1884. ಮೇಘ ಬಂತು ಮೇಘ (೧೯೯೮)


ಮೇಘ ಬಂತು ಮೇಘ ಚಲನಚಿತ್ರದ ಹಾಡುಗಳು 
  1. ಮೇಘ ಬಂತು ಮೇಘ 
  2. ಸಿದ್ದಯ್ಯ ಸ್ವಾಮೀ ಬನ್ನಿ 
  3. ಕಲ್ಯಾಣ ಕಲ್ಯಾಣವೇ ಬರಲಿ 
  4. ಹೇ ರಾಮ 
  5. ಹೂವೇ ಹೂವೇ ಹೂವೇ 
  6. ಜಾಮ್ ಅಂತಾ ಹುಡುಗಿ 
  7. ಬಾನಾಡಿ ಹಾಡಲಿ 
ಮೇಘ ಬಂತು ಮೇಘ (೧೯೯೮) - ಮೇಘ ಬಂತು ಮೇಘ 
ಸಂಗೀತ ಹಾಗೂ : ವಿ.ಮನೋಹರ, ಗಾಯನ : ಚಿತ್ರಾ, ಶಂಕರ ಶಾನಭಾಗ 

ಹೆಣ್ಣು : ಮೇಘ... ಮೇಘ.. 
               ಮೇಘ ಬಂತು ಮೇಘ ಮೂಡಣದ ಮೇಘ 
               ಮೇಘ ಬಂತು ಮೇಘ ಮೂಡಣದ ಮೇಘ  
               ಚೆಲುವನಾರಾಯಣನ ಚಂದದ ಊರಿಗೆ 
               ಚೆಲುವನು ತಂತು ನಮ್ಮ ಬಾಳಿಗೆ.. ಓಓ   
               ಮೇಘ ಬಂತು ಮೇಘ ಮೂಡಣದ ಮೇಘ 
               ಮೇಘ ಬಂತು ಮೇಘ ಮೂಡಣದ ಮೇಘ  

ಗಂಡು : ಹೇ.. ತಂದಾನ.. ತಂದಾನೋ ರೇ..ನಾ..  ನಾ... 
ಕೋರಸ್ : ಮೂಡಣ ದೇವರಿಗೇ ಸುವ್ವಿ ಸುವ್ವಾಲೆ 
                  ತೂಗ್ಯಾವೇ ಕಂಗಳಿನ ತುಂಬೆ ಹೂಮಾಲೆ 
 
ಹೆಣ್ಣು: ಕಾಳಿದಾಸ ಬರೆದಿರುವ ಕಾಗದಗಳ ಮೇಘವಿದು   
              ಪ್ರೇಮ ಸಂದೇಶವನು ಬಾನಿನಿಂದ ಬಂದಿಹುದು 
              ಒಲವಿನ ಓಲೆಯ ಬರಹವ ಸಾವಿರ   
              ಓದಲು ದೇವರೇ ಜಗವಿಡಿ ಸುಂದರ 
              ಎಲ್ಲಾ ಕಡೆ ಎಲ್ಲಾ ಸವಿ 
              ಸುವ್ವಿ ಸುವ್ವಿ ಹಾಡೇ ಭುವಿ ಒಲವ ಈ ಗತಿ 
              ಮೇಘ ಬಂತು ಮೇಘ ಮೂಡಣದ ಮೇಘ  
              ಮೇಘ ಬಂತು ಮೇಘ ಮೂಡಣದ ಮೇಘ  
              ಚೆಲುವನಾರಾಯಣನ ಚಂದದ ಊರಿಗೆ 
              ಚೆಲುವನು ತಂತು ನಮ್ಮ ಬಾಳಿಗೆ.. ಓಓ   
              ಮೇಘ ಬಂತು ಮೇಘ ಮೂಡಣದ ಮೇಘ 
              ಮೇಘ ಬಂತು ಮೇಘ ಮೂಡಣದ ಮೇಘ  
ಗಂಡು : ಶ್ರೀಮನ್ ಯದುಚ್ಯುತಿ ಪ್ರತಿಷ್ಯತ ಯೋಪ ಯೋಧೆ  
               ನಾರಾಯಣ ಪ್ರಣತವತ್ಸರ ಸೌಮ್ಯ ಶೀಲ...  
               ಸ್ವಾಮಿ ಯತಿಂದ್ರವರನಂದನ ಸೌಮ್ಯ ಮೂರ್ತೆ 
               ಸಂಪತಕುಮಾರ ಚರಣಂ ಶರಣಂ ತಪತ್ಯೆ.. 

