ಸ್ವಪ್ನ ಚಿತ್ರದ ಹಾಡುಗಳು
ಆ ಮನಸೇ ಒಂದು ಆಲಯವಾಗೇ... ಆ ಆಲಯ ದೇವತೆ ನೀ ನಾಗೇ
- ಅರ್ಪಣೆ ನಿನಗೆ ಅರ್ಪಣೆ
- ಇದೇ ಪ್ರಥಮ ಪ್ರೇಮ ಗೀತೆ
- ಶೀರಸ್ತು ಮಧುಮಗನೆ
- ಬಂಗಾರ ಬೊಂಬೆಯ ಮಾಡಿ
- ಪುಟ್ಟ ಪುಟ್ಟ ಕೆಂದಾವರೇ
- ಮಲ್ಲೆ ಮೊಗ್ಗೂ ಹೂವಾಗಿಯೇ ಆಡಿದೇ
ಸ್ವಪ್ನ (೧೯೮೧) - ಅರ್ಪಣೆ ನಿನಗೆ ಅರ್ಪಣೆ
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ.
ಅರ್ಪಣೆ ನಿನಗೆ ಅರ್ಪಣೆ
ಅರ್ಪಣೆ ನಿನಗೆ ಅರ್ಪಣೆ ಈ ಬಾಳ ಆರಾಧನೆ...
ಅರ್ಪಣೆ ನಿನಗೆ ಅರ್ಪಣೆ ಓ..ಪ್ರಿಯೇ.. ಓ..ಪ್ರಿಯೇ.. ಓ..ಪ್ರಿಯೇ
ಲಕ್ಷ ದೀಪ ಜೊತೆಯಾಗಿ ಬೆಳಗಿ ಮರೆವಂತೇ ಕಣ್ಣ ಮಿಂಚು
ಮುತ್ತು ರತ್ನ ಮಳೆಯಾಗಿ ಚೆಲ್ಲಿ ಹೊಳೆವಂತೆ ನಗೆಯ ಸಂಚು
ಅರಳಿ ನಿಂತ ಕಮಲದಂತೆ ಪಾದ ಇಡಲು ಹೆಜ್ಜೆ ಉಲಿವ ಗೆಜ್ಜೆ ನಾದ
ಶೃತಿಯು ಸ್ವರವೂ ಕಲೆತಿರಲು ಹೊಸ ರಾಗದ ಪ್ರಾರಂಭ
ಮನಸು ಮನಸು ಬೆರೆತಿರಲು ಅನುರಾಗದ ಆರಂಭ
ಶೃತಿಯು ಸ್ವರವೂ ಕಲೆತಿರಲು ಹೊಸ ರಾಗದ ಪ್ರಾರಂಭ
ಮನಸು ಮನಸು ಬೆರೆತಿರಲು ಅನುರಾಗದ ಆರಂಭ ಆ ಮನಸೇ ಒಂದು ಆಲಯವಾಗೇ... ಆ ಆಲಯ ದೇವತೆ ನೀ ನಾಗೇ
ಆ ಆಲಯ ದೇವತೆ ನೀ ನಾಗೇ ಧೂಪ ದೀಪ ವೇದ ನಾದ ಎಲ್ಲ ಅರ್ಪಣೆ
ಅರ್ಪಣೆ ನಿನಗೆ ಅರ್ಪಣೆ
ಒಡಲಿನಲ್ಲಿ ಕಣ ಕಣವು ನಿನ್ನ ಪ್ರತಿಬಿಂಬ ತುಂಬಿದಾಗ
ಚೆಲುವಿನಿಂದ ಕ್ಷಣ ಕ್ಷಣವೂ ನಿನ್ನ ಹೆಸರನ್ನೆ ಜಪಿಸುವಾಗ
ನಿದಿರೆ ಇಂದು ನಯನದಿಂದ ದೂರ ಪಡೆವುದೆಂದು ತುಟಿಯ ಜೇನಸಾರ
ಬಾನು ಭೂಮಿ ಸೇರಿದರೇ ಅದು ಪೃಕೃತಿಯ ಸಮ್ಮಿಲ್ಲನ
ಜೀವ ಜೀವ ಸೇರಿದರೇ ಅದು ಪ್ರಣಯದ ಶುಭ ಮಿಲನ

ಆ ಪ್ರಣಯವೇ ಒಂದು ಗೋಪುರ ಹಾಗೇ... ಆ ಗೋಪುರ ಕಲಶವು ನೀನಾಗೇ
ಆ ಗೋಪುರ ಕಲಶವು ನೀನಾಗೇ ಹಣ್ಣು ಹೂವೂ ಹೋಮ ಹವನ ಎಲ್ಲ ಅರ್ಪಣೆ
ಅರ್ಪಣೆ ನಿನಗೆ ಅರ್ಪಣೆ ಈ ಬಾಳ ಆರಾಧನೆ
ಅರ್ಪಣೆ ನಿನಗೆ ಅರ್ಪಣೆ ಓ..ಪ್ರಿಯೇ.. ಓ..ಪ್ರಿಯೇ..ಹ್ಹಾ ಓ..ಪ್ರಿಯೇ
--------------------------------------------------------------------------------------------------------------------------
ಸ್ವಪ್ನ (೧೯೮೧) - ಇದೇನೇ ಪ್ರಥಮ ಪ್ರೇಮಗೀತೆ
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ.
