1026. ದೀಪಾವಳಿ (೨೦೦೦)



ದೀಪಾವಳಿ ಚಿತ್ರದ ಹಾಡುಗಳು 
  1. ಹರುಷ ದೀವಿಗೆ ಧರೆಯ 
  2. ನೂರಾರು ಬಣ್ಣ ಸೇರಿ ಒಂದು 
  3. ಶೃತಿಲಯದ ಜೊತೆ ಮಿಲನ 
  4. ಬಾನು ವರ್ಷ ಧಾರೆ  
  5. ಮುಕ್ಕೋಟಿ ಸೂರ್ಯನೀವ 
  6. ಚೈತ್ರ ಮೂಡಿದ ಚೆಲುವಾ 

ಸಾಹಿತ್ಯ : ಕೆ.ಕಲ್ಯಾಣ, ಎಂ.ಏನ್.ವ್ಯಾಸರಾವ್, ರುದ್ರೇಶ ನಾಗಸಂದ್ರ, ಸು ರುಧ್ರಮೂರ್ತಿ ಶಾಸ್ತ್ರಿ   

ದೀಪಾವಳಿ (೨೦೦೦)
ಸಂಗೀತ : ಎಂ.ಎಂ.ಕೀರವಾಣಿ ಗಾಯನ : ಎಸ್.ಪಿ.ಬಿ. 

ಕೊರಸ : ಉಂ... ಉಂ...  ಉಂ...  ಉಂ...  ಉಂ...  ಉಂ...
ಗಂಡು : ಹರುಷಾ... ದೀವಿಗೇ.. ಧರೆಯಾ ದೇವಿಗೆ
           ಕಲೆಯ ಮುತ್ತಹ  ಬಿಚ್ಚಿ ಕೂಗಿದ ಚಿಲಿಪಿಲಿಯ ಕೂಗುತ್ತಾಳೆ
           ಘಮ ಘಮ ಹೂವಿನ ಮಾಲೆ ಸಡಗರ ಸಂಭ್ರಮದ ತೇರಿಗೆ...
           ಹರುಷಾ... ದೀವಿಗೇ.. ಧರೆಯಾ ದೇವಿಗೆ
         
         ನೀ ಸರಿ ಗಮ ಪದ ಪ್ರೀತಿಯ ಮುಂಜಾನೆ
         ನಗೆಯಾ ತಿಳಿ ಬಗೆ ಬಗೆ ಮುಸ್ಸಂಜೆ ಓಕುಳಿ
         ರಾತ್ರಿಯೆಂಬ ಘನ ಮೌನದಲ್ಲಿ ಕುಡಿದೀಪ ನೀಡು  ನನಗೆ
         ಆರದಂತೇ ಕಾಯೋ ಪ್ರಾಣ ದೀಪ  ಎಂದೆಂದೂ ನಾನು ನಿಮಗೆ
         ಹನಿಹನಿಸು ಚೆಲುವೇ ಅನುದಿನ ತನ್ನೆದೆಯಲ್ಲಿ
         ಋತುಗಳು ಮೈತೆಳೆದು ಹಾಡಲೀ..
         ಹರುಷಾ... ದೀವಿಗೇ..

ಕೋರಸ್ : ನಾನ ನಾನ  ನಾನ ನಾನ ನಾನ ನಾನ  ನಾನ
ಗಂಡು : ಈ ಸಿಹಿ ಮನ ಸದಾ ಜೇನಿನ ಗೂಡಂತೆ
            ಸುರಿವಾ ನಗು ಚಿಟ ಪಟ ಮಳೆಯ ಹಾಡಂತೇ
            ಬಾಳು ಎಂಬ ನಮ್ಮ ಮೇಳದಲ್ಲಿ ನಿಮಗಾಗಿ ನನ್ನ ಉಸಿರು
           ಬೆಳ್ಳಿ ಮೋಡ ಹಿಡಿಯಲ್ಲಿ ತರುವೇ ನಿಮ್ಮ ಆಸೆ ತುಂಬಿ ಕೊಡಲು
           ನಗುತಿರು ಸಂತಸದಲ್ಲಿ ದಿನ ದಿನ ವಸಂತವಿಲ್ಲಿ
           ಎಡೆಬಿಡೆ ಈ ಭೂಮಿಯೇ ಸ್ವರ್ಗವೇ......
           ಹರುಷಾ... ದೀವಿಗೇ.. ಧರೆಯಾ ದೇವಿಗೆ
--------------------------------------------------------------------------------------------------------------------------

