1035. ಬಂಗಾರದ ಕಳ್ಳ (೧೯೭೩)

ಬಂಗಾರದ ಕಳ್ಳ ಚಿತ್ರದ ಹಾಡುಗಳು 
  1. ಜೀವನ ಮೋಜಿನ ಆಟ 
  2. ಬಾ ಬಾ ಓ ರಾಜ 
  3. ಹೃದಯಕೆ ಕಣ್ಣೇ ಸಾಕ್ಷಿ 
ಬಂಗಾರದ ಕಳ್ಳ (೧೯೭೩)
ಸಂಗೀತ : ಸತ್ಯಂ ಸಾಹಿತ್ಯ: ಆರ್.ಏನ್.ಜಯಗೋಪಾಲ್ ಗಾಯನ : ಎಸ್.ಪಿ.ಬಿ. 

ಹೈ...  ಜೀವನ ಮೋಜಿನ ಆಟ ದಿನ ದಿನ ಹೊಸ ನೋಟ
ಓ..ನಿನ್ನೆಯ ನೆನಪು ನಾಳೆಯ ಚಿಂತೆ ಎರಡು ನಮಗೆ ಬೇಕಿಲ್ಲಾ
ಓ..  ಜೀವನ ಮೋಜಿನ ಆಟ ದಿನ ದಿನ ಹೊಸ ನೋಟ
ಓ..ನಿನ್ನೆಯ ನೆನಪು ನಾಳೆಯ ಚಿಂತೆ ಎರಡು ನಮಗೆ ಬೇಕಿಲ್ಲಾ
ಅರೇ ಓಡಲೇ ಓಡಲೇ ಓ... ಓಡಲೇ ಓಡಲೇ ಓ... 
ಓಡಲೇ ಓಡಲೇ ಓ... ಓಡಲೇ ಓಡಲೇ ಓ... 

ಅಹ್ಹಹ್ಹಾ.. ಹೇಹೇಹೇ...  ಅಹ್ಹಹ್ಹಾ...  ಓಹೋಹೋ.. ಅಹ್ಹಹ್ಹಾ... 
ನಗುತ ಬದುಕು ನಗುತ ತೆರಳು ಇದುವೇ ನಮ್ಮಯ ನೀತಿ
ನೋವು ನೂರು ಸಹಿಸಿ ನಗುವ ಛಲವೇ ನಮ್ಮಯ ರೀತಿ
ಹೇ... ನಗುತ ಬದುಕು ನಗುತ ತೆರಳು ಇದುವೇ ನಮ್ಮಯ ನೀತಿ
ನೋವು ನೂರು ಸಹಿಸಿ ನಗುವ ಛಲವೇ ನಮ್ಮಯ ರೀತಿ
ಸುಳ್ಳು ಮೋಸ ಕಳ್ಳ ಕಪಟ ಇದರ ಅರಿವೇ ನಮಗಿಲ್ಲಾ
ಜೀವನ ಮೋಜಿನ ಆಟ ದಿನ ದಿನ ಹೊಸ ನೋಟ
ಓ..ನಿನ್ನೆಯ ನೆನಪು ನಾಳೆಯ ಚಿಂತೆ ಎರಡು ನಮಗೆ ಬೇಕಿಲ್ಲಾ
ಅರೇ ಓಡಲೇ ಓಡಲೇ ಓ... ಓಡಲೇ ಓಡಲೇ ಓ... 
ಓಡಲೇ ಓಡಲೇ ಓ... ಓಡಲೇ ಓಡಲೇ ಹೊಯ್ ... 

