1016. ಸಿಂಹಸ್ವಪ್ನ (೧೯೬೮)

ಸಿಂಹ ಸ್ವಪ್ನ ಚಿತ್ರದ ಹಾಡುಗಳು 
  1. ರಾಜರ ಮಹಲಿನಲಿ 
  2. ಬೇಕೇನು ಬೇಕೇನು 
  3. ಅಂಗೈಲಿ ಆಗಸ ತೋರೋ 
  4. ಒಳ್ಳೆ ಒಳ್ಳೆ ಹುಲಿ ಉಗುರು 
  5. ಯಾವೂರು ಯಾವೂರು 
  6. ಮನದಾಸೆಯ ಹೇಳುವೇ ಇಂದು 
  7. ನಗು ನಗು ನಗು ನನ್ನ ಹೂವೇ 
ಸಿಂಹಸ್ವಪ್ನ (೧೯೬೮) - ರಾಜರ ಮಹಲಿನಲಿ ಮಲ್ಲಿಗೆ ಹೂ ಅರಳೈತೆ... ಹೈಲೇಸಾ
ಸಂಗೀತ : ಎಸ್.ದಕ್ಷಿಣಮೂರ್ತಿ, ಸಾಹಿತ್ಯ : ಚಿ.ಉದಯಶಂಕರ ಗಾಯನ: ಟಿ.ಎಂ.ಸುಂದರಾಜನ್ 

ರಾಜರ ಮಹಲಿನಲಿ ಮಲ್ಲಿಗೆ ಹೂ ಅರಳೈತೆ... ಹೈಲೇಸಾ
ರಾಜರ ಮಹಲಿನಲಿ ಮಲ್ಲಿಗೆ ಹೂ ಅರಳೈತೆ... ಹೈಲೇಸಾ
ಮೋಸಗಾರ ಹೋರಿ ಎಂಬು ವಾಸನೆಗೆ ಮರಳಾಯೈತೆ...
ಹೈಲೇಸಾ... ಓಹೋಹೋ... ಹೈಲೇಸಾ
ನೋಡು ನೀನವ್ವಾ ಹೊಯ್ ಮಾತು ಕೇಳವ್ವಾ

ಅಡ್ಡ ಬಂದ ಕಸವನೇನು ಗುಡ್ಡದಂಗೆ ಕೊಬ್ಬ ಐತೇ
ಹಿಂದುಗಡೆ ಹೊಂಚು ಹಾಕಿ ನುಕ್ಕಳೆಂದೇ ನೋಡೈತೆ
ವಂಚನೆ ಮಾಡುವ ನರಿಯನು ಕೂಡಿ
ಸಂಚು ಮಾಡಿ ಕುಂತೈತೇ ಮಗನೇ.. ಬಡ್ಡಿ ಮಗನೇ
ವಂಚನೆ ಮಾಡುವ ನರಿಯನು ಕೂಡಿ
ಸಂಚು ಮಾಡಿ ಕುಂತೈತೇ
ಯಾರೀ ಧ್ರುವ ಸಂಚನು ತಿಳಿಯದೇ ಕೆಸರಾಗೇ ಕಾಲಿಟ್ಟೈತೆ
ನೋಡು ನೀನವ್ವಾ ಓಯ್... ಮಾತ ಕೇಳವ್ವಾ
ನೋಡು ನೀನವ್ವಾ ಓಯ್... ಮಾತ ಕೇಳವ್ವಾ
ರಾಜರ ಮಹಲಿನಲಿ ಮಲ್ಲಿಗೆ ಹೂ ಅರಳೈತೆ... ಹೈಲೇಸಾ 
ಮೋಸಗಾರ ಹೋರಿ ಎಂಬು ವಾಸನೆಗೆ ಮರಳಾಯೈತೆ...
ಹೈಲೇಸಾ... ಓಹೋಹೋ... ಹೈಲೇಸಾ

