1882. ಸುವ್ವಿ ಸುವ್ವ ಲಾಲಿ (1998)


ಸುವ್ವಿ ಸುವ್ವ ಲಾಲಿ ಚಲನಚಿತ್ರದ ಹಾಡಗಳು
  1. ಆ ದೇವರು ಕಟ್ಟಿದ ಗುಡಿಯಲ್ಲಿ
  2. ಹೋಗುವೆ ಅಂದಿತು ಮನಸು
  3. ಎಂಗೇಜ್ ಮೆಂಟಪ್ಪೋ
  4. ಆಯ್ಯ ಆಯ್ಯ ಭಾವಯ್ಯ 
  5. ಮೌನವೇ ಮೌನವೇ 
  6. ಮನಸೇ ಮಲ್ಲಿಗೆ 
ಸುವ್ವಿ ಸುವ್ವಲಾಲಿ (೧೯೯೮) - ಆ ದೇವರು ಕಟ್ಟಿದ ಗುಡಿಯಲ್ಲಿ
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಚಿತ್ರಾ, ಕೋರಸ್  
 
ಆ ದೇವರು ಕಟ್ಟಿದ ಗುಡಿಯಲ್ಲಿ, ಗರ್ಭ ಗುಡಿಯಲ್ಲಿ 
ಆಡ ಬಂದಾನೋ ನನ್ನಯ್ಯ... ಸುವ್ವಿ ಸುವ್ವ ಲಾಲಿ
ಆ ದೇವರೆ ಕಟ್ಟಿದ ಗುಡಿಯಲ್ಲಿ ಗರ್ಭ ಗುಡಿಯಲ್ಲಿ
ಆಡ ಬಂದಾನೋ ನನ್ನಯ್ಯ...  ಸುವ್ವಿ ಸುವ್ವ ಲಾಲಿ

ಅಮ್ಮ ಅನ್ನೋ, ಅಧ್ಬುತ ನೋಡಲು.... 
ಅರಳಿ ಅರಳಿ ಅಲ್ಲಿ .ಉರುಳಿ ಸುರುಳಿ ಎಲ್ಲಿ 
ಕೈಯಲ್ಲಿ ಕಾಲಲ್ಲಿ ತಿವಿದಾನೋ ಒದ್ದಾನೋ ಅಮ್ಮಾ...... 
ಈ ಅಮ್ಮ‌ ಅನ್ನೋ ಅಧ್ಬುತ ನೋಡಲು
ಬರುತೀನಿ ಅಂತಾನೇ ಕೇಳಿಸಿತೆ ಅಂತಾನೇ
ಬರುತೀನಿ ಅಂತಾನೇ ಕೇಳಿಸಿತೆ ಅಂತಾನೇ
ಕೇಳಿ ..‌ಎಲ್ಲಾ ... ಕೇಳಿ.....ಈ.... 
ಆ ದೇವರೆ ಕಟ್ಟಿದ ತೇರಿನಲ್ಲಿ, ತಾಯಿ ತೇರಿನಲ್ಲಿ
ಕೂರ ಬಂದಾನೋ ನನ್ನಯ್ಯ... ಸುವ್ವಿ ಸುವ್ವ ಲಾಲಿ

ಏನೆನ್ನಲಿ ಈ ಆನಂದವಾ ..... 
ಜಗವೇ ಒಂದು ಅಣುವಾಗಿ ಶಿವನ ಲೀಲಾ ಕಣವಾಗಿ 
ಕನಸಾಗಿ ನನಸಾಗಿ ಮಗುವಾಗಿ ನಗುವಾಗಿ ಅಮ್ಮಾ ... 
ಏ.ನೇನೆನ್ನಲಿ ಆ ಆನಂದವಾ .. 
ನಾಳೆ ನಾ ತಾಯಾಗಿ, ತುಳುಕಾಡುವೆ ಹಾಲಾಗಿ
ನಾಳೆ ನಾನು ತಾಯಾಗಿ,  ತುಳುಕಾಡುವೆ ಹಾಲಾಗಿ
ಕಂದ.. ನಿನ್ನಾ ... ದಯದಿಂ...ದ
(ಆ ದೇವರು ಕಟ್ಟಿದ ಗುಡಿಯಲ್ಲಿ ಗರ್ಭ ಗುಡಿಯಲ್ಲಿ
ಆಡ ಬಂದಾನೋ ನನ್ನಯ್ಯ... ಸುವ್ವಿ ಸುವ್ವ ಲಾಲಿ
ಆ ದೇವರೆ ಕಟ್ಟಿದ ಲೋಕದಲ್ಲಿ ಜೀವಲೋಕ ದಲ್ಲಿ
ಆಡ ಬಂದಾನೋ ನನ್ನಯ್ಯ... ಸುವ್ವಿ ಸುವ್ವ ಲಾಲಿ
ಸುವ್ವಿ ಸುವ್ವ ಲಾಲಿ)
--------------------------------------------------------------------------------------------------------

