ಸತಿ ಸಾವಿತ್ರಿ ಚಿತ್ರದ ಹಾಡುಗಳು
- ಬಿಲ್ಲನಗಲಿದ ಅಂಬಿನ ತೀರದಲಿ
- ಬಾಳ ಬಾನ ಬೆಳಗ ಬಾರ
- ಜಯತು ಶುಭವಿಹಾರಿ ಸರ್ವಲೋಕೋಪಕಾರಿ
- ಶ್ರೀ ಸತಿ ಮನೋವಿಹಾರಿ
- ಸಾಕಲೇ ಬಿಂಕದ ನೋಟವು ಹರಿಣಿ
- ಹರಿಣಿ ಹೃದಯ ಚೆನ್ನ ಬ್ರಾಹ್ಮಿ ಮೂರ್ಹತದಲಿ
- ಸಾವಿತ್ರಿತೇ ನಮೋ ಗಾಯತ್ರಿತೇ ನಮೋ
- ಅಂಗನೆ ಮೊರೆ ಕೇಳಿ
- ಕುರುಳುಗಳ ಅಂದವನು
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಶ್ರೀನಿವಾಸ, ಎಸ್.ಜಾನಕೀ
ಗಂಡು : ಬಿಲ್ಲನಗಲಿದ ಅಂಬಿನ ತೆರೆದಲಿ ಮುಗಿಲು ಓಡುತಿದೆ ಗಗನದಲಿ
ಮುಗಿಲು ಓಡುತಿದೆ ಗಗನದಲಿ
ಬಿಲ್ಲನಗಲಿದ ಅಂಬಿನ ತೆರೆದಲಿ ಮುಗಿಲು ಓಡುತಿದೆ ಗಗನದಲಿ
ಮುಗಿಲು ಓಡುತಿದೆ ಗಗನದಲಿ
ಹೆಣ್ಣು : ಏಕೋ ಈ ಆತುರವೋ ಏಕೋ ಆ ಕಾತುರವೋ
ಗಂಡು : ಕಾದು ನಿಂತಿರುವ ಗಿರಿಯ ಚುಂಬಿಸಲು ಓಡುತಲಿರುವುದು ಭರದಲಿ
ಓಡುತಲಿರುವುದು ಭರದಲಿ
ಹೆಣ್ಣು : ಆ...ಆ..ಆ... ಆ...ಆ..ಆ... ಆ...ಆ..ಆ...
ಗಂಡು : ಮೆಲ್ಲನೆ (ಆಆ ) ಸೋಕುವ (ಆಆ ) ಈ ತಂಗಾಳಿ (ಆಆ )
ಮೆಲ್ಲನೆ ಸೋಕುವ ಈ ತಂಗಾಳಿಯು ಕಾನನವೆಲ್ಲಾ ಅಲೆಯುತಿದೆ
ಹೆಣ್ಣು : ಏಕೋ ಈ ಪಯಣ ಏಕೋ ಈ ಗಮನಾ
ಗಂಡು : ಹೂವ ಪರಿಮಳವ ನಿನ್ನ ಹಾದಿಯಲಿ ಹಾಸಲು ಬಯಸಿ ಬೀಸುತಿದೆ
ಹೆಣ್ಣು : ಆ...ಆ..ಆ... ಆ...ಆ..ಆ... ಆ...ಆ..ಆ...
ಗಂಡು : ಮೈಯ್ಯ ಮರೆಸುವಾ ಮಧುರ ಗಾನವಾ ಹಾಡುತಲಿರುವುದು ಕೋಗಿಲೆಯು
ಮೈಯ್ಯ ಮರೆಸುವಾ ಮಧುರ ಗಾನವಾ ಹಾಡುತಲಿರುವುದು ಕೋಗಿಲೆಯು
ಹೆಣ್ಣು : ಏಕೋ ಈ ಗಾನವು ಏಕೋ ಆನಂದವು
ಹೆಣ್ಣು : ಏಕೋ ಈ ಗಾನವು ಏಕೋ ಆನಂದವು
ಗಂಡು : ಎನ್ನ ಮನದರಿಸಿ ಬರಲು ಸ್ವಾಗತವು ಬಯಸಲು ಈ ಸಂಗಿತವೂ
ಆಆಆ... ಓಓಓಓಓಓಓ.. ಹೂಂಹೂಂಹೂಂಹೂಂ
ಹೆಣ್ಣು : ರಾಜಹಂಸವೂ ನಾಚಿಕೆಯಿಂದಲಿ ಕೊಳದಿಂದಲಿ ತಾ ಓಡುತಿದೆ
ಹೆಣ್ಣು : ರಾಜಹಂಸವೂ ನಾಚಿಕೆಯಿಂದಲಿ ಕೊಳದಿಂದಲಿ ತಾ ಓಡುತಿದೆ
ಕೊಳದಿಂದಲಿ ತಾ ಓಡುತಿದೆ
ಗಂಡು : ಏಕೋ ಈ ಓಟವೂ ಏಕೋ ಈ ನಾಚಿಕೆಯೂ
ಗಂಡು : ಏಕೋ ಈ ಓಟವೂ ಏಕೋ ಈ ನಾಚಿಕೆಯೂ
ಹೆಣ್ಣು : ಎನ್ನ ಇನಿಯನ ಮೋಹನ ರೂಪವ ಕಂಡು ಮೊಗವ ಮರೆ ಮಾಚುತಿದೆ
ಇಬ್ಬರು : ರಮ್ಯವಾದ ಈ ಸುಂದರ ತಾಣದಿ ಮನವು ಏನೇನೋ ಬಯಸುತಿದೆ
ಮನವು ಏನೇನೋ ಬಯಸುತಿದೆ
ಏನೋ ಆ ಬಯಕೆ ಏನೋ ಆ ಕೋರಿಕೆ
ಏನೋ ಆ ಬಯಕೆ ಏನೋ ಆ ಕೋರಿಕೆ
ನುಡಿಯಲಾಗದೀ ಮಧುರಾನಂದವೂ ಅನುದಿನವಿರಲೀ ಎನಿಸುತಿದೆ
ಗಂಡು : ಹೂಂಹೂಂ (ಆಹಾಹಾ ) ಒಹೋ.. (ಆಹಾಹಾ)