ಮೆತ್ತಗೆ ನಡೆದುಕೊಂಟರೇ ನೆತ್ತಿ ಹೊತ್ತು ಕೂಡುವರು 
ಬೆದರಿಸಿ ನೂಕಿದರೇ ಕಾಲು ಹಿಡಿದು ಕೊಳ್ಳುವರು 
ಮೆತ್ತಗೆ ನಡೆದುಕೊಂಟರೇ ನೆತ್ತಿ ಹೊತ್ತು ಕೂಡುವರು 
ಬೆದರಿಸಿ ನೂಕಿದರೇ ಕಾಲು ಹಿಡಿದು ಕೊಳ್ಳುವರು 
ಮಂತ್ರಗಳಿಗೆ ಮಾವಿನಕಾಯಿ ಬೀಳದು ಬೀಳದು 
ಮಂಕಣ್ಣ... ಅವ್ವಾ... ನೀ.. ನಬ್ಬಾ.. 
ಮಂತ್ರ ಹೇಳಿಕೆ ಮಾವಿನಕಾಯಿ ಬೀಳದು ಬೀಳದು ಮಂಕಣ್ಣ...
ಮಮ್ಮ ತೀರಿದು ಎದುರು ಬಿದ್ದು ಮಾರೋ ಮಾರೋ ಮಾಚಣ್ಣಾ   
ನೋಡು ನೀನವ್ವಾ ಓಯ್... ಮಾತಾ ಕೇಳವ್ವಾ ಹೊಯ್
ನೋಡು ನೀನವ್ವಾ ಓಯ್... ಮಾತಾ ಕೇಳವ್ವಾ 
ರಾಜರ ಮಹಲಿನಲಿ ಮಲ್ಲಿಗೆ ಹೂ ಅರಳೈತೆ... ಹೈಲೇಸಾ 
ಮೋಸಗಾರ ಹೋರಿ ಎಂಬು ವಾಸನೆಗೆ ಮರಳಾಯೈತೆ...
ಹೈಲೇಸಾ... ಓಹೋಹೋ... ಹೈಲೇಸಾ 
ಓಓಓಓಓಓಓಓಓ.... ಓಓಓಓಓಓಓ.... 
--------------------------------------------------------------------------------------------------------------------------

ಸಿಂಹಸ್ವಪ್ನ (೧೯೬೮) - ಅಂಗೈಲಿ ಆಗಸ ತೋರು ಮಾತಿನ ಮಲ್ಲ
ಸಂಗೀತ : ಎಸ್.ದಕ್ಷಿಣಮೂರ್ತಿ, ಸಾಹಿತ್ಯ : ಚಿ.ಉದಯಶಂಕರ ಗಾಯನ: ಮಾಧವಪೆದ್ದಿ ಸತ್ಯಂ,ಎಸ್.ಜಾನಕೀ

ಹೆಣ್ಣು : ಅಂಗೈಲಿ ಆಗಸ ತೋರು ಮಾತಿನ ಮಲ್ಲ ಬಂದಾನಮ್ಮಾ ಹೊಯ್...
          ಅಂಗೈಲಿ ಆಗಸ ತೋರು ಮಾತಿನ ಮಲ್ಲ ಬಂದಾನಮ್ಮಾ
          ಪರಿ ಪರಿ ಮಾತಿನ ಪುಟ್ಟನೊಂದಿಗೆ ಬಾಯೆಲ್ಲಾ ಅಪರಂಜಿಯ ತಮ್ಮಾ
ಗಂಡು : ಮಾತಲ್ಲೇ ಅಂಜಿಸಬೇಡಾ ಕೇಳಿದೆಲ್ಲಾ ಇವ ಕೊಡಬಲ್ಲ
            ಬೆಟ್ಟ ಗಿಟ್ಟ ಕುಟ್ಟಿ ಸಿಟ್ಟು ಮಾಡೋ ಧೀರ ಬಂದಿಹನಲ್ಲಾ ಹೊಯ್
            ಮಾತಲ್ಲೇ ಅಂಜಿಸಬೇಡಾ ಕೇಳಿದೆಲ್ಲಾ ಇವ ಕೊಡಬಲ್ಲ
       
ಹೆಣ್ಣು : ಕಡಗಾವ ಕೊಡುವೇ ಎಂದು ತಡಗು ನುಡಿದನು ಆಡಿದರನ್ನು  
          ಕಡಗಾವ ಕೊಡುವೇ ಎಂದು ತಡಗು ನುಡಿದನು ಆಡಿದರನ್ನು
          ಬಿಡದೇ ನೀ ಹಿಂದೆ ಸುತ್ತಿ ಕಡೆಗೆ ಕೈ ಕೊಟ್ಟಿ ಓಡಿದೆಯೆಲ್ಲೋ
          ಬಿಡದೇ ನೀ ಹಿಂದೆ ಸುತ್ತಿ ಕಡೆಗೆ ಕೈ ಕೊಟ್ಟಿ ಓಡಿದೆಯೆಲ್ಲೋ
ಗಂಡು : ಕಡಗಾನೇ... (ಆಂ.. ಆಂ ) ಆಂ   ಕಡಗಾನೇ (ಆಂ..)
           ಓಹೋಹೋ  ಕಡಗಾನೆ (ಹೂಂ) ಬೆಡಗಿ
           ಹುಡುಗಾಟಕೆ ಹೇಳಿದೇ ಕೇಳೇ (ಹೂಂ)
           ಅಯ್ಯೋ ರಂಗಾ ಹೈ ಪಟ್ಟಾಭಿರಾಮ ಹೈ ವೈಕುಂಠ ವಾಸ ಹೈ
ಹೆಣ್ಣು : ಅಂಗೈಲಿ ಆಗಸ ತೋರು ಮಾತಿನ ಮಲ್ಲ ಬಂದಾನಮ್ಮಾ ಹೊಯ್...
          ಪರಿ ಪರಿ ಮಾತಿನ ಪುಟ್ಟನೊಂದಿಗೆ ಬಾಯೆಲ್ಲಾ ಅಪರಂಜಿಯ ತಮ್ಮಾ
ಗಂಡು : ಮಾತಲ್ಲೇ ಅಂಜಿಸಬೇಡಾ ಕೇಳಿದೆಲ್ಲಾ ಇವ ಕೊಡಬಲ್ಲ