ಸುವ್ವಿ ಸುವ್ವಲಾಲಿ (೧೯೯೮) - ಹೋಗುವೆ ಅಂದಿತು ಮನಸು
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಚಿತ್ರಾ, ರಮೇಶಚಂದ್ರ

ಹೆಣ್ಣು : ಹೋಗಲಾ... ಹೋಗಲಾ... (ಹೇ ಹೇ ಹೇ ಹೇ ಹೇ ಹೇ)
               ಹೋಗಲಾ... ಹೋಗಲಾ... (ಹೇ ಹೇ ಹೇ ಹೇ ಹೇ ಹೇ)
               ಹೋಗಲಾ... ಹೋಗಲಾ... (ಹೇ ಹೇ ಹೇ ಹೇ ಹೇ ಹೇ)
               ಹೋಗಲಾ... ಹೋಗಲಾ... (ಹೇ ಹೇ ಹೇ ಹೇ ಹೇ ಹೇ)
               ಹೋಗಲೇ ಅಂದಿತು ಮನಸ್ಸೂ... ಹೋಗಲೇ ಅಂದಿತು ಮನಸ್ಸೂ... 
               ಹೋಗು ಹೋಗು ಅಂದಿತು ವಯಸ್ಸೂ .. ವಯಸ್ಸೂ .. 
               ಹೋಗಲಾ... ಹೋಗಲಾ... (ಹೇ ಹೇ ಹೇ ಹೇ ಹೇ ಹೇ)
               ಹೋಗಲಾ... ಹೋಗಲಾ... (ಹೇ ಹೇ ಹೇ ಹೇ ಹೇ ಹೇ)
               ನೋಡಲೇ ಅಂದಿತು ವಯಸ್ಸೂ ..  ನೋಡಲೇ ಅಂದಿತು ವಯಸ್ಸೂ ..  
               ನೋಡು ನೋಡು ಅಂದಿತು ಮನಸ್ಸೂ .. ಮನಸ್ಸೂ.. 
               ನೋಡಲಾ... ನೋಡಲಾ...(ಹೇ ಹೇ ಹೇ ಹೇ ಹೇ ಹೇ)   
               ನೋಡಲಾ... ನೋಡಲಾ...(ಹೇ ಹೇ ಹೇ ಹೇ ಹೇ ಹೇ)   

ಗಂಡು : ಪ್ರಾಯದ ನಿಯಮಾನ ಮೀರಲು ಸಾಧ್ಯಾನ ತೆರೆದಿದೆ ಎದೆ ಈಗ.. ಹೇಹೇಹೇಹೇ
              ಪ್ರೀತಿಯ ಆಹ್ವಾನ ಮರೆಯೋದು ನ್ಯಾಯಾನಾ ಸ್ವಾಗತ ನಿನಗೀಗ.. ಹೇಹೇಹೇಹೇ    
ಹೆಣ್ಣು : ಮನದ ನನ್ನ ಮಾತು ನಿನಗೆ ಈಗ ಸೋತು ಬಾಯಿ ಬಳಿಗೆ ಬಂದು ಮಾಯವಾಯಿತು 
               ನೀನೇ ಒಂದು ವೇಳೆ ನನ್ನ ವರಿಸಿದಾಣೆ ಮುತ್ತು ಸವಿ ಮುತ್ತು ನಾನು ಬಿಳಿಯ ಹಾಳೆ 
ಗಂಡು :  ಓಕೆ..   ಬೇಬಿ... ಸೀನ್.. ಸೀನ್... ಓವ್.. ಇಸ್ ಎ ಸಾಂಗ್.. ಇಸ್ ಎ ಸಾಂಗ್.. 
ಹೆಣ್ಣು : ಹಾಡಲೇ ಅಂದಿತು ಮನಸ್ಸೂ .. ಹಾಡಲೇ ಅಂದಿತು ಮನಸ್ಸೂ ..               
               ಹಾಡು ಹಾಡು ಅಂದಿತು ವಯಸ್ಸೂ... ವಯಸ್ಸೂ.. 
               ಹಾಡಲಾ.. ಹಾಡಲಾ... ...(ಹೇ ಹೇ ಹೇ ಹೇ ಹೇ ಹೇ)   
                ಹಾಡಲಾ.. ಹಾಡಲಾ... ...(ಹೇ ಹೇ ಹೇ ಹೇ ಹೇ ಹೇ)   

