1039. ಅಡ್ಡದಾರಿ (೧೯೬೮)

ಅಡ್ಡದಾರಿ ಚಿತ್ರದ ಹಾಡುಗಳು 
  1. ನನ್ನ ನಿನ್ನ ಕಣ್ಣು ಸೇರಿದಂದೆ 
  2. ಮದುವೆ ಗಂಡಮ್ಮ ನೋಡಮ್ಮ 
  3. ತಾಳು ತಾಳೆಲೋ ರಂಗಯ್ಯ 
  4. ಆಡಿಸಿ ಅಕ್ಕ ಆಡಿಸಿ ತಂಗಿ 
  5. ಕುಡುಕರೆಲ್ಲಾ ಹುಚ್ಚರಲ್ಲಾ 
  6. ಎಚ್ಚರ ತಂಗಿ ಎಚ್ಚರ 
ಅಡ್ಡದಾರಿ (೧೯೬೮) 
ಸಂಗೀತ : ರಾಜನ ನಾಗೇಂದ್ರ, ಹುಣುಸೂರು ಕೃಷ್ಣಮೂರ್ತಿ  ಗಾಯನ : ಪಿ.ನಾಗೇಶ್ವರರಾವ್ 

ನನ್ನ ನಿನ್ನ ಕಣ್ಣು ಕಣ್ಣು
ಆಹಾ.. ನನ್ನ ನಿನ್ನ ಕಣ್ಣು ಸೇರಿದಂದೆ ನನ್ನವಳಾದೆ ನೀನು
ಮೌನ ಬಿಟ್ಟು ಮಾತನಾಡೆ ಹೆಣ್ಣೇ.. ದೂರ ನಿಲ್ಲಬೇಡ ನನ್ನ ಗಜನಿಂಬೆ ಹಣ್ಣೇ

ರೂರು ರುಕ್ಕು ರುಕ್ಕು ಸೈಯ್ ಸೈಯ್ ಸಕ್ಕೂ ಕ್ಕುಕ್ಕೂ  
ಸೈಯ್ ಸಕ್ಕೂ ಸೈಯ್ ಸಕ್ಕೂ ಸೈಯ್ ಸೈಯ್ ಸೈಯ್

ಅರಳಿ ಗಿಡದ ಮ್ಯಾಲೇ ಏರಿ ಚಿಗುರಿ ಎಲೆಯ ರೂಪ ತಾಳಿ
ಕುಳಿತರಲ್ಲೂ ಬರುತೇನೇ ಕೇಳೇ ಗಾಳಿಯಾಗಿ ತಂಗಾಳಿಯಾಗಿ
ಆಹಾ ..ಆಹಾ  ಆಹಾ .. .ಆಹಾ 
ಅರಳಿ ಗಿಡದ ಮ್ಯಾಲೇ ಏರಿ ಚಿಗುರಿ ಎಲೆಯ ರೂಪ ತಾಳಿ
ಕುಳಿತರಲ್ಲೂ ಬರುತೇನೇ ಕೇಳೇ ಗಾಳಿಯಾಗಿ ತಂಗಾಳಿಯಾಗಿ
ರೊಯ್ಯ್ ರೊಯ್ಯ್ ರೊಯ್ಯ್ ಎಂದೂ ಬಳಸಿ ನಿನ್ನ ಬೀಸಿ ನಾನು 
ಕೈ ಹಿಡಿದು ಆಡಿಸ್ತಿನಿ ಉಯ್ಯಾಲೆಯಾ ನಾ ಜೋಕಾಲಿಯಾ 
ರೊಯ್ಯ್ ರೊಯ್ಯ್ ರೊಯ್ಯ್ ಎಂದೂ ಬಳಸಿ ನಿನ್ನ ಬೀಸಿ ನಾನು 
ಕೈ ಹಿಡಿದು ಆಡಿಸ್ತಿನಿ ಉಯ್ಯಾಲೆಯಾ ನಾ ಜೋಕಾಲಿಯಾ 
ಆಹಾ.. ನನ್ನ ನಿನ್ನ ಕಣ್ಣು ಸೇರಿದಂದೆ ನನ್ನವಳಾದೆ ನೀನು
ಮೌನ ಬಿಟ್ಟು ಮಾತನಾಡೆ ಹೆಣ್ಣೇ.. ದೂರ ನಿಲ್ಲಬೇಡ ನನ್ನ ಗಜನಿಂಬೆ ಹಣ್ಣೇ 