ಹೆಣ್ಣು : ಮುತ್ತಿನ ಆಸ್ತಿಯಿದೆ ಎಂದೇ ಹತ್ತಿರ ಬಂದೇ ಸರಸಕೆ ಕರೆದೇ
          ಮುತ್ತಿನ ಆಸ್ತಿಯಿದೆ ಎಂದೇ ಹತ್ತಿರ ಬಂದೇ ಸರಸಕೆ ಕರೆದೇ
          ಮಾತಲ್ಲೇ ಎಲ್ಲಾ ಮುಗಿಸಿ ಕಳ್ಳನಂತೇ ಜಾರಿಕೊಂಡೇ
          ಮಾತಲ್ಲೇ ಎಲ್ಲಾ ಮುಗಿಸಿ ಕಳ್ಳನಂತೇ ಜಾರಿಕೊಂಡೇ
ಗಂಡು : ಮುತ್ತೇನು.. (ಆಂ)  ಆಂಹ್  ಮುತ್ತೇನು ... (ಆಂ )
           ಒಹೋ ಮುತ್ತೇನು (ಆಂ ) ಚೆಲುವೇ
           ಬಳಿ ಬಾರೇ ಕೋಡುವೇ ಇಲ್ಲಿ
           ಅಯ್ಯೋ ರಂಗಾ ಹೈ ಪಟ್ಟಾಭಿರಾಮ ಹೈ ವೈಕುಂಠ ವಾಸ ಹೈ
ಹೆಣ್ಣು : ಅಂಗೈಲಿ ಆಗಸ ತೋರು ಮಾತಿನ ಮಲ್ಲ ಬಂದಾನಮ್ಮಾ ಹೊಯ್...
          ಪರಿ ಪರಿ ಮಾತಿನ ಪುಟ್ಟನೊಂದಿಗೆ ಬಾಯೆಲ್ಲಾ ಅಪರಂಜಿಯ ತಮ್ಮಾ
ಗಂಡು : ಮಾತಲ್ಲೇ ಅಂಜಿಸಬೇಡಾ ಕೇಳಿದೆಲ್ಲಾ ಇವ ಕೊಡಬಲ್ಲ
            ಬೆಟ್ಟ ಗಿಟ್ಟ ಕುಟ್ಟಿ ಸಿಟ್ಟು ಮಾಡೋ ಧೀರ ಬಂದಿಹನಲ್ಲಾ ಹೊಯ್ 
ಹೆಣ್ಣು : ಒಹೋ..        ಗಂಡು : ಒಹೋ         ಹೆಣ್ಣು : ಒಹೋ    ಗಂಡು : ಒಹೋ         
ಹೆಣ್ಣು : ಒಹೋ ..        ಗಂಡು : ಆಹಾ  ಹೆಣ್ಣು : ಆಹಾ..        ಗಂಡು : ಒಹೋ
ಗಂಡು : ಮುತ್ತೇ.. (ಹೂಂಹೂ)     ಮುತ್ತೇ.. (ಹೂಂಹೂ)     ಅಯ್ಯೋ ಸತ್ತೇ         
--------------------------------------------------------------------------------------------------------------------------

ಸಿಂಹಸ್ವಪ್ನ (೧೯೬೮) - ಬೇಕೇನು ಬೇಕೇನು ರಂಗು ರಂಗಿನ ಕರವಸ್ತ್ರ
ಸಂಗೀತ : ಎಸ್.ದಕ್ಷಿಣಮೂರ್ತಿ, ಸಾಹಿತ್ಯ : ಚಿ.ಉದಯಶಂಕರ ಗಾಯನ: ಎಸ್.ಜಾನಕೀ

ಬೇಕೇನು ಬೇಕೇನು ರಂಗು ರಂಗಿನ ಕರವಸ್ತ್ರ
ಮಹಾರಾಜರು  ಬಳಸಿದ ಕರವಸ್ತ್ರ
ಒಂದು ಬಾರಿ ಒಂದೇ ಬಾರಿ ಒಂದೇ ಬಾರಿ
ರಾಜನು ಮುಂದೆ ಮೈಯೆಲ್ಲಾ ಜುಂ.. ಜುಂ ... ಜುಂ
ಬನ್ನಿ ಸ್ವೀಕರಿಸಿ ಕಾಣದ ಸುಖವನು  ಅನುಭವಿಸಿ
ಬನ್ನಿ ಸ್ವೀಕರಿಸಿ ಕಾಣದ ಸುಖವನು ಅನುಭವಿಸಿ.. ಬನ್ನೀ

