1038. ಬ್ಲಾಕ್ ಮಾರ್ಕೆಟ್ (೧೯೬೭)

ಬ್ಲಾಕ್ ಮಾರ್ಕೆಟ್ ಚಿತ್ರದ ಹಾಡುಗಳು 

  1. ನೀನಿಲ್ಲಿ ಬಾ ಬಾ 
  2. ಏನಿದು ಯಾರಿದು ಯಾವುದು 
  3. ಈ ಹೆಣ್ಣಿನ ಗುಣ 
  4. ಬಾರೆನ್ನ ಬೆಚ್ಚನೆ ಬ್ಯೂಟಿ 
  5. ಕನ್ನಡ ನಾಡಿನ ಮಹಿಮೆಯ ಕೇಳಿರಿ 
ಬ್ಲಾಕ್ ಮಾರ್ಕೆಟ್ (೧೯೬೭)
ಸಂಗೀತ : ಸತ್ಯಂ ಸಾಹಿತ್ಯ : ಮೋಹಿನಿ ಪ್ರೊಡಕ್ಷನ್ ಗಾಯನ : ಎಲ್.ಆರ್.ಈಶ್ವರಿ 

ಆಹಾ.. ಆಹಾ.. ಆಹಾ.. ಆಹಾ.. ಒಹೋ ಓಹೋಹೋ ಓಹ್ಹೋ
ಆಹಾ.. ಆಹಾ.. ಆಹಾ.. ಆಹಾ.. ಒಹೋ ಓಹೋಹೋ ಓಹ್ಹೋ
ನೀನಿಲ್ಲಿ ಬಾ ಬಾ ಬಾ ಓ ಜಾಣ
ಮೈಯಲ್ಲಿ ತಾ ತಾ ತಾ ತಾ ನೋಡೋಣ
ಬಂದೇ ನಿನ್ನ ಪ್ರಾಣ ಮಾನ ಈ ಹೆಣ್ಣಿನ ಅಧೀನ
ನೀನಿಲ್ಲಿ ಬಾ ಬಾ ಬಾ ಓ ಜಾಣ
ಮೈಯಲ್ಲಿ ತಾ ತಾ ತಾ ತಾ ನೋಡೋಣ
ಬಂದೇ ನಿನ್ನ ಪ್ರಾಣ ಮಾನ ಈ ಹೆಣ್ಣಿನ ಅಧೀನ
ನೀನಿಲ್ಲಿ ಬಾ ಬಾ ಬಾ ಓ ಜಾಣ 

ಅಂತಿಂಥ ಸಿಂಗಾರಿ ಅಲ್ಲ  
ಸೇರಿದೆ ರೂಪ ರೂಪಾಯಿ ಅಲ್ಲ 
ಅಂತಿಂಥ ಸಿಂಗಾರಿ ಅಲ್ಲ  
ಸೇರಿದೆ ರೂಪ ರೂಪಾಯಿ ಅಲ್ಲ 
ನಾ ರಾಣಿಯೇ ನೀ ಜೋಕರೇ 
ನಾ ರಾಣಿಯೇ ನೀ ಜೋಕರೇ 
ಆ ವಯಸಿನ ಆ ವಿಧಾನ 
ನೀನಿಲ್ಲಿ ಬಾ ಬಾ ಬಾ ಓ ಜಾಣ
ಮೈಯಲ್ಲಿ ತಾ ತಾ ತಾ ತಾ ನೋಡೋಣ
ಬಂದೇ ನಿನ್ನ ಪ್ರಾಣ ಮಾನ ಈ ಹೆಣ್ಣಿನ ಅಧೀನ
ನೀನಿಲ್ಲಿ ಬಾ ಬಾ ಬಾ ಓ ಜಾಣ 

ಜೇನಂಥ ಸಿಹಿಯಾದ ನನ್ನ ಕೆನ್ನೆ 
ಮೋಹಿನಿ ನಂತೆ ನಾ ಕಾಡಬಲ್ಲೆ 
ಜೇನಂಥ ಸಿಹಿಯಾದ ನನ್ನ ಕೆನ್ನೆ 
ಮೋಹಿನಿಯಂತೆ ನಾ ಕಾಡಬಲ್ಲೆ 
ಆ ಸ್ವರ್ಗವೇ ಅಂಗೈಲಿದೇ 
ಆ ಸ್ವರ್ಗವೇ ಅಂಗೈಲಿದೇ 
ಯಾರು ನನ್ನ ಸಮಾನ....  
ನೀನಿಲ್ಲಿ ಬಾ ಬಾ ಬಾ ಓ ಜಾಣ
ಮೈಯಲ್ಲಿ ತಾ ತಾ ತಾ ತಾ ನೋಡೋಣ
ಬಂದೇ ನಿನ್ನ ಪ್ರಾಣ ಮಾನ ಈ ಹೆಣ್ಣಿನ ಅಧೀನ
ನೀನಿಲ್ಲಿ ಬಾ ಬಾ ಬಾ ಓ ಜಾಣ 
--------------------------------------------------------------------------------------------------------------------------