--------------------------------------------------------------------------------------------------------------------------
--------------------------------------------------------------------------------------------------------------------------
ಸತಿ ಸಾವಿತ್ರಿ (೧೯೬೫) - ಜಯತು ಶುಭವಿಹಾರಿ ಸರ್ವಲೋಕೋಪಕಾರಿ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಶ್ರೀನಿವಾಸ,
ಜಯತು ಶುಭವಿಹಾರಿ ಸರ್ವಲೋಕೋಪಕಾರಿ
ಜಯತು ಗುಣಕರಾಳಿ ವಿಶ್ವತತ್ವವರಾಳಿ ವಿಜಯವಿಭವಧಾತ್ರಿ
ವಿಶ್ವ ಕಲ್ಯಾಣಗಾತ್ರೀ ಅನವರಸಪವಿತ್ರಿ ಕಲ್ಪವಲ್ಲಿ ಸಾವಿತ್ರಿ
ವಿಂಧು ಮಧ್ರ ಪುರಾಧಿಪನು ಸತಿಯೊಂದಿಗಮಲ ಪ್ರಜ್ಞೆಯಿಂದಲೀ
ಒಂದೇ ಸಮ ಹದಿನೆಂಟು ವರುಷವೂ ಮುಂದೆ ದೇವಿಯ ಬೇಡುತ
ಕಂದರಿಲ್ಲದ ಮನೆಯು ಶೂನ್ಯವೂ ಕಂದರೇ ಅದೇ ಭಾಗ್ಯವೂ
ಇಂದು ನಮ್ಮಯ ಬಾಳ ಬೆಳಗಲು ಕಂದನೊಬ್ಬನ ಕರುಣಿಸೂ
ಕಂದನೊಬ್ಬನ ಕರುಣಿಸೂ
ಮುನಿತವರು ಸಾವಿತ್ರಿ ದೇವಿಯ ವಿನೂತಕರಣವ ಮನದಿ ನೆನೆಯುತ
ಘನಮಹಿಮೆಯ ಯಾಗ ನಡೆಸುತ ದಿನವ ಎಣಿಸುತಲಿ ಇದ್ದರೂ
ಅವರ ನಿಷ್ಠೆಗೇ ಮೆಚ್ಚಿ ದೇವಿಯು ಅವಸರದಲಿ ಪ್ರತ್ಯಕ್ಷವಾಗುತ
ರವಿಯ ತೇಜವ ಹೋಲುವಂತ ಕುವರಿ ಇತ್ತೇನು ಎಂದಳು
ತುಳಸಿ ತಾಣ ಅಂದದಲಿ ದಂಪತಿ ತಲೆಯಬಾಗುತ ವಂದಿಸಿದರು
ಪುತ್ರಿ ಜನಿಸಲು ಶುಭದಿನದಿ ಸಾವಿತ್ರಿ ಎಂದೇ ಕರೆದರೂ
ವರಪ್ರಸಾದದ ಕುವರಿ ತನ್ನಯ ಪರಮಪೂಜ್ಯರು ಬಂಧು ಬಳಗಕೆ
ನಿರುತ ನಿದ್ದಿಲು ಕನ್ಯೆಯಾಗುತಾ ಹರುಷ ಬೀರುತಾ ಬೆಳೆದಳು
ಹರುಷ ಬೀರುತಾ ಬೆಳೆದಳು
--------------------------------------------------------------------------------------------------------------------------
ಸತಿ ಸಾವಿತ್ರಿ (೧೯೬೫) - ಬಾಳ ಬಾನ ಬೆಳಗ ಬಾರೋ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಆರ್.ಏನ್.ಜಯಗೋಪಾಲ ಗಾಯನ : ಪಿ.ಬಿ.ಶ್ರೀನಿವಾಸ, ಎಸ್.ಜಾನಕೀ
ಹೆಣ್ಣು : ಕಲ್ಪನೆಯ ಕುದುರೆ ಏರಿ ಕಡಲುಗಳ ನೀ ಹಾರಿ
ಕಾಲದೇಶದ ಮೇರೇ ಮೀರಿ ಬಾನೆಲ್ಲ ಬರಿ ಹಾರಿ
ಬಾಳ ಬಾನ ಬೆಳಗ ಬಾರ ಪ್ರೇಮ ಚಂದಿರ
ನೀನೇ ದೈವ ಎಂದಿತೆನ್ನ ಹೃದಯ ಮಂದಿರ.. ಹೃದಯ ಮಂದಿರ
ಬಾಳ ಬಾನ ಬೆಳಗ ಬಾರ ಪ್ರೇಮ ಚಂದಿರ
ನೀನೇ ದೈವ ಎಂದಿತೆನ್ನ ಹೃದಯ ಮಂದಿರ.. ಹೃದಯ ಮಂದಿರ
ಮಾರ ಸತಿ ಚೆಲುವ ರತಿ ಧರೆಗೇ ಇಳಿದಳು
ನಗೆಯ ಬೀರಿ ಒಲವ ತೋರಿ ಮನವ ಸೆಳೆದಳೋ... ಮನವ ಸೆಳೆದಳೋ...
