1045. ಅಳಿಯ ದೇವರು (೧೯೭೯)



ಅಳಿಯ ದೇವರು (೧೯೭೯) ಚಿತ್ರದ ಹಾಡುಗಳು 
  1. ಚೆಲುವಿನ ವದನ 
  2. ಹೊತ್ತಾದ ಮೇಲೆ ನಿಂಗೇ
  3. ಅಪ್ಪ ನಾನಲ್ಲಾ.. ಅಮ್ಮ ನಾನಲ್ಲಾ
  4. ಮದುವೆ ಬಂತಮ್ಮಾ ಮದುವೆ
ಅಳಿಯ ದೇವರು (೧೯೭೯) - ಚೆಲುವಿನ ವದನ 
ಸಂಗೀತ : ಎಂ.ರಂಗರಾವ, ಸಾಹಿತ್ಯ : ಚಿ.ಉದಯಶಂಕರ  ಗಾಯನ : ಎಸ್.ಪಿ.ಬಿ., ಎಸ್.ಜಾನಕೀ 

ಗಂಡು : ಆಆಹ್ಹಾ ಹ್ಹ ಆ ಆ...(ಆಆಆ) ಹೇ.ಹೇ.. (ಲಾಲಾ )
           ಚೆಲುವಿನ ವದನ ಬಳಿಗೆ ಕೂಗಿದೆ ಚಿನ್ನ
ಹೆಣ್ಣು : ಅರಳಿದ ನಯನ ಮನಸ ಕಾಡಿದೆ ಚೆನ್ನ
ಗಂಡು : ಚೆಲುವಿನ ವದನ ಬಳಿಗೆ ಕೂಗಿದೆ ಚಿನ್ನ .  
ಹೆಣ್ಣು : ಒಲವಿನಿಂದ ಸದಾ ನಗುತ ಸುಖ ನೋಡು ಇದೇ ಎನುತಾ
          ಅರಳಿದ ನಯನ ಮನಸ ಕಾಡಿದೆ ಚೆನ್ನ

ಗಂಡು : ಹಿತವಾಗಿ ಬಳಿ ಬಂದು ಲತೆಯಂತೇ ಬಳಸಿಗ
           ಮೃದುವಾದ ಮಾತಿಂದ ಮನದಾಸೆ ಹೇಳೀಗ
ಹೆಣ್ಣು : ಇನಿಯ ಸನಿಹ ಒಲಿದು ಬರಲು ನುಡಿಗಳು
           ಎದೆಯಲಿ ಕರಗಲು ಸೋತೆನು
ಗಂಡು : ಚೆಲುವಿನ ವದನ ಬಳಿಗೆ ಕೂಗಿದೆ ಚಿನ್ನ .  
ಹೆಣ್ಣು : ಒಲವಿನಿಂದ ಸದಾ ನಗುತ ಸುಖ ನೋಡು ಇದೇ ಎನುತಾ
ಗಂಡು :ಅರಳಿದ ನಯನ ಮನಸ ಕಾಡಿದೆ ಚೆನ್ನ

ಹೆಣ್ಣು : ದಿನರಾತ್ರಿ ನಾ ಕಂಡ ಕನಸೆಲ್ಲ ನನಸಾಗಿ
          ದಿನವೆಂದೋ ನಾ ಕಾಣೇ ನನ್ನಿನಿಯಾ ನಿನ್ನಾಣೆ
ಗಂಡು : ಒಲಿದ ಜೀವ ಜೊತೆಯಲಿರಲು
            ವರುಷವೂ ನಿಮಿಷವು ಬದುಕಲಿ ಹರುಷವೂ
ಹೆಣ್ಣು : ಚೆಲುವಿನ ವದನ ಬಳಿಗೆ ಕೂಗಿದೆ ಚಿನ್ನ
ಗಂಡು : ಅರಳಿದ ನಯನ ಮನಸ ಕಾಡಿದೆ ಚೆನ್ನ
           ಚೆಲುವಿನ ವದನ ಬಳಿಗೆ ಕೂಗಿದೆ ಚಿನ್ನ .  
ಹೆಣ್ಣು : ಒಲವಿನಿಂದ ಸದಾ ನಗುತ ಸುಖ ನೋಡು ಇದೇ ಎನುತಾ
          ಚೆಲುವಿನ ವದನ ಬಳಿಗೆ ಕೂಗಿದೆ ಚಿನ್ನ . 
ಗಂಡು : ಆಆಹ್ಹಾ ಹ್ಹ ಆ ಆ...(ಆಆಆ) ಹೇ.ಹೇ.. (ಲಾಲಾ )
            ಹೇ.ಹೇ.. (ಲಾಲಾ )
--------------------------------------------------------------------------------------------------------------------------