ಹಾವಿನಂತೆ ಹರಿದು ನೀನು ಹೆಡೆಯ ಬಿಚ್ಚಿ ಕಚ್ಚಲು ಬಂದರೇ 
ಮೋಡಿ ಹಾಕಿ ಬರ್ತೀನಿ ಕೇಳೇ ಪುಂಗಿ ಊದಿ ನಾ ಪುಂಗಿ ಊದಿ 

ಹಿಡಿದು ನಿನ್ನ ಬುಟ್ಟಿಲಿಟ್ಟು ಒಡವೆ ವಸ್ತ್ರ ಎಲ್ಲ ಕೊಟ್ಟು 
ತಾಳಿಕಟ್ಟಿ ಸಾಕುತೀನಿ ರಾಣಿಹಾಗೆ ಮಹಾರಾಣಿ ಹಾಗೇ 
ಹಿಡಿದು ನಿನ್ನ ಬುಟ್ಟಿಲಿಟ್ಟು ಒಡವೆ ವಸ್ತ್ರ ಎಲ್ಲ ಕೊಟ್ಟು 
ತಾಳಿಕಟ್ಟಿ ಸಾಕುತೀನಿ ರಾಣಿಹಾಗೆ ಮಹಾರಾಣಿ ಹಾಗೇ 
ಆಹಾ.. ನನ್ನ ನಿನ್ನ ಕಣ್ಣು ಸೇರಿದಂದೆ ನನ್ನವಳಾದೆ ನೀನು
ಮೌನ ಬಿಟ್ಟು ಮಾತನಾಡೆ ಹೆಣ್ಣೇ.. ದೂರ ನಿಲ್ಲಬೇಡ ನನ್ನ ಗಜನಿಂಬೆ ಹಣ್ಣೇ 
ರೂರು ರುಕ್ಕು ರುಕ್ಕು ಸೈಯ್ ಸೈಯ್ ಸಕ್ಕೂ ಕ್ಕುಕ್ಕೂ  
ಸೈಯ್ ಸಕ್ಕೂ ಸೈಯ್ ಸಕ್ಕೂ ಸೈಯ್ ಸೈಯ್ ಸೈಯ್
-------------------------------------------------------------------------------------------------------------------------

ಅಡ್ಡದಾರಿ (೧೯೬೮) 
ಸಂಗೀತ : ರಾಜನ ನಾಗೇಂದ್ರ, ಹುಣುಸೂರು ಕೃಷ್ಣಮೂರ್ತಿ ಗಾಯನ : ಎಲ್.ಆರ್.ಈಶ್ವರಿ 

ಮದುವೆ ಗಂಡಿವ ನೋಡಮ್ಮಾ ಆರತಿ ಬೆಳಗಮ್ಮಾ ಮಂಗಳಾರತಿ ಮಾಡಮ್ಮ

ಗಡ್ಡ ಮೀಸೆ ಬೆಳ್ಳಿದಮ್ಮಾ ಕಡ್ಡಿಯಂಥ ದೇಹವಮ್ಮಾ ದೊಡ್ಡ ಆಸ್ತಿವಂತ ಇವನಮ್ಮಾ 

ಕೈ ಕಾಲು ನಡುಗತಲ್ಲಾ ಕತ್ತು ನೆಟ್ಟಗೆ ನಿಲ್ಲೋದಿಲ್ಲಾ 
ಅ ಆ ಇ ಈ  ಉ ಊ ಎ ಏ ಆಆಆ.. 
ಕೈ ಕಾಲು ನಡುಗತಲ್ಲಾ ಕತ್ತು ನೆಟ್ಟಗೆ ನಿಲ್ಲೋದಿಲ್ಲಾ 
ಸೊಂಟದಲ್ಲಿ ಬಲ ಎಳ್ಳಿಷ್ಟಿಲ್ಲಾ ಕುಂತರೇ ಏಳಲು ಆಗಲ್ಲ 
ಎದ್ದರೆ ನಿಲ್ಲಲು ದಮ್ಮಿಲ್ಲಾ 
ಮದುವೆ ಗಂಡಿವ ನೋಡಮ್ಮಾ ಆರತಿ ಬೆಳಗಮ್ಮಾ ಮಂಗಳಾರತಿ ಮಾಡಮ್ಮ 

