1011. ಮಲ್ಲಿ ಮದುವೆ (೧೯೬೩)


ಮಲ್ಲಿ ಮದುವೆ ಚಿತ್ರದ ಹಾಡುಗಳು 
  1. ಒಲವಂತೆ  ಗೆಲುವಂತೆ 
  2. ಮಹಾಪುರುಷರ ಪ್ರೇರಕ ಶಕ್ತಿ 
  3. ಮಂಗನ ಮೋರೆಯ ಮೂಡಿ ಮುಸಂಗಿ 
  4. ನಗುವೇ ನಾಕಾ ಅಳುವೇ ನರಕ
  5. ಆಡೋಣ ಬಾ ಬಾ ಗೋಪಾಲ 
  6. ನನ್ನ ನಿನ್ನ ಸಲ್ಲಾಪವನ್ನೆಲ್ಲಾ 
  7. ಮದುವೇ ಎಂಬ ಸಂತೆಗೆ 
ಮಲ್ಲಿ ಮದುವೆ (೧೯೬೩) - ಒಲವಂತೆ ಗೆಲುವಂತೆ ಬಾಳಿನ ಬೆಳಕಂತೆ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಕುರಾಸೀ, ಗಾಯನ : ಪಿ.ಬಿ.ಎಸ್. ಪಿ.ಸುಶೀಲಾ 

ಹೆಣ್ಣು : ಓಓಓ ಓಓಓ (ಓಓಓಓಓಓ  ) ಹೂಂಹೂಂ ಹೂಂ ಹೂಂ 
ಹೆಣ್ಣು : ಒಲವಂತೆ ಗೆಲುವಂತೆ ಬಾಳಿನ ಬೆಳಕಂತೆ
          ಅನಾಥೆಯಾ ಸದಾಶೆಯಾ ಅರಳಿತೆ ತಳೆಯಿತು ಧನ್ಯತೆ
ಗಂಡು : ಒಲವಂತೆ ಗೆಲುವಂತೆ ಬಾಳಿನ ಬೆಳಕಂತೆ
ಹೆಣ್ಣು : ಆಹಾಹಾಹಾ .. (ಓಹೋಹೋಹೊಹೋ )

ಗಂಡು : ಗಂಡು ಹೆಣ್ಣು ಎರಡಂತೆ ಪ್ರೇಮವೋ ಕಾಮವೋ ಕುರುಡಂತೆ
           ಗಂಡು ಹೆಣ್ಣು ಎರಡಂತೆ ಪ್ರೇಮವೋ ಕಾಮವೋ ಕುರುಡಂತೆ
           ಮೈಮನ ಬೆರೆತರೆ ಒಂದಂತೆ ಹಾಲು ಹಣ್ಣು ಬೆರೆತಂತೆ
           ಒಲವಂತೆ ಗೆಲುವಂತೆ ಬಾಳಿನ ಬೆಳಕಂತೆ
ಹೆಣ್ಣು : ಅನಾಥೆಯಾ ಸದಾಶೆಯಾ ಅರಳಿತೆ ತಳೆಯಿತು ಧನ್ಯತೆ

ಹೆಣ್ಣು : ಸಿರಿತನ ಬಡತನ ಎರಡಂತೆ ಬೆರೆತರೆ ಜೀವನ ಬರುಡಂತೆ 
          ಸಿರಿತನ ಬಡತನ ಎರಡಂತೆ ಬೆರೆತರೆ ಜೀವನ ಬರುಡಂತೆ
          ನೀರಿಗೆ ಎಣ್ಣೆ ಹೊರತಂತೆ ನೀಗುವುದೆಂತು ಈ ಚಿಂತೆ 
          ಒಲವಂತೆ ಗೆಲುವಂತೆ ಬಾಳಿನ ಬೆಳಕಂತೆ 
ಗಂಡು : ಆಹಾಹಾಹಾ .. (ಆಹಾಹಾ ಓಹೋಹೋಹೊ ಹೂಂಹೂಂಹೂಂ  )

