ರಾಜದುರ್ಗದ ರಹಸ್ಯ ಚಿತ್ರದ ಹಾಡುಗಳು
- ಕಾಣುವ ತನಕ ನೀ ಎಲ್ಲೋ ನಾ ಅಲ್ಲೇ
- ಅಮ್ಮಮ್ಮ ನುಂಗುವಂತೆ ನೋಡುವ
- ಮೂಡಣದಿಂದ ಮೆಲ್ಲ ಮೆಲ್ಲನೆ
- ಬಳ್ಳಿ ಸೊಂಟದ ಮಳ್ಳಿ ನೋಟದ ಚೆಲುವಮ್ಮಾ ..
- ದೇವಿ ದೇವಿ ನನ್ನದೇವಿ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಬಿ.ಎಸ್. ಪಿ.ಸುಶೀಲಾ
ಗಂಡು : ಕಾಣುವಾತನಕ ನೀ ಎಲ್ಲೋ ನಾ ಎಲ್ಲೋ
ಕಾಣುವಾತನಕ ನೀ ಎಲ್ಲೋ ನಾ ಎಲ್ಲೋ ಕಂಡ ಬಳಿಕ ನೀ ಎಲ್ಲೋ ನಾ ಅಲ್ಲೇ
ಹೆಣ್ಣು : ಕಾಣುವಾತನಕ ನೀ ಎಲ್ಲೋ ನಾ ಎಲ್ಲೋ
ಕಾಣುವಾತನಕ ನೀ ಎಲ್ಲೋ ನಾ ಎಲ್ಲೋ ಕಂಡ ಬಳಿಕ ನೀ ಎಲ್ಲೋ ನಾ ಅಲ್ಲೇ
ಗಂಡು : ನಿನ್ನ ಕಣ್ಣಿನಲ್ಲೇ ನನ್ನ ರೂಪ ಕಂಡೆ ಕಣ್ಣ ಮಾತಿನಲ್ಲಿ ನಿನ್ನ ಭಾವ ಕಂಡೆ
ಹೆಣ್ಣು : ನಿನ್ನ ರೂಪದಲ್ಲೇ ಎನ್ನ ದೈವ ಕಂಡೇ ನಿನ್ನ ದಾರಿಯಲ್ಲೇ ನನ್ನ ಬಾಳ ಕಂಡೇ
ಗಂಡು : ಕಾಣುವಾತನಕ ನೀ ಎಲ್ಲೋ ನಾ ಎಲ್ಲೋ
ಹೆಣ್ಣು : ಕಂಡ ಬಳಿಕ ನೀ ಎಲ್ಲೋ ನಾ ಅಲ್ಲೇ
ಗಂಡು : ಕೆನ್ನೆ ಬಾನಿನಲ್ಲಿ ಅರುಣರಾಗ ಕಂಡೆ
ಕೆನ್ನೆ ಬಾನಿನಲ್ಲಿ ಅರುಣರಾಗ ಕಂಡೆ ನಗೆಯ ಮಿಂಚಿನಲ್ಲಿ ಅನುರಾಗ ಕಂಡೆ
ಹೆಣ್ಣು : ಬಾಳ ಬಾನಿನಲಿ ಭಾಗ್ಯತಾರೇ ಕಂಡೆ
ಬಾಳ ಬಾನಿನಲಿ ಭಾಗ್ಯತಾರೇ ಕಂಡೆ ನಿನ್ನ ಸ್ನೇಹದಲಿ ಆನಂದ ಕಂಡೇ
ಹೆಣ್ಣು : ಕಾಣುವಾತನಕ ನೀ ಎಲ್ಲೋ ನಾ ಎಲ್ಲೋ ಕಂಡ ಬಳಿಕ ನೀ ಎಲ್ಲೋ ನಾ ಅಲ್ಲೇ
ಗಂಡು : ಕಾಣುವಾತನಕ ನೀ ಎಲ್ಲೋ ನಾ ಎಲ್ಲೋ ಕಂಡ ಬಳಿಕ ನೀ ಎಲ್ಲೋ ನಾ ಅಲ್ಲೇ
ಹೆಣ್ಣು : ಲಲಲ್ಲಲ್ಲಲ್ಲಾಲ್ಲಲ್ಲಲ್ಲ ಲ ಲಾ (ಹೂಂ .. ಹೂಂ .. ಹೂಂಹೂಂಹೂಂಹೂಂ)