ಬೊಕ್ಕನ ಬಾಯನು ಬಿಡಲೊಲ್ಲಾ ಬಿಟ್ಟರೇ ಒಳಗೆ ಹಲ್ಲಿಲ್ಲಾ 

ಹತ್ತಿರ ಕೂತರು ಕಾಣಲ್ಲ ಮೆತ್ತಗೆ ಹೇಳಲು 
ಮೆತ್ತಗೆ ಹೇಳಲು ಕೇಳೋಲ್ಲ 
ಮದುವೆ ಗಂಡಿವ ನೋಡಮ್ಮಾ ಆರತಿ ಬೆಳಗಮ್ಮಾ ಮಂಗಳಾರತಿ ಮಾಡಮ್ಮ 

ತಿಪ್ಪಾರಳ್ಳಿಗೆ ಇವನೇ ಅರಸ ತೊಟ್ಟಿ ಮನೆಯಲಿ ವಾಸಃ 
ಸರಿ ನೀ ಸರಿ ಮರಿ ನಿಮ್ಮ ಮಮರಿ ಸನಿ ಮರಿ ಸನಿ ಮರಿ 
ತಿಪ್ಪಾರಳ್ಳಿಗೆ ಇವನೇ ಅರಸ ತೊಟ್ಟಿ ಮನೆಯಲಿ ವಾಸಃ 
ಆಗಿದೆ ತುಂಬಾ ಆಯಾಸ ಕುಡಿಸುವೇ ಎಣ್ಣೆಯ ಪಾಯಸ 
ಕುಡಿಸುವೇ ಎಣ್ಣೆಯ ಪಾಯಸ 
ಮದುವೆ ಗಂಡಿವ ನೋಡಮ್ಮಾ ಆರತಿ ಬೆಳಗಮ್ಮಾ ಮಂಗಳಾರತಿ ಮಾಡಮ್ಮ 
ಗಡ್ಡ ಮೀಸೆ ಬೆಳ್ಳಿದಮ್ಮಾ ಕಡ್ಡಿಯಂಥ ದೇಹವಮ್ಮಾ ದೊಡ್ಡ ಆಸ್ತಿವಂತ ಇವನಮ್ಮಾ 
ಮದುವೆ ಗಂಡಿವ ನೋಡಮ್ಮಾ ಆರತಿ ಬೆಳಗಮ್ಮಾ ಮಂಗಳಾರತಿ ಮಾಡಮ್ಮ 
--------------------------------------------------------------------------------------------------------------------------

ಅಡ್ಡದಾರಿ (೧೯೬೮)
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ಪುರಂದರದಾಸ ಗಾಯನ : ಎಸ್.ಜಾನಕೀ 

ತಾಳು ತಾಳೆಲೋ ರಂಗಯ್ಯ ನೀ ತಾಳು ತಾಳೆಲೋ ರಂಗಯ್ಯ
ನಾಳೆ ನಮ್ಮ ಮನೆಗೆ ಬಂದರೇ ನಿನ್ನ ಕಾಲು ಕಂಬಕೆ ಕಟ್ಟಿ ಹೇಳುವೆ ಗೋಪಿಕೆ

ದೊರೆಗಳ ಮಗನೆಂಬುದಕೇನೋ... ಆಆಆ...ಆಆಆ... 
ಗಮಪನಿಸ ಮಪನಿಸಗ ಮಪಸ ನಿ ಗ 
ದೊರೆಗಳ ಮಗನೆಂಬುದಕೇನೋ ಗೋವರ್ಧನ ಗಿರಿ ಎತ್ತಿದ ಸೊಕ್ಕೇನೋ 
ದುರುಳುತನವು ನಿನಗೆ ತರವೇನು ಹಿಂದೆ ದೊರೆತ ಕಡಗೋಲೇಟು ಮರೆತೆನೋ ರಂಗ 
ತಾಳು ತಾಳೆಲೋ ರಂಗಯ್ಯ ನೀ ತಾಳು ತಾಳೆಲೋ ರಂಗಯ್ಯ

