1051. ಶ್ರೀಮಂತನ ಮಗಳು(೧೯೭೭)

ಶ್ರೀಮಂತನ ಮಗಳು ಚಿತ್ರದ ಹಾಡುಗಳು 
  1. ಕಣ್ಣುಗಳೂ ಕಮಲಗಳೂ 
  2. ಮಂಗಾನ ಮೋರೆಯ ನೋಡೂ 
  3. ಹೇ ಉಂಡಾಡಿ ಗುಂಡಾ 
  4. ಬಂದಿದೆ ಹೊಸವಸಂತ 
  5. ಬೀಸೋ ಗಾಳಿ ಇಂದೂ 
ಶ್ರೀಮಂತನ ಮಗಳು(೧೯೭೭) - ಕಣ್ಣುಗಳು ಕಮಲಗಳೂ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ

ಕಣ್ಣುಗಳು ಕಮಲಗಳು
ಕಣ್ಣುಗಳು ಕಮಲಗಳು ಮಲ್ಲಿಗೆ ನಿನ್ನ ಹಲ್ಲುಗಳೂ ಚಿನ್ನ
ಮುದ್ದು ಮೀನಾ ನನ್ನ ಮೀನಾ ಹತ್ತಿ ಅಮ್ಮಯ್ಯಳು
ಬಲು ಮೆತ್ತಾನೆ ಕಾಲಗಳೂ ಸೊಗಸಾದ ಬಾಲ...  ಗಪಚಿಪ್

ಕೋಪ ಬಂದಾಗ ನಿನ್ನ ನೋಟ ನೋಡೋಕೆ ಚೆನ್ನಾ
ಕಾಲಕೆರೆಯುವೇ ಹಲ್ಲ ಕಿರಿಯುವೇ
ಕಾಲಕೆರೆಯುವೇ ಹಲ್ಲ ಕಿರಿಯುವೇ  ನನ್ನಿಂದ ದೂರಾಗುವೇ
ಜಾಣ ಮರೀ ತಾಳು ಮರಿ
ಜಾಣ ಮರೀ ತಾಳು ಮರಿ ಮುದ್ದು ಮರಿ ನಾಯಿಮರಿ
ನಾನು ನೀನೂ ಸೇರಿ ಹೋಗುವಾ
ಕಣ್ಣುಗಳು ಕಮಲಗಳು ಮಲ್ಲಿಗೆ ನಿನ್ನ ಹಲ್ಲುಗಳೂ ಚಿನ್ನ
ಮುದ್ದು ಮೀನಾ ನನ್ನ ಮೀನಾ ಹತ್ತಿ ಅಮ್ಮಯ್ಯಳು
ಬಲು ಮೆತ್ತಾನೆ ಕಾಲಗಳೂ ಸೊಗಸಾದ ಬಾಲ...  ಗಪಚಿಪ್

ದಾರೀಲಿ ಕಲ್ಲು ಮುಳ್ಳೂ ಹ್ಹಾಂ ಕಾಲು ನೊಂದಿತು ತಾಳೂ 
ಹೀಗೆತೇಕೇ ನೀ ಓಡುವೇ 
ಹೀಗೆತೇಕೇ ನೀ ಓಡುವೇ ಪೋಲಿ ನಾಯಿಯೊಂದೂ ಓಡೋಡಿದೆ
ನೋಡು ಜಗಳಕ್ಕೇ ಗೂರ್ ಎಂದಿದೇ
ಅಯ್ಯೋ ಕಾರ ಬಂತೂ ಅಯ್ಯೋ ಲಾರಿ ಬಂತೂ
ಅಯ್ಯೋ ಕಾರ ಬಂತೂ ಅಯ್ಯೋ ಲಾರಿ ಬಂತೂ
ಬಸ್ ಬಂತೂ ಸೈಕಲ್ ಬಂತೂ ನಿಲ್ಲೂ ಏಕೇ ನನ್ನ ಕಾಡುವೇ 
ಕಣ್ಣುಗಳು ಕಮಲಗಳು ಮಲ್ಲಿಗೆ ನಿನ್ನ ಹಲ್ಲುಗಳೂ ಚಿನ್ನ
ಮುದ್ದು ಮೀನಾ ನನ್ನ ಮೀನಾ ಅಹ್ಹಹ್ಹಹಾ ಹತ್ತಿ ಅಮ್ಮಯ್ಯಳು
ಬಲು ಮೆತ್ತಾನೆ ಕಾಲಗಳೂ ಸೊಗಸಾದ ಬಾಲ..ಹೂಂ...  ಗಪಚಿಪ್ 
--------------------------------------------------------------------------------------------------------------------------

