ ಮಕರಂದ ಒಂದೇ 
ಹೇ.. ಕೋಟಿ ಕೋಟಿ ಮನಗಳಿಗೆ ಅನುಬಂಧ ಒಂದೇ 
-----------------------------------------------------------------------------------------------------

No comments:

Post a Comment