ದೀಪಾವಳಿ (೨೦೦೦)
ಸಂಗೀತ : ಎಂ.ಎಂ.ಕೀರವಾಣಿ ಗಾಯನ : ರಾಜೇಶ, ನಂದಿತಾ 

ಕೋರಸ್ : ಹುಂಬಾಯ್ ಮುಂಬಾಯ್ ಹುಂಬಾಯ್ ಹೋ
              ಹುಂಬಾಯ್ ಮುಂಬಾಯ್ ಹುಂಬಾಯ್ ಹೋ
              ಹುಂಬಾಯ್ ಮುಂಬಾಯ್ ಹುಂಬಾಯ್ ಹೋ ಬ್ರದರ್ಸಆಯ್
ಹೆಣ್ಣು : ನೂರಾರು ಬಣ್ಣ ಸೇರಿ ಒಂದು ಚಿಟ್ಟೆ 
           ನೂರಾರು ಚಿಟ್ಟೆ ಸೇರಿ ಹುಟ್ಟಿ ಬಿಟ್ಟೇ  
          ನಾನೇ ಒಪ್ಪಿದ್ದೂ ನನ್ನ ಪ್ರೀತಿಯನ್ನು ಕೊಟ್ಟಿದ್ದೂ 
          ವಾತ್ಸಾಯನನ ಬಣ್ಣ ಬಯಲು ಮಾಡೋಕೇ   
          ನಾನ್ನುಂಟು ಮಂಜುಗಡ್ಡೆ  ನಿನ್ನ ಹೃದಯ ನನ್ನ ಅಡ್ಡೆ 
          ಗಾಳಕ್ಕೆ ಸಿಕ್ಕ ಮೀನು ತಾಳ ಇರದೇ ಹಾಡೋ ಹಂಗಿಲ್ಲಾ 
ಗಂಡು : ಕಡಲಿನ ಏರಿ ಬಂತು ಮಾಯ ಜಿಂಕೆ 
            ಜಿಂಕೆಯ ಬೆನ್ನ ಹಿಂದೇ ಅಂಕೆ ಶಂಕೆ 
            ಕಣ್ಣಿಲ್ಲದ ಇರಬಹುದಾ ... ಇಂಥ ಹೆಣ್ಣು ಕಣ್ಣು ಪ್ರೀತಿ 
           ಪ್ರೀತಿಲಿ ಎಲ್ಲಾನು ಹೆಣ್ಣು ಒಂದೇ ತರವಂತೆ  
           ನಿನ್ನ ಪ್ರೀತಿಯ ನಿಜರೂಪ ಬಲ್ಲವನೇ ಅಪರೂಪ 
           ಗೂಡಿಂದ ಹಾರೋ ಹಕ್ಕಿ ಹಾಡು ಹಾರೋ ಹಂಗಿಲ್ಲಾ 
              

