1010. ಕಳ್ಳರ ಕಳ್ಳ (೧೯೭೦)

ಕಳ್ಳರ ಕಳ್ಳ ಚಿತ್ರದ ಹಾಡುಗಳು 
  1. ನಾ ಹಾಡಿದ ಮೊದಲ ಹಾಡು 
  2. ಓಹ ತಾವರೆ ಕಣ್ಣಿನ ಕುಮಾರಿ 
  3. ಬಾರಿಸು ಜೋರಾಗಿ 
  4. ಕಣ್ಣ ಮುಚ್ಚೆ ಕಾಡೇ ಕೂಡೆ 
  5. ಅಪ್ಪ ಅಮ್ಮ ಎಲ್ಲಾ 
ಕಳ್ಳರ ಕಳ್ಳ (೧೯೭೦) - ನಾ ಹಾಡಿದ ಮೊದಲ ಹಾಡು ನೀ ಮಿಡಿದ ಒಲವಿನ ಹಾಡು
ಸಂಗೀತ : ಸತ್ಯಂ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ: ಪಿ.ಬಿ.ಎಸ್. ಎಸ್.ಜಾನಕೀ

ಗಂಡು :ಓಹೋಹೊಹೋ .... (ಆಆಆಹಾಹಾಹಾಹಾ )
          ನಾ ಹಾಡಿದ ಮೊದಲ ಹಾಡು ನೀ ಮಿಡಿದ ಒಲವಿನ ಹಾಡು
          ಕಣ್ಣಂಚಿನ ನೋಟ ನಗೆ ಮಿಂಚಿನ ಮಾಟ ಕವಿ ಮಾಡಿದೆ ಎನ್ನಾ ಈ ದಿನ
          ನಾ ಹಾಡಿದ ಮೊದಲ ಹಾಡು ನೀ ಮಿಡಿದ ಒಲವಿನ ಹಾಡು

ಹೆಣ್ಣು : ಮುಗಿಲ ಅಂಚಿನಿಂದ ಬಂದ ರವಿಯೋ
          ಈ ನವಿಲ ಅಂದ ಕಂಡು ಹಾಡೋ ಕವಿಯೋ
          ಮುಗಿಲ ಅಂಚಿನಿಂದ ಬಂದ ರವಿಯೋ
          ಈ ನವಿಲ ಅಂದ ಕಂಡು ಹಾಡೋ ಕವಿಯೋ
         ಜಾಣರಲಿ ಜಾಣ ವೀರರಲಿ ವೀರ ಕಳ್ಳರಲಿ ಕಳ್ಳ ನೀನೆಯೋ
         ನಾ ಹಾಡಿದ ಮೊದಲ ಹಾಡು ನೀ ಮಿಡಿದ ಒಲವಿನ ಹಾಡು

ಗಂಡು : ಮರದ ನೆರವು ಬಯಸಿ ಬಂದ ಲತೆಯೋ
            ಈ ಹರೆಯ ಬರೆದ ಮಧುರ ಪ್ರೇಮ ಕಥೆಯೋ
           ಮರದ ನೆರವು ಬಯಸಿ ಬಂದ ಲತೆಯೋ
           ಹರೆಯ ಬರೆದ ಮಧುರ ಪ್ರೇಮ ಕಥೆಯೋ
          ನೀನಾಡುವ ಮಾತೆ ಚಿರನೂತನ ಗೀತೆ ನಿನಗೆ ನಾ ಸೋತೆ ಈ ದಿನ
ಹೆಣ್ಣು : ನಾ ಹಾಡಿದ ಮೊದಲ ಹಾಡು ನೀ ಮಿಡಿದ ಒಲವಿನ ಹಾಡು
ಗಂಡು :  ಕಣ್ಣಂಚಿನ ನೋಟ (ಆಆಆಹಾ ) ನಗೆ ಮಿಂಚಿನ ಮಾಟ (ಆಆಆಹಾ )
           ಕವಿ ಮಾಡಿದೆ ಎನ್ನಾ ಈ ದಿನ
-----------------------------------------------------------------------------------------------------------------------

ಕಳ್ಳರ ಕಳ್ಳ (೧೯೭೦) - ಓಹ ತಾವರೆ ಕಣ್ಣಿನ ಕುಮಾರಿ 
ಸಂಗೀತ : ಸತ್ಯಂ ಸಾಹಿತ್ಯ : ಗೀತಪ್ರಿಯಾ  ಗಾಯನ: ಪಿ.ಬಿ.ಎಸ್. 