ಚಿಕ್ಕಮಕ್ಕಳು ಇಲ್ಲವೆಂದು ನೀ ತಪ್ಪುಲತೆಯ ಮಾಡುವೆರೇನು

ಸಿಕ್ಕಿದ ಗೋಪಾಲ ಹಿಡಿ ಹಿಡಿ ಎಂದರೇ 
ಸಿಕ್ಕಿದ ಗೋಪಾಲ ಹಿಡಿ ಹಿಡಿ ಎಂದರೇ ಹಿಕ್ಕಿ ಪಿಕ್ಕಿ ಪತ್ರರೇ ಬಿಡುವರೇನು ರಂಗ
ತಾಳು ತಾಳೆಲೋ ರಂಗಯ್ಯ ನೀ ತಾಳು ತಾಳೆಲೋ ರಂಗಯ್ಯ

ಕಟ್ಟಿದ ಆಕಳ ಮೊಲೆಯುಂಡು ಕರು ಬಿಟ್ಟು ಓಡುವುದೇಕೆಲೋ ರಂಗ 

ಸೃಷ್ಠಿದೊಡೆಯ ಶ್ರೀ ಪುರಂದರ ವಿಠಲನೇ ಇಟ್ಟಿಗೆ ಮೇಲೆ ನಿಂತ ಕಾರಣವೇನು
ತಾಳು ಸ್ವಲ್ಪು ತಾಳು ತಾಳೆಲೋ ರಂಗಯ್ಯ
ನಾಳೆ ನಮ್ಮ ಮನೆಗೆ ಬಂದರೇ ನಿನ್ನ ಕಾಲು ಕಂಬಕೆ ಕಟ್ಟಿ ಹೇಳುವೆ ಗೋಪಿಕೆ
ತಾಳು ತಾಳೆಲೋ ರಂಗಯ್ಯ ನೀ ತಾಳು ತಾಳೆಲೋ ರಂಗಯ್ಯ
-------------------------------------------------------------------------------------------------------------------------

ಅಡ್ಡದಾರಿ (೧೯೬೮)
ಸಂಗೀತ : ರಾಜನ ನಾಗೇಂದ್ರ, ಹುಣುಸೂರು ಕೃಷ್ಣಮೂರ್ತಿ ಗಾಯನ : ಏಲ್.ಆರ್.ಈಶ್ವರಿ, ಎಸ್.ಜಾನಕೀ  

ಗಂಡಸರೆಲ್ಲಾ ಮಂಕುಗಳು ಮಾತಿಗೆ ಮುಂಚೆ ಪರಚಾಡೋ ಬೆಕ್ಕುಗಳೂ
ಆಆಆ... ಹೆಂಡತಿ ಎದುರು ಬಿದ್ದರೇ ಬಾಲ ಮುದುರಿ ಕೂಡುವ ಪುಕ್ಕರು ಆಆಆ....
ಆಡಿಸಿ ತಂಗಿ ಆಡಿಸಿ ಅಕ್ಕ ಆಡಲಿ ಮೀಸೆಯ ಹೊತ್ತವರು

ಅಡಗಲಿ ಗಂಡಿನ ದೂರತ್ತು ತಿಳಿಯಲಿ ಹೆಣ್ಣಿನ ಕಿಮ್ಮತ್ತು 
ಹೊಯ್ ಆಡಿಸಿ ತಂಗಿ ಆಡಿಸಿ ಅಕ್ಕ ಆಡಲಿ ಮೀಸೆಯ ಹೊತ್ತವರು 
ಅಡಗಲಿ ಗಂಡಿನ ದೂರತ್ತು ತಿಳಿಯಲಿ ಹೆಣ್ಣಿನ ಕಿಮ್ಮತ್ತು 
ಆಡಿಸಿ ತಂಗಿ ಆಡಿಸಿ ಅಕ್ಕ ಆಡಲಿ ಮೀಸೆಯ ಹೊತ್ತವರು 

