1030. ಅಜ್ಞಾತವಾಸ (೧೯೮೪)



ಅಜ್ಞಾತವಾಸ ಚಿತ್ರದ ಹಾಡುಗಳು 
  1. ಯಾರು ಅಲ್ಲ ಹೆಸರು ಇಲ್ಲಾ 
  2. ಏಕೆ ಹೇಳು ಏಕೆ 
  3. ಅಂತೂ ಇಂತೂ ಇಂದು ನಾನು 
  4. ಏಕೆ ಹೇಳು ಏಕೆ (ಪಿ.ಸುಶೀಲಾ )
  5. ಇದು ಮನ್ಮಥ ನಡೆವಾ ದಾರಿ 

ಅಜ್ಞಾತವಾಸ (೧೯೮೪)
ಸಂಗೀತ : ರಮೇಶನಾಯ್ಡು ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ.

ಯಾರು ಯಾರು ಯಾರು ಯಾರು ಯಾರು ಯಾರು
ಊರು ಊರು ಊರು ಊರು ಊರು ಊರು ಊರು ಊರು ಊರು 
ಹೆಸರು ಹೆಸರು ಹೆಸರು ಹೆಸರು ಹೆಸರು ಹೆಸರು ಹೆಸರು 
ಉ ಉಉಉಉಉಉಉಉಉ 
ಯಾರು ಅಲ್ಲಾ ಹೆಸರು ಇಲ್ಲಾ ಎಲ್ಲಿಗೋ ಪಯಣಾ ಗೊತ್ತಿಲ್ಲಾ
ಏಕೀ ಬದುಕೋ ಅರಿವಿಲ್ಲಾ 
ಯಾರು ಅಲ್ಲಾ ಹೆಸರು ಇಲ್ಲಾ ಎಲ್ಲಿಗೋ ಪಯಣಾ ಗೊತ್ತಿಲ್ಲಾ 
ಏಕೀ ಬದುಕೋ  ಅರಿವಿಲ್ಲಾ 

ಸಾಯುವತನಕ ಬದುಕಲೇಬೇಕು 
ಬದುಕಲಿ ಇಂದು ಹೋರಾಡಲೇಬೇಕು 
ಬದುಕಲಿ ಇಂದು ಹೋರಾಡಲೇಬೇಕು 
ಬೆಂಕಿಯ ಮೇಲೆ ನಡೆವಂತೇ 
ಮುಳ್ಳಲಿ ಹೊರಳುತಾ ಇರುವಂತೆ 
ಕಷ್ಟದಿ ನಡೆಯುತ ಕಂಬನಿ ಮಿಡಿಯುತ 
ಸಾಗಲೇಬೇಕು ವಿಧಿಯಿಲ್ಲಾ... 
ಸಾಗಲೇಬೇಕು ವಿಧಿಯಿಲ್ಲಾ  
ನನ್ನಿಯ ಬಾಳಲಿ ನಿನಗಿಲ್ಲಾ 
ಯಾರು ಅಲ್ಲಾ ಹೆಸರು ಇಲ್ಲಾ ಎಲ್ಲಿಗೋ ಪಯಣಾ ಗೊತ್ತಿಲ್ಲಾ 
ಏಕೀ ಬದುಕೋ  ಅರಿವಿಲ್ಲಾ

ದೇವರು ಕಲ್ಲಾ ಮಾಡಿದ ಒಬ್ಬ 
ಉಳಿಯಲಿ ಅವನಾ ಕೂಡಿದನು ಒಬ್ಬ 
ದೇವರು ಕಲ್ಲಾ ಮಾಡಿದ ಒಬ್ಬ 
ಉಳಿಯಲಿ ಅವನಾ ಕೂಡಿದನು ಒಬ್ಬ 
ಆದರೆ ದೇವನು  ಶಿಲೆಯಲ್ಲಾ 
ಸುಮ್ಮನೆ ಅವನು ಕುಳಿತಿಲ್ಲಾ 
ಎಲ್ಲರ ಕಥೆಯನು ಬರೆಯುತಲಿರುವುನು 
ಅವನ ಕಲ್ಪನೆ ಜಗವೆಲ್ಲಾ 
ಅವನ ಕಲ್ಪನೆ ಜಗವೆಲ್ಲಾ ನಡೆಸುವ ನಿನ್ನಾ ಭಯವಿಲ್ಲಾ 
ಯಾರು ಅಲ್ಲಾ ಹೆಸರು ಇಲ್ಲಾ ಎಲ್ಲಿಗೋ ಪಯಣಾ ಗೊತ್ತಿಲ್ಲಾ
ಏಕೀ ಬದುಕೋ  ಅರಿವಿಲ್ಲಾ
--------------------------------------------------------------------------------------------------------------------------

