1036. ರಂಗಮಹಲ ರಹಸ್ಯ (1970)



ರಂಗಮಹಲ ರಹಸ್ಯ ಚಿತ್ರದ ಹಾಡುಗಳು 
  1. ಈ ಕೆನ್ನೇ ಕಂಗಳು 
  2. ಓಡುವೆಯಾ ಹಾಡುವೆಯಾ 
  3. ಒಲವಿನ ತರುಣಿಯ ಮನವೀಯ 
  4. ಕಳ್ಳಿ ಹಾಗೆ ನೋಟ 
  5. ಅಲ್ಲಿ ಏನೂ ಇಲ್ಲ 
ಸಾಹಿತ್ಯ : ಚಿ.ಉದಯಶಂಕರ, ಸೋರಟ್ ಅಶ್ವಥ, ವಿಜಯನಾರಸಿಂಹ  

ರಂಗಮಹಲ ರಹಸ್ಯ (೧೯೭೦)
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ: ಎಲ್.ಆರ್.ಈಶ್ವರಿ 

ಈ...  ಕೆನ್ನೆ ಕಂಗಳು ಈ ತುಂಟ ತುಟಿಗಳು 
ಇದ ಕೂಡಿ ನೀ ಮನ ಮಾಡಿ ಆ ಸಗ್ಗಕ್ಕೆ ಮೆಟ್ಟಲು 
ಈ...  ಕೆನ್ನೆ ಕಂಗಳು ಈ ತುಂಟ ತುಟಿಗಳು 
ಇದ ಕೂಡಿ ನೀ ಮನ ಮಾಡಿ ಆ ಸಗ್ಗಕೆ ಮೆಟ್ಟಲು 

ರಸದಾ  ಹೂವೇ ಮಜ ರಸಿಕ ಮಾತು ನಿಜ 
ಅರಸಿ ತಾ ಬಂದೆ ಮೋಜ ನೀ ರಮಿಸಿ ಹಾಯಾಗಿ ರಾಜ 
ಓಡಿ ಬಾ ಸಂಗಕೆ ನೋಡುವೆ  ಬಾ ಸುಖಾ 
ಈ...  ಕೆನ್ನೆ ಕಂಗಳು ಈ ತುಂಟ ತುಟಿಗಳು 
ಇದ ಕೂಡಿ ನೀ ಮನ ಮಾಡಿ ಆ ಸಗ್ಗಕೆ ಮೆಟ್ಟಲು 
ಮಧುವು ತಾ ಮುಂದಿದೆ ಮುದಕೆ ಈ ಹೆಣ್ಣಿದೆ 
ಮನಕೆ ಆನಂದ ಹೊಂದೆ ನಿನ್ನ ಬಯಕೆ ಪೂರೈಸಲೆಂದೇ 
ಪ್ರೇಮ ಸೋಪಾನಕೆ ಕೂಗಿದೆ ನಡೆ ನಡೆ 
ಈ...  ಕೆನ್ನೆ ಕಂಗಳು ಈ ತುಂಟ ತುಟಿಗಳು 
ಇದ ಕೂಡಿ ನೀ ಮನ ಮಾಡಿ ಆ ಸಗ್ಗಕೆ ಮೆಟ್ಟಲು 
ಲಾಲಾಲ ಲಲ  
----------------------------------------------------------------------------------------------------------------------

ರಂಗಮಹಲ ರಹಸ್ಯ (೧೯೭೦)
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ: ಪಿ.ಸುಶೀಲಾ 

ಆಆಆಅ... ಓಓಓ... ಓಯ್.. ಆಆಆಅ... 
ಓಓಓ... ಓಯ್.. ಓಓಓ... ಓಯ್.. 
ಓಡುವೇಯಾ ಹಾಡುವೆಯಾ ಜೊತೆಗಾಗಿ ನೋಡುವೆಯಾ 
ನನಗಾಗಿ ಕಾದಿಹೆಯಾ 
ಓಡುವೇಯಾ ಹಾಡುವೆಯಾ ಜೊತೆಗಾಗಿ ನೋಡುವೆಯಾ 
ನನಗಾಗಿ ಕಾದಿಹೆಯಾ 