ಬಾಳ ಬಾನ ಬೆಳಗ ಬಾರೇ ಪ್ರೇಮ ರೋಹಿಣಿ
ಪ್ರಣಯ ಸುಧೆಯ ಹರಿಸು ನೀನು ಹೃದಯ ಮೋಹಿನಿ.. ಹೃದಯ ಮೋಹಿನಿ
ಬಾಳ ಬಾನ ಬೆಳಗ ಬಾರೇ ಪ್ರೇಮ ರೋಹಿಣಿ
--------------------------------------------------------------------------------------------------------------------------
ಸತಿ ಸಾವಿತ್ರಿ (೧೯೬೫) - ಶ್ರೀ ಸತಿ ಮನೋವಿಹಾರಿ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಂ.ಬಾಲಮುರಳಿಕೃಷ್ಣ
ಶ್ರೀ ಸತಿ ಮನೋವಿಹಾರಿ
ಶ್ರೀ ಸತಿ ಮನೋವಿಹಾರಿ ಶೌರಿತ್ರಿಶ ಮಂದಾರ ಹರೇ..
ಮಂದಾರ ಹರೇ ಮುರಾರೇ ಶ್ರೀ ಸತಿ ಮನೋವಿಹಾರಿ
ಕ್ಷೀರಧಿ ಶಯನ ನೀರಜ ವದನ... ಆಆಆ..
ಕ್ಷೀರಧಿ ಶಯನ ನೀರಜ ವದನ ನಾರದ ಸಂಕೀರ್ತನ ಮೋಹನ... ಆಆಆ... ಆಆಆ....
ಕ್ಷೀರಧಿ ಶಯನ ನೀರಜ ವದನ ನಾರಜ ಸಂಕೀರ್ತನ ಮೋಹನ
ಮರರಮಣ ಕರುಣಾಭರಣ ಮರರಮಣ ಕರುಣಾಭರಣ
ಜಯಜಯ ನಾರಾಯಣ ಹರೇ
ಜಯಜಯ ನಾರಾಯಣ ಹರಿ ನಾರಾಯಣ ಹರಿ ನಾರಾಯಣ...
ಸತಿ ಸಾವಿತ್ರಿ (೧೯೬೫) - ಸಾಕಲೇ ಬಿಂಕದ ನೋಟವು ಹರಿಣಿ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಸದಾಶಿವಯ್ಯ ಗಾಯನ : ಪಿ.ಬಿ.ಶ್ರೀನಿವಾಸ,
ಹೂಂಹೂಂಹೂಂ... ಹೂಂ... ಹೂಂ.. ಏನಿದೋ... ಏತಕೋ
ಸಾಕಲೇ ಬಿಂಕದ ನೋಟವು ಹರಿಣಿ
ಸಾಕಲೇ ಬಿಂಕದ ನೋಟವು ಹರಿಣಿ
ಅಂದವಾ ಈ ಚೆಂದವಾ ನಾಚಿಸುವಳೂ ಆ ನವ ತರುಣಿ
ನಾಚಿಸುವಳೂ ಆ ನವ ತರುಣಿ
ಸಾಕಲೇ ಬಿಂಕದ ನೋಟವು ಹರಿಣಿ
ಆ ಸವಿನೋಟ ಕುರುಳುಗಳಾಟ ಚೆಂದುಟಿ ಚೆಲುವು ಆ ನಗುವೂ
ಆ ಸವಿನೋಟ ಕುರುಳುಗಳಾಟ ಚೆಂದುಟಿ ಚೆಲುವು ಆ ನಗುವೂ
ಕೋಮಲ ದನಿಯೂ ಒಲವಿನ ನುಡಿಯೂ ಅಂದವೋ ಆ ಚೆಂದವೋ
ಮರೆಯದೆ ಮನದಿ ಕಾಡುತಿರೇ
ಸಾಕಲೇ ಬಿಂಕದ ನೋಟವು ಹರಿಣಿ
ರಾಜಕುಮಾರಿ ನೀ ಸುಕುಮಾರಿ ರಾಜ್ಯದೀ ಹೀನಾ ದೀನನು ನಾ
ರಾಜಕುಮಾರಿ ನೀ ಸುಕುಮಾರಿ ರಾಜ್ಯದೀ ಹೀನಾ ದೀನನು ನಾ
ನನ್ನಯ ನೆನಪೂ ನಿನಗಿಹುದೇನೋ ಅಂದವೋ ಆ ಚೆಂದವೋ
ನಾನಂತೂ ಮರೆಯೇ ಜೀವನದಿ
ಸಾಕಲೇ ಬಿಂಕದ ನೋಟವು ಹರಿಣಿ
ಸಾಕಲೇ ಬಿಂಕದ ನೋಟವು ಹರಿಣಿ
ಅಂದವೋ ಆ ಚೆಂದವೋ ಹೂಂಹೂಂಹೂಂ ಹೂಂಹೂಂಹೂಂ
--------------------------------------------------------------------------------------------------------------------------
ಸತಿ ಸಾವಿತ್ರಿ (೧೯೬೫) - ಹರಿಣಿ ಹೃದಯ ಚೆನ್ನ ಬ್ರಾಹ್ಮಿ ಮೂರ್ಹತದಲಿ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ, ಡಾ|| ರಾಜಕುಮಾರ
ಹೆಣ್ಣು : ಹರಿಣಿ ಹೃದಯ ಚೆನ್ನ ಬ್ರಾಹ್ಮಿ ಮೂರ್ಹತದಲಿ
ವರಪತಿಯ ವದನಾರವಿಂದ ದರ್ಶನ ಮಾಡಿ
ಪಾದಕಮಲಕೆ ನಮಿಸಿ ಸ್ನಾನಾದಿಗಳ ಮುಗಿಸಿ
ಮತ್ತೆ ಮಡಿಲಲ್ಲಿ ಬಂದು ಶಿರಬಾಗಿ ಅತ್ತೆಮಾವಂದಿರಿಗೆ ವಂದಿಸುತಾ
ಸುರಭಿ ಗೋ ಪೂಜೆಯನು ಭಕ್ತಿಯಿಂ ನಡೆಸಿ
ಶ್ರೀ ತುಳಸಿ ಮಾತೆಯನು ಶೃದ್ಧೆಯಿಂದ ಅರ್ಚಿಸುತ
ಹರಿಹರರೂಪದ ಅಶ್ವತ್ಥಾಮ ವೃಕ್ಷವನು ಪೂಜಿಸುತಾ
ವರಸತಿ ಸಾವಿತ್ರಿಯು ಆದರ್ಶವೆನಿಸಿಹಳು ಸರ್ವ ನಾರಿಯ ಲೋಕಕೇ ..
