- ಈ ನೋವಿನಲ್ಲೂ
- ಹಿಡಿವ ಸೂರ್ಯನ
ಸಿ.ಬಿ.ಐ.ಶಿವ (೧೯೯೧) - ಈ ನೋವಿನಲ್ಲೂ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ರುಧ್ರಮೂರ್ತಿ ಶಾಸ್ತ್ರೀ, ಗಾಯನ : ರಮೇಶ, ಸುಂದರ, ಕೋರಸ್
ಈ ನೋವಿನಲೂ ನಾವು ನಲಿದಾಡುವ ಪ್ರಜೆಗಳು
ಈ ನೋವಿನಲೂ ನಾವು ನಲಿದಾಡುವ ಪ್ರಜೆಗಳು
ಈ ಸಿರಿ ಮೆರೆಯುವ ಬಡದೇಶದ ಪ್ರಭುಗಳು
ತಿನ್ನೋದಕ್ಕೆ ಅನ್ನ ಇಲ್ಲ ನಿಲ್ಲೋದಕ್ಕೆ ಜಾಗ ಇಲ್ಲ
ಮಾಡೋದಕ್ಕೆ ಕೆಲಸ ಇಲ್ಲ ಜೇಬಿನಲಿ ಪೈಸಾ ಇಲ್ಲ..
ವರುಷಕ್ಕೆಲ್ಲ ರಜಾ
ಈ ನೋವಿನಲೂ ನಾವು ನಲಿದಾಡುವ ಪ್ರಜೆಗಳು
ಹದಿಹರೆಯದಲ್ಲಿ ಮನಕೆರಳಿಸುವ ಸವಿಗನಸ್ಸುಗಳ ಹೊಸ ಬಯಕೆ
ಎಲ್ಲ ಆಸೆಗಳು ಹುಸಿಯಾಗಿರಲು ನಮ್ಮ ಬದುಕು ಬುಡುಬುಡಿಕೆ
ಎಲ್ಲ ಸರಕುಗಳು ಇಲ್ಲಿ ಕಲಬೆರೆಕೆ ಬಡತನದಲ್ಲಿ ಚಡಪಡಿಕೆ
ನಾವೇ ಇಲ್ಲಿ ಶ್ರೀಮಾನ್ ಮೇರಾ ಭಾರತ ಮಹಾನ್
ನಾವೇ ಇಲ್ಲಿ ಶ್ರೀಮಾನ್ ಮೇರಾ ಭಾರತ ಮಹಾನ್ ದಿನವೂ ನಮಗೆ ಮಜಾ
ಈ ನೋವಿನಲೂ ನಾವು ನಲಿದಾಡುವ ಪ್ರಜೆಗಳು
ಈ ಸಿರಿ ಮೆರೆಯುವ ಬಡದೇಶದ ಪ್ರಭುಗಳು
ನವಭಾರತ ಪ್ರಜೆಯಾಗಿರಲು ಬಲು ಸ್ವಾರ್ಥಕವೋ ನಮ್ಮ ಜನುಮ
ಸುಖದುಃಖಗಳು ಹಗಲಿರುಳಂತೆ ಬಂದು ಹೋಗುವುದೇ ವಿಧಿ ನಿಯಮ
ಎಲ್ಲ ಸಮಯದಲ್ಲೂ ಸೋಲುಗೆಲುವಿನಲ್ಲೂ ನಗುವುದೇ ಬದುಕಿನ ಮರ್ಮ
ಜಾಲೀ ಲೈಫಿಗೆಲ್ಲ ಯಾರು ಹಂಗು ಇಲ್ಲ
ಜಾಲೀ ಲೈಫಿಗೆಲ್ಲ ಯಾರು ಹಂಗು ಇಲ್ಲ ಮಾಡು ಮಗನೇ ಮಜಾ...
ಈ ನೋವಿನಲೂ ನಾವು ನಲಿದಾಡುವ ಪ್ರಜೆಗಳು
ಈ ಸಿರಿ ಮೆರೆಯುವ ಬಡದೇಶದ ಪ್ರಭುಗಳು
ತಿನ್ನೋದಕ್ಕೆ ಅನ್ನ ಇಲ್ಲ ನಿಲ್ಲೋದಕ್ಕೆ ಜಾಗ ಇಲ್ಲ
ಮಾಡೋದಕ್ಕೆ ಕೆಲಸ ಇಲ್ಲ ಜೇಬಿನಲಿ ಪೈಸಾ ಇಲ್ಲ..