ಅಳಿಯ ದೇವರು (೧೯೭೯) - ಹೊತ್ತಾದ ಮೇಲೆ ನಿಂಗೇ
ಸಂಗೀತ : ಎಂ.ರಂಗರಾವ, ಸಾಹಿತ್ಯ : ಚಿ.ಉದಯಶಂಕರ  ಗಾಯನ : ವಾಣಿಜಯರಾಂ 

ಲಾ ಲಾ ಲಾಲಲಲಲಲಾಲಾ  ಲಾಲಲಲಲಲಾಲಾಲಲಲಾಲಾಲ ಲಾ ಲಾ ಲಾಲಲಲಲಲಾಲಾ  
ಪ ಪಬಬಬಬ ಬಬಬಬಾ ಅಹ್ಹಹ್ಹಹ್ಹಹ್ಹಾ ಜೂ ಜೂಜುಜುಜೂಜುಜುಜು  
ಹೊತ್ತಾದ ಮೇಲೆ ನಿಂಗೇ ಮುತ್ತೊಂದು ಬೇಕೂ ಎಂದೂ 
ಗೊತ್ತಾಯಿತೇನೂ ಈಗ ಆತುರಾಯಾತಕೆ ನಿಧಾನ ನಿಧಾನ ನಲ್ಲ 
ಹೊತ್ತಾದ ಮೇಲೆ ನಿಂಗೇ ಮುತ್ತೊಂದು ಬೇಕೂ ಎಂದೂ 
ಗೊತ್ತಾಯಿತೇನೂ ಈಗ ಆತುರಾಯಾತಕೆ ನಿಧಾನ ನಿಧಾನ ನಲ್ಲ 

ಹಗಲು ಇರುಳಾಗಿ ಶಶಿಯೂ ತಂಪಾದ ಬೆಳದಿಂಗಳಾ 
ಬೆಳಗು ಚೆಲ್ಲಾಡಿ ಮನಸೂ ನಲಿದಾಡಿ ಈ ಕಂಗಳಾ 
ಹಗಲು ಇರುಳಾಗಿ ಶಶಿಯೂ ತಂಪಾದ ಬೆಳದಿಂಗಳಾ 
ಬೆಳಗು ಚೆಲ್ಲಾಡಿ ಮನಸೂ ನಲಿದಾಡಿ ಈ ಕಂಗಳಾ 
ಕಾಡಿ ಕಾಡಿ ವಿರಹದ ಸಂಚೂ ನಿನ್ನ ನೋಡಿ ಮೋಹದ ನಂಟೂ  
ನೋವ ತರಲೀ ಆಶೇ ಬರಲೀ ಮುತ್ತೊಂದ ಕೊಡುವೇ ನಾನೂ 
ಹೊತ್ತಾದ ಮೇಲೆ ನಿಂಗೇ ಮುತ್ತೊಂದು ಬೇಕೂ ಎಂದೂ 
ಗೊತ್ತಾಯಿತೇನೂ ಈಗ ಆತುರಾಯಾತಕೆ ನಿಧಾನ ನಿಧಾನ ನಲ್ಲ 
 
