511. ಧನಲಕ್ಷ್ಮಿ (1977)

ಧನಲಕ್ಷ್ಮೀ ಚಲನಚಿತ್ರದ ಹಾಡುಗಳು 
  1. ನಿಲ್ಲೇ ನೀನಲ್ಲೇ  ಒಲ್ಲೆಯ ಸರಸವನು
  2. ನಿನ್ನಂಥ ಚೆಲುವ ಈ ಹಳ್ಳಿಲೀ ಇಲ್ಲಾ 
  3. ಭೂಮಿಗೇ ಬಂದ ಕಾಮಣ್ಣನೋ 
  4. ಧನಲಕ್ಷ್ಮೀ ದಯೆತೋರೋ 
  5. ಹುಣ್ಣಿಮೆ ಬೆಳಕನೂ 
  6. ಬಡವನ ಕೋಪ ದವಡೆಗೇ ಮೂಲ 
ಧನಲಕ್ಷ್ಮಿ (1977) - ನಿಲ್ಲೇ ನೀನಲ್ಲೇ ಒಲ್ಲೆಯ ಸರಸವನು
ಸಂಗೀತ: ಎಂ.ರಂಗ ರಾವ್  ಸಾಹಿತ್ಯ: ಕೆ.ಎಸ್.ಸತ್ಯನಾರಾಯಣ ಹಾಡಿದವರು: ಎಸ್.ಪಿ.ಬಿ., ಪಿ.ಸುಶೀಲಾ 

ಗಂಡು : ಆ..ಆಹಹಹಾ ... ಲಾ ಲಾಲಾಲಾ..  ಹೂಂಹೂಂಹೂಂ
           ನಿಲ್ಲೇ...  ನೀನಲ್ಲೇ ಒಲ್ಲೆಯ ಸರಸವನು ಬಲ್ಲೆ ನಾ ಎಲ್ಲ ನಿಲ್ಲೇ ನಿಲ್ಲೇ ನಿಲ್ಲೇ ನೀ ನಲ್ಲೇ
ಹೆಣ್ಣು : ನಿಲ್ಲೇ..  ನಾನಿಲ್ಲೇ  ಕಾಡಲು ಕಾದಿರುವೆ ಬಲ್ಲೆ ನಾ ಎಲ್ಲ  ಒಲ್ಲೇ ಒಲ್ಲೇ ಒಲ್ಲೇ ನಾ ಒಲ್ಲೇ

ಕೋರಸ್ : ಆಆಆಆಆಆಆಆಆ .... ನಿನಿಸನಿದಪದ.. ಆಆಆ... ನಿನಿಪನಿನಿನಿಪನಿ....
ಗಂಡು : ತಂಗಾಳಿ ಸೋಕಿ ಮೈನಡುಗಿದಂತೆ
           ತಂಗಾಳಿ ಸೋಕಿ ಮೈನಡುಗಿದಂತೆ ನಾನಿನ್ನ ಸೋಕೆ ನಿನ್ನ ತುಟಿಯು ಅದುರಿತೇಕೆ
           ಲಜ್ಜೆಯೇಕೆ ಮೌನವೇಕೆ ನಿನ್ನ ನೀನೇ ಮರೆತೆಯೇಕೆ ಬಿಂಕವ ಬಿಟ್ಟು ನೀ ಬೇಗನೇ ಬಳಿಗೆ ಬಾ.......
           ನಿಲ್ಲೇ ನೀನಲ್ಲೇ  ಒಲ್ಲೆಯ ಸರಸವನು ಬಲ್ಲೆ ನಾ ಎಲ್ಲ  ನಿಲ್ಲೇ ನಿಲ್ಲೇ ನಿಲ್ಲೇ ನೀ ನಲ್ಲೇ....

