1012. ಲಕ್ಷ್ಮಿ ಸರಸ್ವತಿ (೧೯೭೦)

ಲಕ್ಷ್ಮಿ ಸರಸ್ವತಿ ಚಿತ್ರದ ಹಾಡುಗಳು 
  1. ಚಂದಿರ ಭೂಮಿಗೆ ಬೆಳಕನು ಚೆಲ್ಲಲು (ಪಿ.ಸುಶೀಲಾ )
  2. ಚಂದಿರ ಭೂಮಿಗೆ ಬೆಳಕನು ಚೆಲ್ಲಲು 
  3. ನೂರು ವರುಷ ಬಾಳಿರಿ 
  4. ಗೃಹಿಣಿ ನೀನು ಯಾರ ಮನೆಗೆ 
  5. ವಸಂತ ಚೈತ್ರರು ಕುಣಿಯುತ ಬಂದಾರು 
ಲಕ್ಷ್ಮಿ ಸರಸ್ವತಿ (೧೯೭೦) - ಚಂದಿರ ಭೂಮಿಗೆ ಬೆಳಕನು ಚೆಲ್ಲಲು
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಸುಶೀಲಾ

ಚಂದಿರ ಭೂಮಿಗೆ ಬೆಳಕನು ಚೆಲ್ಲಲು ಹುಣ್ಣಿಮೆ ಬರಬೇಕು.. ಹುಣ್ಣಿಮೆ ಬರಬೇಕು
ಬಾಳಿನ ಪಲ್ಲವಿ ಜೋಗುಳವಾಗಲು ತಾಯ್ತನ ಬರಬೇಕು ಮಡಿಲಲಲಿ ಕಂದನು ನಗಬೇಕು
ಚಂದಿರ ಭೂಮಿಗೆ ಬೆಳಕನು ಚೆಲ್ಲಲು ಹುಣ್ಣಿಮೆ ಬರಬೇಕು.. ಹುಣ್ಣಿಮೆ ಬರಬೇಕು

ಸ್ನೇಹವೋ ಸಲಿಗೆಯೂ  ಸರಸವು ಸನಿಹವು ಅನುದಿನವಿರಬೇಕು
ಸೌಖ್ಯದ ಸಂಭ್ರಮ ಸಂತಸ ಸವಿಯುವ ಭಾಗ್ಯವ ಬರಬೇಕು
ನೆಮ್ಮದಿ ಮೂಡಲು ಬದುಕಲಿ ನಾಳಿನ ಚಿಂತೆಯ ಬಿಡಬೇಕು
ನಿಮ್ಮೊಡನಿರುವ ಹೆಮ್ಮೆಯ ಗೆಳೆತನ ಎಂದಿಗೂ ಇರಬೇಕು
ಚಂದಿರ ಭೂಮಿಗೆ ಬೆಳಕನು ಚೆಲ್ಲಲು ಹುಣ್ಣಿಮೆ ಬರಬೇಕು.. ಹುಣ್ಣಿಮೆ ಬರಬೇಕು 

ಹಣ್ಣನು ಕೊಡುವಾ ಮರವಾಗಿರಲು ಅಕ್ಕರೆ ತೋರುವರೂ
ಫಲ ಕೊಡದ ಮರ ಎಂದರೇ ಒಡನೇ ಕೊಡಲಿಯ ಬೀಸುವರೂ
ಹೂವಿನ ಆಸೆಗೆ ತೋಟದಿ ಗಿಡಕೆ ನೀರನು ಎರೆಯುವರೂ
ಹೂ ಬಿಡದೆಂದೂ ತಿಳಿದರೆ ಮುಳ್ಳಿನ ಬೇಲಿಗೆ ಎಸೆಯುವರೂ
ಚಂದಿರ ಭೂಮಿಗೆ ಬೆಳಕನು ಚೆಲ್ಲಲು ಹುಣ್ಣಿಮೆ ಬರಬೇಕು.. ಹುಣ್ಣಿಮೆ ಬರಬೇಕು 
ಬಾಳಿನ ಪಲ್ಲವಿ ಜೋಗುಳವಾಗಲು ತಾಯ್ತನ ಬರಬೇಕು ಮಡಿಲಲಲಿ ಕಂದನು ನಗಬೇಕು
ಚಂದಿರ ಭೂಮಿಗೆ ಬೆಳಕನು ಚೆಲ್ಲಲು ಹುಣ್ಣಿಮೆ ಬರಬೇಕು.. ಹುಣ್ಣಿಮೆ ಬರಬೇಕು 
--------------------------------------------------------------------------------------------------------------------------