ಓಹ್ ತಾವರೇ ಕಣ್ಣಿನ ಕುಮಾರೀ ಎಲ್ಲಿಗೇ ತಮ್ಮ ಸವಾರೀ ..
ಓಓ ಓಹ್ ತಾವರೇ ಕಣ್ಣಿನ ಕುಮಾರೀ ಎಲ್ಲಿಗೇ ತಮ್ಮ ಸವಾರೀ ..
ತುಂಟ ಕಣ್ಣಿನ ಒಂಟಿ ಹೆಣ್ಣಿ ನೀ ಯಾರನೂ ಆರಿಸಿದೇ ಕಿಶೊರೀ ..
ಓಓ ಓಹ್ ತಾವರೇ ಕಣ್ಣಿನ ಕುಮಾರೀ ಎಲ್ಲಿಗೇ ತಮ್ಮ ಸವಾರೀ ..

ಹಣೆಯಲ್ಲಿ ಹಾರುವ ಮುಂಗುರುಳೂ ಹೆಗಲಲ್ಲಿ ಕುಣಿಯುವ ಜೊತೆ ಹೆರಳೂ 
ಹಣೆಯಲ್ಲಿ ಹಾರುವ ಮುಂಗುರುಳೂ ಹೆಗಲಲ್ಲಿ ಕುಣಿಯುವ ಜೊತೆ ಹೆರಳೂ 
ನೀ ಸೊಬಗಿಗೇ ಸ್ತ್ರೀಯರೇ ಸೋತಿರಲೂ ಗಂಡಸರ ಗತಿಯೇನೂ .. 
ತಾವರೇ ಕಣ್ಣಿನ ಕುಮಾರೀ ಎಲ್ಲಿಗೇ ತಮ್ಮ ಸವಾರೀ .. 

ನೀ ನಿಂತರೇ ನನ್ನೆದೇ ನಿಲ್ಲುವುದೂ ಈ ನೋಟವು ನನ್ನನ್ನೂ ಕೊಲ್ಲುವುದೂ 
ನೀ ನಿಂತರೇ ನನ್ನೆದೇ ನಿಲ್ಲುವುದೂ ಈ ನೋಟವು ನನ್ನನ್ನೂ ಕೊಲ್ಲುವುದೂ 
ಈ ಹೃದಯದ ಬೇನೆಗೇ ಔಷಧಿಯಾ ಹೂಂ .. ನೀಡಲಾರೆಯಾ ನೀನೂ .. 
ತಾವರೇ ಕಣ್ಣಿನ ಕುಮಾರೀ ಎಲ್ಲಿಗೇ ತಮ್ಮ ಸವಾರೀ .. 
ತುಂಟ ಕಣ್ಣಿನ ಒಂಟಿ ಹೆಣ್ಣಿ ನೀ ಯಾರನೂ ಆರಿಸಿದೇ ಕಿಶೊರೀ ..
ಓಓ ಓಹ್ ತಾವರೇ ಕಣ್ಣಿನ ಕುಮಾರೀ ಎಲ್ಲಿಗೇ ತಮ್ಮ ಸವಾರೀ ..
-----------------------------------------------------------------------------------------------------------------------

ಕಳ್ಳರ ಕಳ್ಳ (೧೯೭೦) - ಬಾರಿಸು ಜೋರಾಗಿ 
ಸಂಗೀತ : ಸತ್ಯಂ ಸಾಹಿತ್ಯ :ಎಂ.ಪಿ.ನಾಗರಾಜ್  ಗಾಯನ: ಪಿ.ಬಿ.ಎಸ್. ಬಿ.ಕೆ..ಸುಮಿತ್ರಾ, ಜೈದೇವ  

