1046. ಸಂಕ್ರಾತಿ (1989)


ಸಂಕ್ರಾತಿ ಚಿತ್ರದ ಹಾಡುಗಳು 
  1. ಭೂಮಿ ಹಸೆಯ ಮ್ಯಾಲೇ 
  2. ದುಡಿದ ಜೀವದ ಬಾಳು 
  3. ನ್ಯಾಯ ನೀತಿ ಮೂಡಿ 
ಸಂಕ್ರಾತಿ (೧೯೮೯)
ಸಂಗೀತ : ಎಲ್.ವೈಧ್ಯನಾಥನ, ಸಾಹಿತ್ಯ : ರಾಮಚಂದ್ರೇಗೌಡ, ಗಾಯನ : ಬಿ.ಆರ್.ಛಾಯ 

ಹೆಣ್ಣು : ಭೂಮಿ ಹಸೆಯ ಮ್ಯಾಲೇ ಆಕಾಶ ಚಪ್ಪರಾ 
          ಲೋಕ ಲೋಕೆಲ್ಲಾ ಎಳೇನೀರು ಹೊಂಡಕೆ 
          ಹೂವ ಒಲಗವಾಗೋ ಮದುವೆಗೆ ಹಣ್ಣು ತಮಟೆ ಯಾರೋ  
ಕೋರಸ್: ಮದುವೆಗೆ ಹಣ್ಣು ತಮಟೆ ಯಾರೋ
ಹೆಣ್ಣು : ಭೂಮಿ ಹಸೆಯ ಮ್ಯಾಲೇ ಆಕಾಶ ಚಪ್ಪರಾ
          ಲೋಕ ಲೋಕೆಲ್ಲಾ ಎಳೇನೀರು ಹೊಂಡಕೆ 
          ಹೂವ ಒಲಗವಾಗೋ ಮದುವೆಗೆ ಹಣ್ಣು ತಮಟೆ ಯಾರೋ  
ಕೋರಸ್: ಮದುವೆಗೆ ಹಣ್ಣು ತಮಟೆ ಯಾರೋ
               ಸೋ ಎನ್ನಿರೇ ಸೋಬಾನ ಎನ್ನಿರೇ  ಸೋ ಎನ್ನಿರೇ ಸೋಬಾನ ಎನ್ನಿರೇ  
               ಸೋ ಎನ್ನಿರೇ ಸೋಬಾನ ಎನ್ನಿರೇ  ಸೋ ಎನ್ನಿರೇ ಸೋಬಾನ ಎನ್ನಿರೇ  

ಹೆಣ್ಣು : ಗಂಡ ಎನ್ನುವಾ ಬಾ ಎಂತ ಉಂಡು ಮಲ್ಲಿಗೆ ಪುಂಡಾ
ಕೋರಸ್ : ಗಂಡ ಎನ್ನುವಾ ಬಾ ಎಂತ ಉಂಡು ಮಲ್ಲಿಗೆ ಪುಂಡಾ
ಹೆಣ್ಣು : ತಿಂಡಿನ ಒಳಗಾದ ಪುಂಡನ ಹೆಸರೊಳಗ ಪರಿಹಾರತಿ ಹಿಡಿದನೇ
           ಅವ್ವ ಎದೆಗವಚಿ ಕಂದನೇ
ಕೋರಸ್ : ಅವ್ವ ಎದೆಗವಚಿ ಕಂದನೇ
ಹೆಣ್ಣು : ಭೂಮಿ ಹಸೆಯ ಮ್ಯಾಲೇ ಆಕಾಶ ಚಪ್ಪರಾ 
          ಲೋಕ ಲೋಕೆಲ್ಲಾ ಎಳೇನೀರು ಹೊಂಡಕೆ 
          ಹೂವ ಒಲಗವಾಗೋ ಮದುವೆಗೆ ಹಣ್ಣು ತಮಟೆ ಯಾರೋ  
ಕೋರಸ್: ಮದುವೆಗೆ ಹಣ್ಣು ತಮಟೆ ಯಾರೋ  

ಹೆಣ್ಣು : ಅಪ್ಪನಾ ಮೀರಿದೆ ಒಪ್ಪಿ ಜಗಕೆಲ್ಲಾ ಸಾರಿದೇ 
ಕೋರಸ್ : ಅಪ್ಪನಾ ಮೀರಿದೆ ಒಪ್ಪಿ ಜಗಕೆಲ್ಲಾ ಸಾರಿದೇ
ಹೆಣ್ಣು : ಹೊಸ ಎಸಳು ಬಿಟ್ಟಂತೇ ಹೊನ್ನ ತಾವರೇ ಮೂಗುತಿ ಜೀವಕ್ಕೆ ತಂಪಾಗೋ
          ಸತಿಗೆ ಸೊಬಕ್ಕಿ ನೆನಪಾಗೋ
ಕೋರಸ್: ಸತಿಗೆ ಸೊಬಕ್ಕಿ ನೆನಪಾಗೋ    
--------------------------------------------------------------------------------------------------------------------------