ಅಜ್ಞಾತವಾಸ (೧೯೮೪)
ಸಂಗೀತ : ರಮೇಶನಾಯ್ಡು ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ.

ಏಕೆ ಹೇಳು ಏಕೆ
ಏಕೆ ಹೇಳು ಏಕೆ  ಅರಳಿದ ಮೊಗವು ಮೊಗ್ಗಾಯಿತೇಕೆ
ಅಂದದ ಕಣ್ಣು ಕೆಂಪಾಯಿತೇಕೆ
ಎಂದೂ ಕಾಣದ ಮೌನವು ಏಕೆ ... ಏಕೆ
ಏಕೆ ಹೇಳು ಏಕೆ.. ಏಕೆ ಹೇಳು ಏಕೆ

ಬಿರುಗಾಳಿ ಆದರೆ ಬಾಳಲಿ ತಂಗಾಳಿ ಆಗಿ ಬಾರೇ
ಉರಿಬೆಂಕಿ ಆಗದೇ ಕೋಪದಿ ಕಿರು ಜ್ಯೋತಿ ಆಗಿ ಬಾರೇ ಆಹ್ಹಾ...
ನಗೆಯ ಬೆಳಕ ಚೆಲ್ಲಿ ಮನದಿ  
ನಗೆಯ ಬೆಳಕ ಚೆಲ್ಲಿ ಮನದಿ ಆನಂದ ತುಂಬು ಚತುರೇ
ಏಕೆ ಹೇಳು ಏಕೆ
ಏಕೆ ಹೇಳು ಏಕೆ  ಅರಳಿದ ಮೊಗವು ಮೊಗ್ಗಾಯಿತೇಕೆ
ಅಂದದ ಕಣ್ಣು ಕೆಂಪಾಯಿತೇಕೆ
ಎಂದೂ ಕಾಣದ ಮೌನವು ಏಕೆ ... ಏಕೆ
ಏಕೆ ಹೇಳು ಏಕೆ... ಏಕೆ ಹೇಳು ಏಕೆ

ನೀ ಮಾತನಾಡದೇ ಹೋದರೇ ನೋವನ್ನು ನಾ ತಾಳಲಾರೇ..
ನೀ ದೂರವಾದರೇ ನನ್ನಿಂದಾ ಅರೆಕ್ಷಣ ಬದುಕಿರಲಾರೇ.. ಆಹ್ಹಾ..
ಸನಿಹ ಬಂದು ಒಂದೇ ಒಂದು
ಸನಿಹ ಬಂದು ಒಂದೇ ಒಂದು ಸವಿ ಮಾತನಾಡು ಚತುರೇ
ಏಕೆ ಹೇಳು ಏಕೆ
ಏಕೆ ಹೇಳು ಏಕೆ  ಅರಳಿದ ಮೊಗವು ಮೊಗ್ಗಾಯಿತೇಕೆ
ಅಂದದ ಕಣ್ಣು ಕೆಂಪಾಯಿತೇಕೆ
ಎಂದೂ ಕಾಣದ ಮೌನವು ಏಕೆ ... ಏಕೆ
ಏಕೆ ಹೇಳು ಏಕೆ... ಏಕೆ ಹೇಳು ಏಕೆ 
--------------------------------------------------------------------------------------------------------------------------

ಅಜ್ಞಾತವಾಸ (೧೯೮೪)
ಸಂಗೀತ : ರಮೇಶನಾಯ್ಡು ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಶೈಲಜಾ .

