1014. ಲಗ್ನ ಪತ್ರಿಕೆ (೧೯೬೭)



ಲಗ್ನ ಪತ್ರಿಕೆ ಚಿತ್ರದ ಹಾಡುಗಳು 
  1. ಇಲ್ಲಿ ಯಾರು ಇಲ್ಲ 
  2. ಸೀನು ಸುಬ್ಬು ಸೀನು ಸುಬ್ಬು 
  3. ಗಂಡು ಮುತ್ತಿನ ಚೆಂಡು 
  4. ಭ್ರಹ್ಮಚಾರಿ ಶರಣಾದ 
  5. ನಿನ್ನಿಂದ ನಾನೆಂದು 

ಲಗ್ನ ಪತ್ರಿಕೆ (೧೯೬೭)
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಎಸ್. 

ನಿನ್ನಿಂದ ನಾನೆಂದು ಹಗಲಿರುಳು ಹಂಬಲಿಸಿ
ಕೈಯಿಡಿದು ಬರಸೆಳೆದು ಒಲವಿನ ಕಾಣಿಕೆ
ಬಯಸಿದೆನು ನಿನ್ನಿಂದ ನಾನೆಂದು ಹಗಲಿರುಳು ಹಂಬಲಿಸಿ

ಊರ್ವಶಿ ರಂಭೆಯಾ ನಾಚಿಸ ಬಲ್ಲ 
ಚಂದದ ರಾಶಿಯೇ ಮುಂದಿದೆಯಲ್ಲಾ 
ಊರ್ವಶಿ ರಂಭೆಯಾ ನಾಚಿಸ ಬಲ್ಲ 
ಚಂದದ ರಾಶಿಯೇ ಮುಂದಿದೆಯಲ್ಲಾ 
ಕಲ್ಪನೆ ಮೆರೆಯ ಮೀರಿದೆಯಲ್ಲಾ ಅಂದವ 
ಹೊಗಳಲು ಮಾತೇ ಇಲ್ಲ 
ನಿನ್ನಿಂದ ನಾನೆಂದು ಹಗಲಿರುಳು ಹಂಬಲಿಸಿ
ಕೈಯಿಡಿದು ಬರಸೆಳೆದು ಒಲವಿನ ಕಾಣಿಕೆ
ಬಯಸಿದೆನು ನಿನ್ನಿಂದ ನಾನೆಂದು ಹಗಲಿರುಳು ಹಂಬಲಿಸಿ 

ಸ್ನೇಹದ ಬಳ್ಳಿಯ ಮೋಹದ ಹೂವೇ 
ಮೈಮನ ತುಂಬಿಹ ಹೃದಯದ ಒಲವೇ 
ಸ್ನೇಹದ ಬಳ್ಳಿಯ ಮೋಹದ ಹೂವೇ 
ಮೈಮನ ತುಂಬಿಹ ಹೃದಯದ ಒಲವೇ 
ನೀನೇ ಬಾಳಿನ ಬೆಳಕಾಗಿರುವೆ 
ನೀ ಮರೆಯಾದರೆ ಜೀವಕೆ ಸಾವೇ 
ನಿನ್ನಿಂದ ನಾನೆಂದು ಹಗಲಿರುಳು ಹಂಬಲಿಸಿ
ಕೈಯಿಡಿದು ಬರಸೆಳೆದು ಒಲವಿನ ಕಾಣಿಕೆ
ಬಯಸಿದೆನು ನಿನ್ನಿಂದ ನಾನೆಂದು ಹಗಲಿರುಳು ಹಂಬಲಿಸಿ 
-------------------------------------------------------------------------------------------------------------------------

ಲಗ್ನ ಪತ್ರಿಕೆ (೧೯೬೭)
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಎಸ್,  ಎ.ಎಲ್.ರಾಘವನ್  

