1031. ಖದೀಮ ಕಳ್ಳರು ( ೧೯೮೨)



ಖದೀಮ ಕಳ್ಳರು ಚಿತ್ರದ ಹಾಡುಗಳು 
  1. ಕತ್ತಲು ತುಂಬಿದೆ 
  2. ಚೆಲುವೇ ಬಾ ಬಾ ಬಾ 
  3. ಆಸೆಯಿಂದ ಪ್ರೀತಿಯಿಂದ 
  4. ಎಂಥ ಚೆನ್ನ ನಿನ್ನ ಮೊರೆ 
  5. ಸ್ವರ್ಗ ಇಲ್ಲಿದೇ 
ಖದೀಮ ಕಳ್ಳರು ( ೧೯೮೨)
ಸಂಗೀತ : ಶಂಕರ ಗಣೇಶ,  ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ 

ಕತ್ತಲು ತುಂಬಿದೆ ಭಯವನು ತಂದಿದೇ
ದಾರಿಯ ಕಾಣದೇ ಹೆದರುತ ನಡುಗಿದೇ
ಓ... ಅಪಾಯ ಬಾ... ಹತ್ತಿರಾ ಇನ್ನೂ ಹತ್ತಿರಾ
ಕತ್ತಲು ತುಂಬಿದೆ ಭಯವನು ತಂದಿದೇ
ದಾರಿಯ ಕಾಣದೇ ಹೆದರುತ ನಡುಗಿದೇ

ಹೇಹೇಹೇಹೇಹೇಹೇಹೇಹೇಹೇಹೇಹೇಹೇ
ಎಲ್ಲಿಗೆ ಹೋಗಲಿ ಯಾರನ್ನೂ ನೋಡಲೀ
ಮನಸಿನ ಕಳವಳ ಯಾರಿಗೇ ಹೇಳಲೀ
ನಿದ್ದೆಯು ಕಣ್ಣಲ್ಲಿ ಆತುರಾ ಎದೆಯಲಿ
ಬೆವರಿನ ಹನಿಗಳು ಜಾರಿವೇ ಮೊಗದಲೀ
ಹೂವನ್ನು ಇನ್ನೆಂದು ನಾ ಬಿಟ್ಟು ಇರಲಾರೇ
ನಿನ್ನಿಂದ ಈ ಜೀವ ಬಿಡಲಾರೇ... ಬಾ
ಕತ್ತಲು ತುಂಬಿದೆ ಭಯವನು ತಂದಿದೇ
ದಾರಿಯ ಕಾಣದೇ ಹೆದರುತ ನಡುಗಿದೇ
(ಓ.ಓಓಓ .. ಅಪಾಯ.. ಅಪಾಯ) ಬಾ... ಹತ್ತಿರಾ ಇನ್ನೂ ಹತ್ತಿರಾ  
ಕತ್ತಲು ತುಂಬಿದೆ ಭಯವನು ತಂದಿದೇ
ದಾರಿಯ ಕಾಣದೇ ಹೆದರುತ ನಡುಗಿದೇ

ಚೆಲುವನ ಸ್ನೇಹಕೆ ಒಲವಿನ ಮಾತಿಗೆ 
ಅರಿಯದೇ ನನ್ನನ್ನೇ ನೀಡಿದೇ ಕಾಣಿಕೆ 
ಸಿರಿಯನು ನೂಕಿದೇ ಗೆಳೆಯನ ಸೇರಿದೆ 
ಸ್ವರ್ಗವ ನೋಡಿದ ಹರುಷದಿ ತೇಲಿದೆ.. 
ನಾ ಕಂಡ ಆನಂದ ಮಣ್ಣಲ್ಲಿ ಮಣ್ಣಾಯ್ತು 
ಎದುರಲ್ಲಿ ಯಮರಾಯ ಬಂದಂತೇ ಕನಸಾಯ್ತು.. ಬಾ.. 
ಕತ್ತಲು ತುಂಬಿದೆ ಭಯವನು ತಂದಿದೇ
ದಾರಿಯ ಕಾಣದೇ ಹೆದರುತ ನಡುಗಿದೇ
(ಓ.ಓಓಓ .. ಅಪಾಯ.. ಅಪಾಯ) ಬಾ... ಹತ್ತಿರಾ ಇನ್ನೂ ಹತ್ತಿರಾ  
ಕತ್ತಲು ತುಂಬಿದೆ ಭಯವನು ತಂದಿದೇ
ದಾರಿಯ ಕಾಣದೇ ಹೆದರುತ ನಡುಗಿದೇ
------------------------------------------------------------------------------------------------------------------------- 
ಖದೀಮ ಕಳ್ಳರು ( ೧೯೮೨)
ಸಂಗೀತ : ಶಂಕರ ಗಣೇಶ,  ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ. 

