925. ಯಾವ ಜನ್ಮದ ಮೈತ್ರಿ (೧೯೭೨)


ಯಾವ ಜನ್ಮದ ಮೈತ್ರಿ ಚಿತ್ರದ ಹಾಡುಗಳು 
  1. ಮಧುರ ಮುರಳಿ ಲೋಲ 
  2. ಮಂಜುಳ ನಾದ ಕಿವಿಯಲಿ ಇರಲಿ 
  3. ಜ್ಯೋತಿ ಕಿರಣ ಕಂಡೆ 
  4. ಆನಂದ ಕಂದ ಹೇ..ಮುಕುಂದ
ಯಾವ ಜನ್ಮದ ಮೈತ್ರಿ (೧೯೭೨) - ಮಧುರ ಮುರಳಿ ಲೋಲ
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಗೀತಪ್ರಿಯ ಗಾಯನ : ಪಿ.ಸುಶೀಲಾ 

ಆಆಆ... ಆಆಆ... ಆಆಆ... ಆಆಆ...
ಮಧುರ ಮುರಳಿ ಲೋಲ ನಡೆದೇ ನೀನು ಎಲ್ಲಿ
ಕೇಳುತಿಹಳು ರಾಧೇ ಶ್ಯಾಮ ನೀನು ಎಲ್ಲಿ.. ಎಲ್ಲಿ.. ಎಲ್ಲಿ..
ಮಧುರ ಮುರಳಿ ಲೋಲ ನಡೆದೇ ನೀನು ಎಲ್ಲಿ
ಕೇಳುತಿಹಳು ರಾಧೇ ಶ್ಯಾಮ ನೀನು ಎಲ್ಲಿ.. ಎಲ್ಲಿ.. ಎಲ್ಲಿ.. ಎಲ್ಲಿ 

ಏಕೆ ನಡೆದೇ ದೂರ ನನ್ನ ಹೃದಯ ಚೋರ 
ಕಾಣದಿರಲು ನೀನು ಶೋಕವೇ ಅಪಾರ 
ಎನ್ನುತಿಹಳು ರಾಧಾ ಹರಿಸಿ ಕಣ್ಣೀರ ಧಾರಾ 
ಕೇಳುತಿಹಳು ಗಿರಿಗಳ ಗಿರಿಧಾರಿ ನೀನು ಎಲ್ಲಿ 
ಮಧುರ ಮುರಳಿ ಲೋಲ ನಡೆದೇ ನೀನು ಎಲ್ಲಿ
ಕೇಳುತಿಹಳು ರಾಧೇ ಶ್ಯಾಮ ನೀನು ಎಲ್ಲಿ.. ಎಲ್ಲಿ.. ಎಲ್ಲಿ.. ಎಲ್ಲಿ 

ಬರಿದು ಮಾಡಿ ದೇಗುಲ ದೈವ ನಡೆದೇ ಎಲ್ಲಿ
ಅರಳುವಂಥ ಕಮಲಕೆ ಸೂರ್ಯ ಕಿರಣ ಎಲ್ಲಿ
ಕಾಯುತಿರುವ ರಾಧೆಯು ಕೃಷ್ಣ ನೀನು ಎಲ್ಲಿ
ನನ್ನ ಬಾಳಪಥದಲಿ ನಿನ್ನ ಚರಣ ಎಲ್ಲಿ
ಮಧುರ ಮುರಳಿ ಲೋಲ ನಡೆದೇ ನೀನು ಎಲ್ಲಿ
ಕೇಳುತಿಹಳು ರಾಧೇ ಶ್ಯಾಮ ನೀನು ಎಲ್ಲಿ.. ಎಲ್ಲಿ.. ಎಲ್ಲಿ.. ಎಲ್ಲಿ
ಮಧುರ ಮುರಳಿ ಲೋಲ ನಡೆದೇ ನೀನು ಎಲ್ಲಿ 
ಕೇಳುತಿಹಳು ರಾಧೇ ಶ್ಯಾಮ ನೀನು ಎಲ್ಲಿ.. ಎಲ್ಲಿ.. ಎಲ್ಲಿ.. ಎಲ್ಲಿ 
--------------------------------------------------------------------------------------------------------------------------

ಯಾವ ಜನ್ಮದ ಮೈತ್ರಿ (೧೯೭೨) - ಮಂಜುಳನಾದ ಕಿವಿಯಲಿ ಇರಲಿ
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಗೀತಪ್ರಿಯ ಗಾಯನ : ಎಸ್.ಜಾನಕೀ  

ಆಆಆ... ಆಆಆ.... ಆಆಆ... ಆಆಆಆಆಆ ....
ಮಂಜುಳನಾದ ಕಿವಿಯಲಿ ಇರಲಿ
ಮೋಹನ ರೂಪ ಕಣ್ಣಲಿ ಇರಲಿ ಕಣ್ಣಲಿ ಇರಲಿ
ನನ್ನಯ ಬಾಳು ಎಂದಿಗೂ ಎಂದಿಗೂ  ನಿನ್ನದೇ ಆಗಿರಲಿ
ಓ... ನಿನ್ನದೇ ಆಗಿರಲಿ