ಗಂಡು : ಈ ಶುಭ ಸಂಗೀತ ಯಾವುದರ ಸಂಕೇತ ಎಂಬುದು ತಿಳಿದಿಲ್ಲಾ... ಹೇಹೇಹೇಹೇಹೇ ಹೇ
               ಈ ಸುಖ ಸಂತೋಷ ಯಾವುದರ ಸಂದೇಶ ಮಾತಿಗು ನಿಲುಕಿಲ್ಲ... ಹೇಹೇಹೇಹೇಹೇ ಹೇ 
ಹೆಣ್ಣು : ಮೊದಲ ಬಾರಿ ಎಲ್ಲಾ ಮಜುಲುವನ್ನು ನೋಡಿ ಪ್ರೀತಿ ಒಂದು ದೈವ ಎಂದಳಂತೆ .. 
               ಅನಾರ್ಕಲಿ ನನ್ನ ಸಲಿಂನ ಮುಂದೆ ಪ್ರೀತಿ ಹಾಡು ಎಂದಳಂತೇ .. 
ಗಂಡು :  ಓಕೆ..   ಬೇಬಿ... ಸೀನ್.. ಸೀನ್... ಓವ್.. ಇಸ್ ಎ ಸಾಂಗ್.. ಇಸ್ ಎ ಸಾಂಗ್.. 
ಹೆಣ್ಣು : ಹಾಡಲೇ ಅಂದಿತು ಮನಸ್ಸೂ .. ಹಾಡಲೇ ಅಂದಿತು ಮನಸ್ಸೂ ..               
               ಹಾಡು ಹಾಡು ಅಂದಿತು ವಯಸ್ಸೂ... ವಯಸ್ಸೂ.. 
               ಹಾಡಲಾ.. ಹಾಡಲಾ... ...(ಹೇ ಹೇ ಹೇ ಹೇ ಹೇ ಹೇ)   
               ಹಾಡಲಾ.. ಹಾಡಲಾ... ...(ಹೇ ಹೇ ಹೇ ಹೇ ಹೇ ಹೇ)   
               ಹಾಡಲಾ.. ಹಾಡಲಾ... ...(ಹೇ ಹೇ ಹೇ ಹೇ ಹೇ ಹೇ)   
               ಹಾಡಲಾ.. ಹಾಡಲಾ... ...(ಹೇ ಹೇ ಹೇ ಹೇ ಹೇ ಹೇ)   
-------------------------------------------------------------------------------------------------------

ಸುವ್ವಿ ಸುವ್ವಲಾಲಿ (೧೯೯೮) -ಎಂಗೇಜ್ ಮೆಂಟಪ್ಪೋ
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಮಂಜುಳಾ, ರಮೇಶಚಂದ್ರ, ಎಲ್.ಏನ್.ಶಾಸ್ತ್ರಿ 

ಭಟ್ಟ : ಆದಿತ್ಯಾದಿ ಗ್ರಹ ಸರ್ವೇ ಸಮಕ್ಷಾಸ್ಥರಹಸ್ ಸರಾಶ್ರಾಯಃ 
            ಕುರವಂತೂ ಮಂಗಲಂ ನಿತ್ಯಂ ಯಸೆಶ್ಯಾ ಲಗ್ನಪತ್ರಿಕಾರ್ಥಯಾ 
ಶಾಸ್ತ್ರೀ: ಎಂಗೇಜಮೆಂಟ್ ಫಂಕ್ಷನಾಯ್ ಶುಭಮಸ್ತೂ .. (ಹೂಂ ... ಹೂಂ)
             ಎಂಗೇಜಮೆಂಟಪ್ಪೋ..    ಎಂಗೇಜಮೆಂಟಪ್ಪೋ.. 
             ಎಂಗೇಜಮೆಂಟಪ್ಪೋ..    ಎಂಗೇಜಮೆಂಟಪ್ಪೋ.. 
             ಜೀವ ಜೀವಕ್ಕೂ ಸಂಸಾರಕ್ಕೂ ಮದುವೆ ಅನ್ನೋದು ಎಂಗೇಜಮೆಂಟಪ್ಪೋ..    
ಎಲ್ಲರು : ಸುವ್ವಿ ಸುವ್ವಲಾಲಿ  ಹೌದಾ ಆಲ್ವಾ ಹೇಳ್ರೀ 
               ಸುವ್ವಿ ಸುವ್ವಲಾಲಿ  ಹೌದಾ ಆಲ್ವಾ ಹೇಳ್ರೀ 
ರಮೇಶ್ : ಹ್ಹಾ... ಅರೇಂಜಮೆಂಟಪ್ಪೋ...  ಅರೇಂಜಮೆಂಟಪ್ಪೋ...   
                 ಅರೇಂಜಮೆಂಟಪ್ಪೋ...   ಅರೇಂಜಮೆಂಟಪ್ಪೋ...   
                 ಪಾತ್ರ ಪಾತ್ರಕ್ಕೂ ಗೋತ್ರ ಘಾತಕ್ಕೂ ಮದುವೆ ಅನ್ನೊದು ಅರೇಂಜಮೆಂಟಪ್ಪೋ...   
ಎಲ್ಲರು : ಸುವ್ವಿ ಸುವ್ವಲಾಲಿ  ಹೌದಾ ಆಲ್ವಾ ಹೇಳ್ರೀ 
               ಸುವ್ವಿ ಸುವ್ವಲಾಲಿ  ಹೌದಾ ಆಲ್ವಾ ಹೇಳ್ರೀ 