ಗಲ್ಲಾ ಸವರಿ ತುಟಿಗೆ ತುಟಿ ತಂದರೇ ಗಂಡ ಹೆಂಡತಿಗೆ ಗುಲಾಮ
ಒಲ್ಲೆಯೆಂದು ದೂರ ಸರಿದರೇ ಕಿಂಚಿ ಹಾಕ್ತಾರೆ ಸಲಾಮ
ಹತ್ತಿರ ಕೂತು ಮಾತಾಡಿ ಮೆಲ್ಲಗೆ ಚಾಡಿಯ ಹೇಳಲು ಕೇಳ್ತಾರೆ 

ಅತ್ತಿಗೆ ಅಣ್ಣ ತಮ್ಮರ ಮೆರೆತು  ಭಾವದ ಬೆಂಕಿ ಹಂಚ್ತಾರೇ ಆಆಆ.. 
ತತ್ ಥೈ ಆಡಿಸಿ ತಂಗಿ ಆಡಿಸಿ ಅಕ್ಕ ಆಡಲಿ ಮೀಸೆಯ ಹೊತ್ತವರು 
ಅಡಗಲಿ ಗಂಡಿನ ದೂರತ್ತು ತಿಳಿಯಲಿ ಹೆಣ್ಣಿನ ಕಿಮ್ಮತ್ತು 
ಆಡಿಸಿ ತಂಗಿ ಆಡಿಸಿ ಅಕ್ಕ ಆಡಲಿ ಮೀಸೆಯ ಹೊತ್ತವರು 

ಗುಂಡಿಗೆ ತಟ್ಟಿ ಹಾರಾಡೋ ಗಂಡಸೂ ಹೆಂಡತಿ ಕೈಯಿನ ಬೊಂಬೆಯೋ 
ಒಲಿದರೇ ನಾರೀ ಮುನಿದರೇ ಮಾರೀ ಎಂಬುದು ಎಂದೆಂದು ಸತ್ಯವೂ 
ಹೆಂಡತಿ ನೀತಿ ಪ್ರೀತಿಯೊಳ್ಳಿದ್ದರೆ ಗಂಡಿನ ಬಾಳೆಲ್ಲಾ ಬಂಗಾರ 

ಅಡ್ಡದಾರಿ ಹಿಡಿಯೋ ಚೆಂಡಿಯಾದರೇ ಹಾಳಾಗುತ್ತೇ ಸಂಸಾರ ಆಆಆ.. 
ತತ್ ಥೈ ಆಡಿಸಿ ತಂಗಿ ಆಡಿಸಿ ಅಕ್ಕ ಆಡಲಿ ಮೀಸೆಯ ಹೊತ್ತವರು 
ಅಡಗಲಿ ಗಂಡಿನ ದೂರತ್ತು ತಿಳಿಯಲಿ ಹೆಣ್ಣಿನ ಕಿಮ್ಮತ್ತು 
ಆಡಿಸಿ ತಂಗಿ ಆಡಿಸಿ ಅಕ್ಕ ಆಡಲಿ ಮೀಸೆಯ ಹೊತ್ತವರು 
 -------------------------------------------------------------------------------------------------------------------------

ಅಡ್ಡದಾರಿ (೧೯೬೮)
ಸಂಗೀತ : ರಾಜನ ನಾಗೇಂದ್ರ, ಹುಣುಸೂರು ಕೃಷ್ಣಮೂರ್ತಿ ಗಾಯನ : ಪಿ.ಬಿ.ಶ್ರೀನಿವಾಸ 

ಹಹ್ಹಹ್ಹ.. ಕುಡುಕುರೆಲ್ಲಾ ಹುಚ್ಚರಲ್ಲಾ
ಕುಡುಕುರೆಲ್ಲಾ ಹುಚ್ಚರಲ್ಲಾ ಹುಚ್ಚರ್ಯಾರು ಕುಡಿಯೋದಿಲ್ಲ
ಕುಡಿದು ಮಸ್ತಿ ಏರದಿದ್ದರೇ ಕುಸ್ತಿ ಮಾಡೋಕ ಆಗಲ್ಲ