ಶ್ರೀಮಂತನ ಮಗಳು(೧೯೭೭) - ಮಂಗಾನ ಮೋರೆಯ ನೋಡು
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ

ಹೇಹೇಹೇ... ಮಂಗಾನ ಮೋರೆಯ ನೋಡು ನರಸಿಂಗನಾ ಮೀಸೆಯಾ ನೋಡು ಅಹ್ಹಹ್ಹ..
ಮಂಗಾನ ಮೋರೆಯ ನೋಡು ನರಸಿಂಗನಾ ಮೀಸೆಯಾ ನೋಡು
ಗೂಬೆಯ ಕಣ್ಣು ನೋಡಿಲ್ಲಿ ಒಂಟೆಯ ಕಣ್ಣೂ
ಕೊಕ್ಕೋರೆ ಕತ್ತು ಕೋಳಿ ಗತ್ತೂ ಸಾಕಾಗಿ
ನಾ ಸೋತೆ ಈ ರೂಪ ನೋಡಿ ನೋಡಿ
ಮಂಗಾನ ಮೋರೆಯ ನೋಡು ಹ್ಹಾಂ .. ನರಸಿಂಗನಾ ಮೀಸೆಯಾ ನೋಡು ನೋಡು

ಹೊಟ್ಟೆ ಹಸಿವು ತಾಳಲಾರೆ .ದಾರಿ ಬಿಟ್ಟು ಹೋಗೂ ನೀ ಹೋಗೂ ಹ್ಹೇಹ್ಹೇಹ್ಹೇ
ಹೊಟ್ಟೆ ಹಸಿವು ತಾಳಲಾರೆ ದಾರಿ ಬಿಟ್ಟು ಹೋಗೂ
ಸುತ್ತಿ ತಲೆಯು ಬೀಳೋ ಮುಂಚೆ ಖಾರಾ ಪುರಿ ಹಾಕೂ
ನೀ ಖಾರಾ ಪುರಿ ಹಾಕೂ ಅಪ್ಪನು ಅಲ್ಲೀ ಕಾಯುತಲಿರುವಾ
ಹೋಗದೇ ಇರಲೂ ತುಂಬಾ ಅಳುವಾ
ಕತ್ತೆ ಹಾಗೇ ಯಾಕೇ ನಿಂತೇ ಒಪ್ಪಬೇಕೇ ಬೇಗ ಹೇಳೋ
ಮಂಗಾನ ಮೋರೆಯ ನೋಡು

ತೆಪ್ಪನ ಹಾಗೇ ನೋಡುವೆ ಏಕೇ ಕೇಳದು ಕಿವಿಯೂ ನಿಂಗೇ  ಹ್ಹಂ...
ತೆಪ್ಪನ ಹಾಗೇ ನೋಡುವೆ ಏಕೇ ಕೇಳದು ಕಿವಿಯೂ ನಿಂಗೇ
ಬೆಪ್ಪನ ಹಾಗೇ ನಿಂತೆಯೋ ಏಕೆ ಬುದ್ದಿ ಇಲ್ಲವೇ ಮಂಕೇ
ನಿನಗೇ ಬುದ್ದಿ ಇಲ್ಲವೇ ಮಂಕೇ
ಬಂಗಲೆಯಿಂದ ಬಂದ ಹುಡುಗಿ ಬೆದರುವಳಲ್ಲಾ ಬೆಡಗಿನ ಬೆಡಗಿ
ಹೀಗೆ ಅಡ್ಡ ನಿಂತರೇ ನೀನೂ ಹಿಂಗೇ ನಿನ್ನ ಸೀಳಿಬಿಡುವೇ
ಮಂಗಾನ ಮೋರೆಯ ನೋಡು ನರಸಿಂಗನಾ ಮೀಸೆಯಾ ನೋಡು
ಗೂಬೆಯ ಕಣ್ಣು ನೋಡಿಲ್ಲಿ ಒಂಟೆಯ ಕಣ್ಣೂ
ಕೊಕ್ಕೋರೆ ಕತ್ತು ಕೋಳಿ ಗತ್ತೂ ಸಾಕಾಗಿ
ನಾ ಸೋತೆ ಈ ರೂಪ ನೋಡಿ ನೋಡಿ
ಮಂಗಾನ ಮೋರೆಯ ನೋಡು .. ನರಸಿಂಗನಾ ಮೀಸೆಯಾ ನೋಡು ನೋಡು
--------------------------------------------------------------------------------------------------------------------------