ಕೋರಸ್ : ಆಆಆಆಆ ಆಆಆಆ  ಆಆಆ... ನಿ
ಹೆಣ್ಣು : ಮಧುವನ್ನು ಅರಸಿ ಭ್ರಮರ ಬಂದಂತೆ...
          ಮಧುವನ್ನು ಅರಸಿ ಭ್ರಮರ ಬಂದಂತೆ ನೀ ನನ್ನ ವರಿಸಿ ಒಲವ ಸೂಸಿ ಬಂದೆ ಬಯಸಿ ನನ್ನ ರಮಿಸಿ
         ಮೈಯ ಬಳಸಿ ನನ್ನ ನಾನೇ ಮರೆತೆನಲ್ಲ ಹೃದಯದ ಕರೆಗೆ ನಾ ಸೋತೆನೂ ಪ್ರಿಯತಮಾ
         ನಿಲ್ಲೇ ನಾನಿಲ್ಲೇ  ಕಾಡಲು ಕಾದಿರುವೆ ಬಲ್ಲೆ ನಾ ಎಲ್ಲ  ಒಲ್ಲೇ ಒಲ್ಲೇ ಒಲ್ಲೇ ನಾನೊಲ್ಲೇ
ಗಂಡು : ಲಾಲಾ (ಲಾಲಲಲಲಲಾ ) ಲಾಲಲಲಲಲಾ (ಲಾಲಲಲಲಲಾ ) ಲಾಲಲಲಲಲಾ
--------------------------------------------------------------------------------------------------------------------------

ಧನಲಕ್ಷ್ಮಿ (1977) - ನಿನ್ನಂಥ ಚೆಲುವ ಈ ಊರಲ್ಲೇ ಇಲ್ಲ
ಸಂಗೀತ: ಎಂ.ರಂಗ ರಾವ್ ಸಾಹಿತ್ಯ: ಚಿ.ಉದಯಶಂಕರ ಹಾಡಿದವರು: ಎಸ್.ಜಾನಕೀ

ಆಹಹಾ.. ಆಆಆ... ಹ್ಹಹಾ.. ಹ್ಹಹಾ.. ಓಓಓಓಓ..  ಹೇಹೇಹೇಹೇ ...
ನಿನ್ನಂಥ ಚೆಲುವಾ ಈ ಹಳ್ಳಿಲೇ ಇಲ್ಲ ಕಂಡಂದೆ ನಾ ನೀ ನಂಗೇ ಮನಸೋತೇ ನಲ್ಲಾ ..
ಅಕ್ಕಪಕ್ಕದಲ್ಲ ಯಾರೂ ನೋಡೋರೂ ಇಲ್ಲ ಬುಟ್ರೆ ಇಂಥ ಹೆಣ್ಣು ಮತ್ತೇ ಸಿಕ್ಕೊಲ್ಲ
ನಿನ್ನಂಥ ಚೆಲುವಾ ಈ ಹಳ್ಳಿಲೇ ಇಲ್ಲ ಕಂಡಂದೆ ನಾ ನೀ ನಂಗೇ ಮನಸೋತೇ ನಲ್ಲಾ ..

ಹಿಂಗೇಕೇ ಕಣ್ಣಕಣ್ಣ ಬಿಡ್ತೀನ್ ನನ್ನ ರಾಜ ತಾನಿತಂದಾನಾ 
ಚೆಂದುಳ್ಳಿ ಹೆಣ್ಣೆಂದೂ ಒಂಟ್ಯಾಗೇ ಸಿಕ್ಕಿಲ್ವಾ ತಾನಿತಂದಾನಾ 
ಕೆಂಪಾದ ಗುಂಡಾದ ಈ ಕೆನ್ನೇ ಮೇಲೇಕೆ ತಾನಿತಂದಾನಾ 
ಮುತ್ತಿನ ಮಣಿಯಂತೇ ಬೆವರಿನ ಹನಿಗೋವಳು ತಾನಿತಂದಾನಾ 
ಹ್ಹ.. ತಾನಿತಂದಾನಾ ತಾನ ತಾನಿ ತಂದಾನಾ    
ಹೋಯ್  ತಾನಿತಂದಾನಾ ತಾನ ತಾನಿ ತಂದಾನಾ 
ನಿನ್ನಂಥ ಚೆಲುವಾ ಈ ಹಳ್ಳಿಲೇ ಇಲ್ಲ ಕಂಡಂದೆ ನಾ ನೀ ನಂಗೇ ಮನಸೋತೇ ನಲ್ಲಾ ..

