438. ಬೃಂದಾವನ (1969)

ಬೃಂದಾವನ ಚಲನಚಿತ್ರದ ಹಾಡುಗಳು 
  1. ಮನೆಯೇ ಬೃಂದಾವನ ಮನಸೇ ಸುಖ ಸಾಧನಾ
  2. ನನ್ನ ಮಾತ ಕೇಳಿರಿ 
  3. ನೀ ಎಲ್ಲಿ ಓಡುವೇ .. 
  4. ಗಾಳಿ ಬೀಸಿದೆ 
  5. ಕುಂಕುಮ ಕೊಟ್ಟು ಹೂವು ಕೊಟ್ಟು 
ಬೃಂದಾವನ (1969) - ಮನೆಯೇ ಬೃಂದಾವನ ಮನಸೇ ಸುಖ ಸಾಧನಾ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಚಿ.ಉದಯಶಂಕರ್  ಹಾಡಿದವರು: ಬಿ.ಕೆ.ಸುಮಿತ್ರ

ಮನೆಯೇ ಬೃಂದಾವನ ಮನಸೇ ಸುಖ ಸಾಧನಾ...
ಮನೆಯೇ ಬೃಂದಾವನ ಮನಸೇ ಸುಖ ಸಾಧನಾ... ಆನಂದ ಜೀವನ ನಗುತಿರಲು ಅನುದಿನ
ಮನೆಯೇ ಬೃಂದಾವನ

ಗುಡಿಗೆ ಕಲಶದಂತೆ ಮನೆಗೆ ದೀಪದಂತೆ ...
ಗುಡಿಗೆ ಕಲಶದಂತೆ ಮನೆಗೆ ದೀಪದಂತೆ ... ಮರಕೆ ಹಸುರಿನಂತೆ ಮಡದಿ ಬಾಳಿಗಂತೆ
ಮನೆಯೇ ಬೃಂದಾವನ ಮನಸೇ ಸುಖ ಸಾಧನಾ...
ಮನೆಯೇ ಬೃಂದಾವನ

ಹೆಣ್ಣು ಹೂವಿನಂತೆ ಆ ಹೂವು ಗಂಡಿಗಂತೆ
ಹೆಣ್ಣು ಹೂವಿನಂತೆ ಆ ಹೂವು ಗಂಡಿಗಂತೆ ಹೂವು ಬಾಡದಿರುವ ಸ್ಥಳವೇ ಸ್ವರ್ಗದಂತೆ
ಮನೆಯೇ ಬೃಂದಾವನ ಮನಸೇ ಸುಖ ಸಾಧನಾ
ಮನೆಯೇ ಬೃಂದಾವನ

ಮನಸು ಮನಸ ಬೆರೆತು ಹೃದಯ ಹೃದಯವರಿತು
ಮನಸು ಮನಸ ಬೆರೆತು ಹೃದಯ ಹೃದಯವರಿತು ಹೆಣ್ಣು ಗಂಡು ಕಲೆತು ಬಾಳಾ ಸಾಗಿಸಿರುವ
ಮನೆಯೇ ಬೃಂದಾವನ ಮನಸೇ ಸುಖ ಸಾಧನಾ
ಮನೆಯೇ ಬೃಂದಾವನ ಮನಸೇ ಸುಖ ಸಾಧನಾ ಆನಂದ ಜೀವನ ನಗುತಿರಲು ಅನುದಿನ
ಮನೆಯೇ ಬೃಂದಾವನ
--------------------------------------------------------------------------------------------------------------------------

ಬೃಂದಾವನ (1969) - ನನ್ನ ಮಾತಾ ಕೇಳಿರಿ 
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಚಿ.ಉದಯಶಂಕರ್  ಹಾಡಿದವರು: ಪಿ.ಬಿ.ಶ್ರೀನಿವಾಸ 

ರೀ.. ರಿಕುಮಾರೀ ನನ್ನ ಮಾತ ಕೇಳಿರಿ 
ರೀ.. ರಿಕುಮಾರೀ ನನ್ನ ಮಾತ ಕೇಳಿರಿ 
ಒಂಟಿಯಾಗಿ ನೀವ ಹೋಗಬೇಡರಿ ತುಂಟರಿರುವ ದಾರೀ ...
ಬಲು ತುಂಟರಿರುವ ದಾರೀ ..