ಪಿ.ಬಿ. :  ಒಂದು ಎರಡು ಮೂರೂ ಹಾಡು ಹಾಡು
ರಾಘು:  ಡೋರೆ ಮೀ ಫಾಲ್ ಲಾಸೀ
ಪಿ.ಬಿ. : ಸರಿಗಮಪದನಿ
ಕೋರಸ್ : ಸೀನು ಸುಬ್ಬು ಸುಬ್ಬು ಸೀನು ಸುಬ್ಬು ಸುಬ್ಬು
                ಸೀನು ಸುಬ್ಬು ಸುಬ್ಬು ಸೀನು ಸುಬ್ಬು ಸುಬ್ಬು ಸೀನು
ಪಿ.ಬಿ. : ಬಲು ಅಪರೂಪ ನಮ್ಮ ಜೋಡಿ.. (ಸೀನು ಸುಬ್ಬು)
           ಎಂಥ ಕಛೇರಿಗೂ ನಾವು ರೆಡಿ... (ಸೀನು ಸುಬ್ಬು)
ರಾಘು : ಬಲು ಅಪರೂಪ ನಮ್ಮ ಜೋಡಿ.. (ಸೀನು ಸುಬ್ಬು)
           ಎಂಥ ಕಛೇರಿಗೂ ನಾವು ರೆಡಿ... (ಸೀನು ಸುಬ್ಬು)
ಪಿ.ಬಿ. : ವೇಗಡೇ ರಾಗ ಪಾಡಿ ಬೀದಿಲ್ ನಾವ್ ಹಾಡಿ 
          ಶೇಕ್ ಪೀಸ್ ಕುಣಿಯೋದ್ ನೋಡಿ ದಯಮಾಡಿ 
ರಾಘು : ವೇಗಡೇ ರಾಗ ಪಾಡಿ ಬೀದಿಲ್ ನಾವ್ ಹಾಡಿ 
          ಶೇಕ್ ಪೀಸ್ ಕುಣಿಯೋದ್ ನೋಡಿ ದಯಮಾಡಿ 
ರಾಘು : ಬಲು ಅಪರೂಪ ನಮ್ಮ ಜೋಡಿ.. (ಸೀನು ಸುಬ್ಬು)
           ಎಂಥ ಕಛೇರಿಗೂ ನಾವು ರೆಡಿ... (ಸೀನು ಸುಬ್ಬು)  

ಪಿ.ಬಿ. : ಅಮೆರಿಕದಲ್ಲಿ ಬೀಟಲ್ ಹಾಡಲು ಕುಣಿಯಲಾರದೇ ಓಡಿದರೂ
ರಾಘು : ಲಂಡನದಲ್ಲಿ ಶೇಕ್ ಪೀಸ್ ಮಾಡೆಲ ಹೆಣ್ಣುಗಳೆಲ್ಲಾ ನೋಡಿದರೂ...  ಅರೇ
ಪಿ.ಬಿ. : ಅಮೆರಿಕದಲ್ಲಿ ಬೀಟಲ್ ಹಾಡಲು ಕುಣಿಯಲಾರದೇ ಓಡಿದರೂ
ರಾಘು : ಲಂಡನಲ್ಲಿ ಶೇಕ್ ಪೀಸ್ ಮಾಡೆಲ ಹೆಣ್ಣುಗಳೆಲ್ಲಾ  ನೋಡಿದರೂ
ಪಿ.ಬಿ. : ಕುಣಿಗಲನಲ್ಲಿ  ಕಚೇರಿ ಮಾಡಲು ಕಂಗಾಲಾಗಿ ಬೆದರಿದರೂ
ಇಬ್ಬರು: ಚನ್ನಪಟ್ಟಣದ ಸೋದರರೆಂದರೆ ಸಂಗೀತಗಾರರೇ ನಡುಗುವುರೂ
ಕೋರಸ್ : ಸೀನು ಸುಬ್ಬು ಸುಬ್ಬು ಸೀನು ಸುಬ್ಬು ಸುಬ್ಬು
                ಸೀನು ಸುಬ್ಬು ಸುಬ್ಬು ಸೀನು ಸುಬ್ಬು ಸುಬ್ಬು ಸೀನು
ಇಬ್ಬರೂ : ಬಲು ಅಪರೂಪ ನಮ್ಮ ಜೋಡಿ.. (ಸೀನು ಸುಬ್ಬು)
               ಎಂಥ ಕಛೇರಿಗೂ ನಾವು ರೆಡಿ... (ಸೀನು ಸುಬ್ಬು) 