ಪಿ.ಬಿ.  : ಆಆಆ... ಹಾಡ್ತಾ ಇದ್ದರೇ ... ಈ ಸುಬ್ಬಾ ಎಲ್ಲಾರ ಕಿವಿಗೂ ದೊಡ್ಡ ಹಬ್ಬಾ...
ಜೈ :  ಆಆಆ... ಆಡ್ತಾ ಇದ್ದರೇ ಈ ಸುಬ್ಬೀ .. ಎಲ್ಲಾರಂತಾರೇ ಅಬ್ಬಬ್ಬಾ...
ಪಿ.ಬಿ.: ಆಆಆ... ಆಆಆ....           ಬಿ.ಕೆ. : ಓಓಓಓಓ...         ಜೈ: ಓಓಓಓಓಓಓ
ಪಿ.ಬಿ. : ಬಾರಿಸೂ ಜೋರಾಗೀ ...          ಜೈ: ಏನ್..
ಪಿ.ಬಿ.: ತಬಲಾ ...   ಬಾರಿಸೂ ಜೋರಾಗೀ ತಬಲವಾ.. ಧಮ್ ಧಮ್
          ಇವಳೂ ಆಡ್ತಾಳೇ .. ಇವರ ಮುಂದೇ... ಚಮ್ ಚಮ್ ..
          ಇವಳೂ ಆಡ್ತಾಳೇ .. ಇವರ ಮುಂದೇ... ಚಮ್ ಚಮ್ ..
ಜೈ :  ಬಾರಿಸೂ ಜೋರಾಗೀ...  ಬಾರಿಸೂ ಜೋರಾಗೀ...ನೀನೂನು ಕೂಯ್ ಕೂಯ್
        ಇವಳೂ ಆಡ್ತಾಳೇ .. ಇವರ ಮುಂದೇ... ಚಮ್ ಚಮ್ ..
        ಇವಳೂ ಆಡ್ತಾಳೇ .. ಇವರ ಮುಂದೇ... ಚಮ್ ಚಮ್ ..
ಪಿಬಿ : ಇವಳ ಕುಣಿದಾಟ ಅವರ ಪರದಾಟ ನಮ್ಮ ಚೆಲ್ಲಾಟ ಎಲ್ಲಾರಗೂ ಮಾಟ 
ಜೈ : ಆಟ ಮುಗಿದೋದ್ರೇ ಇಲ್ಲಿಂದ ಓಟ್ ಓಟ್ 
         ಬಾರಿಸೂ ಜೋರಾಗೀ...  ಬಾರಿಸೂ ಜೋರಾಗೀ...ನೀನೂನು ಕೂಯ್ ಕೂಯ್  
ಪಿಬಿ :  ಇವಳೂ ಆಡ್ತಾಳೇ .. ಇವರ ಮುಂದೇ... ಚಮ್ ಚಮ್ .. 
         ಇವಳೂ ಆಡ್ತಾಳೇ .. ಇವರ ಮುಂದೇ... ಚಮ್ ಚಮ್ .. 
ಪಿಬಿ : ಬಾರಸೋ ... ಓಓಓಓಓಓಓ...           ಜೈ : ಬಾರಸೋ ... ಓಓಓಓಓಓಓ... 
ಪಿಬಿ : ಬಾರಸೋ ... ಓಓಓಓಓಓಓ...           ಜೈ : ಬಾರಸೋ ... ಓಓಓಓಓಓಓ... 
ಪಿಬಿ : ಬಾರಸೋ ... ಓಓಓಓಓಓಓ...           ಜೈ : ಬಾರಸೋ ... ಓಓಓಓಓಓಓ... 
ಪಿಬಿ : ಬಾರಸೋ ... ಓಓಓಓಓಓಓ...           ಜೈ : ಬಾರಸೋ ... ಓಓಓಓಓಓಓ... 