ಹೇ.. ಹೇ.. ಹೇ.. ಹೇ.. ಅಂತೂ ಇಂತೂ ಇಂದು ನಾನು ಬೆಳಕು ಕಂಡೇ
ಇನ್ನೂ ನೂರು ವರುಷ ಬದುಕು ಆಸೆ ಕಂಡೇ
ಓಓಓಓಓ ಅಂತೂ ಇಂತೂ ಇಂದು ನಾನು ಬೆಳಕು ಕಂಡೇ
ಇನ್ನೂ ನೂರು ವರುಷ ಬದುಕು ಆಸೆ ಕಂಡೇ

ಹಾಡುವ ಆಸೆ ಬಂತು ಹೈ ಆಡುವ ಆಸೆ ಬಂತು
ಹಾಡುವ ಆಸೆ ಬಂತು ಆಡುವ ಆಸೆ ಬಂತು
ಸಂತೋಷ ಬಂದಿದೆ ಉಲ್ಲಾಸ ತಂದಿದೆ
ಮಿಂಚೊಂದು ಮೈಯಲಿ ಸಂಚಾರ ಮಾಡಿದೆ
ಓಓಓಓ ಬೆಟ್ಟ ಗುಡ್ಡ ಏರಿ ಮೇಲೆ ಹೋಗಲೇ
ಹಳ್ಳ ಕೊಳ್ಳ ಹಾರಿ ದೂರ ಓಡಲೇ
ಹೇಹೇಹೇಹೇ ಬೆಟ್ಟ ಗುಡ್ಡ ಏರಿ ಮೇಲೆ ಹೋಗಲೇ
ಹಳ್ಳ ಕೊಳ್ಳ ಹಾರಿ ದೂರ ಓಡಲೇ
ಈಜಲೇ ನೀರಿನಲಿ ಹಾರಲೇ ಗಾಳಿನಲಿ
ಈಜಲೇ ನೀರಿನಲಿ ಹಾರಲೇ ಗಾಳಿನಲಿ
ಏನೇನೋ ಆಸೆಯೂ ನನ್ನನ್ನೂ ಕಾಡಿದೆ 
ಕಣ್ಣಲ್ಲಿ ಲೋಕದ ಸೌಂದರ್ಯ ತುಂಬಿದೆ 
ಹೂಂ  ಹೂಂ ಹೂಂ ಹೂಂ ಯಾರು ಏನು ಬಂದು ನನ್ನ ಕಂಡರೂ 
ಸುಳ್ಳೆನಲ್ಲಾ ಅವರೇ ನನ್ನ ದೇವರು 
ಹೇಹೇಹೇಹೇ ಯಾರು ಏನು ಬಂದು ನನ್ನ ಕಂಡರೂ 
ಸುಳ್ಳೆನಲ್ಲಾ ಅವರೇ ನನ್ನ ದೇವರು  

ಜೀವವ ನೀಡಿದರು ನನ್ನನು ಹರಿಸಿದರು.. ಅಹ್ಹಹ್ಹಹ..
ಜೀವವ ನೀಡಿದರು ನನ್ನನು ಹರಿಸಿದರು
ಪ್ರಾಣ ಬಂದಿತು ಹೊಸ ಬಾಳ ತಂದಿತು
ಎದೆಯಲ್ಲಿ ಕಾಣದ  ಆನಂದ ಹೊಮ್ಮಿತು
ಓಓಓಓ ಅಂತೂ ಇಂತೂ ಇಂದು ನಾನು ಬೆಳಕು ಕಂಡೇ
ಇನ್ನೂ ನೂರು ವರುಷ ಬದುಕು ಆಸೆ ಕಂಡೇ
ಹೇಹೇಹೇಹೇಹೇ ಅಂತೂ ಇಂತೂ ಇಂದು ನಾನು ಬೆಳಕು ಕಂಡೇ
ಇನ್ನೂ ನೂರು ವರುಷ ಬದುಕು ಆಸೆ ಕಂಡೇ
--------------------------------------------------------------------------------------------------------------------------

