1006. ಮುರಿಯದ ಮನೆ (೧೯೬೪)

ಮುರಿಯದ ಮನೆ ಚಿತ್ರದ ಹಾಡುಗಳು 
  1. ನಮ್ಮೂರ ಚೆನ್ನಯ್ಯ ಮನ್ಮಥ ಮಾರ ಅಂದಕೆ ಚಂದಕೆ ಬಲು ದೂರ
  2. ಕೇದಿಗೆ ಹೂ ಮುಡಿದು ಆದರದ ನಗೆ ಮಿಡಿದು
  3. ಮತಿಹೀನೇ ಕೈಕೇಯಿ 
  4. ಮೊಲ್ಲೆ ಮಾಲಾರಿ ಘಮಿಸುತಿರೆ 
  5. ಅಂದ ಚಂದವೇಕೆ  
  6. ಮತಿಹೀನ ನಾನಾಗೇ 
ಮುರಿಯದ ಮನೆ (೧೯೬೪) - ನಮ್ಮೂರ ಚೆನ್ನಯ್ಯ ಮನ್ಮಥ ಮಾರ ಅಂದಕೆ ಚಂದಕೆ ಬಲು ದೂರ
ಸಂಗೀತ : ವಿಜಯ ಕೃಷ್ಣಮೂರ್ತಿ ಸಾಹಿತ್ಯ : ಕುರಾಸೀ, ಗಾಯನ : ಘಂಟಸಾಲ, ಎಲ್.ಆರ್.ಈಶ್ವರಿ 

ಗಂಡು : ಆದಿ ಪೂಜೆಯಕೊಂಬ ಆನೇ ಮೊಗನೇ ಹೊಯ್
           ಆದರಕೆ ಮೊದಲಿಗನೇ ಹರನ ಮಗನೇ
           ಆವ್ ಹರಕೆಯ ನಿನ್ನ ಬೇಡಲಯ್ಯ
           ಕಾವ ದೊರೆ ನೀ ಬಲ್ಲೇ ವರ ಕರುಣಿಸಯ್ಯ
ಕೋರಸ್ : ಹೈ ಹೈ ಹೈ ಹೈ
               ನಮ್ಮೂರ ಚೆನ್ನಯ್ಯ ಮನ್ಮಥ ಮಾರ ಅಂದಕೆ ಚಂದಕೆ ಬಲು ದೂರ
               ಆಹ್ಹಾ.. ನಮ್ಮೂರ ಚೆನ್ನಯ್ಯ ಮನ್ಮಥ ಮಾರ ಅಂದಕೆ ಚಂದಕೆ ಬಲು ದೂರ
ಹೆಣ್ಣು : ಇವ ಎಲ್ಲಿಂದ ಬಂದಾನೋ ಸಿಂಗಾರ ಶೂರ ಹತ್ತು ಬದ್ದಿಲ್ಲದ ಹಮ್ಮಿರ
ಕೋರಸ್ : ಆಹ್ಹಾ.. ನಮ್ಮೂರ ಚೆನ್ನಯ್ಯ ಮನ್ಮಥ ಮಾರ ಅಂದಕೆ ಚಂದಕೆ ಬಲು ದೂರ
ಹೆಣ್ಣು : ಇವ ಎಲ್ಲಿಂದ ಬಂದಾನೋ ಸಿಂಗಾರ ಶೂರ ಹತ್ತು ಬದ್ದಿಲ್ಲದ ಹಮ್ಮಿರ
ಕೋರಸ್ : ಹತ್ತು ಬದ್ದಿಲ್ಲದ ಹಮ್ಮಿರ