ಕೋರಸ್ : ಓಓಓಓಓ... ಓಓಓಓಓ   
ಹೆಣ್ಣು : ಹನಿ ಹನಿ ಸೇರುತಲಿ ಮೂಡಿರುವ ಮೋಡಗಳು 
               ಎಲ್ಲವನು ಮೌನದಲಿ ಹೇಳುತಿರೋ ಸಾಲುಗಳು 
               ಆಸೆಗಳ ಸೌಧವೇ.. ತೇಲುತಿದೆ ಬಾನಲಿ 
               ಒಲವಿನ ತುಂತುರೂ ಹನಿಸುತ ಸಾಗಲಿ.. 
               ಎಲ್ಲಾ ಹನಿ... ಮುತ್ತು ಮಣಿ...  
               ಉಲ್ಲಾಸದ ಜೇನಹನಿ  ತರಲಿ ಮೇಘವೂ .. 
              ಮೇಘ ಬಂತು ಮೇಘ ಮೂಡಣದ ಮೇಘ 
              ಮೇಘ ಬಂತು ಮೇಘ ಮೂಡಣದ ಮೇಘ  
              ಚೆಲುವನಾರಾಯಣನ ಚಂದದ ಊರಿಗೆ 
              ಚೆಲುವನು ತಂತು ನಮ್ಮ ಬಾಳಿಗೆ.. ಓಓ   
              ಮೇಘ ಬಂತು ಮೇಘ ಮೂಡಣದ ಮೇಘ 
              ಮೇಘ ಬಂತು ಮೇಘ ಮೂಡಣದ ಮೇಘ 
ಕೋರಸ್ : ಮುಂಜಾನೆ ರಾಗದಲಿ ಭಾಗ್ಯದ ರಂಗೋಲಿ 
                  ಇಂದೇನೇ ಇರಲಿ ಬಂದ ಸುವ್ವಿ ಹಾಡಲ್ಲಿ 
                  ಮುಂಜಾನೆ ರಾಗದಲಿ ಭಾಗ್ಯದ ರಂಗೋಲಿ 
                  ಇಂದೇನೇ ಇರಲಿ ಬಂದ ಸುವ್ವಿ ಹಾಡಲ್ಲಿ 
---------------------------------------------------------------------------------------------

ಮೇಘ ಬಂತು ಮೇಘ (೧೯೯೮) - ಸಿದ್ದಯ್ಯ ಸ್ವಾಮೀ ಬನ್ನಿ 
ಸಂಗೀತ ಹಾಗೂ : ವಿ.ಮನೋಹರ, ಗಾಯನ : ಶಂಕರ ಶಾನಭಾಗ 

ಶರಣು ಶರಣಯ್ಯಾ.... ಆಆಆ ಶರಣು ಶರಣಯ್ಯಾ ...
ಗಜಮುಖನೇ ಸ್ವಾಮಿ ಗಣನಾಥ  
ಕೇಳಿರಪ್ಪೋ ಸಮಸ್ತ ಬಂಧು ಜನಗಳೇ 
ಮಧುವಂಥ ಮನಸ್ಸುಳ್ಳ ಮಣಿಯಂಥ ಮಾತುಳ್ಳ ಮಹಾಜನಗಳೇ 
ನಮ್ಹುಡುಗಿ ನಂಹುಡುಗನ 
ಮದುವೆಗೆ ಮಹನೀಯರೆಲ್ಲಾ ಬಂದು ಚೆಂದಾಗಾಣಿಸಿಕೊಡಲು  
ನಾವು ಕೈಮುಗಿದು ಕೇಳ್ಕೊಂತೀವಿ 
ಸಿದ್ದಯ್ಯ ಸ್ವಾಮೀ ಬನ್ನೀ ರಾಚಯ್ಯ ನೀವೂ ಬನ್ನೀ ..  ಮನೆಮಂದಿ ಕೂಡಿ ಬನ್ನಿ 
ನಮ್ಮೂರ...  ಮದುವೆಗೆ ಎಲ್ಲರೂ ಬನ್ನೀ .. 
ಸಂಗಕ್ಕ ನೀವೂ ಬನ್ನೀ ರಂಗಜ್ಜಿ ನೀವೂ ಬನ್ನೀ.. ಎಲ್ಲಾರೂ ಸೇರಿ ಬನ್ನೀ .. 
ನಮ್ಮೂರ...  ಮದುವೆಗೆ ಮಾಲೆ ತನ್ನೀ 

ಬಂಡಹಳ್ಳಿ ಬಸವಣ್ಣ ಕದಿರೇಶಿ ಮಹಾಲಿಂಗಣ್ಣ 
ಜೋಡಿ ಎತ್ತಿನ ಬಂಡಿ,  ಬಂಡಿಗೆ ಹೊಡೆಯಿರಿ ಬಣ್ಣ ಬಣ್ಣಾ.. 
ಸಾ ಬಂಡಾ ಬಿಪಿ ಜೊತೆಗೆ ಮಕ್ಕಳೊಂದಿಗೆ ಬನ್ನಿರಿ ಎಲ್ಲಾರೂ ಮದುವೆಗೇ .. 
ವರನಿಗೆ ಪಕ್ಕ ಹಿರಿಯರೂ ಬೇಕು ವಧುವಿಗೆ ಅಕ್ಕಾ ತಂಗಿಯು ಬೇಕು 
ಗುರುಗಳ ಜೊತೆಗೆ ಗೆಳೆಯರು ನಾವು ನಮಗೆ ಶಾಸ್ತ್ರ ಹೇಳೋರ ಬೇಕು 
ವರಪೂಜೆ ನಿಮ್ಮದು ಅತ್ತೇ .. ವರದಕ್ಷಿಣೆ ಇಲ್ಲ ಮತ್ತೇ 
ವಧು ಹಿಂದೆ ನೀವೇ ಅಕ್ಕ, ಪ್ರತಿ ಬೇಡಿ ಮುಯ್ಯಿ ಲೆಕ್ಕಾ 
ಸ್ವಾಮೀ .. ಅಯ್ಯನೋರೇ ನೀವೂ ಬನ್ನೀ, ಆಚಾರೇ ನೀವೂ ಬನ್ನೀ .. 
ಮನೆಮಂದಿ ಕೂಡಿ ಬನ್ನಿ  ನಮ್ಮೂರ...  ಮಂಗಳಕ್ಕೆ ಎಲ್ಲರೂ ಬನ್ನೀ .. 
(ರಿಬಬ್ಬ ರಿಸಸ ನಿಸಗಗ ನಿಸಸ ರಿಗಗ ಗಗ ನಿಸಸ ಸ 
ಪಪಪ ನಿನಿನಿ ಸ ಪಪರಿಸ ಸಸಸ)

