1886. ಧರ್ಮ ದೇವತೆ (೨೦೦೨)



ಧರ್ಮ ದೇವತೆ ಚಲನಚಿತ್ರದ ಹಾಡುಗಳು 
  1. ಬರಲಿದೆ ಈ ಜಗಕೆ 
  2. ಧರ್ಮದೇವತೆ 
  3. ಕಣ್ತೆರದು ನೋಡು 
  4. ದೀಪ ಹಚ್ಚಬೇಕು 
  5. ಧರೆಗೆ ಬಂದ 
  6. ಈಶ್ವರ ಅಲ್ಲಾ ನೀನೇ 
  7. ಒಲವೆಂಬ ಮಂದಾರ 
  8. ಭೂದೇವಿ ಅಂದಚೆಂದ 
ಧರ್ಮ ದೇವತೆ (೨೦೦೨) - ಬರಲಿದೆ ಈ ಜಗಕೆ 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ನಾಗೇಂದ್ರ ಮಾಗಡಿ, ಗಾಯನ : ಎಸ್.ಪಿ.ಬಿ 

ಬರಲಿದೆ ಮಹಾತಾಯೆ...  
ಬರಲಿದೆ ಮಹಾತಾಯೆ ಈ ಭೂಮಿಗೆ 
ಬರಲಿದೆ ಬರಲಿದೆ ಈ ಜಗಕೆ ಆದಿಶಕ್ತಿಯ ಅವತಾರ 
ಬನಶಂಕರಿ ದೇವಿಯ ಸಾಕಾರ ಜಗದಂಬಿಕೆ ಮಾತೆಯ ಮಮಕಾರ 
ಬರಲಿದೆ ಮಹಾತಾಯೆ ಈ ಭೂಮಿಗೆ 
ಬರಲಿದೆ ಬರಲಿದೆ ಈ ಜಗಕೆ ಆದಿಶಕ್ತಿಯ ಅವತಾರ 
ಬನಶಂಕರಿ ದೇವಿಯ ಸಾಕಾರ ಜಗದಂಬಿಕೆ ಮಾತೆಯ ಮಮಕಾರ 

ಬರಿದಾದ ಒಡಲೊಂದು ಬೇಡಿತು ಮಗುವೊಂದು ತುಂಬಿತು ಈ ಮಡಿಲೊಂದು 
ಬಯಸಿತು ಈ ಜೀವ ನೀಡಿತು ಆ ದೈವ ತಾಯಿಯ ಅನುಕಂಪ 
ಸತ್ಯ ನಿತ್ಯದ ಮಣಿದೀಪ ಇಟಗಿ ಮಣ್ಣಿನ ಪ್ರತಿರೂಪ 
ಜ್ಞಾನಜ್ಯೋತಿ ಬೆಳಗಿತು ನೀತಿ ಮಾಹಾತಾಯಿ ನೀನೆ 
ಬನಶಂಕರಿ ದೇವಿಯ ಸಾಕಾರ ಜಗದಂಬಿಕೆ ಮಾತೆಯ ಮಮಕಾರ 
ಬರಲಿದೆ ಬರಲಿದೆ ಈ ಜಗಕೆ ಆದಿಶಕ್ತಿಯ ಅವತಾರ 
ಬನಶಂಕರಿ ದೇವಿಯ ಸಾಕಾರ ಜಗದಂಬಿಕೆ ಮಾತೆಯ ಮಮಕಾರ 

ಓಂ.. ಓಂ.. ಓಂ.. ಓಂ.. 
ಕರ್ಮದ ಕತ್ತಲೆ ಕಳೆದು ಧರ್ಮದ ಬೆಳಕನು ತಳೆದು ಬೆಳಗಿದೆ ನಂದಾದೀಪ 
ಮಾನವ ಕುಲಕೆಲ್ಲಾ ಮಹಾಮಾತೆಯಾಗಿ ಧರ್ಮ ದೇವತೆ ನೀನು 
ಧರ್ಮ ದೀವಿಗೆ ಬೆಳಗಿಸಲು ಅಧರ್ಮದ ಕತ್ತಲೆ ಓಡಿಸಲು 
ಭಕ್ತವತ್ಸಲೆ ನೀನಾಗಿ ಈ ಜಗಕೆ ಜ್ಯೋತಿಯು ನೀನಾಗಿ 
ಪಾವನವಾಯ್ತು ಧರ್ಮದ ಮಠವು ಮಹಾತಾಯಿ ನೀನೆ 
ಬನಶಂಕರಿ ದೇವಿಯ ಸಾಕಾರ ಜಗದಂಬಿಕೆ ಮಾತೆಯ ಮಮಕಾರ 
ಬರಲಿದೆ ಬರಲಿದೆ ಈ ಜಗಕೆ ಆದಿಶಕ್ತಿಯ ಅವತಾರ 
ಬನಶಂಕರಿ ದೇವಿಯ ಸಾಕಾರ ಜಗದಂಬಿಕೆ ಮಾತೆಯ ಮಮಕಾರ 
ಬರಲಿದೆ ಬರಲಿದೆ ಈ ಜಗಕೆ ಆದಿಶಕ್ತಿಯ ಅವತಾರ 
ಬನಶಂಕರಿ ದೇವಿಯ ಸಾಕಾರ ಜಗದಂಬಿಕೆ ಮಾತೆಯ ಮಮಕಾರ 
------------------------------------------------------------------------------------------------------------