ಕೋರಸ್ : ಹುಂಬಾಯ್ ಮುಂಬಾಯ್ ಹುಂಬಾಯ್ ಹೋ (ಹುಯ್ಯ್ ಯ್ಯಾ)
               ಹುಂಬಾಯ್ ಮುಂಬಾಯ್ ಹುಂಬಾಯ್ ಹೋ (ಹುಯ್ಯ್ ಯ್ಯಾ)
ಹೆಣ್ಣು : ನವ್ವಾಲೇ ಹಾಡೋ ನವಿಲೇ ಚಲಿಸು ಅಂದ್ರೇ
          ಕನಸಿಯಲ್ಲಾ ಕಣ್ಣು ಬರೆಯೋ ಕಥೆ 
ಗಂಡು : ಕೋಲಾಟ ಆಡೋ ಕೋಗಿಲೇ ಸೆಳೆತ ಅಂದ್ರೇ 
           ಸೆಳೆತವಲ್ಲಾ ವಯಸ್ಸಿಗೊಂದು ಜೊತೆ 
ಹೆಣ್ಣು : ಚಾಟಿಗೆ ತಿರುಗದ ಬುಗುರಿ ಎಲ್ಲಿದೇ.. 
ಗಂಡು : ಹೇ... ಮೋಹಕೆ ಕರಗದ ದೇಹ ಎಲ್ಲಿದೇ 
ಹೆಣ್ಣು : ಕಾದ ಕಡಲೆ  ಪ್ರೀತಿಗೆ ಇಡೀ ಕಡಲೇ ಸಾಲದು 
ಗಂಡು : ಕಡಲೊಳಗೆ ಇಳಿದರೇ ಮುತ್ತು ಬಿಟ್ಟು ಬೇರೆ ಎಣಿಸಬಾರದು 
ಹೆಣ್ಣು : ಅದೃಷ್ಟ ಅಂತಿದ್ದರೇ 
ಗಂಡು :ಅಂದುಕೊಂಡದ್ದು ನಡೀತಿದ್ರೆ 
ಇಬ್ಬರು : ಖುಜರಾಹೋ ಶಿಲ್ಪಗಳಿಗೂ ಕರ್ಪುರನಾ ತಿನಿಸೋ ಹಾಡು ಇದು  
ಹೆಣ್ಣು : ನೂರಾರು ಬಣ್ಣ ಸೇರಿ ಒಂದು ಚಿಟ್ಟೆ (ರಬಾಬಾ)
          ನೂರಾರು ಚಿಟ್ಟೆ ಸೇರಿ ಹುಟ್ಟಿ ಬಿಟ್ಟೇ  


ಕೋರಸ್ : ಹುಂಬಾಯ್ ಮುಂಬಾಯ್ ಹುಂಬಾಯ್ ಹೋ
               ಹುಂಬಾಯ್ ಮುಂಬಾಯ್ ಹುಂಬಾಯ್ ಹೋ 
ಗಂಡು : ಪ್ರೀತಿಗೆ ಜಾತಿ ಯಾವುದೂ ಹೆಣ್ಣು ಅಂದ್ರೇ ಹೆಣ್ಣೇ ಅಲ್ಲಾ ಗಂಡು ಪ್ರೀತಿಗೆದುರೂ 
ಹೆಣ್ಣು : ಒತ್ತಾಸೆ ಎಂದರೇ ಎಂಥದೂ ಗಂಡು ಅಂದ್ರೇ ಗಂಡೇ ಅಲ್ಲಾ ಹೆಣ್ಣ ಬದುಕಿಗೆ ಶೂರು 
ಗಂಡು : ಪ್ರಶ್ನೆಯೇ ಬಿಡಿಸಿದೆರೆನೇ ಉತ್ತರ 
ಹೆಣ್ಣು : ಆಆಆ.. ಪ್ರೀತಿಯ ಪಡಿಸಿದರೇನೇ ಹತ್ತಿರಾ 
ಗಂಡು : ಜಾದು ಮಾಡುವಾ ಪ್ರೀತಿಯಾ ಹಾದು ಹೋದರೇ ಯೌವ್ವನಾ 
ಹೆಣ್ಣು : ಯೌವ್ವನದ ಹೊಳೆಯಲಿ ಮಿಂದ ಮೇಲೆ ಕೊಂಚ ಎಣಿಸಬಾರದೂ 
ಗಂಡು : ಅಂಗೈಲೇ ಆಕಾಶ 
ಹೆಣ್ಣು : ಅರಳುವಾ ಅವಕಾಶ 
ಇಬ್ಬರು : ಕೈಗೆ ಸಿಗದ ನಕ್ಷತ್ರಕ್ಕೂ ನೀರು ಕುಡಿಸೋ ಪ್ರೀತಿ ಹಾಡಿದು  
ಕೋರಸ್ : ಹುಂಬಾಯ್ ಮುಂಬಾಯ್ ಹುಂಬಾಯ್ ಹೋ
               ಹುಂಬಾಯ್ ಮುಂಬಾಯ್ ಹುಂಬಾಯ್ ಹೋ 
               ಹುಂಬಾಯ್ ಮುಂಬಾಯ್ ಹುಂಬಾಯ್ ಹೋ 
               ಹುಂಬಾಯ್ ಮುಂಬಾಯ್ ಹುಂಬಾಯ್ ಹೋ 
--------------------------------------------------------------------------------------------------------------------------