ಸುಬಿಯಾ ಸುಬಿಯಾ ಸುಬಿಯಾ ಸುಬಿಯಾ ಸುಬಿಸುಬಿಯಾ
ಸುಬಿಯಾ ಸುಬಿಯಾ ಸುಬಿಯಾ ಸುಬಿಯಾ ಸುಬಿಸುಬಿಯಾ ತರರಪ್ಪಪ್ಪಾ
ಚೆಲುವೇ  ಬಾ..ಬಾ.. ಬಾ...ಬಾ..
ಗೆಳತೀ ಬಾ...ಬಾ ... ಬಾ.... ಬಾ...
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಕಂಡು ಸೋತು ಹೋದೇ ಚಿನ್ನಾ
ಬಂದೇ ಸೇರಲೆಂದೇ ನಿನ್ನಾ
ಕಂಡು ಸೋತು ಹೋದೇ ಚಿನ್ನಾ
ಬಂದೇ ಸೇರಲೆಂದೇ ನಿನ್ನಾ
ಚೆಲುವೇ  ಬಾ..ಬಾ.. ಬಾ...ಬಾ..
ಗೆಳತೀ ಬಾ...ಬಾ ... ಬಾ.... ಬಾ...  
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಕಂಡು ಸೋತು ಹೋದೇ ಫಿಫ್ಟಿ
ಬಂದೇ ಕೆಳದೆಂದು ಫಿಫ್ಟಿ
ಕಂಡು ಸೋತು ಹೋದೇ ಫಿಫ್ಟಿ
ಬಂದೇ ಕೆಳದೆಂದು ಫಿಫ್ಟಿ 

ಪಬಬಪಪಪಪ  ಪೆಬಬಪಪಪಪ  ನಿದಮ ಪಪ 
(ಪಬಬಪಪಪಪ  ಪೆಬಬಪಪಪಪ ನಿದಮ ಪಪ)
ನಿದಮ ಪಗಸರಿ ಸನಿದನಿದನಿ ನಿದನಿ ನಿದನಿ 
(ನಿದಮ ಪಗಸರಿ ಸನಿದನಿದನಿ ನಿದನಿ ನಿದನಿ )
ದನಿಸ (ದನಿಸ ) ನಿಸಗ (ನಿಸಗ) ಗಮಗ ಗಮಗ 
(ಗಮಗ ಗಮಗ )ಸಸನಿ (ಪಪಮ) ಮಾಗನಿಸ ಗಮನಿ  
ದರಿಸರಿಸರಿಗಮ  ದರಿಸರಿಸರಿಗಮ  ದರಿಸರಿಸಗ 
ಕಮಲಗಳು ಈ ನಯನಗಳು ಹವಳಗಳು ಈ ಅಧರಗಳು 
ನಿನ್ನಂಥ ಹೆಣ್ಣ ಕಾಣೇನೂ ಸುಂದರಿ ನಿನ್ನನ್ನು ಬಿಟ್ಟು ಹೋಗೆನು
ಶಬರಿಬಾಬಾರಿಬಾಬಾ 
ಕಮಲಗಳು ಈ ನಯನಗಳು ಹವಳಗಳು ಈ ಅಧರಗಳು 
ನಿನ್ನಂಥ ಹೆಣ್ಣ ಕಾಣೇನೂ ಸುಂದರಿ ನಿನ್ನನ್ನು ಬಿಟ್ಟು ಹೋಗೆನು
ನೋಟವು ಮಿಂಚಿನ ಹಾಗೇ ಅದೇನೂ ಚೆಂದವೋ 
ಆಟವು ಜಿಂಕೆಯ ಹಾಗೇ ಅದೇನೂ ಅಂದವೋ ಹ್ಹಾಂ 
ನೋಟವು ಮಿಂಚಿನ ಹಾಗೇ ಅದೇನೂ ಚೆಂದವೋ 
ಆಟವು ಜಿಂಕೆಯ ಹಾಗೇ ಅದೇನೂ ಅಂದವೋ 
ಚೆಲುವೇ  ಬಾ..ಬಾ.. ಬಾ...ಬಾ..
ಗೆಳತೀ ಬಾ...ಬಾ ... ಬಾ.... ಬಾ...  
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಕಂಡು ಸೋತು ಹೋದೇ ಫಿಫ್ಟಿ
ಬಂದೇ ಕೆಳದೆಂದು ಫಿಫ್ಟಿ
ಕಂಡು ಸೋತು ಹೋದೇ ಫಿಫ್ಟಿ
ಬಂದೇ ಕೆಳದೆಂದು ಫಿಫ್ಟಿ 
ಕಂಡು ಸೋತು ಹೋದೇ ಚಿನ್ನಾ
ಬಂದೇ ಸೇರಲೆಂದೇ ನಿನ್ನಾ

