ಕನ್ನಡ ಕಲಾಭಿಮಾನಿಗಳೇ, ಚಿತ್ರ ರಸಿಕರೇ ನಿಮಗೊಂದು ಮಾತು
ಕನ್ನಡ ಚಲನ ಚಿತ್ರರಂಗದ ಇತಿಹಾಸದಲ್ಲಿ ನೂರು ಚಿತ್ರಗಳಲ್ಲಿ ನಾಯಕನಾಗಿ ನಟಿಸಿದವರಲ್ಲಿ ಪ್ರಥಮರಾಗಿದ್ದವರು ನಮ್ಮ
ಕಲಾರಸಿಕ, ಗಾನ ಗಂಧರ್ವ, ರಸಿಕರಾಜ, ಪದ್ಮಭೂಷಣ, ಪದ್ಮವಿಭೂಷಣ, ಕರ್ನಾಟಕ ರತ್ನ, ದಾದಾಸಾಹೇಬ್ ಫಾಲ್ಕಿ, ಹಾಗೂ ಇನ್ನೂ ಅನೇಕ ಪ್ರಶಸ್ತಿಗಳನ್ನೂ ಸ್ವೀಕರಿಸಿದ ಡಾ।। ರಾಜಕುಮಾರ.
ನೆನಪಿರಲಿ..... ನಟಸಾರ್ವಭೌಮ (೧೯೬೮) ಇದು ಚಲನಚಿತ್ರವಲ್ಲ.
ಇದು ಡಾ|| ರಾಜಕುಮಾರರವರು ನೂರು ಚಿತ್ರಗಳಲ್ಲಿ ನಾಯಕ ನಟರಾಗಿ ಅಭಿನಯಿಸಿದ ಪ್ರಥಮ ನಟರಾಗಿರುವುದರಿಂದ ಚಲನಚಿತ್ರರಂಗವು ಹಾಗು ಅಭಿಮಾನಗಳಿಂದ ಮಾಡಿದ ಗೌರವ ಸಲ್ಲಿಸುವುದಕ್ಕಾಗಿ ಜೂನ ೨೩ ೧೯೬೮ ರಂದು ಸನ್ಮಾನ್ಯ ಶ್ರೀ ಗುಬ್ಬಿ ವೀರಣ್ಣರವರು ಡಾ|| ರಾಜಕುಮಾರರಿಗೆ ಚಿನ್ನದ ಪದಕವನ್ನು ನೀಡಿ ನಟಸಾರ್ವಭೌಮ ಎಂಬ ಬಿರುದನ್ನು ನೀಡಿದರು.
ಇದರ ಸವಿ ನೆನಪಿಗಾಗಿ ನಟಸಾರ್ವಭೌಮ ಒಂದು ಸಾಕ್ಷಚಿತ್ರವನ್ನಾಗಿ ಮಾಡಿ ಅದರಲ್ಲಿ ಡಾ|| ರಾಜಕುಮಾರರವರು ನಟಿಸಿದ ೧೦೦ ಚಿತ್ರಗಳ (ಬೇಡರ ಕಣ್ಣಪ್ಪನಿಂದ ಭಾಗ್ಯದ ಬಾಗಿಲು) ಆಯ್ದ ಭಾಗವನ್ನು ಸೇರಿಸಿ ಈ ಸಾಕ್ಷಿಚಿತ್ರವನ್ನಾಗಿ ಮಾಡಿದ್ದಾರೆ.
ಧನ್ಯವಾದಗಳು
- ಸಂದೀಪ ಕುಲಕರ್ಣಿ
- ಸಂದೀಪ ಕುಲಕರ್ಣಿ
No comments:
Post a Comment