ಶಾಸ್ತ್ರೀ : ಅಪರಂಜಿ ನಮ್ಮ ಹುಡುಗಿ, ನಮಗಂತೂ ಇವಳ ಜೀವನ 
               ನೀವೆಷ್ಟು ಕೇಳುತ್ತೀರಾ ನಿಮ್ಮ ವರದಕ್ಷಿಣೆಯನ್ನೂ 
ರಮೇಶ : ಕೊಹಿನೂರೂ ನಮ್ಮ ಗಂಡು (ಹ್ಚ್ ) ಬೆಲೆ ಕಟ್ಟಬಲ್ಲಿರೇನು (ಹ್ಚ್ ) 
                ಈ ವಿನಯ ವಿದ್ಯಾ ಗಣಿಗೆ ಬಾಯಿ ಬಿಟ್ಟು ಕೇಳಬೇಕೇನು  
               (ಹ್ಹಾ ಹೇಳಿ) (ಹ್ಹಾ ಹೇಳಿ) 
               ಪ್ರೀತಿಯ ಬಂಧನಾ... ಆಆಆ 
               ಪ್ರೀತಿಯ ಬಂಧನಾ ವ್ಯಾಪಾರ ಆದರೇ ವಿದ್ಯೆಯೇ ಒಂದೂ ಕೇಡೂ 
                (ಹೂಂ... ಹೂಂ)
               ಕಮಿಟಮೆಂಟಪ್ಪೋ...    ಕಮಿಟಮೆಂಟಪ್ಪೋ... 
               ಕಮಿಟಮೆಂಟಪ್ಪೋ...    ಕಮಿಟಮೆಂಟಪ್ಪೋ... 
               ನಾವೂ ಹೇಳೋದು ಹೇಳಿ ನಡೆಯೋದು 
               ಮದುವೆ ಅನ್ನೋದು ಕಮಿಟಮೆಂಟಪ್ಪೋ...  
ಎಲ್ಲರು : ಹೋಯ್  ಸುವ್ವಿ ಸುವ್ವಲಾಲಿ  ಹೌದಾ ಆಲ್ವಾ ಹೇಳ್ರೀ 
               ಸುವ್ವಿ ಸುವ್ವಲಾಲಿ  ಹೌದಾ ಆಲ್ವಾ ಹೇಳ್ರೀ 

ರಮೇಶ : ಸಿಟಿಯಲ್ಲಿ ಇದ್ರೆ ಚಪ್ಪರಾ ನಮ್ಮ ಬಳಗ ಎಲ್ಲಾ ಹತ್ರಾ 
                ಊಟಕ್ಕೆ ಹತ್ತು ಪಲ್ಯಾ.. ಹಾಡೋಕೆ ಎಸ್.ಪಿ.ಬಾಲು 
ಶಾಸ್ತ್ರೀ : ಹ್ಹಾ... ಊಟದ್ದು ಅಡ್ಡಿಯಿಲ್ಲಾ ಛತ್ರಾನು ಸಿಕ್ಕೋದಿಲ್ಲಾ 
              ಎಸ್.ಪಿ.ಬಿ ನಮಗೂ ಇಷ್ಟಾ.. ಸಿಕ್ಕೋದು ತುಂಬಾ ಕಷ್ಟಾ...
              (ಆಗಲ್ವಾ ಹೇಳಿ) (ಆಗುತ್ತೇಳಿ)  
  ರಮೇಶ : ಹೋಯ್ ಯಾರಾದ್ರೂ ಸೋಲಿರೋ...  ಓಓಓ 
                  ಯಾರಾದ್ರೂ ಸೋಲಿರೋ ಎಸ್.ಪಿ.ಬಿ. ಹಾಡಿರೋ 
                  ಕ್ಯಾಸೆಟ್ ಒಂದನ್ನ ಹಾಕಿರೋ..   (ಅಹ್.. ಓ..) 
ಇಬ್ಬರು : ಅಡ್ಜಸ್ಟಮೆಂಟಪ್ಪೋ...   ಅಡ್ಜಸ್ಟಮೆಂಟಪ್ಪೋ...   
                ಅಡ್ಜಸ್ಟಮೆಂಟಪ್ಪೋ...   ಹೌದೂ ಅಡ್ಜಸ್ಟಮೆಂಟಪ್ಪೋ...   
                 ನಮ್ಮ ಬಯಕೆಗೂ ನಮ್ಮ ಬಜೆಟಗೂ ಮದುವೆ ಅನ್ನೋದು ಅಡ್ಜಸ್ಟಮೆಂಟಪ್ಪೋ...   
ಎಲ್ಲರು : ಹೋಯ್  ಸುವ್ವಿ ಸುವ್ವಲಾಲಿ  ಹೌದಾ ಆಲ್ವಾ ಹೇಳ್ರೀ 
               ಸುವ್ವಿ ಸುವ್ವಲಾಲಿ  ಹೌದಾ ಆಲ್ವಾ ಹೇಳ್ರೀ 