ಹೊಳೆಯುತಿದೆ ಬಾ ಎನ್ನುತಿದೇ ಕರಗಳನು ಆಹ್ಹಾ ಕೆಣುಕುತಿದೆ 
ನಿನ್ನನ್ನು ನೋಡುವ ಆಸೆಯೂ ಮೆಲ್ಲನೇ ಕೈಯಿಂದ ಮುಟ್ಟೋ ಆಸೆಯೋ 
ಶಬರಬರಬರಬರಬ  
ಹೊಳೆಯುತಿದೆ ಬಾ ಎನ್ನುತಿದೇ ಕರಗಳನು ಆಹ್ಹಾ ಕೆಣುಕುತಿದೆ 
ಹ್ಹಾಂ ..  ನಿನ್ನನ್ನು ನೋಡುವ ಆಸೆಯೂ ಮೆಲ್ಲನೇ ಕೈಯಿಂದ ಮುಟ್ಟೋ ಆಸೆಯೋ 
ಕಾಣದೇ ಹೋಯಿತೇ ಅಯ್ಯೋ ಅದೇನೋ ಮಾಯೆವೋ  
ಬಲ್ಲನೇ ಠಕ್ಕನೇ ನಾನು  ಇದ್ಯಾರ ಮೋಸವೋ 
ಕಾಣದೇ ಹೋಯಿತೇ ಅಯ್ಯೋ ಅದೇನೋ ಮಾಯೆವೋ  
ಬಲ್ಲನೇ ಠಕ್ಕನೇ ನಾನು  ಇದ್ಯಾರ ಮೋಸವೋ 
ಚೆಲುವೇ  ಬಾ..ಬಾ.. ಬಾ...ಬಾ..
ಗೆಳತೀ ಬಾ...ಬಾ ... ಬಾ.... ಬಾ...
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಕಂಡು ಸೋತು ಹೋದೇ ಚಿನ್ನಾ
ಬಂದೇ ಸೇರಲೆಂದೇ ನಿನ್ನಾ
ಕಂಡು ಸೋತು ಹೋದೇ ಚಿನ್ನಾ
ಬಂದೇ ಸೇರಲೆಂದೇ ನಿನ್ನಾ
ಕಂಡು ಸೋತು ಹೋದೇ ಫಿಫ್ಟಿ  
ಬಂದೇ ಕೆಳದೆಂದು ಫಿಫ್ಟಿ
ಕಂಡು ಸೋತು ಹೋದೇ ಫಿಫ್ಟಿ
ಬಂದೇ ಕೆಳದೆಂದು ಫಿಫ್ಟಿ 
ಲಲ್ಲಲ್ಲಲಾ 
-------------------------------------------------------------------------------------------------------------------------

ಖದೀಮ ಕಳ್ಳರು ( ೧೯೮೨)
ಸಂಗೀತ : ಶಂಕರ ಗಣೇಶ,  ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ. 