ಹೂಂ ಹೂಂ ಹೂಂ ಹೂಂ ಆಆಆ...
ಇದೇನೇ ಪ್ರಥಮ ಪ್ರೇಮಗೀತೆ ಈ ನನ್ನ ಎದೆಯ ಭಾವ ಗೀತೆ
ನೀನೇನೆ ಅದಕೇ ಸ್ಫೂರ್ತಿ ಚಿನ್ನ ನಿನ್ನಂದ ಸೂರೆಗೊಂಡಿತೆನ್ನ..
ನಿನ್ನಂದ ಸೂರೆಗೊಂಡಿತೆನ್ನ
ಇದೇನೇ ಪ್ರಥಮ ಪ್ರೇಮಗೀತೆ ಈ ನನ್ನ ಎದೆಯ ಭಾವ ಗೀತೆ
ನೀನೇನೆ ಅದಕೇ ಸ್ಫೂರ್ತಿ ಚಿನ್ನ ನಿನ್ನಂದ ಸೂರೆಗೊಂಡಿತೆನ್ನ..
ನಿನ್ನಂದ ಸೂರೆಗೊಂಡಿತೆನ್ನ
ಮಿಂಚಿಗೆ ಹೋಲಿಸಲೇ ನಾನು ಆ ಬೆಳಕು ಅರ್ಧ ಕ್ಷಣ
ಹೂವಿಗೇ ಹೋಲಿಸಲೇ ಇನ್ನೂ ಆ ಸೊಬಗು ಒಂದೇ ದಿನ
ತಾರೆಯನೇ ಕರೆಯಲೇ ನಾ ನಿನ್ನ ಹಗಲಲ್ಲಿ ಕಾಣಿಸದಲ್ಲ
ಏನಿಂದು ಕರೆಯಲೇ ನಾ ಚಿನ್ನ ನನಗೊಂದು ತಿಳಿಯುವುದಿಲ್ಲ
ತಿಳಿದಿಹುದು ಒಂದೇ ಮಾತೇನೇ ನೀ ನನ್ನ ಪ್ರಾಣಪ್ರಿಯೇ
ಪ್ರೇಮ... ಪ್ರೇಮ.. ಪ್ರೇಮ
ಇದೇನೇ ಪ್ರಥಮ ಪ್ರೇಮಗೀತೆ
ಈ ನನ್ನ ಎದೆಯ ಭಾವ ಗೀತೆ ನೀನೇನೆ ಅದಕೇ ಸ್ಫೂರ್ತಿ ಚಿನ್ನ
ನಿನ್ನಂದ ಸೂರೆಗೊಂಡಿತೆನ್ನ ನಿನ್ನಂದ ಸೂರೆಗೊಂಡಿತೆನ್ನ
ಹೃದಯದ ಬಾಷೆಗೆ ಮಾತಿಲ್ಲಚಂದ ನಡೆ ಕಾಸವೂ ಇಲ್ಲ
ನೀ ನಗಲು ನಾನು ನಾನಲ್ಲ ಕಾರಣವ ದೇವರೇ ಬಲ್ಲ
ತಿಳಿದಿಹುದು ಒಂದೇ ಮಾತೇನೇ ನೀ ನನ್ನ ಪ್ರಾಣಪ್ರಿಯೇ
ಇದೇನೇ ಪ್ರಥಮ ಪ್ರೇಮಗೀತೆ ಈ ನನ್ನ ಎದೆಯ ಭಾವ ಗೀತೆ
ನೀನೇನೆ ಅದಕೇ ಸ್ಫೂರ್ತಿ ಚಿನ್ನ ನಿನ್ನಂದ ಸೂರೆಗೊಂಡಿತೆನ್ನ..
ನಿನ್ನಂದ ಸೂರೆಗೊಂಡಿತೆನ್ನ
ಇದೇನೇ ಪ್ರಥಮ ಪ್ರೇಮಗೀತೆ ಈ ನನ್ನ ಎದೆಯ ಭಾವ ಗೀತೆ
ನೀನೇನೆ ಅದಕೇ ಸ್ಫೂರ್ತಿ ಚಿನ್ನ ನಿನ್ನಂದ ಸೂರೆಗೊಂಡಿತೆನ್ನ..