ಹೆಣ್ಣು : ತನಗೇ ತಕ್ಕ ಹೆಣ್ಣಿಗಾಗಿ ಬೆಣಕನ್ನನ್ನೇ ಬೇಡಾಡಿ
ಕೋರಸ್ : ತನಗೇ ತಕ್ಕ ಹೆಣ್ಣಿಗಾಗಿ ಬೆಣಕನ್ನನ್ನೇ ಬೇಡಾಡಿ
ಹೆಣ್ಣು : ನೀರಿಗಾಗಿ ಹೋಗೋ ಹೆಣ್ಣಾ ನೋಡಿ ನೆಟ್ಟು ವಾರೆಗಣ್ಣ
ಕೋರಸ್ : ನೋಡಿ ನೆಟ್ಟು ವಾರೆಗಣ್ಣ         
ಹೆಣ್ಣು : ಹಲ್ಲು ಕಿರಿವಾ ಜೊಲ್ಲು ಬುರುಕಾ ಈ ಕುರೂಪಿಗಾವಲೂ
ಕೋರಸ್: ಆಹ್ಹಾ.. ಮಡದಿಯಾಗಿ ಬರುವಳೂ
ಗಂಡು : ಹೇ.. ಬಾಯಾಳಿ ಬಜಾರಿಗಳಿರಾ ..
            ಯಾವೂರ ಮೂದೇವಿ ಈ ಮಳ್ಳಿ ಮಲ್ಲಿ ಮರ್ವಾದೇ ಇಲ್ಲದ ಗಯ್ಯಾಳಿ
            ಯಾವೂರ ಮೂದೇವಿ ಈ ಮಳ್ಳಿ ಮಲ್ಲಿ ಮರ್ವಾದೇ ಇಲ್ಲದ ಗಯ್ಯಾಳಿ
            ಎಲ್ಲಿಂದ ಬಂದಾಳೋ ಮಂದಾರ ರಂಭೇ ಬಲ್ಲಾಳ ರಾಯನ ಚಿತ್ತಾರ ಬೊಂಬೆ
            ಯಾವೂರ ಮೂದೇವಿ ಈ ಮಳ್ಳಿ ಮಲ್ಲಿ ಮರ್ವಾದೇ ಇಲ್ಲದ ಗಯ್ಯಾಳಿ

ಗಂಡು : ಬಾಯ್ ಬಡಿಕಿ ಬಲ್ಲೇ ನಿನ್ನ ನಾಚಿಕೆಗೆಟ್ಟ ಹೇಡಿತನ 
ಕೋರಸ್ : ಹೈ .. ಹೈ .. 
ಹೆಣ್ಣು : ಮೊಂಡ ಕೈಯ್ಯ ಕುಂಟು ಬಸವ ಬಲ್ಲೇ ನಿನ್ನ ಜಂಭ ಬರುವಾ 
ಗಂಡು : ಆಹ್ಹಾಹಾ.. ಹದ್ದುಮೀರಿ ಹರಟಿದರೇ ಹಲ್ಲು ಮುರಿದು ಉದುರಿಸುವೇ 
ಹೆಣ್ಣು : ನೂರು ಜನ್ಮ ಹೊತ್ತರೂ ಬೇಳೆಕಾಳೂ ಬೇಯದೂ 
ಕೋರಸ್ : ಬೇಳೆಕಾಳೂ ಬೇಯದೂ  
ಗಂಡು : ಯಾವೂರ ಮೂದೇವಿ ಈ ಮಳ್ಳಿ ಮಲ್ಲಿ ಮರ್ವಾದೇ ಇಲ್ಲದ ಗಯ್ಯಾಳಿ
ಹೆಣ್ಣು : ಇವ ಎಲ್ಲಿಂದ ಬಂದಾನೋ ಸಿಂಗಾರ ಶೂರ ಹತ್ತು ಬದ್ದಿಲ್ಲದ ಹಮ್ಮಿರ
ಕೋರಸ್ : ಹತ್ತು ಬದ್ದಿಲ್ಲದ ಹಮ್ಮಿರ
ಗಂಡು : ಯಾವೂರ ಮೂದೇವಿ ಈ ಮಳ್ಳಿ ಮಲ್ಲಿ ಮರ್ವಾದೇ ಇಲ್ಲದ ಗಯ್ಯಾಳಿ
ಹೆಣ್ಣು : ಕೈಯ್ಯಲಾಗದ ಕಿಸಬಾಯಿದಾಸ್ ಆಡುವ ನೋಡೇ ಹುಲಿವೇಷಾ 
ಕೋರಸ್ : ಮೊಂಡ ಕೈ  ಮೊಂಡ ಕೈ ಮೊಂಡ ಕೈ ಮೊಂಡ ಕೈ 
ಗಂಡು : ನಯಭಯವಿಲ್ಲದ ಹರೆಯದ ಕುದುರೇ 
           ಸೊಟ್ಟು ಮೋರೆ..  ಸೊಟ್ಟು ಮೋರೆ..  ಸೊಟ್ಟು ಮೋರೆ..  ಸೊಟ್ಟು ಮೋರೆ..  
ಕೋರಸ್ : ಮೊಂಡ ಕೈ  ಮೊಂಡ ಕೈ 
ಗಂಡು : ಸೊಟ್ಟು ಮೋರೆ..  ಸೊಟ್ಟು ಮೋರೆ..  
ಕೋರಸ್  : ನೀನೇ ...                               ಗಂಡು : ನೀವೇ... 
ಕೋರಸ್  : ನೀನೇ ...                               ಗಂಡು : ನೀವೇ... 
ಕೋರಸ್  : ನೀನೇ ...                               ಗಂಡು : ನೀವೇ... ಟುರ್ರ್ರ್ರರ್ ... 
--------------------------------------------------------------------------------------------------------------------------

