1018. ಮನಸಾಕ್ಷಿ (೧೯೬೮)


ಮನಸಾಕ್ಷಿ ಚಿತ್ರದ ಹಾಡುಗಳು 
  1. ಮೈ ನೀಮರಿ ನಿಂತು ಮುದುವೇರಿ 
  2. ಗಲಿಬಿಲಿ ಏಕೆ ಗಡುಸ್ಯಾಕೆ 
  3. ಹತ್ತಿ ಬಂದ ಗೀಳು ಗಿಲ್ಲಿ 
  4. ಅಲೆಅಲೆಯಲಿ ಒಲಿಯುಲಿದೆ 
  5. ಬಾಲ ಪದಕ ನಲಿವು ನೋವು 
ಮನಸಾಕ್ಷಿ  (೧೯೬೮) - ಮೈ ನೀಮರಿ ನಿಂತು ಮುದುವೆರೀ ಬಂತು
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಕುರಾಸೀ, ಗಾಯನ : ಪಿ.ಸುಶೀಲಾ 

ಮೈ ನೀಮರಿ ನಿಂತು..
ಮೈ ನೀಮರಿ ನಿಂತು ಮುದುವೆರೀ ಬಂತು
ಮಧು ಮಧುರ ಈ ಮಧುರ ನಿಮಿಷ
ಎದೆಯಾಳದಿಂದ ಮುಗಿಲೇರಿ ನಿಂತು
ಹೊಸ ಹರೆಯವೀಯ  ಹರುಷ ಹರುಷ
ಮೈ ನೀಮರಿ ನಿಂತು ಮುದುವೆರೀ ಬಂತು
ಮಧು ಮಧುರ ಈ ಮಧುರ ನಿಮಿಷ 
ಮೈ ನೀಮರಿ ನಿಂತು 

ಕನಸು ಕಣ್ಣ ಹಸಿವು ಏನೋ ಒಳ ನೋವು
ಕನಸು ಕಣ್ಣ ಹಸಿವು ಏನೋ ಒಳ ನೋವು
ಎದೆಮಿಡಿತ ಈ ತುಡಿತ ತಂದಿತೇನು ಒಲವು 
ಆ..ಆ..ಆ..ಆ...ಒಹೋ.. ಹೂಂಹುಂ ಆಆಆ... ಹೂಂ 
ಬಹುಮಾನ ನಾನು ಅನುಮಾನವೇನು 
ಅನುರಾಗ ಒಲಿಯೇ ನಲಿವು ನಲಿವು 
ಮೈ ನೀಮರಿ ನಿಂತು ಮುದುವೆರೀ ಬಂತು
ಮಧು ಮಧುರ ಈ ಮಧುರ ನಿಮಿಷ 
ಮೈ ನೀಮರಿ ನಿಂತು 

ಹೃದಯ ನಿನಗೆ ಸೋಲೆ ಇದಿಗೋ  ಜಯಮಾಲೆ  
ಹೃದಯ ನಿನಗೆ ಸೋಲೆ ಇದಿಗೋ  ಜಯಮಾಲೆ  
ಮಿತವಿರಲೀ ಉಷೆ ಬರಲಿ ಮಾರನೆಂದು ನಿಲುವು
ಆ..ಆ..ಆ..ಆ...ಒಹೋ.. ಹೂಂ ಆಆಆ... ಹೂಂ
ಒಡಲಾಗಿ ನೀನೇ ಝೇಂಕಾರ ನೀನೇ
ಹೊಸ ಭಾವ ಗೀತೆ ಸೊಗಸು ಸೊಗಸು
ಮೈ ನೀಮರಿ ನಿಂತು ಮುದುವೆರೀ ಬಂತು
ಮಧು ಮಧುರ ಈ ಮಧುರ ಈ ನಿಮಿಷ 
ಎದೆಯಾಳದಿಂದ ಮುಗಿಲೇರಿ ನಿಂತು
ಹೊಸ ಹರೆಯವೀವ ಹರುಷ ಹರುಷ 
--------------------------------------------------------------------------------------------------------------------------

ಮನಸಾಕ್ಷಿ  (೧೯೬೮) - ಗಲಿಬಿಲಿ ಯಾಕೇ ಗಡಸ್ಯಾಕೆ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ವಿಜಯನಾರಸಿಂಹ ಗಾಯನ : ಪಿ.ಸುಶೀಲಾ 