ರಾಜೇಶ : ಇಷ್ಟೊಂದು ಇಲ್ಲಿ ಕೂತು ಆಡಿಲ್ಲ ಒಂದು ಮಾತು 
                 ಹೇಳಬೇಕು ಈಗ ನೀವು ಯಾವೂರಲಿ ಇರಲಿ ಹನಿಮೂನು     
ಮಂಜುಳಾ : ಮಾತಾಡೇ ಮೌನಗೌರಿ ಸಂಕೋಚ ಯಾಕೇ ಇನ್ನು 
                     ನಿನ್ನ ಸ್ವಂತ ದುಡಿಮೆಯಲ್ಲಿ ಪ್ಯಾರೀಸು ತೋರಿಸೇನ್ನೂ 
                     ಹೂಂ .. ಹೇಳೂ .. ಹೂಂ .. ಹೇಳೂ .. 
                     ಹುಟ್ಟಿದ್ದೂ ಇಲ್ಲೀ ... ಹುಟ್ಟಿದ್ದೂ ಇಲ್ಲಿಯೇ ಕಲಿತಿದ್ದೂ ಇಲ್ಲೀಯೇ  
                     ಪ್ರಿತಿಸೂ ಇಲ್ಲಿಯೇ.. ವ್ಹಾ ವ್ಹಾ... 
ಇಬ್ಬರು : ಸೆಂಟಿಮೆಂಟಪ್ಪೋ...  ಸೆಂಟಿಮೆಂಟಪ್ಪೋ...          
                 ಸೆಂಟಿಮೆಂಟಪ್ಪೋ...  ಸೆಂಟಿಮೆಂಟಪ್ಪೋ...             
                  ನಮ್ಮ ಸಂಸ್ಕೃತಿಗೂ ಸಂಪ್ರದಾಯಕ್ಕೂ ಮದುವೆ ಅನ್ನೋದು  
                  ಸೆಂಟಿಮೆಂಟಪ್ಪೋ...  
ಎಲ್ಲರು : ಹೇ... ಸುವ್ವಿ ಸುವ್ವಲಾಲಿ  ಹೌದಾ ಆಲ್ವಾ ಹೇಳ್ರೀ 
               ಸುವ್ವಿ ಸುವ್ವಲಾಲಿ  ಹೌದಾ ಆಲ್ವಾ ಹೇಳ್ರೀ 
               ಸುವ್ವಿ ಸುವ್ವಲಾಲಿ  ಹೌದಾ ಆಲ್ವಾ ಹೇಳ್ರೀ 
               ಸುವ್ವಿ ಸುವ್ವಲಾಲಿ  ಹೌದಾ ಆಲ್ವಾ ಹೇಳ್ರೀ 
--------------------------------------------------------------------------------------------------------

ಸುವ್ವಿ ಸುವ್ವಲಾಲಿ (೧೯೯೮) -ಆಯ್ಯ ಆಯ್ಯ ಭಾವಯ್ಯ 
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ರಮೇಶಚಂದ್ರ, ರಾಜೇಶ, ಎಲ್.ಏನ್.ಶಾಸ್ತ್ರಿ,  ಸುಮಾಶಾಸ್ತ್ರಿ 

ಹೆಣ್ಣು : ಅಹ್.. ಓಹೋ.. ಓಹೋ .. ಆಹ್   
              ಅಯ್ಯಾ ಅಯ್ಯಾ ಭಾವಯ್ಯಾ ಮದುವೆ ಮಂಚಾನ ಏರಯ್ಯಾ ಅಹ್.. ಓಹೋ.. 
              ಅಯ್ಯಾ ಅಯ್ಯಾ ಭಾವಯ್ಯಾ ಮಲ್ಲಿಗೆ ಹೂವಾನ ಮೂಸಯ್ಯಾ ಅಹ್.. ಓಹೋ.. 
ಗಂಡು : ಮೊಸರಿನಲ್ಲಿ ಕಲ್ಲು ನೀನೂ ಹೋಯ್ತು ನನ್ನ ಹನಿಮೂನು ಮೋಹಿನೀ ... 
              ನಖರಾ ನಾದಿನೀ... 
ಹೆಣ್ಣು : ಅಯ್ಯಾ ಅಯ್ಯಾ ಭಾವಯ್ಯಾ ಮದುವೆ ಮಂಚಾನ ಏರಯ್ಯಾ ಅಹ್.. ಓಹೋ.. 
              ಅಯ್ಯಾ ಅಯ್ಯಾ ಭಾವಯ್ಯಾ ಮಲ್ಲಿಗೆ ಹೂವಾನ ಮೂಸಯ್ಯಾ ಅಹ್.. ಓಹೋ.. 
 