ಶ್ರೀಮಂತನ ಮಗಳು(೧೯೭೭) - ಹೇ..ಉಂಡಾಡಿ ಗುಂಡಾ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ, ಎಸ್.ಪಿ.ಬಿ.

ಹೆಣ್ಣು : ಹೇಹೇಹೇ..ಉಂಡಾಡಿ ಗುಂಡಣ್ಣ ಕಿಲಾಡಿ ರಂಗಣ್ಣನೇ
          ಹಿಡಿಯಲಾರೆಯ ಈ ಹೆಣ್ಣನ್ನ ಗೆಲ್ಲಲಾರೇ ನೀ ನನ್ನ
          ನಾ ಗೆಲ್ಲುವೇ ಎಂದೆಂದೂ
ಗಂಡು: ಹೇಹೇಹೇ... ತುಂಟಾಟ ಸಾಕಮ್ಮ ಬಾರಮ್ಮ ನೀ ಸುಮ್ಮನೇ
          ಹೇಳಿದಂತೇ ಕೇಳಿಲ್ಲಿ (ಉಹೂಂ ) ಕರುಣೆ ತೋರು ನನ್ನಲ್ಲಿ (ಆಹ್ ಆಹ್ಹ್ )
          ನಾ ಬೇಡುವೇ ನೀನಿಂದೂ ಆಹ್ಹ್ ಹ್ಹಾಂ

ಹೆಣ್ಣು : ಬಾರಯ್ಯ ಆಡೋಣ ಕಣ್ಣು ಮುಚ್ಚಾಲೇ
ಗಂಡು : ಅಮ್ಮಯ್ಯ ಆಮೇಲೆ ಕಥೆಗೆ ಕೊನೆ ಇಲ್ಲೀ
ಹೆಣ್ಣು : ನಾ ನಿನ್ನ ಬೀಡಲಾರೆ ಹಿಡಿವೇ ತೋಳಲ್ಲಿ
ಗಂಡು : ದಮ್ಮಯ್ಯ ಬೀಡು ಸಾಕೂ ಆಟ ಆಮೇಲೆ
ಹೆಣ್ಣು :  ಆಹ್ಹ... ಅಹ್ಹ...ಅಹ್ಹ... ಕಣ್ಣು ತುಂಬಾ ನೋಡಿ
ಗಂಡು : ತುಂಬಿ ನಿಂತೇ ಮನದಲ್ಲಿ ನೀನೇನೇ..
ಹೆಣ್ಣು : ಹೇಹೇಹೇ ... (ಹ್ಹ..ಅಹ್ಹ.ಅಹ್ಹ.. )          
          ಉಂಡಾಡಿ ಗುಂಡಣ್ಣ ಕಿಲಾಡಿ ರಂಗಣ್ಣನೇ
         ಹಿಡಿಯಲಾರೆಯ ಈ ಹೆಣ್ಣನ್ನ (ಹ್ಹ) ಗೆಲ್ಲಲಾರೇ ನೀ ನನ್ನ (ಹ್ಹ..ಹ್ಹ )
         ನಾ ಗೆಲ್ಲುವೇ ಎಂದೆಂದೂ