ಅತ್ತರ ಪರಿಮಳ ಇದರಲ್ಲಿ ಹತ್ತೂರ ವಾಸನೆ ಇದರಲ್ಲಿ
ಮೂಗಿಗೆ ಹಿಡಿದರೆ ಕ್ಷಣದಲ್ಲಿ ಹಾಯಾಗಿರುವೆ  ಸ್ವರ್ಗದಲಿ
ಅತ್ತರ ಪರಿಮಳ ಇದರಲ್ಲಿ ಹತ್ತೂರ ವಾಸನೆ ಇದರಲ್ಲಿ
ಮೂಗಿಗೆ ಹಿಡಿದರೆ ಕ್ಷಣದಲ್ಲಿ ಹಾಯಾಗಿರುವೆ  ಸ್ವರ್ಗದಲಿ
ಕೆನ್ನೆಗೆ ನೀ ಸೋಕಿಸಲೂ ತಣ್ಣನೆ ಕನಸನು ಕಾಣು
ಕೆನ್ನೆಗೆ ನೀ ಸೋಕಿಸಲೂ ತಣ್ಣನೆ ಕನಸನು ಕಾಣು
ಮೈಮರೆತು ಮನಕುಣಿಸಿ ಮಹಾ ಸುಖ ಹೊಂದುವುದು 
ಬನ್ನಿ ಸ್ವೀಕರಿಸಿ ಕಾಣದ ಸುಖವನು  ಅನುಭವಿಸಿ
ಬನ್ನಿ ಸ್ವೀಕರಿಸಿ ಕಾಣದ ಸುಖವನು ಅನುಭವಿಸಿ.. ಹೊಯ್  

ಹೆಣ್ಣನು ಚೆಲುವನು ಕುಂಕುಮದಿ ಬಲವನು ಪಡೆಯಲು ನೀ ಓದಿ 
ಹೆಣ್ಣನು ಚೆಲುವನು ಕುಂಕುಮದಿ ಬಲವನು ಪಡೆಯಲು ನೀ ಓದಿ 
ವೈರಿಯ ಆಳುಗಳು ಹಲುಬಿಸಿ ಆಸೆಯು ಕೈಗೆ ಹಸುರಿನಲಿ 
ಸಂಜೆಯು ನೀನು ಹುರುಪಿರಲು ಹೃದಯದ ಜೇನಿನ ಹೊನಲು 
ಸಂಜೆಯು ನೀನು ಹುರುಪಿರಲು ಹೃದಯದ ಜೇನಿನ ಹೊನಲು 
ಹೊಸತರದ ಅನುಭವದ ಆನಂದ ಅತಿ ಚಂದ 
ಬನ್ನಿ ಸ್ವೀಕರಿಸಿ ಕಾಣದ ಸುಖವನು ಅನುಭವಿಸಿ.. 
ಬನ್ನಿ ಸ್ವೀಕರಿಸಿ ಕಾಣದ ಸುಖವನು ಅನುಭವಿಸಿ.. 
ಬೇಕೇನು ಬೇಕೇನು ರಂಗು ರಂಗಿನ ಕರವಸ್ತ್ರ ಅಹ್ಹಹ್
ಮಹಾರಾಜರು  ಬಳಸಿದ ಕರವಸ್ತ್ರ
ಒಂದು ಬಾರಿ ರಾಜನು ಮುಂದೆ ಮೈಯೆಲ್ಲಾ ಜುಂ.. ಜುಂ ... ಜುಂ
ಬನ್ನಿ ಸ್ವೀಕರಿಸಿ ಕಾಣದ ಸುಖವನು  ಅನುಭವಿಸಿ
ಬನ್ನಿ ಸ್ವೀಕರಿಸಿ ಕಾಣದ ಸುಖವನು ಅನುಭವಿಸಿ. 
--------------------------------------------------------------------------------------------------------------------------

ಸಿಂಹಸ್ವಪ್ನ (೧೯೬೮) - ಒಳ್ಳೆ ಒಳ್ಳೆ ಹುಲಿ ಉಗುರು ಅಯ್ತೆ
ಸಂಗೀತ : ಎಸ್.ದಕ್ಷಿಣಮೂರ್ತಿ, ಸಾಹಿತ್ಯ : ಚಿ.ಉದಯಶಂಕರ ಗಾಯನ: ಟಿ.ಎಂ. ಸುಂದರರಾಜನ್ 