ಸಂಕ್ರಾತಿ (೧೯೮೯)
ಸಂಗೀತ : ಎಲ್.ವೈಧ್ಯನಾಥನ, ಸಾಹಿತ್ಯ : ನಾಗತಿಹಳ್ಳಿ ಚಂದ್ರಶೇಖರ, ಗಾಯನ :ಎಸ್.ಪಿ.ಬಿ., ವಾಣಿಜಯರಾಂ 

ಹೆಣ್ಣು : ಆಆಆ... (ಆಆಆ...) ಇಬ್ಬರೂ : ಆಆಆ...
ಗಂಡು : ದುಡಿದ ಜೀವದ ಬಾಳು ಸಿಡಿದ ನೋವಿನ ಗೂಡು
           ಎದೆಯೊಳಗೇ ಪದ ಮಿಡಿದು ಚೀರಾಟವೂ... ಚೀರಾಟವೂ
ಹೆಣ್ಣು : ದುಡಿದ ಜೀವದ ಬಾಳು ಸಿಡಿದ ನೋವಿನ ಗೂಡು
           ಎದೆಯೊಳಗೇ ಪದ ಮಿಡಿದು ಚೀರಾಟವೂ... ಚೀರಾಟವೂ

ಹೆಣ್ಣು : ದೂರ ದಾರಿಯಲಿ ಕಂಡ ದಿಕ್ಕಿರದ ಜೀವಕೇ
          ಹೆಣ್ಣೊಡಲ ಸೆಳೆಯಾಯಿತೋ
ಗಂಡು : ಪ್ರೀತಿ ಬಯಸುವ ಜೀವ.. ಪ್ರೀತಿ ಬಯಸುವ ಜೀವಾ ..
           ಅಗಲಿ  ಕುಂತವೇ ಹಿಂಗೇ ... ಖೂಳ ಜನರನು  ನಂಬಿ ಹಾಳಾದರೂ
ಹೆಣ್ಣು : ದುಡಿದ ಜೀವದ ಬಾಳು ಸಿಡಿದ ನೋವಿನ ಗೂಡು
ಗಂಡು : ಎದೆಯೊಳಗೇ ಪದ ಮಿಡಿದು ಚೀರಾಟವೂ...
ಹೆಣ್ಣು : ಚೀರಾಟವೂ

ಗಂಡು : ಊರ ದನಗಳ ಕಾದೂ ವೀರನಾಗಲು ಹೋಗಿ
            ಗರಿ ಸುಟ್ಟ ರಕ್ಕೆಯಲಿ ಉರಿ ಗಾಯವು
ಹೆಣ್ಣು : ಫಲ ಕೋಡುವ ಕಾಲದಲೀ...
           ಫಲ ಕೋಡುವ ಕಾಲದಲೀ ಈಸೊಂದು ಗಿಳಿಗಳು ಇದ್ದವೋ
           ಬರಿದಾದ ಘಳಿಗೆಯಲಿ ಕೊಡಲಿಯಾದೋ
ಗಂಡು : ದುಡಿದ ಜೀವದ ಬಾಳು ಸಿಡಿದ ನೋವಿನ ಗೂಡು
ಹೆಣ್ಣು: ಎದೆಯೊಳಗೇ ಪದ ಮಿಡಿದು ಚೀರಾಟವೂ...
ಗಂಡು : ಚೀರಾಟವೂ
--------------------------------------------------------------------------------------------------------------------------

ಸಂಕ್ರಾತಿ (೧೯೮೯)
ಸಂಗೀತ : ಎಲ್.ವೈಧ್ಯನಾಥನ, ಸಾಹಿತ್ಯ : ಸಿದ್ದಲಿಂಗಯ್ಯ , ಗಾಯನ : 
ಎಸ್.ಪಿ.ಬಿ., ವಾಣಿಜಯರಾಂ 

ಗಂಡು : ನ್ಯಾಯ ನೀತಿ ಮೂಡಿ ಬದುಕು ಒಂದಾಗೈತೇ
           ವಿರಸ ಮಾಗಿ ಸರಸ ತುಳುಕಿ ತಂಪಾಗೈತೆ
ಹೆಣ್ಣು :  ನ್ಯಾಯ ನೀತಿ ಮೂಡಿ ಬದುಕು ಒಂದಾಗೈತೇ
           ವಿರಸ ಮಾಗಿ ಸರಸ ತುಳುಕಿ ತಂಪಾಗೈತೆ
ಗಂಡು : ನ್ಯಾಯ ನೀತಿ ಮೂಡಿ ಬದುಕು ಒಂದಾಗೈತೇ
           ವಿರಸ ಮಾಗಿ ಸರಸ ತುಳುಕಿ ತಂಪಾಗೈತೆ 
ಎಲ್ಲರು : ಜನಮನ  ಬೆರೆಯಲು ಜೀವನ ಸಂಕ್ರಾತಿ 
            ಹರುಷವ ಹರಿಸಿದೇ 
ಕೋರಸ್ : ತನನನ್ (ತಂದಾನ) ತನನನ್ (ತಂದಾನ) 
               ತನನನ್ (ತಂದಾನ) ತನನನ್ (ತಂದಾನ)
               ಹೋಲೆಲೆಲೇ ಹೋಲೆಲೆಲೇ  ಹೋಲೆಲೆಲೇ  (ಹೋಲೆಲೆಲೇ)  
               ಹೋಲೆಲೆಲೇ  ಹೋಲೆಲೆಲೇ  ಹೋಲೆಲೆಲೇ  (ಹೋಲೆಲೆಲೇ ) 