ಮುರಿಯದ ಮನೆ (೧೯೬೪) - ಕೇದಿಗೆ ಹೂ ಮುಡಿದು ಆದರದ ನಗೆ ಮಿಡಿದು
ಸಂಗೀತ : ವಿಜಯ ಕೃಷ್ಣಮೂರ್ತಿ ಸಾಹಿತ್ಯ : ಕುರಾಸೀ, ಗಾಯನ : ಪಿ.ಬಿ.ಎಸ್, ಪಿ.ಸುಶೀಲಾ

ಗಂಡು : ಕೇದಿಗೆ ಹೂ ಮುಡಿದು ಆದರದ ನಗೆ ಮಿಡಿದು             ಹೆಣ್ಣು : ನಗೆ ಮಿಡಿದು
ಗಂಡು : ಮಾತಿನ ಮುತ್ತ ಸುರಿಸುವ ಮಲ್ಲಿಗೆ                          ಹೆಣ್ಣು : ಮಲ್ಲಿಗೆ
ಗಂಡು : ನೀ ಯಾವ ಸಿರಿ ಹೇರಿ ತಂದೆ ಇಲ್ಲಿಗೇ                      ಹೆಣ್ಣು : ಇಲ್ಲಿಗೆ

ಹೆಣ್ಣು : ಹೂವಂಥ ಮನಬೇಕೇ ಮಾವಂಥ ಗುಣಬೇಕೇ           ಗಂಡು : ಗುಣ ಬೇಕೇ
ಹೆಣ್ಣು : ಮಾಸದ ಚೆಲುವು ಬೇಕೇ ಚೆನ್ನಯ್ಯ                         ಗಂಡು : ಚೆನ್ನಯ್ಯ
ಹೆಣ್ಣು : ನಿನ್ನ ಬಯಕೆಯ ಬಾಯ್ ತುಂಬಾ ಬೇಡಯ್ಯಾ          ಗಂಡು : ಬೇಡಯ್ಯಾ

ಗಂಡು : ತೌರೂರ ನೂರಾ ನಗ...  ತಮ್ಮನ ಹಣ ಕೊಳಗ...
            ತೌರೂರ ನೂರಾ ನಗ...  ತಮ್ಮನ ಹಣ ಕೊಳಗ...
            ತಂದು ಮನೆ ತುಂಬಿದರೆ ಅಂದವೋ ಬರಿ ಮರುವಾದೆ ಮಾನಗಳೇ ಚಂದವೋ
           ಮರುವಾದೆ ಮಾನಗಳೇ ಚಂದವೋ
ಹೆಣ್ಣು : ಹೂವಂಥ ಮನಬೇಕೇ ಮಾವಂಥ ಗುಣಬೇಕೇ           ಗಂಡು : ಗುಣ ಬೇಕೇ
ಹೆಣ್ಣು : ಮಾಸದ ಚೆಲುವು ಬೇಕೇ ಚೆನ್ನಯ್ಯ                         ಗಂಡು : ಚೆನ್ನಯ್ಯ
ಹೆಣ್ಣು : ನಿನ್ನ ಬಯಕೆಯ ಬಾಯ್ ತುಂಬಾ ಬೇಡಯ್ಯಾ          ಗಂಡು : ಬೇಡಯ್ಯಾ