ಧರ್ಮ ದೇವತೆ (೨೦೦೨) - ಧರ್ಮದೇವತೆ 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಗೀತಪ್ರಿಯ, ಗಾಯನ : ಎಸ್.ಪಿ.ಬಿ 

ಧರ್ಮದೇವತೆ....  ಈ ಭೀಮಾಂಬಿಕೆ  ಧರ್ಮದೇವತೆ ಈ ಭೀಮಾಂಬಿಕೆ 
ಧರ್ಮದೇವತೆ ಈ ಭೀಮಾಂಬಿಕೆ  ಧರ್ಮದೇವತೆ ಈ ಭೀಮಾಂಬಿಕೆ 
ಭೀಮಾ ಭೀಮಾಂಬಿಕೆ ಬನಶಂಕರಿ 
ಭೀಮಾ ಭೀಮಾಂಬಿಕೆ ಬನಶಂಕರಿ ಕರುಣಾಕಾರಿ ಬನಶಂಕರಿ 

ಓಓಓ ಓ ತಾಯೇ ... 
ಇಟಗಿಯ ಪುರದಲ್ಲಿ ನೆಲೆನಿಂತ ತಾಯೆ 
ಇಟಗಿಯ ಪುರದಲ್ಲಿ ನೆಲೆನಿಂತ ತಾಯೆ 
ಬಳಿ ಬಂದ ಜನರನ್ನು ಪೊರೆವಂತ ತಾಯೆ 
ಬಳಿ ಬಂದ ಜನರನ್ನು ಪೊರೆವಂತ ತಾಯೆ 
ಕರುಣಾಂಬೆ ನೀನಮ್ಮ ನೀಡಮ್ಮ ಛಾಯೆ 
ಕರುಣಾಂಬೆ ನೀನಮ್ಮ ನೀಡಮ್ಮ ಛಾಯೆ 
ಶರಣಂಬೆ ಶಿವಶರಣೆ ನಮ್ಮನ್ನು ಕಾಯೇ ತಾಯೆ ನಮ್ಮನ್ನೂ ಕಾಯೇ 
(ಹೂಂ ಹೂಂ ಹೂಂ ಹೂಂ ಹೂಂ ಹೂಂ )
ಧರ್ಮದೇವತೆ ಈ ಭೀಮಾಂಬಿಕೆ  ಧರ್ಮದೇವತೆ ಈ ಭೀಮಾಂಬಿಕೆ 
ಧರ್ಮದೇವತೆ ಈ ಭೀಮಾಂಬಿಕೆ  ಧರ್ಮದೇವತೆ ಈ ಭೀಮಾಂಬಿಕೆ 

ಓಓಓ ತಾಯೇ ವಾಂಛಿತ ಫಲ ನೀಡೋ ನೀ ಕಾಮಧೇನು 
ವಾಂಛಿತ ಫಲ ನೀಡೋ ನೀ ಕಾಮಧೇನು 
ನಿನ್ನನ್ನು ನಂಬಿದರೆ ಬಾಳೆಲ್ಲ ಜೇನು 
ನಿನ್ನನ್ನು ನಂಬಿದರೆ ಬಾಳೆಲ್ಲ ಜೇನು 
ಕೋರಿದ ವರಗಳನು ಎಲ್ಲರಿಗು ಕೊಡುವೆ 
ಕೋರಿದ ವರಗಳನು ಎಲ್ಲರಿಗು ಕೊಡುವೆ 
ಸಂತಾನ ಭಾಗ್ಯವನು ನೀ ನೀಡುವೆ ತಾಯೇ ನೀ ನೀಡುವೇ 
(ಹೂಂ ಹೂಂ ಹೂಂ ಹೂಂ ಹೂಂ ಹೂಂ )
ಧರ್ಮದೇವತೆ.....  ಈ ಭೀಮಾಂಬಿಕೆ  ಧರ್ಮದೇವತೆ ಈ ಭೀಮಾಂಬಿಕೆ 
ಭೀಮಾ ಭೀಮಾಂಬಿಕೆ ಬನಶಂಕರಿ ಕರುಣಾಕಾರಿ ಕರುಣಾಕಾರಿ
ಬನಶಂಕರಿ ಕರುಣಾಕಾರಿ 
-----------------------------------------------------------------------------------------------------------

ಧರ್ಮ ದೇವತೆ (೨೦೦೨) - ಕಣ್ತೆರದು ನೋಡು 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಶಶಿಕಾಂತ , ಗಾಯನ : ಮಂಜುಳಗುರುರಾಜ,