ಆಸೆಯಿಂದ ಪ್ರೀತಿಯಿಂದ ನನ್ನದು ಎಂಬ ಭಾವನೆಯಿಂದ
ನೋಡಿದರೇ ಸಾಕು ಕೈಯಲ್ಲಿ ಮುಟ್ಟಿದರೆ ಸಾಕು
ಆಸೆಯಿಂದ ಪ್ರೀತಿಯಿಂದ ನನ್ನದು ಎಂಬ ಭಾವನೆಯಿಂದ
ನೋಡಿದರೇ ಸಾಕು ಕೈಯಲ್ಲಿ ಮುಟ್ಟಿದರೆ ಸಾಕು

ಇಂದೇಕೆ ನನ್ನ ಮೇಲೆ ಈ ಕೋಪವೂ 
ನನ್ನಲ್ಲಿ ಏನಿಂಥ ಬಿಗುಮಾನವೂ 
ಇಂದೇಕೆ ನನ್ನ ಮೇಲೆ ಈ ಕೋಪವೂ 
ನನ್ನಲ್ಲಿ ಏನಿಂಥ ಬಿಗುಮಾನವೂ 
ಜೊತೆಯಲ್ಲಿ ಇರುವಾಗ ಈ ಮೌನವೂ ಹ್ಹಾಂ..  
ಸರಿಯಲ್ಲಾ ಈ ನಿನ್ನ ಹುಡುಗಾಟವೂ 
ಒಲವಿಂದ ಬಾ ಚಿನ್ನಾ ತೋಳಿಂದ ಬಳಸೆನ್ನಾ 
ಒಲವಿಂದ ಬಾ ಚಿನ್ನಾ ತೋಳಿಂದ ಬಳಸೆನ್ನಾ 
ಕಣ್ಣಲ್ಲಿ ಕಣ್ಣ ಬೆರೆಸುತ ನನ್ನಾ ನೋಡಿದರೇ ಸಾಕು 
ಹೂ ನಗೆ ಚೆಲ್ಲಿದರೆ ಸಾಕೂ 
ಆಸೆಯಿಂದ...  ರಪ್ಪಪ್ಪಾಪ್ಪಪ್ಪಪ್ಪಪ್ಪಾ
ಪ್ರೀತಿಯಿಂದ ರಪ್ಪಪ್ಪಾಪ್ಪಪ್ಪಪ್ಪಪ್ಪಪ್ಪಾ
ನನ್ನದು ಎಂಬ ಭಾವನೆಯಿಂದ ನೋಡಿದರೇ ಸಾಕು
ಕೈಯಲ್ಲಿ ಮುಟ್ಟಿದರೆ ಹಹ್ಹಹ್ಹಾ 

ತಂಗಾಳಿ ಮೈ ಸೋಕಿ ಚಳಿಯಾಗಿದೆ 
ಈ ಒಂಟಿ ಬಾಳಿನ್ನೂ ಸಾಕಾಗಿದೇ 
ಸಂಗಾತಿ ನಿನಗಿಂದು ಏನಾಗಿದೇ 
ಹೂವಂಥ ಮನಸೇಕೆ ಕಲ್ಲಾಗಿದೇ 
ಈ ದೂರ ನಮಗೇಕೆ ಈ ವಿರಹ ಇನ್ನೇಕೇ 
ಓಡುತ ಬಂದು ಬಳಿಯಲಿ ನಿಂದು 
ಪ್ರೇಮದ ಮಾತಾಡು ಪ್ರೀತಿಯ ಕಾಣಿಕೆಯಾ ನೀಡು 
ಆಸೆಯಿಂದ...  ತರತರತರತರ
ಪ್ರೀತಿಯಿಂದ ತರತರತರತರ
ನನ್ನದು ಎಂಬ ಭಾವನೆಯಿಂದ ನೋಡಿದರೇ ಸಾಕು
ಕೈಯಲ್ಲಿ ಮುಟ್ಟಿದರೆ ಹ್ಹುಹ್ಹು 