ಇಬ್ಬರು : ಹೂಂ .. ಹೂಂ .. ಹೂಂಹೂಂಹೂಂಹೂಂ ಹೂಂ .. ಹೂಂ .. ಹೂಂಹೂಂಹೂಂಹೂಂ
------------------------------------------------------------------------------------------------------------------------
ರಾಜದುರ್ಗದ ರಹಸ್ಯ (೧೯೬೭) - ಅಮ್ಮಮ್ಮ ನುಂಗುವಂತೆ ನೋಡುವ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್. ಜಾನಕೀ
ಅಮ್ಮಮ್ಮ.. ನುಂಗುವಂತೆ ನೋಡುವ ಕಣ್ಣ ಸನ್ನೇ ಮಾಡುವಾ ಕೈ ಹಿಡಿದು ಕಾಡುವಾ
ಅಮ್ಮಮ್ಮ.. ನುಂಗುವಂತೆ ನೋಡುವ ಕಣ್ಣ ಸನ್ನೇ ಮಾಡುವಾ ಕೈ ಹಿಡಿದು ಕಾಡುವಾ ಅಮ್ಮಮ್ಮ.. ಆಅಅ.. ಓ ..
ಅತ್ತ ಇತ್ತ ಓಡಿದರೂ ಅಲ್ಲೇ ಬಂದು ನಿಲ್ಲುವಾ.. ಅಂಗಲಾಚಿ ಬೇಡಿದರೂ ಬಿಡೇ ನಿನ್ನ ಎನ್ನುವಾ..

ಒಲ್ಲೇ ಒಲ್ಲೇ ಎಂದರೇನೂ .. ಗಲ್ಲ ಹಿಡಿದೂ ಹಿಂಡುವಾ

ನಿಲ್ಲೂ ನಿಲ್ಲೂ ಎಂದರೇನೂ ಮೆಲ್ಲನೊಂದು ನೀಡುವಾ.. ಮೆಲ್ಲನೊಂದು ನೀಡುವಾ
ಅಮ್ಮಮ್ಮ.. ನುಂಗುವಂತೆ ನೋಡುವ ಕಣ್ಣ ಸನ್ನೇ ಮಾಡುವಾ ಕೈ ಹಿಡಿದು ಕಾಡುವಾ ಅಮ್ಮಮ್ಮ.. ಆಅಅ.. ಓ ..
ಹೊತ್ತು ಗೊತ್ತು ಏನಿಲ್ಲಾ ಉತ್ತರವೂ ಬೇಕಿಲ್ಲಾ.. ಸುತ್ತ ಮುತ್ತ ನೋಡುವಂಥ ಒಳ್ಳೆತನ ಇವಂಗಿಲ್ಲಾ