ತಂದಿರೆ ನೀನು ನವ ಸಂದೇಶ ನನ್ನಯ ಮನಕೆ ಭಾವಾವೇಶ
ತಂದಿರೆ ನೀನು ನವ ಸಂದೇಶ ನನ್ನಯ ಮನಕೆ ಭಾವಾವೇಶ
ಸೆಳೆದಿರೆ ಇಂದು ಯಾವುದೋ ಪಾಶ
ಪಡೆದೆ...  ಒಲವು..  ಗೆಲುವಿನ ಕೋಶ
ಮಂಜುಳನಾದ ಕಿವಿಯಲಿ ಇರಲಿ
ಮೋಹನ ರೂಪ ಕಣ್ಣಲಿ ಇರಲಿ ಕಣ್ಣಲಿ ಇರಲಿ

ಎಂದು ಕಾಣದ ಯಾವುದೋ ತಾಪ ಹೊಂದಿಹೆ ಕಂಡು ನಿನ್ನಯ ರೂಪ
ಎಂದು ಕಾಣದ ಯಾವುದೋ ತಾಪ ಹೊಂದಿಹೆ ಕಂಡು ನಿನ್ನಯ ರೂಪ
ತೋರಲು ನೀನು ಇಂಥ ಪ್ರತಾಪ ಅದುವೇ...  ನನ್ನ....  ಬಾಳ ಪ್ರದೀಪ 
ಮಂಜುಳನಾದ ಕಿವಿಯಲಿ ಇರಲಿ
ಮೋಹನ ರೂಪ ಕಣ್ಣಲಿ ಇರಲಿ ಕಣ್ಣಲಿ ಇರಲಿ 

ಬಾಳ ಬಂಧನ ಮಧುರ ವಿಚಾರ ಪ್ರೇಮ ಸಮಾಗಮ ಜೀವನಸಾರ
ಬಾಳ ಬಂಧನ ಮಧುರ ವಿಚಾರ ಪ್ರೇಮ ಸಮಾಗಮ ಜೀವನಸಾರ
ದೊರಕಲು ಜೀವನ ಜೊತೆಗಾರ... ಕಂಡೆ.. ಇಂದೇ... ಮಧುರಸ ಧಾರೆ.. 
ಮಂಜುಳನಾದ ಕಿವಿಯಲಿ ಇರಲಿ
ಮೋಹನ ರೂಪ ಕಣ್ಣಲಿ ಇರಲಿ ಕಣ್ಣಲಿ ಇರಲಿ
ನನ್ನಯ ಬಾಳು ಎಂದಿಗೂ ಎಂದಿಗೂ  ನಿನ್ನದೇ ಆಗಿರಲಿ
ಓ... ನಿನ್ನದೇ ಆಗಿರಲಿ ಆಆಆ... 
------------------------------------------------------------------------

ಯಾವ ಜನ್ಮದ ಮೈತ್ರಿ (೧೯೭೨) - ಜ್ಯೋತಿ ಕಿರಣ ಕಂಡೇ 
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಗೀತಪ್ರಿಯ ಗಾಯನ : ಪಿ.ಸುಶೀಲಾ 

ಜ್ಯೋತಿ ಕಿರಣ ಕಂಡೇ ..
ಜ್ಯೋತಿ ಕಿರಣ ಕಂಡೇ ಈ ದಿನ ಬಾಳಿನ ನವಜ್ಯೋತಿ ಕಿರಣ ಕಂಡೇ ..
ಜ್ಯೋತಿ ಕಿರಣ ಕಂಡೇ ..

ಘೋರಣಿರಾಸೆಯ ಜೀವನದಲ್ಲಿ ಚೇತನ ತುಂಬಿ ಈ ಮನದಲ್ಲಿ 
ಘೋರಣಿರಾಸೆಯ ಜೀವನದಲ್ಲಿ ಚೇತನ ತುಂಬಿ ಈ ಮನದಲ್ಲಿ 
ಮರಭೂಮಿಯಾದ ಹೂಬನದಲ್ಲಿ ಆಸೆಯ ಬಳ್ಳಿ ಚಿಗುರಲೂ ಇಲ್ಲೀ 
ಬಾಳಿನ ಲೋಕದೇ ಹೊಸಕಾಂತಿ ಕಿರಣ ಕಂಡೇ ...  
ಜ್ಯೋತಿ ಕಿರಣ ಕಂಡೇ ..

ಯಾವ ಜನ್ಮದ ಮೈತ್ರಿ ಇದುವೋ ಅಂತರಂಗದ ಕಿರು ಬಂಧನವೋ 
ಯಾವ ಜನ್ಮದ ಮೈತ್ರಿ ಇದುವೋ ಅಂತರಂಗದ ಕಿರು ಬಂಧನವೋ 
ಹೊಳೆಯುತ ಇಂದೂ ಸ್ಫೂರ್ತಿ ಸ್ವರೂಪ ಅಂಧಕಾರದೇ ಆಗಿರೇ ದೀಪ 
ಬಾಳುವ ಭಾವದೇ ಸುಖಶಾಂತಿ ಕಿರಣ ಕಂಡೇ 
ಜ್ಯೋತಿ ಕಿರಣ ಕಂಡೇ ..

