1824. ಮಾತೃವಾತ್ಸಲ್ಯ (೧೯೮೮)

ಮಾತೃವಾತ್ಸಲ್ಯ ಚಲನಚಿತ್ರದ ಹಾಡುಗಳು 
  1. ಓ ನನ್ನ ಕಂದ 
  2. ಈ ಲೋಕವನು 
  3. ಹೂವಾಗಲಿ ಮೊಗ 
  4. ಧರ್ಮಭೂಮಿಯಲಿ 
  5. ಬಾರೋ ಓ ಮಾವ 
ಮಾತೃವಾತ್ಸಲ್ಯ (೧೯೮೮) - ಓ ನನ್ನ ಕಂದ 
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ವಾಣಿಜಯರಾಂ, ಬಿ.ಆರ್.ಛಾಯ 

ಓ ನನ್ನ ಕಂದ ಇನ್ನೂ ಕೋಪವೇಕೆ 
ಓ ಮುದ್ದು ಕಂದ ಇಲ್ಲೇ ಇರುವೆ ಸಾಕೆ 
ನಿನ್ನ ಬಿಟ್ಟು ಹೋಗಲ್ಲ ನಾನು ಎಂದಿಗೂ 
ನಿನ್ನ ಬಿಟ್ಟು ಹೋಗಲ್ಲ ನಾನು ಎಂದಿಗೂ 
ನಂಬು ನನ್ನನ್ನೂ ಚಿನ್ನ ನಂಬು ನನ್ನನ್ನೂ 
ಓ ನನ್ನ ಕಂದ ಇನ್ನೂ ಕೋಪವೇಕೆ 
ಓ ಮುದ್ದು ಕಂದ ಇಲ್ಲೇ ಇರುವೆ ಸಾಕೆ 

ಅಮ್ಮಾ ಕರೆದಾಗ ನಿನ್ನ ಬಾ ಬಾ ಎಂದಾಗ ಹೀಗೇಕೆ ದುರಾಗಿ ನೀ ಓಡುವೇ 
ಕೈಯ್ಯ ಹಿಡಿದಾಗ ನಿನ್ನ ಬಳಿಗೆ ಸೆಳೆದಾಗ ಹೀಗೇಕೆ ದುರುದುರುನೇ ನೀ ನೋಡುವೆ 
ತಾಯಿಯ ಪ್ರೀತಿಗೆ ನಿನ್ನ ಈ ಮೌನ ಸರಿಯೇ... 
ತಾಯಿಯ ಪ್ರೀತಿಗೆ ನಿನ್ನ ಈ ಮೌನ ಸರಿಯೇ... 
ಮಾತಾಡು ಬಾ ಒಂದು ಮಾತಾಡು ಬಾ...  ಹೂಂ 
ಮಾತಾಡು ಬಾ ಒಂದು ಮಾತಾಡು ಬಾ 
ಓ ನನ್ನ ಕಂದ ಇನ್ನೂ ಕೋಪವೇಕೆ 
ಓ ಮುದ್ದು ಕಂದ ಇಲ್ಲೇ ಇರುವೆ ಸಾಕೆ 
ನಿನ್ನ ಬಿಟ್ಟು ಹೋಗಲ್ಲ ನಾನು ಎಂದಿಗೂ 
ನಿನ್ನ ಬಿಟ್ಟು ಹೋಗಲ್ಲ ನಾನು ಎಂದಿಗೂ 
ನಂಬು ನನ್ನನ್ನೂ ಚಿನ್ನ ನಂಬು ನನ್ನನ್ನೂ 
ಹ್ಹಾ... ನಂಬು ನನ್ನನ್ನೂ ಚಿನ್ನ ನಂಬು ನನ್ನನ್ನೂ 