ಗಂಡು : ತಂದಾನ ತಾನ ತನ್ನೀ ತಾನಾನನ ತನ್ನೀ ತರನ್ನನ್ನಾ ತಾಣ ತನ್ನೀ ಓಓಓಓ 
ಹೆಣ್ಣು : ಮಾನದ ಆಭರಣ ಮರುವಾದೆ ಹೊರೆ ಚಿನ್ನ
          ಮಾನದ ಆಭರಣ ಮರುವಾದೆ ಹೊರೆ ಚಿನ್ನ ಮಾದರಿಯ ವರಸಾಮ್ಯ ಸಾಲದೇ
          ನಮ್ಮ ನೇಗಿಲಯೋಗಿ ಹಿರಿಮೆ ಸಾರದೇ
         ನೇಗಿಲಯೋಗಿ ಹಿರಿಮೆ ಸಾರದೇ
ಗಂಡು : ಕೇದಿಗೆ ಹೂ ಮುಡಿದು ಆದರದ ನಗೆ ಮಿಡಿದು             ಹೆಣ್ಣು : ನಗೆ ಮಿಡಿದು
           ಮಾತಿನ ಮುತ್ತ ಸುರಿಸುವ ಮಲ್ಲಿಗೆ                           ಹೆಣ್ಣು : ಮಲ್ಲಿಗೆ 
          ನೀ ಯಾವ ಸಿರಿ ಹೇರಿ ತಂದೆ ಇಲ್ಲಿಗೇ                         ಹೆಣ್ಣು : ಇಲ್ಲಿಗೇ  
ಗಂಡು : ತಂದಾನ ತಾನ ತನ್ನೀ ತಾನಾನನ ತನ್ನೀ ತರನ್ನನ್ನಾ ತಾಣ ತನ್ನೀ ಓಓಓಓ
-------------------------------------------------------------------------------------------------------------------------

ಮುರಿಯದ ಮನೆ (೧೯೬೪) - ಮತಿ ಹೀನೇ ಕೈಕೇಯಿ ಮಂಥರೆಯ ನುಡಿ ಕೇಳಿ 
ಸಂಗೀತ : ವಿಜಯ ಕೃಷ್ಣಮೂರ್ತಿ ಸಾಹಿತ್ಯ : ಕುರಾಸೀ, ಗಾಯನ : ಪಿ.ಬಿ.ಎಸ್, 

ಮತಿ ಹೀನೇ ಕೈಕೇಯಿ ಮಂಥರೆಯ ನುಡಿ ಕೇಳಿ ಮಾಂಗಲ್ಯ ಹಾನಿಗೀಡಾದಳಲ್ಲೋ
ಮಂದಮತಿ ಕೌರವನೂ ಮಾವ ಶಕುನಿಯ ನಂಬೀ ಬಂಧು ಮಿತ್ರರ ಸಹಿತ ಅಳಿದನಲ್ಲೋ...
ಸಾವಿರ ನಿದರ್ಶನ ಇರುವಲ್ಲಿ ಹರಹರ... ಮಾನವನ ತಿಳುವಳಿಕೆಗೇ ಬರಲಾರದೋ  .
ಚಿನ್ನದಂತಹ ಬಾಳುವೆಯಲ್ಲಿ ಭಿನ್ನ ಭಾವವೇ ಏಕೇ
ಕುಹುಕ ಯೋಚನೇ ಕೌರ್ಯ ವಂಚನೇ
ಹೇಯವೋ..  ಹೇಯವೋ .. ಹರುಷದ ಹಾನಿಯೋ ..
ಚಿನ್ನದಂತಹ ಬಾಳುವೆಯಲ್ಲಿ ಭಿನ್ನ ಭಾವವೇ ಏಕೇ
ಕುಹುಕ ಯೋಚನೇ ಕೌರ್ಯ ವಂಚನೇ
ಹೇಯವೋ..  ಹೇಯವೋ .. ಹರುಷದ ಹಾನಿಯೋ ..

ಸುಖದ ಸೀಮೆಗೇ ಒಂದೇ ದಾರೀ ಸಹನೆಯಂತೇ ಸಂಚಾರೀ ..
ಸುಖದ ಸೀಮೆಗೇ ಒಂದೇ ದಾರೀ ಸಹನೆಯಂತೇ ಸಂಚಾರೀ ..
ಕೂಡಿ ಕಾಡಲೇ...  ಓಓಓಓಓ  ಬೆರೆತ ಬಾಳೂ ವಿಧಿಯೇ ಹರುಷದ ಹಾನಿಯೋ
ಚಿನ್ನದಂತಹ ಬಾಳುವೆಯಲ್ಲಿ ಭಿನ್ನ ಭಾವವೇ ಏಕೇ
ಕುಹುಕ ಯೋಚನೇ ಕೌರ್ಯ ವಂಚನೇ
ಹೇಯವೋ..  ಹೇಯವೋ .. ಹರುಷದ ಹಾನಿಯೋ ..