ಯೂ ಯೂ ಯೂ ಯೂ ಡೂಡೂಡೂಡೂ
ಲಾ ಲಲ್ಲಲ್ಲಲಾ ಲಾಲ 

ಬ್ರಾಂದಿ ವಿಸ್ಕಿ ರಮ್  ಜಿನ್  ಎಲ್ಲ ಬೆರೆತು ಒಟ್ಟಿಗೆ 
ಹೊಟ್ಟೆಯೊಳಗೆ ಸೇರಲಾಗ ಸ್ವರ್ಗ ಬಂದು ನೆಟ್ಟಗೇ 
ಹ್ಹಾಹುಂ.. ಹ್ಹಾಹುಂ.. 
ಬ್ರಾಂದಿ ವಿಸ್ಕಿ ರಮ್  ಜಿನ್  ಎಲ್ಲ ಬೆರೆತು ಒಟ್ಟಿಗೆ 
ಹೊಟ್ಟೆಯೊಳಗೆ ಸೇರಲಾಗ ಸ್ವರ್ಗ ಬಂದು ನೆಟ್ಟಗೇ 
ಕಣ್ಣು ಮುಂದೆ ನಿಲ್ಲಿತೋ ಬಣ್ಣ ಬೆಡಗು ತೋರುತೋ 
ಕಣ್ಣು ಮುಂದೆ ನಿಲ್ಲಿತೋ ಬಣ್ಣ ಬೆಡಗು ತೋರುತೋ 
ಹೇಗೆ ತನವ ಓಡಿಸಿ ಎದೆಗೆ ಧೈರ್ಯ ತಂದು ತುಂಬುತ್ತೋ 
ಕುಡುಕುರೆಲ್ಲಾ ಹುಚ್ಚರಲ್ಲಾ ಹುಚ್ಚರ್ಯಾರು ಕುಡಿಯೋದಿಲ್ಲ

ಹಿಂದೆ ಮುಂದೆ ಯೋಚನೆ ಇಲ್ಲದೇ ಹರಟೋ ಗಯ್ಯಾಳಿಗೆ 
ಬುದ್ದಿ ಕಲಿಸಲು ಒಮ್ಮೆ ಕುಡಿದು ಭಿಗಿಯೋ ನಾಲ್ಕು ಕೆನ್ನೆಗೇ 
ಡಿಶುಂ ಡಿಶುಂ ಡುಮ್ಮಿ ಡುಮ್ಮ 
ಹಿಂದೆ ಮುಂದೆ ಯೋಚನೆ ಇಲ್ಲದೇ ಹರಟೋ ಗಯ್ಯಾಳಿಗೆ 
ಬುದ್ದಿ ಕಲಿಸಲು ಒಮ್ಮೆ ಕುಡಿದು ಭಿಗಿಯೋ ನಾಲ್ಕು ಕೆನ್ನೆಗೇ 
ಏಟು ತಿಂದ ಹೆಣ್ಣದು ಹದ್ದು ಮೀರಿ ಹೋಗದು 
ಏಟು ತಿಂದ ಹೆಣ್ಣದು ಹದ್ದು ಮೀರಿ ಹೋಗದು 
ಎದುರು ನಿಂತು ನಿನ್ನ ಮನೆಯನೆಂದು ಹಾಳು ಮಾಡದು 
ಕುಡುಕುರೆಲ್ಲಾ ಹುಚ್ಚರಲ್ಲಾ ಹುಚ್ಚರ್ಯಾರು ಕುಡಿಯೋದಿಲ್ಲ
ಕುಡಿದು ಮಸ್ತಿ ಏರದಿದ್ದರೇ ಕುಸ್ತಿ ಮಾಡೋಕ ಆಗಲ್ಲ
ಕುಡುಕುರೆಲ್ಲಾ ಹುಚ್ಚರಲ್ಲಾ ಹುಚ್ಚರ್ಯಾರು ಕುಡಿಯೋದಿಲ್ಲ
ಯಾ ಯಾಯಾಯಾಯಾ ಡಾ ಡಾಡಾಡಾಡಾ
ಲಾ ಲಲ್ಲಲ್ಲಲಾ ಲಾಲ ಹಹ್ಹಹ್ಹಹ ಲಾ ಲಲ್ಲಲ್ಲಲಾ ಲಾಲ ಹೀಹ್ಹಿ ಹೀಹ್ಹಿ ಹೀಹ್ಹಿ 
ಲಾ ಲಲ್ಲಲ್ಲಲಾ ಲಾಲ 
--------------------------------------------------------------------------------------------------------------------------