ಆನೆಯ ಮರಿಯಂಗೆ ಬೆಳೆಸಿದ್ದೀ ಮೈಯನ್ ತಾನಿತಂದಾನಾ.. ಅಹ್ಹಹ್ಹಹ್ಹ..  
ನಡುಗುವೇ ಹಿಂಗ್ಯಾಕೇ  ನಾ ನಿವ್ವಿನೀ ಜೊತೆಗೇ ತಾನಿತಂದಾನಾ 
ಹಾಲಕ್ಕೀ ನೀನಗೀ ಆಕಾಶಕ್ಕೇ ಓಡಾಡೋ ತಾನಿತಂದಾನಾ 
ಬಲೆಯಾಗಿ ಬಿಸುವೇ ಮೈಮೇಲೇ ಬೀಳುವೆ ತಾನಿತಂದಾನಾ 
ಹೊಯ್ .. ತಾನಿತಂದಾನಾ ತಾನ ತಾನಿ ತಂದಾನಾ    
ಆಹ್ಹ್  ತಾನಿ ತಂದಾನಾ ತಾನ ತಾನಿ ತಂದಾನಾ 
ನಿನ್ನಂಥ ಚೆಲುವಾ ಈ ಹಳ್ಳಿಲೇ ಇಲ್ಲ ಕಂಡಂದೆ ನಾ ನೀ ನಂಗೇ ಮನಸೋತೇ ನಲ್ಲಾ ..

ಕನಸಾಗಿ ನೀ ಬಂದೂ ಮೈತಡವೀ  ಗಂಟಾಗಿ ತಾನಿತಂದಾನಾ
ನೆನೆಸುತ್ತಾ ಇರುಳೆಲ್ಲಾ ನಾ ಎದ್ದೂ ಕೂತೇನು ತಾನಿತಂದಾನಾ
ಹೊಡಿದಾಡು ಬಡಿದಾಡು ಬುಡುಲಾರೆ ನಾ ನಿನ್ನ ತಾನಿತಂದಾನಾ
ಸಿಡುಕ್ಯಾಕೇ ಸಿಟ್ಯಾಕೇ ತೋಳಿಂದ ಬಳಸೆನ್ನ ತಾನಿತಂದಾನಾ
ಹೊಯ್ .. ತಾನಿತಂದಾನಾ ತಾನ ತಾನಿ ತಂದಾನಾ    
ಹೊಯ್ ಹೊಯ್  ತಾನಿ ತಂದಾನಾ ತಾನ ತಾನಿ ತಂದಾನಾ 
ಆಆಆ... ಆಆಆ... ಹೊಯ್ ಹೊಯ್  ಆಆಆ.. ಆಆಆ... ಹೂಹೂಹೂ..  
ಆಆಆ... ಆಆಆ... ಹೊಯ್ ಹೊಯ್  ಆಆಆ.. ಆಆಆ... ಹೂಹೂಹೂ.. ಅಹ್ಹಹ್ಹಹ್ಹ  
--------------------------------------------------------------------------------------------------------------------------

ಧನಲಕ್ಷ್ಮಿ (1977) - ಭೂಮಿಗೇ ಬಂದ ಕಾಮಣ್ಣನೋ
ಸಂಗೀತ: ಎಂ.ರಂಗ ರಾವ್ ಸಾಹಿತ್ಯ: ಚಿ.ಉದಯಶಂಕರ ಹಾಡಿದವರು: ಎಸ್.ಜಾನಕೀ, ಎಸ್.ಪಿ.ಬಿ.

ಹೆಣ್ಣು : ಭೂಮಿಗೇ ಬಂದ ಕಾಮಣ್ಣನೂ...  ಹುಣ್ಣಿಮೆ ತಂದ ಸೋಮಣ್ಣನೋ
          ಭೂಮಿಗೇ ಬಂದ ಕಾಮಣ್ಣನೂ...  ಹುಣ್ಣಿಮೆ ತಂದ ಸೋಮಣ್ಣನೋ
          ಇಂಥ ಅಂದ ಇಂಥ ಚೆಂದ ಎಲ್ಲೂ ಕಂಡಿಲ್ಲಾ..
ಗಂಡು : ಹೌದೇನೋ..
ಹೆಣ್ಣು : ಈ ಸುಂದರನನ್ನೂ ವರಿಸುವ ಹೆಣ್ಣೂ ಇನ್ನೂ ಹುಟ್ಟಿಲ್ಲಾ.. (ಹ್ಹಾ)
          ಭೂಮಿಗೇ ಬಂದ ಕಾಮಣ್ಣನೂ...ಕಾಮಣ್ಣನೂ...ಕಾಮಣ್ಣನೂ...