ನಿನ್ನಂದ ಸೂರೆಗೊಂಡಿತೆನ್ನ
ಹೂವಿಗೇ ಹೋಲಿಸಲೇ ಇನ್ನೂ ಆ ಸೊಬಗು ಒಂದೇ ದಿನ
ತಾರೆಯನೇ ಕರೆಯಲೇ ನಾ ನಿನ್ನ ಹಗಲಲ್ಲಿ ಕಾಣಿಸದಲ್ಲ
ಏನಿಂದು ಕರೆಯಲೇ ನಾ ಚಿನ್ನ ನನಗೊಂದು ತಿಳಿಯುವುದಿಲ್ಲ
ತಿಳಿದಿಹುದು ಒಂದೇ ಮಾತೇನೇ ನೀ ನನ್ನ ಪ್ರಾಣಪ್ರಿಯೇ
ಪ್ರೇಮ... ಪ್ರೇಮ.. ಪ್ರೇಮ
ಇದೇನೇ ಪ್ರಥಮ ಪ್ರೇಮಗೀತೆ
ಈ ನನ್ನ ಎದೆಯ ಭಾವ ಗೀತೆ ನೀನೇನೆ ಅದಕೇ ಸ್ಫೂರ್ತಿ ಚಿನ್ನ
ನಿನ್ನಂದ ಸೂರೆಗೊಂಡಿತೆನ್ನ ನಿನ್ನಂದ ಸೂರೆಗೊಂಡಿತೆನ್ನ
ಕವಿರತ್ನ ರನ್ನನು ನಾನಲ್ಲ ರಸಿಕರ ರಾಜನು ನಾನಲ್ಲ
ಬರೆಯಲು ಕಾಗದ ಬೇಕಿಲ್ಲ ಮೇಘನಿಗೆ ಕಣ್ಣಹಿಹುದಲ್ಲಹೃದಯದ ಬಾಷೆಗೆ ಮಾತಿಲ್ಲಚಂದ ನಡೆ ಕಾಸವೂ ಇಲ್ಲ
ನೀ ನಗಲು ನಾನು ನಾನಲ್ಲ ಕಾರಣವ ದೇವರೇ ಬಲ್ಲ
ತಿಳಿದಿಹುದು ಒಂದೇ ಮಾತೇನೇ ನೀ ನನ್ನ ಪ್ರಾಣಪ್ರಿಯೇ
ಪ್ರೇಮ... ಪ್ರೇಮ.. ಪ್ರೇಮ
ಇದೇನೇ ಪ್ರಥಮ ಪ್ರೇಮಗೀತೆ ಈ ನನ್ನ ಎದೆಯ ಭಾವ ಗೀತೆ
ನೀನೇನೆ ಅದಕೇ ಸ್ಫೂರ್ತಿ ಚಿನ್ನ
ನಿನ್ನಂದ ಸೂರೆಗೊಂಡಿತೆನ್ನ ನಿನ್ನಂದ ಸೂರೆಗೊಂಡಿತೆನ್ನ
---------------------------------------------------------------------------------------

ಸ್ವಪ್ನ (೧೯೮೧) - ಶ್ರೀ ರಸ್ತು ಮದುಮಗನೇ
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಬಿ.ಎಸ್. ಪಿ.ಸುಶೀಲಾ
ಗಂಡು : ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾಥ ಸಾಧಕೇ
ಚರಣ್ಯೇ ತ್ರಿಯಂಬಕ ವೈದೇಹೀ ನಾರಾಯಣ ನಮೋಸ್ತುತೇ
ಕೋರಸ್ : ಆಆಆಅ... ಆಆಆ...
