1029. ಕಾಕನ ಕೋಟೆ (೧೯೭೭)


ಕಾಕನ ಕೋಟೆ ಚಿತ್ರದ ಹಾಡುಗಳು 
  1. ಬೆಟ್ಟದ ತುದಿಯಲ್ಲಿ 
  2. ಕರಿ ಹೈದನೆಂಬೋರು 
  3. ಒಂದು ದಿನ ಕರಿ ಹೈದ 
  4. ನೇಸರ ನೋಡು  
  5. ಸೋ ಎನ್ನಿರೋ ಸೋಬಾನೆ ಎನ್ನಿರೋ 
ಕಾಕನ ಕೋಟೆ (೧೯೭೭)
ಸಂಗೀತ : ಸಿ.ಅಶ್ವಥ, ಸಾಹಿತ್ಯ:ಮಾಸ್ತಿ ವೆಂಕಟೇಶ ಅಯ್ಯಂಗಾರ, ಗಾಯನ : ಸಿ.ಅಶ್ವಥ 

ಬೆಟ್ಟದ ತುದಿಯಲ್ಲಿ ಹೇ.. ಕಾಡುಗಳಾ..  ಎದೆಯಲ್ಲಿ...
ಕಬನಿಯ ನದಿಯಲ್ಲಿ....  ಕೂಗುತ್ತಿರುವುದಲ್ಲಿ....
ಎಲ್ಲಿ ಕೊಂಬಿನ ಸಲಗಾ... ಹೆಣ್ಣಾನೆ ಮರಿಬಳಗ...
ಬೆಳುತಿಂಗಳಿನ ತಳಗ... ನಡೆಯುವುದು ಅಲ್ಲಿ..

ದಿನ ದಿನ ಸಂಪಂಗಿ ಹೇ... ಇರುವಂತೀ ಮಲ್ಲಂಗಿ
ಮೊಲ್ಲೆ ಅದರ ತಂಗಿ... ಅರುಳುವುದು ಎಲ್ಲಿ
ಎಲ್ಲಿ ಕರಿಸಿರಿ ಗಂಧಾ...  ಮರ ಬೆಳೆದು ತಾ ಮುಂದಾ
ಮಾದೇಶ್ವರಗೆ ಚಂದಾ....  ಮೆಚ್ಚುವುದು ಅಲ್ಲಿ
ಮಾದೇಶ್ವರಗೆ ಚಂದಾ...  ಮೆಚ್ಚುವುದು ಅಲ್ಲಿ
--------------------------------------------------------------------------------------------------------------------------

ಕಾಕನ ಕೋಟೆ (೧೯೭೭)
ಸಂಗೀತ : ಸಿ.ಅಶ್ವಥ, ಸಾಹಿತ್ಯ:ಮಾಸ್ತಿ ವೆಂಕಟೇಶ ಅಯ್ಯಂಗಾರ, ಗಾಯನ : ಸಿ.ಅಶ್ವಥ, ಬಿ.ವಿ.ಕಾರಂತ, ಜಿ.ಕೆ.ವೆಂಕಟೇಶ  

ಗಂಡು : ಕರಿ ಹೈದನೆಂಬೋರು ಮಾದೇಶ್ವರಾ
            ಮಾದೇಶ್ವರಗೆ ಶರಣು ಮಾದೇಶ್ವರಾ
ಕೋರಸ್ :  ಕರಿ ಹೈದನೆಂಬೋರು ಮಾದೇಶ್ವರಾ
                 ಮಾದೇಶ್ವರಗೆ ಶರಣು ಮಾದೇಶ್ವರಾ
                 ಕರಿ ಹೈದನೆಂಬೋರು ಮಾದೇಶ್ವರಾ
                 ಮಾದೇಶ್ವರಗೆ ಶರಣು ಮಾದೇಶ್ವರಾ

ಗಂಡು : ಕರಿ ಹೈದನವ್ವನ ಹೆಸರೆಂದು ನಿಲ್ಲಲ್ಲಿ 
           ಅವನ ಬಳಿ ಎಂದೆಂದೂ ಒಳ್ಳಿದನು ಮೆಲ್ಲಲ್ಲಿ 
ಕೋರಸ್ :  ಕರಿ ಹೈದನವ್ವನ ಹೆಸರೆಂದು ನಿಲ್ಲಲ್ಲಿ 
                ಅವನ ಬಳಿ ಎಂದೆಂದೂ ಒಳ್ಳಿದನು ಮೆಲ್ಲಲ್ಲಿ 
ಗಂಡು : ಅವನ ಹೆತ್ತಾ ಕಾಡು ಎಂದೆಂದೂ ಚಿಗುರಲೀ...
ಕೋರಸ್ : ಮಾದೇಶ್ವರಾ..  
                ಕರಿ ಹೈದನೆಂಬೋರು ಮಾದೇಶ್ವರಾ
               ಮಾದೇಶ್ವರಿಗೆ ಶರಣು ಮಾದೇಶ್ವರಾ
                ಕರಿ ಹೈದನೆಂಬೋರು ಮಾದೇಶ್ವರಾ
               ಮಾದೇಶ್ವರಿಗೆ ಶರಣು ಮಾದೇಶ್ವರಾ