ಬ್ಲಾಕ್ ಮಾರ್ಕೆಟ್ (೧೯೬೭)
ಸಂಗೀತ : ಸತ್ಯಂ ಸಾಹಿತ್ಯ : ಮೋಹಿನಿ ಪ್ರೊಡಕ್ಷನ್ ಗಾಯನ : ಎಲ್.ಆರ್.ಈಶ್ವರಿ

ಗಂಡು : ಏನಿದು..  ಯಾರಿದು ಎಲ್ಲಾ  ಮಾಯಾಮಯವಾಗಿಹುದು
           ಕನಸೋ ಇದು ನನಸೋ ಕಾಣದೆ ಮತಿ ಮಂಕಾಗಿಹುದು 
           ಏನಿದು..  ಯಾರಿದು ಯಾವುದು ತೋರದು ಎಲ್ಲಾ ಮಾಯಾಮಯವಾಗಿಹುದು
           ಕನಸೋ ಇದು ನನಸೋ ಕಾಣದೆ ಮತಿ ಮಂಕಾಗಿಹುದು 
ಹೆಣ್ಣು : ಕಾಣುವುದೆಲ್ಲಾ ಸತ್ಯವು ಚಿನ್ನ ಕೇಳುತ ಉತ್ತರ ಕಾಡದಿರೆ ರನ್ನ 
          ಮುತ್ತಿನಂತಹ ಸಮಯ ನೀ ವ್ಯರ್ಥ ಮಾಡದಿರು ನನ್ನಿನಿಯಾ 
          ಕಾಣುವುದೆಲ್ಲಾ ಸತ್ಯವು ಚಿನ್ನ

ಗಂಡು : ಮಾನಿನಿಯೋ ನೀ ಮೋಹಿನಿಯೋ ಆ ಚಂದಿರ ಲೋಕದ ರೋಹಿಣಿಯೋ 
            ನನ್ನದೇ ಸೋತು ತನ್ಮಯವಾಯ್ತು ನಿನ್ನದು ಪ್ರಾಣ ಎನಿಸಿ ಆಯಿತು 
ಹೆಣ್ಣು : ಓಹೋಹೋ.. ಹೋ  ಇಂತಹ ಸ್ನೇಹದ ಮಕರಂದ 
          ನಾವ್ ಸವಿಯುವ ಬಾಳಿರೇ ಅಣುವಿಂದಾ 
          ಜನ್ಮ ಜನ್ಮದ ಈ ಅನುಬಂಧ ತುಂಬಿ ಹರಿವುದು ಸಂತಸದಿಂದ.. ಆಆಆ..  
         ತುಂಬಿ ಹರಿವುದು ಸಂತಸದಿಂದ.. 
          ಕಾಣುವುದೆಲ್ಲಾ ಸತ್ಯವು ಚಿನ್ನ ಕೇಳುತ ಉತ್ತರ ಕಾಡದಿರೆ ರನ್ನ 
          ಮುತ್ತಿನಂತಹ ಸಮಯ ನೀ ವ್ಯರ್ಥ ಮಾಡದಿರು ನನ್ನಿನಿಯಾ 
ಇಬ್ಬರು : ಅಹ್ಹ ಅಹ್ಹಹ  ಅಹ್ಹ ಅಹ್ಹಹ ಅಹ್ಹ ಅಹ್ಹಹ 
--------------------------------------------------------------------------------------------------------------------------

ಬ್ಲಾಕ್ ಮಾರ್ಕೆಟ್ (೧೯೬೭)
ಸಂಗೀತ : ಸತ್ಯಂ ಸಾಹಿತ್ಯ : ಮೋಹಿನಿ ಪ್ರೊಡಕ್ಷನ್ ಗಾಯನ : ಪಿ.ಕಾಳಿಂಗರಾವ್