ಹೆಣ್ಣು : ಶ್ರೀ ರಸ್ತು ಮದುಮಗನೇ ಶುಭಮಸ್ತು ಮದುಮಗಳೇ
ಈ ಮಂಗಳ ಶುಭದಿನದಲ್ಲಿ ಕಲ್ಯಾಣಮಸ್ತು
ಶ್ರೀ ರಸ್ತು (ಮದುಮಗನೇ) ಶುಭಮಸ್ತು (ಮದುಮಗಳೇ)
ಗಂಡು : ಮಾಂಗಲ್ಯಮ್ ತಂತು ನಾನೇನ್ ಮಮ ಜೀವನ್ ಹೇತುನಾ
ಕಂಠೇ ಬದ್ದನಾಮಿ ಶುಭಗೇ ತ್ವಂ ಜೀವ ಶರತಾಂ ಶತಂ
ಹೆಣ್ಣು : ವೈದೇಹಿಯಾ ಜೊತೆ ರಾಮಚಂದ್ರನೂ ... ಪದ್ಮವಾತಿ ಜೊತೆ ಶ್ರೀನಿವಾಸನು
ಶುಭಮಂತ್ರ ಘೋಷಕೆ ಒಂದುಗೂಡಲಿ ಶತಮಾನ ದಾಂಪತ್ಯ ನಿಮಗಾಗಲೀ
ಶುಭಮಂತ್ರ ಘೋಷಕೆ ಒಂದುಗೂಡಲಿ ಶತಮಾನ ದಾಂಪತ್ಯ ನಿಮಗಾಗಲೀ
ನಿಮ್ಮ ಕನಸೆಲ್ಲಾ ಇಂದೂ ಈಡೇರಲಿ
ಶ್ರೀ ರಸ್ತು ಮದುಮಗನೇ ಶುಭಮಸ್ತು ಮದುಮಗಳೇ
ಈ ಮಂಗಳ ಶುಭದಿನದಲ್ಲಿ ಕಲ್ಯಾಣಮಸ್ತು
ಶ್ರೀ ರಸ್ತು (ಮದುಮಗನೇ) ಶುಭಮಸ್ತು (ಮದುಮಗಳೇ)
ಗಂಡು : ಮಮತೆಯ ಮೂರ್ತಿಯೂ ಆದಿ ಲಕ್ಷ್ಮೀ .. ಕರುಣೆಯ ಕಡಲಿವಳೂ ಗಜಲಕ್ಷ್ಮೀ
ಧನಕನಕ ಕೊಡುವವಳೂ ಧನ ಲಕ್ಷ್ಮೀ .. ದವಸಗಳ ತರುವವಳೂ ಧಾನ್ಯಲಕ್ಷ್ಮೀ
ಧ್ಯಾನ ಗಂಗೆಗೇ ಇವಳೂ ವಿದ್ಯಾ ಲಕ್ಷ್ಮೀ.. ಜಯಭೇರಿ ಹೊಡೆವವಳೂ ವಿಜಯಲಕ್ಷ್ಮೀ ..
ಶಕ್ತಿ ಸ್ವರೂಪಿಣೀಯೂ ಧೈರ್ಯ ಲಕ್ಷ್ಮೀ .. ವಂಶವನೂ ಬೆಳೆಸುವವಳೂ ಸಂತಾನ ಲಕ್ಷ್ಮೀ
ಹೆಣ್ಣು : ಈ ಅಷ್ಟಲಕ್ಷ್ಮಿಯರ ಅಷ್ಟೂ ಗುಣಗಳ ವಂಶವಾದವಳ ಗೃಹ ಲಕ್ಷ್ಮೀ
ಶ್ರೀ ರಸ್ತು ಮದುಮಗನೇ ಶುಭಮಸ್ತು ಮದುಮಗಳೇ
ಕೋರಸ್ : ಆಆಆ... ಆಆಆ... ಆಆಆ... ಆಆಆ... ಆಆಆ... ಆಆಆ...
ಹೆಣ್ಣು : ಅನುರಾಗವೇ ಸೋಬಾನಿ ಹಾಡಾಗೀ ಆನಂದವೇ ಉಯ್ಯಾಲೇ ತಾನಾಗೀ
ಹೊಸ ಆಸೆಯೇ ಮಧು ಮಂಚ ಹೂವಾಗಿ ಹೊಸ ಬಂಧನ ಶುಭ ನಾಟ್ಯ ತಾನಾಗೀ
ನಿಮ್ಮ ಚಿರಕಾಲ ಪ್ರೇಮಾ.. ಫಲ ನೀಡಲೀ ..
ಶ್ರೀ ರಸ್ತು ಮದುಮಗನೇ ಶುಭಮಸ್ತು ಮದುಮಗಳೇ
ಈ ಮಂಗಳ ಶುಭದಿನದಲ್ಲಿ ಕಲ್ಯಾಣಮಸ್ತು
ಶ್ರೀ ರಸ್ತು (ಮದುಮಗನೇ) ಶುಭಮಸ್ತು (ಮದುಮಗಳೇ)
-------------------------------------------------------------------------------------------------------------------------
ಸ್ವಪ್ನ (೧೯೮೧) - ಬಂಗಾರ ಬೊಂಬೆಯ ಮಾಡಿ
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ.
ಗಂಡು : ಬಂಗಾರ ಬೊಂಬೆಯ ಮಾಡಿ ಆ ಬೊಂಬೆಗೆ ಪ್ರಾಣವ ನೀಡಿ
ಆ ಬ್ರಹ್ಮದೇವ ಭೂಮಿಗಿಟ್ಟ ಭಾಗ್ಯ ನೀನೇನೇ
ಆ ಬ್ರಹ್ಮದೇವ ಭೂಮಿಗಿಟ್ಟ ಭಾಗ್ಯ ನೀನೇನೇ ಸ್ವಪ್ನಾ.. ಸ್ವಪ್ನಾ.. ಹೇ..ಓ.. ಸ್ವಪ್ನಾ.. ಓ.. ಸ್ವಪ್ನಾ.ಸ್ವಪ್ನಾ..