ಒಳ್ಳೆ ಒಳ್ಳೆ ಹುಲಿ ಉಗುರು ಅಯ್ತೆ
ಒಳ್ಳೆ ಒಳ್ಳೆ ಹುಲಿ ಉಗುರು ಅಯ್ತೆ
ಮೋಸಗಾರರು ಪರಚುವ ಹುಳುಗಳು
ಹಿರಣ್ಯಕಶುಪು ಕೊಂದ ನರಸಿಂಹನ ಉಗುರು
ಒಳ್ಳೆ ಒಳ್ಳೆ ಹುಲಿ ಉಗುರು ಅಯ್ತೆ
ಒಳ್ಳೆ ಒಳ್ಳೆ ಹುಲಿ ಉಗುರು ಅಯ್ತೆ 

ಅಬ್ಬರಿಸಿದ ಹುಲಿಯ ಸದ್ದನು ಇಳಿಸಿದನು...
ಅಬ್ಬರಿಸಿದ ಹುಲಿಯ ಸದ್ದನು ಇಳಿಸಿದನು...
ಬಚ್ಚಿಡಲು ಬಲಿ ಹಾಕಿ ಬಡಿದು ಅಟ್ಟಿದೆನು
ಚರ್ಮವನು ಸುಲಿದೇನು ನಿಮಗಾಗಿ ತಂದೆನು
ಚರ್ಮವನು ಸುಲಿದೇನು ನಿಮಗಾಗಿ ತಂದೆನು
ಅಗ್ಗದ ಬೆಲೆಗಿಲ್ಲಿ ಮಾರಿ ಹೋಗುವೆನು 
ಅಗ್ಗದ ಬೆಲೆಗಿಲ್ಲಿ ಮಾರಿ ಹೋಗುವೆನು 
ಒಳ್ಳೆ ಒಳ್ಳೆ ಹುಲಿ ಉಗುರು ಅಯ್ತೆ
ಒಳ್ಳೆ ಒಳ್ಳೆ ಹುಲಿ ಉಗುರು ಅಯ್ತೆ 

ದೊಡ್ಡಗಾಡಿನ ಜಟ್ಟಿ ಹೈದನು ನಾನು .....
ದೊಡ್ಡಗಾಡಿನ ಜಟ್ಟಿ ಹೈದನು ನಾನು
ಎಲ್ಲ ರೋಗಕೂ ಮದ್ದು ನೀಡಬಲ್ಲವನು 
ಸಂತಾನು ರೋಗಕ್ಕೂ ಮನಸಿನ ರೋಗಕ್ಕೂ 
ಸಂತಾನು ರೋಗಕ್ಕೂ ಮನಸಿನ ರೋಗಕ್ಕೂ 
ಸರಿಯಾದ ಮದ್ದಿಟ್ಟೆ  ಹೋಗುವುದು ನಾನು 
ಸರಿಯಾದ ಮದ್ದಿಟ್ಟೆ  ಹೋಗುವುದು ನಾನು 
ಒಳ್ಳೆ ಒಳ್ಳೆ ಹುಲಿ ಉಗುರು ಅಯ್ತೆ
ಒಳ್ಳೆ ಒಳ್ಳೆ ಹುಲಿ ಉಗುರು ಅಯ್ತೆ
ತಿರುಚುದಾವುಗೂರು ಪಚ್ಚೆ ಹುಲಿ ಉಗುರು
ಹಿರಣ್ಯಕಶುಪು ಕೊಂದ ನರಸಿಂಹನ ಉಗುರು
ಒಳ್ಳೆ ಒಳ್ಳೆ ಹುಲಿ ಉಗುರು ಅಯ್ತೆ 
--------------------------------------------------------------------------------------------------------------------------

ಸಿಂಹಸ್ವಪ್ನ (೧೯೬೮) - ಯಾವೂರು ಯಾವೂರು ದೊರೆಯಿವರು 
ಸಂಗೀತ : ಎಸ್.ದಕ್ಷಿಣಮೂರ್ತಿ, ಸಾಹಿತ್ಯ : ಚಿ.ಉದಯಶಂಕರ ಗಾಯನ: ಪಿ.ಬಿ.ಎಸ್, ಪಿ.ಸುಶೀಲಾ 

ಹೆಣ್ಣು : ಯಾವೂರು ಯಾವೂರು
          ಯಾವೂರು ಯಾವೂರು ದೊರೆಯಿವರು ನಮ್ಮೂರಿಗೆ ಪಾದ ಬೆಳೆಸಿದರೂ
          ಯಾವೂರು ಯಾವೂರು ದೊರೆಯಿವರು ನಮ್ಮೂರಿಗೆ ಪಾದ ಬೆಳೆಸಿದರೂ
ಗಂಡು : ಮಂಜಿನ ಮನೆಗೆ ಮಲಗಾ ಛಲಕೆ
            ಮಂಜಿನ ಮನೆಗೆ ಮಲಗಾ ಛಲಕೆ ಮದ್ದೂರು
           ಚೆಲುವೆ ಅರಿಯೇ ನಮ್ಮ ಜೋರು
ಹೆಣ್ಣು : ಯಾವೂರು ಯಾವೂರು ದೊರೆಯಿವರು ನಮ್ಮೂರಿಗೆ ಪಾದ ಬೆಳೆಸಿದರೂ