ಈ ಹೆಣ್ಣಿನ ಗುಣ ಒಂದು ಸರಿ ಇಲ್ಲ ನನ್ನ ಮಾತಿಗೆ ಸ್ವಲ್ಪವೂ ಬೆಲೆಯಿಲ್ಲಾ 
ಗಂಡನಾನೆಂಬುದು ಭಯವಿಲ್ಲಾ ಜಗ ಭಂಡರಾಗಿ
ತಿರುಗುವುಳಲ್ಲಾ.. ತಿರುಗುವುಳಲ್ಲಾ 

ಕುದುರೆಯ ಬಾಲದ ಕೊನೆಯಂತೆ 
ಭೂಮಿಯ ಗೈಲಿನ ಗುಚ್ಛ ಅಂತೇ
ಸಾಧನ ಶೈಲಿನ ಮುಡಿಯಂತೆ ತಲೆಯೆಲ್ಲಾ ನಾಗರ ಹೆಡೆಯಂತೇ..
ಕುದುರೆಯ ಬಾಲದ ಕೊನೆಯಂತೆ 
ಭೂಮಿಯ ಸ್ಟೈಲಿನ ಗುಚ್ಛ ಅಂತೇ
ಸಾಧನ ಶೈಲಿನ ಮುಡಿಯಂತೆ ತಲೆಯೆಲ್ಲಾ ನಾಗರ ಹೆಡೆಯಂತೇ.. 

ಕಾಲಿನ ಚಪ್ಪಲಿ ಪ್ಲಾಸ್ಟಿಕ್ ಕಿವಿಗಿರಬೇಕು ಲವ್ ಲಕ್
ಕಾಲಿನ ಚಪ್ಪಲಿ ಪ್ಲಾಸ್ಟಿಕ್ ಕಿವಿಗಿರಬೇಕು ಲವ್ ಲಕ್
ತುಟಿಗಿರಬೇಕು ಲಿಪ್ ಸ್ಟಿಕ್ ಈ ಹೆಣ್ಣಿನಿಂದ ನನಗೆ ಬ್ಯಾಡಲಕ್
ಈ ಹೆಣ್ಣಿನಿಂದ ನನಗೆ ಬ್ಯಾಡಲಕ್
ಮೈತುಂಬ ಬಟ್ಟೆ ಹಾಕಲ್ಲ.. ಟೈಟಿನ ಪ್ಯಾಂಟನು  ಬಿಟ್ಟಿಲ್ಲಾ
ಕೈಗಳಿಗೆ ಬಳೆ ಎಲ್ಲೇ ಅಂದರೇ
ಅಯ್ ಡೋಂಟ್ ಲೈಕ್ ಇಟ್ ಅನ್ನವಳಲ್ಲಾ.. ಅನ್ನವಳಲ್ಲಾ..
ಅರಿಷಿಣ ಕುಂಕುಮ ಹಚ್ಚೋಲ್ಲ ಕರಿಮಣಿ ಒಂದು ಕಟ್ಟೋಲ್ಲ
ಗುರುವಿಗೆ ಗೋಪುರ ಬಂತಲ್ಲ ಪರಶಿವನಂತೆ ಜಡೆ ಕಟ್ಟುವಳಲ್ಲ
ಅರಿಷಿಣ ಕುಂಕುಮ ಹಚ್ಚೋಲ್ಲ ಕರಿಮಣಿ ಒಂದು ಕಟ್ಟೋಲ್ಲ
ಗುರುವಿಗೆ ಗೋಪುರ ಬಂತಲ್ಲ ಪರಶಿವನಂತೆ ಜಡೆ ಕಟ್ಟುವಳಲ್ಲ

ಹೆಣ್ಣಿಂದ ನನಗೆ ಸುಖವಿಲ್ಲ ಬಿಟ್ಟರೇ ಅನ್ನವ ಸಿಕ್ಕೊಲ್ಲ
ಹೆಣ್ಣಿಂದ ನನಗೆ ಸುಖವಿಲ್ಲ ಬಿಟ್ಟರೇ ಅನ್ನವ ಸಿಕ್ಕೊಲ್ಲ
ಗೋವಿಂದಯ್ಯನು  ಸೇರಿದನಲ್ಲ ಎನ್ನ ಕಣ್ಣಿಗೆ ಮಣ್ಣ ಹಾಕಿದನಲ್ಲಾ 
ಎನ್ನ ಕಣ್ಣಿಗೆ ಮಣ್ಣ ಹಾಕಿದನಲ್ಲಾ 