ಬಂಗಾರ ಬೊಂಬೆಯ ಮಾಡಿ ಆ ಬೊಂಬೆಗೆ ಪ್ರಾಣವ ನೀಡಿ
ಆ ಬ್ರಹ್ಮದೇವ ಭೂಮಿಗಿಟ್ಟ ಭಾಗ್ಯ ನೀನೇನೇ
ಆ ಬ್ರಹ್ಮದೇವ ಭೂಮಿಗಿಟ್ಟ ಭಾಗ್ಯ ನೀನೇನೇ ಸ್ವಪ್ನಾ.. ಸ್ವಪ್ನಾ.. ಹೇ... ಸ್ವಪ್ನಾ.. ಓ.. ಸ್ವಪ್ನಾ... ಸ್ವಪ್ನಾ.
ಹೆಣ್ಣು : ಆ ಆ ಆ .. ಆಆಆ .. ಆಆಆ .. ಲಲಲಲಲಾ ಲಲಲ ಲಾಲಾ
ಗಂಡು : ಮೌನದ ಕಾವ್ಯ ಕಂಗಳ ನೋಟ ಮುಗುಳನಗೇ ಅಂದಾ ಮಲ್ಲಿಗೇ ತೋಟ
ಮೌನದ ಕಾವ್ಯ ಕಂಗಳ ನೋಟ ಮುಗುಳನಗೇ ಅಂದಾ ಮಲ್ಲಿಗೇ ತೋಟ
ವಯಸ್ಸಿದೂ ಹದಿನಾರೂ ಚಲಿಸುವ ಹೂ ತೇರು ನಗುವಿನ ಬಳುಕಾಟ
ತೊಂದರೇ ಹೊಣೆ ಯಾರೂ ಈ ಅಂದ ಚಂದ ನಂದೇ ಎಂದಾ ಭೂಪ ನಾನೇನೇ ...
ಸ್ವಪ್ನಾ.. ಸ್ವಪ್ನಾ.. . ಸ್ವಪ್ನಾ..ಆ .. ಸ್ವಪ್ನಾ..
ಬಂಗಾರ ಬೊಂಬೆಯ ಮಾಡಿ ಆ ಬೊಂಬೆಗೆ ಪ್ರಾಣವ ನೀಡಿ
ಆ ಬ್ರಹ್ಮದೇವ ಭೂಮಿಗಿಟ್ಟ ಭಾಗ್ಯ ನೀನೇನೇ ಸ್ವಪ್ನಾ.. ಸ್ವಪ್ನಾ.. . ಹೇ
ಹೆಣ್ಣು : ಆ ಆ ಆ .. ಆಆಆ .. ಆಆಆ ..
ಗಂಡು : ಸ್ವರ್ಗದ ಸೋಬಗಿ ಊರ್ವಶಿ ರೂಪ ನಾಟಿದೇ ನಿನ್ನ ಚೆಲುವಿಗೇ ಪಾಪ.. ಅಹ್ಹಹ್ಹ
ಮನ್ಮಥ ಕೂಟ ನಿನ್ನನ್ನೂ ಕಂಡೂ ಸೇರುವ ರತಿಯ ತಾಳದೇ ತಾಪ
ಗಿಣಿಯನು ನುಡಿದಾಗ ವೀಣೆಯ ಮಿಡಿದಂತೇ ಒಡಲಿದು ನುಣುಪಾದ ದಂತದ ಗುಡಿಯಂತೇ
ನೀ ದೂರ ಹೋಗೇ ತಾಳೇ ಬೇಗೆ ಸೋತೇ ನಿನ್ನಲ್ಲೇ..
ಸ್ವಪ್ನಾ.. ಸ್ವಪ್ನಾ.. . ಸ್ವಪ್ನಾ..ಹೇ .. ಸ್ವಪ್ನಾ..
ಬಂಗಾರ ಬೊಂಬೆಯ ಮಾಡಿ ಆ ಬೊಂಬೆಗೆ ಪ್ರಾಣವ ನೀಡಿ
ಬಂಗಾರ ಬೊಂಬೆಯ ಮಾಡಿ ಆ ಬೊಂಬೆಗೆ ಪ್ರಾಣವ ನೀಡಿ
ಆ ಬ್ರಹ್ಮದೇವ ಭೂಮಿಗಿಟ್ಟ ಭಾಗ್ಯ ನೀನೇನೇ
ಆ ಬ್ರಹ್ಮದೇವ ಭೂಮಿಗಿಟ್ಟ ಭಾಗ್ಯ ನೀನೇನೇ
ಸ್ವಪ್ನಾ.. (ಆಹ್ಹಹಾಹಾ ) ಮೈ ಸ್ವೀಟ್ ಹಾರ್ಟ್ (ಆಹ್ಹಹಾಹಾ ) ಮೈ ಡಾರ್ಲಿಂಗ್ (ಆಹ್ಹಹಾಹಾ )
ಅಯ್ ಲವ್ ಆಯ್ ಲವ್ ಯು ಆಯ್ ಲೈಕ್ ಫೈಂಡಿಂಗ್ ಎನಿಥಿಂಗ್
--------------------------------------------------------------------------------------------------------------------------
ಸ್ವಪ್ನ (೧೯೮೧) - ಪುಟ್ಟ ಪುಟ್ಟ ಕೆಂದಾವರೇ
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಬಿ.ಎಸ್, ರಮೇಶ, ಎಸ್.ಜಾನಕೀ
ಕೋರಸ್ : ಆಆಆಅ... ಆಆಆಅ... ಹೆಣ್ಣು : ಆಆಆಅ... ಆಆಆಅ...