ಗಂಡು : ಒಲುಮೆಯ ಕುಲುಮೆಯ ಪುಟದಲ್ಲಿ ಪ್ರಣಯದ ಗಂಗಾ ಜಲದಲ್ಲಿ
ಹೆಣ್ಣು : ಆಹ್ ಪ್ರಯಣವ ಗಂಗಾ ಜಲದಲ್ಲಿ 
ಗಂಡು : ಎರಡೆಂಬೆಣಿಕೆಗೆ ಎಡೆಯಲ್ಲಿ 
ಹೆಣ್ಣು : ಸತಿಪತಿ   ಗಂಡು : ದಂಪತಿ 
ಇಬ್ಬರು : ಒಂದಿಲ್ಲೀ
ಹೆಣ್ಣು : ಆಹಾ ..  ಗಂಡು : ಒಹೋ... 
ಹೆಣ್ಣು : ಆಹಾ ..  ಗಂಡು : ಒಹೋ... 
ಹೆಣ್ಣು :ಬಾಳಿನ ಬೆಳಕಂತೆ       ಗಂಡು : ಅನಾಥೆಯಾ
ಹೆಣ್ಣು :  ಸದಾತೆಯಾ ಅರಳಿತೆ ತಳೆಯಿತು ಧನ್ಯತೆ
ಹೆಣ್ಣು : ಆಹಾ .. ( ಒಹೋ.) ಒಹೋ.. ಹೂಂಹೂಂಹೂಂ
ಇಬ್ಬರು : ಹೂಂಹೂಂಹೂಂಹೂಂಹೂಂಹೂಂಹೂಂಹೂಂಹೂಂ. 
--------------------------------------------------------------------------------------------------------------------

ಮಲ್ಲಿ ಮದುವೆ (೧೯೬೩) - ಮಹಾಪುರುಷರ ಪ್ರೇರಕ ಶಕ್ತಿ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಕುರಾಸೀ  ಗಾಯನ : ಎಸ್.ಜಾನಕೀ

ಹೆಣ್ಣು : ಆಆಆ... ಆಆಆ...
         ಮಹಾ ಪುರುಷರ ಪ್ರೇರಕ ಶಕ್ತಿ ಬಾಳಿನ ಗೆಳತೀ ಸುದತಿ
         ಹರನಿಗೂ ಮಾ ಹರಿಗೆಯೂ ಮಾ ಪರಬ್ರಹ್ಮನಿಗೂ ಸರಸ್ವತಿ
ಕೋರಸ್ : ಪ್ರೇರಕ ಶಕ್ತಿ ಸುದತಿ
               ಮಹಾ ಪುರುಷರ ಪ್ರೇರಕ ಶಕ್ತಿ ಬಾಳಿನ ಗೆಳತೀ ಸುದತಿ
ಹೆಣ್ಣು : ಪ್ರೇರಕ ಶಕ್ತಿ ಸುದತಿ

ಹೆಣ್ಣು : ಹೊತ್ತು ಹೆತ್ತು ಲಾಲಿಸಿ ಪಾಲಿಸಿ ಕಾಯುವ ತಾಯೇ ಹೆಣ್ಣು
ಕೋರಸ್ : ಹೊತ್ತು ಹೆತ್ತು ಲಾಲಿಸಿ ಪಾಲಿಸಿ ಕಾಯುವ ತಾಯೇ ಹೆಣ್ಣು
ಹೆಣ್ಣು : ಆರಿಸಿ ವರಿಸಿ ನೇಹವ ಬೆಳಸಿ ಆದರಿಸುವ ಲತೆ ಹೆಣ್ಣು
ಕೋರಸ್ : ಆದರಿಸುವ ಲತೆ ಹೆಣ್ಣು
ಹೆಣ್ಣು : ಜನುಮ ಕಂಡಿರ ನಾನಾ ಬಗೆಯ
          ಜನುಮ ಕಂಡಿರ ನಾನಾ ಬಗೆಯ ದುರಿತವ ಪ್ರೇರಿಸಿ ಹರುಷ ಸಾಧಿಸಿ
ಕೋರಸ್ : ದುರಿತವ ಪ್ರೇರಿಸಿ ಹರುಷ ಸಾಧಿಸಿ
ಹೆಣ್ಣು : ಮೆರೆವ ಪಾವನೇ ಮಂಗಳ ಪುಣ್ಯವತೀ..ಪ್ರೇರಕ ಶಕ್ತಿ ಸುದತಿ  
ಕೋರಸ್ : ಮಹಾ ಪುರುಷರ ಪ್ರೇರಕ ಶಕ್ತಿ ಬಾಳಿನ ಗೆಳತೀ ಸುದತಿ
         ಹರನಿಗೂ ಮಾ ಹರಿಗೆಯೂ ಮಾ ಪರಬ್ರಹ್ಮನಿಗೂ ಸರಸ್ವತಿ
ಹೆಣ್ಣು : ಪ್ರೇರಕ ಶಕ್ತಿ ಸುದತಿ           
--------------------------------------------------------------------------------------------------------------------