ನೀನು ಬಂಗಾರಿ ನನ ಮುದ್ದು ಬಂಗಾರಿ ಈ ಮನೆಗೆ ನೀ ತಂದೆ ಬೆಳದಿಂಗಳು 
ನೀನು ಮುತ್ತಂತೇ ನಿನ್ನ ಮಾತು ಮುತ್ತಂತೇ ಬಲು ಅಂದ ಈ ನೋಟ ಈ ಕಂಗಳು 
ಸುಳ್ಳು ಹೇಳೇನೂ... ಹ್ಹಾ...   ನೀನೇ ನನ್ನ ಪ್ರಾಣ 
ಸುಳ್ಳು ಹೇಳೇನು ನೀನೇ ನನ್ನ ಪ್ರಾಣ ಬಾ ಹತ್ತಿರ ಕಂದ ಬಾ ಹತ್ತಿರ...  
ಬಾ ಹತ್ತಿರ ಕಂದ ಬಾ ಹತ್ತಿರ...  ಹ್ಹಾ... 

ಓ ನನ್ನ ಅಮ್ಮ ಇನ್ನೂ ಕೋಪ ಇಲ್ಲಾ 
ಓ ನನ್ನ ಅಮ್ಮ ಇನ್ನೂ ಕೋಪ ಇಲ್ಲಾ 
ಇನ್ನೂ ದೂರ ಹೋಗಲ್ಲ ನಾನೆಂದಿಗೂ 
ಇನ್ನೂ ದೂರ ಹೋಗಲ್ಲ ನಾನೆಂದಿಗೂ 
ನಂಬು ನನ್ನನ್ನೂ ಅಮ್ಮಾ... ನಂಬು ನನ್ನನ್ನೂ 
ನಂಬು ನನ್ನನ್ನೂ ಅಮ್ಮಾ... ನಂಬು ನನ್ನನ್ನೂ 
ಲಾಲಾಲಲಲಲ ಲಾಲಾಲಲಲಲ ಲಾಲಾಲಲಲಲ 
-----------------------------------------------------------------------------------------------------

ಮಾತೃವಾತ್ಸಲ್ಯ (೧೯೮೮) - ಈ ಲೋಕವನು 
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ, ಗಾಯನ : ಎಸ್.ಪಿ.ಬಿ 

ಈ ಲೋಕವನು ನೀ ಆಳುವೆಯಾ ಅಲ್ಲೇಕೆ ಇರುವೇ ... 
ಈ ಕಂದನನು ನೀ ರಕ್ಷಿಸಲು ಇಲ್ಲೆಂದು ಬರುವೇ ... 
ಎಂದೂ ಕಾಣದಂಥ ನೋವು ಕಂಡೇನು ದೇವಾ..  ಕೊನೆಗೆ ನಿನಗೆ ಶರಣು ಬಂದೇನೂ...  
ಈ ಲೋಕವನು ನೀ ಆಳುವೆಯಾ ಅಲ್ಲೇಕೆ ಇರುವೇ ... 
ಈ ಕಂದನನು ನೀ ರಕ್ಷಿಸಲು ಇಲ್ಲೆಂದು ಬರುವೇ ... 
ಎಂದೂ ಕಾಣದಂಥ ನೋವು ಕಂಡೇನು ದೇವಾ..  ಕೊನೆಗೆ ನಿನಗೆ ಶರಣು ಬಂದೇನೂ...  