ಬೇರೊಂದು ಹೂವೇಕೋ ಹೂ ಬಳ್ಳಿಗೆ 
ಶೃತಿ ಏಕೆ ಕೋಗಿಲೆಯ ಸಂಗೀತಕೆ  ಹ್ಹಾಹ್ಹಾ 
ಬೇರೊಂದು ಹೂವೇಕೋ ಹೂ ಬಳ್ಳಿಗೆ 
ಶೃತಿ ಏಕೆ ಕೋಗಿಲೆಯ ಸಂಗೀತಕೆ  
ನೀ ಚೆಲುವೆ ಈ ಒಡವೇ ಇನ್ನೇತಕೇ 
ಬಂಗಾರಿ ಬಂಗಾರ ನಿನಗೇತಕೆ 
ನಮ್ಮೊಲವೇ ಆಭರಣ ಆನಂದ ಈ ಮಿಲನ 
ನಮ್ಮೊಲವೇ ಆಭರಣ ಆನಂದ ಈ ಮಿಲನ 
ಎಂದಿಗೂ ಹೀಗೆ ನಾವ್ ಒಂದಾಗಿ 
ಬಾಳಿದರೇ ಸಾಕು ಬೇರೆ ಇನ್ನೇನು ಬೇಕೂ 
ಆಸೆಯಿಂದ...  ತರತರತರತರ
ಪ್ರೀತಿಯಿಂದ ರರರರರ
ನನ್ನದು ಎಂಬ ಭಾವನೆಯಿಂದ ನೋಡಿದರೇ ಸಾಕು
ಕೈಯಲ್ಲಿ ಮುಟ್ಟಿದರೆ ಹ್ಹಹ್ಹಹ್ಹ 
-------------------------------------------------------------------------------------------------------------------------

ಖದೀಮ ಕಳ್ಳರು ( ೧೯೮೨)
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ. ಎಸ್.ಜಾನಕೀ  

ಕೋರಸ್ :  ಹೈ... ಹೈ... ಹೈ .... ಲಲಲ್ಲಲ್ಲಲ್ಲಾ 
ಹೆಣ್ಣು : ಎಂಥ ಚೆನ್ನ ನಿನ್ನ ಮೋರೆ ಓ ರಂಗಣ್ಣಾ 
          ಎಂಥ ಚೆನ್ನ ನಿನ್ನ ಮೋರೆ ಓ ರಂಗಣ್ಣಾ (ಹೊಯ್ )
          ಕಣ್ಣಿಗಿಂತ ಮೂಗು ಚೆನ್ನಾ ಮೂಗಿಗಿಂತ ಬಾಯಿ ಚೆನ್ನಾ 
          ಇಂಥ ಅಂದವ ಕಂಡಿಲ್ಲಾ ಓ ನನ್ನ ರಾಜಾ ಆಸೆ ತಡೆಯೋಕೇ ಆಗಲ್ಲಾ 
ಗಂಡು : ಅಯ್ಯಯ್ಯಯ್ಯೊ  ಎಂಥ ಚೆನ್ನ ನಿನ್ನ ಮೋರೆ ಓ ಗಂಗಮ್ಮಾ 
          ಎಂಥ ಚೆನ್ನ ನಿನ್ನ ಮೋರೆ ಓ ಗಂಗಮ್ಮಾ 
          ಕಣ್ಣಿಗಿಂತ ಮೂಗು ಚೆನ್ನಾ ಮೂಗಿಗಿಂತ ಬಾಯಿ ಚೆನ್ನಾ 
          ಇಂಥ ಅಂದವ ಕಂಡಿಲ್ಲಾ ಓ ನನ್ನ ರಾಣಿ ಆಸೆ ತಡೆಯೋಕೇ ಆಗಲ್ಲಾ 