ಹದಿನೆಂಟು ವಯಸು ತಾರುಣ್ಯ ಸೊಗಸು ಡೋಲಾಯಮಾನ ಮನಸೂ
ಮಾತಾಡೇ ಮುನಿಸೂ ಮಾತಲ್ಲೇ ಬೀರಿಸು ಕಾರಣವೂ ಇದುವೇ ವಯಸ್ಸೂ ..

ತಾಳಿ ನಾ ಬರುವೇ ಜೋಡಿಯಾಗಿರುವೇ
ತಾಳಿ ನಾ ಬರುವೇ ಜೋಡಿಯಾಗಿರುವೇ ಅಕ್ಕಪ್ಪಕ್ಕದ ಮಿಕ್ಕ ಹುಡುಗರ ಆಲಿಸುತ ಮುನ್ನೆಡುವೇ ..
ರೀ.. ರಿಕುಮಾರೀ ನನ್ನ ಮಾತ ಕೇಳಿರಿ 
ರೀ.. ರಿಕುಮಾರೀ ನನ್ನ ಮಾತ ಕೇಳಿರಿ

ನಟರೆಂದೂ ನೆನೆದೂ ಭ್ರಮೆಯಿಂದ ಅಲೆದೂ ಬರುವಂತ ಯುವಕರಿಂದೂ
ನಿನ್ನಂದ ಕಂಡೂ ಬಲು ಮೋಹಗೊಂಡು ಮನೆವರೆಗೂ ಹಿಂದೆ ಬಂದೂ

ಶಿಳ್ಳೇ ಹಾಕುವರೂ ಗೇಲಿ ಮಾಡುವರೂ
ಶಿಳ್ಳೇ ಹಾಕುವರೂ ಗೇಲಿ ಮಾಡುವರೂ ಸುಮ್ಮನ್ನೇ ಇದ್ದರೇ ಸಮ್ಮತಿ ಎಂದೂ ಜಡೆಯನೇ ಎಳೆಯುವರೂ..
ರೀ.. ರಿಕುಮಾರೀ ನನ್ನ ಮಾತ ಕೇಳಿರಿ 
ರೀ.. ರಿಕುಮಾರೀ ನನ್ನ ಮಾತ ಕೇಳಿರಿ

ನಿಮಗಂದ ಕೊಟ್ಟ ನನಗಾಸೇ ಕೊಟ್ಟ ಆ ದೇವ ನೋಡಿ ಬಿಟ್ಟಾ
ಕಣ್ಣೆರಡು ಕೊಟ್ಟ ಅವಗೇನೂ ನಷ್ಟ ಅದರಿಂದ ಇಷ್ಟೂ ಕಷ್ಟ

ಇನ್ನೂ ತಾಳೇನೂ ಒಂಟಿ ಬಾಳೇನೂ
ಇನ್ನೂ ತಾಳೇನೂ ಒಂಟಿ ಬಾಳೇನೂ ಓಕೇ ಎಂದರೇ ಸರ್ಗವ ಈಗಲೇ ಭೂಮಿಗೇ ಇಳಿಸುವೆನೂ..
ರೀ.. ರಿಕುಮಾರೀ ನನ್ನ ಮಾತ ಕೇಳಿರಿ 
ರೀ.. ರಿಕುಮಾರೀ ನನ್ನ ಮಾತ ಕೇಳಿರಿ
ಒಂಟಿಯಾಗಿ ನೀವ ಹೋಗಬೇಡರಿ ತುಂಟರಿರುವ ದಾರೀ ...
ಬಲು ತುಂಟರಿರುವ ದಾರೀ ..
--------------------------------------------------------------------------------------------------------------------------