ಮುದ್ದಾದ ಮಗುವು ಮನೆ ಮಂದಿರದ ಬೆಳಕಾಯಿತು 
ಕಂಡಾಗ ಅದನು ಈ ಬದುಕೆಲ್ಲಾ ಹಸಿರಾಯಿತು 
ಇಂದೇಕೆ ಹೀಗೆ ನೋವನು ನೀ ನೀಡಿದೆ 
ಮುಕ್ಕಣ್ಣ ಶಿವನೇ ನಿನ್ ಕಣ್ಣೇಕೆ ಕುರುಡಾಗಿದೆ 
ಮೇಲಿಂದ ಇಳಿದು ಬರಬೇಕು ಕೆಳಗೆ ಚೈತನ್ಯ ಕೊಡಲು ಈ ನನ್ನ ಕುಡಿಗೆ   
ನನ್ನಾಸೆ ಈಡೇರಿಸು ಈ ಭಯವನ್ನು ನೀ ಓಡಿಸು 
ಈ ಲೋಕವನು ನೀ ಆಳುವೆಯಾ ಅಲ್ಲೇಕೆ ಇರುವೇ ... 
ಈ ಕಂದನನು ನೀ ರಕ್ಷಿಸಲು ಇಲ್ಲೆಂದು ಬರುವೇ ... 
ಎಂದೂ ಕಾಣದಂಥ ನೋವು ಕಂಡೇನು ದೇವಾ..  ಕೊನೆಗೆ ನಿನಗೆ ಶರಣು ಬಂದೇನೂ...  

ಸಂತೈಸಿ ನಲಿದ ಈ ಮನೆಗಿಂದು ಬರಿದಾಗಿದೆ 
ಉಲ್ಲಾಸ ಮೆರೆದ ಹೊಂಗನಸಿಂದು ಮರೆಯಾಗಿದೆ 
ಬಾಳೆಂಬ ಬನದಾ ಹೂಬಳ್ಳಿ ತೊಳಲಾಡಿದೆ 
ಎಲ್ಲೆಲ್ಲೂ ಇರುಳ ಕಾರ್ಮೋಡವೂ ಸುಳಿದಾಡಿದೆ 
ಬಳಿ ಓಡಿ ಬಂದೆ ಓ ನನ್ನ ತಂದೆ ನನದೆಲ್ಲವನು ಮುಡಿಪಾಗಿ ತಂದೆ 
ಬೆಳಕನ್ನು ನೀ ತೋರಿಸು ನನ್ನ ತಪ್ಪನ್ನೂ ನೀ ಮನ್ನಿಸು 
ಈ ಲೋಕವನು ನೀ ಆಳುವೆಯಾ ಅಲ್ಲೇಕೆ ಇರುವೇ ... 
ಈ ಕಂದನನು ನೀ ರಕ್ಷಿಸಲು ಇಲ್ಲೆಂದು ಬರುವೇ ... 
ಎಂದೂ ಕಾಣದಂಥ ನೋವು ಕಂಡೇನು ದೇವಾ..  ಕೊನೆಗೆ ನಿನಗೆ ಶರಣು ಬಂದೇನೂ...  
-----------------------------------------------------------------------------------------------------

ಮಾತೃವಾತ್ಸಲ್ಯ (೧೯೮೮) - ಹೂವಾಗಲಿ ಮೊಗ 
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ವಾಣಿಜಯರಾಂ, ಎಸ್.ಪಿ.ಬಿ 

ಹೂವಾಗಲಿ ಮೊಗ ಹೂವಾಗಲಿ ಆನಂದ ಎದೆಯಲ್ಲಿ ಕಡಲಾಗಲೀ 
ಹೂವಾಗಲಿ ಮೊಗ ಹೂವಾಗಲಿ ಆನಂದ ಎದೆಯಲ್ಲಿ ಕಡಲಾಗಲೀ 
ಈ ವೇದನೇ ದೂರಾಗಲೀ ... 
ಹೂವಾಗಲಿ ಮೊಗ ಹೂವಾಗಲಿ ಆನಂದ ಎದೆಯಲ್ಲಿ ಕಡಲಾಗಲೀ 