ವರುಷಕ್ಕೆಲ್ಲ ರಜಾ
-----------------------------------------------------------------------------------------------
ಸಿ.ಬಿ.ಐ.ಶಿವ (೧೯೯೧) - ಹಿಡಿವ ಸೂರ್ಯನ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಶ್ರೀರಂಗ, ಗಾಯನ : ರಮೇಶ, ಕೋರಸ್
ಹಿಡಿವ ಸೂರ್ಯನ್ನ ಹಿಡಿವ ಚಂದ್ರನ್ನ ಮಾಲೆ ಕಟ್ಟುವ ತಾರೆಗಳಿಂದ
ಧುಮುಕುವ ನಾವು ಬಾನಿಂದ
ಹಿಡಿವ ಸೂರ್ಯನ್ನ ಹಿಡಿವ ಚಂದ್ರನ್ನ ಮಾಲೆ ಕಟ್ಟುವ ತಾರೆಗಳಿಂದ
ಧುಮುಕುವ ನಾವು ಬಾನಿಂದ
ಕೊಡು ಪ್ರಣಯ ಸುಖವನ್ನು ಕೊಡು ಸುಮವೇ ನಾಚಿಕೆ ಬಿಡು
ಪ್ರೇಮಗೀತೆಯ ಕೂಗುತ ಹಾಡು ಲೋಕವೇ ನಮ್ಮದು
ಇದೇ ವಯಸ್ಸು ಎಂದರೆ ಇದೇ ಸೊಗಸು ಎಂದರೆ ಇದೇ
ಪ್ರಾಯ ಉಕ್ಕುವ ಕಾಲದಿ ಎನ್ನ ಹಾಡುವ ಹಾಡು ಇದೆ
ಹಿಡಿವ ಸೂರ್ಯನ್ನ ಹಿಡಿವ ಚಂದ್ರನ್ನ ಮಾಲೆ ಕಟ್ಟುವ ತಾರೆಗಳಿಂದ
ಧುಮುಕುವ ನಾವು ಬಾನಿಂದ
ಆಹಾ... ಚಪಲ ಕೆಣಕಿದೆ ನನ್ನ ಮನವು ಕೆರಳಿದೆ ಚೆನ್ನ
ವಿರಹ ತಾಳದೆ ಸೋತೆನು ರನ್ನ ಏಕೋ ಕಾಣೆನು ನಾ...
ಕೊಡು ಚೆಲುವೆ ಮನಸ್ಸನು ಕೊಡು ಸನಿಹ ಸುಖವನ್ನು ಕೊಡು
ಮಾತನಾಡದೇ ಮೌನದಿ ನೋಡು ಎಲ್ಲವು ನಿನ್ನದು
ಹಿಡಿವ ಸೂರ್ಯನ್ನ ಹಿಡಿವ ಚಂದ್ರನ್ನ ಮಾಲೆ ಕಟ್ಟುವ ತಾರೆಗಳಿಂದ
ಧುಮುಕುವ ನಾವು ಬಾನಿಂದ
ಇದೆ ಹಸಿರು ಮುಕ್ತಿಯು ಇದೆ ನಮಗೆ ಹಾಸಿಗೆ ಇದೆ
ಪ್ರಣಯ ಗೀತೆಯ ಹಾಡುತ ನಾನು ಉರುಳುತ ಹಾಡಲೇ
ಆಹ್ ತುಟಿಯ ತುಟಿಯಲಿ ಇಡು ಕೆನ್ನೆ ಕೆನ್ನೆಯಲಿಡು
ಛಳಿಯ ಓಡಿಸಿ ತುಂಬುತ ಬಿಸಿಯ ಅಸೆ ಪೂರೈಸು
ಹಿಡಿವ ಸೂರ್ಯನ್ನ ಹಿಡಿವ ಚಂದ್ರನ್ನ ಮಾಲೆ ಕಟ್ಟುವ ತಾರೆಗಳಿಂದ
ಧುಮುಕುವ ನಾವು ಬಾನಿಂದ
--------------------------------------------------------------------------------------------------------------
No comments:
Post a Comment