ಲಕ್ಷ್ಮಿ ಸರಸ್ವತಿ (೧೯೭೦) - ಚಂದಿರ ಭೂಮಿಗೆ ಬೆಳಕನು ಚೆಲ್ಲಲು
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಎಸ್. ಪಿ.ಸುಶೀಲಾ

ಗಂಡು : ಚಂದಿರ ಭೂಮಿಗೆ ಬೆಳಕನು ಚೆಲ್ಲಲು ಹುಣ್ಣಿಮೆ ಬರಬೇಕು.. ಹುಣ್ಣಿಮೆ ಬರಬೇಕು
           ಬಾಳಿನ ಪಲ್ಲವಿ ಜೋಗುಳವಾಗಲು ಮಡದಿಯು ಇರಬೇಕು ಒಲವಿನ ಮಡದಿಯು ಇರಬೇಕು
           ಚಂದಿರ ಭೂಮಿಗೆ ಬೆಳಕನು ಚೆಲ್ಲಲು ಹುಣ್ಣಿಮೆ ಬರಬೇಕು.. ಹುಣ್ಣಿಮೆ ಬರಬೇಕು

ಗಂಡು : ಸ್ನೇಹದ ಸಲಿಗೆಯ ಸರಸವ ಅನುದಿನ ಬಯಸಿದೆ ನೀನೆಂದೂ 
            ಈ ಏಕಾಂತದೇ ದೂರದಲಿರುವ ಆಸೆಯ ಏಕಿಂದೂ 
ಹೆಣ್ಣು : ಇಬ್ಬರ ಇರುವ ಸಮಯದಿ ಮನಸು ಬೇಡಿದ ಮಾತಂದೂ 
         ಇಬ್ಬರ ನಡುವೇ ನಗುತಿದೆ ನೋಡಿರಿ ಮಡಿಲಲಿ ಇನ್ನೊಂದು 
ಗಂಡು : ಚಂದಿರ ಭೂಮಿಗೆ ಬೆಳಕನು ಚೆಲ್ಲಲು ಹುಣ್ಣಿಮೆ ಬರಬೇಕು.. ಹುಣ್ಣಿಮೆ ಬರಬೇಕು 

ಗಂಡು : ಈ ಹಸು ಕಂದಗೆ ಮಾತೇ ಬಾರದು ದೇವರಂತೆ ಇವನು 
            ಏನೂ ತಿಳಿಯದು ಮಲಗಿಸಿ ಬಾರೇ ತಾಮಸವೆಕಿನ್ನೂ  
ಹೆಣ್ಣು : ದೇವರ ಮುಂದೆ ನುಡಿಯುವ ಮಾತೇ ತಪ್ಪು ಎನ್ನಿ ಬೇಗ
          ಕಾಡಬೇಡಿರ ನಾ ಬೇಡಿ ಕೊಳ್ಳುವೆ ದುಡುಕದಿರೀ ಈಗ
ಗಂಡು : ಚಂದಿರ ಭೂಮಿಗೆ ಬೆಳಕನು ಚೆಲ್ಲಲು ಹುಣ್ಣಿಮೆ ಬರಬೇಕು.. ಹುಣ್ಣಿಮೆ ಬರಬೇಕು
            ಬಾಳಿನ ಪಲ್ಲವಿ ಜೋಗುಳವಾಗಲು ಮಡದಿಯು ಇರಬೇಕು ಒಲವಿನ ಮಡದಿಯು ಇರಬೇಕು
            ಚಂದಿರ ಭೂಮಿಗೆ ಬೆಳಕನು ಚೆಲ್ಲಲು ಹುಣ್ಣಿಮೆ ಬರಬೇಕು.. ಹುಣ್ಣಿಮೆ ಬರಬೇಕು 
--------------------------------------------------------------------------------------------------------------------------

ಲಕ್ಷ್ಮಿ ಸರಸ್ವತಿ (೧೯೭೦) - ನೂರು ವರುಷ ಬಾಳಿರಿ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಚಿ.ಉದಯಶಂಕರ ಗಾಯನ :  ಪಿ.ಸುಶೀಲಾ