ಹೆಣ್ಣು : ಎಲ್ಲೋ ಇರುವ ಬೆಟ್ಟದರಾಯರು ಇಲ್ಲಿಗೆ ಯಾತಕೆ ಬಂದರು
           ಎಲ್ಲೋ ಇರುವ ಬೆಟ್ಟದರಾಯರು ಇಲ್ಲಿಗೆ ಯಾತಕೆ ಬಂದರು
ಗಂಡು : ಆ... ಎಲ್ಲೆಯ ದಾಟಿದೆ ಬೇಲಿಯ ಹಾರಿದೆ
             ಎಲ್ಲೆಯ ದಾಟಿದೆ ಬೇಲಿಯ ಹಾರಿದೆ ಮಣಿಗಾಗಿ ನಾ ಬಂದೇ
             ಬಾಲಾ ಮಣಿಗಾಗಿ ನಾ ಬಂದೇ
ಹೆಣ್ಣು : ಯಾವೂರು ಯಾವೂರು ದೊರೆಯಿವರು ನಮ್ಮೂರಿಗೆ ಪಾದ ಬೆಳೆಸಿದರೂ

ಹೆಣ್ಣು : ಸುತ್ತುವ ಕೋಟೆಯ ಹತ್ತುವ ಬಾಲಚಂದ್ರ ಸುತ್ತುವೆ ಏನೋ ನಿನಗಿನ್ನೂ 
           ಸುತ್ತುವ ಕೋಟೆಯ ಹತ್ತುವ ಬಾಲಚಂದ್ರ ಸುತ್ತುವೇ ಏನೋ ನಿನಗಿನ್ನೂ
ಗಂಡು : ಸುಗ್ಗಿ ಚಂದಿರನನು ಚಂದಿರನ ಜಿಂಕೆಯನು ಸಿಕ್ಕಿಸಿಕೊಳ್ಳುವೆ ನಾನು
            ಹೆಣ್ಣೇ ದಕ್ಕಿಸಿ ಕೊಳ್ಳುವೆ ನಾನು
ಹೆಣ್ಣು : ಯಾವೂರು ಯಾವೂರು ದೊರೆಯಿವರು ನಮ್ಮೂರಿಗೆ ಪಾದ ಬೆಳೆಸಿದರೂ
-------------------------------------------------------------------------------------------------------------------------

ಸಿಂಹಸ್ವಪ್ನ (೧೯೬೮) - ಓ.. ಅಂದಗಾರ  ಬಂಗಾರ ಬಣ್ಣದ ಮಾರ
ಸಂಗೀತ : ಎಸ್.ದಕ್ಷಿಣಮೂರ್ತಿ, ಸಾಹಿತ್ಯ : ಚಿ.ಉದಯಶಂಕರ ಗಾಯನ: ಎಸ್.ಜಾನಕೀ 

ಚೀ...ಚಿಕಾವೋ ... . ಚೀಯಾ ಚೀತಾ ಚೀತಾ ಯಾತ
ಉಲುಲೂಲು ಉಲುಲೂಲೂ
ಮನದಾಸೆಯ ಹೇಳುವೇ ಇಂದು ಅದು ಕನಸಿನ ಭಾರವು ನೀಡು
ಓ.. ಅಂದಗಾರ  ಬಂಗಾರ ಬಣ್ಣದ ಮಾರ
ಚಿಂಗ್ ಚಾಂಗ್ ಚಿಂಗ್ ಚಾಂಗ್ ಚಿಂಗ್ ಚಾಂಗ್ ಚಿಂಗ್ ಚಾಂಗ್... ಆ...
ಮನದಾಸೆಯ ಹೇಳುವೇ ಇಂದು ಅದು ಕನಸಿನ ಭಾರವು ನೀಡು
ಓ.. ಅಂದಗಾರ  ಬಂಗಾರ ಬಣ್ಣದ ಮಾರ
ಅಕ್ಕರೆ ಬೆಲ್ಲ ನಕ್ಕಿದೆ ನಲ್ಲ ಚಿತ್ತ ಇಲ್ಲಿ ಇಲ್ಲ