ತನುವೂ ಲತೆಯಾಗಿ ಮನವೂ ಹೂವಾಗಿ ಓಲಾಡಲಿ 
ಕನಸು ನನಸಾಗಿ ಬಯಕೆ ಮಿಂಚಾಗೀ ಮೈ ತುಂಬಲಿ 
ತನುವೂ ಲತೆಯಾಗಿ ಮನವೂ ಹೂವಾಗಿ ಓಲಾಡಲಿ 
ಕನಸು ನನಸಾಗಿ ಬಯಕೆ ಮಿಂಚಾಗೀ ಮೈ ತುಂಬಲಿ 
ನಲ್ಲ ನಿನ್ನಾ ಮರೆಯುವ ನಾನು ಎಲ್ಲವನ್ನೂ ಅರಿಯುವೇ ಬೇಗ 
ನಿನ್ನ ಗೆಲುವೇ ನನ್ನೇ ಕೊಡುವೇ ಒಂದಾಗಿ ಸೇರಿ ನಾನೂ 
ಹೊತ್ತಾದ ಮೇಲೆ ನಿಂಗೇ ಮುತ್ತೊಂದು ಬೇಕೂ ಎಂದೂ 
ಗೊತ್ತಾಯಿತೇನೂ ಈಗ ಆತುರಾ.. ಯಾತಕೆ ನಿಧಾನ ನಿಧಾನ ನಲ್ಲ 
ಲಲಲಲ್ಲಲ್ಲಲ್ಲಾ ಲಲಲಲ್ಲಲ್ಲಲ್ಲಾ  ಲಲಲಲ್ಲಲ್ಲಲ್ಲಾ  
---------------------------------------------------------------------------------------------------------------------

ಅಳಿಯ ದೇವರು (೧೯೭೯) -ಅಪ್ಪ ನಾನಲ್ಲಾ ಅಮ್ಮ ನಾನಲ್ಲಾ
ಸಂಗೀತ : ಎಂ.ರಂಗರಾವ, ಸಾಹಿತ್ಯ : ಚಿ.ಉದಯಶಂಕರ  ಗಾಯನ : ಎಸ್.ಪಿ.ಬಿ.

ಅಪ್ಪ ನಾನಲ್ಲಾ ಅಮ್ಮ ನಾನಲ್ಲಾ
ಅಪ್ಪ ನಾನಲ್ಲಾ ಅಮ್ಮ ನಾನಲ್ಲಾ ದಾದಿಯೂ ನಾನಲ್ಲಾ 
ನಿಮ್ಮಪ್ಪನಾಣೆಗೂ ನಂಗೂ ನಿಂಗೂ ಸಂಬಂಧವೇ ಇಲ್ಲಾ 
ಅಪ್ಪ ನಾನಲ್ಲಾ ಅಮ್ಮ ನಾನಲ್ಲಾ ದಾದಿಯೂ ನಾನಲ್ಲಾ 
ನಿಮ್ಮಪ್ಪನಾಣೆಗೂ ನಂಗೂ ನಿಂಗೂ ಸಂಬಂಧವೇ ಇಲ್ಲಾ 

ತುಪ್ಪದ ದೋಸೆ ಖಾಲಿ ದೋಸೆ ತಿನ್ನೋಕೆ ಹಲ್ಲಿಲ್ಲಾ 
ನಿಂಗೇ ಉಪ್ಪಿಟ್ಟೂ ಕೂಡ ಗಂಟಲಲ್ಲಿ ಇಳಿಯುವಂತೇ ಕಾಣಲಿಲ್ಲಾ 
ತುಪ್ಪದ ದೋಸೆ ಖಾಲಿ ದೋಸೆ ತಿನ್ನೋಕೆ ಹಲ್ಲಿಲ್ಲಾ 
ನಿಂಗೇ ಉಪ್ಪಿಟ್ಟೂ ಕೂಡ ಗಂಟಲಲ್ಲಿ ಇಳಿಯುವಂತೇ ಕಾಣಲಿಲ್ಲಾ 
ಪೇಪರಮಿಂಟೂ ಕೊಟ್ಟರೇ ನಿಂಗೇ ಚಪ್ಪರಿಸೋ ವಯಸ್ಸೂ ಅಲ್ಲಾ 
ಪೇಪರಮಿಂಟೂ ಕೊಟ್ಟರೇ ನಿಂಗೇ ಚಪ್ಪರಿಸೋ ವಯಸ್ಸೂ ಅಲ್ಲಾ 
ಕುಳ್ಳ ನನ್ನ ಮಗಾ ನಿನ್ನಾ ಕದ್ದೂ ತಂದನಲ್ಲಾ..  
ಕುಳ್ಳ ನನ್ನ ಮಗಾ ನಿನ್ನಾ ಕದ್ದೂ ತಂದನಲ್ಲಾ..  
ಹಾಲನೂ ಕುಡಿಸೋಕೆ ದಾರಿಯೂ ಇಲ್ಲಿಲ್ಲಾ.. 
ಅಪ್ಪ ನಾನಲ್ಲಾ ಅಮ್ಮ ನಾನಲ್ಲಾ ದಾದಿಯೂ ನಾನಲ್ಲಾ 
ನಿಮ್ಮಪ್ಪನಾಣೆಗೂ ನಂಗೂ ನಿಂಗೂ ಸಂಬಂಧವೇ ಇಲ್ಲಾ 
ಅಲೋಳಳಳಲಾಯಿ ಅಲೋಳಳಳಲಾಯಿ ಜೋ ಜೋ ಜೋ 
ಅಲೋಳಳಳಲಾಯಿ ಅಲೋಳಳಳಲಾಯಿ ಆಯೀ ಜೋ ಜೋ ಜೋ ಜೋ 