ಬೆಳಕರೆದರೇ  ಫೇಸ್ ಪೌಡರ್ ನಾ ತರಬೇಕೋ ಇವಳ ಆರ್ಡರ್
ನಾನೀ ಈ ಮನೆಯ ಬೋರಡರ್ ಈ ಕಾರಿಗೆ ನಾನೇ ಡ್ರೈವರ್.. ನಾನೇ ಡ್ರೈವರ್
ಹೆಣ್ಣಿನ ಸುಖ ಸಾಕಾಯಿತಲ್ಲಾ ತಮಗೆಲ್ಲಾ ತಿಳಿದಿರಬೇಕಲ್ಲಾ
ಈ ಹೆಣ್ಣಿನ ಸುಖ ಸಾಕಾಯಿತಲ್ಲಾ ತಮಗೆಲ್ಲಾ ತಿಳಿದಿರಬೇಕಲ್ಲಾ
ಬೇರಣ್ಣಯ್ಯ ಕುಡಿದಿರಬಹುದಲ್ಲ ಈ ಹೆಣ್ಣಿಗೆ ಬುದ್ದಿಯು ಬರಲಿಲ್ಲ
ಈ ಹೆಣ್ಣಿಗೆ ಬುದ್ದಿಯು ಬರಲಿಲ್ಲ 
--------------------------------------------------------------------------------------------------------------------------

ಬ್ಲಾಕ್ ಮಾರ್ಕೆಟ್ (೧೯೬೭)
ಸಂಗೀತ : ಸತ್ಯಂ ಸಾಹಿತ್ಯ : ಮೋಹಿನಿ ಪ್ರೊಡಕ್ಷನ್ ಗಾಯನ : ನಾಗೇಂದ್ರ, ಎಲ್.ಆರ್.ಈಶ್ವರಿ 

ಗಂಡು : ಹೇ ಬಾರೆನ್ನ ಬೆಚ್ಚನ್ನೇ ಬ್ಯೂಟಿ ನಂಗಿಲ್ಲವೇ ಲವೆಂಬ ಡ್ಯೂಟಿ 
           ಗಂಟ ಹಾಕೊಂಡ ಮೇಲೆ ಚಿಂತೆಲ್ಲ ಏಕೆ 
           ಅನ್ಯಾಯ ಅಪಾಯ ಅಯ್ಯಯ್ಯಯ್ಯೋ 
ಹೆಣ್ಣು : ಓ... ನಾನೊಂದು ಮುದ್ದಾದ ಲಿಲ್ಲಿ ನೀನೊಂದು ಕೋಡಂಗಿ ಸಿಲ್ಲಿ 
          ಬಾಗೋದು ನಾಳೆ ಬೇಯಲ್ಲ ಬೇಳೆ 
          ಅಯೋಗ್ಯ ಅಸಹ್ಯ ಛೇ..ಛೇ.ಛೇ.ಛೇ.
          ಓ... ನಾನೊಂದು ಮುದ್ದಾದ ಲಿಲ್ಲಿ

ಗಂಡು : ಮಾಡಬ್ಯಾಡ ಗೇಲಿ ಕಟ್ಟಿಲ್ಲವೇ ತಾಳಿ 
           ಬಿಟ್ಟೇನೆ ಹೇ..ಹೇ.. ಸುಟ್ಟೇನೆ ಗೋಲಿ 
ಹೆಣ್ಣು : ದ್ವೇಶಾಭಿಮಾನ ಕಡ್ಡಿ ಪೈಲ್ವಾನ ಹೋಗೋಲೋ ಹೋಗೋ  
          ಓ ಬಿಟ್ಟಿ ಜವಾನ 
ಗಂಡು : ಚೆನ್ನಾಗಿಲ್ಲಾ..  ಹೆಣ್ಣು : ಪರವಾಗಿಲ್ಲ 
ಗಂಡು : ಓ..ಓ.. ಚೆನ್ನಾಗಿಲ್ಲಾ..  ಹೆಣ್ಣು : ಹ್ಹಾಹ್ಹಾ .. ಪರವಾಗಿಲ್ಲ 
ಗಂಡು : ಈ ರೂಪ ಈ ಕೋಪ ಅಯ್ಯಯ್ಯಯ್ಯಯ್ಯೋ            
ಹೆಣ್ಣು : ಶಠಪ್ಪ..  ನೀ ಬೆಪ್ಪು ಛೇ...ಛೇ...ಛೇ...ಛೇ...ಛೇ...
          ಓ... ನಾನೊಂದು ಮುದ್ದಾದ ಲಿಲ್ಲಿ