ಮಲ್ಲಿ ಮದುವೆ (೧೯೬೩) - ಮಂಗನ ಮೋರೆಯ ಮೂಡಿ ಮುಸಾನಾಗೆ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಕುರಾಸೀ  ಗಾಯನ : ಎಸ್.ಜಾನಕೀ

ಹೆಣ್ಣು : ಮಂಗನ ಮೋರೆಯ ಮುದಿ ಮೂಸಂಗಿ ಮಾಸಿದ ಮುಗಿದೂ ಹಸೀ ಮೂಲಂಗಿ
          ಮಂಗನ ಮೋರೆಯ ಮುದಿ ಮೂಸಂಗಿ ಮಾಸಿದ ಮುಗಿದೂ ಹಸೀ ಮೂಲಂಗಿ
          ಯಾವೂರ ಕಾಡೋ ಯಾವೂರ ಮೇಡೋ ಎಲ್ಲಿ ದೊರೆತನೋ ಕೋಡಂಗಿ 
          ಅಹ್ಹಹ್ಹ .. ಎಲ್ಲಿ ದೊರೆತನೋ ಕೋಡಂಗಿ 
ಕೋರಸ್ :  ಮಂಗನ ಮೋರೆಯ ಮುದಿ ಮೂಸಂಗಿ ಮಾಸಿದ ಮುಗಿದೂ ಹಸೀ ಮೂಲಂಗಿ
                ಯಾವೂರ ಕಾಡೋ ಯಾವೂರ ಮೇಡೋ ಎಲ್ಲಿ ದೊರೆತನೋ ಕೋಡಂಗಿ
                ಅಹ್ಹಹ್ಹ .. ಎಲ್ಲಿ ದೊರೆತನೋ ಕೋಡಂಗಿ 

ಹೆಣ್ಣು : ಆಆಆ... ಚಪ್ಪಟೆ ಮೂಗಿನ ಅಪ್ಪಟ ಚಿಟ್ಟೆ ಬಾಳೆ ಗುಡಾಣದ ಡೊಳ್ಳಿನ ಹೊಟ್ಟೇ 
          ಮದ್ದಾನೆ ಮರಿ ಈ ಕೆಂಗೆಟ್ಟ ನಾರಿ ಚೆಲುವು ಜಾಣ್ಮೆಗಳ ಆಣೆಕಟ್ಟೆ.. ಏಏಏಏಏ 
ಕೋರಸ್ : ಚಪ್ಪಟೆ ಮೂಗಿನ ಅಪ್ಪಟ ಚಿಟ್ಟೆ ಬಾಳೆ ಗುಡಾಣದ ಡೊಳ್ಳಿನ ಹೊಟ್ಟೇ 
          ಮದ್ದಾನೆ ಮರಿ ಈ ಕೆಂಗೆಟ್ಟ ನಾರಿ ಚೆಲುವು ಜಾಣ್ಮೆಗಳ ಆಣೆಕಟ್ಟೆ.. ಏಏಏಏಏ 
         ಒಹೋ.. ಚೆಲುವು ಜಾಣ್ಮೆಗಳ ಆಣೆಕಟ್ಟೆ.. ಏಏಏಏಏ 