ಸತಿಯು ನಗುತಲಿರಲು ಸರಸ ಅರಳುತಿರಲು ಮಾತೆಲ್ಲ ಜೇನಂತೆ ಸವಿಯಾಗಲು 
ಸತಿಯು ನಗುತಲಿರಲು ಸರಸ ಅರಳುತಿರಲು ಮಾತೆಲ್ಲ ಜೇನಂತೆ ಸವಿಯಾಗಲು 
ಚಿಂತೆಯೂ ಇಲ್ಲ ವೇದನೇ  ಇಲ್ಲ ನೆಮ್ಮದಿ ಒಂದೇ ಬಾಳಿನಲ್ಲೆಲ್ಲಾ 
ಸ್ವರ್ಗ.. ನಮ್ಮ ಸಂಸಾರವೂ 
ಹೂವಾಗಲಿ ಮೊಗ ಹೂವಾಗಲಿ ಆನಂದ ಎದೆಯಲ್ಲಿ ಕಡಲಾಗಲೀ 
ಈ ವೇದನೇ ದೂರಾಗಲೀ ... 
ಹೂವಾಗಲಿ ಮೊಗ ಹೂವಾಗಲಿ ಆನಂದ ಎದೆಯಲ್ಲಿ ಕಡಲಾಗಲೀ 
 
ನಿಜವ ನುಡಿದೆ ಇನಿಯ ಒಲಿದು ಬಂದು ಸನಿಹ ನಿನ್ನಿಂದ ನೋವೆಲ್ಲಾ ದೂರಾಯಿತು 
ನಿಜವ ನುಡಿದೆ ಇನಿಯ ಒಲಿದು ಬಂದು ಸನಿಹ ನಿನ್ನಿಂದ ನೋವೆಲ್ಲಾ ದೂರಾಯಿತು 
ಬಿಸಿಲಲಿ ಬಂದ ನೆರಳಿನ ಹಾಗೆ ಇರುಳಲಿ ಕಂಡ ಬೆಳಕಿನ ಹಾಗೆ ಬಂದೆ ನನ್ನ ಸಂಗಾತಿಯೇ... 
ಹೂವಾಗಲಿ ಮೊಗ ಹೂವಾಗಲಿ ಆನಂದ ಎದೆಯಲ್ಲಿ ಕಡಲಾಗಲೀ 
ಈ ವೇದನೇ ದೂರಾಯಿತು ... 
ಲಾಲಾಲಾಲಾಲಾಲ ಲಾಲಾಲಾಲಾಲಾಲ  ಲಾಲಾಲಾಲಾಲಾಲ ಲಾಲಾಲಾಲಾಲಾಲ 
-----------------------------------------------------------------------------------------------------

ಮಾತೃವಾತ್ಸಲ್ಯ (೧೯೮೮) - ಧರ್ಮಭೂಮಿಯಲಿ 
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ 

ಧರ್ಮಭೂಮಿಯಲಿ ಮೋಸ ಜಯಸಿದ ತಪ್ಪಿಗೆ 
ಓ.. ನ್ಯಾಯದೇವತೆ ನಡೆದು ಬಾರೇ ... ಈ ನೇಣಿಗೆ 
ಧರ್ಮಭೂಮಿಯಲಿ ಮೋಸ ಜಯಸಿದ ತಪ್ಪಿಗೆ 
ಓ.. ನ್ಯಾಯದೇವತೆ ನಡೆದು ಬಾರೇ ... ಈ ನೇಣಿಗೆ 
ದಾರಿ ತಪ್ಪಿದ ಪಯಣ.... ಇದು ಧರ್ಮಕೆ ಒದಗಿದ ಮರಣ 
ನೀತಿ ನೀರಿಗೇ ... ಅನ್ಯಾಯ ತೇರಿಗೆ .... 
ಧರ್ಮಭೂಮಿಯಲಿ ಮೋಸ ಜಯಸಿದ ತಪ್ಪಿಗೆ 
ಓ.. ನ್ಯಾಯದೇವತೆ ನಡೆದು ಬಾರೇ ... ಈ ನೇಣಿಗೆ 
ಆ ಆಆಆ ಆಅ ಆಆಆಆ ಆ ಆಆಆ ಆಅ ಆಆಆಆ 