ಓ... ಓ... ಓ ... 
ಸೊಗಸುಗಾರ ಹಾಯ್ ಹಾಯ್ ಹಾಯ್
ಬಿಂಕು ಬಿಗುಮಾನಗಳ ಗಮ್ಮತ್ತುಗಾರ ಆಆಆ....
ಗಲಿಬಿಲಿ ಯಾಕೇ ಗಡಸ್ಯಾಕೆ
ಗಲಿಬಿಲಿ ಯಾಕೇ ಗಡಸ್ಯಾಕೆ
ಬೀರಬಿರ ನೋಟದ ಸುರುಸೂರು ಬಾಣದ 
ಸುರಿಮಳೆಯಾಕೆ ಬಿರುಸ್ಯಾಕೆ 
ಗಲಿಬಿಲಿ ಯಾಕೇ ಗಡಸ್ಯಾಕೆ
ಗಲಿಬಿಲಿ ಯಾಕೇ ಗಡಸ್ಯಾಕೆ
ಬೀರಬಿರ ನೋಟದ ಸುರುಸೂರು ಬಾಣದ 
ಸುರಿಮಳೆಯಾಕೆ ಬಿರುಸ್ಯಾಕೆ 
ಗಲಿಬಿಲಿ ಯಾಕೇ ಗಡಸ್ಯಾಕೆ

ಊರುಕೇರಿ ಸುತ್ತಿದ ಜಾಣ
ಹಳ್ಳಿಯ ಚೆಲುವೆಯ ನಿಲುವೇ ಕಾಣ
ಊರುಕೇರಿ ಸುತ್ತಿದ ಜಾಣ
ಹಳ್ಳಿಯ ಚೆಲುವೆಯ ನಿಲುವೇ ಕಾಣ
ಹೆಬ್ಬುಲಿಯಂಥ ಹರಿಯದ ಹೈದ 
ಹೆಬ್ಬುಲಿಯಂಥ ಹರಿಯದ ಹೈದ 
ತಬ್ಬಿಬ್ಬಾದ ಮೂಗಿಳಿಯಾದ 
ಎಚ್ಚರ ಭೀತಿಯೂ ಹೂಂ.. ಎಚ್ಚರ ನೀತಿಯೂ 
ಸಿಡಿಮಿಡಿಗೊಂಡ ಮಡಿವಂತ  
ಗಲಿಬಿಲಿ ಯಾಕೇ ಗಡಸ್ಯಾಕೆ
ಗಲಿಬಿಲಿ ಯಾಕೇ ಗಡಸ್ಯಾಕೆ
ಬೀರಬಿರ ನೋಟದ ಸುರುಸೂರು ಬಾಣದ 
ಸುರಿಮಳೆಯಾಕೆ ಬಿರುಸ್ಯಾಕೆ 
ಗಲಿಬಿಲಿ ಯಾಕೇ ಗಡಸ್ಯಾಕೆ

ಕುತ್ತಿಗೆ ಬಳಸಿದ ಚಿನ್ನ ಚಿನ್ನ
ಹೊತ್ತು ತಂದ ಚೆನ್ನೀಗ ಚೆನ್ನ
ಕುತ್ತಿಗೆ ಬಳಸಿದ ಚಿನ್ನ ಚಿನ್ನ
ಹೊತ್ತು ತಂದ ಚೆನ್ನೀಗ ಚೆನ್ನ
ಕಿನ್ನರ ಕಿನ್ನೂ ಚೆನ್ನಿಗೂ ಚೆನ್ನೂ 
ಕಿನ್ನರ ಕಿನ್ನೂ ಚೆನ್ನಿಗೂ ಚೆನ್ನೂ 
ಚಿನ್ನದ ಮೈಯ ಕೆನ್ನೆಯ ಚೆನ್ನ 
ಪರೀಕ್ಷೆಕಾಗಲೀ ಹೂಂ ಹೂಂ ಪರಿಚಯವಾಗಲೀ 
ತಳಮಳಕಿಲ್ಲಿ ತಾಳ್ಮೆ 
ಗಲಿಬಿಲಿ ಯಾಕೇ ಗಡಸ್ಯಾಕೆ
ಗಲಿಬಿಲಿ ಯಾಕೇ ಗಡಸ್ಯಾಕೆ
ಬೀರಬಿರ ನೋಟದ ಸುರುಸೂರು ಬಾಣದ 
ಸುರಿಮಳೆಯಾಕೆ ಬಿರುಸ್ಯಾಕೆ 
ಗಲಿಬಿಲಿ ಯಾಕೇ ಗಡಸ್ಯಾಕೆ 
ಗಲಿಬಿಲಿ ಯಾಕೇ ಗಡಸ್ಯಾಕೆ 
--------------------------------------------------------------------------------------------------------------------------