ಗಂಡು : ಸತ್ತಾಶ್ರ ರಥಮಾರೂಢಮ್ ಪ್ರಚಂಡಮ್ ಕಶ್ಯಪಜಾಮಂ
ಶ್ರೀ ತಪದ್ಭಮಧರಂ ದೇವಂ ತಂ ಸೂರ್ಯಮ್ ಪ್ರಣಮಾಮ್ಯಹಹಂ.. ಪ್ರಣಮಾಮ್ಯಹಹಂ
--------------------------------------------------------------------------------------------------------------------------
ಸತಿ ಸಾವಿತ್ರಿ (೧೯೬೫) - ಸಾವಿತ್ರೇತೆ ನಮೋ ಗಾಯತ್ರಿತೇ ನಮೋ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಸದಾಶಿವಯ್ಯ ಗಾಯನ : ಎಸ್.ಜಾನಕೀ
ಸಪ್ತಲೋಕ ಪ್ರಪೂಜಿತೇ ಪ್ರಿಯೇ ಸಪ್ತಸ್ವರ ಆನಂದಿತೇ
ಶುಭ್ರ ವಸ್ತ್ರ ವಿರಾಜಿತೇ ಸಾವಿತ್ರಿದೇವಿ ನಮೋಸ್ತುತೇ...
ಸಾವಿತ್ರಿತೇ ನಮೋ ಗಾಯತ್ರಿತೇ ನಮೋ
ಸಾವಿತ್ರಿತೇ ನಮೋ ಗಾಯತ್ರಿತೇ ನಮೋ
ಸರಸ್ವತಿತೇ ನಮೋ ಜಗನ್ಮಾತೇ...
ಸಾವಿತ್ರಿತೇ ನಮೋ ಗಾಯತ್ರಿತೇ ನಮೋ
ತ್ರಿಭುವನ ಮೋಹಿನಿ ಶುಭಫಲದಾಯಿನೀ ಅಭಯಹಸ್ತದಾಯಿನೀ ಗೀರ್ವಾಣಿ
ತ್ರಿಭುವನ ಮೋಹಿನಿ ಶುಭಫಲದಾಯಿನೀ ಅಭಯಹಸ್ತದಾಯಿನೀ ಗೀರ್ವಾಣಿ
ಸತಿ ಸಾವಿತ್ರಿ (೧೯೬೫) - ಅಂಗನೆ ಮೊರೆ ಕೇಳಿ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಸದಾಶಿವಯ್ಯ ಗಾಯನ : ಎಸ್.ಜಾನಕೀ
ದೇವೀ... ತಾಯೀ.. ಜನನೀ ....
ಪತಿಯ ಪ್ರಾಣ ಉಳಿಸೇ ಸತಿಯು ತಾ ಕೈಕೊಂಡ ವೃತವೆಲ್ಲಾ ವಿಫಲವಾಗಿರೇ ..
ಸ್ತುತಿಸಿದೇನು ಅನುದಿನವೂ ಗತಿಸಿಹುದು ಪತಿಯಿಂದು ಗತಿತೋರು ತಾಯೇ ವರದೇವಿ...
ಅಂಗನೇ ಮೊರೆ ಕೇಳಿ ಮಾಂಗಲ್ಯ ನೀ ಉಳಿಸೇ
ಅಂಗನೇ ಮೊರೆ ಕೇಳಿ ಮಾಂಗಲ್ಯ ನೀ ಉಳಿಸೇ
ಸತಿ ಸಾವಿತ್ರಿ (೧೯೬೫) - ಕುರುಳುಗಳ ಅಂದವನು
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಎಸ್.
ಕುರುಳುಗಳ ಅಂದವನು ಮರೆಮಾಚಿಬಿಡು ಎಂದೂ
ಶಿರಮಾಣಿಕವ ನೀ ತೆಗೆದೆಯೇನೋ
ಕೊರಳನೂದುವ ಚೆಲುವ ಮರೆಸಿಹುತಾ ನಿಂದು
ನವರತುನಗಳ ಮಾಲೆಗಳನು ಬಿಟ್ಟೆಯೇನೂ
ಪರ್ಣ ಸುಂದರ ಕಹಿಯ ಚೆಲುವ ಮುಚ್ಚಿಡುವೇ ಎಂದು
ರತುನದ ಉಡ್ಯನವನು ತೆಗೆದೆಯೇನು
ಪದಪಲ್ಲವದ ಕಾಂತಿ ಹುದುಗಿ ಹೋಗುವುದೆಂದು
ಸ್ವರ್ಣ ಮಂಜಿರವನು ಬಿಟ್ಟೇ ಏನೋ
ಸಹಜ ಸುಂದರಿ ನಿನಗೇ ಆಭರಣವೇಕೆ
ಮಿಂಚು ಬಳ್ಳಿಗೆ ಹಣತೆ ಬೆಳುಕುತಾ ಬೇಕೇ
ಬಂಗಾರ ಪುತ್ಥಳಿಯೂ ನೀನು ಮನದನ್ನೇ
ನಿನ್ನಂದ ಮಕರಂದ ಬಾ ಚೆಲುವೇ ಚೆನ್ನೇ
ಬಾ ಚೆಲುವೇ ಚೆನ್ನೇ

ಬಾಳ ಬಾನ ಬೆಳಗ ಬಾರ ಪ್ರೇಮ ಚಂದಿರ...