ತಾಯಾಗಿ ಕಾಲಿಟ್ಟ ಕೈಗಳು ಸುಳ್ಳು ಸಾಕ್ಷಿಗಳ ಸಂಕೋಲೆ ಧರಿಸಲು 
ಈ ಮಾತೃವಾತ್ಸಲ್ಯ ಧಾರೆಗೇ ..  
ಇಂದು ಸೆರೆಯಲ್ಲಿ ಪಾಪಗಳ ಮೈಲಿಗೆ 
ಸತ್ಯಕೆ ಜಯವಿದೆ ಎಂಬ ಅಳುಕದ ನಂಬಿಕೆ 
ಕುಸಿದರೇ ಗತಿಯೇನೆಂಬ ಅರಿಯದ ಅಂಜಿಕೆ 
ತಂದವನ್ಯಾರೋ ಬಾರೋ ಇಲ್ಲಿ ನೀನೇ ನೇಣಿಗೇ 
ಧರ್ಮಭೂಮಿಯಲಿ ಮೋಸ ಜಯಸಿದ ತಪ್ಪಿಗೆ 
ಓ.. ನ್ಯಾಯದೇವತೆ ನಡೆದು ಬಾರೇ ... ಈ ನೇಣಿಗೆ 
ದಾರಿ ತಪ್ಪಿದ ಪಯಣ ಇದು ಧರ್ಮಕೆ ಒದಗಿದ ಮರಣ 
ನೀತಿ ನೀರಿಗೇ ... ಅನ್ಯಾಯ ತೇರಿಗೆ ....  
ಆ ಆಆಆ ಆಅ ಆಆಆಆ ಆ ಆಆಆ ಆಅ ಆಆಆಆ 

ಈ ಬಾಳ ಚದುರಂಗ ಚದುರಿದೆ ಇನ್ನೂ ವಿಧಿ ಇಲ್ಲ 
ಈ ಆಟ ಮುಗಿಸದೇ ಗೆಲುವೆಂಬ ಮಾತಿಲ್ಲ ಬಾಳಿಗೆ 
ಇಲ್ಲಿ ಹೊಣೆ ಯಾರೋ.. ತಿಳಿದಿಲ್ಲ ಸೋಲಿಗೆ 
ಬಂದವರೆಲ್ಲರ ಕಥೆಗೆ ಅಂತ್ಯವಾ ಬರೆಯುವ 
ಮೋಹದ ತಂತಿಯ ಮಿಟಿಸಿ ಕಡಿಯಲು ತಿಳಿಸುವ 
ಕಣ್ಣಿಗೆ ಕಾಣದ ನಾಟಕಕಾರನೇ ಬಾರೋ ನೇಣಿಗೇ .. 
ಧರ್ಮಭೂಮಿಯಲಿ ಮೋಸ ಜಯಸಿದ ತಪ್ಪಿಗೆ 
ಓ.. ನ್ಯಾಯದೇವತೆ ನಡೆದು ಬಾರೇ ... ಈ ನೇಣಿಗೆ 
ದಾರಿ ತಪ್ಪಿದ ಪಯಣ ಇದು ಧರ್ಮಕೆ ಒದಗಿದ ಮರಣ 
ನೀತಿ ನೀರಿಗೇ ... ಅನ್ಯಾಯ ತೇರಿಗೆ ....  
ನೀತಿ ನೀರಿಗೇ ... ಅನ್ಯಾಯ ತೇರಿಗೆ ....  
-----------------------------------------------------------------------------------------------------

ಮಾತೃವಾತ್ಸಲ್ಯ (೧೯೮೮) - ಬಾರೋ ಓ ಮಾವ 
ಸಂಗೀತ : ಶಂಕರ ಗಣೇಶ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಮಂಜುಳಗುರುರಾಜ, ಕೋರಸ್ 