ಪಿಬಿ : ಬಿಟ್ಕೊಂಡು ಕುಂತವನೇ ... ಬೆಕ್ಕಿನ ಕಣ್ಣ...
ಜೈ : ಇನ್ನೊಬ್ಬ ಬೆಳೆಸ್ಯಾವನೇ ಭಾರೀ .. ಮೈಯ್ಯನ್
ಪಿಬಿ : ಆಆಆ... ಬಗ್ಗಿ ಬಗ್ಗಿ ನೋಡ್ತಾವನೇ... ದೊಡ್ಡಣ್ಣ
ಜೈ :  ಏ .. ಎಗರಿ ಎಗರಿ ನೋಡ್ತಾವನೇ ಗಿಡ್ಡಣ್ಣ
ಪಿಬಿ : ಆಆಆ....                 ಬಿ.ಕೆ : ಓಓಓಓಓಓಓ          ಜೈ : ಓಓಓಓಓಓಓಓಓ
ಪಿಬಿ : ನೋಡು ಹೆಂಗೈತೇ ಇವರೆಲ್ಲರಾ ಜೋಕೂ
ಜೈ : ಕಣ್ಣಿಂದ ಕಸರತ್ತೂ ಎಲ್ಲಾರಿಗೂ ಬೇಕೂ
ಪಿಬಿ : ನೋಡು ಹೆಂಗೈತೇ ಇವರೆಲ್ಲರಾ ಜೋಕೂ
ಜೈ : ಕಣ್ಣಿಂದ ಕಸರತ್ತೂ ಎಲ್ಲಾರಿಗೂ ಬೇಕೂ
ಪಿಬಿ : ಈಗ ಸೊಗಸಾಗಿ ಬೇಗ ಬೇಗ ಹಾಕೂ ಹಾಕೂ
ಜೈ : ಏನಾ..               ಪಿಬಿ : ತಾಳ       ಬಿ.ಕೆ : ಅಯ್ಯೋ...
ಬಿ.ಕೆ : ಅಮ್ಮಮ್ಮಾ .. ನಿಮ್ಮ ತಾಳಕ್ಕೇ  ನಾನೂ ಕುಣಿಲಾರೇ ಕುಣಿಲಾರೇ ಕಷ್ಟ ಕಷ್ಟ
         ಏ .. ಸಾಕೂ ನಿಮ್ಮ ಹುಡುಗಾಟ ಇನ್ನೂ ನಮ್ಮಾಟ ಇಲ್ಲೇ ಇದ್ದೇ ಐತೇ ..
-----------------------------------------------------------------------------------------------------------------------

ಕಳ್ಳರ ಕಳ್ಳ (೧೯೭೦) - ಕಣ್ಣಾ ಮುಚ್ಚೇ ಕಾಡೇ ಗೂಡೇ 
ಸಂಗೀತ : ಸತ್ಯಂ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ: ಬಿ.ಕೆ.ಸುಮಿತ್ರಾ,  ಎಸ್.ಜಾನಕೀ

ಹೆಣ್ಣು : ಕಣ್ಣಾ ಮುಚ್ಚೇ..                 ಮಗು : ಕಣ್ಣಾ ಮುಚ್ಚೇ
ಹೆಣ್ಣು : ಕಾಡೇ ಗೂಡೇ                 ಮಗು : ಕಾಡೇ ಗೂಡೇ
ಹೆಣ್ಣು : ಕಣ್ಣಾ ಮುಚ್ಚೇ ಕಾಡೇ ಗೂಡೇ ಆಡೋಣ ನಾವಿಂದೂ ಹಿಡಿಯಲೂ ಬಾರಾ ನೀ ಮುಂದೂ
ಇಬ್ಬರು: ಕಣ್ಣಾ ಮುಚ್ಚೇ ಕಾಡೇ ಗೂಡೇ

ಹೆಣ್ಣು : ಅಹ್ಹಹ್ಹಹಹಹ..  ಅಹ್ಹಹ್ಹಹಹಹ..
          ಮುಳ್ಳಿನ ಗಿಡದೇ ಹುತ್ತಿನ ಅಂದವೇ ಕೆಂಪೂ ರೋಜಾ
          ಕಳ್ಳ ಕಪಟ ಅರಿಯದ ಕಂದ ಮುದ್ದು ರಾಜ
          ಮುಳ್ಳಿನ ಗಿಡದೇ ಹುತ್ತಿನ ಅಂದವೇ ಕೆಂಪೂ ರೋಜಾ
          ಕಳ್ಳ ಕಪಟ ಅರಿಯದ ಕಂದ ಮುದ್ದು ರಾಜ
          ಮಿಠಾಯಿ ಬೇಕೇ (ಹೂಂ ಹೂಂ ) ಮುತ್ತೇ ಸಾಕೇ (ಹೂಂ )         
          ಮಿಠಾಯಿ ಬೇಕೇ ಮುತ್ತೇ ಸಾಕೇ ಕೋಡುವೇ ನಿನಗೇ ನಾನೊಂದೂ ಅಕ್ಕನ ಬಳಿಗೇ ಬಾ ಇಂದೂ
ಹೆಣ್ಣು : ಕಣ್ಣಾ ಮುಚ್ಚೇ..                 ಮಗು : ಕಣ್ಣಾ ಮುಚ್ಚೇ
ಹೆಣ್ಣು : ಕಾಡೇ ಗೂಡೇ                 ಮಗು : ಕಾಡೇ ಗೂಡೇ
ಇಬ್ಬರು: ಆಡೋಣ ನಾವಿಂದೂ ಹಿಡಿಯಲೂ ಬಾರಾ ನೀ ಮುಂದೂ
            ಕಣ್ಣಾ ಮುಚ್ಚೇ ಕಾಡೇ ಗೂಡೇ