ಗಂಡು : ಆಹ್ಹಾಹಾ... ಆಆಆ... ಓಹೋಹೋ... ಓಓಓ
ಕವಿಯ ಸ್ಫೂರ್ತಿ ಶಿಲ್ಪಿ ಕೀರ್ತಿ ನಿನ್ನ ಮೂರುತಿ
ಕವಿಯ ಸ್ಫೂರ್ತಿ ಶಿಲ್ಪಿ ಕೀರ್ತಿ ನಿನ್ನ ಮೂರುತಿ
ಪ್ರಣಯ ಸುಧೆಯ ಹರಿಸು ನೀನು ಹೃದಯ ಮೋಹಿನಿ.. ಹೃದಯ ಮೋಹಿನಿ
ಗಂಡು : ಆಹ್ಹಾಹಾ... ಆಆಆ... ಓಹೋಹೋ... ಓಓಓ
ಕವಿಯ ಸ್ಫೂರ್ತಿ ಶಿಲ್ಪಿ ಕೀರ್ತಿ ನಿನ್ನ ಮೂರುತಿ
ಕವಿಯ ಸ್ಫೂರ್ತಿ ಶಿಲ್ಪಿ ಕೀರ್ತಿ ನಿನ್ನ ಮೂರುತಿ
ನಲ್ಲೆ ನಿನ್ನ ಕಣ್ಣೆಗಳೆರಡೂ ದೀಪದಾರತಿ.. ದೀಪದಾರತಿ
ಬಾಳ ಬಾನ ಬೆಳಗ ಬಾರೇ ಪ್ರೇಮ ರೋಹಿಣಿಪ್ರಣಯ ಸುಧೆಯ ಹರಿಸು ನೀನು ಹೃದಯ ಮೋಹಿನಿ.. ಹೃದಯ ಮೋಹಿನಿ
ಬಾಳ ಬಾನ ಬೆಳಗ ಬಾರೇ ಪ್ರೇಮ ರೋಹಿಣಿ
ಹೆಣ್ಣು : ಆಆಆ.. ಆಆಆ.. ಆಆಆ... (ಹೂಂಹೂಂಹೂಂ ಹೂಂ ಓಓಓಓಹೋ..)
ವೀಣೆ ನಾನು ನುಡಿವೇ ತಾನೂ ನೀನೇ ವೈಣಿಕ
ವೀಣೆ ನಾನು ನುಡಿವೇ ತಾನೂ ನೀನೇ ವೈಣಿಕ
ವೀಣೆ ನಾನು ನುಡಿವೇ ತಾನೂ ನೀನೇ ವೈಣಿಕ
ಮನಸು ಎಂಬ ತೋಟ ಕಾವ ವೀರ ಸೈನಿಕ.. ವೀರ ಸೈನಿಕ
ಬಾಳ ಬಾನ ಬೆಳಗ ಬಾರ ಪ್ರೇಮ ಚಂದಿರ...
ಗಂಡು: ಮಾರ ಸತಿ ಚೆಲುವ ರತಿ ಧರೆಗೇ ಇಳಿದಳೋ ... ಓಓಓವೀಣೆ ನಾನು ನುಡಿವೇ ತಾನೂ ನೀನೇ ವೈಣಿಕ
ವೀಣೆ ನಾನು ನುಡಿವೇ ತಾನೂ ನೀನೇ ವೈಣಿಕ
ವೀಣೆ ನಾನು ನುಡಿವೇ ತಾನೂ ನೀನೇ ವೈಣಿಕ
ಮನಸು ಎಂಬ ತೋಟ ಕಾವ ವೀರ ಸೈನಿಕ.. ವೀರ ಸೈನಿಕ
ಬಾಳ ಬಾನ ಬೆಳಗ ಬಾರ ಪ್ರೇಮ ಚಂದಿರ...
ಮಾರ ಸತಿ ಚೆಲುವ ರತಿ ಧರೆಗೇ ಇಳಿದಳು
ನಗೆಯ ಬೀರಿ ಒಲವ ತೋರಿ ಮನವ ಸೆಳೆದಳೋ... ಮನವ ಸೆಳೆದಳೋ...
ಬಾಳ ಬಾನ ಬೆಳಗ ಬಾರೇ ಪ್ರೇಮ ರೋಹಿಣಿ
ಪ್ರಣಯ ಸುಧೆಯ ಹರಿಸು ನೀನು ಹೃದಯ ಮೋಹಿನಿ.. ಹೃದಯ ಮೋಹಿನಿ
--------------------------------------------------------------------------------------------------------------------------
ಸತಿ ಸಾವಿತ್ರಿ (೧೯೬೫) - ಶ್ರೀ ಸತಿ ಮನೋವಿಹಾರಿ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಂ.ಬಾಲಮುರಳಿಕೃಷ್ಣ
ಶ್ರೀ ಸತಿ ಮನೋವಿಹಾರಿ
ಶ್ರೀ ಸತಿ ಮನೋವಿಹಾರಿ ಶೌರಿತ್ರಿಶ ಮಂದಾರ ಹರೇ..
ಮಂದಾರ ಹರೇ ಮುರಾರೇ ಶ್ರೀ ಸತಿ ಮನೋವಿಹಾರಿ
ಕ್ಷೀರಧಿ ಶಯನ ನೀರಜ ವದನ... ಆಆಆ..
ಕ್ಷೀರಧಿ ಶಯನ ನೀರಜ ವದನ ನಾರದ ಸಂಕೀರ್ತನ ಮೋಹನ... ಆಆಆ... ಆಆಆ....
ಕ್ಷೀರಧಿ ಶಯನ ನೀರಜ ವದನ ನಾರಜ ಸಂಕೀರ್ತನ ಮೋಹನ
ಮರರಮಣ ಕರುಣಾಭರಣ ಮರರಮಣ ಕರುಣಾಭರಣ
ಜಯಜಯ ನಾರಾಯಣ ಹರೇ
ಜಯಜಯ ನಾರಾಯಣ ಹರಿ ನಾರಾಯಣ ಹರಿ ನಾರಾಯಣ...