ಹತ್ತು ಮಂದಿ ಎಲ್ಲಿ ಹೆಣ್ಣೂ ಲಜ್ಜೆಗೇಡೂ ಮಾಡಬಲ್ಲ

ತುಂಟ ಕೃಷ್ಣನಲ್ಲದೇ ರಾಧೇ ನಲ್ಲ ಬೇರಿಲ್ಲಾ.. ರಾಧೇ ನಲ್ಲ ಬೇರಿಲ್ಲಾ..
ಅಮ್ಮಮ್ಮ.. ನುಂಗುವಂತೆ ನೋಡುವ ಕಣ್ಣ ಸನ್ನೇ ಮಾಡುವಾ ಕೈ ಹಿಡಿದು ಕಾಡುವಾ ಅಮ್ಮಮ್ಮ.. ಆಅಅ.. ಓ ..
------------------------------------------------------------------------------------------------------------------------
ರಾಜದುರ್ಗದ ರಹಸ್ಯ (೧೯೬೭) - ಮೂಡಣದಿಂದ ಮೆಲ್ಲ ಮೆಲ್ಲನೆ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಜಾನಕೀ
ಮೂಡಣದಿಂದ ಮೆಲ್ಲ ಮೆಲ್ಲನೇ ಬಂದವನ್ಯಾರೇ ..
ತಾವರೇ ಬೊಗಸೇ ಮುತ್ತನೊಂದನೂ ತಂದವನ್ಯಾರೇ ..
ಮೀನಿನ ಕಣ್ಣೋಳೆ... ಕೋಗಿಲೇ ಧ್ವನಿಯೊಳೇ .. ಸೂರ್ಯನೂ ನೀ ಕೇಳೇ...
ಮೂಡಣದಿಂದ ಮೆಲ್ಲ ಮೆಲ್ಲನೇ ಬಂದವನಾರೇ ..
ತಾವರೇ ಬೊಗಸೇ ಮುತ್ತನೊಂದನೂ ತಂದವನ್ಯಾರೇ ..
ಮೀನಿನ ಕಣ್ಣೋಳೆ... ಕೋಗಿಲೇ ಧ್ವನಿಯೊಳೇ .. ಸೂರ್ಯನೂ ನೀ ಕೇಳೇ... ಆ..
ಹರೆಯದ ಭಾರ ತಾಳದೇ ಸೋತು ಬಳುಕುವ ಇವಳ್ಯಾರೇ..
ಇನಿಯನ ಒಡಲ ಬಾಗಗಳಲ್ಲಿ ಬಳಸಿದ ಇವಳ್ಯಾರೇ..
ಹರೆಯದ ಭಾರ ತಾಳದೇ ಸೋತು ಬಳುಕುವ ಇವಳ್ಯಾರೇ..
ಇನಿಯನ ಒಡಲ ಬಾಗಗಳಲ್ಲಿ ಬಳಸಿದ ಇವಳ್ಯಾರೇ..
ಲತೆಯೇ ಹೆಣ್ಣಂತೆ.. ಕರುಣೇ ಗಂಡಂತೇ .. ಹುಚ್ಚರ ಇದುವಂತೇ
ಕೇಳೇ.. ಸಿರಿವಂತೇ .. ಕೇಳೇ.. ಸಿರಿವಂತೇ ..
ಮೂಡಣದಿಂದ ಮೆಲ್ಲ ಮೆಲ್ಲನೇ ಬಂದವನಾರೇ ..
ತಾವರೇ ಬೊಗಸೇ ಮುತ್ತನೊಂದನೂ ತಂದವನ್ಯಾರೇ ..
ಮೀನಿನ ಕಣ್ಣೋಳೆ... ಕೋಗಿಲೇ ಧ್ವನಿಯೊಳೇ .. ಸೂರ್ಯನೂ ನೀ ಕೇಳೇ... ಆ..
ಗಂಡೆಂದಿಂಚಿನ ಮೋಹಕ ಮೋದದ ಕಣ್ಣಿನವನಾರೇ
ತುಂಟುತನದಲೀ ಕೆನ್ನೆಯ ಕಚ್ಚಿದ ಕಳ್ಳನೂ ಅವನ್ಯಾರೇ ..

ಕನ್ಯೆಯೂ ಹಣ್ಣಂತೇ ಕಳ್ಳನೂ ಗಿಣಿಯಂತೇ .. ಹುಚ್ಚರ ಇದುವಂತೇ ..
ಕೇಳೇ.. ಸಿರಿವಂತೇ .. ಕೇಳೇ.. ಸಿರಿವಂತೇ ..
ಮೂಡಣದಿಂದ ಮೆಲ್ಲ ಮೆಲ್ಲನೇ ಬಂದವನವನಾರೇ ..
ತಾವರೇ ಬೊಗಸೇ ಮುತ್ತನೊಂದನೂ ತಂದವನ್ಯಾರೇ ..
ಮೀನಿನ ಕಣ್ಣೋಳೆ... ಕೋಗಿಲೇ ಧ್ವನಿಯೊಳೇ .. ಸೂರ್ಯನೂ ನೀ ಕೇಳೇ... ಆ..
------------------------------------------------------------------------------------------------------------------------
ರಾಜದುರ್ಗದ ರಹಸ್ಯ (೧೯೬೭) - ಬಳ್ಳಿ ಸೊಂಟದ ಮಳ್ಳಿ ನೋಟದ ಚೆಲುವಮ್ಮಾ ..
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಬಿ.ಎಸ್.
ಬಳ್ಳಿ ಸೊಂಟದ ಮಳ್ಳಿ ನೋಟದ ಚೆಲುವಮ್ಮಾ ..
ಓ.. ಗಿರಿಜಮ್ಮಾ.. ಮೂಗುತುದಿಯಲಿ ಕೋಪವೇತಕೆ ಹೇಳಮ್ಮಾ
ಓ.. ಗಿರಿಜಮ್ಮಾ ನೀ ಹೇಳಮ್ಮಾ.. ಮುನಿಸೇಕಮ್ಮಾ..
ಅಂದದ ಹುಡುಗಿ ಬಿಂಕದ ಬೆಡಗಿ ನಿಲ್ಲಮ್ಮಾ.. ಕೊಂಚ ನಿಲ್ಲಮ್ಮಾ
ನಾ ಬಂದರೇ ಬಳಿಗೆ ದೂರಕೆ ಓಡುವುದೇಕಮ್ಮಾ...