ಕಣ್ತೆರೆದು ನೋಡು ತಾಯಿ ಕಾಪಾಡು 
ಕಣ್ತೆರೆದು ನೋಡು ತಾಯಿ ಕಾಪಾಡು ಇಟಗಿಪುರಮ್ಮ ಶರಣು ಭೀಮಮ್ಮಾ 
ಕಣ್ತೆರೆದು ನೋಡು ತಾಯಿ ಕಾಪಾಡು ಇಟಗಿಪುರಮ್ಮ ಶರಣು ಭೀಮಮ್ಮಾ 
ನೀ ಲೋಕಮಾತೆ ನೀ ಅನ್ನದಾತೆ ಶರಣು ಶ್ರೀಲಲಿತೆ ಸೌಭಾಗ್ಯಧತೆ 
ಕಣ್ತೆರೆದು ನೋಡು ತಾಯಿ ಕಾಪಾಡು ಇಟಗಿಪುರಮ್ಮ ಶರಣು ಭೀಮಮ್ಮಾ 

ಜೀವನ ಪಯಣದಲಿ ಕೈಹಿಡಿದು ನಡೆಸಮ್ಮಾ 
ಸಂಕಟದ ಬಿಸಿಲಿನಲಿ ನೆರಳಾಗಿ ಬಾರಮ್ಮಾ 
ನೋವುಗಳ ಅಳಿಸುತಲಿ ನಲಿವನ್ನು ನೀಡಮ್ಮಾ 
ಸೆರಗೊಡ್ಡಿ ಬೇಡುವೆ ತಾಯಿ ದಯಮಾಡು.. 
ಸೆರಗೊಡ್ಡಿ ಬೇಡುವೆ ತಾಯಿ ದಯಮಾಡುಕರುಣಾಮೂರ್ತಿಯೇ ವರವೊಂದ ನೀಡು 
ಕಣ್ತೆರೆದು ನೋಡು ತಾಯಿ ಕಾಪಾಡು ಇಟಗಿಪುರಮ್ಮ ಶರಣು ಭೀಮಮ್ಮಾ 

ನನ್ನ ಮನವ ನೀನಿರುವ ಮಂದಿರವ ಮಾಡಮ್ಮಾ 
ನಮ್ಮ ಮನೆಗೆ ಸಿರಿಸುಖವು ಅನವರತ ಇರಲಮ್ಮಾ 
ಅನುಗಾಲ ನಿನ್ನ ನೆನೆಸೊ ಸೌಭಾಗ್ಯ ನೀಡಮ್ಮಾ 
ನೀ ನನ್ನ ಮಡಿಲಿಗೆ ಮಗುವೊಂದ ನೀಡು ಈ ನಮ್ಮ ವಂಶವ ಬೆಳೆವಂತೆ ಮಾಡು 
ಕಣ್ತೆರೆದು ನೋಡು ತಾಯಿ ಕಾಪಾಡು ಇಟಗಿಪುರಮ್ಮ ಶರಣು ಭೀಮಮ್ಮಾ 
ನೀ ಲೋಕಮಾತೆ ನೀ ಅನ್ನದಾತೆ ಶರಣು ಶ್ರೀಲಲಿತೆ ಸೌಭಾಗ್ಯಧತೆ 
ಕಣ್ತೆರೆದು ನೋಡು ತಾಯಿ ಕಾಪಾಡು ಇಟಗಿಪುರಮ್ಮ ಶರಣು ಭೀಮಮ್ಮಾ 
------------------------------------------------------------------------------------------------------------

ಧರ್ಮ ದೇವತೆ (೨೦೦೨) - ದೀಪ ಹಚ್ಚಬೇಕು 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ದೊಡ್ಡರಂಗೇಗೌಡ , ಗಾಯನ : ಬದ್ರಿ ಪ್ರಸಾದ, ನಂದಿತಾ  

------------------------------------------------------------------------------------------------------------

ಧರ್ಮ ದೇವತೆ (೨೦೦೨) - ಈಶ್ವರ ಅಲ್ಲಾ ನೀನೇ 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಗೀತಪ್ರಿಯ , ಗಾಯನ :  ಸಂಗೀತ ಕಟ್ಟಿ 

------------------------------------------------------------------------------------------------------------

ಧರ್ಮ ದೇವತೆ (೨೦೦೨) - ಒಲವೆಂಬ ಮಂದಾರ 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಎಮ್.ಎನ್.ವ್ಯಾಸರಾವ, ಗಾಯನ : ರಾಜೇಶ, ನಂದಿತಾ 

------------------------------------------------------------------------------------------------------------

ಧರ್ಮ ದೇವತೆ (೨೦೦೨) - ಭೂದೇವಿ ಅಂದಚೆಂದ 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ :ಎಮ್.ಎನ್.ವ್ಯಾಸರಾವ  , ಗಾಯನ : ಮಂಜುಳಗುರುರಾಜ 

------------------------------------------------------------------------------------------------------------

ಧರ್ಮ ದೇವತೆ (೨೦೦೨) - ಧರೆಗೆ ಬಂದ 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ :ಶಶಿಕಾಂತ, ಗಾಯನ : ಮಂಜುಳಗುರುರಾಜ 

------------------------------------------------------------------------------------------------------------

No comments:

Post a Comment