ಹೆಣ್ಣು : ಬೈಗಳ ಸುರಿಮಳೇ...  ಹೇಸಿಗೆ ರಗಳೇ... ಬೇಸರ ತರಿಸುವ ನುಡಿ ತರಲೇ 
          ಮೂಡಲ ಹಾಡು ಮರ್ಯಾದೆ ಗೇಡು ವಿರಸಕೀಡು ಈ ಕಹಿ ಜಾಡೂ...ಊಊಊ
ಕೋರಸ್ : ಬೈಗಳ ಸುರಿಮಳೇ...  ಹೇಸಿಗೆ ರಗಳೇ... ಬೇಸರ ತರಿಸುವ ನುಡಿ ತರಲೇ 
                ಮೂಡಲ ಹಾಡು ಮರ್ಯಾದೆ ಗೇಡು ವಿರಸಕೀಡು ಈ ಕಹಿ ಜಾಡೂ...ಊಊಊ          
                ಆಹ್ಹಾ.. ವಿರಸಕೀಡು ಈ ಕಹಿ ಜಾಡೂ...
ಹೆಣ್ಣು : ಆಆಆ.... ಆಆ ... ಆಆ ..ಆಆ ..ಆಆ ..ಆಆ ..ಆಆ ..
          ಸೇರಿಗೆ ಬದಲು ಸವ್ವಾಸೇರು ಸೇರಿಸಿ ಮುರಿದರೂ ನಮ್ಮವರೂ 
ಕೋರಸ್ : ಸೇರಿಗೆ ಬದಲು ಸವ್ವಾಸೇರು ಸೇರಿಸಿ ಮುರಿದರೂ ನಮ್ಮವರೂ 
ಹೆಣ್ಣು : ಆದರ ನೀಡಿ ಆದರ ಕೊಳ್ಳಿ ಬೆಳೆಸಿ ಪ್ರೇಮದ ಹೂಬಳ್ಳಿ 
ಕೋರಸ್ : ಆಹ್ಹಾ..  ಬೆಳೆಸಿ ಪ್ರೇಮದ ಹೂಬಳ್ಳಿ 

ಹೆಣ್ಣು : ಸರಸವೇ ಪರಮಾನಂದಕೆ ಮೂಲ ಪರಮಾನಂದವ ಸರಸವೇ ಸಫಲ 
ಕೋರಸ್ : ಸರಸವೇ ಪರಮಾನಂದಕೆ ಮೂಲ ಪರಮಾನಂದವ ಸರಸವೇ ಸಫಲ 
               ನಮಗೂ ನಿಮಗೂ ಏತಕೆ ಕದನ ದಂಪತಿ ಕಳೆಯಲೇ ಹೂವಿನ ಜೀವನ 
ಹೆಣ್ಣು : ಹೂವಿನ ಜೀವನ ಆಆಆ... ಆಆಆ... 
--------------------------------------------------------------------------------------------------------------------

ಮಲ್ಲಿ ಮದುವೆ (೧೯೬೩) - ನಗುವೇ ನಾಕಾ ಅಳುವೇ ನರಕ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಕುರಾಸೀ  ಗಾಯನ : ಪಿ.ಬಿ.ಎಸ್,  ಜಿ.ಕೆ.ವೆಂಕಟೇಶ

ಜಿಕೆ : ನಗುವೇ ನಾಕಾ ಅಳುವೇ ನರಕ
       ಒಲಿದರೇ ಯುವಕ ಮುನಿದರೇ ಮುದುಕ ತಿಳಿ ತಮ್ಮಾ..
       ನಗುವೇ ನಾಕಾ
ಪಿಬಿಎಸ್ : ಹಣವೇ ನಾಕ ಋಣವೇ ನರಕ
               ಧನಿಕನೇ ಯುವಕ ಬಡವನೇ ಮುದುಕ ಅರಿಯಣ್ಣಾ... 
              ಹಣವೇ ನಾಕ

ಜಿಕೆ : ನಿನ್ನೀ ನ್ಯಾಯ (ಹ್ಹೂಹ್ಹೂಹ್ಹೂ)  ತುಂಬಾ ಅಪಾಯ (ಹೂಂಹೂಂ)
        ನಾಚಿಕೆಗೇಡು ಯೋಚಿಸಿನೋಡು ಆತುರ ಬೇಡಾ ಪ್ರಿಯತಮಾ
        ಆತುರ ಬೇಡಾ ಪ್ರಿಯತಮಾ
ಪಿಬಿಎಸ್ : ಮಾತಿನ ಬೆಲ್ಲ ನಡತೆಯಲಿ ಇಲ್ಲಾ
               ಬಡವರ ಶೂರೇ ಗೈವನ ಮೋರೇ ತಿವಿಯುವರಿಲ್ಲಾ ನೋಡಣ್ಣಾ..
               ನೋಡಣ್ಣಾ.. ಹ್ಹಾಹ್ಹಾಹ್ಹಾ.. ಹಣವೇ ನಾಕ