ಅಡ್ಡದಾರಿ (೧೯೬೮)
ಸಂಗೀತ : ರಾಜನ ನಾಗೇಂದ್ರ, ಹುಣುಸೂರು ಕೃಷ್ಣಮೂರ್ತಿ ಗಾಯನ : ಪಿ.ಬಿ.ಶ್ರೀನಿವಾಸ 

ಎಚ್ಚರ ತಂಗಿ ಎಚ್ಚರ
ಎಚ್ಚರ ತಂಗಿ ಎಚ್ಚರ ಎಚ್ಚರ ತಮ್ಮ ಎಚ್ಚರ
ಎಚ್ಚರ ತಪ್ಪಿ ನಡೆದರೇ ನೀನು ಕೊಚ್ಚೆಲ್ಲಿ ಬೀಳುವೆ ಸಂದೇಹವೇನೂ
ಎಚ್ಚರ ತಂಗಿ ಎಚ್ಚರ ಎಚ್ಚರ ತಮ್ಮ ಎಚ್ಚರ

ಬೆಂಕಿಯ ಜೊತೆಯಲ್ಲಿ ಹುಡುಗಾಟ ಯಾಕೇ 
ಮೈ ಸುಟ್ಟ ಮೇಲೆ ಮರುಗಾಟ ಯಾಕೇ 
ಬೆಂಕಿಯ ಜೊತೆಯಲ್ಲಿ ಹುಡುಗಾಟ ಯಾಕೇ 
ಮೈ ಸುಟ್ಟ ಮೇಲೆ ಮರುಗಾಟ ಯಾಕೇ 
ಹಾವಿಗೆ ಮುತ್ತಿಡುವ ಸರಸವು  ಯಾಕೇ 
ಹಾವಿಗೆ ಮುತ್ತಿಡುವ ಸರಸವು ಯಾಕೇ 
ಹಾಳಾಗಿ ಹೋದಿಯೇ ಜೋಕೆ ಜೋಕೇ 
ಎಚ್ಚರ ತಂಗಿ ಎಚ್ಚರ ಎಚ್ಚರ ತಮ್ಮ ಎಚ್ಚರ 

ನಾವೇ ಹೆಚ್ಚು ಎಂಬುವ ಹುಚ್ಚು ಹಚ್ಚದೇ ಬಿಡದು ಮನೆಯಲ್ಲಿ ಕಿಚ್ಚು 

ರೊಚ್ಚು ರಂಪ ರಗಳೆಯ ಬಿಟ್ಟು ಒಗ್ಗಟ್ಟಲ್ಲಿದರೇ ಸುಖ ಸಂಪತ್ತುಂಟು 
ಎಚ್ಚರ ತಂಗಿ ಎಚ್ಚರ 

ಮನೆಯಲ್ಲಿ ಹುಟ್ಟುವ ಸಣ್ಣನೇ ಬೆಂಕಿ  ಊರನ್ನು ಸುಡಬಹುದು ಎಚ್ಚರ... 

ಊರಿಗೆ ಹತ್ತಿದ ಬೆಂಕಿಯ ಜ್ವಾಲೇ.. ದೇಶವ ಸುಡಬಹುದು ಎಚ್ಚರ   
ಎಚ್ಚರ ತಂಗಿ ಎಚ್ಚರ ಎಚ್ಚರ ತಮ್ಮ ಎಚ್ಚರ 
ಎಚ್ಚರ ತಪ್ಪಿ ನಡೆದರೇ ನೀನು ಕೊಚ್ಚೆಲ್ಲಿ ಬೀಳುವೆ ಸಂದೇಹವೇನೂ
ಎಚ್ಚರ ಎಚ್ಚರ ಎಚ್ಚರ  ಎಚ್ಚರ 
-------------------------------------------------------------------------------------------------------------------------

No comments:

Post a Comment