ಶ್ರೀ ಸತಿ ಮನೋವಿಹಾರಿ
ಪನ್ನಗ ಕಲ್ಪ ವಿರಾಮ ತುಲಾಮಾ
ಪನ್ನಗ ಕಲ್ಪ ವಿರಾಮ ತುಲಾಮಾ ಪದುಮನಾಭ ಹರೇ ಆನಂದ ಸೀಮಾ
ಪ್ರಣವನಾದ ಭವ ಪ್ರಭು ಸುಖಧಾಮ..
ಪ್ರಣವನಾದ ಭವ ಪ್ರಭು ಸುಖಧಾಮ ಪೃಥ್ವಿ ರಮಣ ಶತಕೋಟಿ ಪ್ರಣಾಮ
ಜಯಜಯ ನಾರಾಯಣ ಹರೇ
ಜಯಜಯ ನಾರಾಯಣ ಹರಿ ನಾರಾಯಣ ಹರಿ ನಾರಾಯಣ..
ಜಯಜಯ ನಾರಾಯಣ ಹರಿ ನಾರಾಯಣ ಹರಿ ನಾರಾಯಣ..
ಶ್ರೀ ಸತಿ ಮನೋವಿಹಾರಿ ಶೌರಿ
ಶ್ರೀ ಸತಿ ಮನೋವಿಹಾರಿ ಶೌರಿ ತ್ರಿಟ ಮಂದಾರ ಹರೇ..
ಮಂದಾರ ಹರೇ ಮುರಾರೇ ಶ್ರೀ ಸತಿ ಮನೋವಿಹಾರಿ
ಶ್ರೀ ಸತಿ ಮನೋವಿಹಾರಿ ಶೌರಿ ತ್ರಿಟ ಮಂದಾರ ಹರೇ..
ಮಂದಾರ ಹರೇ ಮುರಾರೇ ಶ್ರೀ ಸತಿ ಮನೋವಿಹಾರಿ
--------------------------------------------------------------------------------------------------------------------------
ಸತಿ ಸಾವಿತ್ರಿ (೧೯೬೫) - ಸಾಕಲೇ ಬಿಂಕದ ನೋಟವು ಹರಿಣಿ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಸದಾಶಿವಯ್ಯ ಗಾಯನ : ಪಿ.ಬಿ.ಶ್ರೀನಿವಾಸ,
ಹೂಂಹೂಂಹೂಂ... ಹೂಂ... ಹೂಂ.. ಏನಿದೋ... ಏತಕೋ
ಸಾಕಲೇ ಬಿಂಕದ ನೋಟವು ಹರಿಣಿ
ಸಾಕಲೇ ಬಿಂಕದ ನೋಟವು ಹರಿಣಿ
ಅಂದವಾ ಈ ಚೆಂದವಾ ನಾಚಿಸುವಳೂ ಆ ನವ ತರುಣಿ
ನಾಚಿಸುವಳೂ ಆ ನವ ತರುಣಿ
ಸಾಕಲೇ ಬಿಂಕದ ನೋಟವು ಹರಿಣಿ
ಆ ಸವಿನೋಟ ಕುರುಳುಗಳಾಟ ಚೆಂದುಟಿ ಚೆಲುವು ಆ ನಗುವೂ
ಆ ಸವಿನೋಟ ಕುರುಳುಗಳಾಟ ಚೆಂದುಟಿ ಚೆಲುವು ಆ ನಗುವೂ
ಕೋಮಲ ದನಿಯೂ ಒಲವಿನ ನುಡಿಯೂ ಅಂದವೋ ಆ ಚೆಂದವೋ
ಮರೆಯದೆ ಮನದಿ ಕಾಡುತಿರೇ
ಸಾಕಲೇ ಬಿಂಕದ ನೋಟವು ಹರಿಣಿ
ರಾಜಕುಮಾರಿ ನೀ ಸುಕುಮಾರಿ ರಾಜ್ಯದೀ ಹೀನಾ ದೀನನು ನಾ
ರಾಜಕುಮಾರಿ ನೀ ಸುಕುಮಾರಿ ರಾಜ್ಯದೀ ಹೀನಾ ದೀನನು ನಾ
ನನ್ನಯ ನೆನಪೂ ನಿನಗಿಹುದೇನೋ ಅಂದವೋ ಆ ಚೆಂದವೋ
ನಾನಂತೂ ಮರೆಯೇ ಜೀವನದಿ
ಸಾಕಲೇ ಬಿಂಕದ ನೋಟವು ಹರಿಣಿ
ಸಾಕಲೇ ಬಿಂಕದ ನೋಟವು ಹರಿಣಿ
ಅಂದವೋ ಆ ಚೆಂದವೋ ಹೂಂಹೂಂಹೂಂ ಹೂಂಹೂಂಹೂಂ
--------------------------------------------------------------------------------------------------------------------------
ಸತಿ ಸಾವಿತ್ರಿ (೧೯೬೫) - ಹರಿಣಿ ಹೃದಯ ಚೆನ್ನ ಬ್ರಾಹ್ಮಿ ಮೂರ್ಹತದಲಿ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ, ಡಾ|| ರಾಜಕುಮಾರ
ಹೆಣ್ಣು : ಹರಿಣಿ ಹೃದಯ ಚೆನ್ನ ಬ್ರಾಹ್ಮಿ ಮೂರ್ಹತದಲಿ
ವರಪತಿಯ ವದನಾರವಿಂದ ದರ್ಶನ ಮಾಡಿ
ಪಾದಕಮಲಕೆ ನಮಿಸಿ ಸ್ನಾನಾದಿಗಳ ಮುಗಿಸಿ
ಮತ್ತೆ ಮಡಿಲಲ್ಲಿ ಬಂದು ಶಿರಬಾಗಿ ಅತ್ತೆಮಾವಂದಿರಿಗೆ ವಂದಿಸುತಾ
ಸುರಭಿ ಗೋ ಪೂಜೆಯನು ಭಕ್ತಿಯಿಂ ನಡೆಸಿ
ಶ್ರೀ ತುಳಸಿ ಮಾತೆಯನು ಶೃದ್ಧೆಯಿಂದ ಅರ್ಚಿಸುತ
ಹರಿಹರರೂಪದ ಅಶ್ವತ್ಥಾಮ ವೃಕ್ಷವನು ಪೂಜಿಸುತಾ
ವರಸತಿ ಸಾವಿತ್ರಿಯು ಆದರ್ಶವೆನಿಸಿಹಳು ಸರ್ವ ನಾರಿಯ ಲೋಕಕೇ ..