ಹೆಣ್ಣು : ಅಳುಮೋರೆ ಹಾಕಿಕೊಂಡು ರಾತ್ರಿ ಕಳಿಯಬೇಡವಯ್ಯಾ 
               ಸೋಮಾರಿಯಾಗಿ ಕುಂತು ಕೆಲಸ ಕೆಡಿಸಬೇಡವಯ್ಯಾ 
               ಮನೆಯಲಿ ಜೋಗುಳವಾ ಕೇಳಲೂ ... ಮನಗಳ ಸರಿಗಮಪದ ಹಾಡಿರವಯ್ಯಾ 
               ಅಕ್ಕನ ಅಳಿಸದರೆ ಮಾವಯ್ಯಾ ಮೊಗವ ನಗುವು ಹೊಸವದನೆಯ್ಯಾ  
ಗಂಡು : ಜಾಲಿ ಮಾಡು ಎಲ್ಲಾ ಖಾಲೀ .. ಪೂಲನ್ ದೇವಿ ನೀನೇ ಮನೇಲಿ.. 
ಹೆಣ್ಣು : ಲಾಲಿ ಲಾಲಿ ಸುವ್ವಾಲಾಲಿ ಪಾಪ ಅಕ್ಕಾ ಮಂಚದ ಮೇಲೆಲಿ 
ಗಂಡು : ಹೋಯ್ ಮಂಚದಲ್ಲಿ ತಿಗಣೆ ನೀನೂ ಹೋಯ್ತು ನನ್ನ ಹನಿಮೂನು ನಾದಿನೀ... 
               ಹೋಗೇ ಢಾಕಿಣೀ ... 
ಹೆಣ್ಣು : ಅಯ್ಯಾ ಅಯ್ಯಾ ಭಾವಯ್ಯಾ ಮದುವೆ ಮಂಚಾನ ಏರಯ್ಯಾ ಅಹ್.. ಓಹೋ.. 
              ಅಯ್ಯಾ ಅಯ್ಯಾ ಭಾವಯ್ಯಾ ಮಲ್ಲಿಗೆ ಹೂವಾನ ಮೂಸಯ್ಯಾ ಅಹ್.. ಓಹೋ.. 
 
ಹೆಣ್ಣು : ಮಾವಾ..  ಭಾವಾ... ಬೇಕಾ ಹೂವಾ 
ಶಾಸ್ತ್ರಿ : ತಾತನಿಗೆ ಕೆಮ್ಮು ಕಲಿಸೋ ಮೂಗನ ದಯಪಾಲಿಸಯ್ಯಾ 
             ತಾತಾ ತಾತಾ ಅಂತಾ ಇದ್ರೇ ನಾನು ತಾತಯ್ಯ ಅನ್ನಬೇಕಯ್ಯಾ 
ಹೆಣ್ಣು : ಅಜ್ಜಿ ಅಜ್ಜಿ ಎಂದು ಕೂಗಲೂ ... ಕೇಳಲು ವಯಸನು ಮುಂದಿಡಿದೆನಯ್ಯಾ 
ಗಂಡು : ಮನೆಯ ನಂದನವನ ಮಾಡಯ್ಯಾ 
ಶಾಸ್ತ್ರಿ : ಮುಪ್ಪಿಗೆ ಸಂಜೀವಿನಿ ಫಲ ನೀಡಯ್ಯಾ.. 
ಗಂಡು : ಅಮ್ಮಾ.. ತಾಯೀ .. ಜೀಯಾ ಜೀವಾ ನಿಮ್ಮ ಚಿಂತೆ ನೆಕ್ಸ್ಟ್ ಇಯರ್ ಮಾಯಾ 
ಶಾಸ್ತ್ರಿ : ಅಯ್ಯಾ ಅಯ್ಯಾ ದಯಮಾಡಯ್ಯಾ ಬೇಗ ಹೋಗಿ ಕದ ಹಾಕಯ್ಯಾ 
ಗಂಡು : ಮೊದಲ ರಾತ್ರಿ ನಿದ್ದೆ ಏನೂ ಹೋಯ್ತು ನನ್ನ ಹನಿಮೂನು ಪ್ರಾಣವೇ... 
               ಇನ್ನೂ ಉಪವಾಸವೇ ... 
ಹೆಣ್ಣು : ಅಯ್ಯಾ ಅಯ್ಯಾ ಅಳಿಮಯ್ಯಾ ಮದುವೆ ಮಂಚಾನ ಏರಯ್ಯಾ (ಅಹ್.. ಓಹೋ..) 
              ಅಯ್ಯಾ ಅಯ್ಯಾ ಅಳಿಮಯ್ಯಾ ಮಲ್ಲಿಗೆ ಹೂವಾನ ಮೂಸಯ್ಯಾ ಅಹ್.. ಓಹೋ..  
--------------------------------------------------------------------------------------------------------

ಸುವ್ವಿ ಸುವ್ವಲಾಲಿ (೧೯೯೮) - ಮೌನವೇ ಮೌನವೇ 
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಚಿತ್ರಾ, ರಾಜೇಶ  