ಮನದೇ ಹೊಲದ ದೈವವ ಕಂಡೇ ಪ್ರಿಯ ಸಂಗಮದ ಭಾವವ ಕಂಡೇ 
ಮನದೇ ಹೊಲದ ದೈವವ ಕಂಡೇ ಪ್ರಿಯ ಸಂಗಮದ ಭಾವವ ಕಂಡೇ 
ಮಧುರ ಪ್ರೀತಿಯ ಹೊಳಪನು ಕಂಡೇ ನವಜೀವನದ ಬೆಳಕನು ಕಂಡೇ 
ಬಾಳಿನ ಭಾಗ್ಯದ ಸೌಭಾಗ್ಯ ಚರಣ ಕಂಡೇ  
ಜ್ಯೋತಿ ಕಿರಣ ಕಂಡೇ ಈ ದಿನ ಬಾಳಿನ ನವಜ್ಯೋತಿ ಕಿರಣ ಕಂಡೇ ..
ಜ್ಯೋತಿ ಕಿರಣ ಕಂಡೇ ..
----------------------------------------------------------------------

ಯಾವ ಜನ್ಮದ ಮೈತ್ರಿ (೧೯೭೨) - ಆನಂದ ಕಂದ ಹೇ.. ಮುಕುಂದ
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಗೀತಪ್ರಿಯ ಗಾಯನ : ಎಸ್.ಜಾನಕೀ , ಎಲ್.ಆರ್.ಅಂಜಲಿ  

ಆನಂದ ಕಂದ ಹೇ.. ಮುಕುಂದ
ಮುರಳೀಧರ ಕೃಷ್ಣ ಹೇ.. ಮುರಳೀಧರ ಕೃಷ್ಣ

ಹೇ..ಮನಮೋಹನ ಹೇ.. ಮಧುಸೂದನ ಜಗಜೀವನವೇ ನೀನಂತೆ
ಹೇ..ಮನಮೋಹನ ಹೇ.. ಮಧುಸೂದನ ಜಗಜೀವನವೇ ನೀನಂತೆ
ನದಿಯು ನೀನೆ ನೌಕೆಯು ನೀನೇ ನೀನೇ ಅಂಬಿಗನಂತೆ 
ಆನಂದ ಕಂದ ಹೇ.. ಮುಕುಂದ
ಮುರಳೀಧರ ಕೃಷ್ಣ ಹೇ.. ಮುರಳೀಧರ ಕೃಷ್ಣ
ಮುರಳೀಧರ ಕೃಷ್ಣ

ಜಲಸ್ಥಳವೆಲ್ಲಾ ನಿನ್ನದೇ ಮಾಯಾ ಕಣಕಣದಲ್ಲೂ ನಿನ್ನದೇ ಛಾಯ
ಜಲಸ್ಥಳವೆಲ್ಲಾ ನಿನ್ನದೇ ಮಾಯಾ ಕಣಕಣದಲ್ಲೂ ನಿನ್ನದೇ ಛಾಯ
ಹುಡುಕುತಲಿದ್ದ ನೋಂದಿಹ ಆತ್ಮ ಅಡಗಿದೆ ಎಲ್ಲಿ.. ಹೇ.. ಪರಮಾತ್ಮ 
ಆನಂದ ಕಂದ ಹೇ.. ಮುಕುಂದ
ಮುರಳೀಧರ ಕೃಷ್ಣ ಹೇ.. ಮುರಳೀಧರ ಕೃಷ್ಣ
ಮುರಳೀಧರ ಕೃಷ್ಣ

ಕಣ್ಣೀರ ಧಾರಾ ಹೆಣೆದಿಹ ಹಾರ ನೀಡಲು ಬಂದಿಹೆ ನಿನ್ನಯ ದ್ವಾರ
ಕಣ್ಣೀರ ಧಾರಾ ಹೆಣೆದಿಹ ಹಾರ ನೀಡಲು ಬಂದಿಹೆ ನಿನ್ನಯ ದ್ವಾರ
ಅಳಿಸುವೆ ಎಂದು ವಿರಹದ ಭಾರ ತೋರುವೆ ಎಂದು ಪ್ರೀತಿಯ ಪಾರ 
ಆನಂದ ಕಂದ ಹೇ.. ಮುಕುಂದ
ಮುರಳೀಧರ ಕೃಷ್ಣ ಹೇ.. ಮುರಳೀಧರ ಕೃಷ್ಣ
ಆನಂದ ಕಂದ ಹೇ.. ಮುಕುಂದ
ಮುರಳೀಧರ ಕೃಷ್ಣ ಹೇ.. ಮುರಳೀಧರ ಕೃಷ್ಣ
-----------------------------------------------------------------------------------------------------------------------

No comments:

Post a Comment