ಗಂಡು : ಅವನ ಬಳಿ ಎಂದೆಂದೂ ಮಿಕ್ಕಿರಲಿ ಹೋಗರಲಿ
            ಅವನ ಹಾಡಿಗಳಿರಲಿ ಎಂದೆಂದೂ ಸೊಗದಲಿ
ಕೋರಸ್ :ಅವನ ಬಳಿ ಎಂದೆಂದೂ ಮಿಕ್ಕಿರಲಿ ಹೋಗರಲಿ
             ಅವನ ಹಾಡಿಗಳಿರಲಿ ಎಂದೆಂದೂ ಸೊಗದಲಿ
              ಅವನ ಬಳಿ ಎಂದೆಂದೂ ನಗೆ ಇರಲಿ ಮೊಗದಲೀ...  ಮಾದೇಶ್ವರಾ
             ಕರಿ ಹೈದನೆಂಬೋರು ಮಾದೇಶ್ವರಾ
             ಮಾದೇಶ್ವರಿಗೆ ಶರಣು ಮಾದೇಶ್ವರಾ
             ಕರಿ ಹೈದನೆಂಬೋರು ಮಾದೇಶ್ವರಾ
             ಮಾದೇಶ್ವರಿಗೆ ಶರಣು ಮಾದೇಶ್ವರಾ

ಗಂಡು : ಅವನ ಹೊರಳುವ ಹಾಡು ಎಂದೆಂದೂ ಹಾಡಲಿ
           ಅವನ ಬಳಿ ಎಲ್ಲೆಲ್ಲೂ ಹಬ್ಬವನು ಮಾಡಲಿ
           ಕರಿಹೈದನಾ  ಅಪ್ಪಾಜಿ
ಕೋರಸ್ :  ಮಾದೇಶ್ವರಾ  ಕರಿ ಹೈದನೆಂಬೋರು ಮಾದೇಶ್ವರಾ
             ಮಾದೇಶ್ವರಿಗೆ ಶರಣು ಮಾದೇಶ್ವರಾ
             ಕರಿ ಹೈದನೆಂಬೋರು ಮಾದೇಶ್ವರಾ
             ಮಾದೇಶ್ವರಿಗೆ ಶರಣು ಮಾದೇಶ್ವರಾ
             ಮಾದೇಶ್ವರಿಗೆ ಶರಣು ಮಾದೇಶ್ವರಾ
             ಮಾದೇಶ್ವರಿಗೆ ಶರಣು ಮಾದೇಶ್ವರಾ
             ಮಾದೇಶ್ವರಿಗೆ ಶರಣು ಮಾದೇಶ್ವರಾ
             ಮಾದೇಶ್ವರಿಗೆ ಶರಣು ಮಾದೇಶ್ವರಾ
             ಮಾದೇಶ್ವರಿಗೆ ಶರಣು ಮಾದೇಶ್ವರಾ
            ಮಾದೇಶ್ವರಿಗೆ ಶರಣು ಮಾದೇಶ್ವರಾ
-------------------------------------------------------------------------------------------------------------------------

ಕಾಕನ ಕೋಟೆ (೧೯೭೭)
ಸಂಗೀತ : ಸಿ.ಅಶ್ವಥ, ಸಾಹಿತ್ಯ:ಮಾಸ್ತಿ ವೆಂಕಟೇಶ ಅಯ್ಯಂಗಾರ, ಗಾಯನ : ಸಿ.ಅಶ್ವಥ 

