- ಶೂರಾಧಿ ಶೂರನು ನಾನು
- ನಾವೆಂದು ಅಂಜುವುದಿಲ್ಲಾ
- ಸಾಧಿಸಿ ಹೋರಾಟ
- ಎಂಥ ನೀತಿಗೆ
- ಸ್ವಾಗತವೂ
- ಧರ್ಮವೇ ತಾಯಿ
ದಂಗೆ ಎದ್ದ ಮಕ್ಕಳು (೧೯೭೯)
ಸಂಗೀತ : ವಿಜಯ ಭಾಸ್ಕರ, ಗಾಯನ : ಕಸ್ತೂರಿ ಶಂಕರ, ಸುಲೋಚನಾ ವೆಂಕಟೇಶ, ಮತ್ತು ಕೋರಸ್
ನಾವೆಂದೂ ಅಂಜುವುದಿಲ್ಲ ನಮ್ಮಾಸೆ ಸಂಚಿನದಲ್ಲಾ
ಕವಲಾಗೆ ಕೂಡಿದರೂ ಒಂದಾಗಿ ನಡೆಯೋಣಾ
ನಾವೆಂದೂ ಅಂಜುವುದಿಲ್ಲ ನಮ್ಮಾಸೆ ಸಂಚಿನದಲ್ಲಾ
ಕವಲಾಗೆ ಕೂಡಿದರೂ ಒಂದಾಗಿ ನಡೆಯೋಣಾ
ಭೂಮಿಯೆ ಬಿರಿಯಲಿ ಬೆಟ್ಟವೇ ಬೀಳಲಿ
ಸಿಡಿಲೇ ಬಡಿಯಲಿ ಪ್ರಳಯವೇ ಆಗಲಿ
ಧೂರ್ತರ ಸಂಚಿಗೆ ಮೂರ್ಖರ ಮೋಸಕೆ
ನಿಲ್ಲದು ಬಂಡಾಯ ನಮ್ಮಯ ಬಂಡಾಯ
ನಾವೆಂದೂ ಅಂಜುವುದಿಲ್ಲ ನಮ್ಮಾಸೆ ಸಂಚಿನದಲ್ಲಾ
ಕವಲಾಗೆ ಕೂಡಿದರೂ ಒಂದಾಗಿ ನಡೆಯೋಣಾ
ಅನ್ನವ ನೀಡುವ ದಾತನು ಅಲ್ಲಿ
ತಿನ್ನುವ ತುತ್ತನು ಕಸಿಯುವರಿಲ್ಲಿ
ನೀಡಿದ ಬಟ್ಟೆಯ ಮೋಸದಿ ಸೆಳೆಯುವ
ಮಂದಿಗೆ ಧಿಕ್ಕಾರ ನಮ್ಮಯ ಧಿಕ್ಕಾರ
ನಾವೆಂದೂ ಅಂಜುವುದಿಲ್ಲ ನಮ್ಮಾಸೆ ಸಂಚಿನದಲ್ಲಾ
ಕವಲಾಗೆ ಕೂಡಿದರೂ ಒಂದಾಗಿ ನಡೆಯೋಣಾ
ಯಾರಿಗೂ ಮಣಿಯದು ನಮ್ಮಯ ನಿಲವು
ಎಲ್ಲರ ಮನಗಳು ಬೆಂಕಿಯ ಕಡಲು
ರೋಷವ ಕಾರಿದೆ ಉದ್ಧಟ ನೀತಿಗೆ
ಸಾಗಿದೆ ಬಂಡಾಯ ನಮ್ಮಯ ಬಂಡಾಯ
ನಾವೆಂದೂ ಅಂಜುವುದಿಲ್ಲ ನಮ್ಮಾಸೆ ಸಂಚಿನದಲ್ಲಾ
ಕವಲಾಗೆ ಕೂಡಿದರೂ ಒಂದಾಗಿ ನಡೆಯೋಣಾ
--------------------------------------------------------------------------------------------------------------------------
ದಂಗೆ ಎದ್ದ ಮಕ್ಕಳು (೧೯೭೯)
ಸಂಗೀತ : ವಿಜಯ ಭಾಸ್ಕರ, ಗಾಯನ : ಎಸ.ಪಿ.ಬಿ,
ಸಾಧಿಸ ಹೊರಟ ಗುರಿಯೊಂದು
ತುಳಿದಾ ಹಾದಿಯೇ ಮತ್ತೊಂದುಸಾಧಿಸ ಹೊರಟ ಗುರಿಯೊಂದು
ಸಾಧಿಸ ಹೊರಟ ಗುರಿಯೊಂದು
ತುಳಿದಾ ಹಾದಿಯೇ ಮತ್ತೊಂದುಹಿಡಿದಾ ನೀತಿಯು ಬಲು ಹಿರಿದು
ಹಿಡಿದಾ ನೀತಿಯು ಬಲು ಹಿರಿದು
ಪಡೆದಾ ನೋವು ನೂರೊಂದು
ಸಾಧಿಸ ಹೊರಟ ಗುರಿಯೊಂದು
ತುಳಿದಾ ಹಾದಿಯೇ ಮತ್ತೊಂದು
ಹಗಲು ಇರುಳು ಮುಗಿಯದ ನಡಿಗೆ
ಮುನ್ನಡೆ ಕಾಣದು ಅಡಿಗಡಿಗೆ
ಹಗಲು ಇರುಳು ಮುಗಿಯದ ನಡಿಗೆ