ಚೀಯರ್ಸ್..
ನೂರು ವರುಷ ಬಾಳಿರಿ ನೂರು ದೀಪ ಬೆಳಗಿರಿ 
ನೂರು ಬಾಳು ಬೆಳಗಲು ನೀವೇ ಜ್ಯೋತಿ ಆಗಿರಿ 
ನೂರು ವರುಷ ಬಾಳಿರಿ 

ಊಟವಿರದೇ ಹಸಿದ ಹೊಟ್ಟೆ ನಾಡಲ್ಲೆತ್ತೋ ತುಂಬಿದೆ 
ಊಟವಿರದೇ ಹಸಿದ ಹೊಟ್ಟೆ ನಾಡಲ್ಲೆತ್ತೋ ತುಂಬಿದೆ 
ಅನ್ನ ಇಡುವ ತಟ್ಟೆಯಲ್ಲಿ ಕಸದ ಬುಟ್ಟಿಯಾಗಿದೇ 
ಕರುಣೆ ತೋರಿ ದಯವ ಮೀರಿ ಮಾನವತೆಯ ಉಳಿಸಿರಿ 
ನೂರು ವರುಷ ಬಾಳಿರಿ 

ಸಮಸೈ ಕಾಣದೇ ದೇಶವಿಂದು ಸೊರಗುತಿರುವುದ ನೋಡಿರಿ 
ಸಮಸೈ ಕಾಣದೇ ದೇಶವಿಂದು ಸೊರಗುತಿರುವುದ ನೋಡಿರಿ 
ಸ್ವಾರ್ಥ ಜನರ ಹಿಂಸೆಯಿಂದ ಬಡವರ ಅಳುವುದ ಕೇಳಿರಿ 
ಹಂಚಿಕೊಂಡೇ ಬಾಳಿಗೊಂದೇ ನಮಗೆ ಸುಖದ ಐಸಿರಿ 
ನೂರು ವರುಷ ಬಾಳಿರಿ 

ಜನತೆಯನ್ನು ಉದ್ಧರಿಸಲು ಬುದ್ಧನಂತೆ ಏಳಿರಿ 
ಜನತೆಯನ್ನು ಉದ್ಧರಿಸಲು ಬುದ್ಧನಂತೆ ಏಳಿರಿ 
ನಾಡಿಗಾಗಿ ಸುಖವ ಮರೆತು ಗಾಂಧಿಯಂತೇ ದುಡಿಯಿರಿ 
ದೇಶ ಸೇವೆ ಈಶ ಸೇವೆ ಸೇವೆಗಾಗಿಯೇ ಬಾಳಿರಿ 
ನೂರು ವರುಷ ಬಾಳಿರಿ ನೂರು ದೀಪ ಬೆಳಗಿರಿ 
ನೂರು ಬಾಳು ಬೆಳಗಲು ನೀವೇ ಜ್ಯೋತಿ ಆಗಿರಿ 
ನೂರು ವರುಷ ಬಾಳಿರಿ 
--------------------------------------------------------------------------------------------------------------------------

ಲಕ್ಷ್ಮಿ ಸರಸ್ವತಿ (೧೯೭೦) - ಗೃಹಿಣಿ ನೀನು ಯಾರ ಮನೆಗೆ 
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಚಿ.ಉದಯಶಂಕರ ಗಾಯನ :  ಪಿ.ಸುಶೀಲಾ

ಗೃಹಿಣಿ ನೀನು ಯಾರ ಮನೆಗೇ
ಗೃಹಿಣಿ ನೀನು ಯಾರ ಮನೆಗೇ ತಾಯಿ ನೀನು ಯಾರ ಮಗುವಿಗೇ
ಗೃಹಿಣಿ ನೀನು ಯಾರ ಮನೆಗೇ ತಾಯಿ ನೀನು ಯಾರ ಮಗುವಿಗೇ