ಅಹ್ಹಹ್ಹಾ.. ಹೇಹೇಹೇ...  ಅಹ್ಹಹ್ಹಾ...  ಅಹ್ಹಹ್ಹಾ... ಹೂಂಹೂಂಹೂಂ 
ಸಾಧಿಸಲಾಗದ ಸಾಹಸ ಕಾರ್ಯ ನಮಗೆ ಯಾವುದು ಇಲ್ಲಾ 
ಸೋಲು ಎನುವಾ ಮಾತಿನ ಅರ್ಥ ನಾವೂ ಕಂಡೆ ಇಲ್ಲಾ 
ಹೇ... ಸಾಧಿಸಲಾಗದ ಸಾಹಸ ಕಾರ್ಯ ನಮಗೆ ಯಾವುದು ಇಲ್ಲಾ 
ಸೋಲು ಎನುವಾ ಮಾತಿನ ಅರ್ಥ ನಾವೂ ಕಂಡೆ ಇಲ್ಲಾ 
ದಾರಿಯ ಎದುರು ಏನೇ ಬರಲಿ ಅಂಜುವ ಭೂಪರು ನಾವೆಲ್ಲಾ 
ಜೀವನ ಮೋಜಿನ ಆಟ ದಿನ ದಿನ ಹೊಸ ನೋಟ
ಓ..ನಿನ್ನೆಯ ನೆನಪು ನಾಳೆಯ ಚಿಂತೆ ಎರಡು ನಮಗೆ ಬೇಕಿಲ್ಲಾ
ಅರೇ ಓಡಲೇ ಓಡಲೇ ಓ... ಓಡಲೇ ಓಡಲೇ ಓ... 
ಓಡಲೇ ಓಡಲೇ ಓ... ಹ್ಹಾ.. ಹ್ಹಾ.. ಹ್ಹಾ... ಹ್ಹಾ... ಹ್ಹಾ..  ಟೂರ್..ಹ್ಹಾ...   
ಹ್ಹಾ.. ಹ್ಹಾ.. ಹ್ಹಾ... ಹ್ಹಾ....ಹೇ.... ಹಹ್ಹಹ್ಹಾ... ಹೇ... 
-------------------------------------------------------------------------------------------------------------------------

ಬಂಗಾರದ ಕಳ್ಳ (೧೯೭೩)
ಸಂಗೀತ : ಸತ್ಯಂ ಸಾಹಿತ್ಯ: ಆರ್.ಏನ್.ಜಯಗೋಪಾಲ್ ಗಾಯನ : ಎಲ್. ಆರ್. ಈಶ್ವರಿ 
  
ಬಾ ಬಾ ಓ ರಾಜ ನನ್ನ ಕಣ್ಣಿಂದ ತುಟಿ ಅಂಚಿಂದ ಕುಡಿಸುವೇ
ಲಾಹಲ್ಲ್  ಲಾಹಲ್ಲಾ...  ಆಗ ಮತ್ತಿನಲ್ಲಿ ನೀನು ಮುಳುಗುವೇ
ಬಾ ಬಾ ಓ ರಾಜ ನನ್ನ ಕಣ್ಣಿಂದ ತುಟಿ ಅಂಚಿಂದ ಕುಡಿಸುವೇ
ಲಾಹಲ್ಲ್  ಲಾಹಲ್ಲಾ.. ಆಗ ಮತ್ತಿನಲ್ಲಿ ನೀನು ಮುಳುಗುವೇ 
ಹೇಹೇಹೇಹೇ ಹ್ಹುಂಹ್ಹುಂಹ್ಹುಂ   ಓಹೋಹೊಹೋ ಮುಳುಗುವೇ 