ಮುನ್ನಡೆ ಕಾಣದು ಅಡಿಗಡಿಗೆ
ಕತ್ತಲೆ ಕವಿದಾ ಮಾನವ ಬಾಳಿಗೆ
ಸಾಧಿಸ ಹೊರಟ ಗುರಿಯೊಂದು
ತುಳಿದಾ ಹಾದಿಯೇ ಮತ್ತೊಂದು
ಬಾಳಿನ ಬಂಡಿಯ ಗಾಲಿಯು ಉರಳಲು
ಇರಲೇ ಬೇಕು ನಂಬಿಕೆ ಮೊದಲು
ಬಾಳಿನ ಬಂಡಿಯ ಗಾಲಿಯು ಉರಳಲು
ಈ ಜಗವೊಂದು ಕಹಿಯಾ ಕಡಲು
ಸಾಧಿಸ ಹೊರಟ ಗುರಿಯೊಂದು
ತುಳಿದಾ ಹಾದಿಯೇ ಮತ್ತೊಂದು
ಸಾಧಿಸ ಹೊರಟ ಗುರಿಯೊಂದು
ತುಳಿದಾ ಹಾದಿಯೇ ಮತ್ತೊಂದು ಹಿಡಿದಾ ನೀತಿಯು ಬಲು ಹಿರಿದು
ಪಡೆದಾ ನೋವು ನೂರೊಂದು
ಸಾಧಿಸ ಹೊರಟ ಗುರಿಯೊಂದು
ತುಳಿದಾ ಹಾದಿಯೇ ಮತ್ತೊಂದು
--------------------------------------------------------------------------------------------------------------------------
ದಂಗೆ ಎದ್ದ ಮಕ್ಕಳು (೧೯೭೯)
ಸಂಗೀತ : ವಿಜಯ ಭಾಸ್ಕರ, ಗಾಯನ :
ವೀರಾಧಿ ವೀರನು ನಾನು
ಅಂಗರಾಜನು ಸಾಮನ್ಯವೇನು
ಕ್ಷಣದಲ್ಲಿ ಪಣವಾ ಗೆಲ್ಲುವೆನು
ಅತಿರಥರನ್ನೇ ಸೋಲಿಸುವಾ
ಶೌರ್ಯವನ್ನೇ ತೋರಿಸುವಾ
ಕಳಿಂಗ ಭೂಪನು ನಾನು
ಪಂಥವ ಜಯಸಿ ಸೀತೆಯ ಪಡೆಯುವೆನು
ಲಂಕಾಧಿಪತಿಯೇ ವೀರಾ
ಹರನ ಧನುಷ ಜಯಿಸ ಹೊರಟ ವೀರ
ಕೈಲಾಸ ಗಿರಿಯನ್ನೇ ಹೊತ್ತೇ
ಆ.. ಕೈಲಾಸ ಗಿರಿಯನ್ನೇ ಹೊತ್ತೇ
ಧನುಸ್ಸು ಮುರಿದು ಚೆಲುವೆ ನಿನ್ನಯ ಗೆಲುವೇ
ಮನ್ನಿಸಯ್ಯ ಎನ್ನ ದೊರೆ
ಈತ ಮುರಿದ ಬಿಲ್ಲೇ ಬೇರೆ
ನಿಜವಾದ ಶಿವಧನಸ್ಸು ಇಲ್ಲೇ ಇದೆ
ರಾಜಕುಮಾರರೇ ತಪ್ಪನ್ನು ಕ್ಷಮಿಸಿರಿ
ಪಂಥವ ಗೆದ್ದು ತನುಜೆಯ ವರಿಸಿರಿ
ದಶರಥ ರಾಜಕುಮಾರರೇ ಧನಸ್ಸನ್ನು ಜಯಸಿ
ಸೀತೆಯ ವರಿಸೋ ಶ್ರೀರಾಮ
ವಂದಿಪೇ ಶಿವನೇ ವಂದಿಪೇ ಶಕ್ತಿಯೇ
ಪಂಥವ ಜಯಿಸಲು ಅನುಗ್ರಹಿಸಿ
ನಮಿಸುವೆ ಗುರುವೇ ನಮಿಸುವೆ ಜನಕನೇ
ಸೀತೆಯ ವರಿಸಲು ಹಾರೈಸಿ
ಆರತಿ ಎತ್ತಿರಿ ನಾರಿಯಲ್ಲೆರೂ
ಶ್ರೀರಾಮಚಂದ್ರಗೆ ಜಾನಕಿಗೆ
ಆರತಿ ಎತ್ತೀರಿ ನಾರಿಯರೆಲ್ಲರೂ
ಆರತಿ ಎತ್ತಿರಿ ಆರತಿಯಾ
ಆರತಿ ಎತ್ತಿರಿ ಆರತಿಯಾ
--------------------------------------------------------------------------------------------------------------------------
No comments:
Post a Comment