1811. ಹೊಸ ನೀರು (೧೯೮೬)

ಹೊಸ ನೀರು ಚಲನಚಿತ್ರದ ಹಾಡುಗಳು 
  1. ನೀನೇ ನನ್ನ ಪ್ರೀತಿ ಹಕ್ಕಿ ಚಿನ್ನ 
  2. ನೀ ಇಂದು ಪ್ರೇಮ ವೀಣೆ 
  3. ಕೊರೆವ ಚಳಿಯಲಿ ವಿರಹ ಬಿಸಿಯಲಿ 
  4. ಒಲವು ತಂದ ಬೆಸುಗೆ ಇಂದು 
  5. ನಾವೆಲ್ಲಾ ಒಂದಾಗಿ ಅರಿತು ಬೆರೆತು 
ಹೊಸ ನೀರು (೧೯೮೬) - ನೀನೇ ನನ್ನ ಪ್ರೀತಿ ಹಕ್ಕಿ ಚಿನ್ನ 
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಜಾನಕೀ, ರಾಜಕುಮಾರ ಭಾರತಿ 

ನೀನೇ ನನ್ನ ಪ್ರೀತಿ ಹಕ್ಕಿ ಚಿನ್ನ  ಆಸೆ ತಂದ ಬೆಳ್ಳಿ ಚುಕ್ಕಿ ಚಿನ್ನ 
ಒಲಿವ ನಿನ್ನ ಗಡಿ ದಾಟುತ ಋತುಮಾನದ ಸವಿ ಹೀರುತ 
ಚೆಲುವಿನಲಿ ನಲಿಯುವ ಬಾ ಒಲವಿನಲಿ ಬೆರೆಯುವ ಬಾ 
ಚಿನ್ನ ಚಿನ್ನ ಚಿನ್ನ ಚಿನ್ನ 
ಎಲ್ಲೇ ಮೀರಿ ಕಾಡಬೇಡ ನನ್ನ ನಿನ್ನ ಎಲ್ಲ ಪ್ರೀತಿ ಮಾತು ಚೆನ್ನ 
ಹೊಸ ಬಾಳಿಗೆ ನೆಲೆ ನೀಡಲು ನನ ಆಸೆಗೆ ಗುರಿ ತೋರಲು 
ಚೆಲುವಲಿ ನಲಿಯುವೆ ಬಾ ಒಲವಲಿ ಬೆರೆಯುವೆ ಬಾ 
ಚಿನ್ನ ಚಿನ್ನ ಚಿನ್ನ ಚಿನ್ನ 

ಮಿಂಚಿ ಹೊಳೆವ ತಾರೆ ನೀನು ಕಣ್ಣ ಸೆಳೆವ ನೀರೇ ನೀನು 
ಗುರುತೇ ಇಡುವ ತುಂಟ ನೀನು ನಿನ್ನ ಬಲೆಗೆ ಬೀಳೆ ನಾನು 
ಕರೆದಿದೆ ಹರೆಯ ಬಯಕೆಯ ತಣಿಸು ಒಲುಮೆಯ ಗೆಳೆಯ ಸಹನೆಯ ಇರಿಸು 
ನೀನಿಂದೇ ಒಂದಾಗಿ ಬಾಹು ಬಂಧ ತುಂಬಿ ಚುಂಬಿಸು 
ಎಲ್ಲೇ ಮೀರಿ ಕಾಡಬೇಡ ನನ್ನ ನಿನ್ನ ಎಲ್ಲ ಪ್ರೀತಿ ಮಾತು ಚೆನ್ನ 
ಹೊಸ ಬಾಳಿಗೆ ನೆಲೆ ನೀಡಲು ನನ ಆಸೆಗೆ ಗುರಿ ತೋರಲು 
ಚೆಲುವಲಿ ನಲಿಯುವೆ ಬಾ ಒಲವಲಿ ಬೆರೆಯುವೆ ಬಾ 
ಚಿನ್ನ ಚಿನ್ನ ಚಿನ್ನ ಚಿನ್ನ 

ಬಣ್ಣ ಬಿರಿವ ಪೋರಿ ನೀನು ಚಿಮ್ಮಿ ನೆಗೆವ ಜಿಂಕೆ ನೀನು 
ಚಿಟ್ಟೆ ಹಿಡಿವ ಪೋರ ನೀನು ಬಾಷೇ ತೊಡುವ ಪರಿಯ ನೀನು 
ಭರವಸೆ ಕೊಡುವೆ ಸರಸವ ಬೆರೆಸು ಅರಳಿದೆ ಹೃದಯ ಅರಿತಿದೆ ಮನಸು 
ಎಂದೆಂದೂ ಹೀಗೆನೇ ಪ್ರೀತಿ ತೋರಿ ಬಾಲ ರಂಜಿಸು 
ನೀನೇ ನನ್ನ ಪ್ರೀತಿ ಹಕ್ಕಿ ಚಿನ್ನ  ಆಸೆ ತಂದ ಬೆಳ್ಳಿ ಚುಕ್ಕಿ ಚಿನ್ನ 
ಒಲಿವ ನಿನ್ನ ಗಡಿ ದಾಟುತ ಋತುಮಾನದ ಸವಿ ಹೀರುತ 
ಚೆಲುವಿನಲಿ ನಲಿಯುವ ಬಾ ಒಲವಿನಲಿ ಬೆರೆಯುವ ಬಾ 
ಚಿನ್ನ ಚಿನ್ನ ಚಿನ್ನ ಚಿನ್ನ 
---------------------------------------------------------------------------------------------------------
 