ಏಕಿಂಥ ತಿರುಸೂ ಕಲ್ಲಾಯತೇ ಮನಸೂ ನೀ ಹೇಳಮ್ಮಾ..
ನನ್ನಾಣೆ ಸೊಗಸೂ ಈ ಸುಳ್ಳೂ ಮುನಿಸೂ ಇದು ತಿಳಿಯಮ್ಮಾ
ಓ.. ಗಿರಿಜಮ್ಮಾ ನೀ ಹೇಳಮ್ಮಾ.. ಮುನಿಸೇಕಮ್ಮಾ..
ಹೂವು ಅಂತಾ ತಿಳಕೊಂಡನಲ್ಲೇ ನಾನೂ ನಿನ್ನ ಮುಳ್ಳಿನಂಗೇ ಚುಚ್ಚಿಯಲ್ಲೇ ನನ್ನ ಕೈಯ್ಯನ್ನಾ ..

ಚಂದ್ರನಂಗೆ ಕಾಣ್ತಿಯಲ್ಲೇ ನೀನೂ ಚೆನ್ನಾ.. ಬೆಂಕಿಯಂಗೇ ಸುಡತಿಯಲ್ಲೇ ನನ್ನ ಮೈಯ್ಯನ
ಬೆಂಕಿಯಂಗೇ ಸುಡತಿಯಲ್ಲೇ ನನ್ನ ಮೈಯ್ಯನ ಓಓ .. ಮೈನಾ..
ಬಳ್ಳಿ ಸೊಂಟದ ಮಳ್ಳಿ ನೋಟದ ಚೆಲುವಮ್ಮಾ ..
ಓ.. ಗಿರಿಜಮ್ಮಾ.. ಮೂಗುತುದಿಯಲಿ ಕೋಪವೇತಕೆ ಹೇಳಮ್ಮಾ
ಓ.. ಗಿರಿಜಮ್ಮಾ ನೀ ಹೇಳಮ್ಮಾ.. ಮುನಿಸೇಕಮ್ಮಾ..
ಚಂದನದ ಗೊಂಬೆ ಒಮ್ಮೆ ನೀ ನಕ್ಕರೇ .. ಚಕ್ಕರಗುಳಿ ಇಟ್ಟಂಗೇ ನನಗಾಗತೈತೇ

ಪಾದರಸದಂತ ನೋಟ ನೀ ಬೀರಲೂ .. ಸೋಮರಸ ಕುಡಿದಂಗೇ ಸೊಕ್ಕೂ ಹೋಗತೈತೇ .
ಮನಸೂ ಸೊಕ್ಕೂ ಹೋಗತೈತೇ .. ಮನಸೂ ಸೊಕ್ಕೂ ಹೋಗತೈತೇ ..
ಬಳ್ಳಿ ಸೊಂಟದ ಮಳ್ಳಿ ನೋಟದ ಚೆಲುವಮ್ಮಾ ..
ಓ.. ಗಿರಿಜಮ್ಮಾ.. ಮೂಗುತುದಿಯಲಿ ಕೋಪವೇತಕೆ ಹೇಳಮ್ಮಾ
ಓ.. ಗಿರಿಜಮ್ಮಾ ನೀ ಹೇಳಮ್ಮಾ.. ಮುನಿಸೇಕಮ್ಮಾ..
------------------------------------------------------------------------------------------------------------------------
ರಾಜದುರ್ಗದ ರಹಸ್ಯ (೧೯೬೭) - ದೇವಿ ದೇವಿ ನನ್ನದೇವಿ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಬಿ.ಎಸ್.
ದೇವಿ.. ದೇವಿ.. ನನ್ನದೇವಿ... ನಿನ್ನಯ ನಾಮ ಜಪಿಸಿದೇ .. ನಾಮ ಜಪಿಸಿದೇ ..
ನಿನ್ನನ್ನೂ ಕಾಣಲೂ ತಪಿಸಿದೇ ... ನಾ ತಪಿಸಿದೇ .. ಒಲಿದರೇ ನಾರೀ ಮುನಿದರೇ ಮಾರೀ
ಒಲಿದರೇ ನಾರೀ ಮುನಿದರೇ ಮಾರೀ ಎನ್ನುವರಲ್ಲೇ ಸುಕುಮಾರೀ ...
ಭಗವತೀ .. ಶಿವಸತಿ.. ಗುಣವತಿ.. ಮಧುಮತಿ ಮಧುಮತಿ ಗುಣವತಿ ಶಿವಸತಿ ಭಗವತೀ ..
ಭಗವತೀ .. ಶಿವಸತಿ.. ಗುಣವತಿ.. ಮಧುಮತಿ
ಗಡ್ಡ ಮೀಸೆ ಜೋಗಿ ತಾನೇ ನಿನ್ನ ಪತಿ ಗುಡ್ಡಗಾಡಿನಲ್ಲೇ ಇರುವಾ ಭೂಪತಿ