ಸಮರವಲ್ಲವೋ ಈ ಸಂಸಾರ ಅಮರ ಪ್ರೇಮ ಮಂದಾರ
ಸಮರವಲ್ಲವೋ ಈ ಸಂಸಾರ ಅಮರ ಪ್ರೇಮ ಮಂದಾರ
ಅರಿತು ಬಾಳೋ ಜಾಣ ವಿರಸ ಮೂಡಿ ಮೂಳೆಯೇ.. ಹರುಷದ ಹಾನಿಯೋ ..
ಚಿನ್ನದಂತಹ ಬಾಳುವೆಯಲ್ಲಿ ಭಿನ್ನ ಭಾವವೇ ಏಕೇ
ಕುಹುಕ ಯೋಚನೇ ಕೌರ್ಯ ವಂಚನೇ
ಹೇಯವೋ..  ಹೇಯವೋ .. ಹರುಷದ ಹಾನಿಯೋ .. ಹರುಷದ ಹಾನಿಯೋ ..
------------------------------------------------------------------------------------------------------------------------

ಮುರಿಯದ ಮನೆ (೧೯೬೪) - ಮೊಲ್ಲೇ ಮಲರಿ ಭೃಮಿಸಿತೀರೇ ಭೃಮಿಸಿ  
ಸಂಗೀತ : ವಿಜಯ ಕೃಷ್ಣಮೂರ್ತಿ ಸಾಹಿತ್ಯ : ಕುರಾಸೀ, ಗಾಯನ : ಎಲ್.ಆರ್.ಈಶ್ವರಿ 

ಮೊಲ್ಲೇ ಮಲರಿ ಭೃಮಿಸಿತೀರೇ ಭೃಮಿಸಿ ಬಯಸಿದಿಹ ಹೆಣ್ಣಾರೋ
ನಲ್ಲೇ ಬಳುಕಿ ಬಳಿಗೇ ಬರೇ ಒಲಿಸಿ ನಲಿಸಿದಿಹ ಗಂಡಾರೋ
ಮೊಲ್ಲೇ ಮಲರಿ ಭೃಮಿಸಿತೀರೇ ಭೃಮಿಸಿ ಬಯಸಿದಿಹ ಹೆಣ್ಣಾರೋ
ನಲ್ಲೇ ಬಳುಕಿ ಬಳಿಗೇ ಬರೇ ಒಲಿಸಿ ನಲಿಸಿದಿಹ ಗಂಡಾರೋ
ಈ ಮರ್ಮ ವಯೋಧರ್ಮ ಪ್ರೇಮವೊಂದೇ ಕ್ರಮ

ಭಯಾಸಿಂಕೇ ಏಕೋ ಪ್ರೇಮಿ ನಿರಾತಂಕ ಇರೀ ಕಾಮಿನಿ
ಭಯಾಸಿಂಕೇ ಏಕೋ ಪ್ರೇಮಿ ನಿರಾತಂಕ ಇರೀ ಕಾಮಿನಿ
ಇಂದೇ ಹರೆಯ ತರುವ ಸುಖ ಸವಿದರೇ ಸ್ವರ್ಗ ನನ್ನಾಣೆ
ಮುಂದೇ ಬರುವ ಗೆಳೆಯ ಗಹಿ ಕಸಿವಿಸಿ ಕಗ್ಗ ನೀ ಕಾಣೇ
ವಿರಹೀ.. ಬಾ... ಬಾ...  ಬಾ...  ಹರುಷ ತಾ.. ತಾ.. ತಾ...
(ಬಂದೇ ಬಂದೇ ಬಂದೇ ಬಂದೇ ಬಂದೇ ಇಡ್ಲಿ ದೋಸೆ ಕಾಫಿ ಚಹಾ ತಂದೆ ತಂದೆ ಕೋ..ಕೋ.. )
ಮೊಲ್ಲೇ ಮಲರಿ ಭೃಮಿಸಿತೀರೇ ಭೃಮಿಸಿ ಬಯಸಿದಿಹ ಹೆಣ್ಣಾರೋ
ನಲ್ಲೇ ಬಳುಕಿ ಬಳಿಗೇ ಬರೇ ಒಲಿಸಿ ನಲಿಸಿದಿಹ ಗಂಡಾರೋ
ಈ ಮರ್ಮ ವಯೋಧರ್ಮ ಪ್ರೇಮವೊಂದೇ ಕ್ರಮ