ರಾಘು : ರಾಗವ ಹಾಡಿ ಮಳೆಯನು ಕರೆದ ಮಹಾಪುರುಷರ ಕಥೆಯುಂಟು
ಪಿ.ಬಿ. : ತಾಳದಿಂದಲೇ ದೀಪ ಉರಿಸಿದ ದಿವ್ಯ ಪುರುಷರೂ ಹಿಂದುಂಟು
ರಾಘು : ರಾಗವ ಹಾಡಿ ಮಳೆಯನು ಕರೆದ ಮಹಾಪುರುಷರ ಕಥೆಯುಂಟು
ಪಿ.ಬಿ. : ತಾಳದಿಂದಲೇ ದೀಪ ಉರಿಸಿದ ದಿವ್ಯ ಪುರುಷರೂ ಹಿಂದುಂಟು
ರಾಘು : ಹಾಡನು ಹಾಡಿ ಹೆಣ್ಣಿನ ಮನದಿ ಭಯ ತಂದವರು ಇಲ್ಲುಂಟು
ಇಬ್ಬರು: ಚನ್ನಪಟ್ಟಣದ ಸೋದರರೆಂದರೆ ಲೋಕಕೆಲ್ಲಾ ದಿಗಿಲುಂಟೂ.... 
ಕೋರಸ್ : ಸೀನು ಸುಬ್ಬು ಸುಬ್ಬು ಸೀನು ಸುಬ್ಬು ಸುಬ್ಬು
                ಸೀನು ಸುಬ್ಬು ಸುಬ್ಬು ಸೀನು ಸುಬ್ಬು ಸುಬ್ಬು ಸೀನು
ಇಬ್ಬರೂ : ಬಲು ಅಪರೂಪ ನಮ್ಮ ಜೋಡಿ.. (ಸೀನು ಸುಬ್ಬು)
               ಎಂಥ ಕಛೇರಿಗೂ ನಾವು ರೆಡಿ... (ಸೀನು ಸುಬ್ಬು) 
               ವೇಗಡೇ ರಾಗ ಪಾಡಿ ಬೀದಿಲ್ ನಾವ್ ಹಾಡಿ.. ಶೇಕ್  
               ವೇಗಡೇ ರಾಗ ಪಾಡಿ ಬೀದಿಲ್ ನಾವ್ ಹಾಡಿ
              ಶೇಕ್ ಪೀಸ್ ಕುಣಿಯೋದ್ ನೋಡಿ ದಯಮಾಡಿ 
              ಬಲು ಅಪರೂಪ ನಮ್ಮ ಜೋಡಿ.. (ಸೀನು ಸುಬ್ಬು)
               ಎಂಥ ಕಛೇರಿಗೂ ನಾವು ರೆಡಿ... (ಸೀನು ಸುಬ್ಬು)
--------------------------------------------------------------------------------------------------------------------------

ಲಗ್ನ ಪತ್ರಿಕೆ (೧೯೬೭)
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಎಸ್,  ಎ.ಎಲ್.ರಾಘವನ್  

ಪಿ.ಬಿ. : ಹಾಯ್.. ಹಾಯ್.. ಹಾಯ್ ಹಾಯ್
           ಬ್ರಹ್ಮಚಾರಿ ಶರಣಾದ      ರಾಘು : ಪ್ರೇಮದೇವಿಗೆ ಸೆರೆಯಾದ
ಪಿ.ಬಿ. : ಬ್ರಹ್ಮಚಾರಿ ಶರಣಾದ  ರಾಘು : ಪ್ರೇಮದೇವಿಗೆ ಸೆರೆಯಾದ
ಇಬ್ಬರು: ಪಾಣಿ ಪ್ರಣಯದ ಹಾದಿ ತುಳಿದು ನಮ್ಮ ದಾರಿಗೆ ನೇರವಾದ
           ತಾನೇ ಪ್ರಣಯದ ಹಾದಿ ತುಳಿದು ನಮ್ಮ ದಾರಿಗೆ ನೇರವಾದ
           ಬ್ರಹ್ಮಚಾರಿ ಶರಣಾದ  ರಾಘು : ಪ್ರೇಮದೇವಿಗೆ ಸೆರೆಯಾದ