ಗಂಡು : ಬೇರಬಿಟ್ಟೆ ಸ್ವಲ್ಪ ನೀನು ನಿಮ್ಮಪ್ಪ ಕಾಣಬೇಕು ಲೇ..ಲೇ.. ಜೈಲು ಲಾಕಪ್ಪ್ 
ಹೆಣ್ಣು : ಅನ್ನಕ್ಕೇ ಇಲ್ಲಿ ಸಿಕ್ಕೆಲ್ಲೂ ಜಂಗ್ಲಿ ನಮ್ಮ ದಾರಿ ರೈಟೋ ಏನಾದರೂ ಆಗಲೀ 
ಗಂಡು : ನೀ ಬೇಕಲ್ಲಾ... ಹೆಣ್ಣು : ಸರಿ ಹೋಗಿಲ್ಲ 
ಗಂಡು : ಓ..ಓ ನೀಗಬೇಕಲ್ಲಾ ... ಹೆಣ್ಣು : ಹ್ಹಾಹ್ಹಾ ಸರಿ ಹೋಗಿಲ್ಲಾ 
ಗಂಡು : ನೀ ಬೇಕಲ್ಲಾ  ನಾ ಇಲ್ಲೇ  ಅಯ್ಯಯ್ಯಯ್ಯಯೋ    
ಹೆಣ್ಣು : ಈ ಪ್ರೀತಿ ಫಜೀತಿ ಛೇ.. ಛೇ..ಛೇ..
          ಓ... ನಾನೊಂದು ಮುದ್ದಾದ ಲಿಲ್ಲಿ ನೀನೊಂದು ಕೋಡಂಗಿ ಸಿಲ್ಲಿ 
          ಬಾಗೋದು ನಾಳೆ ಬೇಯಲ್ಲ ಬೇಳೆ 
          ಅಯೋಗ್ಯ ಅಸಹ್ಯ ಛೇ..ಛೇ.ಛೇ.ಛೇ.
ಗಂಡು : ಒಹೋಹೋ ಬಾರೆನ್ನ ಬೆಚ್ಚನೆ ಬ್ಯೂಟಿ ನಂಗಿಲ್ಲವೇ ಲವೆಂಬ ಡ್ಯೂಟಿ 
           ಗಂಟ ಹಾಕೊಂಡ ಮೇಲೆ ಚಿಂತೆಲ್ಲ ಏಕೆ 
           ಅನ್ಯಾಯ ಅಪಾಯ ಅಯ್ಯಯ್ಯಯ್ಯೋ 
ಹೆಣ್ಣು : ಓ... ನಾನೊಂದು ಮುದ್ದಾದ ಲಿಲ್ಲಿ
 -------------------------------------------------------------------------------------------------------------------------
         
ಬ್ಲಾಕ್ ಮಾರ್ಕೆಟ್ (೧೯೬೭)
ಸಂಗೀತ : ಸತ್ಯಂ ಸಾಹಿತ್ಯ : ಮೋಹಿನಿ ಪ್ರೊಡಕ್ಷನ್ ಗಾಯನ : ಪಿ.ಕಾಳಿಂಗರಾವ್

ಕನ್ನಡ ನಾಡಿನ ಮಹಿಮೆಯ ಕೇಳಿರಿ...
ಕನ್ನಡ ನಾಡಿನ ಮಹಿಮೆಯ ಕೇಳಿರಿ ಕನ್ನಡ ಪುತ್ರರೇ ನೀವೇಲ್ಲಾ
ಕನ್ನಡ ನಾಡಿನ ಮಹಿಮೆಯ ಕೇಳಿರಿ ಕನ್ನಡ ಪುತ್ರರೇ ನೀವೇಲ್ಲಾ
ಕನ್ನಡ ಪುತ್ರರೇ ನೀವೇಲ್ಲಾ 

ಕನ್ನಡ ರಾಜ್ಯದ ಕವಿಗಳು ಹುಟ್ಟಿದ ಪೆರಿಮೆಯು ತುಂಬಿದೆ ನಿಮಗೆಲ್ಲಾ 
ಕನ್ನಡ ರಾಜ್ಯದ ಕವಿಗಳು ಹುಟ್ಟಿದ ಪೆರಿಮೆಯು ತುಂಬಿದೆ ನಿಮಗೆಲ್ಲಾ 
ಪೆರಿಮೆಯು ತುಂಬಿದೆ ನಿಮಗೆಲ್ಲಾ 