ಕತ್ತೆಯ ವಾಸಿ ಮರಿಯೂ ಬಿಟ್ಟೂ ಎಲ್ಲೂ ಹೋಗಲ್ಲ 
ಇಂಥ ಮುದ್ದಿನ ಮಣಿಯ ಬೇಡ ಎಂದೂ ಪಾಪಿ ದೂರ ಹೋದನಲ್ಲಾ 
ಕತ್ತೆಯ ವಾಸಿ ಮರಿಯೂ ಬಿಟ್ಟೂ ಎಲ್ಲೂ ಹೋಗಲ್ಲ 
ಇಂಥ ಮುದ್ದಿನ ಮಣಿಯ ಬೇಡ ಎಂದೂ ಪಾಪಿ ದೂರ ಹೋದನಲ್ಲಾ 
ಇಂದಲ್ಲ ನಾಳೇ ಗಡ್ಡ ಮೀಸೆ ಬರದೇ ಇರೋದಿಲ್ಲಾ 
ಇಂದಲ್ಲ ನಾಳೇ ಗಡ್ಡ ಮೀಸೆ ಬರದೇ ಇರೋದಿಲ್ಲಾ 
ಕಂದಾ ನಿನ್ನ ಅಪ್ಪನಾಸ್ತೀ ಎಲ್ಲೂ ಹೋಗೋದಿಲ್ಲಾ ಆಹ್ಹಾ... 
ಕಂದಾ ನಿನ್ನ ಅಪ್ಪನಾಸ್ತೀ ಎಲ್ಲೂ ಹೋಗೋದಿಲ್ಲಾ 
ಕೋರ್ಟಿಗೇ ಎಳೆದಾಡದೇ ಸುಮ್ಮನೇ ಬಿಡಲ್ಲಾ.. 
ನಿಮ್ಮಪ್ಪನಾ.. ಕೋರ್ಟಿಗೇ ಎಳೆದಾಡದೇ ಸುಮ್ಮನೇ ಬಿಡಲ್ಲಾ.. 
ಅಪ್ಪ ನಾನಲ್ಲಾ ಅಮ್ಮ ನಾನಲ್ಲಾ ದಾದಿಯೂ ನಾನಲ್ಲಾ 
ನಿಮ್ಮಪ್ಪನಾಣೆಗೂ ನಂಗೂ ನಿಂಗೂ ಸಂಬಂಧವೇ ಇಲ್ಲಾ 
ಅಲೋಳಳಳಲಾಯಿ ಅಲೋಳಳಳಲಾಯಿ ಜೋ ಜೋ ಜೋ 
ಅಲೋಳಳಳಲಾಯಿ ಅಲೋಳಳಳಲಾಯಿ ಮಲಗೋ ಜೋ ಜೋ 
----------------------------------------------------------------------------------------------------------------------