ಮನಸಾಕ್ಷಿ  (೧೯೬೮) - ಹತ್ತಿ ಬಂದ ಗೀಳು ಗಿಲಿ ಇಳಿಯಲ್ಲಿಲ್ಲವೇ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಕುರಾಸೀ, ಗಾಯನ : ಪಿ.ಬಿ.ಶ್ರೀನಿವಾಸ, ಎಲ್.ಆರ್.ಈಶ್ವರಿ 

ಹೆಣ್ಣು : ಹತ್ತಿ ಬಂದ ಗೀಳು ಗಿಲಿ ಇಳಿಯಲ್ಲಿಲ್ಲವೇ
          ಹತ್ತಿ ಬಂದ ಗೀಳು ಗಿಲಿ ಇಳಿಯಲ್ಲಿಲ್ಲವೇ 
          ಹಳೆಯ  ಚಟ ಹಿಡಿದ ಹಠ ತೀರಲಿಲ್ಲವೇ... ತೀರಲಿಲ್ಲವೇ
          ಹತ್ತಿ ಬಂದ ಗೀಳು ಗಿಲಿ ಇಳಿಯಲ್ಲಿಲ್ಲವೇ
ಗಂಡು: ಒಂದೇ ಎರಡೇ ಹೇಳು ನಿನ್ನಂದ ತಂದ ಗೀಳು
           ಕೈಜಾರಿದ ಕೂಡಲೇ ಒಂದು ಬೆನ್ನೇರುವುದಿನ್ನೊಂದು
           ಉಳಿಸಿದರೂ ಅಳಿಸಿದರೂ ನೀನೇ ಗತಿ... ನೀನೇ ಗತಿ
           ನೀನೇ ಗತಿ ನೀನೇ ಮತಿ ಸ್ನೇಹದಲೂ ಮೋಹದಲೂ ಒಂದೇ ಸ್ಥಿತಿ

ಹೆಣ್ಣು : ಸ್ನೇಹದ ಪರಿಮಳದಲ್ಲಿ ಮೋಹದ ಕಿರುಕುಳ ಯಾಕೆ.. ಯಾಕೇ... ಯಾಕೇ
ಗಂಡು : ಗಂಡು ಹೆಣ್ಣಿನ ನಡುವೆ ಶಿಸ್ತಿನ ಮುಷ್ಕರ ಯಾಕೇ.. ಈ ಶಿಸ್ತಿನ ಮುಷ್ಕರ ಬೇಕೇ
ಹೆಣ್ಣು : ಹಾಂ...    ಗಂಡು : ಉಂ

ಹೆಣ್ಣು : ಕಪ್ಪುರ ಕಾಣಿಕೆ ಒಪ್ಪಿಸದ್ದಿದ್ದರೆ ಮೈದೋರುವಳೇ ಮಾದೇವಿ
          ಕಪ್ಪುರ ಕಾಣಿಕೆ ಒಪ್ಪಿಸದ್ದಿದ್ದರೆ ಮೈದೋರುವಳೇ ಮಾದೇವಿ
          ಹೆಣ್ಣಿನ ಮೈ ಕೈ ಸೋಕುವ ಮುನ್ನ ಹವಣಿಸಬೇಕು ಹೊರೆ ಚಿನ್ನ
          ಹವಣಿಸಬೇಕು ಹೊರೆ ಚಿನ್ನ
ಗಂಡು : ತಾಳಿಯೊಡನೆ ದೂರವಾಯಿತು ಶಂಕೆ ತಳಮಳ ಹೆಣ್ಣಿಗೆ
           ಕಟ್ಟಿದೊಡನೆ ಮೆಟ್ಟಿಕೊಂಡಿತು ಚಿಂತೆ ಕಳವಳ ಗಂಡಿಗೆ
ಹೆಣ್ಣು : ಹೊಟ್ಟೆ ಹಸಿವೇ ಚಿನ್ನ  ರಟ್ಟೇ ನೋವೇ ರನ್ನ
          ಹೊಟ್ಟೆ ಹಸಿವೇ ಚಿನ್ನ  ರಟ್ಟೇ ನೋವೇ ರನ್ನ
          ನಿಟ್ಟುಸಿರ ಯಾಕೆ ಮನದನ್ನ.... ಮನದನ್ನ
ಗಂಡು :  ಆಹ್ಹಾಹ್ಹ
ಹೆಣ್ಣು : ಹತ್ತಿ ಬಂದ ಗೀಳು ಗಿಲಿ ಇಳಿಯಲ್ಲಿಲ್ಲವೇ
          ಹಳೆಯ  ಚಟ ಹಿಡಿದ ಹಠ ತೀರಲಿಲ್ಲವೇ... ತೀರಲಿಲ್ಲವೇ  
--------------------------------------------------------------------------------------------------------------------------