ದೀಪಾವಳಿ (೨೦೦೦)
ಸಂಗೀತ : ಎಂ.ಎಂ.ಕೀರವಾಣಿ ಗಾಯನ : ಎಸ್.ಪಿ.ಬಿ. 

ಆಆಆ... ಆಆಆ...ಆಆಆ...ಆಆಆ...
ಶೃತಿಲಯದ ಜೊತೆ ಮಿಲನ ಸ್ವರ ಆಲಾಪ ಭಾವ  ಚಲನ
ಸಪ್ತಸಾಗರದಂತೆ ಸಪ್ತಸ್ವರಗಳ ಮೇಳ
ಎಲ್ಲಾನು ಸೇರಿದಾಗಲೇ ಗೀತಾಂಜಲಿ ಸಂಗೀತ
ಕುಣಿಸುವ ನಲಿಸುವ ಒಲುಮೆಯ ಸವಿ ಸುಧೆಯು ರಸದ ಚೆಲುವೆಯು

ಅಮ್ಮನ ಕಣ್ಣಲಿ ಸಾವಿರ ತಾರೆಯು ಝಗ ಝಗಸಿ ಬೆಳಗಿರಲು
ಕಳೆದ ಸುಖಗಳ ಬೆಳಗು ಫಳ ಫಳ ಹೊಳೆದು ಎಲ್ಲ ಹಗಲು
ಚೈತ್ರ ಮಾಸ ಬಂದು ನೂರು ಸುಮಗಳು ತೂಗಿ ನಗಲು
ಹೊರಗಡೆ ಹಿಡಿಯುವ ಪರೆಗಳಿವೆ
ಒಳಗಡೆ ಮಮತೆಯ ಸೆಲೆಗಳಿವೆ
ಹಣೆಯ ಬರಹದಲಿ ತೆರೆಯದ ಕದವಿದೆ
ಬದುಕೇ ವಿಧಿಯು ಬರೆದ ಕವನ ಸಂಗೀತ.......
ಶೃತಿಲಯದ ಜೊತೆ ಮಿಲನ ಸ್ವರ ಆಲಾಪ 

ಮಾಮಗ ಮಾಮಗ ಮಾಮಗ ಮಪಮಗ ಸಗಮಪದ ನಿಸದನಿಪ
ಬಾಳಿನ ತೋಟದಿ ದಿನ ದಿನ ಹಾಡುವ ಕೋಗಿಲೆಯ  ಸ್ವರಗಳಿವೆ
ನಿನಿಸ ನಿನಿಸಗಾ ಸಾಸ ನಿಪನಿಸಗ ಗಾಗಮಮ್ ಗಸಗ
ಹೃದಯದಾಳದಿ ನಿಂತು ಮಮತೆಯ ತಂತಿ ಮೀಟುತಿಹರು
ಸಾಸ ನಿನಿ ನಿನಿ ಸಾಸ ಗಸನಿದಮ ಮಾಪಮಗ
ನಕ್ಕು ನಲಿದ ಲೆಕ್ಕ ಬಂತು ನೆನಪಿನ ಬುತ್ತಿ ಬಿಡಿಸಿ
ಗಾಪನಿಸ ಗಪನಿಸ ಗಪನಿಸಗ  ತೇಯುವ ಗಂಧವು ನಾನೆಂದೆ
ಪನಿಸಗ ಪನಿಸಗ ಪನಿಸಗಮ ಘಮ ಘಮ ಪರಿಮಳ ನಿಮಗೆಂದೆ
ಮಗಗ ಮಗಗ ಮಗ ಸಗಮ ಸನಿಸಗ
ಮನದ ಮನೆಯೊಳಗೆ ಭರವಸೆ ಕರಗಿದೆ
ಸೋಲೋ ಗೆಲುವೋ ನೋವೋ ನಲಿವೋ ಸಂಗೀತ....
ಶೃತಿಲಯದ ಜೊತೆ ಮಿಲನ ಸ್ವರ ಆಲಾಪ ಭಾವ  ಚಲನ
ಸಪ್ತಸಾಗರದಂತೆ ಸಪ್ತಸ್ವರಗಳ ಮೇಳ
ಎಲ್ಲಾನು ಸೇರಿದಾಗಲೇ ಗೀತಾಂಜಲಿ ಸಂಗೀತ.... ಸಂಗೀತ
--------------------------------------------------------------------------------------------------------------------------