ಗಂಡು : ರಾಮಾಯಣದ ವಾಲಿಯ ಹಾಗೇ ಮೂತಿಯು ಬಲು ಸೊಗಸೂ
ಹೆಣ್ಣು : ಮಹಾಭಾರತದ ಕೀಚಕನಂತೇ ಮೀಸೆಯೂ ಬಲು ಹುಲುಸೂ
ಇಬ್ಬರು : ದಂತವಕ್ರನ ಹಲ್ಲಿನ ಸಾಲೂ ಅಗಸನ ಕುದುರೆಯ ನೋಡಲೂ ನೀನೂ
ಹೆಣ್ಣು : ಭೂಮಿಗೇ ಬಂದ ಕಾಮಣ್ಣನೂ...  ಹುಣ್ಣಿಮೆ ತಂದ ಸೋಮಣ್ಣನೋ 
          ಭೂಮಿಗೇ ಬಂದ ಕಾಮಣ್ಣನೂ...(ಟ್ರೂಆ )ಕಾಮಣ್ಣನೂ...ಕಾಮಣ್ಣನೂ...(ಹ್ಹಾ )

ಗಂಡು : ವರಮಣ ಹಾಗೇ ಕಾಣುವ ಇವನ ದೂರಕೆ ನೀ ತಳ್ಳು
ಹೆಣ್ಣು : ಸ್ಥಳವನೂ ಏಕೇ ಓಡುವ ಆಸೇ ಹೇಳೂ ಚೆನ್ನಯ್ಯಾ ..
ಗಂಡು : ಕುರುಡನಿಗೇಕೇ ನೋಡುವ ಆಸೇ  ಕೇಳೇ ಅಮ್ಮಯ್ಯಾ ...
ಇಬ್ಬರು : ಇವನಿಗೂ ಬೇಕೇ ಹೆಣ್ಣಿನ ಸ್ನೇಹ ಮುದುಕನಿಗೇಕೆ ಪ್ರಣಯದ ದಾಹ.. ಅಹ್ಹಹ್ಹ..
ಹೆಣ್ಣು : ಭೂಮಿಗೇ ಬಂದ ಕಾಮಣ್ಣನೂ...( ಅಹ್ಹಹ್ಹ ) ಹುಣ್ಣಿಮೆ ತಂದ ಸೋಮಣ್ಣನೋ 
          ಭೂಮಿಗೇ ಬಂದ ಕಾಮಣ್ಣನೂ...(ಟ್ರೂಆ )ಕಾಮಣ್ಣನೂ...(ಟ್ರೂಆ ) ಕಾಮಣ್ಣನೂ...((ಟ್ರೂಆ  )

ಹೆಣ್ಣು : ಮರದಲಿ ಎರಗುವ ಮಂಗನಿಗೇಕೆ ಮದುವೆಯ ವ್ಯಾಮೋಹ
ಗಂಡು : ಕೊಕ್ಕರೆ ಹಾಗೇ ನಡೆಯುವ ರೀತಿ ನೋಡುವ ಅಮ್ಮಯ್ಯಾ ....
ಹೆಣ್ಣು : ಬೆಕ್ಕಿನ ಹಾಗೇ ಕಂಗಳ ಕಾಂತಿ ಕಾಣೋ ಚೆನ್ನಯ್ಯಾ ...
ಇಬ್ಬರು : ನೋಡುವ ಆಸೇ ಹೆಚ್ಚಾಗುತ್ತಿದೇ ನೋಡುತ ಮನಸೂ ಹುಚ್ಚಾಗುತಿದೇ
             ಯಾಹುಂ  ಯಾಹುಂ  ಯಾಹುಂ  ಯಾಹುಂ  ಯಾಹುಂ  ಯಾಹುಂ
ಗಂಡು : ನೋಡುವ ಆಸೇ ಹೆಚ್ಚಾಗುತ್ತಿದೇ ನೋಡುತ ಮನಸೂ ಹುಚ್ಚಾಗುತಿದೇ     
ಇಬ್ಬರು : ಯಾಹುಂ  ಯಾಹುಂ  ಯಾಹುಂ  ಯಾಹುಂ  ಯಾಹುಂ  ಯಾಹುಂ
ಗಂಡು : ಬಾಹುಗಳಿಂದ ಬಳಸುವ ಚಪಲ ನನ್ನಲೀ ಮೂಡುತಿದೇ
ಇಬ್ಬರು : ಯಾಹುಂ  ಯಾಹುಂ  ಯಾಹುಂ  ಯಾಹುಂ  ಯಾಹುಂ  ಯಾಹುಂ
ಹೆಣ್ಣು : ಭೂಮಿಗೇ ಬಂದ ಕಾಮಣ್ಣನೂ...( ನಾನೇ  ) ಹುಣ್ಣಿಮೆ ತಂದ ಸೋಮಣ್ಣನೋ 
          ಭೂಮಿಗೇ ಬಂದ ಕಾಮಣ್ಣನೂ...(ಆ )ಕಾಮಣ್ಣನೂ...(ಆ ) ಕಾಮಣ್ಣನೂ...(ಆ  ) ಅಹ್ಹಹ್ಹಹಹ 
--------------------------------------------------------------------------------------------------------------------------