ನಿಲ್ಲು ನಿಲ್ಲು ತಂಗಾಳಿ ಬೀಸದಿರು 
ನಿಲ್ಲು ನಿಲ್ಲು ತಂಗಾಳಿ ಬೀಸದಿರು ಒಂಟಿ ಹೆಣ್ಣ ನೀ ಹೀಗೆ ಕಾಡದಿರೂ 
ಸೇರೆಗಿಳಿವೆ ಆಆಆ... ಮುದ್ದಿಸುವೇ ಆಆಆ... ನನಗಾಶೆ ತಂದಿರುವೇ 
ಅಮ್ಮೋ... ಮೈಯೆಲ್ಲಾ ಬಿಸಿಯಾಗಿದೆ... ಹೊಸದೇನು ಬೇಕೆಂದಿದೆ 
ಓಡುವೇಯಾ ಹಾಡುವೆಯಾ ಜೊತೆಗಾಗಿ ನೋಡುವೆಯಾ 
ನನಗಾಗಿ ಕಾದಿಹೆಯಾ 

ಹಕ್ಕಿಯಂತೆ ಹಾರಾಡೋ ಮನಸಾಗಿದೆ 
ಹಕ್ಕಿಯಂತೆ ಹಾರಾಡೋ ಮನಸಾಗಿದೆ 
ನಕ್ಕು ನಕ್ಕು ಕುಣಿದಾಡಿ ಸುಖವಾಗಿದೆ 
ಮಲಗುವೆನೋ... ಆಆಆ... ಉರುಳುವೆನೋ... ಆಆಆ... 
ನನಗೆಲ್ಲಾ ಹಾಯಾಗಿದೇ... 
ಹ್ಹಾ... ಇಂದೇಕೆ ಹೀಗಾಗಿದೇ.. 
ಮೈ ಅರಳಿ ಹೂವಾಗಿದೇ... 
ಓಡುವೇಯಾ ಹಾಡುವೆಯಾ ಜೊತೆಗಾಗಿ ನೋಡುವೆಯಾ 
ನನಗಾಗಿ ಕಾದಿಹೆಯಾ
----------------------------------------------------------------------------------------------------------------------

ರಂಗಮಹಲ ರಹಸ್ಯ (೧೯೭೦)
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ: ಎಲ್.ಆರ್.ಈಶ್ವರಿ


ಒಲವಿನ ತರುಣಿಯ ಮನವಿ ನೀ  ಕೇಳೆಯಾ
ಸುಧೆಯಾ ಬೇಡಂದೆಯಾ... ಆಯ್ ಲವ್ ಯೂ ...ಆಯ್ ಲವ್ ಯೂ ...    
ಒಲವಿನ ತರುಣಿಯ ಮನವಿ ನೀ ಕೇಳೆಯಾ
ಸುಧೆಯಾ ಬೇಡಂದೆಯಾ... ಆಯ್ ಲವ್ ಯೂ ...ಆಯ್ ಲವ್ ಯೂ ...    

ಮಿಂಚೊಂದು ಲತೆಯಾಗಿ ಹೂ ನೀಡಿದೆ
ಅದರಂದ ಮಕರಂದ ನಿನಗಾಗಿದೆ
ಮಿಂಚೊಂದು ಲತೆಯಾಗಿ ಹೂ ನೀಡಿದೆ
ಅದರಂದ ಮಕರಂದ ನಿನಗಾಗಿದೆ
ಓ.. ಪ್ರಿಯತಮಾ ಮಧು ಸಂಭ್ರಮ 
ಸರಸ ಬೇಡಂದೆಯಾ...ಆಯ್ ಲವ್ ಯೂ ...ಆಯ್ ಲವ್ ಯೂ ...        
ಒಲವಿನ ತರುಣಿಯ ಮನವಿ ನೀ ಕೇಳೆಯಾ
ಸುಧೆಯಾ ಬೇಡಂದೆಯಾ... ಆಯ್ ಲವ್ ಯೂ ...ಆಯ್ ಲವ್ ಯೂ ...    