ದೀಪಾವಳಿ (೨೦೦೦)
ಸಂಗೀತ : ಎಂ.ಎಂ.ಕೀರವಾಣಿ ಗಾಯನ : ಗಂಗಾ, ಗುರುಕಿರಣ 

ಹೆಣ್ಣು : ಏಕೋ ಈ ಕ್ಷಣ ನನ್ನದೇ ಕಡಲನು ಮೀರಿದೆ 
         ನದಿ ನಡಗಳ ಚಿಮ್ಮಿಸಿ ಸಪ್ತರಾಗ ಮೀಟಿದೆ  
         ಭಾವದಾ ಒಂದೊಂದೆ ದುಂಬಿಗೆ ನನ್ನ ಮೈಯೆಲ್ಲಾ ಅರಳಿದೆ..  
         ಬಾನು ವರ್ಷಧಾರೆ ತಂದಂತೆ 
         ಭೂಮಿ ಕಂಪು ಬೀರಿ ನಿಂತಂತೆ 
         ಇಂದು ನೂರು ಭಾವ ನನ್ನಲ್ಲಿ 
ಗಂಡು : ಆಆಆ... ಆಆಆ... 
ಹೆಣ್ಣು : ಏಕೋ ಈ ಕ್ಷಣ ನನ್ನದೇ ಕಡಲನು ಮೀರಿದೆ 
         ನದಿ ನಡಗಳ ಚಿಮ್ಮಿಸಿ 

ಗಂಡು : ಹೇಹೇ ಹೇಹೇ ಹೇಹೇ  ಹೂಹೂ ಲಾಲಾ ಲಲಾ ಲಲಾ ಹೂಂ ಹೂಂ 
ಹೆಣ್ಣು : ಮನ ಮೌನ ಮೀಟಿ ಬಂತು ಕೊರಳಿನಲ್ಲಿ ಯಾವ ಹಾಡು 
          ಹುಡುಕಲೆಲ್ಲಿ ನಾನಿಂದು ನಮ್ಮ ಪ್ರೇಮಗೀತೆ ಜಾಡನು 
          ಹೃದಯದಾಳದಿ ನೀನು ನೂರಾಸೆ ತಂದು ಝೇಂಕಾರವನ್ನು ಇಂದು ನಾ ಕಾಣೆನು 
          ಬಾನು ವರ್ಷಧಾರೆ ತಂದಂತೆ 
          ಭೂಮಿ ಕಂಪು ಬೀರಿ ನಿಂತಂತೆ ನೀ... 
ಗಂಡು : ಆಆಆ... ಆಆಆ... 
ಹೆಣ್ಣು : ಆಆಆ... ಆಆಆ... ತರತತ ತರತತ ತರತತ 
          ಜೀವ ಜಲವು ಸೋಕಿ ನಾನು (ಪಾಪಪಪ) 
         ಚಿಗುರಿಕೊಂಡೆ ಮೊದಲ ಬಾರೀ (ಲಲಲಾಲಾಲ) 
         ಒಲವಿನಲ್ಲಿ ಮೈದುಂಬಿ ನಾನು ಮೋಡದಲ್ಲಿ ತೇಲಿಹೆ 
         ಭೂಮಿ ಗಗನ ಕಾಣೆ ನಾನಿಂಥ ಸೀಮೆ 
         ಸಂತೋಷದಲೇ ಮಿಂದು ನಾನಿಜುವೇ 
         ಬಾನು ವರ್ಷಧಾರೆ ತಂದಂತೆ 
        ಭೂಮಿ ಕಂಪು ಬೀರಿ ನಿಂತಂತೆ 
        ಹೇಹೇ ಹೇಹೇ ಹೇಹೇ  
------------------------------------------------------------------------------------------------------------------------ 