(ಶಿವ ಶಿವ ಮಾದೇವನೇ ಪರಪಂಚಕೆ ಏನ್ ಗತಿ ಬಂತೋ 
ಈಟೊಂದ ಜನ ಒಟ್ಟಿಗೆ ಬಿಚ್ಚಕ್ ಬಂದವರಲ್ಲಾ .. 
ನಿಮ್ಮೂರಿಗೇ ಬರ ಬಂದೈತಾ.. )  

ಮದುವೆಯ ಹಬ್ಬ, ಒಂದೇ ಒಂದು ಸಾರಿ ಬೀಗತಿಯ ಅಡಿಗೆ ಸವಿ ಬಾರಿ ಬಾರಿ 
ನೆನಪಿನ ಪಾತ್ರೆ ಮುಗಿಯದ ಹಾಗೆ ಒಳ್ಳೆ ಉಪಚಾರ ಮಾಡುತೀವಿ ಸೇರಿ 
ಸಣ್ಣಕ್ಕಿ ಅನ್ನ ಸಾರು ಒಳ್ಳೆ ಬೆಲ್ಲದ ಹಾಲುಖೀರೂ 
ಇದ್ದದ್ದೇ ಹಬ್ಬಗಳಲ್ಲಿ ಇಂತಹ ಪ್ರೀತಿ ಸಿಕ್ಕೋದು ಎಲ್ಲಿ.. ಹೇಳಿ.. 
ರಾಮಣ್ಣಾ ನೀವೂ ಬನ್ನಿ, ಶಾಮಣ್ಣ ನೀವೂ ಬನ್ನಿ 
ಮನೆಮಂದಿ ಕೂಡಿ ಬನ್ನಿ ನಮ್ಮೂರ.. ಮದುವೆಗೆ ಹರಸ ಬನ್ನಿ 
ರೂಪಮ್ಮಾ ನೀವೂ ಬನ್ನಿ ಲಕ್ಷಮ್ಮವ್ವಾ ನೀವೂ ಬನ್ನಿ 
ಎಲ್ಲಾರೂ ಸೇರಿ ಬನ್ನಿ ಒಂದಾಗಿ ಎದೆತುಂಬಾ ಹರಸ ಬನ್ನಿ  
--------------------------------------------------------------------------------------------

ಮೇಘ ಬಂತು ಮೇಘ (೧೯೯೮) - ಕಲ್ಯಾಣ ಕಲ್ಯಾಣವೇ ಬರಲಿ 
ಸಂಗೀತ ಹಾಗೂ : ವಿ.ಮನೋಹರ, ಗಾಯನ : ಶಂಕರ ಶಾನಭಾಗ 

ಹೆಣ್ಣು : ಕಲ್ಯಾಣ ಕಲ್ಯಾಣವೇ ಬರಲಿ ನಿಂಗೆ ವರವಾಗಿ ಬಂದ ಶೂರ ವರನಿಗೆ 
              ಕಲ್ಯಾಣವೆನಿಸಿರಿ ಊರಿಗೆ ಸುಕುಮಾರಿ ನಾರಿ ನಮ್ಮ ಸರಸಿಗೆ 
ಕೋರಸ್ : ಸೋ ಎನ್ನಿರೇ ಸೋಬಾನ ಎನ್ನಿರೇ, ಸೋ ಎನ್ನಿರೇ ಸೋಬಾನ ಎನ್ನಿರೇ  

ಗಂಡು : ರೇ..ರಾ ತಾರಾ   ರೇ..ರಾ ತಾರಾ   
ಕೋರಸ್ : ಓಓಓಓಓ ಓಓಓಓಓಓಓ 
ಹೆಣ್ಣು : ಮೂಡಲದೇವರ ಪೂಜೆಗೆ ದೀಪವಾ ಹಚ್ಚಿಹಿವು ಹರಿಸಿ ಒಂದಾಗಿ.. 
               ಗಂಟೆಯ ಜೋಕಿಗೆ ಗಾಳಿ ಬೀಸದ ಹಾಗೆ ಕಾಪಾಡೋ ಶಿವನೇ ನೆರವಾಗಿ 
ಕೋರಸ್ : ಸೋ ಎನ್ನಿರೇ ಸೋಬಾನ ಎನ್ನಿರೇ, ಸೋ ಎನ್ನಿರೇ ಸೋಬಾನ ಎನ್ನಿರೇ  

ಹೆಣ್ಣು : ಯಾವ ಕೊಡಲಾ ಹವಳಾ ಹೇಳವ್ವಾ ಮಾತಂಗಿ ಯಾರ ಕೊರಳಿ ಮಾತು ಸರವಾಗಿ 
               ಯಾವೂರ ದೂರದವಳಾ ಯಾವ ರಮಣಿಗಿಂದು ಬರೆದೋನು ಬಲ್ಲವಾ ಶಿವಯೋಗಿ 
ಕೋರಸ್ : ಸೋ ಎನ್ನಿರೇ ಸೋಬಾನ ಎನ್ನಿರೇ, ಸೋ ಎನ್ನಿರೇ ಸೋಬಾನ ಎನ್ನಿರೇ  
                  ಸೋ ಎನ್ನಿರೇ ಸೋಬಾನ ಎನ್ನಿರೇ, ಸೋ ಎನ್ನಿರೇ ಸೋಬಾನ ಎನ್ನಿರೇ  
---------------------------------------------------------------------------------------------