ಕೋರಸ್ : ಆ ಆ ಆ ಅ ಅ ಅ ಆ ಆ ಆ ಅ ಅ ಅ 
ಹೆಣ್ಣು : ಅಲ್ಲಿ ಇಲ್ಲಿ ಹೋಗಲಾರೇ ಇನ್ನೆಂದು ಬಿಟ್ಟು ನಿನ್ನನ್ನು 
          ಪ್ರಾಣಕ್ಕಿಂತಾ ಹೆಚ್ಚು ನೀನು ನನ್ನಾಣೆ ನಂಬು ನನ್ನನ್ನೂ 
          ಅಲ್ಲಿ ಇಲ್ಲಿ ಹೋಗಲಾರೇ ಇನ್ನೆಂದು ಬಿಟ್ಟು ನಿನ್ನನ್ನು 
          ಪ್ರಾಣಕ್ಕಿಂತಾ ಹೆಚ್ಚು ನೀನು ನನ್ನಾಣೆ ನಂಬು ನನ್ನನ್ನೂ 
ಗಂಡು : ಓ.. ನಿನ್ನ ಮಾತು ಮೀರಲ್ಲಾ ಇನ್ನೂ ಹೀಗೆ ಮಾಡಲ್ಲಾ 
           ನಿನ್ನ ಮಾತು ಮೀರಲ್ಲಾ ಇನ್ನೂ ಹೀಗೆ ಮಾಡಲ್ಲಾ 
           ಭೀತಿಯ ನೀ ಬೀಡೆ ಮುದ್ದು ಗಂಗಮ್ಮಾ ಗಂಗಮ್ಮಾ 
           ಭೀತಿಯ ನೀ ಬೀಡು ಮುದ್ದು ಗಂಗಮ್ಮಾ 
ಹೆಣ್ಣು : ಎಂಥ ಚೆನ್ನ ನಿನ್ನ ಮೋರೆ ಓ ರಂಗಣ್ಣಾ 
ಗಂಡು : ಅಯ್ಯಯ್ಯಯ್ಯೊ  ಎಂಥ ಚೆನ್ನ ನಿನ್ನ ಮೋರೆ ಓ ಗಂಗಮ್ಮಾ 
ಹೆಣ್ಣು :  ಕಣ್ಣಿಗಿಂತ ಮೂಗು ಚೆನ್ನಾ ಮೂಗಿಗಿಂತ ಬಾಯಿ ಚೆನ್ನಾ 
ಗಂಡು : ಇಂಥ ಅಂದವ ಕಂಡಿಲ್ಲಾ ಓ ನನ್ನ ರಾಣಿ ಆಸೆ ತಡೆಯೋಕೇ ಆಗಲ್ಲಾ  ಆಗಲ್ಲಾ 