ಪಿ.ಬಿ.: ಕಂಡ ಒಡನೇ     ರಾಘು : ಮರೆತು ಸೊನ್ನೆ
ಪಿ.ಬಿ.: ಚೆಲುವೆ ನೀನೇ   ರಾಘು : ಬಾಳ ಗೆಳತೀ
ಪಿ.ಬಿ.: ಕಂಡ ಒಡನೇ     ರಾಘು : ಮರೆತು ಸೊನ್ನೆ
ಪಿ.ಬಿ.: ಚೆಲುವೆ ನೀನೇ   ರಾಘು : ಬಾಳ ಗೆಳತೀ 
ಇಬ್ಬರು : ಪ್ರೇಮದಾರುತಿ ಬಾ ಎಂದ 
ಪಿ.ಬಿ.: ಹೆಣ್ಣಾ ಮೇಲೆ ಕಣ್ಣು ಬಿಟ್ಟು ಮೋಹವೆಂಬ ಮತ್ತು ಕಟ್ಟು 
         ಹೇ ಮನದಿ ಮೂಡಿ ನಿಂತು ಅಂತೂ ಇಂತೂ ಮದುವೇ ಬಂತು 
ಇಬ್ಬರು : ಬ್ರಹ್ಮಚಾರಿ ಶರಣಾದ ಪ್ರೇಮದೇವಿಗೆ ಸೆರೆಯಾದ 

ರಾಘು : ಹಾಗೆ ನೀನೇ   ಪಿ.ಬಿ.: ಕವಿಯು ನಾನೇ
ರಾಘು : ಭಾವ ನೀನೇ   ಪಿ.ಬಿ.: ಜೀವದಾಣೆ
ರಾಘು : ಹಾಗೆ ನೀನೇ   ಪಿ.ಬಿ.: ಕವಿಯು ನಾನೇ
ರಾಘು : ಭಾವ ನೀನೇ   ಪಿ.ಬಿ.: ಜೀವದಾಣೆ
ಇಬ್ಬರು : ಪ್ರೇಮದಾ ಸವಿ ನೀಡೆಂದಾ 
ರಾಘು : ಕೆನ್ನೆ ಮೇಲೆ ಕೆನ್ನೆ ಇಟ್ಟು ಅತ್ತ ಇತ್ತ ನೋಡದಿತ್ತು 
           ಸುಳಿಯು ಏನೋ ಕೇಳುತ್ತಿತ್ತು ನಮ್ಮ ನೋಡಿ ಕುಂದು ಬಿತ್ತು
ಇಬ್ಬರು : ಬ್ರಹ್ಮಚಾರಿ ಶರಣಾದ  ಪ್ರೇಮದೇವಿಗೆ ಸೆರೆಯಾದ
             ಬ್ರಹ್ಮಚಾರಿ ಶರಣಾದ  ಪ್ರೇಮದೇವಿಗೆ ಸೆರೆಯಾದ
             ಪಾಣಿ ಪ್ರಣಯದ ಹಾದಿ ತುಳಿದು ನಮ್ಮ ದಾರಿಗೆ ನೇರವಾದ
             ತಾನೇ ಪ್ರಣಯದ ಹಾದಿ ತುಳಿದು ನಮ್ಮ ದಾರಿಗೆ ನೇರವಾದ
             ಬ್ರಹ್ಮಚಾರಿ ಶರಣಾದ  ಪ್ರೇಮದೇವಿಗೆ ಸೆರೆಯಾದ
             ಬ್ರಹ್ಮಚಾರಿ ಶರಣಾದ  ಪ್ರೇಮದೇವಿಗೆ ಸೆರೆಯಾದ 
--------------------------------------------------------------------------------------------------------------------------