ಮೇಘ ಬಂತು ಮೇಘ (೧೯೯೮) - ಹೇ ರಾಮ 
ಸಂಗೀತ ಹಾಗೂ : ವಿ.ಮನೋಹರ, ಗಾಯನ : ಮಂಜುಳಾ, ರಾಜೇಶ, ಎಲ್.ಏನ್.ಶಾಸ್ತ್ರಿ 
 
ಎಲ್.ಏನ್.ಶಾಸ್ತ್ರಿ : ಓ ಓ ಓ ಓ  ಓ ಓ ಓ .. ಓಓಓಓಓ 
ರಾಜೇಶ : ಹಾಯ್ ರಾಮ್ ಹಾಯ್ ಪ್ರೇಮ್ 
                 ಏಳಿರಪ್ಪಾ.. ಏಳಿರಮ್ಮಾ ಹೇಳಿ ಗುಡ್ ಮಾರ್ನಿಂಗ್     
                 ಸೋಂಬೇರಿ ಸಕ್ತಾನಕೆಲ್ಲಾ ಸೂರ್ಯನ ವಾರ್ನಿಂಗ್ 
                 ಅಕ್ಕ ಪಕ್ಕ ಕೋಗಿಲೇ ಗುಬ್ಬಿ ಕಾಗೆ ಕೂಗಲೇ 
                 ಬೆಳಂ ಬೆಳಬೆಳಗಾಗಿ ಬಿಡ್ತನ್ನ್..  ಕೋಕೊ ಕೋ ಕೋಳಿ ಕೇ ರಂಗಣ್ಣ...  
                 ಇನ್ನೂ ನಿದಿರೆ ಗುಂಗಲಿ ಇರಬೇಡಮ್ಮ ನೈದಿಲೇ...  
                 ನಿನ್ನ ನಂಬಿ ದುಂಬಿ ಬಂತಮ್ಮಾ.. 
                 ಬಾಗಿಲು ತೆಗೆಯೋ ಮುದ್ದು ಸೇಸಮ್ಮಾ..  

ಕೋರಸ್ : ಆಹಾ... ಕನಕಾ ನೀ ಊರಿಗೇ ಮುಂಚೆ ಮದುವೆಗೆ ರೆಡಿಯಾಗೂ ... ಅಹ್ಹಹ್ಹ.. 
                  ಅಯ್ಯೋ ಎದ್ದೇಳೋ ಮದುವಣಗಿತ್ತಿ ಕಾಯ್ತಾ ಕುಂತವಳೇ .. 
ಮಂಜುಳಾ : ಸ್ನೇಹ ಎಂಬಾ ಚಪ್ಪರಕ್ಕೆ ಆದರದ ಕಂಬನಿಟ್ಟು ಸಿಹಿ ಮಾತ ಗರಿ ಹಾಸಿರೀ ... 
ರಾಜೇಶ  : ಮುಗುಳುನಗೆ ತೋರಣವ ಸಾಲುಸಾಲಾಗಿ ಕಟ್ಟಿ ಔದಾರ್ಯ ಮಾಲೆ ಹಾಕಿರೀ .. 
ಮಂಜುಳಾ : ನೆಂಟರನ್ನ ಕೂಗಿ ಬಳಿ..  ಮುದ್ದು ಮುದ್ದು ರಾಜಾಗಿರಿ 
ರಾಜೇಶ : ಆಸರೆಯ ಮಂಟಪಕ್ಕೆ ಪ್ರೀತಿ ಎಂಬ ಬಾಳೆಕಂಬ ಕಟ್ಟಿದರೇ ಬಾಳೇ ಕಲ್ಯಾಣ 
ಮಂಜುಳಾ : ಧೈರ್ಯ ತುಂಬೋ ಕಂಕಣ ಕಟ್ಟಬೇಕಣ್ಣ  ತಕ್ಷಣ 
                      ಊರೋರನೆಲ್ಲಾ ಕೂಗಿ ಕರೆಯೋಣ...  ಆರ್ಶಿವಾದ ಮಾಡಿ ಎನ್ನೋಣ... 
ಕೋರಸ್ : ವೆಂಟಲ್ ಕಾನಿ ಚಕ್ ಮಕ್,  ಚಕಪಿಕಸುತಲಿ ಲಾನಿ ಚಮ್ ಚಮ್ 
                  ಟಾಮ್ ಟಾಮ್ ಟಾಮ್ ಟಮ್ ಟಮ್  ಟಮ್ ತಕತದಗಿನಿತೋಮ್      
                  ಹ್ಯಾಂಡ್ ಸಮ್ ಮೇಡಂ ತೇರು ಬಂದಂಗ್ ಬಂದರೂ 
                  ಲೋಕ ಇದ್ರೇ ಎಲ್ಲರಗೀಗ ಬಂಪರೂ  