ಓಯ್ ... ಯೌವ್ವನೆವೇ ಭಾರ ತುಂಬಿದೆ ಎದೆ ಭಾರ
ವಿರಹದ ಈ ಭಾರವ ಓಯ್ .ಓಯ್   ಕಳೆಯುವ ಕಥೆ ನೋಡುವ
ಯೌವ್ವನೆವೇ ಭಾರ ತುಂಬಿದೆ ಎದೆ ಭಾರ
ವಿರಹದಲ್ಲಿ ಈ ಭಾರವ ಓ.. ಓ ಕಳೆಯುವ ಕಥೆ ನೋಡುವ
ಚಿಂಗ್ ಚಿಂಗ್ ಚಾಂಗ್ ಚಿಂಗ್ ಚಿಂಗ್ ಚಾಂಗ್ ಚಿಂಗ್ ಚಿಂಗ್ ಚಿಂಗ್ ಚಾಂಗ್ ಚಯ್ಯೋ 
ಚಿಂಗ್ ಚಿಂಗ್ ಚಾಂಗ್ ಚಿಂಗ್ ಚಿಂಗ್ ಚಾಂಗ್ ಚಿಂಗ್ ಚಿಂಗ್ ಚಿಂಗ್ ಚಾಂಗ್ ಚಯ್ಯೋ 
ಇಲ್ಲೇ ನಾನು ಸ್ವರ್ಗವನ್ನು ಕೋರಿ ಕೂಗುವೇನು  
ಮನದಾಸೆಯ ಹೇಳುವೇ ಇಂದು ಅದು ಕನಸಿನ ಭಾರವು ನೀಡು
ಓ.. ಅಂದಗಾರ  ಬಂಗಾರ ಬಣ್ಣದ ಮಾರ
ಅಕ್ಕರೆ ಬೆಲ್ಲ ನಕ್ಕಿದೆ ನಲ್ಲ ಚಿತ್ತರಂಗ ಇಲ್ಲಿ ಇಲ್ಲ

ಓ.. ಆಧರವ ಜೇನುಂಟು ಪದರದಿ ಸವಿಯುಂಟು
ಬದುಕಿನ ಅವಕಾಶವ ಓಊ  ಬಿಡದೇ ನೀ ಸುಖಿಸುವಾ
ಓ.. ಆಧರವ ಜೇನಿಂದು ಪದರದಿ ಸವಿಯುಂಟು
ಬದುಕಿನ ಅವಕಾಶವ ಓ ಓ..   ಬಿಡದೇ ನೀ ಸುಖಿಸುವಾ
ಚಿಂಗ್ ಚಿಂಗ್ ಚಾಂಗ್ ಚಿಂಗ್ ಚಿಂಗ್ ಚಾಂಗ್ ಚಿಂಗ್ ಚಿಂಗ್ ಚಿಂಗ್ ಚಾಂಗ್ ಚಯ್ಯೋ 
ಚಿಂಗ್ ಚಿಂಗ್ ಚಾಂಗ್ ಚಿಂಗ್ ಚಿಂಗ್ ಚಾಂಗ್ ಚಿಂಗ್ ಚಿಂಗ್ ಚಿಂಗ್ ಚಾಂಗ್ ಚಯ್ಯೋ 
ಇಲ್ಲೇ ನಾನು ಸೌಖ್ಯವನ್ನು ನಿನಗೆ ತಣಿಸುವೆನು 
ಮನದಾಸೆಯ ಹೇಳುವೇ ಇಂದು ಅದು ಕನಸಿನ ಭಾರವು ನೀಡು
ಓ.. ಅಂದಗಾರ  ಬಂಗಾರ ಬಣ್ಣದ ಮಾರ
ಸಕ್ಕರೆ ಬೆಲ್ಲ ನಕ್ಕಿದೆ ನಲ್ಲ ಚಿತ್ತರಂಗ ಇಲ್ಲಿ ಇಲ್ಲ
ಚಿಂಗ್ ಚಿಂಗ್ ಚಾಂಗ್ ಚಿಂಗ್ ಚಿಂಗ್ ಚಾಂಗ್ ಚಿಂಗ್ ಚಿಂಗ್ ಚಿಂಗ್ ಚಾಂಗ್ ಚಯ್ಯೋ 
ಚಿಂಗ್ ಚಿಂಗ್ ಚಾಂಗ್ ಚಿಂಗ್ ಚಿಂಗ್ ಚಾಂಗ್ ಚಿಂಗ್ ಚಿಂಗ್ ಚಿಂಗ್ ಚಾಂಗ್ ಚಯ್ಯೋ 
--------------------------------------------------------------------------------------------------------------------------

ಸಿಂಹಸ್ವಪ್ನ (೧೯೬೮) - ನಗು ನಗು ನಗು ನಗು ನನ್ನ ಹೂವೇ
ಸಂಗೀತ : ಎಸ್.ದಕ್ಷಿಣಮೂರ್ತಿ, ಸಾಹಿತ್ಯ : ಚಿ.ಉದಯಶಂಕರ ಗಾಯನ: ಎಸ್.ಜಾನಕೀ, ಪಿ.ಬಿ.ಶ್ರೀನಿವಾಸ್  