ಗಂಡು : ಲಲಲಲ್ಲಲ್ಲಾ ಲಲ್ಲಲ್ಲಲ್ಲಾ    ಹೆಣ್ಣು : ಲಲಲಲ್ಲಲ್ಲಾ 
ಗಂಡು : ಡಡಡಟಣಣಾ  ಇಬ್ಬರೂ : ಲಾಲಾಲಾಲಾ 
ಗಂಡು : ತೋಳವೊಂದು ತಿನ್ನಲೆಂದೂ ಓಡೋಡಿ ಬಂತು ಹಿಂದೆನೇ 
            ಬೇಟೆ ಆಡೋ ಸಮಯವಲ್ಲಾ  ನಾ ಹೀಗೆ ಬಂದೇ ಓ ಹೆಣ್ಣೇ 
            ತೋಳವೊಂದು ತಿನ್ನಲೆಂದೂ ಓಡೋಡಿ ಬಂತು ಹಿಂದೆನೇ 
            ಬೇಟೆ ಆಡೋ ಸಮಯವಲ್ಲಾ  ನಾ ಹೀಗೆ ಬಂದೇ ಓ ಹೆಣ್ಣೇ 
ಹೆಣ್ಣು :  ಇನ್ನು ಚಿಂತೆ ಬೇಕಿಲ್ಲಾ ಯಾರ ಭಯವೂ ನಮಗಿಲ್ಲಾ 
           ಇನ್ನು ಚಿಂತೆ ಬೇಕಿಲ್ಲಾ ಯಾರ ಭಯವೂ ನಮಗಿಲ್ಲಾ 
           ಸೇರುವ ಊರನು ಬಾರೋ ರಂಗಣ್ಣಾ ಹೇ.. 
           ಸೇರುವ ಊರನು ಬಾರೋ ರಂಗಣ್ಣಾ 
ಗಂಡು :ಎಂಥ ಚೆನ್ನ ನಿನ್ನ ಮೋರೆ ಓ ಗಂಗಮ್ಮಾ 
ಹೆಣ್ಣು : ಎಂಥ ಚೆನ್ನ ನಿನ್ನ ಮೋರೆ ಓ ರಂಗಣ್ಣಾ 
ಗಂಡು :  ಕಣ್ಣಿಗಿಂತ ಮೂಗು ಚೆನ್ನಾ ಮೂಗಿಗಿಂತ ಬಾಯಿ ಚೆನ್ನಾ 
ಗಂಡು :  ಇಂಥ ಅಂದವ ಕಂಡಿಲ್ಲಾ ಓ ನನ್ನ ರಾಜಾ ಆಸೆ ತಡೆಯೋಕೇ ಆಗಲ್ಲಾ 
             ಅರೆರೆರೆರೇ ಅಹ್ಹಹ್ಹಹ್ಹಾ ಅಹ್ಹಹ್ಹಾ ಹೊಯ್ ಹೊಯ್ ಹೊಯ್ 
ಕೋರಸ್ : ಡ ಡ ಡ ಡ ಡ ಡ ಡ ಡ ಡ ಡ ಡ ಡ ಡ ಡ ಡ ಡ ಡ ಡ ಡ 
ಗಂಡು :  ಕಣ್ಣಿಗಿಂತ ಮೂಗು ಚೆನ್ನಾ   ಹೆಣ್ಣು : ಮೂಗಿಗಿಂತ ಬಾಯಿ ಚೆನ್ನಾ 
ಗಂಡು : ಬಾಯಿಗಿಂತ ಮೂಗು ಚೆನ್ನಾ  ಹೆಣ್ಣು : ಮೂಗಿಗಿಂತ ಬಾಯಿ ಚೆನ್ನಾ 
ಗಂಡು :  ಕಣ್ಣಿಗಿಂತ ಮೂಗು ಚೆನ್ನಾ   ಹೆಣ್ಣು : ಮೂಗಿಗಿಂತ ಬಾಯಿ ಚೆನ್ನಾ 
ಗಂಡು :  ಕಣ್ಣಿಗಿಂತ ಮೂಗು ಚೆನ್ನಾ   ಹೆಣ್ಣು : ಮೂಗಿಗಿಂತ ಬಾಯಿ ಚೆನ್ನಾ 
ಗಂಡು : ಬಾಯಿಗಿಂತ ಮೂಗು ಚೆನ್ನಾ  ಹೆಣ್ಣು : ಮೂಗಿಗಿಂತ ಬಾಯಿ ಚೆನ್ನಾ 
 ಗಂಡು :  ಕಣ್ಣಿಗಿಂತ ಮೂಗು ಚೆನ್ನಾ   ಹೆಣ್ಣು : ಮೂಗಿಗಿಂತ ಬಾಯಿ ಚೆನ್ನಾ 
-------------------------------------------------------------------------------------------------------------------------

ಖದೀಮ ಕಳ್ಳರು ( ೧೯೮೨)
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ  

ಕೋರಸ್ :  ಪಬಬಪ.. ಪಬರರ  ಪಬಬಪ.. ಪಬರರ  
                ಪಬಬಪ.. ಪಬರರ  ಪಬಬಪ.. ಪಬರರ 
ಹೆಣ್ಣು : ಸ್ವರ್ಗ ಇಲ್ಲಿದೇ ನೋಡು ನಿನ್ನ ಕೂಗಿದೆ ಲಲ್ಲಲ್ಲಲಾ ಲಲ್ಲಲ್ಲಲಾ 
          ಸ್ವರ್ಗ ಇಲ್ಲಿದೇ ನೋಡು ನಿನ್ನ ಕೂಗಿದೆ
          ನೆಮ್ಮದಿ ಶಾಂತಿ ತುಂಬಿದೆ ಅಲ್ಲಿ ನಿನಗೆ ತಿಳಿಯದೇ 
          ಇನ್ನೂ ಚಿಂತೇ ಏನಿದೇ    
          ಸ್ವರ್ಗ ಇಲ್ಲಿದೇ ನೋಡು ನಿನ್ನ ಕೂಗಿದೆ