ರಾಜೇಶ : ಪ್ರೇಮ ನಾಮ ಪಾಯಸಕ್ಕೆ ಖುಷಿ ನಾಮ ಸಕ್ಕರೆಯ ಸಮವಾದ ಸೇರಬೇಕಿದೇ .. 
ಮಂಜುಳಾ : ಬಂಧುಗಳ ಹಾರೈಕೆಯ ಶುಭನಾಮ ಅಕ್ಕರೆಯ ಸುಖದುಃಖ ಹೊಯ್ಯಬೇಕಿದೇ ... 
ರಾಜೇಶ : ಭಕ್ತಿ ಪಿಚ್ಚರ್ ದೇವತೆಗಳೇ.. ಲಗ್ನ ಹೊತ್ತಲ್ ಸುರಿಸಿ ಹೂಮಳೆ ... 
ಮಂಜುಳಾ : ರಂಬೆ ಕೊಂಬೆ ಮೇಳಯೆಲ್ಲಾ ಬಿಟ್ಟಿ ಕೂಗೋ ಘಟ್ಟಿಮೇಳ 
                      ಮದುವೆ ಅಂದ್ರೇ ಹೆಂಗಿರಬೇಕಣ್ಣಾ... 
ರಾಜೇಶ : ಮನಸೂ ಮನಸೂ ಸೇರಲು ಸುಖಸಂಸಾರ ಹೂಡಲು 
                 ಲಕ್ಷ ಲಕ್ಷ ಖರ್ಚು ಯಾಕಣ್ಣಾ... ಸರಳ ವಿರಳ ರೀತಿ ಸಾಕಣ್ಣಾ... 
                 ರಾಮಣ್ಣ... ಶಾಮಣ್ಣ.. ಬನ್ನಿರಣ್ಣಾ ಬನ್ನಿರಪ್ಪಾ ಎಲ್ಲರೂ ಬನ್ನೀ...   
                 ಇಂತಹ ಅಪರೂಪದ ಮದುವೆಗೆ ಜೈ ಎನ್ನೀ ... 
---------------------------------------------------------------------------------------------

ಮೇಘ ಬಂತು ಮೇಘ (೧೯೯೮) - ಹೂವೇ ಹೂವೇ ಹೂವೇ 
ಸಂಗೀತ ಹಾಗೂ : ವಿ.ಮನೋಹರ, ಗಾಯನ : ಮಂಜುಳಾ, ರಾಜೇಶ 

ಗಂಡು : ಯಾವ ಕವಿತೆಗೆ ಯಾವ ರಾಗದ ಜೊತೆಯೋ.. 
              ಯಾವ ಹಣತೆಗೆ ಯಾವ ದೇಗುಲದ ನೆಲೆಯೋ.. 
              ಯಾವುದನು ಯಾವುದುಕೋ ಸೇರಿಸುವನು ಆತ 
              ಆ ಲೆಕ್ಕ ಪಂಡಿತನದೇ ಬೇರೆಯೇ ಗಣಿತ... 
ಕೋರಸ್ : ರತಿ ರತಿ ರಾತ್ರಿ ಮಧುಮತಿ ಸೀರೆವಾಲೇ 
                   ಹೊಸಗೆಯ ಮನಸ್ಸೂ ಕನಸೇ ಕೊಡಸಾಲೆ 
ಗಂಡು : ಹೂವೇ ಹೂವೇ ಹೂವೇ ಹೂವೇ ಹೂವೇ ಹೂವೇ 
              ಮಲ್ಲಿಗೆ ಮಲ್ಲಿಗೆ ಹೂವೇ ಓ ಬೆಳ್ಳಿಯ ಬಳ್ಳಿಯ ಹೂವೇ 
              ಯಾರಿಗೆ ಸೇರುವೆ ಹೂವೇ ನೀ ಎಲ್ಲಿಗೆ ಸಲ್ಲುವೇ ಹೂವೇ 
              ಎಂದೋ ಬರೆದೈತೆ ಮಲ್ಲಿಗೇ .. ಪಾರ್ವತಿಶಿವಾ 
              ಬರದೇ ಕಳಿಸವ್ನೆ ಇಲ್ಲಿಗೇ... 
              ಹೂವೇ ಹೂವೇ ಹೂವೇ ಹೂವೇ ಹೂವೇ ಹೂವೇ... ಓಓಓ ಓಓ ಓಓಓಓಓಓಓ   
 ಕೋರಸ್ : ಓಓ ಓಓ ಓಓಓ  

ಗಂಡು : ನಿದಿರೇ .. ನಿದಿರೇ .. ದೂರಾಯ್ತು ನಿಧಾನ 
ಹೆಣ್ಣು : ಆಸೇನಾ ಕಣ್ಣಲ್ಲಿ ಮುಚ್ಚಯತೇ ಈ ಮೌನ.. 
ಗಂಡು : ತಂಗಾಳಿಯೇ.. ತಂಗಾಳಿಯೇ.. ತಂಪಾಗ ಹೊತ್ನಲ್ಲಿ ನೀನು 
               ಹಿಂಗ್ಯಾತಕೆ ಇಂಗಾಗೋದ ಬೆಗೆ ತಂದ್ಯಲ್ಲಾ 
ಹೆಣ್ಣು : ಆಕಾಶದ ಚಿತ್ತಾರದ ಚುಕ್ಕಿ ತಾರೆ ತಾರೇ 
              ಅಷ್ಟೋಂದೈತೆ ಅಸೆ ಕಥೆ ಕಣ್ಣ ತುಂಬೆಲ್ಲಾ..  
ಗಂಡು : ಎಂಥಾ ಸಿಂಗಾರ ಮಲ್ಲಿಗೆ ಕೇಳಯ್ಯಾ ಶಿವಾ ಪ್ರೀತಿಯ ಬಣ್ಣ ಬಗೆ ಬಗೆ 
ಹೆಣ್ಣು : ಹೂವೇ ಹೂವೇ ಹೂವೇ,  ಹೂವೇ ಹೂವೇ ಹೂವೇ... 
ಕೋರಸ್ : ಸೋ ಸೋ ಸೋ ಎನ್ನೀ ಸೋ ಎನ್ನೀ ಸೋ ಎನ್ನೀ 
                  ಸೋ ಸೋ ಸೋ ಎನ್ನೀ ಸೋ ಎನ್ನೀ ಸೋ ಎನ್ನೀ    
                  ಸೋ ಸೋ ಸೋ ಎನ್ನೀ ಸೋ ಎನ್ನೀ ಸೋ ಎನ್ನೀ    
                  ಸೋ ಸೋ ಸೋ ಎನ್ನೀ ಸೋ ಎನ್ನೀ ಸೋ ಎನ್ನೀ    