ಜಿಕೆ : ಜನರಿಗೇ ಮೋಸ (ಅಹ್ಹಹ್ಹಾ) ಮಾಡುವ ನರಿಯಾ (ಆಂ..ಹ್ಹಾಂ )
        ಮನೆ ಮಠ ನಾಶ ಆತ್ಮ ವಿನಾಶ ಕಾದಿದೆ ಮುಂದೆ ಬಿಡುತಮ್ಮಾ
        ಕಾದಿದೆ ಮುಂದೆ ಬಿಡುತಮ್ಮಾ
ಪಿಬಿಎಸ್ : ಕುಡುಕನ ವಾಣಿ ಗುರಿಯಿಟ್ಟ ಆಣಿ ಬರೆಯುವ ಮುನ್ನ ಮೂಡಲಿ ಜ್ಞಾನ
               ಜಾರಲಿ ಜಗದ ಅಜ್ಞಾನ ಜಾರಿ ಹೋಗಲಿ
ಇಬ್ಬರು : ಯಾವುದೂ ನಾಕ ಯಾವುದು ನರಕ ಯಾರು ಯುವಕ ಯಾವನೋ ಮುದುಕ
ಜಿಕೆ: ಬಿಡು ತಮ್ಮಾ...     ಪಿಬಿಎಸ್ : ಸರಿ ಅಣ್ಣಾ....
ಇಬ್ಬರು : ಯಾವುದೂ ನಾಕ...
--------------------------------------------------------------------------------------------------------------------

ಮಲ್ಲಿ ಮದುವೆ (೧೯೬೩) - ಆಡೋಣ ಬಾ ಗೋಪಾಲ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಕಣಗಾಲ್ ಪ್ರಭಾಕರ ಶಾಸ್ತ್ರಿ  ಗಾಯನ : ಎಸ್.ಜಾನಕೀ


ಆಡೋಣ ಬಾ ಬಾ ಗೋಪಾಲ 
ಆಡೋಣ ಬಾ ಬಾ ಗೋಪಾಲ ಓಡೋಡಿ ಬಾ ಬಾ ಭೂಪಾಲ 
ಆಡೋಣ ಬಾ ಬಾ ಗೋಪಾಲ ಓಡೋಡಿ ಬಾ ಬಾ ಭೂಪಾಲ 
ಆಡೋಣ ಬಾ ಬಾ ಗೋಪಾಲ 

ಮಲ್ಲಿಗೆ ಹೂವಾಗೋ ಸಂಜೆ ವೇಳೆ ಮೆಲ್ಲನೇ ತಂಗಾಳಿ ಬೀಸೋ ವೇಳೆ ಆಆಆ... 
ಮಲ್ಲಿಗೆ ಹೂವಾಗೋ ಸಂಜೆ ವೇಳೆ ಮೆಲ್ಲನೇ ತಂಗಾಳಿ ಬೀಸೋ ವೇಳೆ
ನಲ್ಲೆಯ ಕಾಲ್ಗಜ್ಜೆ ಉಲಿಯೋ ವೇಳೆ 
ನಲ್ಲೆಯ ಕಾಲ್ಗಜ್ಜೆ ಉಲಿಯೋ ವೇಳೆ ಒಲವಿನ ಕಣ್ಣು ಕರೆಯೋ ವೇಳೆ 
ಆಡೋಣ ಬಾ ಬಾ ಗೋಪಾಲ ಓಡೋಡಿ ಬಾ ಬಾ ಭೂಪಾಲ 
ಆಡೋಣ ಬಾ ಬಾ ಗೋಪಾಲ 