ಅಳಿಯ ದೇವರು (೧೯೭೯) - ಮದುವೇ ಬಂತಮ್ಮಾ ಮದುವೆ
ಸಂಗೀತ : ಎಂ.ರಂಗರಾವ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ., ಎಸ್.ಜಾನಕೀ, ‌ಜಯಚಂದ್ರನ್, ವಾಣಿಜಯರಾಂ 

ಎಲ್ಲರು : ಮದುವೇ ಮದುವೇ ನಮಗೇ ಮದುವೇ 
            ಮದುವೇ ಮದುವೇ ನಮಗೇ ಮದುವೇ 
ಗಂಡು : ಮದುವೇ ಬಂತಮ್ಮಾ ಮದುವೇ ನಿನಗೇ ನನ್ನನ್ನೇ ಕೋಡುವೇ 
            ದಿನವೂ ಸುಖದಿ ಮುಳುಗಿ ಬಿಡುವೇ 
            ಮದುವೇ ಬಂತಮ್ಮಾ ಮದುವೇ ನಿನಗೇ ನನ್ನನ್ನೇ ಕೋಡುವೇ 
            ದಿನವೂ ಸುಖದಿ ಮುಳುಗಿ ಬಿಡುವೇ 
ಎಲ್ಲರು : ಮದುವೇ ಮದುವೇ ನಮಗೇ ಮದುವೇ 
            ಮದುವೇ ಮದುವೇ ನಮಗೇ ಮದುವೇ 
ಹೆಣ್ಣು :  ಮದುವೇ ಬಂತೀಗ ಮದುವೇ ನಿನಗೇ ನನ್ನನ್ನೇ ಕೋಡುವೇ 
            ದಿನವೂ ಸುಖದಿ ಮುಳುಗಿ ಬಿಡುವೇ 
            ಮದುವೇ ಬಂತೀಗ ಮದುವೇ ನಿನಗೇ ನನ್ನನ್ನೇ ಕೋಡುವೇ 
            ದಿನವೂ ಸುಖದಿ ಮುಳುಗಿ ಬಿಡುವೇ  
ಎಲ್ಲರು : ಮದುವೇ ಮದುವೇ ನಮಗೇ ಮದುವೇ 
            ಮದುವೇ ಮದುವೇ ನಮಗೇ ಮದುವೇ 

ಗಂಡು : ಆಹ್ಹ್ ಅಂದೇ ಈ ಸುದಿನವ ನಾ ಬಯಸಿದೇ ನಿರಾಸೆಯಾ ನೀನೂ ತಂದೆ 
ಹೆಣ್ಣು : ಇನ್ನೂ ಆ ಬಯಕೆಯ ಪೂರೈಸಲೇ ಓಡೋಡಿ ನಾನಿಲ್ಲಿ ಬಂದೇ 
           ನಿನ್ನಾ ನಾ ಒಪ್ಪಿದೇ ನಾ ಮೆಚ್ಚಿದೇ ಕಂಡಲ್ಲೇ ನಾ ಮಾರೂ ಹೋದೇ 
 ಜಯ : ನನ್ನಾ ನೀ ನೋಡಲೂ ಕೈ ಚಾಚಲು ಮಂಜಂತೇ ನಾ ಕರಗಿ ಹೋದೇ 
ಗಂಡು : ಏಕೇ ಕೆಣಕುವೇ ಕಣ್ಣಲ್ಲಿ 
ಹೆಣ್ಣು : ಏಕೇ ಬಳಸುವೇ ತೋಳಲ್ಲಿ 
ಜಯ : ದೂರ ನಿಲ್ಲದೇ ಬಾಯಿಲ್ಲಿ 
ಹೆಣ್ಣು : ಏಕೇ ಆತುರ ನನ್ನಲ್ಲೀ 
(ಹೆಣ್ಣು )ಎಲ್ಲರು : ಮದುವೆಯೂ ಮುಗಿಯಲೀ ಹಿರಿಯರೂ ಹರಸಲೀ 
(ಗಂಡು )ಎಲ್ಲರು :  ನಿನ್ನ ಬಿಡುವೇನೇ ಸುಮ್ಮನಿರುವೇನೇ 
ಎಲ್ಲರು : ಹೀಗೇಕೆ ಆ ಮಾತೂ ನಿಧಾನ ಅರಳೀ.. 
ಗಂಡು : ಮದುವೇ ಬಂತಮ್ಮಾ ಮದುವೇ (ಆಹ್) ನಿನಗೇ ನನ್ನನ್ನೇ ಕೋಡುವೇ (ಅಹ್ಹಹ )
            ದಿನವೂ ಸುಖದಿ ಮುಳುಗಿ ಬಿಡುವೇ 
ಎಲ್ಲರು : ಮದುವೇ ಮದುವೇ ನಮಗೇ ಮದುವೇ 
            ಮದುವೇ ಮದುವೇ ನಮಗೇ ಮದುವೇ 
            ಲಲ್ಲಲ್ಲರಲ್ಲಲ್ಲಲ ಲಲ್ಲಾ ಲಲ್ಲಲ್ಲರಲ್ಲಲ್ಲಲ ಲಲ್ಲಾ ಲಲ್ಲಲ್ಲರಲ್ಲಲ್ಲಲ ಲಲ್ಲಾ 