ಅಜ್ಞಾತವಾಸ (೧೯೮೪)
ಸಂಗೀತ : ರಮೇಶನಾಯ್ಡು ಸಾಹಿತ್ಯ : ಚಿ.ಉದಯಶಂಕರ, ಗಾಯನ : ಪಿ.ಸುಶೀಲಾ 

ಏಕೆ ಹೇಳು ಏಕೆ
ಏಕೆ ಹೇಳು ಏಕೆ  ಅರಳಿದ ಮೊಗವು ಮೊಗ್ಗಾಯಿತೇಕೆ
ಅಂದದ ಕಣ್ಣು ಕೆಂಪಾಯಿತೇಕೆ
ಎಂದೂ ಕಾಣದ ಮೌನವು ಏಕೆ ... ಏಕೆ
ಏಕೆ ಹೇಳು ಏಕೆ.. ಏಕೆ ಹೇಳು ಏಕೆ

ಬಿರುಗಾಳಿ ಆದರೆ ಬಾಳಲಿ ತಂಗಾಳಿ ಆಗಿ ಬಾರೋ
ಉರಿಬೆಂಕಿ ಆಗದೇ ಕೋಪದಿ ಕಿರು ಜ್ಯೋತಿ ಆಗಿ ಬಾರೋ...
ನಗೆಯ ಬೆಳಕ ಚೆಲ್ಲಿ ಮನದಿ  
ನಗೆಯ ಬೆಳಕ ಚೆಲ್ಲಿ ಮನದಿ ಆನಂದ ತುಂಬು ಜಾಣ 
ಏಕೆ ಹೇಳು ಏಕೆ
ಏಕೆ ಹೇಳು ಏಕೆ  ಅರಳಿದ ಮೊಗವು ಮೊಗ್ಗಾಯಿತೇಕೆ
ಅಂದದ ಕಣ್ಣು ಕೆಂಪಾಯಿತೇಕೆ
ಎಂದೂ ಕಾಣದ ಮೌನವು ಏಕೆ ... ಏಕೆ
ಏಕೆ ಹೇಳು ಏಕೆ... ಏಕೆ ಹೇಳು ಏಕೆ

ನೀ ಮಾತನಾಡದೇ ಹೋದರೇ ನೋವನ್ನು ನಾ ತಾಳಲಾರೇ..
ನೀ ದೂರವಾದರೇ ನನ್ನಿಂದಾ ಅರೆಕ್ಷಣ ಬದುಕಿರಲಾರೇ...
ಸನಿಹ ಬಂದು ಒಂದೇ ಒಂದು    
ಸನಿಹ ಬಂದು ಒಂದೇ ಒಂದು ಸವಿ ಮಾತನಾಡು ಜಾಣ 
ಏಕೆ ಹೇಳು ಏಕೆ
ಏಕೆ ಹೇಳು ಏಕೆ  ಅರಳಿದ ಮೊಗವು ಮೊಗ್ಗಾಯಿತೇಕೆ
ಅಂದದ ಕಣ್ಣು ಕೆಂಪಾಯಿತೇಕೆ
ಎಂದೂ ಕಾಣದ ಮೌನವು ಏಕೆ ... ಏಕೆ
ಏಕೆ ಹೇಳು ಏಕೆ... ಏಕೆ ಹೇಳು ಏಕೆ 
--------------------------------------------------------------------------------------------------------------------------

ಅಜ್ಞಾತವಾಸ (೧೯೮೪)
ಸಂಗೀತ : ರಮೇಶನಾಯ್ಡು ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಶೈಲಜ 

ಕೋರಸ್ :  ಲಾ..ಲಾ ಲಾ..ಲಾ ಲಾ..ಲಾ ಲಾ..ಲಾ
ಹೆಣ್ಣು : ಇದು ಮನ್ಮಥ ನಡೆವಾ ದಾರಿ....
          ಇದು ಪ್ರಪಂಚ ನಡೆವ ದಾರಿ
          ಹೂಗಳ ಹಾಸಿದೇ.. ಕಂಪನು ಚೆಲ್ಲಿದೇ..
          ಹೂಗಳ ಹಾಸಿದೇ.. ಕಂಪನು ಚೆಲ್ಲಿದೇ..
          ಕೋಗಿಲೆ ಹಾಡುತಾ ಸಾಕಾರ ಎಂಬುದೇ
          ಆದರೂ ಎಚ್ಚರಿಕೇ... (ತುರುತ್ತು)
          ಗೆಳೆಯ ಎಚ್ಚರಿಕೇ..  ಗೆಳೆಯ ಎಚ್ಚರಿಕೇ..