ಹೆಣ್ಣು : ಈ ರೀತಿ ಹೆದರೋಂತ ಗಂಡು ನೋಡಿಲ್ಲಾ 
         ನೀ ಹುಚ್ಚೋ ನಾ ಹುಚ್ಚೋ  ಒಂದೂ ಗೊತ್ತಿಲ್ಲಾ ಅಹ್ಹಹ್ಹಹ್ಹಹ್ಹಾ... 
ಗಂಡು : ಮಗುವಂತ ಮನಕಂಡು ನಾನು ಹುಚ್ಚಾದೇ (ಅಹ್ಹಹ್ಹ) 
           ಹಾಲಂತ ನಗೆ ಚೆಲ್ಲಿ ಅಚ್ಚು ಮೆಚ್ಚಾದೇ 
ಹೆಣ್ಣು : ಹೌ.. ದೇ.. ನೂ (ಹ್ಹಾ ) 
ಗಂಡು : ಒಳ್ಳೇ  ಗೆಳತೀ ನೀನಂತೇ (ಆಹ್ಹ್ ) 
ಹೆಣ್ಣು : ನಿನಗೇ ಜೊತೆಯೂ ನಾನಂತೇ ಎಂದೆಂದೂ 
ಗಂಡು: ಹೇಹೇಹೇ... ತುಂಟಾಟ ಸಾಕಮ್ಮ ಬಾರಮ್ಮ ನೀ ಸುಮ್ಮನೇ
          ಹೇಳಿದಂತೇ ಕೇಳಿಲ್ಲಿ (ಉಹೂಂ ) ಕರುಣೆ ತೋರು ನನ್ನಲ್ಲಿ (ಆಹ್ ಆಹ್ಹ್ )
          ನಾ ಬೇಡುವೇ ನೀನಿಂದೂ ಆಹ್ಹ್ ಹ್ಹಾಂ (ಆಹ್ಹ್ ಹ್ಹಾಂ )
      
--------------------------------------------------------------------------------------------------------------------------

ಶ್ರೀಮಂತನ ಮಗಳು(೧೯೭೭) - ಬಂದಿದೆ ಹೊಸ ವಸಂತ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ.

ಬಂದಿದೇ ಹೊಸ ವಸಂತ ಬಾಳಿನಲಿ 
ಬಂದಿದೇ ಹೊಸ ವಸಂತ ಬಾಳಿನಲಿ 
ಅನುಕ್ಷಣ ಹೊಸತನ ಸುಖವಾ ನಿನಗೇ ತರಲಿ 
ಬಂದಿದೇ ಹೊಸ ವಸಂತ ಬಾಳಿನಲೀ... 

(ಜೂಮ್ ಜೂಮ್  ಜೂಮಜೂಮಜೂಮ್ ಲಾಲೀ  
ಓಯ್ ಓಯ್ ಓಯ್ ಓಯ್ ಓಯ್ ಓಯ್ ಲಾ 
ಹೂಂಹೂಂಹೂಂಹೂಂ ಅಹ್ಹಹಾ ಅಹ್ಹಹಾ )

ನಡೆವ ಹಾದಿ ಹೂವ ಹಾಸಲೀ ನಗುತ ನಗುತ ಬಾಳು ಸಾಗಲೀ 
ನಡೆವ ಹಾದಿ ಹೂವ ಹಾಸಲೀ ನಗುತ ನಗುತ ಬಾಳು ಸಾಗಲೀ 
ಹರುಷ ಪ್ರತಿ ನಿಮಿಷ ನಿನ್ನದಾಗಲೀ  
ಬಂದಿದೇ ಹೊಸ ವಸಂತ ಬಾಳಿನಲೀ... 

ಕಣ್ಣ ತುಂಬಾ ಕನಸು ಕುಣಿದಿದೇ ತುಟಿಯ ಮೇಲೆ ಆಸೆ ನಲಿದಿದೇ 
ಸೊಗಸು ಈ ವಯಸು ನಿನ್ನ ತೂಗಿದೆ 
ಬಂದಿದೇ ಹೊಸ ವಸಂತ ಬಾಳಿನಲೀ... 