ಧನಲಕ್ಷ್ಮಿ (1977) - ಧನಲಕ್ಷ್ಮೀ ದಯೇ ತೋರು ಬಾಮ್ಮಾ 
ಸಂಗೀತ: ಎಂ.ರಂಗ ರಾವ್ ಸಾಹಿತ್ಯ: ಚಿ.ಉದಯಶಂಕರ ಹಾಡಿದವರು: ಪಿ.ಬಿ.ಎಸ್.

ಪಾಲ್ಗಡಲನಿಂದದುದಿಸಿ ಹರಿಯ ವರಿಸೀ ಕರವೀರಪುರದಲ್ಲಿ ಬಂದು ನೆಲೆಸೀ
ಗತಿ ನೀನೇ ಎಂದವರ ಕೈಬಿಡದೇ ಹರಿಸಿ ಕಾಪಾಡುವಾ ತಾಯೇ ಬಾರೇ ಕನಿಕರಿಸೀ
ಧನಲಕ್ಷ್ಮೀ ದಯೇ ತೋರು ಬಾಮ್ಮಾ ಅಮ್ಮಾ ಸೌಭಾಗ್ಯ ಲಕ್ಷ್ಮಿ ಬಾರಮ್ಮ
ಕಂಗಳಿಗೆ ಕಾಣಿಸದೇ ಎಲ್ಲಿ ಮರೆಯಾಗಿರುವೇ.. ಸಿರಿವಂತರ ಸೆರೆಯ ತೊರೆದೂ ಬಾರಮ್ಮಾ
ಧನಲಕ್ಷ್ಮೀ ದಯೇ ತೋರು ಬಾಮ್ಮಾ ಅಮ್ಮಾ ಸೌಭಾಗ್ಯ ಲಕ್ಷ್ಮಿ ಬಾರಮ್ಮ

ಸನ್ನಿಧಿಗೇ ಬೇಗ ನೀ ದಾರಿ ತೋರಮ್ಮಾ ದಿವ್ಯ ದರುಶನ ನೀಡೇ ಒಲಿದು ಬಾರಮ್ಮಾ
ಸನ್ನಿಧಿಗೇ ಬೇಗ ನೀ ದಾರಿ ತೋರಮ್ಮಾ ದಿವ್ಯ ದರುಶನ ನೀಡೇ ಒಲಿದು ಬಾರಮ್ಮಾ
ಬಾಗಿಲಿಗೇ ಬಂದಿರುವ ಭಕುತನ ಬೇಡಿಕೆಯ ಪಡೆದರಗಿ ತುಂಬೈಸಿ ಬೇಗ ಸಲಹಮ್ಮಾ
ಧನಲಕ್ಷ್ಮೀ ದಯೇ ತೋರು ಬಾಮ್ಮಾ ಅಮ್ಮಾ ಸೌಭಾಗ್ಯ ಲಕ್ಷ್ಮಿ ಬಾರಮ್ಮ