ಲಗ್ನ ಪತ್ರಿಕೆ (೧೯೬೭)
ಸಂಗೀತ:ವಿಜಯ ಭಾಸ್ಕರ, ಸಾಹಿತ್ಯ:ಚಿ.ಉದಯಶಂಕರ,ಗಾಯನ:ಪಿ.ಬಿ.ಎಸ್,ಎಲ್.ಆರ್.ಈಶ್ವರಿ, ಬೆಂ.ಲತಾ  

ಗಂಡು : ಇಲ್ಲಿ ಯಾರು ಇಲ್ಲ ಇಲ್ಲಿ ನಾವೇ ಎಲ್ಲಾ
            ಈ ದೂರ ನಮಗೆ ಸರಿಯಲ್ಲ ಒಂದಾಗುವ ಕಾಲ ಬಂತಲ್ಲಾ
ಇಬ್ಬರು : ಒಂದಾಗುವ ಕಾಲ ಬಂತಲ್ಲಾ... ಒಹೋ...
ಹೆಣ್ಣು  : ಇಲ್ಲಿ ಯಾರು ಇಲ್ಲ ಇಲ್ಲಿ ನಾವೇ ಎಲ್ಲಾ
            ಈ ದೂರ ನಮಗೆ ಸರಿಯಲ್ಲ ಒಂದಾಗುವ ಕಾಲ ಬಂತಲ್ಲಾ
ಇಬ್ಬರು : ಒಂದಾಗುವ ಕಾಲ ಬಂತಲ್ಲಾ... ಒಹಹೋ...

ಗಂಡು : ನೀನೇ  ತುಂಬಿಹೇ ಕಣ್ಣಲ್ಲಿ ನೀನೇ ನಿಂದಿಹೇ ಮನದಲ್ಲಿ
            ನೀನೇ  ತುಂಬಿಹೇ ಕಣ್ಣಲ್ಲಿ ನೀನೇ ನಿಂದಿಹೇ ಮನದಲ್ಲಿ
ಹೆಣ್ಣು : ನಿನ್ನ ಮಾತೇ ನುಡಿಯಲ್ಲಿ ನಿನ್ನ ಬಯಕೆಯ ಎದೆಯಲ್ಲಿ
ಇಬ್ಬರು : ಇಲ್ಲಿ ಯಾರು ಇಲ್ಲ ಇಲ್ಲಿ ನಾವೇ ಎಲ್ಲಾ

ಗಂಡು : ಹೇಗೆ ಕುಣಿಸಲಿ ನಾ ನಿನ್ನ ಹೇಗೆ ತಣಿಸಲಿ ನಾ ನಿನ್ನ
            ಹೇಗೆ ಕುಣಿಸಲಿ ನಾ ನಿನ್ನ ಹೇಗೆ ತಣಿಸಲಿ ನಾ ನಿನ್ನ
ಹೆಣ್ಣು : ನಿನ್ನಾ ಸೇರಿದ ಮೇಲೆನ್ನ ಮನವು ನಿನ್ನದೇ ಓ.. ಚೆನ್ನ
ಇಬ್ಬರು : ಇಲ್ಲಿ ಯಾರು ಇಲ್ಲ ಇಲ್ಲಿ ನಾವೇ ಎಲ್ಲಾ

ಗಂಡು : ಮುಗಿಲಲಿ ತೇಲುವ ಹಕ್ಕಿಯೋಲು ಹಾರುವ ನಾವು ಗಗನದೊಳು
            ಮುಗಿಲಲಿ ತೇಲುವ ಹಕ್ಕಿಯೋಲು ಹಾರುವ ನಾವು ಗಗನದೊಳು
ಹೆಣ್ಣು : ಕಾಮನ ಬಿಲ್ಲಿಳಿ ಜಾರಿನೊಳು  ಉರುಳುವ ನಾವು ಹರುಷದೊಳು
ಇಬ್ಬರು : ಇಲ್ಲಿ ಯಾರು ಇಲ್ಲ ಇಲ್ಲಿ ನಾವೇ ಎಲ್ಲಾ
            ಈ ದೂರ ನಮಗೆ ಸರಿಯಲ್ಲ ಒಂದಾಗುವ ಕಾಲ ಬಂತಲ್ಲಾ
             ಒಂದಾಗುವ ಕಾಲ ಬಂತಲ್ಲಾ... ಒಹೋ...ಅಹ್ಹಹ...
------------------------------------------------------------------------------------------------------------------------  