ಸುಖ ನೀಡದಂತ ನೀತಿ ಸಖಾ ನೋಡು ಎಂಥಾ ಬ್ರಾಂತಿಯೀ
ಸುಖ ನೀಡದಂತ ನೀತಿ ಸಖಾ ನೋಡು ಎಂಥಾ ಬ್ರಾಂತಿಯೀ
ನೀತಿ ಬಳಸಿ ಬೆಳಸಿದರೇ ಹರೆಯದ ಗೋಳ ಈ ಬಾಳೂ
ಭೀತಿ ತೊರೆದೂ ತೊಡಗಿದರೇ ಕಣದಲಿ ಧೂಳೂ ಈ ಗೋಳೂ
ಸರಸೀ ಬಾ.. ಬಾ.. ಬಾ.. ಹರುಷ ಕೋ.. ಕೋ... ಕೋ..
(ಕೊಟ್ಟೇ ಕೊಟ್ಟೇ ಕೊಟ್ಟೆ ತೀರ್ಥ ತಂದ ಬಿಲ್ಲೂ ಬಿಟ್ಟೇ ಬಿಟ್ಟೇ ಬಿಟ್ಟೇ ಕೈ.. ಕೈ.. ಕೈ )
ಮೊಲ್ಲೇ ಮಲರಿ ಭೃಮಿಸಿತೀರೇ ಭೃಮಿಸಿ ಬಯಸಿದಿಹ ಹೆಣ್ಣಾರೋ
ನಲ್ಲೇ ಬಳುಕಿ ಬಳಿಗೇ ಬರೇ ಒಲಿಸಿ ನಲಿಸಿದಿಹ ಗಂಡಾರೋ
ಈ ಮರ್ಮ ವಯೋಧರ್ಮ ಪ್ರೇಮವೊಂದೇ ಕ್ರಮ
------------------------------------------------------------------------------------------------------------------------

ಮುರಿಯದ ಮನೆ (೧೯೬೪) - ಮತಿ ಹೀನನಾದೇ ತಂದೇ 
ಸಂಗೀತ : ವಿಜಯ ಕೃಷ್ಣಮೂರ್ತಿ ಸಾಹಿತ್ಯ : ಕುರಾಸೀ, ಗಾಯನ : ಪಿ.ಬಿ.ಎಸ್, 

ಮತಿ ಹೀನ ನಾನಾಗೇ ತಂದೇ ಮಗುವಾಗಿ ನೀನೇಕೆ ಬಂದೇ
ಮತಿ ಹೀನ ನಾನಾಗೇ ತಂದೇ ಮಗುವಾಗಿ ನೀನೇಕೆ ಬಂದೇ
ನಿನಗಾಗೇ ನಾನೇನ ನೀವೇ ಬರಿ ನೋವೇ... ಬರಿ ನೋವೇ  ಜೋಜೋ  ಜೋಜೋ  

ನನಗೇಕೆ ಈ ಜನ್ಮ ಬಂತೆಂದೂ ಮನದಲ್ಲೇ ನಾನಂಜುತಿರುವೊಂದು 
ನನಗೇಕೆ ಈ ಜನ್ಮ ಬಂತೆಂದೂ
ನನಗೇಕೆ ಈ ಜನ್ಮ ಬಂತೆಂದೂ ಮನದಲ್ಲೇ ನಾನಂಜುತಿರುವೊಂದು 
ತಿಳಿಗೇಡಿಯಂತೇಕೆ ಕೈ ತಂದೆ ಎಳೇ ಕಂದ ನೀನಗಾರೂ ಗತಿ ಮುಂದೇ 
ಮತಿ ಹೀನ ನಾನಾಗೇ ತಂದೇ ಮಗುವಾಗಿ ನೀನೇಕೆ ಬಂದೇ
ನಿನಗಾಗೇ ನಾನೇನ ನೀವೇ ಬರಿ ನೋವೇ... ಬರಿ ನೋವೇ  ಜೋಜೋ  ಜೋಜೋ  