ಮನಸಾಕ್ಷಿ  (೧೯೬೮) - ಬಾಳ ಪದಕೆ ನಲಿವು ನೋವು ತಾಳ ಮೇಳವಾಗಿದೇ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ವಿಜಯನಾರಸಿಂಹ ಗಾಯನ : ಪಿ.ಸುಶೀಲಾ 

ಬಾಳ ಪದಕೆ ನಲಿವು ನೋವು ತಾಳ ಮೇಳವಾಗಿದೇ
ಬಾಳ ಪದಕೆ ನಲಿವು ನೋವು ತಾಳ ಮೇಳವಾಗಿದೇ
ಚೆಲುವೋ ಒಲವೋ ಬಳಸಿ ಬರಲು ಗಾನ ತಾಣವಾಗಿದೇ
ಚೆಲುವೋ ಒಲವೋ ಬಳಸಿ ಬರಲು ಗಾನ ತಾಣವಾಗಿದೇ
ಬಾಳ ಪದಕೆ ನಲಿವು ನೋವು ತಾಳ ಮೇಳವಾಗಿದೇ

ಸಾವು ತರುವ ನೋವು ಬರಿಯ ತಾತ್ಕಾಲಿಕ
ವಿರಹದಿಂದ ಉರಿವ ಬೇಗೆ ಪ್ರಳಯಾಂತಕ
ಹೋದ ಜೀವ ಬಾರದೆಂಬ ನಂಬಿಕೆ ಅರಳೀ..
ಹೋದ ಜೀವ ಬಾರದೆಂಬ ನಂಬಿಕೆ ಅರಳೀ..
ನೊಂದು ಬೆಂದು ಮರೆವ ನಲಿವ ಹಂಬಲವಿಲ್ಲಿ
ಬಾಳ ಪದಕೆ ನಲಿವು ನೋವು ತಾಳ ಮೇಳವಾಗಿದೇ
ಚೆಲುವೋ ಒಲವೋ ಬಳಸಿ ಬರಲು ಗಾನ ತಾಣವಾಗಿದೇ
ಬಾಳ ಪದಕೆ ನಲಿವು ನೋವು ತಾಳ ಮೇಳವಾಗಿದೇ

ಚೆಲುವು ಒಲವು ಬಯಸಿ ಪ್ರೇಮಿಸಿ ಹಾತೊರೆದಿದೆ
ಒಲವು ಚೆಲುವು ರಮಿಸಿ ತಣಿಸೆ ತಲ್ಲಣಿಸಿದೆ
ಯಾರ ತಂಪು ಯಾರ ಮಿಂಚೋ ಎರಗಿ ಬಂದಿರೇ
ಯಾರ ತಂಪು ಯಾರ ಮಿಂಚೋ ಎರಗಿ ಬಂದಿರೇ
ನೋವು ಮರೆತು ನಲಿವು ಬೆರೆವ ಸಮಯ ಬಂದಿದೆ  
ಬಾಳ ಪದಕೆ ನಲಿವು ನೋವು ತಾಳ ಮೇಳವಾಗಿದೇ
ಚೆಲುವೋ ಒಲವೋ ಬಳಸಿ ಬರಲು ಗಾನ ತಾಣವಾಗಿದೇ
ಬಾಳ ಪದಕೆ ನಲಿವು ನೋವು ತಾಳ ಮೇಳವಾಗಿದೇ
ಆಆಆ.... ಓಓಓ .... ಆಆಆ... ಹೂಂಹೂಂ ...
--------------------------------------------------------------------------------------------------------------------------