ಮಲ್ಲಿಗೆಯ ಮಂಟಪದಿ ನಿನ್ನ ಪೂಜಿಸುವೇ ಸುರಲೋಕದಾ ಪಾರಿಜಾತ ಅರ್ಪಿಸುವೇ
ಮಲ್ಲಿಗೆಯ ಮಂಟಪದಿ ನಿನ್ನ ಪೂಜಿಸುವೇ ಸುರಲೋಕದಾ ಪಾರಿಜಾತ ಅರ್ಪಿಸುವೇ
ಪನ್ನೀರ ಕೊಳದಿಂದ ಹೊನ್ನ ತಾವರೇ ತಂದೂ ಸಿರಿಪಾದಕಮಲಗಳ ನಿಂಗೇ ಪೂಜಿಸುವೇ
ಧನಲಕ್ಷ್ಮೀ ದಯೇ ತೋರು ಬಾಮ್ಮಾ ಅಮ್ಮಾ ಸೌಭಾಗ್ಯ ಲಕ್ಷ್ಮಿ ಬಾರಮ್ಮ
ಕಂಗಳಿಗೆ ಕಾಣಿಸದೇ ಎಲ್ಲಿ ಮರೆಯಾಗಿರುವೇ.. ಸಿರಿವಂತರ ಸೆರೆಯ ತೊರೆದೂ ಬಾರಮ್ಮಾ
ಧನಲಕ್ಷ್ಮೀ ದಯೇ ತೋರು ಬಾಮ್ಮಾ ಅಮ್ಮಾ ಸೌಭಾಗ್ಯ ಲಕ್ಷ್ಮಿ ಬಾರಮ್ಮ
--------------------------------------------------------------------------------------------------------------------------

ಧನಲಕ್ಷ್ಮಿ (1977) - ಹುಣ್ಣಿಮೆ ಬೆಳಕನು
ಸಂಗೀತ: ಎಂ.ರಂಗ ರಾವ್ ಸಾಹಿತ್ಯ: ಚಿ.ಉದಯಶಂಕರ ಹಾಡಿದವರು: ಎಸ್.ಜಾನಕೀ, ಬೆಂಗಳೂರು ಲತಾ

ಹೆಣ್ಣು : ಹುಣ್ಣಿಮೆ ಬೆಳಕನೂ ಕಣ್ಣಲ್ಲಿ ಚೆಲ್ಲುವ ರಾಧಾ ಮೋಹನನೇ
          ಕೃಷ್ಣಾ...  ವರಿಸಿದ ಹೃದಯದಿ ಏತಕೆ ಬೆರೆಸುವೇ  ವಿರಹದ ನೋವನ್ನೇ ...
          ಹುಣ್ಣಿಮೆ ಬೆಳಕನೂ ಕಣ್ಣಲ್ಲಿ ಚೆಲ್ಲುವ ರಾಧಾ ಮೋಹನನೇ ಕೃಷ್ಣಾ...

ಹೆಣ್ಣು : ಚಂದ್ರಿಕೆ ತಂಪಲೀ ಬಿಸಿ ಉಸಿರನ್ನೂ ತರಿಸುವುದೇ ನೀನೂ
          ಚಿಂತೆಯೂ ಎದೆಯಲಿ ತುಂಬುತಲಿರಲು ಬಾಳುವುದಿನ್ನೇನೂ
          ಬಂದ ಬಯಕೆಗಳೂ ಕಂಡ ಕನಸಗಳು
          ಬಂದ ಬಯಕೆಗಳೂ ಕಂಡ ಕನಸಗಳು ಗಾಳಿಯ ಗೋಪುರವಾದರೇ ಇದೂ ರಾಧೆಯ ಗತಿಯೇನೂ...
          ನಿನ್ನ ರಾಧೆಯ ಗತಿಯೇನೂ...    