ಹೆಣ್ಣು : ಆಆಆ....  ಗಂಡು : ಆಆಆ 
ಹೆಣ್ಣು : ಮೌನವೇ.. ಆಹಾ ಮೌನವೇ.. ಆಹಾ 
              ಏನಿದು ಏನೇನೋ ಹೇಳುವೆ ಅಹಹಾ.. ಮೆಲ್ಲನೆ ಇನ್ನೇನೋ ಕೇಳುವೆ 
ಗಂಡು : ಹೃದಯವೇ.. ಅಹಾ ಹೃದಯವೇ.. ಅಹಾ 
               ಮೌನಕೇ ನೀನೇಕೆ ಹೆದರುವೇ .. ಅಹಾಹಾ ಪ್ರೀತಿಯ ನೀನಾಗಿ ಮಿಡಿಯುವೇ .. ಅಹಾ .. 
ಹೆಣ್ಣು : ನಿನ್ನ ಸ್ಪರ್ಶ ಪ್ರೇಮ ವರ್ಷ ಸುರಿಸಿದೇ ... 
ಗಂಡು : ನಿನ್ನ ಮಿಡಿತ ನನಗೂ ತುಡಿತ ತಂದಿದೇ .. 
ಹೆಣ್ಣು : ಏನೂ ಏನೂ ಎಂದರೇನು ಅರಿಯದವರು ನಾನು ನೀನೂ .. 
              ಮೌನವೇ.. ಆಹಾ ಮೌನವೇ.. ಆಹಾ 
              ಏನಿದು ಏನೇನೋ ಹೇಳುವೆ ಅಹಹಾ.. ಮೆಲ್ಲನೆ ಇನ್ನೇನೋ ಕೇಳುವೆ         

ಹೆಣ್ಣು : ಆಆಆಅ... ಆಆಆ.. 
ಇಬ್ಬರು : ಬೆಂಕಿಯೇ ಸೋಕಿದೆ ಬೆಣ್ಣೆ ಕರಗಿತೇಕೆ ಎಂದರೇನೂ .. 
                ಗಾಳಿಯೇ ಸೋಕಿಯೇ ಮೋಡ ಹನಿಯು ಬೇಕೆ ಎಂದರೇನೂ .. 
ಗಂಡು : ಪ್ರಥಮದಲೀ .. (ಆಆಆ) ಭಯ ಸಹಜ.. ಪ್ರಣಯದಲಿ ಸುಖ ಸಹಜ 
ಹೆಣ್ಣು : ನಿನ್ನ ಸ್ಪರ್ಶ ಪ್ರೇಮ ವರ್ಷ ಸುರಿಸಿದೇ ... 
ಗಂಡು : ನಿನ್ನ ಮಿಡಿತ ನನಗೂ ತುಡಿತ ತಂದಿದೇ .. 
ಹೆಣ್ಣು : ಏನೂ ಏನೂ ಎಂದರೇನು ಅರಿಯದವರು ನಾನು ನೀನೂ .. 
              ಮೌನವೇ.. ಆಹಾ ಮೌನವೇ.. ಆಹಾ 
              ಏನಿದು ಏನೇನೋ ಹೇಳುವೆ ಅಹಹಾ.. ಮೆಲ್ಲನೆ ಇನ್ನೇನೋ ಕೇಳುವೆ... ಆಹಾ..          

ಗಂಡು : ಆಹಾ.. (ಸ..ಮ.. ಮಮಪದ ನಿಸ ರಿಮಗಪ ಸರಿನಿಸ)  
              ನವಿಲು ಮುಗಿಲು ಇಳೆಯ ಮಳೆಯ ಪ್ರಣಯ ಜಾಲದಲ್ಲಿ 
              ಮನದ...  ಕಡಲ.. ಅಸೆ ನೀನು ಪ್ರೇಮಗಾಳದಲ್ಲಿ     
ಹೆಣ್ಣು : ಸೃಷ್ಟಿಯಲಿ.. (ಅಹಾಹ) ರೀತಿ ಸಹಜಾ (ಅಹಾಹ) 
               ಮಿಲನದಲಿ (ಅಹಾಹ) ಶೃತಿ ಸಹಜ (ಅಹಾಹ)
ಗಂಡು : ನಿನ್ನ ಸ್ಪರ್ಶ ಪ್ರೇಮ ವರ್ಷ ಸುರಿಸಿದೇ ... 
ಹೆಣ್ಣು : ನಿನ್ನ ಮಿಡಿತ ನನಗೂ ತುಡಿತ ತಂದಿದೇ .. 
ಇಬ್ಬರು : ಏನೂ ಏನೂ ಎಂದರೇನು ಅರಿಯದವರು ನಾನು ನೀನೂ .. 
ಹೆಣ್ಣು : ಮೌನವೇ.. ಆಹಾ ಮೌನವೇ.. ಆಹಾ 
              ಏನಿದು ಏನೇನೋ ಹೇಳುವೆ ಅಹಹಾ.. ಮೆಲ್ಲನೆ ಇನ್ನೇನೋ ಕೇಳುವೆ         
ಗಂಡು : ಹೃದಯವೇ.. ಅಹಾ ಹೃದಯವೇ.. ಅಹಾ 
               ಮೌನಕೇ ನೀನೇಕೆ ಹೆದರುವೇ .. ಅಹಾಹಾ ಪ್ರೀತಿಯ ನೀನಾಗಿ ಮಿಡಿಯುವೇ .. ಅಹಾ .. 
-------------------------------------------------------------------------------------------------------

ಸುವ್ವಿ ಸುವ್ವಲಾಲಿ (೧೯೯೮) -ಮನಸೇ ಮಲ್ಲಿಗೆ 
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಚಿತ್ರಾ 