ಗಂಡು : ಸತ್ತಾಶ್ರ ರಥಮಾರೂಢಮ್ ಪ್ರಚಂಡಮ್ ಕಶ್ಯಪಜಾಮಂ
ಶ್ರೀ ತಪದ್ಭಮಧರಂ ದೇವಂ ತಂ ಸೂರ್ಯಮ್ ಪ್ರಣಮಾಮ್ಯಹಹಂ.. ಪ್ರಣಮಾಮ್ಯಹಹಂ
--------------------------------------------------------------------------------------------------------------------------
ಸತಿ ಸಾವಿತ್ರಿ (೧೯೬೫) - ಸಾವಿತ್ರೇತೆ ನಮೋ ಗಾಯತ್ರಿತೇ ನಮೋ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಸದಾಶಿವಯ್ಯ ಗಾಯನ : ಎಸ್.ಜಾನಕೀ
ಸಪ್ತಲೋಕ ಪ್ರಪೂಜಿತೇ ಪ್ರಿಯೇ ಸಪ್ತಸ್ವರ ಆನಂದಿತೇ
ಶುಭ್ರ ವಸ್ತ್ರ ವಿರಾಜಿತೇ ಸಾವಿತ್ರಿದೇವಿ ನಮೋಸ್ತುತೇ...
ಸಾವಿತ್ರಿತೇ ನಮೋ ಗಾಯತ್ರಿತೇ ನಮೋ
ಸಾವಿತ್ರಿತೇ ನಮೋ ಗಾಯತ್ರಿತೇ ನಮೋ
ಸರಸ್ವತಿತೇ ನಮೋ ಜಗನ್ಮಾತೇ...
ಸಾವಿತ್ರಿತೇ ನಮೋ ಗಾಯತ್ರಿತೇ ನಮೋ
ಸರಸ್ವತಿತೇ ನಮೋ ಜಗನ್ಮಾತೇ...
ಸಾವಿತ್ರಿತೇ ನಮೋ ಗಾಯತ್ರಿತೇ ನಮೋ
ತ್ರಿಭುವನ ಮೋಹಿನಿ ಶುಭಫಲದಾಯಿನೀ ಅಭಯಹಸ್ತದಾಯಿನೀ ಗೀರ್ವಾಣಿ
ತ್ರಿಭುವನ ಮೋಹಿನಿ ಶುಭಫಲದಾಯಿನೀ ಅಭಯಹಸ್ತದಾಯಿನೀ ಗೀರ್ವಾಣಿ
ಪ್ರಭುವಿಗೇ ಧೀರ್ಘದ ಆಯುವ ನೀಡಿ
ಪ್ರಭುವಿಗೇ ಧೀರ್ಘದ ಆಯುವ ನೀಡಿ ಸೌಭಾಗ್ಯ ಕಾಪಾಡೇ ಜಗ್ದಜನನಿ
ಸಾವಿತ್ರಿತೇ ನಮೋ ಗಾಯತ್ರಿತೇ ನಮೋ
ಸರಸ್ವತಿತೇ ನಮೋ ಜಗನ್ಮಾತೇ...
ಸಾವಿತ್ರಿತೇ ನಮೋ ಗಾಯತ್ರಿತೇ ನಮೋ
ಬಾಳಲು ಬಯಸಿದ ಬಾಲೆಯೂ ನಾ... ನಾಳೆಯ ನೆನೆದರೇ ನಡುಗುವೇ ನಾ
ಬಾಳಲು ಬಯಸಿದ ಬಾಲೆಯೂ ನಾ... ನಾಳೆಯ ನೆನೆದರೇ ನಡುಗುವೇ ನಾ
ತಾಳುವೇ ನೆನೆತು ಶೋಕದ ಜ್ವಾಲೇ..
ತಾಳುವೇ ನೆನೆತು ಶೋಕದ ಜ್ವಾಲೇ ಕಾಳ ರೂಪದ ಕಾಲನ ಲೀಲೆ
ಮಂಗಳಾಂಗಿ ಮಾತಂಗಿ ಮನ್ಮೋಮಣಿ ಮರಕತಮಣಿ ಮಯ ಮಾಲಾಭರಣಿ
ಮಂಗಳಾಂಗಿ ಮಾತಂಗಿ ಮನ್ಮೋಮಣಿ ಮರಕತಮಣಿ ಮಯ ಮಾಲಾಭರಣಿ
ಮಾಧುರ್ಯ ಗಾನಾಮೃತನೋದಿನಿ ಮಧುರವಾಣಿ ನೀಲವೇಣಿ ಮಾಲಿನಿ
ಸಾವಿತ್ರಿತೇ ನಮೋ ಗಾಯತ್ರಿತೇ ನಮೋ
ಸರಸ್ವತಿತೇ ನಮೋ ಜಗನ್ಮಾತೇ...
ಸಾವಿತ್ರಿತೇ ನಮೋ ಗಾಯತ್ರಿತೇ ನಮೋ
ಸರಸ್ವತಿತೇ ನಮೋ ಜಗನ್ಮಾತೇ... ಮಾತೇ..