ಲಗ್ನ ಪತ್ರಿಕೆ (೧೯೬೭)
ಸಂಗೀತ:ವಿಜಯ ಭಾಸ್ಕರ, ಸಾಹಿತ್ಯ:ಚಿ.ಉದಯಶಂಕರ,ಗಾಯನ:ಪಿ.ಬಿ.ಎಸ್,ಎಲ್.ಆರ್.ಈಶ್ವರಿ,   

ಗಂಡು : ಆಆಆ... ಆಆಆ...
            ಗಂಡು ಮುತ್ತಿನ ಚಂಡು ಕೆರೆಳಿದರೆ ಸಿಡಿಗುಂಡು
            ಭಂಡಾ ಹೆಣ್ಣಿನಾ ದಂಡು ಒಣ ಹುಲ್ಲಿನ ಜೊಂಡು
            ಬಿನ್ನಾಣದ ಮಾತು ಬರಿ ಮೋಸದಾ ಗುರುತು
            ಥಳುಕು ಮೋರೆ ಹೆಣ್ಣಿಗೇ ಹೆದರಬೇಡಿ ಸೋತು
            ಥಳುಕು ಮೋರೆ ಹೆಣ್ಣಿಗೇ ಹೆದರಬೇಡಿ ಸೋತು
            ಥಳುಕು ಮೋರೆ ಹೆಣ್ಣಿಗೇ ...
            ಥಳುಕು ಮೋರೆ ಹೆಣ್ಣಿಗೇ ಹೆದರಬೇಡಿ ಸೋತು
            ಥಳುಕು ಮೋರೆ ಹೆಣ್ಣಿಗೇ ಹೆದರಬೇಡಿ ಸೋತು
            ಥಳುಕು ಮೋರೆ ಹೆಣ್ಣಿಗೇ...ಆ  ಹೆದರಬೇಡಿ ಸೋತು
            ಥಳುಕು ಮೋರೆ ಹೆಣ್ಣಿಗೇ... ಆ  ಹೆದರಬೇಡಿ ಸೋತು

ಹೆಣ್ಣು : ಸೋಲು ಗಂಡಿನ ಹೆಗ್ಗುರುತು ಜೋಲು ಮುಖದಲಿ ಒಣಮಾತು
           ಸೋಲು ಗಂಡಿನ ಹೆಗ್ಗುರುತು ಜೋಲು ಮುಖದಲಿ ಒಣಮಾತು
           ಹೆಣ್ಣು ಎನ್ನುವ ದನಿ ಕೇಳೇ  ಗಂಡು ಜಾತಿಯೇ ಶರಣಾಯ್ತು
           ಹೆಣ್ಣು ಎನ್ನುವ ದನಿ ಕೇಳೇ  ಗಂಡು ಜಾತಿಯೇ ಶರಣಾಯ್ತು
           ಗಂಡು ಜಾತಿಯೇ ಶರಣಾಯ್ತು
 ಗಂಡು : ಆಆಆಅ... ಧರ್ಮ ಗ್ರಂಥಗಳಲ್ಲಿ ಪುರಾಣ ಪುಣ್ಯ ಕಥೆ
           ಇತಿಹಾಸದ ಪುಟಗಳಲಿ  ವರ್ಣಿಸಿಹರೋ ಹೆಣ್ಣಿನ (ಏನೋ)
           ಮೋಹದಾ ಮೋಸದಾ ಜಾಲವ... ಆಆಆ... ವ್ಹಾರೆವ್ಹಾ
           ಥಳುಕು ಮೋರೆ ಹೆಣ್ಣಿಗೇ ಹೆದರಬೇಡಿ ಸೋತು
           ಥಳುಕು ಮೋರೆ ಹೆಣ್ಣಿಗೇ .....
           ಥಳುಕು ಮೋರೆ ಹೆಣ್ಣಿಗೇ ಹೆದರಬೇಡಿ ಸೋತು
           ಥಳುಕು ಮೋರೆ ಹೆಣ್ಣಿಗೇ... ಆಆಆ..  ಹೆದರಬೇಡಿ ಸೋತು
           ಹ .... ಳು.... ಕು...  ಮೋರೆ  ಹ...ಳು..ಕು... ಮೋರೆ
           ಹಹಹಹ ...ಳುಳುಳುಳು..ಕುಕುಕುಕು... ಆಆಆ....
           ಥಳುಕು ಮೋರೆ ಹೆಣ್ಣಿಗೇ ಹೆದರಬೇಡಿ ಸೋತು