ಬೃಂದಾವನದ ಹೊಂದಿರ ಮೇಲೆ ಚಂದ್ರಚಕೋರಿ ಸಂಧಿಸೋ ವೇಳೆ ... ಆಆಆ... 
ಬೃಂದಾವನದ ಹೊಂದಿರ ಮೇಲೆ ಚಂದ್ರಚಕೋರಿ ಸಂಧಿಸೋ ವೇಳೆ 
ಒಂದಾಗಿ ಮೈ ಮರೆಯೋ ಏಕಾಂತ ವೇಳೆ ಸುಂದರ ಸುಮಧುರ ಈ ಶುಭ ವೇಳೆ  
ಆಡೋಣ ಬಾ ಬಾ ಗೋಪಾಲ ಓಡೋಡಿ ಬಾ ಬಾ ಭೂಪಾಲ 
ಆಡೋಣ ಬಾ ಬಾ ಗೋಪಾಲ 
--------------------------------------------------------------------------------------------------------------------

ಮಲ್ಲಿ ಮದುವೆ (೧೯೬೩) - ನನ್ನ ನಿನ್ನ ಸಲ್ಲಾಪವನೆಲ್ಲಾ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಕುರಾಸೀ, ಗಾಯನ : ಎಸ್.ಜಾನಕೀ

ನನ್ನ ನಿನ್ನ ಸಲ್ಲಾಪವನ್ನೆಲ್ಲಾ ನಲ್ಲ ಬಣ್ಣಿಸಲಾರೇ
ಶೃಂಗಾರವೇ ನಾಕ ಸುಂದರ ಭಾಸ ಬಣ್ಣಿಸಲಾರೇ ನಲ್ಲಾ.. ಬಣ್ಣಿಸಲಾರೇ
ನನ್ನ ನಿನ್ನ ಸಲ್ಲಾಪವನ್ನೆಲ್ಲಾ ನಲ್ಲ ಬಣ್ಣಿಸಲಾರೇ

ಆಡಿದ ಮಾತಿನ ಸೊಗಸು ಹೊಲಸು ಆಲಿಪ ರಸಿಕನ ಮನಸಿನ ದಿನಿಸು 
ಸಿಹಿ ಮಾತಲ್ಲಿ ಕಹಿ ಕಂಡಲ್ಲಿ ತುಂಬಿದ ಮೌನ ನವ್ಯ ವಿಧಾನ 
ನೂರಾರುಪರಿ ನಲ್ಮೆಯ ಸಿರಿವೂ ಹೇಳಲಾರೇ  
ನೂರಾರುಪರಿ ನಲ್ಮೆಯ ಸಿರಿವೂ ಹೇಳಲಾರೇ
ಬಳಸಿ ಈ ಬಗೆ ಸಿರಿ ನಾಲಿಗೆ ಈ ಘಳಿಗೆ ರಸಘಳಿಗೆ ಆಹಾಹಾ.. ಇನಿಯಾ ಇನಿಯಾ
ನನ್ನ ನಿನ್ನ ಸಲ್ಲಾಪವನ್ನೆಲ್ಲಾ ನಲ್ಲ ಬಣ್ಣಿಸಲಾರೇ

ಆಸೆಯ ಕಮಲಾ ಅರಳಿಸಬಲ್ಲ ಬೇಸನ ಭಾರ ನೀಗಿಸಬಲ್ಲ
ಕವಿ ಮಾತಿಂದ ಕಿವಿಗಾನಂದ ಕವಿತಾವಾಣಿ ಬಲ್ಲವ ಜ್ಞಾನಿ
ಈ ಸಂಯಮದ ನಿರವವಕೆ ನೂತನ ಕವಿತೆ
ಈ ಸಂಯಮದ ನಿರವವಕೆ ನೂತನ ಕವಿತೆ
ನಾರಿ ಮನ ಸಂಜೀವನ ಈ ಹೃದಯ ರಸನಿಲಯ ಆಆಆ.. ಇನಿಯಾ.. ಇನಿಯಾ  
ನನ್ನ ನಿನ್ನ ಸಲ್ಲಾಪವನ್ನೆಲ್ಲಾ ನಲ್ಲ ಬಣ್ಣಿಸಲಾರೇ
ಶೃಂಗಾರವೇ ನಾಕ ಸುಂದರ ಭಾಸ ಬಣ್ಣಿಸಲಾರೇ ನಲ್ಲಾ.. ಬಣ್ಣಿಸಲಾರೇ
ನನ್ನ ನಿನ್ನ ಸಲ್ಲಾಪವನ್ನೆಲ್ಲಾ ನಲ್ಲ ಬಣ್ಣಿಸಲಾರೇ
--------------------------------------------------------------------------------------------------------------------