ಹೇ..ದೂರ ನೀನು ಹೋಗುವಾಗ ಚಳಿ ಚಳಿ ಚಳಿ ಚಳಿ ಮೈಯಲ್ಲಿ
ಬಳಿ ನೀನು ಬಂದ ಕ್ಷಣ ಬಿಸಿಬಿಸಿ ಬಿಸಿಬಿಸಿ  ನನ್ನಲ್ಲಿ..
ದೂರ ನೀನು ಹೋಗುವಾಗ ಚಳಿ ಚಳಿ ಚಳಿ ಚಳಿ ಮೈಯಲ್ಲಿ
ಬಳಿ ನೀನು ಬಂದ ಕ್ಷಣ ಬಿಸಿಬಿಸಿ ಬಿಸಿಬಿಸಿ  ನನ್ನಲ್ಲಿ..
ಕೋಪವೋ ನಿನ್ನಲ್ಲಿದೇ ಪ್ರೀತಿಯ ನನ್ನಲ್ಲಿದೆ ಬಾ..ಬಾ..
ಲಲ್ಲಲಲ್ಲ ಲಲ್ಲಲಲ್ಲ ಲಲ್ಲಲಲ್ಲ ಲಲ್ಲಲಲ್ಲ ಆಹಾ...
ಬಾ ಬಾ ಓ ರಾಜ ನನ್ನ ಕಣ್ಣಿಂದ ತುಟಿ ಅಂಚಿಂದ ಕುಡಿಸುವೇ
ಲಾಹಲ್ಲ್  ಲಾಹಲ್ಲಾ...  ಆಗ ಮತ್ತಿನಲ್ಲಿ ನೀನು ಮುಳುಗುವೇ
ಹೇ.. ಹೋ.. ಆ... ಮುಳುಗುವೇ 

ಹ್ಹಾಂ.. ನನ್ನ ಜೊತೆ ಸೇರಿ ನೀನು ಕುಡಿ ಕುಡಿ ಕುಡಿ ಕುಡಿ ದಿನವೆಲ್ಲಾ 
ಹೊಸ ಲೋಕ ತೋರುವೇ ನಾ ಸುಖ ಸುಖ ಸುಖ ಸುಖ ಬಾಳೆಲ್ಲಾ.. 
ನನ್ನ ಜೊತೆ ಸೇರಿ ನೀನು ಕುಡಿ ಕುಡಿ ಕುಡಿ ಕುಡಿ ದಿನವೆಲ್ಲಾ 
ಹೊಸ ಲೋಕ ತೋರುವೇ ನಾ ಸುಖ ಸುಖ ಸುಖ ಸುಖ ಬಾಳೆಲ್ಲಾ.. 
ಸ್ವರ್ಗವೇ ನಿಂಗಿಲ್ಲಿದೆ ಇನ್ನೇನು ಬೇಕಾಗಿದೆ ಬಾ.. ಬಾ.. 
ಲಲ್ಲಲಲ್ಲ ಲಲ್ಲಲಲ್ಲ ಲಲ್ಲಲಲ್ಲ ಲಲ್ಲಲಲ್ಲ ಆಹಾ...
ಬಾ ಬಾ ಓ ರಾಜ ನನ್ನ ಕಣ್ಣಿಂದ ತುಟಿ ಅಂಚಿಂದ ಕುಡಿಸುವೇ
ಲಾಹಲ್ಲ್  ಲಾಹಲ್ಲಾ...  ಆಗ ಮತ್ತಿನಲ್ಲಿ ನೀನು ಮುಳುಗುವೇ
ಹೇಹೇ.. ಹೋ.. ಹ್ಹಹ್ಹಆ... ಮುಳುಗುವೇ 
--------------------------------------------------------------------------------------------------------------------------

ಬಂಗಾರದ ಕಳ್ಳ (೧೯೭೩)
ಸಂಗೀತ : ಸತ್ಯಂ ಸಾಹಿತ್ಯ: ಆರ್.ಏನ್.ಜಯಗೋಪಾಲ್ ಗಾಯನ : ಪಿ.ಬಿ.ಶ್ರೀನಿವಾಸ್, ವಸಂತ 
  