ಓ.. ಮಹಾಕಾಳಿ ಈ ಮೊರೆ ಕೇಳಿ ನಗೆಮೊಗ ತಾಳಿ ಬಾ.. ಬಾ... ಬಾ..
ಬಂಬಕ ಜಂಪಕ ಗುಂಪಕ ಧೀಮಂಕ .. ಛೂ.. ಛೂ..ಛೂ..ಛೂ.. ಮಹಾ ಕಾಳಿ
ನಿನ್ನಯ ನಾಮ ಜಪಿಸಿದೇ .. ನಾಮ ಜಪಿಸಿದೇ ..
ನಿನ್ನನ್ನೂ ಕಾಣಲೂ ತಪಿಸಿದೇ ... ನಾ ತಪಿಸಿದೇ .. ಒಲಿದರೇ ನಾರೀ ಮುನಿದರೇ ಮಾರೀ
ಒಲಿದರೇ ನಾರೀ ಮುನಿದರೇ ಮಾರೀ ಎನ್ನುವರಲ್ಲೇ ಸುಕುಮಾರೀ ...
ಭಗವತೀ .. ಶಿವಸತಿ.. ಗುಣವತಿ.. ಮಧುಮತಿ ಮಧುಮತಿ ಗುಣವತಿ ಶಿವಸತಿ ಭಗವತೀ ..
ಭಗವತೀ .. ಶಿವಸತಿ.. ಗುಣವತಿ.. ಮಧುಮತಿ
ಭಕ್ತ ಬಂದು ಬೇಡುವಾಗ ಮೌನವೇಕೇ .. ಎಷ್ಟೋ ಸಾರೀ ಅಡ್ಡಬಿದ್ದೂ ಕೇಳಬೇಕೇ ..

ಕರೆಯಲೂ ಬಂದು ಎದುರಿಗೇ ನಿಂದೂ ವರವನೂ ಉಂಡೂ ತಾ.. ತಾ.. ತಾ...
ತಾತಾ ..ತಾತಾ.. ವರವನೂ ತಾತಾ ತಾತಾ.. ವರವನೂ ತಾ..
ನಿನ್ನಯ ನಾಮ ಜಪಿಸಿದೇ .. ನಾಮ ಜಪಿಸಿದೇ ..
ನಿನ್ನನ್ನೂ ಕಾಣಲೂ ತಪಿಸಿದೇ ... ನಾ ತಪಿಸಿದೇ .. ಒಲಿದರೇ ನಾರೀ ಮುನಿದರೇ ಮಾರೀ
ಒಲಿದರೇ ನಾರೀ ಮುನಿದರೇ ಮಾರೀ ಎನ್ನುವರಲ್ಲೇ ಸುಕುಮಾರೀ ...
ಭಗವತೀ .. ಶಿವಸತಿ.. ಗುಣವತಿ.. ಮಧುಮತಿ ಮಧುಮತಿ ಗುಣವತಿ ಶಿವಸತಿ ಭಗವತೀ ..
ಭಗವತೀ .. ಶಿವಸತಿ.. ಗುಣವತಿ.. ಮಧುಮತಿ ನಾನೇ ಪತಿ ನೀನೇ ಸತಿ
ನಾನೇ ಪತಿ ನೀನೇ ಸತಿ ನಾನೇ ಪತಿ ನೀನೇ ಸತಿ ನಾನೇ ಪತಿ ನೀನೇ ಸತಿ
ನಾನೇ ಪತಿ ನೀನೇ ಸತಿ ನಾನೇ ಪತಿ ನೀನೇ ಸತಿ ನಾನೇ ಪತಿ ನೀನೇ ಸತಿ
------------------------------------------------------------------------------------------------------------------------
No comments:
Post a Comment