ಮನಸೇ ಮಲ್ಲಿಗೆ ಒಲವೇ ಸಂಪಿಗೆ ಗಂಡನ ಪೂಜೆಗೆ 
ಮನಸೇ ಮಲ್ಲಿಗೆ ಒಲವೇ ಸಂಪಿಗೆ ಗಂಡನ ಪೂಜೆಗೆ ನಮ್ಮ ಭಾಗ್ಯದ ಬಾಳಿಗೆ 
ವರ ತರಲಿ ತರದಿರಲಿ ವರನಿವನು ನನಗಿರಲಿ 
ಅಂದವೇ ತುಳಸಿ ಗಂಧವೇ ಬದುಕು ಗಂಡನ ಸೇವೆಗೆ.. ನಮ್ಮ ಭಾಗ್ಯದ ಬಾಳಿಗೆ 
ವರ ತರಲಿ ತರದಿರಲಿ ನಗುನಗುತಾ ಜೊತೆಯಿರಲಿ 
ಮನಸೇ ಮಲ್ಲಿಗೆ ಒಲವೇ ಸಂಪಿಗೆ ಗಂಡನ ಪೂಜೆಗೆ ನಮ್ಮ ಭಾಗ್ಯದ ಬಾಳಿಗೆ 

ಹೆಣ್ಣು ಶಿವನ ಮೂರನೇ ಕಣ್ಣು ಅನುವ ಕುಂಕುಮವೇ ಮಹಾ ಮುತ್ತು 
ಆದಿಶಕ್ತಿಯೇ ಮೈತಾಳಿ ತಾಳಿ ಆದ ಮಂಗಲ ಮುತ್ತು 
ನಾದ ವೇದದ ಕಿವಿ ಮುತ್ತು  ಉಸಿರ ಗೆಳತೀ ಮುಗು ನಕ್ಕು 
ಸಪ್ತಪದಿಯ ಸಾಕ್ಷಿಯ ಕಾಲುಂಗುರ ಐದನೇ ಮುತ್ತು 
ಮುತೈದೆಯ ಈ ಭಾಗ್ಯ ಸಾಕು 
ಅಂದವೇ ತುಳಸಿ ಗಂಧವೇ ಬದುಕು ಗಂಡನ ಸೇವೆಗೆ.. ನಮ್ಮ ಭಾಗ್ಯದ ಬಾಳಿಗೆ 
ವರ ತರಲಿ ತರದಿರಲಿ ನಗುನಗುತಾ ಜೊತೆಯಿರಲಿ 
ಮನಸೇ ಮಲ್ಲಿಗೆ ಒಲವೇ ಸಂಪಿಗೆ ಗಂಡನ ಪೂಜೆಗೆ ನಮ್ಮ ಭಾಗ್ಯದ ಬಾಳಿಗೆ 

ಏಳು ಜನ್ಮಗಳು ಇವೆಯಂತೆ.. ಅದರ ಚಿಂತೆ ನಮಗ್ಯಾಕಂತೆ 
ಪುರುಷ ಪುಣ್ಯ ಈ ಜನುಮದಲಿ ಕಾಯುತಿರುವುದೇ ಸಾಕಂತೇ 
ಹೆಣ್ಣು ಎಂದೂ ತ್ಯಾಗಮಯಿ.. ಅಂದುಕೊಂಡರೇ ತಪ್ಪಲ್ಲ.. 
ಪತಿಯ ಪ್ರೀತಿ ಪಾಲಿನಲು ಹೆಣ್ಣು ಎಂದೂ ಒಪ್ಪಲ್ಲ 
ಗಂಡನೇ ಹೆಣ್ಣಿನ ಸ್ವಾರ್ಥವಂತೇ... 
ಮನಸೇ ಮಲ್ಲಿಗೆ ಒಲವೇ ಸಂಪಿಗೆ ಗಂಡನ ಪೂಜೆಗೆ ನಮ್ಮ ಭಾಗ್ಯದ ಬಾಳಿಗೆ 
ವರ ತರಲಿ ತರದಿರಲಿ ವರನಿವನು ನನಗಿರಲಿ 
ಅಂದವೇ ತುಳಸಿ ಗಂಧವೇ ಬದುಕು ಗಂಡನ ಸೇವೆಗೆ.. ನಮ್ಮ ಭಾಗ್ಯದ ಬಾಳಿಗೆ 
ವರ ತರಲಿ ತರದಿರಲಿ ನಗುನಗುತಾ ಜೊತೆಯಿರಲಿ 
ಮನಸೇ ಮಲ್ಲಿಗೆ ಒಲವೇ ಸಂಪಿಗೆ ಗಂಡನ ಪೂಜೆಗೆ ನಮ್ಮ ಭಾಗ್ಯದ ಬಾಳಿಗೆ 
--------------------------------------------------------------------------------------------------------

1 comment:

  1. ಉಳಿದ ಹಾಡುಗಳ ಸಾಹಿತ್ಯ ಬೇಕು

    ReplyDelete