ಗಂಡು :  ನಗು ನಗು ನಗು ನಗು ನನ್ನ ಹೂವೇ
             ನಗು ನಗು ನಗು ನಗು ನನ್ನ ಹೂವೇ
             ನೀ ನಗಲು (ಅಹ್ಹಹ್ಹಹ   ಅಹ್ಹಹ್ಹಹ )ನಗಲು ಜಗವೇ ನಲಿಯುವುದು ಓ.. ಚೆಲುವೇ
             ಓಹೋಹೋಹೋ ಹೊಯ್  ಓಹೋಹೋಹೋ ಹೊಯ್  ಹುಂಹುಂ  ಹುಂಹುಂ
             ನಗು ನಗು ನಗು ನಗು ನನ್ನ ಹೂವೇ
             ನೀ ನಗಲು ಜಗವೇ ನಲಿಯುವುದು ಓ.. ಚೆಲುವೇ
             ನಗು ನಗು ನಗು ನಗು ನನ್ನ ಹೂವೇ .. (ಅಹ್ಹಹ್ಹಹ್ಹ )

ಗಂಡು : ನಗುವ ಜನರ ಮತ್ತೆ ಮತ್ತೆ ನಗಿಸೋಣಾ
             ಅಹ್ಹಹಾ (ಅಹ್ಹಹ್ಹ)  ಅಹ್ಹ..ಅಹ್ಹ (ಅಹ್ಹಹ್ಹ) 
             ಅಳುವ ಜನರ ಇನ್ನೂ ಇನ್ನೂ ಅಳಿಸೋಣಾ 
             ಅಳು ಇನ್ನೂ ಅಳು ಜೋರಾಗಿ ಅಳು (ಅಹ್ಹಹ್ಹ) 
             ನಗುವ ಜನರ ಮತ್ತೆ ಮತ್ತೆ ನಗಿಸೋಣಾ
             ಅಳುವ ಜನರ ಇನ್ನೂ ಇನ್ನೂ ಅಳಿಸೋಣಾ 
             ಹಾಯಾಗಿ (ಹಾ) ಸುಖವಾಗಿ (ಹಹ್ಹಾ )
ಇಬ್ಬರೂ :ಹಾಯಾಗಿ ಸುಖವಾಗಿ ಆಡಿ ಆಡಿ ಕುಣಿಯೋಣಾ
             ಒಹೋ.. ಒಹೋ.. ಒಹೋ.. ಒಹೋ..  ಒಹೋ..   ಒಹೋ..  
ಗಂಡು :   ನಗು ನಗು ನಗು ನಗು ನನ್ನ ಹೂವೇ
             ನೀ ನಗಲು ಜಗವೇ ನಲಿಯುವುದು ಓ.. ಚೆಲುವೇ
             ನಗು ನಗು ನಗು ನಗು ನನ್ನ ಹೂವೇ .. (ಅಹ್ಹಹ್ಹಹ್ಹ )

ಗಂಡು : ಸಂಜೆ ಗಾಳಿ ಚಳಿಯ ತಂದು ಸುರಿದಿರಲೂ
            ಹುಹೂಹೂ ಹುಹೂಹೂ
ಹೆಣ್ಣು : ತನುವು ಮನುವು ನಿನ್ನ ಕಡೆಗೆ ಬಾಗಿರಲೂ
          ಆಆಆ... ಆಆಆ.........
ಗಂಡು : ಸಂಜೆ ಗಾಳಿ ಚಳಿಯ ತಂದು ಸುರಿದಿರಲೂ
            ತನುವು ಮನುವು ನಿನ್ನ ಕಡೆಗೆ ಬಾಗಿರಲೂ 
ಹೆಣ್ಣು : ಜೊತೆಯಾಗಿ (ಅಹ್ಹಹಾ ) ಹೀತವಾಗಿ (ಓಹೋಹೋ)
ಇಬ್ಬರೂ : ಜೊತೆಯಾಗಿ ಹೀತವಾಗಿ ಕೂಡಿ ನಾವು ಬಾಳೋಣ 
             ಒಹೋ.. ಒಹೋ.. ಒಹೋ.. ಒಹೋ..  ಒಹೋ..   ಒಹೋ..   
ಗಂಡು :   ನಗು ನಗು ನಗು ನಗು ನನ್ನ ಹೂವೇ
             ನೀ ನಗಲು ಜಗವೇ ನಲಿಯುವುದು ಓ.. ಚೆಲುವೇ
             ನಗು ನಗು ನಗು ನಗು ನನ್ನ ಹೂವೇ ..
            (ಅಹ್ಹಹ್ಹಹ್ಹ ) ಅಹ್ಹಹ್ಹಹ (ಅಹ್ಹಹ್ಹಹ್ಹ ) ಅಹ್ಹಹ್ಹಹ (ಅಹ್ಹಹ್ಹಹ್ಹ ) ಅಹ್ಹಹ್ಹಹ 
--------------------------------------------------------------------------------------------------------------------------

No comments:

Post a Comment