ಚಂದ್ರನು  ಚಂದ್ರಿಕೆ ತಂಪನು ತಂದರೂ
ಆಸೆಯ ಕೋರದಿರೂ.. ಆಸೆಯ ಕೋರದಿರೂ..
ಪ್ರೇಮದ ಮಂದಿರ ಊರಲಿ ಕಂಡರೂ
ನನ್ನನೂ ಅಪ್ಪದಿರೂ..  ನನ್ನನೂ ಅಪ್ಪದಿರೂ..
ಪ್ರೇಮದ ಮಂದಿ ನಡೆದರೇ ಎಲ್ಲಾ
ಪ್ರೇಮದ ಮಂದಿ ನಡೆದರೇ ಎಲ್ಲಾ
ನೋವಲೀ  ನೊಂದಿದರೂ..    ನೋವಲೀ  ನೊಂದಿದರೂ..
ಇದು ಮನ್ಮಥ ನಡೆವಾ ದಾರಿ.....
ಇದು ಪ್ರಪಂಚ ನಡೆವ ದಾರಿ
ಹೂಗಳ ಹಾಸಿದೇ.. ಕಂಪನು ಚೆಲ್ಲಿದೇ..
ಹೂಗಳ ಹಾಸಿದೇ.. ಕಂಪನು ಚೆಲ್ಲಿದೇ..
ಕೋಗಿಲೆ ಹಾಡುತಾ ಸಾಕಾರ ಎಂಬುದೇ
ಆದರೂ ಎಚ್ಚರಿಕೇ... (ತುರುತ್ತು)
ಗೆಳೆಯ ಎಚ್ಚರಿಕೇ..  ಗೆಳೆಯ ಎಚ್ಚರಿಕೇ..

ಹರಿಯುವ ನದಿಯು ತಿಳಿಯ ನೀರಲ್ಲವೋ 
ಹಲವರ ಕಣ್ಣೀರೂ.. ಹಲವರ ಕಣ್ಣೀರೂ.. 
ದೀಪವ ಗಾಳಿಯ ಬೀದಿಗೆ ಕೆಲವರ 
ವಿರಹದ ಬಿಸಿಉಸಿರೂ..  ವಿರಹದ ಬಿಸಿಉಸಿರೂ..  
ಪ್ರೇಮದ ಕಥೆಯೂ ಕೇಳಲು ಚೆನ್ನಾ...  ಪ್ರೇಮದ ಕಥೆಯೂ ಕೇಳಲು ಚೆನ್ನಾ... 
ಪ್ರೇಮಿಯಾಗದಿರೂ..  ಪ್ರೇಮಿಯಾಗದಿರೂ.. 
ಇದು ಮನ್ಮಥ ನಡೆವಾ ದಾರಿ.....
ಇದು ಪ್ರಪಂಚ ನಡೆವ ದಾರಿ
ಹೂಗಳ ಹಾಸಿದೇ.. ಕಂಪನು ಚೆಲ್ಲಿದೇ..
ಹೂಗಳ ಹಾಸಿದೇ.. ಕಂಪನು ಚೆಲ್ಲಿದೇ..
ಕೋಗಿಲೆ ಹಾಡುತಾ ಸಾಕಾರ ಎಂಬುದೇ
ಆದರೂ ಎಚ್ಚರಿಕೇ... (ತುರುತ್ತು)
ಗೆಳೆಯ ಎಚ್ಚರಿಕೇ..  ಗೆಳೆಯ ಎಚ್ಚರಿಕೇ..
--------------------------------------------------------------------------------------------------------------------------

No comments:

Post a Comment