ಮನಸಾಕ್ಷಿ (೧೯೬೮) - ಅಲೆ ಅಲೆಯಲಿ ಉಲಿ ಉಲಿದಿದೆ ಧರ್ಮಧ ಸಾಕ್ಷಿ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಕುರಾಸೀ ಗಾಯನ : ಪಿ.ಬಿ.ಶ್ರೀನಿವಾಸ


ಅಲೆ ಅಲೆಯಲಿ ಉಲಿ ಉಲಿದಿದೆ ಧರ್ಮಧ ಸಾಕ್ಷಿ
ಮಾರಲಿಯುತೆ ಮೈ ಕಣಕಣ ಶರಣನೆನಿಸಿದೆ ಮನಸಾಕ್ಷಿ... ಮನಸಾಕ್ಷಿ..
ಅಲೆ ಅಲೆಯಲಿ ಉಲಿ ಉಲಿದಿದೆ ಧರ್ಮಧ ಸಾಕ್ಷಿ
ಅಲೆ ಅಲೆಯಲಿ ಉಲಿ ಉಲಿದಿದೆ ಧರ್ಮಧ ಸಾಕ್ಷಿ
ಮಾರಲಿಯುತೆ ಮೈ ಕಣಕಣ ಶರಣನೆನಿಸಿದೆ ಮನಸಾಕ್ಷಿ... ಮನಸಾಕ್ಷಿ..
ಅಲೆ ಅಲೆಯಲಿ ಉಲಿ ಉಲಿದಿದೆ ಧರ್ಮಧ ಸಾಕ್ಷಿ

ಎದೆಯಲ್ಲದೇ ಬೇರೆಲ್ಲಿದೆ ದೇವಾಲಯ ಇನ್ನೂ
ಧೃಡ ನಂಬಿಕೆ ಪ್ರತಿಬಿಂಬವೇ ಗುಡಿಯಾಗಿದೆ ಎಲ್ಲೂ
ದುಡಿಯಿಲ್ಲವೇ ಮಡಿವೆಂಬುದು ಯುಗಯುಗ ಮಂತ್ರ
ದುಡಿಯಿಲ್ಲವೇ ಮಡಿವೆಂಬುದು ಯುಗಯುಗ ಮಂತ್ರ
ಅಣುಅಣುವಿನ ಕ್ಷಣಕ್ಷಣಕಿದೆ ಜೀವನ ಸೂತ್ರ ಈ ಜೀವನ ಸೂತ್ರ
ಅಲೆ ಅಲೆಯಲಿ ಉಲಿ ಉಲಿದಿದೆ ಧರ್ಮಧ ಸಾಕ್ಷಿ

ಒಳಿತಾಗಲೀ ಕೆಡುಕಾಗಲೀ ಹೊಳೆ ನೀರಲ್ಲಾ
ಒಳಿತಾಗಲೀ ಕೆಡುಕಾಗಲೀ ಹೊಳೆ ನೀರಲ್ಲಾ
ಈ ಕರ್ಮದ ಫಲವೆಲ್ಲವ ಕೊಡುವಾತನೇ ಬಲ್ಲಾ
ಹೊರೆ ಪಾಪವ ಒರೆ ಹಚ್ಚುತ್ತಾ ಚುಚ್ಚಲು ಮನಸಾಕ್ಷಿ
ಕಡುಪಾಪಿಗೂ... ಕಡುಪಾಪಿಗೂ ದಯ ತೋರುವುದಾ
ಧರ್ಮದ ಸಾಕ್ಷಿ... ಧರ್ಮದ ಸಾಕ್ಷಿ
ಅಲೆ ಅಲೆಯಲಿ ಉಲಿ ಉಲಿದಿದೆ ಧರ್ಮಧ ಸಾಕ್ಷಿ
ಮಾರಲಿಯುತೆ ಮೈ ಕಣಕಣ ಶರಣನಿಸಿದೆ ಮನಸಾಕ್ಷಿ... ಮನಸಾಕ್ಷಿ..
ಅಲೆ ಅಲೆಯಲಿ ಉಲಿ ಉಲಿದಿದೆ ಧರ್ಮಧ ಸಾಕ್ಷಿ
---------------------------------------------------------------------------------------------------------------------- 

No comments:

Post a Comment