ಬಾರೋ.... ಓ..ಮಾವ ಹೀರೋ ... ಈ ಚೆಲುವಾ 
ನಿನ್ನಯ ನೋಟದಲಿ ಆಸೆಯ ತುಂಬಿದೆ 
ಮನ್ಮಥನಾಟದಲಿ ರಂಗೆಲ್ಲಾ ಕಂಡಿದೆ 
ಚೆಲುವಿದೆ... ನಲಿವಿದೆ... ಸೊಗಸಿದೆ... ಸುಖವಿದೆ... 
ಬಾರೋ.... ಓ..ಮಾವ ಹೀರೋ ... ಈ ಚೆಲುವಾ 
ನಿನ್ನಯ ನೋಟದಲಿ ಆಸೆಯ ತುಂಬಿದೆ 
ಮನ್ಮಥನಾಟದಲಿ ರಂಗೆಲ್ಲಾ ಕಂಡಿದೆ 
ಚೆಲುವಿದೆ... ನಲಿವಿದೆ... ಸೊಗಸಿದೆ... ಸುಖವಿದೆ... 

ಹತ್ತಿರ ಬಾರದೇ ಕನಸನು ಕಾಣುವೆ ಏತಕೆ... ಹ್ಹಾ... 
ಸಂಕೋಚವೂ ನಿನಗೇತಕೆ ಸಂಗಾತಿಯೇ... 
ಹತ್ತಿರ ಬಾರದೇ ಕನಸನು ಕಾಣುವೆ ಏತಕೆ... ಹ್ಹಾ... 
ಸಂಕೋಚವೂ ನಿನಗೇತಕೆ ಸಂಗಾತಿಯೇ... ಅಹ್ಹಹ್ಹಾ... 
ಹೊತ್ತೇರಿದಾಗ... ಮತ್ತನ್ನು ತೋರೋ... ಮತ್ತೇರಿದಾಗ ಮುತ್ತನ್ನು ಸವಿಯೋ... 
ಪ್ರೀತಿ ಮಾಡೋ... ಹಠ ಮಾಡೋ ... 
ಹೇ... ಬಾರೋ.... ಓ..ಮಾವ ಹೀರೋ ... ಈ ಚೆಲುವಾ 
ನಿನ್ನಯ ನೋಟದಲಿ ಆಸೆಯ ತುಂಬಿದೆ 
ಮನ್ಮಥನಾಟದಲಿ ರಂಗೆಲ್ಲಾ ಕಂಡಿದೆ 
ಚೆಲುವಿದೆ... ನಲಿವಿದೆ... ಸೊಗಸಿದೆ... ಸುಖವಿದೆ... 

ಹೆಣ್ಣಿನ ಕಾಮನ ಕಾನನ ಮೋಹವ ಮೂಡದೆ 
ಶೃಂಗಾರದ ಆಲಿಂಗನ ನಿನಗಾಗಿಯೇ... ಹ್ಹಾ... 
ಹೆಣ್ಣಿನ ಕಾಮನ ಕಾನನ ಮೋಹವ ಮೂಡದೆ 
ಶೃಂಗಾರದ ಆಲಿಂಗನ ನಿನಗಾಗಿಯೇ...... 
ನನ್ನೆಲ್ಲ ಸೊಬಗು ಕಣ್ತುಂಬ ನೋಡು ಸಂತೋಷದಿಂದ ಚಕ್ಕಂದ ಕಾಣೋ 
ಸಂಗ ಸೇರೋ... ಸುಖವ ತಾರೋ... ಜೂಜುಜುಬಿ   ಜೂಜುಜುಬಿ   
ಹೇ... ಬಾರೋ.... ಓ..ಮಾವ ಹೀರೋ ... ಈ ಚೆಲುವಾ 
ನಿನ್ನಯ ನೋಟದಲಿ ಆಸೆಯ ತುಂಬಿದೆ 
ಮನ್ಮಥನಾಟದಲಿ ರಂಗೆಲ್ಲಾ ಕಂಡಿದೆ 
ಚೆಲುವಿದೆ... ನಲಿವಿದೆ... ಸೊಗಸಿದೆ... ಸುಖವಿದೆ... 
-----------------------------------------------------------------------------------------------------

No comments:

Post a Comment