ಹೆಣ್ಣು : ಇರುಳೇ.. ಇರುಳೇ ಇದ್ದಂಗೇ ಇರೂ ನೀ 
ಗಂಡು : ಮುಂಜಾನೇ ಬರದಂಗೇ ಮುಂದಕೆ ತಡಿ ನೀ 
ಹೆಣ್ಣು : ಜೋಡಿ ಜೀವಕ್ಕ ಹುಟ್ಟಾನಮ್ಮಾ ಮಣ್ಣ ಹೂವಿನ ಬಾಣ 
               ಆದಲು ಬದಲು ಆಗೋಯ್ತಣ್ಣ ಮೈಯ್ಯಾಗಿನ ಪ್ರಾಣ 
ಗಂಡು : ಭೂಮ್ಯಾಗಿನ ಬಂಗಾರದ ಉಪರತ್ನ ಕಡಲೀನ ರತ್ನ 
               ಬಂಗಾರಕ್ಕೆ ರತ್ನ ಸೇರಸೋದ ಮಾದೇವನಾ ಯತ್ನಾ..     
ಹೆಣ್ಣು : ಎಂಥಾ ಶಿವರಾತ್ರಿ ಮಲ್ಲಿಗೆ ಕೇಳಯ್ಯ ಶಿವಾ,  ಭಾರಿ ಜಾಗರಣ ಜೋಳಿಗೆ 
ಗಂಡು : ಹೂವೇ ಹೂವೇ ಹೂವೇ,  ಹೂವೇ ಹೂವೇ ಹೂವೇ 
              ಮಲ್ಲಿಗೆ ಮಲ್ಲಿಗೆ ಹೂವೇ ಓ ಬೆಳ್ಳಿಯ ಬಳ್ಳಿಯ ಹೂವೇ 
              ಯಾರಿಗೆ ಸೇರುವೆ ಹೂವೇ ನೀ ಎಲ್ಲಿಗೆ ಸಲ್ಲುವೇ ಹೂವೇ 
              ಎಂದೋ ಬರೆದೈತೆ ಮಲ್ಲಿಗೇ .. ಪಾರ್ವತಿಶಿವ  ಬರದೇ ಕಳಿಸವ್ನೆ ಇಲ್ಲಿಗೇ... 
             ಹೂವೇ ಹೂವೇ ಹೂವೇ,  ಹೂವೇ ಹೂವೇ ಹೂವೇ... 
---------------------------------------------------------------------------------------------

ಮೇಘ ಬಂತು ಮೇಘ (೧೯೯೮) - ಜಾಮೂನು ಅಂತಾ ಹುಡುಗಿ 
ಸಂಗೀತ ಹಾಗೂ : ವಿ.ಮನೋಹರ, ಗಾಯನ : ರಾಜೇಶ, ರಮೇಶಚಂದ್ರ, ಮಂಜುಳಾ  

ರಾಜೇಶ : ಜಾಮೂನು ಹುಡುಗಿಗೊಬ್ಬ ಲಡ್ಡು ಸಿಕ್ಕಿದಾ.. 
                 ಹಬ್ಬ ನೋಡಣ್ಣಾ.. ಹಿಗ್ಗು ನೋಡಣ್ಣಾ.. 
                 ಜಾಮೂನು ಹುಡುಗಿಗೊಬ್ಬ ಲಡ್ಡು ಸಿಕ್ಕಿದಾ.. 
                 ಹಬ್ಬ ನೋಡಣ್ಣಾ.. ಹಿಗ್ಗು ನೋಡಣ್ಣಾ.. 
                 ಭೀಗಾರಿ ಭೀಗರೆಲ್ಲಾ ತಿಂದು ಬೀಗಲಿ.. 
                 ಭಾಗ್ಯದ ಬಾಗೀನವ ತಂದು ಕೊಡಲಿ 
                 ಪ್ರೀತಿಯ ಹಾರೈಕೆ ಇರಲೀ ... ಓಓಓಓಓ 
                 ಜಾಮೂನು ಹುಡುಗಿಗೊಬ್ಬ ಲಡ್ಡು ಸಿಕ್ಕಿದಾ.. 
                 ಹಬ್ಬ ನೋಡಣ್ಣಾ.. ಹಿಗ್ಗು ನೋಡಣ್ಣಾ.. 
                 ಓಓಓ .. ಜಾಮೂನು ಹುಡುಗಿಗೊಬ್ಬ ಲಡ್ಡು ಸಿಕ್ಕಿದಾ.. 
                 ಹಬ್ಬ ನೋಡಣ್ಣಾ.. ಹಿಗ್ಗು ನೋಡಣ್ಣಾ.. 