ಬೃಂದಾವನ (1969) - ನೀ ಎಲ್ಲಿ ಓಡುವೇ 
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಚಿ.ಉದಯಶಂಕರ್  ಹಾಡಿದವರು: ಪಿ.ಬಿ.ಶ್ರೀನಿವಾಸ 

ರಾಧಾ.. ನೀ ಎಲ್ಲಿ ಓಡುವೇ .. ನೀ ಯಾರ ಹುಡುಕುವೇ ..ಇಲ್ಲೇ ನಾ ಇರುವೇ ನೋಡೇ ನನ್ನೋಲವೇ
ನೀ ಎಲ್ಲಿ ಓಡುವೇ .. ನೀ ಯಾರ ಹುಡುಕುವೇ ..ಇಲ್ಲೇ ನಾ ಇರುವೇ ನೋಡೇ ನನ್ನೋಲವೇ
ನೀ ಎಲ್ಲಿ ಓಡುವೇ ..

ಬಾನಲಿ ಭಾಸ್ಕರ ಮೂಡಲೂ ತಾವರೇ ನಗುವುದಿಲ್ಲವೇ   (ಆಆಆಅ... ಆಆಆ... )
ಅರಳಿದ ತಾವರೇ ದುಂಬಿಯ ಬಳಿಗೆ ಕರೆಯುವುದಿಲ್ಲವೇ..(ಆಆಆಅ... ಆಆಆ... )
ದುಂಬಿಗೇ ಜೇನಿನ ಔತಣ ಹೂವಿನ ಸೆರೆಯಲಲ್ಲವೇ.. (ಆಆಆಅ... ಆಆಆ... )

ಚೆಲುವಿನ ಬಲೆಯಲಿ ತಾನೇ ಅದಕೆ ಸ್ವರ್ಗ ಸೌಖ್ಯವೇ.. (ಹೂಂ )
ನೀ ಎಲ್ಲಿ ಓಡುವೇ .. ನೀ ಯಾರ ಹುಡುಕುವೇ ..ಇಲ್ಲೇ ನಾ ಇರುವೇ ನೋಡೇ ನನ್ನೋಲವೇ
ನೀ ಎಲ್ಲಿ ಓಡುವೇ ..
--------------------------------------------------------------------------------------------------------------------------

ಬೃಂದಾವನ (1969) - ಗಾಳಿ ಬೀಸಿದೆ ಜೋ ಜೋ ಹಾಡಿದೇ 
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಚಿ.ಉದಯಶಂಕರ್  ಹಾಡಿದವರು: ಎಸ್.ಜಾನಕೀ 

ಗಾಳಿ ಬೀಸಿದೆ ಜೋ ಜೋ ಹಾಡಿದೇ 

ಗಾಳಿ ಬೀಸಿದೆ ಜೋ ಜೋ ಹಾಡಿದೇ ಕಂದ ಮಲಗೆಂದೂ ಬಂದು ಕಿವಿಗೇ ಹೇಳಿದೇ 
ಗಾಳಿ ಬೀಸಿದೆ ಜೋ ಜೋ ಹಾಡಿದೇ.. ಗಾಳಿ ಬೀಸಿದೆ

ನಿದಿರೇ ಮಾಡಲೂ ಕನಸೂ ಮೂಡಲು  ಚಂದಿರ ಬರುವನೂ ಆಡಿ ಕುಣಿವನೂ
ಕಾಮನಬಿಲ್ಲೇರಿ ಹರುಷದಿ ಜಾರುವೇ ತಾರೆಯ ಸೇರುವೇ ಮೋಡದಲ್ಲಿ ತೇಲುವೇ
ಗಾಳಿ ಬೀಸಿದೆ ಜೋ ಜೋ ಹಾಡಿದೇ.. ಗಾಳಿ ಬೀಸಿದೆ