ದೀಪಾವಳಿ (೨೦೦೦)
ಸಂಗೀತ : ಎಂ.ಎಂ.ಕೀರವಾಣಿ ಗಾಯನ :ಎಸ್.ಪಿ.ಬಿ. ಚಿತ್ರಾ 

ಗಂಡು :  ಓಹೋಹೋ... ಒಹೋ ಒಹೋ ಒಹೋ ಹೋ
ಹೆಣ್ಣು : ಮುಕ್ಕೋಟಿ ಸೂರ್ಯನಿವ ಬಂದು ಕೋಟಿ ಕನಸು ಸುರಿದು
         ಜೀವಂತ ದೇವರಿವ ನೋಡು ಹೃದಯ ಬೆಳಗುತಿಹುದು
         ಎಂದೂ ಕೇಳದಂಥ ಪ್ರೀತಿ ಸುಪ್ರಭಾತ
         ಜೀವ ಕಣ್ತುಂಬಿ ಬಂದಾಯ್ತು
         ಋತುಗಳು ಭಾಗ್ಯದ ಬಾಗಿಲು ತೆರೆದಾಯ್ತು

ಗಂಡು :  ಓಹೋಹೋ... ಒಹೋ ಒಹೋ ಒಹೋ ಹೋ
           ಪ್ರೀತಿ ಸಾಗರದ ಮೇಲೆ ಕನಸಿನ ಅಲೆಗಳಿವೆ 
          ಎಲ್ಲ ಅಲೆಗಳ ಕಲರವಕೂ ನಿನ್ನ ಹೆಸರಿದೆ 
ಹೆಣ್ಣು : ಪ್ರೀತಿ ಅಂಬರದಾ ಮೇಲೆ ನನ್ನಾಸೆಯ ಕಲೆಗಳಿವೆ 
          ಎಲ್ಲ ಕಲೆಗಳ ಎದೆಯಲ್ಲಿ ನಿನ್ನ ಉಸಿರಿದೆ 
ಗಂಡು : ತಿರುಗುವ ಜಗದೊಳಗೆ ಮಿರುಗುವ ಪ್ರೀತಿ ಇದು 
ಹೆಣ್ಣು : ಜರಗುವ ಕಾಲಗಳ ಬದಲಿಸೋ ಬಂಧುವಿದು 
ಇಬ್ಬರು : ಗಾಳಿ ಗಂಧದಲ್ಲೂ ಪ್ರೀತಿ ಸೂಜಿಗಲ್ಲು 
             ಇಂಥ ಗಂಧರ್ವ ಸಂಗೀತ ಸರಿಗಮದೊಳಗಿದೆ 
            ಘಮ ಘಮಗಳ ಪ್ರೇಮ ಒಹೋ..ಒಹೋ..ಒಹೋ.. ಹೋ 
ಗಂಡು : ಮುಕ್ಕೋಟಿ ಸೂರ್ಯನಿದು ನಿನ್ನ ನಗೆಯ ಸ್ಫೂರ್ತಿ ಚಿಲುಮೆ 