ಕಾವೇರಿಯಿಂದ ನಾ ಗೋದಾವರಿ ಮುಟ್ಟಿ....
ಕಾವೇರಿಯಿಂದ ನಾ ಗೋದಾವರಿ ಮುಟ್ಟಿ ಪಸರಿಸಿದ ಪೆರುಮಯ ನಾಡು
ರನ್ನ ಪಂಪರು...  ರನ್ನ ಪಂಪರು ಚೆನ್ನ ಪೊನ್ನರು ಆಡಿ ಪಾಡಿದವನ್ನ ಪ್ರಭುದೇವ
ಅನುಭವ ಸಾರಿದ ಈ ನಾಡು ಅಂಬಿಗರ...
ಅಂಬಿಗರ ಚೌಡಯ್ಯ ಮಡಿವಾಳ ಮಾಚಯ್ಯ ಮಹಾದೇವಿ ಅಕ್ಕ ಜನಿಸಿದ ನಾಡು
ವೀರನಾರಾಯಣನ  ಕಿಂಕರ ಗದುಗಿನ ನಾರಣಪ್ಪ ಜನಿಸಿದ ನಾಡು
ಗದುಗಿನ ನಾರಣಪ್ಪ ಜನಿಸಿದ ನಾಡು ನಮ್ಮ ನಾರಣಪ್ಪ ಜನಿಸಿದ ನಾಡು
ಅಂಜನಿ ಸುತ ಹನುಮಂತ ಜನಿಸಿದ..
ಅಂಜನಿ ಸುತ ಹನುಮಂತ ಜನಿಸಿದ ಸುಂದರ ಚೆಲುವ ಕನ್ನಡ ನಾಡು
ಸದಮಲ ಸುಜಯದ...
ಸದಮಲ ಸುಜಯದ ವಿದ್ಯಾರಣ್ಯರು ಪೊನ್ನಿನ ಮಳೆ ಸುರಿಸಿದ ನಾಡು
ವಂಶ ಪುರುಷರು ಕನಕ ಪುರಂದರದಾಸರು ಜನಿಸಿದ ಈ ನಾಡು
ವಂಶ ಪುರುಷರು ಕನಕ ಪುರಂದರದಾಸರು ಜನಿಸಿದ ಈ ನಾಡು
ಹರಿ ದಾಸರು ಜನಿಸಿದ ಈ ನಾಡು..

ಕನ್ನಡ ಕುಲ ಸಂಸ್ಥಾಪಕರೆನಿಸಿದ... 
ಕನ್ನಡ ಕುಲ ಸಂಸ್ಥಾಪಕರೆನಿಸಿದ ಆಲೂರ ವೆಂಕಟರಾಯರ ನಾಡು
ಕನ್ನಡ ಕವಿ ಕುಲ...
ಕನ್ನಡ ಕವಿ ಕುಲ ಸಂಪತ್ತಿನ ಸುಧೆ ಗೋವಿಂದ ಪೈ ಜನಿಸಿದ ನಾಡು 
ಕನ್ನಡ ಕೊಬ್ಬನ ಕಣ್ಮಣಿಸಿದ ಕೈಲಾಸಂ ಜನಿಸಿದ ನಾಡು 
ಕನ್ನಡ ಕೊಬ್ಬನ ಕಣ್ಮಣಿಸಿದ ಕೈಲಾಸಂ ಜನಿಸಿದ ನಾಡು 
ಕೈಲಾಸಂ ಜನಿಸಿದ ನಾಡು 
ಕನ್ನಡ ನಾಡಿನ ಮಹಿಮೆಯ ಕೇಳಿರಿ ಕನ್ನಡ ಪುತ್ರರೇ ನೀವೇಲ್ಲಾ
ಕನ್ನಡ ನಾಡಿನ ಮಹಿಮೆಯ ಕೇಳಿರಿ ಕನ್ನಡ ಪುತ್ರರೇ ನೀವೇಲ್ಲಾ
ಕನ್ನಡ ಪುತ್ರರೇ ನೀವೇಲ್ಲಾ 
--------------------------------------------------------------------------------------------------------------------------

No comments:

Post a Comment