ನನ್ನ ದೇವರೂ ನಿನ್ನ ಪಡೆದವರೂ ನನಗೆ ವರವಾಗಿ ಮಡಿಲ ತುಂಬಿದರೂ
ಅಮ್ಮನ ಪಾಲಿನೆಂದು ಸುಮ್ಮನೇ ಕೊರಗದಿರು ನನ್ನದೇ ಹೂವಾಗಿ ಹಾಯಾಗಿ ಮಲಗಿರೂ
ಗಾಳಿ ಬೀಸಿದೆ ಜೋ ಜೋ ಹಾಡಿದೇ.. ಗಾಳಿ ಬೀಸಿದೆ

ಒಂದೇ ಗಿಡದಲೀ ಎರಡು ರೆಂಬೆಗಳೂ ಒಂದರ ಅರಳಿದ ಹೂವನು ತಂದಿರಲೂ
ಎರಡನೆಯ ರಂಭೆಯೂ ಹೊತ್ತಿದೆ ಇಂದೂ ಪಡೆವಳಾರೋ ಭಾಗ್ಯವೂ ನಂದೂ
ಗಾಳಿ ಬೀಸಿದೆ ಜೋ ಜೋ ಹಾಡಿದೇ ಕಂದ ಮಲಗೆಂದೂ ಬಂದು ಕಿವಿಗೇ ಹೇಳಿದೇ
ಹೂಂ .. ಹೂಂ .. ಹೂಂ .. ಹೂಂ .. ಹೂಂ .. ಹೂಂ ..
--------------------------------------------------------------------------------------------------------------------------

ಬೃಂದಾವನ (1969) - ಕುಂಕುಮ ಕೊಟ್ಟು ಹೂವು ಕೊಟ್ಟು 
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಚಿ.ಉದಯಶಂಕರ್  ಹಾಡಿದವರು: ಎಸ್.ಜಾನಕೀ 

ಕುಂಕುಮ ಕೊಟ್ಟು ಹೂವ್ ಕೊಟ್ಟು ಹರಸಿದ ತಾಯೇ .. ಹರಸಿದ ತಾಯೇ ..

ನನ್ನ ಬಿಟ್ಟು ನೋವು ಕೊಟ್ಟು ಎಲ್ಲಿ ಹೋದೆಯೇ

ಅರಿಯದ ಹೆಣ್ಣಾಗಿ ಮನೆಯೊಳು ಬಂದೇ ಒಲವಿನ ತಾಯಾಗಿ ಪ್ರೀತಿ ತೋರಿದೇ 

ಪೂಜಿಸಿ ದೇವರ ಕಾಣಿಕೆ ತಂದೇ ಬಾಳಿಗೆ ಒಂದೂ ಗುರಿಯ ತೋರಿದೇ 
ಕುಂಕುಮ ಕೊಟ್ಟು ಹೂವ್ ಕೊಟ್ಟು ಹರಸಿದ ತಾಯೇ .. ಹರಸಿದ ತಾಯೇ ..

ಮನಸಲಿ ಬೆರೆತೆ ಹೃದಯವ ಅರಿತೇ ಚಿಂತೆಯ ಮರೆಸಿ ಹರುಷವ ತಂದೆ

ನಿನ್ನನೇ ನಂಬಿ ಬಾಳ ಕಲಿತೇ ಅಗಲಿಕೆ ನೋವ ಏತಕೆ ತಂದೇ ..
ಕುಂಕುಮ ಕೊಟ್ಟು ಹೂವ್ ಕೊಟ್ಟು ಹರಸಿದ ತಾಯೇ .. ಹರಸಿದ ತಾಯೇ ..
ನನ್ನ ಬಿಟ್ಟು ನೋವು ಕೊಟ್ಟು ಎಲ್ಲಿ ಹೋದೆಯೇ
ಕುಂಕುಮ ಕೊಟ್ಟು ಹೂವ್ ಕೊಟ್ಟು ಹರಸಿದ ತಾಯೇ .. ಹರಸಿದ ತಾಯೇ ..
--------------------------------------------------------------------------------------------------------------------------

No comments:

Post a Comment