--------------------------------------------------------------------------------------------------------------------------
ಸತಿ ಸಾವಿತ್ರಿ (೧೯೬೫) - ಅಂಗನೆ ಮೊರೆ ಕೇಳಿ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಸದಾಶಿವಯ್ಯ ಗಾಯನ : ಎಸ್.ಜಾನಕೀ
ದೇವೀ... ತಾಯೀ.. ಜನನೀ ....
ಪತಿಯ ಪ್ರಾಣ ಉಳಿಸೇ ಸತಿಯು ತಾ ಕೈಕೊಂಡ ವೃತವೆಲ್ಲಾ ವಿಫಲವಾಗಿರೇ ..
ಸ್ತುತಿಸಿದೇನು ಅನುದಿನವೂ ಗತಿಸಿಹುದು ಪತಿಯಿಂದು ಗತಿತೋರು ತಾಯೇ ವರದೇವಿ...
ಅಂಗನೇ ಮೊರೆ ಕೇಳಿ ಮಾಂಗಲ್ಯ ನೀ ಉಳಿಸೇ
ಅಂಗನೇ ಮೊರೆ ಕೇಳಿ ಮಾಂಗಲ್ಯ ನೀ ಉಳಿಸೇ
ಕಣ್ಣಗಾಣದೇ ನಿಂದುಹೇ .. ತಾಯೇ ತಾಯೇ
ಅಂಗನೇ ಮೊರೆ ಕೇಳಿ ಮಾಂಗಲ್ಯ ನೀ ಉಳಿಸೇ
ಕಣ್ಣಗಾಣದೇ ನಿಂದುಹೇ .. ತಾಯೇ ತಾಯೇ ಅಂಗನೇ ಮೊರೆ ಕೇಳಿ
ಅಂಗನೇ ಮೊರೆ ಕೇಳಿ ಮಾಂಗಲ್ಯ ನೀ ಉಳಿಸೇ
ಕುಂಕುಮ ಅರಿಷಣವ ಅಳಿಸಲೇಬೇಕು
ಕುಂಕುಮ ಅರಿಷಣವ ಅಳಿಸಲೇಬೇಕು
ಕಂಕಣ ಸುಮಗಳನು ತೆಗೆಯಲೇಬೇಕು
ಕಂಕಣ ಸುಮಗಳನು ತೆಗೆಯಲೇಬೇಕು
ಕಂಡಿಹ ಸವಿಗನಸು ಬರಿದಾಗಬೇಕೇ
ಕಣ್ಣಲ್ಲಿ ಕಂಬನಿಯು ಹರಿಯಲೇಬೇಕೇ
ಕಣ್ಣಲ್ಲಿ ಕಂಬನಿಯು ಹರಿಯಲೇಬೇಕೇ ಮಾತೇ.. ತಾಯೇ ..
ಅಂಗನೇ ಮೊರೆ ಕೇಳಿ
ಅಂಗನೇ ಮೊರೆ ಕೇಳಿ ಮಾಂಗಲ್ಯ ನೀ ಉಳಿಸೇ
ನೇಮದಿಂದ ನಿನ್ನನು ನಾ ಪೂಜಿಸಿರುವೇ ನಾದೊಡೆ
ನೇಮದಿಂದ ನಿನ್ನನು ನಾ ಪೂಜಿಸಿರುವೇ ನಾದೊಡೆ
ಭಾಮೆಯ ಧರ್ಮವನ ಪಾಲಿಸಿರುವೇ ನಾದೊಡೆ
ಭಾಮೆಯ ಧರ್ಮವನ ಪಾಲಿಸಿರುವೇ ನಾದೊಡೆ
ಧರ್ಮನು ತಾ ನಡೆದ ದಾರಿ ಹಿಡಿಯಲೆಂದೂ
ಧರ್ಮನು ತಾ ನಡೆದ ದಾರಿ ಹಿಡಿಯಲೆಂದೂ
ಪ್ರೇಮದಿಂದ ಶಕ್ತಿಯನ್ನು ನೀಡೋ ಏನಗೇ
ಪ್ರೇಮದಿಂದ ಶಕ್ತಿಯನ್ನು ನೀಡೋ ಏನಗೇ ಮಾತೇ... ಮಾತೇ... ತಾಯೇ ...
--------------------------------------------------------------------------------------------------------------------------
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಎಸ್.
ಕುರುಳುಗಳ ಅಂದವನು ಮರೆಮಾಚಿಬಿಡು ಎಂದೂ
ಶಿರಮಾಣಿಕವ ನೀ ತೆಗೆದೆಯೇನೋ
ಕೊರಳನೂದುವ ಚೆಲುವ ಮರೆಸಿಹುತಾ ನಿಂದು
ನವರತುನಗಳ ಮಾಲೆಗಳನು ಬಿಟ್ಟೆಯೇನೂ
ಪರ್ಣ ಸುಂದರ ಕಹಿಯ ಚೆಲುವ ಮುಚ್ಚಿಡುವೇ ಎಂದು
ರತುನದ ಉಡ್ಯನವನು ತೆಗೆದೆಯೇನು
ಪದಪಲ್ಲವದ ಕಾಂತಿ ಹುದುಗಿ ಹೋಗುವುದೆಂದು
ಸ್ವರ್ಣ ಮಂಜಿರವನು ಬಿಟ್ಟೇ ಏನೋ
ಸಹಜ ಸುಂದರಿ ನಿನಗೇ ಆಭರಣವೇಕೆ
ಮಿಂಚು ಬಳ್ಳಿಗೆ ಹಣತೆ ಬೆಳುಕುತಾ ಬೇಕೇ
ಬಂಗಾರ ಪುತ್ಥಳಿಯೂ ನೀನು ಮನದನ್ನೇ
ನಿನ್ನಂದ ಮಕರಂದ ಬಾ ಚೆಲುವೇ ಚೆನ್ನೇ
ಬಾ ಚೆಲುವೇ ಚೆನ್ನೇ
--------------------------------------------------------------------------------------------------------------------------
No comments:
Post a Comment