ಗಂಡು : ಹೃದಯಕೆ ಕಣ್ಣೇ ಸಾಕ್ಷಿ  ಹೆಣ್ಣು : ನಗೆಯೇ ಚೆಲುವಿಗೆ ಸಾಕ್ಷಿ
ಗಂಡು : ನಮ್ಮಿ ಪ್ರೇಮಕೆ ಗಗನವೇ ಸಾಕ್ಷಿ ಎಂದೆಂದೂ
ಹೆಣ್ಣು : ಹೃದಯಕೆ ಕಣ್ಣೇ ಸಾಕ್ಷಿ  ಗಂಡು : ನಗೆಯೇ ಚೆಲುವಿಗೆ ಸಾಕ್ಷಿ
ಹೆಣ್ಣು : ನಮ್ಮಿ ಪ್ರೇಮಕೆ ಗಗನವೇ ಸಾಕ್ಷಿ ಎಂದೆಂದೂ 
ಗಂಡು : ಆಹಹಾ ಹಹ    ಹೆಣ್ಣು : ಆಹಹಾ ಹಹ 
ಗಂಡು : ಓಹೋಹೊಹೋ  ಹೆಣ್ಣು : ಆಹಹಾ ಹಹ 

ಗಂಡು : ಮೆಲ್ಲನೆ ಹರಿವ ಈ ನದಿಯಂತೆ ಬಳುಕುತ ಬಂದವಳೇ.. ಒಹೋ... 
           ಒಹೋ...  ಬಳುಕುತ ಬಂದವಳೇ.. 
ಹೆಣ್ಣು : ಒಹೋ.. ಮೋಡದ ಹೊರಗೆ ಇಣುಕುತ ನಗುವ ರವಿಯಂತೇ ಬಂದವನೇ..   
          ಒಹೋ.. ರವಿಯಂತೇ ಬಂದವನೇ..  
ಗಂಡು : ನಿನ್ನಂಥ ಹೆಣ್ಣಿಲ್ಲಾ ಆ.. ದೇವರೇ ಸಾಕ್ಷಿ
ಹೆಣ್ಣು : ಹೃದಯಕೆ ಕಣ್ಣೇ ಸಾಕ್ಷಿ  ನಗೆಯೇ ಚೆಲುವಿಗೆ ಸಾಕ್ಷಿ
ಗಂಡು : ನಮ್ಮಿ ಪ್ರೇಮಕೆ ಗಗನವೇ ಸಾಕ್ಷಿ ಎಂದೆಂದೂ 

ಹೆಣ್ಣು : ಆಸೆಯ ಬೆರಳಿಗೆ ಪ್ರೇಮದ ಉಂಗುರಾ ತೊಡಿಸಿದ ಚೆನ್ನಿಗನೇ 
          ಒಹೋ.. ನನ್ನವಳಾದವನೇ 
ಗಂಡು : ಓಹೋಹೋ.. ಯಾವುದೋ ಜನ್ಮದ ಅನುಬಂಧದಿಂದ ನನ್ನವಳಾದವಳೇ 
           ಓಹೋಹೋ.. ನನ್ನವಳಾದವಳೇ 
ಹೆಣ್ಣು : ಈ ಬಂಧ ಆನಂದ ಈ ಭೂಮಿಯ ಸಾಕ್ಷೀ 
ಗಂಡು : ಹೃದಯಕೆ ಕಣ್ಣೇ (ಸಾಕ್ಷಿ)  ನಗೆಯೇ ಚೆಲುವಿಗೆ (ಸಾಕ್ಷಿ )
ಇಬ್ಬರು : ನಮ್ಮಿ ಪ್ರೇಮಕೆ ಗಗನವೇ ಸಾಕ್ಷಿ ಎಂದೆಂದೂ
ಗಂಡು : ಆಹಹಾ ಹಹ    ಹೆಣ್ಣು : ಓಹೋಹೊಹೋ  
ಇಬ್ಬರು : ನಮ್ಮಿ ಪ್ರೇಮಕೆ ಗಗನವೇ ಸಾಕ್ಷಿ ಎಂದೆಂದೂ 
-------------------------------------------------------------------------------------------------------------------------

No comments:

Post a Comment