ಹೆಣ್ಣು : ಹಾಲು ಮೊಸರನೂ ಕಳ್ಳತನದಲಿ ಕುಡಿಯುತ ನೀ ಬೆಳೆದೇ..
          ಹಾಲು ಮೊಸರನೂ ಕಳ್ಳತನದಲಿ ಕುಡಿಯುತ ನೀ ಬೆಳೆದೇ..
          ಗೋಪಾಲಕರ ಗುಂಪನೂ ಸೇರಿಸಿ ತುಂಟರ ಗುರೂ ಆದೇ
          ಬಾಲ್ಯವೂ ಮುಗಿದಾಯ್ತು ಕಾಲವೂ ಬದಲಾಯ್ತು
          ಬಾಲ್ಯವೂ ಮುಗಿದಾಯ್ತು ಕಾಲವೂ ಬದಲಾಯ್ತು
          ನ್ಯಾಯವ ಉಳಿಸುವ ಆಸೆಯ ತೋರದೇ ಏತಕೆ ಹೀಗಾದೇ ..
          ಹೇಳೂ  ಏತಕೆ ಹೀಗಾದೇ ..
          ಹುಣ್ಣಿಮೆ ಬೆಳಕನೂ ಕಣ್ಣಲ್ಲಿ ಚೆಲ್ಲುವ ರಾಧಾ ಮೋಹನನೇ ಕೃಷ್ಣಾ...
          ವರಿಸಿದ ಹೃದಯದಿ ಏತಕೆ ಬೆರೆಸುವೇ  ವಿರಹದ ನೋವನ್ನೇ ...

ಹೆಣ್ಣು : ತನು ಎಲ್ಲಿರಲ್ಲೂ ಮನ ಎಲ್ಲಿಹುದೋ ಚಿಂತಿಸಿ ನೀ ನಲ್ಲಾ...
          ನಿನ್ನಲಿಕೆಯನೂ ಮನದಾಸೆಯನು ಬಲ್ಲೇನೂ ನಾ ಎಲ್ಲಾ
          ಕಾಲವೂ ಮಿಂಚಿಲ್ಲಾ ಯಾರಿಗೂ ತಿಳಿದಿಲ್ಲಾ 
          ಕಾಲವೂ ಮಿಂಚಿಲ್ಲಾ ಯಾರಿಗೂ ತಿಳಿದಿಲ್ಲಾ 
          ಚೋರರ ಗುರೂ ನೀನಾದರೇ ರಾಧೆಯೂ ಉಳಿಯೋಲ್ಲಾ..
          ನಿನ್ನೀ  ರಾಧೆಯೂ ಉಳಿಯೋಲ್ಲಾ..
--------------------------------------------------------------------------------------------------------------------------

ಧನಲಕ್ಷ್ಮಿ (1977) - ಬಡವನ ಕೋಪ ದವಡೆಗೇ ಮೂಲ
ಸಂಗೀತ: ಎಂ.ರಂಗ ರಾವ್ ಸಾಹಿತ್ಯ: ಚಿ.ಉದಯಶಂಕರ ಹಾಡಿದವರು: ರಮೇಶ 

ಮೂರೂ ಮೆಣಸಿನಕಾಯಿ ಎತ್ತರವೂ ಇಲ್ಲಾ .. ನೂರೂ ಸೊಕ್ಕಿನ ಮಾತೂ ನೀನಾಡಿದೆಯಲ್ಲಾ
ನಿನ್ನ ದಾರಿಗೇ ತರದೇ ನಾ ಬೀಡುವುದಿಲ್ಲಾ...
ಪಾವಡಿಬಾ ಬೂಬಡಿಬಾ ಬಾಬಲಾಭೂ ಪಾವಡಿಬಾ ಬೂಬಡಿಬಾ ಬಾಬಲಾಭೂ
ಪಾವಡಿಬಾ ಬೂಬಡಿಬಾ ಬಾಬಲಾಭೂ ಪಾವಡಿಬಾ ಬೂಬಡಿಬಾ ಬಾಬಲಾಭೂ
ಬಡವನ ಕೋಪ ದವಡೆಗೇ ಮೂಲ
ಬಡವನ ಕೋಪ ದವಡೆಗೇ ಮೂಲ ಬಲ್ಲಿಯಾ ಬಂಗಾರೀ. ರೀರಿರೀರಿರಿರಿ ...
ಹೆಣ್ಣಿನ ಸಿಡುಕೂ ಬಾಳಿಗೇ ತೊಡಕೂ
ಹೆಣ್ಣಿನ ಸಿಡುಕೂ ಬಾಳಿಗೇ ತೊಡಕೂ  ತಿಳಿಯೇ ಸಿಂಗಾರೀ ...