ಒಂದು ದಿನ ಕರಿ ಹೈದ ಕಾಡಲ್ಲಿ ಅಲೆದಾನೋ
ಒಂದು ದಿನ ಕರಿ ಹೈದ ಕಾಡಲ್ಲಿ ಅಲೆದಾನೋ
ಅಲೆಯುತ್ತಾ ಹತ್ತ ಹೆಜ್ಜೆ ಹುಲಿಯೊಂದ ಕಂಡಾನೋ 
ಹುಲಿರಾಯ ಕಾಡಲ್ಲಿ ಧೀರಾಗಿ ನಡೆಯುತ್ತಾ 
ಹುಲಿರಾಯ ಕಾಡಲ್ಲಿ ಧೀರಾಗಿ ನಡೆಯುತ್ತಾ 
ಎದುರಿಲಿ ಹೈದನ್ನ ಜಗ್ಗಂತ ನೋಡ್ಯಾರೋ 
ಜಗ್ಗಂತ ನೋಡುತ ನಿಂತಲ್ಲೇ ನಿಂತಾನೋ 
ಜಗ್ಗಂತ ನೋಡುತ ನಿಂತಲ್ಲೇ ನಿಂತಾನೋ 
ನಿಂತಲ್ಲೇ ನಿಂತೋನೋ ಬಾಲಾನ ಮೀಸುಕ್ಯಾನೊ 
ನಿಂತಲ್ಲೇ ನಿಂತೋನೋ ಬಾಲಾನ ಮೀಸುಕ್ಯಾನೊ 

ಬೀಡು ಬಟ್ಟೆ ಬೀಡು ಬಟ್ಟೇ ಅನ್ನುತಾ ಇದೇ ಕಣ್ಣು  
ಬೀಡು ಬಟ್ಟೆ ಬೀಡು ಬಟ್ಟೇ ಅನ್ನುತಾ ಇದೇ ಕಣ್ಣು  
ಬಿಡನ್ನಲ್ಲಾ ಬಿಡಾನಲ್ಲಾ ಅನ್ನುತಾ ಇದೇ ಜೀವಾ 
ನೆಟ್ಟನಾ ನೋಟಾನಾ ಹಿಂದಕ್ಕೆ ಸೆಳೆದಾನೋ  
ನೆಟ್ಟನಾ ನೋಟಾನಾ ಹಿಂದಕ್ಕೆ ಸೆಳೆದಾನೋ  
ಹತ್ತ ಹೆಜ್ಜೆ ಒಡಲಾನ ಒಂದ್ ಹೆಜ್ಜೆ ಮಾಡ್ಯಾನ್ 
ಹತ್ತ ಹೆಜ್ಜೆ ಒಡಲಾನ ಒಂದ್ ಹೆಜ್ಜೆ ಮಾಡ್ಯಾನ್ 

ಒಂದ್ ಹೆಜ್ಜೆ ಒಡಲಾಗಿ ಚಿಮ್ಮಂತ ಜಿಗಿದಾನೋ  
ಒಂದ್ ಹೆಜ್ಜೆ ಒಡಲಾಗಿ ಚಿಮ್ಮಂತ ಜಿಗಿದಾನೋ
ಚಿಮ್ಮಂತ ಜಿಗಿದೊನೋ  ಅಡವಿಯಾಗೇ ಕೆಡವ್ಯಾನೋ
ಕಾಡಿನದು ಈ ಬಟ್ಟೆ ಹೈದನದೋ ಅಂದಾನೋ
ಕಾಡಿನದು ಈ ಬಟ್ಟೆ ಹೈದನದೋ ಅಂದಾನೋ 
ಅನ್ನುತ್ತಾ ಕಾಡಾಗೆ ಹುಡುಬಿಟ್ಟು ಮಲಗ್ಯಾನೋ 
ಅನ್ನುತ್ತಾ ಕಾಡಾಗೆ ಹುಡುಬಿಟ್ಟು ಮಲಗ್ಯಾನೋ ಹೇ... ಹ್ಯಾ...
--------------------------------------------------------------------------------------------------------------------------

ಕಾಕನ ಕೋಟೆ (೧೯೭೭)
ಸಂಗೀತ : ಸಿ.ಅಶ್ವಥ, ಸಾಹಿತ್ಯ:ಮಾಸ್ತಿ ವೆಂಕಟೇಶ ಅಯ್ಯಂಗಾರ, ಗಾಯನ : ಸುಲೋಚನಾ 

ಉಂಉಂ.....   ನೇ...ಸಾರ ನೋಡು ನೇಸರ ನೋಡು..ಉ...
ನೇಸಾ....ರ ನೋಡು ನೇಸರ ನೋಡು..
ನೇ...ಸಾರ ನೋಡು ನೇಸರ ನೋಡು...ಉ..