ಕೋರಸ್ : ಹೇ ಹೇ ಹೇ ಹೇ ಹೇ ಹೇಹೇಹೇ 
               ಹೇ ಹೇ ಹೇ ಹೇ ಹೇ ಹೇಹೇಹೇ 
ಹೆಣ್ಣು : ಹಣ್ಣಿನ ಸಿಪ್ಪೇಯ ತೆಗೆಯುವ ಹಾಗೇ ಚರ್ಮ ಸುಲಿಯಲೇ ಅಹ್ಹಹ್ಹಹ್ಹಾ 
          ಹಣ್ಣಿನ ಸಿಪ್ಪೇಯ ತೆಗೆಯುವ ಹಾಗೇ ಚರ್ಮ ಸುಲಿಯಲೇ 
          ಸ್ವರ್ಗ ಇಲ್ಲಿದೇ ನೋಡು ನಿನ್ನ ಕೂಗಿದೆ
          ನೆಮ್ಮದಿ ಶಾಂತಿ ತುಂಬಿದೆ ಅಲ್ಲಿ ನಿನಗೆ ತಿಳಿಯದೇ 
          ಇನ್ನೂ ಚಿಂತೇ ಏನಿದೇ    
          ಸ್ವರ್ಗ ಇಲ್ಲಿದೇ ನೋಡು ನಿನ್ನ ಕೂಗಿದೆ

ಹೆಣ್ಣು : ಸ್ವರ್ಗದ ಕಡೆಗೆ ಜಾರುವ ಬಗೆಯ ಹೀಗೆಯೇ ತಿಳಿದಿಕೋ 
          ಹೇ..  ಸ್ವರ್ಗದ ಕಡೆಗೆ ಜಾರುವ ಬಗೆಯ ಹೀಗೆಯೇ ತಿಳಿದಿಕೋ 
          ಮೂರೇ ನಿಮಿಷದ ಕಥೆಯ ಮುಗಿಸುವೇ ಜಾಣ ತಡೆದುಕೋ 
          ಮೂರೇ ನಿಮಿಷದ ಕಥೆಯ ಮುಗಿಸುವೇ ಜಾಣ ತಡೆದುಕೋ 
ಕೋರಸ್ : ಸ್ನೇಹದಿಂದ ಜೀವಾ (ಹ್ಹ )ಬೇರೆಯಾಗಿ ಮಾಡಿ (ಹ್ಹ )
              ಪ್ರಾಣ ಪಕ್ಷಿ ಹಾರಿ (ಹ್ಹ ) ಹೋಗುವಂತೇ ಮಾಡಿ (ಹ್ಹ )
ಹೆಣ್ಣು : ನಿನ್ನಾ ಕೊಲ್ಲುವೇ ಸ್ವರ್ಗದ ಬಳಿಗೆ ನೂಕುವೇ ಹೇ..ಹೇ..ಹೇ.. 
          ಸ್ವರ್ಗ ಇಲ್ಲಿದೇ ನೋಡು ನಿನ್ನ ಕೂಗಿದೆ
          ನೆಮ್ಮದಿ ಶಾಂತಿ ತುಂಬಿದೆ ಅಲ್ಲಿ ನಿನಗೆ ತಿಳಿಯದೇ 
          ಇನ್ನೂ ಚಿಂತೇ ಏನಿದೇ    
          ಸ್ವರ್ಗ ಇಲ್ಲಿದೇ ನೋಡು ನಿನ್ನ ಕೂಗಿದೆ
-------------------------------------------------------------------------------------------------------------------------

No comments:

Post a Comment