ಕುಡಿ ನೀನೂ ಮರವಾಗಿ ನಿಂತಾಗ ಮರೆತಿಹೆ ಹಡೆದಾಕೆ ಅನುರಾಗ 
ಕುಡಿ ನೀನೂ ಮರವಾಗಿ ನಿಂತಾಗ
ಕುಡಿ ನೀನೂ ಮರವಾಗಿ ನಿಂತಾಗ ಮರೆತಿಹೆ ಹಡೆದಾಕೆ ಅನುರಾಗ 
ಸಾಮಾನ್ಯ ಹೆಣ್ಣಲ್ಲ ನಿನ್ನವ್ವಾ ಮೈ ತಳೆದ ಮಾದೇವಿ ಗುರುದೈವ 
ಮತಿ ಹೀನ ನಾನಾಗೇ ತಂದೇ ಮಗುವಾಗಿ ನೀನೇಕೆ ಬಂದೇ
ನಿನಗಾಗೇ ನಾನೇನ ನೀವೇ ಬರಿ ನೋವೇ... ಬರಿ ನೋವೇ 
ಬರಿ ನೋವೇ.. ಬರಿ ನೋವೇ ..  ಜೋಜೋ  ಜೋಜೋ  
------------------------------------------------------------------------------------------------------------------------

ಮುರಿಯದ ಮನೆ (೧೯೬೪) - ಅಂದಚಂದವೇತಕೆ ಅಂತರಂಗ ದೈವಕೇ ಗುಣ ಜೇನಿನಂತೇ 
ಸಂಗೀತ : ವಿಜಯ ಕೃಷ್ಣಮೂರ್ತಿ ಸಾಹಿತ್ಯ : ಕುರಾಸೀ, ಗಾಯನ :  ಪಿ.ಸುಶೀಲಾ

ಅಂದಚಂದವೇತಕೆ ಅಂತರಂಗ ದೈವಕೇ ಗುಣ ಜೇನಿನಂತೇ
ಮನಸು ಮಾಗಿದೇ ಮಾವಂತೇ ಇನಿತೂ ತುಂಬಿದೇ... ಅಂದಚಂದವೇತಕೆ

ಓಓಓಓಓ... ಎದೆಯ ಬಾಳ್ವೆಯಲ್ಲಾ ಚೆಲುವಿನಾಟವಲ್ಲ ಒಂದೂ ಗೂಡಿರೇ.. ಒಲವೂ ಮೂಡಿರೆ
ಎದೆಯ ಬಾಳ್ವೆಯಲ್ಲಾ ಚೆಲುವಿನಾಟವಲ್ಲ ಒಂದೂ ಗೂಡಿರೇ.. ಒಲವೂ ಮೂಡಿರೆ
ಅದೇ ಪುಣ್ಯ ಲೋಕ ಅದೇ ನನ್ನ ನಾಕ
ಅಂದಚಂದವೇತಕೆ ಅಂತರಂಗ ದೈವಕೇ ಗುಣ ಜೇನಿನಂತೇ
ಮನಸು ಮಾಗಿದೇ ಮಾವಂತೇ ಇನಿತೂ ತುಂಬಿದೇ... ಅಂದಚಂದವೇತಕೆ

ಓಓಓಓಓ .. ನೆಲೆ ನಿನ್ನಿದಿನ್ನ ಒಲಿಕೆ ಕೊಂಡ ಚಿನ್ನ ನಿನ್ನ ಬಾಳಿನ ನೆರಳಿದಾಳವ
ನೆಲೆ ನಿನ್ನಿದಿನ್ನ ಒಲಿಕೆ ಕೊಂಡ ಚಿನ್ನ ನಿನ್ನ ಬಾಳಿನ ನೆರಳಿನಾಳದ
ಧಣಿ ನಿನ್ನ ಸೇವೆ ಸದಾ ದೈವ ಬಾಳ್ವೆ
ಅಂದಚಂದವೇತಕೆ ಅಂತರಂಗ ದೈವಕೇ ಗುಣ ಜೇನಿನಂತೇ
ಮನಸು ಮಾಗಿದೇ ಮಾವಂತೇ ಇನಿತೂ ತುಂಬಿದೇ... ಅಂದಚಂದವೇತಕೆ
------------------------------------------------------------------------------------------------------------------------

No comments:

Post a Comment