ಕೋರಸ್ : ಓಓಓಓ... ಓಓಓಓ...
ಹೆಣ್ಣು : ಓಓಓ .. ಪುಟ್ಟ ಪುಟ್ಟ ಕೆಂದಾವರೆ ಕೆನ್ನೆ ಮೇಲೆ ಮಂದಾವರೇ
ಪುಟ್ಟ ಪುಟ್ಟ ಕೆಂದಾವರೆ ಕೆನ್ನೆ ಮೇಲೆ ಮಂದಾವರೇ
ಹೊಸ ಆಸೆ ಮನದಲಿ ಯೌವ್ವನವು ಬಂದೆಂತದರೇ
ಹೊಸ ಆಸೆ ಮನದಲಿ ಯೌವ್ವನವು ಬಂದೆಂತದರೇ
ಗಂಡು : ಹೇ... ಪುಟ್ಟ ಪುಟ್ಟ ಕೆಂದಾವರೆ ಚಿಕ್ಕ ಎಂಥ ಹೆಣ್ಣಾದರೇ
ಪುಟ್ಟ ಪುಟ್ಟ ಕೆಂದಾವರೆ ಚಿಕ್ಕ ಎಂಥ ಹೆಣ್ಣಾದರೇ
ಕಣ್ಣೋಟದೇ ಕೊಂದರೆ ಗತಿ ಏನೇ ಅಪ್ಸರೇ ..
ಕಣ್ಣೋಟದೇ ಕೊಂದರೆ ಗತಿ ಏನೇ ಅಪ್ಸರೇ ..
ಪಿ.ಬಿ.ಶ್ರೀ: ಪುಟ್ಟ ಪುಟ್ಟ ಕೆಂದಾವರೆ ಪೂಜೆಗಿಲ್ಲ ಎಂದಾದರೇ
ಪುಟ್ಟ ಪುಟ್ಟ ಕೆಂದಾವರೆ ಪೂಜೆಗಿಲ್ಲ ಎಂದಾದರೇ
ಬಾಡಿಹೋದ ಮನಸಿಗೆ ಬೇರೇನಿದೆ ಆಸರೇ ..
ಬಾಡಿಹೋದ ಮನಸಿಗೆ ಬೇರೇನಿದೆ ಆಸರೇ ..
ಹೆಣ್ಣು : ಅಂದ ಚೆಂದದ ತಾವರೆಯೂ ಕೆಂಪಗೇ ..
ಗಂಡು : ಉದಯಿಯಿಸುವ ಸೂರ್ಯನು ಕೆಂಪಗೇ ...
ಹೆಣ್ಣು : ಆಆಆ.. ಅಂದ ಚೆಂದದ ತಾವರೆಯೂ ಕೆಂಪಗೇ ..
ಗಂಡು : ಉದಯಿಯಿಸುವ ಸೂರ್ಯನು ಕೆಂಪಗೇ ...
ಪಿ.ಬಿ.ಶ್ರೀ: ಅತ್ತ ಬೀಸೋ ಸೂರ್ಯನು ಕೆಂಪಗೇ ..
ಅತ್ತ ಬೀಸೋ ಸೂರ್ಯನು ಕೆಂಪಗೇ ..
ಹೆಣ್ಣು : ಹಳದಿನೂರು ಕೆಂಪಗೇ
ಗಂಡು : ಪ್ರಥಮ ಚುಂಬನವು ಸಂಪಗೆ
ಪಿ.ಬಿ.ಶ್ರೀ: ಕೊನೆ ಪಯಣವು ಕೆಂಪಗೇ ..
ಕೊನೆ ಪಯಣವು ಕೆಂಪಗೇ ..
ಹೆಣ್ಣು : ಪುಟ್ಟ ಪುಟ್ಟ ಕೆಂದಾವರೆ ಕೆನ್ನೆ ಮೇಲೆ ಮಂದಾವರೇ
ಗಂಡು : ಕಣ್ಣೋಟದೇ ಕೊಂದರೆ ಗತಿ ಏನೇ ಅಪ್ಸರೇ ..