ರಮೇಶ: ಗಮಪನಿಸಾ... ನಿಸಪಾ ಮಮ ನಿನಿ ಮಮ ಪದ ಮರಿಸ ನಿಸ ಸಾನಿರಿ
               ಸಾರೆ ಗಮರೆಸ ನಿಸ ದನಿ ನಿಸ ಆಆಆಅ.... ಆಆಆ.. ಆಆಆಆ .. 
               ಗಮಪನಿಸಾ..ಗಮಪನಿಸಾ..ಗಮಪನಿಸಾ.. 
ರಾಜೇಶ : ಬಾಳೆಎಲೆ ಅಂಥಾ ಮನಸ್ಸು,  ಮನಸ್ಸು ತುಂಬಾ ಪ್ರೇಮ ತಿನಿಸೂ 
                 ಜಿಲೇಬಿ ಜಹಂಗೀರು  ಕನಸು, ಡಿಸ್ಟರ್ಬ್ ಆಗದಿದ್ರೇ ಸೊಗಸು 
                 ಅಲ್ನೋಡ್ ಅಲ್ಲೂ ತಿನ್ನೋದರಲ್ಲಿ ಗಿನ್ನಿಸ್ ದಾಖಲೇ 
                 ಮಾಡಂಗೌನೇ ಏನ್ ರೇಷನ್ ತಿನ್ನತಾನೋ ಶಿವಾ 
                 ದಾನೇ ದಾನೇ ಪೇ ಲಿಖಾ ಹೈ ಖಾನೇವಾಲೊಂಕಾ ನಾಮ್ ಅಂತಾ
                 ಯಾರೋ ಹೇಳುತ್ತಿದ್ದರು ಶಿವಾ  
                 ವಿಶ್ವಾಮಿತ್ರನಿಗೇ ಮೇನಕಾ ನಮಗೆ ತಂಬಿಗೇ ನಿಂಬೆ ಪಾನಕ.. 
                 ಇಂಥಾ ಸುಗ್ರಾಸ ಬಗೆ ಬಗೆ ರುಚಿಯಾ ಬೀಗರೂಟ ಮತ್ತೇ ಸಿಗದು.. 
                 ಆ.. ಜಾಮೂನು ಹುಡುಗಿಗೊಬ್ಬ ಲಡ್ಡು ಸಿಕ್ಕಿದಾ.. 
                 ಹಬ್ಬ ನೋಡಣ್ಣಾ.. ಹಿಗ್ಗು..  ಹಿಗ್ಗು ನೋಡಣ್ಣಾ.. 

ಕೋರಸ್ : ಓ ಓ ಓ ಓ ಓ ಓ ಓಓಓ ಓಓಓಓಓ 
ರಾಜೇಶ : ಯಾರಿಗೇ ಯಾವ ತಿಂಡಿ ಆಸೆಯೋ, ಯಾವ ತಿಂಡಿ ಯಾರ ಪಾಲಿಗೋ 
ಮಂಜುಳಾ : ಆಸೆ ಪಟ್ಟದೆಲ್ಲಾ ಸಿಕ್ಕದು,  ದಕ್ಕಿದಷ್ಟೇ ಭಾಗ್ಯ ನಮ್ಮದೂ 
ರಾಜೇಶ : ನೂರು ಬಗೆ ಸ್ವೀಟು ಖಾರ ಎಲ್ಲಾ ಇದ್ರೂ ಲಕ್ಕಿಲ್ ಬಿದ್ರೆ ದಕ್ಕದಣ್ಣ  ತಿನ್ನುವ ಸುಖಾ...              ಮಂಜುಳಾ : ಗಂಜಿ ಊಟವಾದ್ರೂ ಸರೀ, ಸಂತಸದ ಸಂಸಾರಕ್ಕೆ ಅಷ್ಟರಲ್ಲೇ ದಿನವೂ ಸುಖಾ.. 
ರಾಜೇಶ : ತೂತೇ ಇಲ್ಲದ ದೋಸೆ ಕಂಡಿರಾ.. ಚಿಂತೆ ಅನ್ನೋದು ಒಂದು ಪಂಜರಾ  
ಮಂಜುಳಾ : ಒಲವಾ ಮೃಷ್ಟಾನ್ನ ದೊರೆತರೇ ಬದುಕು ಪ್ರತಿದಿನ ಹಬ್ಬದಡಿಗೆ.. 
ರಾಜೇಶ : ಜಾಮೂನು ಹುಡುಗಿಗೊಬ್ಬ ಲಡ್ಡು ಸಿಕ್ಕಿದಾ.. 
                 ಹಬ್ಬ ನೋಡಣ್ಣಾ.. ಹಿಗ್ಗು..  ನೋಡಣ್ಣಾ.. 
ಮಂಜುಳಾ  : ಆ.. ಜಾಮೂನು ಹುಡುಗಿಗೊಬ್ಬ ಲಡ್ಡು ಸಿಕ್ಕಿದಾ.. 
                 ಹಬ್ಬ ನೋಡಣ್ಣಾ.. ಹಿಗ್ಗು ನೋಡಣ್ಣಾ.. 
ರಾಜೇಶ : ಭೀಗಾರಿ ಭೀಗರೆಲ್ಲಾ ತಿಂದು ಬೀಗಲಿ.. 
ಮಂಜುಳಾ : ಭಾಗ್ಯದ ಬಾಗೀನವ ತಂದು ಕೊಡಲಿ 
ರಾಜೇಶ : ಪ್ರೀತಿಯ ಹಾರೈಕೆ ಇರಲೀ ... 
ಎಲ್ಲರೂ : ಜಾಮೂನು ಹುಡುಗಿಗೊಬ್ಬ ಲಡ್ಡು ಸಿಕ್ಕಿದಾ.. 
                 ಹಬ್ಬ ನೋಡಣ್ಣಾ.. ಹಿಗ್ಗು ನೋಡಣ್ಣಾ.. 
                 ಆ.. ಜಾಮೂನು ಹುಡುಗಿಗೊಬ್ಬ ಲಡ್ಡು ಸಿಕ್ಕಿದಾ.. 
                 ಹಬ್ಬ ನೋಡಣ್ಣಾ.. ಹಿಗ್ಗು ನೋಡಣ್ಣಾ.. 
---------------------------------------------------------------------------------------------