ಹೆಣ್ಣು : ಪ್ರೀತಿ ಮುತ್ತಿನ ಪಲ್ಲಕ್ಕಿ ನಾನು ನೀನೇ ಅದರಲ್ಲಿ 
          ನಾವು ನೀಡುವ ಮುತ್ತುಗಳೇ ನಮ್ಮ ಸಾರಥಿ 
ಗಂಡು : ಭೂಮಿಗೊಂಬೆ ಆಕಾಶ ಪ್ರೀತಿಗೆಂದು ನೂರಾರು 
           ಎಲ್ಲ ದಿಕ್ಕಲ್ಲೂ ನಮದೇನೆ ಪ್ರೀತಿ ಸಂತತಿ 
ಹೆಣ್ಣು : ಸಾವಿರ ಮಿಂಚುಗಳು ಕಂಗಳ ಸ್ಪರ್ಶದಲಿ 
ಗಂಡು : ಸಾವಿರ ಗುಡುಗುಗಳು ಬೆರೆಯುವ ಹರ್ಷದಲಿ 
ಇಬ್ಬರು : ಪ್ರೀತಿ ಜೇನ ಹನಿಯು ಪ್ರೀತಿ ಸ್ಪರ್ಶ ಮಣಿಯು 
            ಪ್ರೀತಿ ಸಂಜೀವಿನಿ ಅಂತೇ ಹಗಲು ಇರುಳಲಿ
           ನಮ್ಮೊಳಗಿದೆ ಎಂದೂ ಒಹೋ..ಓಹೋಹೋ..
--------------------------------------------------------------------------------------------------------------------------

ದೀಪಾವಳಿ (೨೦೦೦)
ಸಂಗೀತ : ಎಂ.ಎಂ.ಕೀರವಾಣಿ ಗಾಯನ : ನಂದಿತಾ 

ಚೈತ್ರ....  ಮೂಡಿದೆ...  ಚೆಲುವಾ ನೀಡಿದೆ
ಕೋಗಿಲೆಯೂ ಚಿಗುರು ಮಾವು ಮತ್ತೇ ಕೂಡಿವೆ
ನೆನಪಿನ ಅಂಗಳದಲ್ಲಿ ಕಚಗುಳಿ ಮೈಮನದಲ್ಲಿ
ಉಳಿಯಲಿ ಯಾವತ್ತಿಗೂ ಪ್ರೀತಿಯು
ಚೈತ್ರ....  ಮೂಡಿದೆ...  ಚೆಲುವಾ ನೀಡಿದೆ

ಪ್ರೀತಿಯ ಸವಿ ಜೇನು ಉಣಿಸಿದ ನಮ್ಮಣ್ಣ
ಸುರಿವಾ ಕಣ್ಣ ಹನಿ ಒರೆಸಿದ ಒಲವಿಂದ
ಬಾಡದಂತೆ ಮುಖ ಬಾಡದಂತೆ ಪೊರೆದವನು ಸೋದರಿಯ
ಮರೆಯಬಹುದೇ ಪೊರೆ ತೊರೆಯಬಹುದೇ ತಾನೇ ಸಲಹಿದವರಾ
ನೆನಪಿನ ಅಂಗಳದಲ್ಲಿ ಕಚಗುಳಿ ಮೈಮನದಲ್ಲಿ
ಉಳಿಯಲಿ ಯಾವತ್ತಿಗೂ ಪ್ರೀತಿಯು....
ಚೈತ್ರ....  ಮೂಡಿದೆ... 

ನನನನ ನನನನ ನನನ ನಾನಾ ನಾನಾ ನಾನನನ 
ಬಾನಲಿ ಸದಾ ಸದಾ ಬೆಳಗುವೆ ಚಂದಿರನು
ಎದೆಗೆ ಪದಿ ಪದಿ ಸುರಿದಾ ಪ್ರೀತಿ ಸುಧೆಯನ್ನು
ಯಾಕೆ ಇಂದು ಬರಿ ಮೋಡ ಕವಿದು ಮರೆಯಾಯ್ತು ಚಂದ್ರ ಬಿಂಬ
ಮತ್ತೆ ಎಂದು ವಾತ್ಸಲ್ಯ ಬಂಧು ಬೆಳಗುವನು ಬಾಳ ತುಂಬಾ
ನೆನಪಿನ ಅಂಗಳದಲ್ಲಿ ಕಚಗುಳಿ ಮೈಮನದಲ್ಲಿ
ಉಳಿಯಲಿ ಯಾವತ್ತಿಗೂ ಪ್ರೀತಿಯು
ಚೈತ್ರ....  ಮೂಡಿದೆ...  ಚೆಲುವಾ ನೀಡಿದೆ
--------------------------------------------------------------------------------------------------------------------------

No comments:

Post a Comment