ಹೆಣ್ಣು :  ಆಂ ...
ಮಗು : ಜಿಂಕೆಯ ಹಾಗೇ ಜಿಗಿಯುತ ದೂರ ಓಡುವೇ ನಾನೂ
           ಛಂಗನೇ ಹಾರೀ ಮರಗಳ ನಡುವೇ ಮರೆಯುವೇ ನಾನೂ
           ಜಿಂಕೆಯ ಹಾಗೇ ಜಿಗಿಯುತ ದೂರ ಓಡುವೇ ನಾನೂ
           ಛಂಗನೇ ಹಾರೀ ಮರಗಳ ನಡುವೇ ಮರೆಯುವೇ ನಾನೂ
           ಕಣ್ಣಿಗೇ ಕಾಣೇ ..  (ಹೂಂ .) ಹಿಡಿ ಬಾ ಜಾಣೆ (ಊಮ್ ಉಮ್ ) .
           ಕಣ್ಣಿಗೇ ಕಾಣೇ .. ಹಿಡಿ ಬಾ ಜಾಣೆ ಆಗದೇ ನಿನಗೇ ಅತ್ತೆಯಾ  ಸೋಲವ ಒಪ್ಪಿಕೋ ..
-----------------------------------------------------------------------------------------------------------------------

ಕಳ್ಳರ ಕಳ್ಳ (೧೯೭೦) - ಅಪ್ಪ ಅಮ್ಮಾ ಎಲ್ಲಾ ಅಣ್ಣ ತಂಗಿ ಇಲ್ಲಾ 
ಸಂಗೀತ : ಸತ್ಯಂ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ:  ಎಸ್.ಜಾನಕೀ

ಅಪ್ಪ ಅಮ್ಮಾ ಎಲ್ಲಾ ಅಣ್ಣ ತಂಗಿ ಇಲ್ಲಾ ಇರುವರೆನ್ನ ಬಿಟ್ಟೂ ದೇವರ ಮಡಿಲಲ್ಲಿ
ಅಪ್ಪ ಅಮ್ಮಾ ಎಲ್ಲಾ ಅಣ್ಣ ತಂಗಿ ಇಲ್ಲಾ ಇರುವರೆನ್ನ ಬಿಟ್ಟೂ ದೇವರ ಮಡಿಲಲ್ಲಿ

ಅಜ್ಜೀ ನೀಡಿದ ತುತ್ತೂ ಆಡಿದ ಪ್ರೀತಿಯ ಮಾತೂ
ತಾಯಿ ಮಮತೇ ಮುತ್ತೂ ಇನ್ಯಾರಲೀ ಕೇಳಲಿ ಮತ್ತೇ ..
ಇದೆಲ್ಲಾ ನೆನೆದೂ ಮನದಲಿ ನೊಂದೂ ಕಂದಾ ನಾ ಅತ್ತೇ ..
ಅಪ್ಪ ಅಮ್ಮಾ ಎಲ್ಲಾ ಅಣ್ಣ ತಂಗಿ ಇಲ್ಲಾ ಇರುವರೆನ್ನ ಬಿಟ್ಟೂ ದೇವರ ಮಡಿಲಲ್ಲಿ

ಏಕೋ ಹುಟ್ಟಿದೇ ನಾನೂ ಎಲ್ಲಿಗೇ ಹೋಗಲೀ ಇನ್ನೂ 
ಎಲ್ಲೋ ಯಾರೋ ಇಟ್ಟರೋ ನನ್ನ ಕಣ್ಣೀರೊರೆಸುವಾರಾರೋ 
ಲೋಕಗಳೆಲ್ಲಾ ಹುಡುಕುವ ನನಗೇ ಆಸರೇ ಇನ್ಯಾರೋ.. 
ಅಪ್ಪ ಅಮ್ಮಾ ಎಲ್ಲಾ ಅಣ್ಣ ತಂಗಿ ಇಲ್ಲಾ ಇರುವರೆನ್ನ ಬಿಟ್ಟೂ ದೇವರ ಮಡಿಲಲ್ಲಿ
-----------------------------------------------------------------------------------------------------------------------

No comments:

Post a Comment