ಮೇಘ ಬಂತು ಮೇಘ (೧೯೯೮) - ಬಾನಾಡಿ ಹಾಡಲಿ 
ಸಂಗೀತ ಹಾಗೂ : ವಿ.ಮನೋಹರ, ಗಾಯನ : ಶಂಕರ ಶಾನಭಾಗ , ಮಂಜುಳಾ ಗುರುರಾಜ 

ಹೆಣ್ಣು : ಆಆಆಆ... ಆಆಆಆ... ಆಆಆಆ... ಆಆಆಆ... )
ಗಂಡು : ಬಾನಾಡಿ ಹಾಡಲಿ ತಂಗಾಳಿ ಬೀಸಲಿ 
              ಹೂವು ಕಂಪು ಸೂಸಲಿ ಹಾದಿ ತಂಪಾಗಲಿ 
              ಸಾಗೋ ಈ ದಾರಿಗೆ ಮೇಘ ನೆರಳಾಗಲಿ 
              ಈ ನೆನಪಿನ ನಂದನ ಹೀಗೆ ಹಸಿರಾಗಲೀ.. ಬಾಳು ಹೂವಾಗಲೀ 
              ಬಾನಾಡಿ ಹಾಡಲಿ ತಂಗಾಳಿ ಬೀಸಲಿ 
               ರೆರೇರೇ ... ರೇರೆ  ರೇರೆ  (ಆಆಆಆ.. ಆಆಆಅ )

ಹೆಣ್ಣು : ಈ ಊರ ದೇವರು ನಿಮ್ಮ ಕರೆಸಿದ ಇಲ್ಲಿಗೇ .. 
               ಈ ಮನಸು ಈ ಪ್ರೀತಿ ಸದಾ ನಗುವಾ ಮಲ್ಲಿಗೆ 
ಗಂಡು : ಎದೆಯಾ ತಂಬೂರಿಯಾ ಮೀಟಿ ತೂರಿ ಬಂಧನಾ.. 
               ಈ ನಾದ ಹೀಗೆ ಇರಲೀ ಕೋರು ನೂರು ಯುಗಾದಿಗೇ .. 
ಹೆಣ್ಣು : ಬಂದು ಹೋಗುವ ಸ್ನೇಹ ನಡುವೆ ಉಳಿವ ನೆನಪು ನಿರಂತರ.. 
ಗಂಡು : ಬಾನಾಡಿ ಹಾಡಲಿ ತಂಗಾಳಿ ಬೀಸಲಿ 
              ಸಾಗೋ ಈ ದಾರಿಗೆ ಮೇಘ ನೆರಳಾಗಲಿ .. ಬಾಳು ಹೂವಾಗಲೀ 
              ಬಾನಾಡಿ ಹಾಡಲಿ ತಂಗಾಳಿ ಬೀಸಲಿ 
ಕೋರಸ್ : ಗಂಗಾ ಯಮುನಾ ಕಾವೇರಿ ತುಂಗೆ ಗೋದಾವರಿ 
                   ಗಂಧಾ ಗಾಳಿ ಪರಿಮಳ ಬಂದು ಹರಸಲಿ ಸಿರಿ 

ಗಂಡು : ಈ ಬಾಳ ದಾರಿಯು ನೋವು ನಲಿವಿನ ಹಾಸಿಗೆ 
               ನೋವಿನಲ್ಲೂ.. ನಲಿವಿನಲ್ಲೂ.. ಪಾಲು ಇರಲಿ ಜೋಡಿಗೇ ... 
ಹೆಣ್ಣು : ನಿಮ್ಮ ಮಡಿಲು ತುಂಬಲಿ.. ಮಗುವಿನ ಹೂ ನಗುವಲಿ 
               ಹೆಣ್ಣು ಬರಲೀ ಗಂಡೇ ಇರಲೀ ಒಂದೇ ಮಗು ನಿಮಗಾಗಲೀ .. 
ಗಂಡು : ಸೂರ್ಯ ಚಂದ್ರ ಇರುವವರೆಗೂ ನಿಮ್ಮ ಕೀರ್ತಿಯೂ ಬೆಳಗಲೀ ... 
ಹೆಣ್ಣು : ಬಾನಾಡಿ ಹಾಡಲಿ ತಂಗಾಳಿ ಬೀಸಲಿ 
              ಸಾಗೋ ಈ ದಾರಿಗೆ ಮೇಘ ನೆರಳಾಗಲಿ .. 
              ಈ ನೆನಪಿನ ನಂದನ ಹೀಗೆ ಹಸಿರಾಗಲೀ.. ಬಾಳು ಹೂವಾಗಲೀ 
              ಬಾನಾಡಿ ಹಾಡಲಿ ತಂಗಾಳಿ ಬೀಸಲಿ 
  -------------------------------------------------------------------------------------------- 

No comments:

Post a Comment