ಮಲ್ಲಿ ಮದುವೆ (೧೯೬೩) - ಮದುವೆ ಎಂಬ ಸಂತೆಗೇ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಕುರಾಸೀ, ಗಾಯನ :  ಪಿ.ಸುಶೀಲಾ


ಆಆಆ... ಆಆಆ... ಆಆಆ.. 
ಮದುವೇ ಎಂಬ ಸಂತೆಗೇ ಮಾರಲೆಂದು ಮೆಲ್ಲಗೇ 
ತಂದ ಹೆಣ್ಣು ಮಲ್ಲಿಗೇ ಬಂದಿಹೆನು ಇಲ್ಲಿಗೇ 
ಬಂದಿಹೆನು ಇಲ್ಲಿಗೇ 
ಮದುವೇ ಎಂಬ ಸಂತೆಗೇ ಮಾರಲೆಂದು ಮೆಲ್ಲಗೇ 
ತಂದ ಹೆಣ್ಣು ಮಲ್ಲಿಗೇ ಬಂದಿಹೆನು ಇಲ್ಲಿಗೇ 
ಬಂದಿಹೆನು ಇಲ್ಲಿಗೇ 

ಜಗವನರಿತ ಹಿರಿಯರೂ ಚಿಗುರು ಮೀಸೆ ರಾಯರೂ 
ಜಗವನರಿತ ಹಿರಿಯರೂ ಚಿಗುರು ಮೀಸೆ ರಾಯರೂ 
ಬಲ್ಲವರು ಬಲ್ಲಿದರು ಇಲ್ಲಿ ಬಂದು ನೆರೆದರೂ ಆಆಆ... ಓಓಓ 
ಜನವ ಸುಲಿವ ಶೂರರೂ...  
ಜನವ ಸುಲಿವ ಶೂರರೂ ಹೊಗಳಿ ಬೊಗಳಿ ಮಲ್ಲರೂ 
ಜನವ ಸುಲಿವ ಶೂರರೂ ಹೊಗಳಿ ಬೊಗಳಿ ಮಲ್ಲರೂ 
ಹಿರಿಯರೋ ಕಿರಿಯರೋ ಬೆರೆತರಿಲ್ಲಿ ಹಲವರು 
ಮದುವೇ ಎಂಬ ಸಂತೆಗೇ ಮಾರಲೆಂದು ಮೆಲ್ಲಗೇ 
ತಂದ ಹೆಣ್ಣು ಮಲ್ಲಿಗೇ ಬಂದಿಹೆನು ಇಲ್ಲಿಗೇ 
ಬಂದಿಹೆನು ಇಲ್ಲಿಗೇ ಆಆಆ.. ಆಆಆಹಾ.. ಓಹೋಹೋ.. 

ಪ್ರೇಮ ಇರಿಸಿ ಮರೆತವರೂ 
ಪ್ರೇಮ ಇರಿಸಿ ಮರೆತವರೂ ನೇಮ ತೊರೆದ ನೇಹಿತರೂ 
ಪ್ರೇಮ ಇರಿಸಿ ಮರೆತವರೂ ನೇಮ ತೊರೆದ ನೇಹಿತರೂ 
ಹೊಸಬರೋ ಹಳಬರೋ ಅರಸಿ ಬಯಸಿ ಬಂದರೂ 
ಮದುವೇ ಎಂಬ ಸಂತೆಗೇ ಮಾರಲೆಂದು ಮೆಲ್ಲಗೇ 
ತಂದ ಹೆಣ್ಣು ಮಲ್ಲಿಗೇ ಬಂದಿಹೆನು ಇಲ್ಲಿಗೇ 
ಬಂದಿಹೆನು ಇಲ್ಲಿಗೇ ಆಆಆ.. ಆಆಆಹಾ.. ಓಹೋಹೋ.. 
--------------------------------------------------------------------------------------------------------------------------

No comments:

Post a Comment