ಹೆಣ್ಣು : ಆಹ್ಹಾ..ಹ್ಹಾ ಬಾ ಸುಂದರ ಬಾ ಚಂದಿರ ನಿನ್ನ ಮಾತೆಲ್ಲವೂ ಅತೀ ಮಧುರ 
ಗಂಡು : ಓಹೋಹೋ.. ಬಾ ಸುಂದರೀ ಬಾ ಕಿನ್ನರೀ ನಿನ್ನ ವಯ್ಯಾರ ತೋರು ಮಯೂರಿ 
ಜಯ : ನಿನ್ನಾ ಹೂ ಮೈಯ್ಯನೂ ನಾ ಮುಟ್ಟಲೂ ಮೊಗ್ಗಂತೆ ನೀನಾದೇ ಏಕೇ 
ಹೆಣ್ಣು : ಏಕೋ ನೀ ಸೋಕಲು ಜುಮ್ಮೆನ್ನಲ್ಲೂ ನಾನಾಚಿ ಹೀಗಾಗೀ ಹೋದೇ 
          ಇಂದೂ ಜಾರುತ ಹೋದಾಗ ನಾಳೇ ಓಡುತ ಬಂದಾಗ 
ಗಂಡು : ರಾತ್ರಿ ಕೂಗುತ ನಿಂತಾಗ ಬ್ರಹ್ಮಚರಿಯವೂ ಹೋದಾಗ 
ಎಲ್ಲರು (ಹೆಣ್ಣು) : ಅರಳಿದ ತನುಮನ ಅನುದಿನ ಅನುಕ್ಷಣ  
ಎಲ್ಲರು (ಗಂಡು) : ನಮ್ಮ ಯೌವ್ವನ ಕಂಡು ಹೊಸತನ 
ಎಲ್ಲರು : ಬಾಳೆಲ್ಲಾ ಆನಂದ ನೀ ಹೊಂದಿ ನಲಿವೇ 
ಗಂಡು : ಮದುವೇ ಬಂತಮ್ಮಾ ಮದುವೇ ನಿನಗೇ ನನ್ನನ್ನೇ ಕೋಡುವೇ 
            ದಿನವೂ ಸುಖದಿ ಮುಳುಗಿ ಬಿಡುವೇ 
ಹೆಣ್ಣು :  ಮದುವೇ ಬಂತೀಗ ಮದುವೇ ನಿನಗೇ ನನ್ನನ್ನೇ ಕೋಡುವೇ 
            ದಿನವೂ ಸುಖದಿ ಮುಳುಗಿ ಬಿಡುವೇ 
ಎಲ್ಲರು : ಮದುವೇ ಮದುವೇ ನಮಗೇ ಮದುವೇ 
            ಮದುವೇ ಮದುವೇ ನಮಗೇ ಮದುವೇ 
            ಮದುವೇ ಮದುವೇ ನಮಗೇ ಮದುವೇ 
            ಮದುವೇ ಮದುವೇ ನಮಗೇ ಮದುವೇ 
---------------------------------------------------------------------------------------------------------------------------

No comments:

Post a Comment