ಹೊಸ ನೀರು (೧೯೮೬) - ನೀ ಇಂದು ಪ್ರೇಮ ವೀಣೆ 
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಜಾನಕೀ, 

ನೀನೇ ಎಂದೂ ಪ್ರೇಮ ವೀಣೆ ನನ್ನೀ ಬಾಳಿಗೆ 
ಹೃದಯ ರಾಗಕೆ ಬೆರೆಯುವ ತಾನಕೆ ನೀನೇ ಶೃತಿಯಾದೆ 
ನೀನೇ ಎಂದೂ ಪ್ರೇಮ ವೀಣೆ ನನ್ನೀ ಬಾಳಿಗೆ 
ಹೃದಯ ರಾಗಕೆ ಬೆರೆಯುವ ತಾನಕೆ ನೀನೇ ಶೃತಿಯಾದೆ 
 
ನನ್ನಾಸೆ ಬಳ್ಳಿಗೆ ಆಸರೆಯಾದೆ ಬಂಜರು ಭೂಮಿಗೆ ರಸ ಗಂಗೆಯಾದೆ 
ನನ್ನಾಸೆ ಬಳ್ಳಿಗೆ ಆಸರೆಯಾದೆ ಬಂಜರು ಭೂಮಿಗೆ ರಸ ಗಂಗೆಯಾದೆ 
ಅರಳುವ ಹೂವಿಗೆ ಹೊಂಗನಸ ತಂದೆ 
ಅರಳುವ ಹೂವಿಗೆ ಹೊಂಗನಸ ತಂದೆ 
ನಿನ್ನಿಂದ ನಾನು ಹೊಸಲೋಕ ಕಂಡೆ 
ನೀನೇ ಎಂದೂ ಪ್ರೇಮ ವೀಣೆ ನನ್ನೀ ಬಾಳಿಗೆ 
ಹೃದಯ ರಾಗಕೆ ಬೆರೆಯುವ ತಾನಕೆ ನೀನೇ ಶೃತಿಯಾದೆ 
ಲಾಲಾ.. ಲಾಲಾಲಾ... ಲಲಾಲಾಲಾಲಾ... ಲಾಲಾ.. ಲಾಲಾಲಾ... 

ಬರಡಾದ ಬಾಳಿಗೆ ನಂದನವಾಗಿ ಬರಿದಾದ ಬಾನಿಗೆ ಪೌರ್ಣಿಮೆಯಾಗಿ 
ಬರಡಾದ ಬಾಳಿಗೆ ನಂದನವಾಗಿ ಬರಿದಾದ ಬಾನಿಗೆ ಪೌರ್ಣಿಮೆಯಾಗಿ 
ಏಕಾಂಗಿ ಜೀವಿಗೆ ಸಂಗಾತಿಯಾಗಿ 
ಏಕಾಂಗಿ ಜೀವಿಗೆ ಸಂಗಾತಿಯಾಗಿ ಎಂದೆಂದೂ ನಾನು ಸಂತೋಷ ಕೊಡುವೇ 
ನೀನೇ ಎಂದೂ ಪ್ರೇಮ ವೀಣೆ ನನ್ನೀ ಬಾಳಿಗೆ 
ಹೃದಯ ರಾಗಕೆ ಬೆರೆಯುವ ತಾನಕೆ ನೀನೇ ಶೃತಿಯಾದೆ 
ಲಾಲಾ.. ಲಾಲಾಲಾ... ಲಲಾಲಾಲಾಲಾ... ಲಾಲಾ.. ಲಾಲಾಲಾ... 
---------------------------------------------------------------------------------------------------------
 
ಹೊಸ ನೀರು (೧೯೮೬) - ಕೊರೆವ ಚಳಿಯಲಿ ವಿರಹ ಬಿಸಿಯಲಿ 
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ವಾಣಿಜಯರಾಂ 

----------------------------------------------------------------------------------------------------------
 
ಹೊಸ ನೀರು (೧೯೮೬) - ಒಲವು ತಂದ ಬೆಸುಗೆ ಇಂದು 
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಲೋಕೇಶ ಅಗಸನಕಟ್ಟೆ, ಗಾಯನ : ವಾಣಿಜಯರಾಂ, ರಮೇಶ 

----------------------------------------------------------------------------------------------------------
 
ಹೊಸ ನೀರು (೧೯೮೬) - ನಾವೆಲ್ಲಾ ಒಂದಾಗಿ ಅರಿತು ಬೆರೆತು 
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ ಕೋರಸ್ 

----------------------------------------------------------------------------------------------------------

No comments:

Post a Comment