ಹೆಣ್ಣು : ಪುರಾಣ ಕಥೆಗಳ ಬರೆದವರು ಸರಿ ಹೆಣ್ಣಿನ ರೂಪಕೆ ಸೋತುವರು
          ಪುರಾಣ ಕಥೆಗಳ ಬರೆದವರು ಸರಿ ಹೆಣ್ಣಿನ ರೂಪಕೆ ಸೋತುವರು
          ಸಣ್ಣ ಬುದ್ದಿಯ ತೋರಿಸುವ ರಣಹೇಡಿಗಳು ಈ ಗಂಡಸರು
          ಸಣ್ಣ ಬುದ್ದಿಯ ತೋರಿಸುವ ರಣಹೇಡಿಗಳು ಈ ಗಂಡಸರು ....
          ಆಹ್ಹಹ್ಹಹ ಆಹ್ಹಹ್ಹಹ (ಹುಹ ಹೂಹ )

ಗಂಡು : ಹೆಣ್ಣು ಬಲು ಅಪಕಾರಿ ಗಂಡು ಜೀವಕೆ ಮಾರಿ (ಏನ್ ಹೇಳಿದೆಯೋ)
            ಹಾದು ಹೋಗಲು ಅಪಾಯ ಹೆಣ್ಣಿರುವ ದಾರೀ... ಆಆಆ....
            ಥಳುಕು ಮೋರೆ ಹೆಣ್ಣಿಗೆ.... ಥಳುಕು ಮೋರೆ ಹೆಣ್ಣಿಗೆ  ಹೆದರಬೇಡಿ ಸೋತು
           ಥಳುಕು ಮೋರೆ ಹೆಣ್ಣಿಗೇ ಹೆದರಬೇಡಿ ಸೋತು
           ಥಳುಕು ಮೋರೆ ಹೆಣ್ಣಿಗೇ ಆಆಆ... ಹೆದರಬೇಡಿ ಸೋತು
           ಥ.. ಳು...ಕು.... ಮೋ.... ರೆ...  ಹೆ... ಣ್ಣಿ... ಗೇ... 
           ಥಳುಕು ಮೋರೆ ಹೆಣ್ಣಿಗೇ ಹೆದರಬೇಡಿ ಸೋತು
ಹೆಣ್ಣು : ಹಾಂ.. ಹಾಂ.. ಹಾಂ.. ಜನಿಸುವ ಮುನ್ನ ಹೆಣ್ಣಿನ ಒಡಲು ಜನಿಸಿದ ಮೇಲೆ ಹೆಣ್ಣಿನ ಮಡಿಲು
           ಜನಿಸುವ ಮುನ್ನ ಹೆಣ್ಣಿನ ಒಡಲು ಜನಿಸಿದ ಮೇಲೆ ಹೆಣ್ಣಿನ ಮಡಿಲು
           ತಾಯ ಹರಕೆಯ ಬಾಳಿನ ಹಸಿರು ತಾಯೇ ಅಲ್ಲವೇ ಜೀವದ ಉಸಿರು
           ತಾಯ ಹರಕೆಯ ಬಾಳಿನ ಹಸಿರು ತಾಯೇ ಅಲ್ಲವೇ ಜೀವದ ಉಸಿರು
           ತಾಯೇ ಅಲ್ಲವೇ ಜೀವದ ಉಸಿರು  ತಾಯಿ.....  ಹೆಣ್ಣು    ತಾಯಿ.....  ಹೆಣ್ಣು
--------------------------------------------------------------------------------------------------------------------------

No comments:

Post a Comment