ಆನಂದ ನಂದನದ ಹೂಬಾಣ
ಎದೆ ತಾಕಿ ಝಲ್ಲೆಂಬ ಹಿತ ಕಂಪನ
ಆನಂದ ನಂದನದ ಹೂಬಾಣ
ಎದೆ ತಾಕಿ ಝಲ್ಲೆಂಬ ಹಿತ ಕಂಪನ
ಹೊಸ ಯೌವ್ವನ ರಸ ಜೀವನ
ಮಿಲನ ಬೇಡಂದೆಯಾ....ಆಯ್ ಲವ್ ಯೂ ...ಆಯ್ ಲವ್ ಯೂ ...   
ಒಲವಿನ ತರುಣಿಯ ಮನವಿ ನೀ ಕೇಳೆಯಾ
ಸುಧೆಯಾ ಬೇಡಂದೆಯಾ... ಆಯ್ ಲವ್ ಯೂ ...ಆಯ್ ಲವ್ ಯೂ ...   
--------------------------------------------------------------------------------------------------------------------------

ರಂಗಮಹಲ ರಹಸ್ಯ (೧೯೭೦)
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ: ಎಸ್.ಪಿ.ಬಿ.

ಕಳ್ಳಿ ಹಾಗೆ ನೋಟ ಮಳ್ಳಿ ಹಾಗೆ ಆಟ
ಈ ಕಣ್ಣಗೇನೋ ಕಾಟ ನಿನ್ನೀ ಈ ಮೈಮಾಟ
ಈ ಕಣ್ಣಗೇನೋ ಕಾಟ ನಿನ್ನೀ ಈ ಮೈಮಾಟ
ಕಳ್ಳಿ ಹಾಗೆ ನೋಟ ಮಳ್ಳಿ ಹಾಗೆ ಆಟ
ಈ ಕಣ್ಣಗೇನೋ ಕಾಟ ನಿನ್ನೀ ಈ ಮೈಮಾಟ
ಈ ಕಣ್ಣಗೇನೋ ಕಾಟ ನಿನ್ನೀ ಈ ಮೈಮಾಟ
ಒಹೋಹೋ..ಹ್ಹಾಂ ಹೇ..ಹೇ..ಹ್ಹಾ..ಹ್ಹಾ .. ಹೇಹೇ ಯ್ಯಾ..

ನಿನಗಾಗಿ ಓಡೋಡಿ ನಾ ಬಂದೇನೇ
ಒಲವಿಂದ ಕಿರುಕಾಣಿಕೆ ತಂದೆನೇ
ನಿನಗಾಗಿ ಓಡೋಡಿ ನಾ ಬಂದೇನೇ
ಒಲವಿಂದ ಕಿರುಕಾಣಿಕೆ ತಂದೆನೇ
ನೀ ಬಳಿ ಬಂದರೇ ಇಲ್ಲೇ ನಾ ಕೊಡುವೆನೇ
ನೀ ಬಳಿ ಬಂದರೇ ಇಲ್ಲೇ ನಾ ಕೊಡುವೆನೇ
ಒಂದೇ ಒಂದು ಸಾರಿ ಬಾರೇ ಮೋಹ ತೋರಿ
ಹಾಯ್ ಹಾಯ್ ಹಾಯ್ ಹಾಯ್ ಹಾಯ್
ನೀ ಆಗೇ ನುಡಿವೇ ಆಗ ಭಲೇ ಬ್ರಹ್ಮಚಾರೀ..
ನೀ ಆಗೇ ನುಡಿವೇ ಆಗ ಭಲೇ ಬ್ರಹ್ಮಚಾರೀ..
ಕಳ್ಳಿ ಹಾಗೆ ನೋಟ ಮಳ್ಳಿ ಹಾಗೆ ಆಟ
ಈ ಕಣ್ಣಗೇನೋ ಕಾಟ ನಿನ್ನೀ ಈ ಮೈಮಾಟ
ಈ ಕಣ್ಣಗೇನೋ ಕಾಟ ನಿನ್ನೀ ಈ ಮೈಮಾಟ