ಮಡದಿಯಾದೇ ಮದುವೆಯಿಲ್ಲದೇ ಮಾತೆಯಾದೇ ಮಗುವ ಹೇರದೇ 
ಮಡದಿಯಾದೇ ಮದುವೆಯಿಲ್ಲದೇ ಮಾತೆಯಾದೇ ಮಗುವ ಹೇರದೇ 
ಸೋದರಿ ಬಾಳಿನ ಬೆಸಿಗೆ ಬೆಸಲಿಗೆ ತಂಪನು ನೀಡಲು ನೀ ನೆರಳಾದೇ 
ಗೃಹಿಣಿ ನೀನು ಯಾರ ಮನೆಗೇ ತಾಯಿ ನೀನು ಯಾರ ಮಗುವಿಗೇ 

ನಡೆವ ಮುನ್ನ ನಡೆದ ಮೇಲೆ ಹಾದಿ ಹಾಗೇ ಉಳಿವುದು 
ನಡೆವ ಮುನ್ನ ನಡೆದ ಮೇಲೆ ಹಾದಿ ಹಾಗೇ ಉಳಿವುದು 
ನಡೆದು ನಡೆದು ಯಾರಿಗಾಗಿಯೋ ಸವೆಯ ಕಾಲ್ಗಳೂ ನಿನ್ನದೂ 
ಗೃಹಿಣಿ ನೀನು ಯಾರ ಮನೆಗೇ ತಾಯಿ ನೀನು ಯಾರ ಮಗುವಿಗೇ 
--------------------------------------------------------------------------------------------------------------------------

ಲಕ್ಷ್ಮಿ ಸರಸ್ವತಿ (೧೯೭೦) - ವಸಂತ ಚೈತ್ರರು ಕುಣಿಯುತ ಬಂದರು 
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಶ್ರೀನಿವಾಸ 

ಕೋರಸ್ : ಆಆಆಅ... ಆಆಆಆ...
                ವಸಂತ ಚೈತ್ರರು ಕುಣಿಯುತ ಬಂದರು ಹೂವೂ ಚಿಗುರಿನ ಕಂಪನು ತಂದರು
                ವಸಂತ ಚೈತ್ರರು ಕುಣಿಯುತ ಬಂದರು ಹೂವೂ ಚಿಗುರಿನ ಕಂಪನು ತಂದರು

ಗಂಡು : ಮನವು ಆರಿತು ವಿರಹವು ಮೀರಿತು                
ಕೋರಸ್ : ಮನವು ಆರಿತು ವಿರಹವು ಮೀರಿತು             
ಗಂಡು : ಸಂಗವು ಬಯಸಿತು ಬಯಸಿ ತಪಿಸಿತು
ಕೋರಸ್ : ಸಂಗವು ಬಯಸಿತು ಬಯಸಿ ತಪಿಸಿತು
ಗಂಡು : ಓ... ರತಿ (ಆಆಆ..) ಪ್ರಣಯಮತಿ (ಆಆಆ)
           ಮದನ ಸತಿ (ಆಆಆ) ಬಾರಾ... ಸಂಗ ಸುಖವನೇ ತಾರಾ... (ಆಆಆ)

ಗಂಡು : ಬಂದಳು ತ್ರಿಲೋಕ ಸುಂದರಿ ರತಿಯು ಕಂಡನು ವಿರಹದಿ ಬೆಂದಿಹ ಪತಿಯು (ಆಆಆ )
           ಬಂದಳು ತ್ರಿಲೋಕ ಸುಂದರಿ ರತಿಯು ಕಂಡನು ವಿರಹದಿ ಬೆಂದಿಹ ಪತಿಯು (ಆಆಆ )
           ಹಣೆಯು ಬೆವರಿತು ತನುವು ನಿಮೀರಿತು ಪ್ರಣಯ ಸೆಳೆಯಿತು ಅವಳೆಡೆಗೇ
         
ಗಂಡು : ನಾಲ್ಕು ಕಂಗಳು ಕೂಡಿ ಕಲೆತವು  ನಾಲ್ಕು ತೋಳಗಳು ಬೆರೆತೆರಡಾದವು (ಆಆಆ)
           ನಾಲ್ಕು ಕಂಗಳು ಕೂಡಿ ಕಲೆತವು  ನಾಲ್ಕು ತೋಳಗಳು ಬೆರೆತೆರಡಾದವು (ಆಆಆ)
           ಎರಡು ದೇಹವೂ ಸೇರ ಒಂದಾದವೂ ಸಂಗದ ಸುಧೆಯನು ಸವಿಯುತ ನಲಿದರು
--------------------------------------------------------------------------------------------------------------------------

No comments:

Post a Comment