(ಲಾಲಲ್ಲಲಾಲ  ಲಾಲಲ್ಲಲಾಲ   )
ಸ್ನೇಹವೆಂಬ ಬಳ್ಳಿ ಚಿಗುರಲೀ ಪ್ರೇಮವೆಂಬ ಹೂವೂ ಅರಳಲಿ 
ಸ್ನೇಹವೆಂಬ ಬಳ್ಳಿ ಚಿಗುರಲೀ ಪ್ರೇಮವೆಂಬ ಹೂವೂ ಅರಳಲಿ 
ಬಯಕೆ ನೀ ಎಣಿಕೆ ಭಾಗ್ಯ ನೀಡಲೀ... 
ಬಂದಿದೇ ಹೊಸ ವಸಂತ ಬಾಳಿನಲಿ 
ಅನುಕ್ಷಣ ಹೊಸತನ ಸುಖವಾ ನಿನಗೇ ತರಲಿ 
ಬಂದಿದೇ ಹೊಸ ವಸಂತ ಬಾಳಿನಲೀ... 
--------------------------------------------------------------------------------------------------------------------------

ಶ್ರೀಮಂತನ ಮಗಳು(೧೯೭೭) - ಬೀಸೋ ಗಾಳಿ ಇಂದೂ 
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್.ಜಾನಕೀ, ಎಸ್.ಪಿ.ಬಿ.

ಹೆಣ್ಣು : ಬೀಸೋ ಗಾಳಿ ಇಂದೂ ಒಲವಿಂದ ಬಳಿಗೆ ಬಂದೂ
         ನೀನೇ ಇನಿಯನೆಂದೂ ಸವಿಮಾತ ಹೇಳಿತೂ
        ಬೀಸೋ ಗಾಳಿ ಇಂದೂ ಒಲವಿಂದ ಬಳಿಗೆ ಬಂದೂ
       ನೀನೇ ಇನಿಯನೆಂದೂ ಸವಿಮಾತ ಹೇಳಿತೂ ಮನವೂ ನಾಚಿತೂ
ಗಂಡು: ಬೀಸೋ ಗಾಳಿ ಇಂದೂ ನಿನ್ನ ಕಂಡು ಬಳಿಗೆ ಬಂದೂ
         ಹೂವೂ ಲತೆಯಲಿರಲು ಸೊಗಸೆಂದು ಕೇಳಿತು ದೂರ ತಳ್ಳಿತು

ಹೆಣ್ಣು : ನೀ ನೋಡಲ್ಲಿ ಮೇಘ ಮಾಲೆ ತೇಲಿ ತೇಲಿ ತೋರಿ ಲೀಲೆ  
          ಇಂಥ ಒಳ್ಳೇ ಜೋಡಿ ಎಂದು ನಮ್ಮನು ನೋಡಿ ಬೆರಗಾಗಿ ಹೋಗಿದೆ
ಗಂಡು : ಆ.. ತೇಲಾಡೋ ಮೋಡ ಚಂದಾ ನೀಲ ಗಗನ ಇನ್ನೂ ಅಂದಾ
          ಹಿಡಿವಾಸೆ ಏನೇ ಕೈಗೇ ಸಿಗುವುದೇನೇ ತೀರದಾಸೆ ತಾನೇ
          ಬೀಸೋ ಗಾಳಿ ಇಂದೂ ನಿನ್ನ ಕಂಡು ಬಳಿಗೆ ಬಂದೂ
         ಹೂವೂ ಲತೆಯಲಿರಲು ಸೊಗಸೆಂದು ಕೇಳಿತು ದೂರ ತಳ್ಳಿತು 

ಹೆಣ್ಣು  : ನೀ ಮಾತಲ್ಲಿ ತುಂಬಾ ಜಾಣ ಸೋತು ಹೋದೆ ನಾನು ಚೆನ್ನಾ
           ದೂರವಾಗೆ ನೀನೂ ಬಾಳಲಾರೇ ನಾನೂ ನನ್ನ ಜೀವ ನೀನೂ
         ಬೀಸೋ ಗಾಳಿ ಇಂದೂ ಒಲವಿಂದ ಬಳಿಗೆ ಬಂದೂ
         ನೀನೇ ಇನಿಯನೆಂದೂ ಸವಿಮಾತ ಹೇಳಿತೂ
--------------------------------------------------------------------------------------------------------------------------

No comments:

Post a Comment