ಅರೆಅರೆರೇರೆ ವಯಸಾದ ಗಂಡೆಂಬ ಚಿಂತೆ ಬೀಡು
ಮೈ ಹಣ್ಣಾಗಿ ರುಚಿ ತುಂಬ ನೆನಪಲ್ಲಿ ಇಡು
ವಯಸಾದ ಗಂಡೆಂಬ ಚಿಂತೆ ಬೀಡು
ಮೈ ಹಣ್ಣಾಗಿ ರುಚಿ ತುಂಬ ನೆನಪಲ್ಲಿ ಇಡು
ಈ ಮುನಿಸಿಕೆ ಬಾ ನಿನ್ನ ಮನಸ್ಸಿಲ್ಲಿಡು
ಈ ಮುನಿಸಿಕೆ ಬಾ ನಿನ್ನ ಮನಸ್ಸಿಲ್ಲಿಡು
ನೋಟ ನಿನ್ನಲ್ಲಿಟು ನಿನ್ನ ದೂರ ಬಿಟ್ಟು
ಮೈ ಹೇಗೆ ನಡುಗಿದೆಯಮ್ಮ ನೀ ನೋಡು ಬಾ ಮುಟ್ಟು
ಮೈ ಹೇಗೆ ನಡುಗಿದೆಯಮ್ಮ ನೀ ನೋಡು ಬಾ ಮುಟ್ಟು
ಕಳ್ಳಿ ಹಾಗೆ ನೋಟ ಮಳ್ಳಿ ಹಾಗೆ ಆಟ
ಈ ಕಣ್ಣಗೇನೋ ಕಾಟ ನಿನ್ನೀ ಈ ಮೈಮಾಟ
ಈ ಕಣ್ಣಗೇನೋ ಕಾಟ ನಿನ್ನೀ ಈ ಮೈಮಾಟ
ಒಹೋಹೋ..ಹ್ಹಾಂ ಹೇ..ಹೇ..ಹ್ಹಾ..ಹ್ಹಾ .. ಹೇಹೇ ಯ್ಯಾ..
--------------------------------------------------------------------------------------------------------------------------

ರಂಗಮಹಲ ರಹಸ್ಯ (೧೯೭೦)
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ: ಎಲ್.ಆರ್.ಈಶ್ವರಿ, ಎಸ್.ಜಾನಕೀ  

ಆಹಾಹಾ... ಓಹೋಹೋ ಹ್ಹಹೋ  ಅಹ್ಹಹ್ಹ ಓಹೋಹೋ ಅಹ್ಹಹ್ಹಹ್ಹಾ
ಹೇ.. ಅಲ್ಲೇ ಏನೂ ಇಲ್ಲ
ಅಹ್ಹಹ್  ಆಹ್ಹಾ ಇಲ್ಲೇ ಇರುವುದೆಲ್ಲ
ಹೊಯ್  ಎಲ್ಲೋ ಹೋಗಿ ಹುಡುಕಿ
ಆಯಾಸ ಪಡುವೆ ಏಕೋ ಮಂಕೆ
ಇಬ್ಬರು : ನೋಡು ತೋರುವೆ ಹೂವೊಂದ ಹೂಹ್
             ಬಾರೋ ನೀಡುವೆ ಮುತ್ತೊಂದ
ಅಲ್ಲೇ ಏನೂ ಇಲ್ಲ
ಅಹ್ಹಹ್  ಆಹ್ಹಾ ಇಲ್ಲೇ ಇರುವುದೆಲ್ಲ
ಓಹೊ  ಎಲ್ಲೋ ಹೋಗಿ ಹುಡುಕಿ
ಆಯಾಸ ಪಡುವೆ ಏಕೋ ಮಂಕೆ
ಇಬ್ಬರು : ನೋಡು ತೋರುವೆ ಹೂವೊಂದ ಹೊಯ್ ಹೊಯ್
             ಬಾರೋ ನೀಡುವೆ ಮುತ್ತೊಂದ