ಗಂಡು : ನೀ ನನಗೆ ಕಣ್ಣಾಗಿ ಮುಂಜಾನೆ ಬೆಳಕಾದೇ 
            ಸಂಪಿಗೆಯ ಮೊಗ್ಗಾಗಿ ಹಬ್ಬಗಳ ಹಿಗ್ಗಾದೇ  
            ನೀ ನನಗೆ ಕಣ್ಣಾಗಿ ಮುಂಜಾನೆ ಬೆಳಕಾದೇ 
            ಸಂಪಿಗೆಯ ಮೊಗ್ಗಾಗಿ ಹಬ್ಬಗಳ ಹಿಗ್ಗಾದೇ  
ಹೆಣ್ಣು : ಬಾಳ ನೋವುಗಳು ನೀಗಿ ಸುಳಿದೂ ಉಲ್ಲಾಸ 
          ಬಾಳ ನೋವುಗಳು ನೀಗಿ ಸುಳಿದೂ ಉಲ್ಲಾಸ 
 ಗಂಡು : ಅಂಬರದೇ ... 
ಹೆಣ್ಣು : ಅಂಬರದೇ ನಾವು ಹಕ್ಕಿಯಾಗಿರಲು  
          ಈ ಬದುಕು ಸಿರಿಯ ಸೊಗಸು ತರುವ ತೇರು 
ಗಂಡು : ನ್ಯಾಯ ನೀತಿ ಮೂಡಿ ಬದುಕು ಒಂದಾಗೈತೇ
ಹೆಣ್ಣು :  ವಿರಸ ಮಾಗಿ ಸರಸ ತುಳುಕಿ ತಂಪಾಗೈತೆ 
ಇಬ್ಬರು : ಜನಮನ  ಬೆರೆಯಲು ಜೀವನ ಸಂಕ್ರಾತಿ 
            ಹರುಷವ ಹರಿಸಿದೇ 

ಕೋರಸ್ : ಸುವ್ವಾಲೇ ಸುವ್ವಿ  (ಸುವ್ವಾಲೇ ಸುವ್ವಾಲೇ)
               ಸುವ್ವಾಲೇ ಸುವ್ವಿ  (ಸುವ್ವಾಲೇ ಸುವ್ವಾಲೇ)
               ಸುವ್ವಾಲೇ  ಸುವ್ವಾಲೇ  ಸುವ್ವಾಲೇ  ಸುವ್ವಾಲೇ  ಸುವ್ವಾಲೇ 
              ತನನನ್  ತನನನ್ ತನನನ್ ತನನನ್ ತನನನ್   
ಹೆಣ್ಣು : ಬೇಸರಕ್ಕೆ ತಾವಿಲ್ಲ ಮೋಸದ ಇನ್ನಿಲ್ಲಾ 
          ತಂದಿಟ್ಟ ತನಿಯೋರ ಕಳ್ಳಾಟ ನಡೆಯೋಲ್ಲಾ 
          ಬೇಸರಕ್ಕೆ ತಾವಿಲ್ಲ ಮೋಸದ ಇನ್ನಿಲ್ಲಾ 
          ತಂದಿಟ್ಟ ತನಿಯೋರ ಕಳ್ಳಾಟ  ನಡೆಯೋಲ್ಲಾ 
ಗಂಡು : ಬೇಧ ಭಾವಗಳ ಬೇಲಿ ಮೀರಿ ಒಂದಾಗಿ 
            ಬೇಧ ಭಾವಗಳ ಬೇಲಿ ಮೀರಿ ಒಂದಾಗಿ 
ಹೆಣ್ಣು : ಸಂಪ್ರೀತೀ...               
ಗಂಡು : ಸಂಪ್ರೀತೀ ಕೋಟೆಯಲಿ ನಾವಿರಲು ಈ ಬದುಕು
            ಸುಖದ ಸವಿಯ ಹೊನಲ ಹಾಡು              
ಹೆಣ್ಣು  : ನ್ಯಾಯ ನೀತಿ ಮೂಡಿ ಬದುಕು ಒಂದಾಗೈತೇ
ಗಂಡು : ವಿರಸ ಮಾಗಿ ಸರಸ ತುಳುಕಿ ತಂಪಾಗೈತೆ 
ಇಬ್ಬರು  : ಜನಮನ  ಬೆರೆಯಲು ಜೀವನ ಸಂಕ್ರಾತಿ ಹರುಷವ ಹರಿಸಿದೇ 
            ನ್ಯಾಯ ನೀತಿ ಮೂಡಿ ಬದುಕು ಒಂದಾಗೈತೇ
           ವಿರಸ ಮಾಗಿ ಸರಸ ತುಳುಕಿ ತಂಪಾಗೈತೆ 
--------------------------------------------------------------------------------------------------------------------------

No comments:

Post a Comment