ಪಿ.ಬಿ.ಶ್ರೀ: ಬಾಡಿಹೋದ ಮನಸಿಗೆ ಬೇರೇನಿದೆ ಆಸರೇ ..
ಕೋರಸ್ : ಓಓಓಓಓಓಓ ... ಓಓಓಓಓಓಓ ... ಓಓಓಓಓಓಓ ...
ಹೆಣ್ಣು : ಹೊಸ ಲಜ್ಜೆಯ ಕೆರೆಯಲ್ಲಿ ತಾನಾಡಗಿದೆ ಹೃದಯವು...
ಗಂಡು : ಅದಕಿರುವ ಹೃದಯವನು ಕರೆದಿದೆ ಅನುರಾಗವೂ ..
ಹೆಣ್ಣು : ಹೊಸ ಲಜ್ಜೆಯ ಕೆರೆಯಲ್ಲಿ ತಾನಾಡಗಿದೆ ಹೃದಯವು...
ಗಂಡು : ಅದಕಿರುವ ಹೃದಯವನು ಕರೆದಿದೆ ಅನುರಾಗವೂ ..
ಪಿ.ಬಿ.ಶ್ರೀ: ಅನುರಾಗವು ಶೃತಿ ತಪ್ಪಿ ಹಾಡಿತೊಂದು ರಾಗವ
ಅದು ಎಂತು ತಿಳಿವುದು ಆರದಯ ಈ ಗಾಯವ.. ಆರದಯ ಈ ಗಾಯವ
ಹೆಣ್ಣು : ಪುಟ್ಟ ಪುಟ್ಟ ಕೆಂದಾವರೆ ಕೆನ್ನೆ ಮೇಲೆ ಮಂದಾವರೇ
ಪುಟ್ಟ ಪುಟ್ಟ ಕೆಂದಾವರೆ ಕೆನ್ನೆ ಮೇಲೆ ಮಂದಾವರೇ
ಗಂಡು : ಕಣ್ಣೋಟದೇ ಕೊಂದರೆ ಗತಿ ಏನೇ ಅಪ್ಸರೇ ..
ಪಿ.ಬಿ.ಶ್ರೀ: ಬಾಡಿಹೋದ ಮನಸಿಗೆ... ಬೇರೇನಿದೆ ಆಸರೇ ..
-------------------------------------------------------------------------------------------------------------------------
ಸ್ವಪ್ನ (೧೯೮೧) - ಮಲ್ಲೆ ಮೊಗ್ಗೂ ಹೂವಾಗಿಯೇ ಆಡಿದೇ
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ.
ಹೆಣ್ಣು : ಮಲ್ಲೇ ಮೊಗ್ಗು ಹೂವಾಗಿಯೇ ಆಡಿದೇ...
ಗಂಡು : ಹಿಗ್ಗಿನಿಂದ ಸಿಗ್ಗು ತೋರಿ ನಿಂತಿದೇ ...
ಹೆಣ್ಣು : ಹೊಯ್... ಮಲ್ಲೇ ಮೊಗ್ಗು ಹೂವಾಗಿಯೇ ಆಡಿದೇ...
ಗಂಡು : ಹಿಗ್ಗಿನಿಂದ ಸಿಗ್ಗು ತೋರಿ ನಿಂತಿದೇ ... ಹೇ... ಹೇ... ಹೇ... ಹೇ... ಹೇ...
ಹೆಣ್ಣು : ಆಗೀ .. ಧೂಳಿಸಿದ್ದೂ ...
ಗಂಡು : ಕಣ್ಣೇ ಕೆನ್ನೇ ಮೇಲೆ
ಹೆಣ್ಣು : ರಂಗು ತಂದಾಗ ಗುಂಗು ಬಂದಾಗ
ಗಂಡು : ರಂಗು ತಂದಾಗ ಗುಂಗು ಬಂದಾಗ
ಹೆಣ್ಣು : ಹೋಯ್ ಮಲ್ಲೇ ಮೊಗ್ಗು ಹೂವಾಗಿಯೇ ಆಡಿದೇ...
ಗಂಡು : ಹಿಗ್ಗಿನಿಂದ ಸಿಗ್ಗು ತೋರಿ ನಿಂತಿದೇ ... ಹೇ... ಹೇ... ಹೇ... ಹೇ... ಹೇ...
ಹೆಣ್ಣು : ಆಹಾ.. ಲಾಲಲಾ ...
ಗಂಡು : ಓಹೋಹೋ ... ಲಾಲಲಾ ... ಲಾಲಲಾ ... ಲಾಲಲಾ ...