ಈ ಹೆಣ್ಣಿನಲ್ಲಿ ಆಸೆಯೇ ತುಂಬಿದೆ
ನೀ ಹೇಳು ನಿನ್ನ ಮನಸಲಿ ಏನಿದೆ ಹೊಯ್ ಹೊಯ್
ಈ ಹೆಣ್ಣಿನಲ್ಲಿ ಆಸೆಯೇ ತುಂಬಿದೆ
ನೀ ಹೇಳು ನಿನ್ನ ಮನಸಲಿ ಏನಿದೆ
ನಿನಗೆಂದೇ ನಮ್ಮ ಸೊಗಸು
ಬಲು ಚೆಂದ ಇಂಥ ವಯಸು
ಬಾ ಬೇಗ ಸೇರಿ ನಲಿಯೋಣ ಆಆಆಅ...
ಹೇ... ಅಲ್ಲೇ ಏನೂ ಇಲ್ಲ
ಅಹ್ಹಹ್  ಆಹ್ಹಾ ಇಲ್ಲೇ ಇರುವುದೆಲ್ಲ
ಓಹೊ  ಎಲ್ಲೋ ಹೋಗಿ ಹುಡುಕಿ
ಆಯಾಸ ಪಡುವೆ ಏಕೋ ಮಂಕೆ
ಇಬ್ಬರು : ನೋಡು ತೋರುವೆ ಹೂವೊಂದ ಹೊಯ್ ಹೊಯ್
             ಬಾರೋ ನೀಡುವೆ ಮುತ್ತೊಂದ

ಈ ಕಣ್ಣಿನಲ್ಲಿ ಹೇಳು ನೀ ಏನಿದೆ
ಹೊಯ್  ಈ ಮೈಯ ಮುಟ್ಟಿ ನೋಡು ನೀ ಹೇಗಿದೆ
ಈ ಕಣ್ಣಿನಲ್ಲಿ ಹೇಳು ನೀ ಏನಿದೆ
ಆಹ್ಹಾ.. ಈ ಮೈಯ ಮುಟ್ಟಿ ನೋಡು ನೀ ಹೇಗಿದೆ
ಕೈಯಿಂದ ನನ್ನ ಬಳಸು
ತುಟಿಯಾಸೆ ಬೇಗ ಸಲೀಸು
ಹಾಯಾಗಿ ಕಾಲ ಕಳೆಯೋಣ ಆಆಆಅ...
ಹೇ.. ಅಲ್ಲೇ ಏನೂ ಇಲ್ಲ
ಅಹ್ಹಹ್  ಆಹ್ಹಾ ಇಲ್ಲೇ ಇರುವುದೆಲ್ಲ
ಓಹೊ  ಎಲ್ಲೋ ಹೋಗಿ ಹುಡುಕಿ
ಆಯಾಸ ಪಡುವೆ ಏಕೋ ಮಂಕೆ
ಇಬ್ಬರು : ನೋಡು ತೋರುವೆ ಹೂವೊಂದ ಹೊಯ್ ಹೊಯ್
             ಬಾರೋ ನೀಡುವೆ ಮುತ್ತೊಂದ
             ಓ..  ನೋಡು ತೋರುವೆ ಹೂವೊಂದ ಹೊಯ್ ಹೊಯ್
             ಬಾರೋ ನೀಡುವೆ ಮುತ್ತೊಂದ
 -------------------------------------------------------------------------------------------------------------------------

No comments:

Post a Comment