ಮೂ..ಡಾಣ ಬಯ್ಲಿಂದ ಮೇಲಕ್ಕೆ ಹಾ..ರಿ..
ದೂರಾದ ಮಲೆಯಾ ... ತಲೆಯಾನೆ ಏ..ರೀ ...
ಮೂ..ಡಾಣ ಬಯ್ಲಿಂದ ಮೇಲಕ್ಕೆ ಹಾ..ರಿ..
ದೂರಾದ ಮಲೆಯಾ ... ತಲೆಯಾನೆ ಏ..ರೀ ...
ನೇಸಾರ ನೋಡು... ನೇಸರ ನೋಡು
ನೇ...ಸಾರ ನೋಡು ನೇಸರ ನೋಡು..ಉ...

ಹೊರಳೀತು ಇರುಳು
ಹೊರಳೀತು ಇರುಳು  ಬೆಳಕೀನ ಗೂಡು..ಉ...
ತೆರೆಯೀತು ನೋಡು...ಬೆಳಗೀತು ನಾಡು..ಉ..
ಹೊರಳೀತು ಇರುಳು... ಬೆಳಕೀನ ಗೂಡು..ಉ..
ತೆರೆಯೀತು ನೋಡು... ಬೆಳಗೀತು ನಾಡು..ಉ...
ನೇ..ಸಾರ ನೋಡು ನೇಸರ ನೋಡು...
ನೇ....ಸಾರ ನೋಡು...
--------------------------------------------------------------------------------------------------------------------------

ಕಾಕನ ಕೋಟೆ (೧೯೭೭)
ಸಂಗೀತ : ಸಿ.ಅಶ್ವಥ, ಸಾಹಿತ್ಯ:ಮಾಸ್ತಿ ವೆಂಕಟೇಶ ಅಯ್ಯಂಗಾರ, ಗಾಯನ : ಕೌಸಲ್ಯ, ಗಾಯತ್ರಿ

ಸೋ ಎನ್ನಿರೋ ಸೋಬಾನ ಎನ್ನಿರೋ
ಸೋ ಎನ್ನಿರೋ ಸೋಬಾನ ಎನ್ನಿರೋ 
ಊರಿನ ಗೌಡ ಬನ್ನಿ ನಾಡಿನ ದೊರೆಯೇ ಬನ್ನಿ 
ಬೇಗಾನೇ ಬನ್ನೀ ಸೋ ಎನ್ನಿರೇ 
ಸೋ ಎನ್ನಿರೋ ಸೋಬಾನ ಎನ್ನಿರೋ

ಬರಗಲ್ಲ ಗೂಡಾಗೆ ಸಡಗರ ಬಂದೈತೆ 
ಬರಗಲ್ಲ ಗೂಡಾಗೆ ಸಡಗರ ಬಂದೈತೆ 
ಕಾಕನ ಮಗಳು ಮೊಲ್ಲೆಯಾ 
ಕಾಕನ ಮಗಳು ಮೊಲ್ಲೆಯಾ ಮಡಿಲಿಗೆ 
ತೂರಿಬರುತ್ತಾಳೆ ಬೆಲೆ ಮೂಡಿ 
ಸೋ ಎನ್ನಿರೋ ಸೋಬಾನ ಎನ್ನಿರೋ

ನಾಗರ ಹೆಡೆ ಚೆಂದ ಮಾನಿನ ವೇಣಿಚಂದ 
ನಾಗರ ಹೆಡೆ ಚೆಂದ ಮಾನಿನ ವೇಣಿಚಂದ 
ಕಾಕನ ಮಗಳ ಮುಡಿ ಚೆಂದ 
ಕಾಕನ ಮಗಳ ಮುಡಿ ಚೆಂದ ನಾಡಿನ 
ಹೆಜ್ಜೆಯಾಡುದಿ ಬಲು ಚೆಂದ 
ಸೋ ಎನ್ನಿರೋ ಸೋಬಾನ ಎನ್ನಿರೋ
ಹಂದರದ ಜನ ಕೇಳಿ ಬಂಧು ಬಳಗ ಹೇಳಿ
ಹಂದರದ ಜನ ಕೇಳಿ ಬಂಧು ಬಳಗ ಹೇಳಿ
ಸಿಂಗಾರ ಮದುಮಗ ನೀವ್ ಕೇಳಿ
ಸಿಂಗಾರ ಮದುಮಗ ನೀವ್ ಕೇಳಿ ನಿಮ್ಮ ಹೆಸರು
ದಂಗಾಗಿ ನಿಂತಾಳೆ ಮದುಮಗಳು
ಸೋ ಎನ್ನಿರೋ ಸೋಬಾನ ಎನ್ನಿರೋ 
ಸೋ ಎನ್ನಿರೋ ಸೋಬಾನ ಎನ್ನಿರೋ 
--------------------------------------------------------------------------------------------------------------------------

No comments:

Post a Comment