ಗಂಡು : ಮೊಗ್ಗಿನ ಅಂದ.. (ಆಆಆಅ) ಚೆಲುವೆಯ ಚೆಂದ (ಆಆಆ)
ಮೊಗ್ಗಿನ ಅಂದ ಚೆಲುವೆಯ ಚೆಂದ ಬೆರೆತು ಬಾನೇ ರಂಗಾಯಿತು
ಹೆಣ್ಣು : ರಂಗನು ತಂದ (ಆಹ್ಹಆಆಅ) ಗುಟ್ಟಿನ ಮಾತಿಗೇ ..
ರಂಗನು ತಂದ ಗುಟ್ಟಿನ ಮಾತಿಗೆ ಕೆನ್ನೆ ನಾಚಿ ಕೆಂಪಾಯಿತು
ಗಂಡು : ಆ.. ಅಂದವು ಎಲ್ಲಿಯದು ಆಹ್ಹಾ...
ಹೆಣ್ಣು : ಈ ನೋಟದ ಮಿಂಚಿನದು
ಗಂಡು : ಆ ಮಿಂಚದೇ ಎಲ್ಲಿಯದು....
ಹೆಣ್ಣು : ಹೊಸ ಆಸೆಯ ಸಂಚಿನದು...
ಗಂಡು : ಆ ಆಸೆಯೂ ಎಲ್ಲಿಯದು
ಹೆಣ್ಣು : ಈ ಹರೆಯದ ಸೊಗಸಿನದು ( ಅಹ್ಹಹ್ಹಹಹಹಾ...)
ಮಲ್ಲೇ ಮೊಗ್ಗು ಹೂವಾಗಿಯೇ ಆಡಿದೇ...
ಗಂಡು : ಹಿಗ್ಗಿನಿಂದ ಸಿಗ್ಗು ತೋರಿ ನಿಂತಿದೇ ... ಹೇ... ಹೇ... ಹೇ...
ಹೆಣ್ಣು : ಲಲಲ್ಲಲಾ...
ಗಂಡು : ಮಂಜಿನ ಮೊಗ್ಗು (ಓಓಓ) ಮನಸನು ಸೋಕಲು (ಓಓಓಓ)
ಮಂಜಿನ ಮೊಗ್ಗು ಮನಸನು ಸೋಕಲು ಎದೆಯೇ ಝಲ್ಲನೇ ನಿಂತಿಹುದು
ಹೆಣ್ಣು : ಅರಳಿದ ಹೂವೂ (ಅಹ್ಹಹ್ಹಹ್ಹ) ನಗುವನು ಚೆಲ್ಲಲೂ (ಅಹ್ಹಹ್ಹಹ್ಹ)
ಅರಳಿದ ಹೂವೂ ನಗುವನು ಚೆಲ್ಲಲೂ ನಗುವೇ ಬದುಕು ಹಾಡಿಹುದು
ಗಂಡು : ಆ ಹೂವದೇ ಎಲ್ಲಿಹದೂ
ಹೆಣ್ಣು : ನಮ್ಮ ಒಲವಿನ ತೋಟದ ಹೂ ...
ಗಂಡು : ಆ ಒಲವದು ಎಲ್ಲಿಹದು
ಹೆಣ್ಣು : ಈ ಮನಗಳ ಮಾತಿನದು
ಗಂಡು : ಆ ಮಾತದೇ ಯಾವ ತರದೂ
ಹೆಣ್ಣು : ನಮ್ಮ ಮದುವೆಯ ಕನಸಿನದು ..
ಮಲ್ಲೇ ಮೊಗ್ಗು ಹೂವಾಗಿಯೇ ಆಡಿದೇ...
ಗಂಡು : ಹಿಗ್ಗಿನಿಂದ ಸಿಗ್ಗು ತೋರಿ ನಿಂತಿದೇ ... ಹೇ... ಹೇ... ಹೇ...
ಹೆಣ್ಣು : ಆಗೀ .. ಧೂಳಿಸಿದ್ದೂ ...
ಗಂಡು : ಕಣ್ಣೇ ಕೆನ್ನೇ ಮೇಲೆ
ಹೆಣ್ಣು : ರಂಗು ತಂದಾಗ ಗುಂಗು ಬಂದಾಗ
ಗಂಡು : ರಂಗು ತಂದಾಗ ಗುಂಗು ಬಂದಾಗ
ಹೆಣ್ಣು : ಲಾಲಾಲಾ ಲಾಲಾಲಾ ಲ್ಲಲ್ಲಲ್ಲ ಲಾಲಾಲಾ
ಗಂಡು : ಲಾಲಾಲಾ ಲಾಲಾಲಾ ಲ್ಲಲ್ಲಲ್ಲ ಲ್ಲಲ್ಲಲ್ಲ ಲ್ಲಲ್ಲಲ್ಲ
--------------------------------------------------------------------------------------------------------------------------
No comments:
Post a Comment