ಅಂಕೆಯ ಇಲ್ಲದೇ ಓಡುತಲಿದ್ದೆ ಮದಿಸಿದ ಆನೆಯ ಹಾಗೇ ..
ಹ್ಹಾ.. ಅಂಕೆಯ ಇಲ್ಲದೇ ಓಡುತಲಿದ್ದೆ ಮದಿಸಿದ ಆನೆಯ ಹಾಗೇ ..
ಅಂಕುಶ ಹಿಡಿದೂ ಅದಕೇ ಬಂದೇ ದಾರಿಗೇ ತರಲೂ ಹೀಗೇ ..
ಮೀಸೆಯ ಹೊತ್ತ ಗಂಡು ನಾನೂ ರೋಷದ ಬೆಂಕಿಯ ಚಂಡೂ
ಮಿಂಚಿನ ಹಾಗೇ ಬಂದೇ ಬಳಿಗೇ ಈ ಊರಿ ಮೋರೆಯ ಕಂಡೂ ..
ಈ ಊರಿ ಮೋರೆಯ ಕಂಡೂ ..
ಬಡವನ ಕೋಪ ದವಡೆಗೇ ಮೂಲ
ಬಡವನ ಕೋಪ ದವಡೆಗೇ ಮೂಲ ಬಲ್ಲಿಯಾ ಬಂಗಾರೀ. ರೀರಿರೀರಿರಿರಿ ...
ಹೆಣ್ಣಿನ ಸಿಡುಕೂ ಬಾಳಿಗೇ ತೊಡಕೂ
ಹೆಣ್ಣಿನ ಸಿಡುಕೂ ಬಾಳಿಗೇ ತೊಡಕೂ  ತಿಳಿಯೇ ಸಿಂಗಾರೀ ...

ಬಿಸಿಲಿನ ಕಾವಿಗೇ ಕೆನ್ನೆಯೂ ಕಾದೂ ಕೆಂಪಾಗುತಿದೇ ಪಾಪ
ರೋಷದ ಕಂಗಳು ನೆನಪಿಗೇ ತರುತಿದೆ ಚಾಮುಂಡೇಶ್ವರೀ ರೂಪ
ಬಿಸಿಲಿನ ಕಾವಿಗೇ ಕೆನ್ನೆಯೂ ಕಾದೂ ಕೆಂಪಾಗುತಿದೇ ಪಾಪ ಅಹ್ಹಹ್ಹ .. ಪಾಪ
ರೋಷದ ಕಂಗಳು ನೆನಪಿಗೇ ತರುತಿದೆ ಚಾಮುಂಡೇಶ್ವರೀ ರೂಪ
ಉರನೇ ಆಳಿದರೇನೂ ನೀನೂ ಜೋರನೂ ಮಾಡಿದರೇನೂ
ಇಂದೋ ಎಂದೋ ಅಂತೂ ಒಮ್ಮೇ ಗಂಡಿನ ಹೆಂಡತೀ ನೀನೂ
 ಗಂಡಿನ ಹೆಂಡತೀ ನೀನೂ
ಹ್ಹ.. ಬಡವನ ಕೋಪ ಅಹ್ಹಹ್ಹಹಾ  ದವಡೆಗೇ ಮೂಲ
ಬಡವನ ಕೋಪ ದವಡೆಗೇ ಮೂಲ ಬಲ್ಲಿಯಾ ಬಂಗಾರೀ. ರೀರಿರೀರಿರಿರಿ ...
ಹೆಣ್ಣಿನ ಸಿಡುಕೂ ಬಾಳಿಗೇ ತೊಡಕೂ
ಹೆಣ್ಣಿನ ಸಿಡುಕೂ ಬಾಳಿಗೇ ತೊಡಕೂ  ತಿಳಿಯೇ ಸಿಂಗಾರೀ ...
ಪಾವಡಿಬಾ ಬೂಬಡಿಬಾ ಬಾಬಲಾಭೂ ಪಾವಡಿಬಾ ಬೂಬಡಿಬಾ ಬಾಬಲಾಭೂ
ಪಾವಡಿಬಾ ಬೂಬಡಿಬಾ ಬಾಬಲಾಭೂ ಪಾವಡಿಬಾ ಬೂಬಡಿಬಾ ಬಾಬಲಾಭೂ
--------------------------------------------------------------------------------------------------------------------------

No comments:

Post a Comment